ಸಂಸತ್ತಿನಲ್ಲಿ ಹೆಚ್ಚಿದ ಅಪರಾಧಿಗಳು!

ಭಾರತ 539 ಹೊಸ ಸಂಸತ್ ಸದಸ್ಯರನ್ನು ಆಯ್ಕೆ ಮಾಡಿದೆ. ಇವರ ಹಿನ್ನೆಲೆ ಅಧ್ಯಯನ ಮಾಡಿದ ಅಸೊಸಿಯೇಶನ್ ಫಾರ್ ಡೆಮೋಕ್ರೇಟಿಕ್ ರಿಫಾರ್ಮ್ ಎಂಬ ಸಂಸ್ಥೆಯು ಬಹಿರಂಗ ಪಡಿಸಿದ ಮಾಹಿತಿ ಅತ್ಯಂತ ಕಳವಳಕಾರಿ ಮತ್ತು ಆಘಾತಕಾರಿಯಾಗಿದೆ. 

ಆಯ್ಕೆಯಾದ 539 ಸದಸ್ಯರಲ್ಲಿ 233 ಸದಸ್ಯರು ಅಪರಾಧಿ ಹಿನ್ನೆಲೆಯನ್ನು ಹೊಂದಿದವರಾಗಿದ್ದು, ಕೆಲವರು ಗಂಭೀರ ರೀತಿಯ ಆಪಾದನೆಯನ್ನು ಎದುರಿಸುತ್ತಿದ್ದಾರೆ! ಅಂದರೆ ನಾವು ಸಂಸತ್ತಿಗೆ ಆರಿಸಿ ಕಳುಹಿಸಿದ ಅರ್ಧದಷ್ಟು ಸದಸ್ಯರು ದೇಶದ ಪರಮೋಚ್ಚ ಸಂಸ್ಥೆಯಾದ ಸಂಸತ್ ಭವನದಲ್ಲಿ ಪ್ರವೇಶ ಪಡೆಯಲು ಯೋಗ್ಯತೆ ಇಲ್ಲದವರು!

ಈ ಬೆಳವಣಿಗೆ ಈಗಿನ ಸಂಸತ್ತಿನದು ಎನ್ನುವಂತಿಲ್ಲ. ಕ್ರಮೇಣವಾಗಿ 2009 ರಿಂದ 2019 ರಲ್ಲಿ ಇದು ಶೇಕಡಾ 109 ರಷ್ಟು ವೃದ್ಧಿಯಾಗಿದೆ. ಅಂದರೆ ಇಂದು ನಾವು ಭಾರತೀಯ ಸಮಾಜದಲ್ಲಿ ಬೇರೂರುತ್ತಿರುವ ಅಪರಾಧೀಕರಣದ ರೂಪವನ್ನು ಮತ ಚಲಾವಣೆಯ ಮೊಲಕ ಅನುಮೋದಿಸಿ ಪ್ರಜಾತಂತ್ರದ ಮಾರ್ಗದಲ್ಲಿ ಸಂಸತ್ತಿನೊಳಗೆ ತಲುಪಿಸುವಲ್ಲಿ ಸಫಲರಾಗಿದ್ದೇವೆ.

ಈ ಅಪರಾಧೀಕರಣ ಕೇವಲ ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲ. ಆಡಳಿತ ಪಕ್ಷದಿಂದ ಹಿಡಿದು ವಿರೋಧಿ ಪಕ್ಷ ಮತ್ತು ವಾಮ ಪಂಥದ ಸದಸ್ಯರೂ ಸಹ ಈ ಅಪರಾಧೀ ಹಿನ್ನೆಲೆ ಉಳ್ಳವರಾಗಿದ್ದು ಎಲ್ಲ ಪಕ್ಷಗಳೂ ಇದರಲ್ಲಿ ಭಾಗಿಯಾಗಿವೆ. ಭಾಜಪದ 116 ಸದಸ್ಯರು, ಅಂದರೆ ಶೇಕಡಾ 39 ಮತ್ತು ಕಾಂಗ್ರೆಸ್ಸಿನ 29 ಸದಸ್ಯರು, ಶೇಕಡಾ 57 ರಷ್ಟು ಅಪರಾಧೀ ಹಿನ್ನೆಲೆ ಉಳ್ಳವರಾಗಿದ್ದಾರೆ. ಆಡಳಿತಾರೂಢ ಒಕ್ಕೂಟದ ಅಂಗವಾಗಿರುವ ರಾಮ ವಿಲಾಸ ಪಾಸ್ವಾನರ ಲೋಕ ಜನ ಶಕ್ತಿ ಪಕ್ಷದ ಎಲ್ಲಾ ಅರು ಸದಸ್ಯರೂ ಅಪರಾಧೀ ಹಿನ್ನೆಲೆ ಉಳ್ಳವರು.

ಇಡುಕ್ಕಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಕಾಂಗ್ರೆಸ್ ಪಕ್ಷದ ಡೀನ್ ಕುರಿಯಾಕೋಸ್ ಅವರ ಮೇಲೆ 204 ಕ್ರೀಮಿನಲ್ ಮೊಕದ್ದಮೆಗಳಿವೆ. ಅದರಲ್ಲಿ ಕೊಲೆ, ಸುಲಿಗೆ ಮತ್ತು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಸೇರಿದೆ.

ಇನ್ನು ರಾಜ್ಯ ಮಟ್ಟದಲ್ಲಿ ಸಂಸತ್ ಸದಸ್ಯರ ಯಾದಿಯನ್ನು ವಿಶ್ಲೇಷಿಸಿದಾಗ, ಹೆಚ್ಚಿನ ಸಂಖ್ಯೆಯ ಸಾಕ್ಷರರಿರುವ ಕೇರಳ ರಾಜ್ಯದಿಂದ ಆರಿಸಿ ಬಂದ ಸದಸ್ಯರಲ್ಲಿ ಶೇಕಡಾ 90 ರಷ್ಟು ಅಪರಾಧೀ ರಿಕಾರ್ಡ್ ಹೊಂದಿದ್ದಾರೆ! ಇಡುಕ್ಕಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಕಾಂಗ್ರೆಸ್ ಪಕ್ಷದ ಡೀನ್ ಕುರಿಯಾಕೋಸ್ ಅವರ ಮೇಲೆ 204 ಕ್ರೀಮಿನಲ್ ಮೊಕದ್ದಮೆಗಳಿವೆ. ಅದರಲ್ಲಿ ಕೊಲೆ, ಸುಲಿಗೆ ಮತ್ತು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಸೇರಿದೆ.

ಕೇರಳದ ನಂತರದ ಸ್ಥಾನ ಬಿಹಾರಕ್ಕೆ ಲಭಿಸಿದೆ. ಇಲ್ಲಿ ಶೇಕಡಾ 82 ಮತ್ತು ತೆಲಂಗಾಣದ ಶೇಕಡಾ 60 ರಷ್ಟು ಸದಸ್ಯರು ಈ ಹಿನ್ನೆಲೆ ಉಳ್ಳವರು. ಹೊಸ ಸಂಪುಟದಲ್ಲಿ 51 ಮಂತ್ರಿಗಳು ಅಪರಾಧೀ ಹಿನ್ನೆಲೆ ಉಳ್ಳವರಾಗಿರುವುದು ಖೇದಕರ. ವಸ್ತುಸ್ಥಿತಿ ಹೀಗಿರುವಾಗ ದೇಶದ ಅತ್ಯುನ್ನತ ಸಂಸ್ಥೆಯು ಸಮಾಜದಲ್ಲಿ ಅವಶ್ಯವಿರುವ ಮೌಲ್ಯಗಳನ್ನು ಸಂರಕ್ಷಿಸಲು ಸಾಧ್ಯವೇ?

2009 ರಲ್ಲಿ ಆಯ್ಕೆಯಾದ ಸಂಸತ್ ಸದಸ್ಯರಲ್ಲಿ ಕೇವಲ ಶೇಕಡಾ 58 ರಷ್ಟು ಕೋಟ್ಯಾಧಿಪತಿಗಳು ಇದ್ದರು, 2014 ರಲ್ಲಿ ಇದು ಶೇಕಡಾ 82 ಮತ್ತು 2019 ರಲ್ಲಿ 88 ರಷ್ಟು ಹೆಚ್ಚಾಗಿರುವುದು ಹಣ ಬಲದ ಮಹತ್ವವನ್ನು ಸೂಚಿಸುತ್ತದೆ. ದೇಶದ ಬಡ ಜನತೆಯನ್ನು ಪ್ರತಿನಿಧಿಸುವವರು ಹೆಚ್ಚಿನ ಪಾಲು ಅಪರಾಧೀ ಹಿನ್ನೆಲೆ ಉಳ್ಳವರು, ಅಥವಾ ಹಣಬಲ ಇದ್ದವರು. ಇವರನ್ನು ಬಿಟ್ಟು ಸಾಮಾನ್ಯ ಮಧ್ಯಮ ಮತ್ತು ಕೆಳ ವರ್ಗದವರು ಸಂಸತ್ತನ್ನು ಪ್ರವೇಶಿಸಲು ಅಸಾಧ್ಯ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಸಂಸತ್ತಿನಲ್ಲಿ ಒರಿಸ್ಸಾದ ಬಾಲಾಸೋರ್‍ದಿಂದ ಆಯ್ಕೆಯಾದ ಪ್ರತಾಪ ಸಾರಂಗಿಯಂತಹ ಸರಳ ಸಜ್ಜನರೂ ಇದ್ದಾರೆ, ಆದರೆ ಇಂತಹವರ ಸಂಖ್ಯೆ ಬೆರಳೆಣಿಕೆಯಷ್ಟು.

ಧನಬಲ ಮತ್ತು ಅಪರಾಧೀಕರಣದ ಜೊತೆಯಲ್ಲಿ ಕುಟುಂಬ ರಾಜ ಕಾರಣದ ಪ್ರಭಾವವೂ ಸಂಸತ್ತಿನಲ್ಲಿ ಪ್ರಬಲವಾಗುತ್ತಿದೆ. ಶೇಕಡಾ 32 ರಷ್ಟು ಸಂಸದರು ರಾಜಕೀಯ ವಂಶವಾದದ ಹಿನ್ನೆಲೆ ಇರುವವರು ಈ ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಎಲ್ಲ ಪಕ್ಷಗಳಲ್ಲಿಈ ಬೆಳವಣಿಗೆಯನ್ನು ಕಾಣಬಹುದು.

ಹೀಗೆ ಧನಬಲ, ವಂಶರಾಜಕೀಯ ಮತ್ತು ಅಪರಾಧೀ ಹಿನ್ನೆಲೆ ಉಳ್ಳ ಸಂಸದರಿಂದ ನಾವು ಸ್ವಚ್ಛ, ಸರಳ, ನಿಸ್ವಾರ್ಥ ಆಡಳಿತವನನ್ನು ನಿರೀಕ್ಷಿಸಲು ಸಾಧ್ಯವೇ? ವಿಚಿತ್ರವೆಂದರೆ ಈ ಅನೈತಿಕ ಹಣ ಗಳಿಕೆಯನ್ನು ಪ್ರಶ್ನಿಸುವ ಕೆಲಸ ಮಾಡಬೇಕಾದ ಸರಕಾರಿ ಯಂತ್ರವನ್ನೆ ಇವರು ನಿಯಂತ್ರಣದಲ್ಲಿ ಇಟ್ಟುಕೊಂಡು ತಮ್ಮ ರಾಜಕೀಯ ವರ್ಚಸ್ಸನ್ನು ಸ್ವಹಿತಕ್ಕಾಗಿ ಬಳಸುತ್ತಾರೆ. ಈ ಸಂಸತ್ತಿನಲ್ಲಿ ಒರಿಸ್ಸಾದ ಬಾಲಾಸೋರ್‍ದಿಂದ ಆಯ್ಕೆಯಾದ ಪ್ರತಾಪ ಸಾರಂಗಿಯಂತಹ ಸರಳ ಸಜ್ಜನರೂ ಇದ್ದಾರೆ, ಆದರೆ ಇಂತಹವರ ಸಂಖ್ಯೆ ಬೆರಳೆಣಿಕೆಯಷ್ಟು.

ಈ ಆಘಾತಕಾರಿ ಪರಿಸ್ಥಿತಿಯನ್ನು ನಿಯಂತ್ರಿಸುವ ಕುರಿತು ರಾಜ ಕೀಯ ಪಕ್ಷಗಳು ಒಂದಾದರೆ ಸಂಸತ್ತಿನ ಘನತೆಯನ್ನು ಉಳಿಸಲು ಸಾಧ್ಯ. ಆದರೆ ಇದನ್ನು ಮಾಡಬಯಸುವ, ದೃಢ ನಿಲುವನ್ನು ತೆಗೆದುಕೊಳ್ಳುವ ದೂರದೃಷ್ಟಿಯ ರಾಜಕೀಯ ನೇತಾರರು ಎಲ್ಲಿದ್ದಾರೆ?

ಇಷ್ಟು ಸಾಲದು ಎಂಬಂತೆ ಒಮ್ಮೆ ಸಂಸತ್ ಸದಸ್ಯರಾದವ ರಿಗೆ ಜೀವನಪರ್ಯಂತ ಸೌಲತ್ತುಗಳು. ಎರಡನೆಯ ಬಾರಿ ಆರಿಸಿ ಬಾರ ದಿದ್ದರೂ ಪಿಂಚಣಿ ವ್ಯವಸ್ಥೆ! ಈ ಆಧುನಿಕ ಮಹಾರಾಜರನ್ನು ಆರಿಸಿ ಕಳಿಸುವವರು ಸಾಮಾನ್ಯ ಪ್ರಜೆಗಳೇ. ಎಲ್ಲಿಯವರೆಗೆ ಸಾಮಾನ್ಯ ಮತದಾರರು ಜಾಗೃತರಾಗಿ ಸರಿಯಾದ ವ್ಯಕ್ತಿಯನ್ನು ತನ್ನ ಕ್ಷೇತ್ರದಿಂದ ಆಯ್ಕೆ ಮಾಡಿ ಕಳುಹಿಸುವುದಿಲ್ಲವೋ ಅಲ್ಲಿಯವರೆಗೆ ಈ ಪ್ರಜಾತಂತ್ರ ಎಂಬ ಪ್ರಹಸನ ಮುಂದುವರೆಯುವದು ಅನಿಯಾರ್ಯ.

Leave a Reply

Your email address will not be published.