‘ಷ’ ‘ಶ’ ಸಂದೇಹ ನಿವಾರಿಸಿ

ರಂಗನಾಥ ಕಂಟನಕುಂಟೆ ಅವರು ಕನ್ನಡ ಭಾಷಾ ಮಾಧ್ಯಮ ಮತ್ತು ಸರ್ಕಾರಿ ಶಾಲೆಗಳಲ್ಲಿ ಪೂರ್ವಪ್ರಾಥಮಿಕ ಶಾಲೆಗಳನ್ನು ತೆರೆಯುವುದರ ಕುರಿತು ಸಮಾಜಮುಖಿಯಲ್ಲಿ ಮೌಲಿಕವಾದ ಲೇಖನಗಳನ್ನು ಬರೆದಿದ್ದಾರೆ. ಅವುಗಳನ್ನು ಓದಿ ನಾನು ನನ್ನ ಜ್ಞಾನದ ಪರಿಧಿಯನ್ನು ವಿಸ್ತರಿಸಿಕೊಂಡೆ. ಆದರೆ ಅವರು ಬಳಸುವ ಕೆಲವು ಪದ ಪ್ರಯೋಗಗಳ ಬಗ್ಗೆ ನನಗೆ ಸ್ವಲ್ಪ ಮಟ್ಟಿಗೆ ಗೊಂದಲವಿದೆ.

ಲೇಖನದ ಕೊನೆಯ ನಿಮ್ಮ ಅಡಿಟಿಪ್ಪಣಿಯನ್ನು ಗಮನಿಸಿಯೂ ಅನುಮಾನ ಬಗೆಹರಿದಿಲ್ಲ. ಲೇಖಕರು ‘ಷ’ ಬದಲು ‘ಶ’, ‘ವರ್ಗ’ ಬದಲು ‘ವರ್ಗ’, ‘ಕರ್ನಾಟಕ’ ಬದಲು ‘ಕರ್ನಾಟಕ’ ಇತ್ಯಾದಿ ಏಕೆ ಬಳಸುತ್ತಾರೆ? ಪ್ರಾಥಮಿಕ ಹಂತದಿಂದ ಕಲಿತಿರುವ ಹಾಗೂ ಎಲ್ಲೆಲ್ಲೂ ಬಳಕೆಯಲ್ಲಿರುವ ಅಕ್ಷರಗಳು ಬೇರೆ ರೂಪದಲ್ಲಿ ಕಾಣಿಸಿಕೊಂಡಾಗ ನಮ್ಮ ಮನಸ್ಸು ಆ ಬದಲಾವಣೆ ಒಪ್ಪಲು ನಿರಾಕರಿಸುತ್ತದೆ; ಸುಲಲಿತ ಓದಿಗೂ ತಡೆಯಾಗುತ್ತದೆ. ಈ ವಿಶೇಷ ಪದಪ್ರಯೋಗ ಕುರಿತಂತೆ ಲೇಖಕ ಕಂಟನಕುಂಟೆಯವರು ನನ್ನಂತಹ ಅನೇಕರ ಸಂದೇಹ ನಿವಾರಿಸಿದರೆ ಒಳ್ಳೆಯದು.

-ಸಿ.ಚಿಕ್ಕತಿಮ್ಮಯ್ಯ, ಹಂದನಕೆರೆ.

Leave a Reply

Your email address will not be published.