ಸಣ್ಣ ಕೈಗಾರಿಕೆಗಳಿಗೆ ಪೂರಕ ಸರ್ಕಾರ

ನನ್ನ 25 ವರ್ಷಗಳ ಅನುಭವದಲ್ಲಿ ಸಣ್ಣ ಕೈಗಾರಿಕೆಗಳಿಗೆ ಪೂರಕವಾಗಿರು ವುದು ಮುಖ್ಯವಾಗಿ ಒಂದು ಮಾರುಕಟ್ಟೆ, ಇನ್ನೊಂದು ಹಣಕಾಸು. ಈ ಸರಕಾರ ಅವಧಿ ಸಾಲದ ಮೂಲಕ ಹಣಕಾಸನ್ನು ಸರಳಗೊಳಿಸಿದೆ. ಇನ್ನು ಮಾರುಕಟ್ಟೆ ವಿಚಾರದಲ್ಲಿ ‘ಸಾರ್ಥಕ’ ಎಂಬ ಒಂದು ಒಳ್ಳೆಯ ಯೋಜನೆಯನ್ನು ರೂಪಿಸಿದೆ. ಅದು ಇನ್ನು ಜಾರಿಗೆ ಬಂದಿಲ್ಲ.

ಕೃಷಿಯ ನಂತರ ದೇಶದಲ್ಲಿಅತೀ ಹೆಚ್ಚಿನ ಉದ್ಯೋಗ ಸೃಷ್ಟಿಸುವುದೆಂದರೆ ಸಣ್ಣ ಕೈಗಾರಿಕೆಗಳ ಕ್ಷೇತ್ರ. ಸಣ್ಣ ಕೈಗಾರಿಕೆಗಳು ಕಡಿಮೆ ವಿದ್ಯಾಭ್ಯಾಸ ಮಾಡಿದವರನ್ನು ಅಲ್ಲದೇ ಏನೂ ಬರಲಾರದವರನ್ನೂ ಕೆಲಸಕ್ಕೆ ತೆಗೆದುಕೊಂಡು ಅವರಿಗೆ ಅಗತ್ಯ ಉದ್ಯೋಗದ ತರಬೇತಿಕೊಟ್ಟು, ಸಂಬಳವನ್ನೂ ಕೊಟ್ಟು ಪುನಃ ಅವರನ್ನುಉದ್ದಿಮೆದಾರರನ್ನಾಗಿ ಮಾಡುವುದು ಹಾಗೂ ಸರಕಾರಕ್ಕೆತೆರಿಗೆಕೊಡುವುದು ಸಣ್ಣ ಕೈಗಾರಿಕೆಗಳು ಮಾತ್ರ.

ಕರ್ನಾಟಕ ರಾಜ್ಯದ ಸಮ್ಮಿಶ್ರ ಸರಕಾರ ಸಣ್ಣ ಕೈಗಾರಿಕೆಗಳಿಗೆ ಪ್ರತಿಸ್ಪಂದಿಯಾಗಿ ಕೆಲಸ ಮಾಡುತ್ತಿದೆ; ಸಾಮಾನ್ಯ ಮಹಿಳಾ ಉದ್ದಿಮೆದಾರರಿಗೂ 5 ಕೋಟಿವರೆಗೆ ಶೇ. 4ರ ಬಡ್ಡಿದರದಲ್ಲಿ ಸಾಲ ನೀಡುವ ಯೋಜನೆಯನ್ನು ಜಾರಿಗೆತಂದಿದೆ. ಈ ನಿರ್ಧಾರ ಸಣ್ಣ ಕೈಗಾರಿಕೆಗಳ ಹಿತದಿಂದ ದೇಶದಲ್ಲೇ ಒಂದು ಅತ್ಯುತ್ತಮ ನಿರ್ಧಾರ. ಈ ಯೋಜನೆಯಿಂದ ಮುಚ್ಚುವ ಹಂತದಲ್ಲಿದ್ದ ಉದ್ದಿಮೆಗಳನ್ನು ಪುನಃ ಅರಂಭಿಸಲು ಹಾಗೂ ಆಧುನಿಕವಾಗಿ ಕೈಗಾರಿಕೆಗಳನ್ನು ಬೆಳೆಸಲು ಅನುಕೂಲವಾಗಿದೆ.

ಸಮ್ಮಿಶ್ರ ಸರಕಾರ ಬಂದ ಮೇಲೆ ಸಣ್ಣ ಕೈಗಾರಿಕೆಗಳ ಇಲಾಖೆಯನ್ನೇ ಪ್ರತ್ಯೇಕಗೊಳಿಸಿ ಅದಕ್ಕೊಂದು ಪ್ರತ್ಯೇಕ ಸಚಿವಾಲಯವನ್ನು ತೆರೆಯಲಾಯಿತು. ಇದರಿಂದ ಆ ಕ್ಷೇತ್ರಕ್ಕೆ ಮಹತ್ವ ಬರತೊಡಗಿತು.

ಇನ್ನು ರಾಜ್ಯದ ಕೈಗಾರಿಕಾ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳ ಪರಿಸ್ಥಿತಿ ಹೇಗಿತ್ತೆಂದರೆ ರಸ್ತೆಯಿಲ್ಲ, ನೀರಿಲ್ಲ, ಮೋರಿಯಿಲ್ಲ ಇತ್ಯಾದಿ ಸಮಸ್ಯೆಗಳಿದ್ದವು. ಕುಮಾರಸ್ವಾಮಿಯವರು ಅವುಗಳನ್ನು ಪರಿಗಣಿಸಿದರು. ಕೇಂದ್ರ ಸರಕಾರ ಕೈಗಾರಿಕೆಗಳ ಕಾಯ್ದೆಯನ್ನು ಜಾರಿಗೆ ತಂದಾಗ ಸಣ್ಣ ಕೈಗಾರಿಕೆಗಳನ್ನು ಮಧ್ಯಮ ಕೈಗಾರಿಕೆಗಳ ಜೊತೆ ಸೇರಿಸಿದ್ದರು. ಇದರಿಂದ ಸಣ್ಣ ಕೈಗಾರಿಕೆಗಳ ಮೇಲಿನ ಮಹತ್ವ ಕಡಿಮೆಯಾಗಿತ್ತು. ಅದರೆ ಸಮ್ಮಿಶ್ರ ಸರಕಾರ ಬಂದ ಮೇಲೆ ಸಣ್ಣ ಕೈಗಾರಿಕೆಗಳ ಇಲಾಖೆಯನ್ನೇ ಪ್ರತ್ಯೇಕಗೊಳಿಸಿ ಅದಕ್ಕೊಂದು ಪ್ರತ್ಯೇಕ ಸಚಿವಾಲಯವನ್ನು ತೆರೆಯಲಾಯಿತು. ಇದರಿಂದ ಆ ಕ್ಷೇತ್ರಕ್ಕೆ ಮಹತ್ವ ಬರತೊಡಗಿತು. ಪ್ರತ್ಯೇಕ ಅನುದಾನ ದೊರೆಯತೊಡಗಿತು. ಇದರ ಫಲವಾಗಿ ಕಳೆದ ಬಜೆಟ್ಟಿನಲ್ಲಿ 1200 ಕೋಟಿ ಅನುದಾನವನ್ನು ಸಣ್ಣ ಕೈಗರಿಕೆಗಳಿಗೆ ಕೊಡಲಾಗಿತ್ತು. ಈ ಬಾರಿ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತರಲಾಗಿದೆ.

ಪ್ರಮುಖವಾಗಿ ಚೈನಾದೊಂದಿಗೆ ಸ್ಪರ್ಧಿಸುವ 9 ಜಿಲ್ಲಾ ಕೈಗಾರಿಕೆಗಳ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆಯನ್ನು ಜಾರಿಗೆ ತರಲಾಗಿದೆ. ಪ್ರಮುಖವಾಗಿ ಬೆಂಗಳೂರನ್ನು ಹೊರತುಪಡಿಸಿ ಎರಡನೇ ದರ್ಜೆಯ 9 ನಗರಗಳಲ್ಲಿ, ಒಂದೆಡೆ ಗೊಂಬೆ ನಿರ್ಮಾಣ ಉದ್ಯಮ, ಇನ್ನೊಂದೆಡೆ  ಸಿದ್ಧ ಉಡುಪು ತಯಾರಿಕಾ ಉದ್ಯಮ ಹೀಗೆ ಒಂದೊಂದು ಕಡೆ ಒಂದೊಂದಕ್ಕೆ ಒತ್ತು ಕೊಟ್ಟು ಅಭಿವೃದ್ಧಿ ಪಡಿಸುವ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಅನುಷ್ಠಾನ ಕೆಲವೆಡೆ ನಿಧಾನವಾದರೂ ಚೆನ್ನಾಗಿ ಕೆಲಸ ಆಗುತ್ತಿದೆ. ಇದರಿಂದ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತಿವೆ.

ಈ ಯೋಜನೆಯಡಿ ಕಳೆದ ಎರಡು ತಿಂಗಳ ಹಿಂದೆ ನಾಲ್ಕು ಕೈಗಾರಿಕಾ ಕೇಂದ್ರಗಳನ್ನು ಉದ್ಘಾಟಿಸಲಾಯಿತು. ಅದರಲ್ಲಿಒಂದುಅತಿ ಹಿಂದುಳಿದ ಕೊಪ್ಪಳ ಜಿಲ್ಲೆಯಲ್ಲಿ ಆರಂಭಗೊಂಡಿದೆ. ಇಲ್ಲಿ ಬಹುರಾಷ್ಟ್ರೀಯ ಕಂಪನಿಯೊಂದರ ಸಹಯೋಗದಲ್ಲಿ ಗೊಂಬೆ ತಯಾರಿಕಾ ಉದ್ಯಮ ವಲಯವನ್ನು ಮಾಡಲಾಗುತ್ತಿದೆ. ಕಡಿಮೆ ದರದ ಗೊಂಬೆ ತಯಾರಿಸುವಲ್ಲಿ ಚೀನಾ ಬಹಳ ಮುಂದಿದೆ. ಇದರಿಂದಲೇ ಚೈನಾ ಪ್ರತಿವರ್ಷ ಸಾವಿರಾರು ಕೋಟಿಯ ವಹಿವಾಟು ನಡೆಸುತ್ತದೆ. ಅದಕ್ಕೆ ಪ್ರತಿಸ್ಪರ್ಧಿಯಾಗಿ ಕೊಪ್ಪಳದಲ್ಲಿ ಹಾಂಕಾಂಗ್‍ನ ಬಹುರಾಷ್ಟ್ರೀಯ ಕಂಪನಿ ಮತ್ತು ಇಲ್ಲಿನ ಏಕಸ್ ವಿಮಾನಯಾನ ಕಂಪನಿ ಸೇರಿಕೊಂಡು 500 ಎಕರೆ ಪ್ರದೇಶದಲ್ಲಿ ಗೊಂಬೆ ತಯಾರಿಸಲು ಅಗತ್ಯವಾದ ಸೌಲಭ್ಯ ಸೃಷ್ಟಿಸಿ ತಯಾರಿಕಾ ಉದ್ದಿಮೆಗಳನ್ನು ಆಹ್ವಾನಿಸುತ್ತಿವೆ. ಗೊಂಬೆ ತಯಾರಿಸುವ ಬಗ್ಗೆ ಅಲ್ಲಿನ ಸ್ಥಳೀಯ ಜನರಿಗೆ ತರಬೇತಿ ನೀಡಿ ಚೈನಾಗಿಂತಲೂ ಕಡಿಮೆದರದಲ್ಲಿ ಗೊಂಬೆ ಸಿದ್ಧಪಡಿಸಿ 100ರಷ್ಟು ರಪ್ತು ಮಾಡುವಯೋಜನೆ ನಡೆಯುತ್ತಿದೆ.

ಈಗ ಕೈಗಾರಿಕೆಗಳ ಹೊಸ ನೀತಿ ತಯಾರಾಗುತ್ತಿದೆ. ನಮ್ಮ ಬಳಿ ಪ್ರಸ್ತಾವನೆಗಳನ್ನು ಪಡೆದುಕೊಂಡಿದ್ದಾರೆ. ಎರಡನೇ ದರ್ಜೆ ನಗರಗಳಿಗೆ ಆದ್ಯತೆ ಕೊಡುವಂತೆ ಕೇಳಿದ್ದೇವೆ. ಮೌಖಿಕವಾಗಿ ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ.

ಬಳ್ಳಾರಿಯಲ್ಲಿ ಜೀನ್ಸ್ ಸಿದ್ಧ ಉಡುಪು ಉದ್ಯಮ ಪ್ರಸಿದ್ಧವಾದುದು. ಅಲ್ಲಿನ ಸ್ಥಳೀಯ ಜೀನ್ಸ್‍ ಕಂಪನಿಯೇ 500 ಎಕರೆ ಜಾಗದಲ್ಲಿ ಜೀನ್ಸ್ ಬಟ್ಟೆ ಕತ್ತರಿಸಲು ಒಂದು ಉದ್ಯಮ ಹಾಗೂ ಇಸ್ತ್ರೀ ಮಾಡಲು ಒಂದು ಹೀಗೆ ಪ್ರತಿಯೊಂದಕ್ಕೂ ಒಂದೊಂದು ಪ್ರತ್ಯೇಕ ಉದ್ಯಮ ಮಾಡುತ್ತಿದೆ. ಇದರಿಂದ ಚೀನಾದವರು 5 ರೂಗಳಲ್ಲಿ ಸಿದ್ಧಪಡಿಸಿ 4 ರೂಪಾಯಿಗೆ ಮಾರಾಟ ಮಾಡುವ ಬಟ್ಟೆಯನ್ನುಇವರು 3 ರೂಪಾಯಿಗೆ ಸಿದ್ಧಪಡಿಸಿ 4 ರೂಪಾಯಿಗೆ ಮಾರಾಟ ಮಾಡುವ ಯೋಜನೆ ಹೊಂದಿದ್ದಾರೆ. ಇಂಥ ಯೋಜನೆಗಳನ್ನು ಸದ್ಯ 9 ಜಿಲ್ಲೆಗಳಲ್ಲಿ ಮಾಡಲಾಗಿದೆ. ಅದನ್ನು ಪ್ರತಿಜಿಲ್ಲೆಗೊಂದರಂತೆ ಇಡೀ ರಾಜ್ಯದಲ್ಲಿ ಜಾರಿಗೊಳಿಸಬೇಕೆಂದು ನಾವು ಕೇಳುತ್ತಿದ್ದೇವೆ.

ಇದೇ ಯೋಜನೆಯಡಿ ಬೀದರ್‍ನಲ್ಲಿಇಸ್ರೇಲ್ ಮಾದರಿಯ ಕೃಷಿ ಯಂತ್ರಗಳನ್ನು ತಯಾರಿಸಲು ಸಾವಿರಾರು ಕೋಟಿ ಬಂಡವಾಳದ ಯೋಜನೆಯನ್ನು ರೂಪಿಸಲಾಗಿದೆ. ಇದು ಜಾರಿಯಾದರೆ ಪ್ರತಿವರ್ಷ ಶೂನ್ಯ ಬಂಡವಾಳ ಕೃಷಿ ಪದ್ಧತಿ ಜಾರಿಗೆ ಬರಲಿದೆ. ಈ ಎಲ್ಲ ಯೋಜನೆಗಳನ್ನು ಖಾಸಗಿ ಕಂಪನಿಗಳ ಸಹಯೋಗದಲ್ಲಿ ಜಾರಿಗೊಳಿಸಲಾಗುತ್ತಿದೆ. ಸರಕಾರ ಬಂಡವಾಳ ಹಾಕಿದರೆ ಅಧಿಕಾರಿಗಳು ಕೆಲಸ ಮಡುತ್ತಾರೋ ಇಲ್ಲವೋ; ಖಾಸಗಿಯವರು ಮಾಡುವುದರಿಂದ ಯೋಜನೆಗಳು ಸರಿಯಾಗಿ ನಡೆಯಲಿವೆ.

ಈಗ ಕೈಗಾರಿಕೆಗಳ ಹೊಸ ನೀತಿ ತಯಾರಾಗುತ್ತಿದೆ. ನಮ್ಮ ಬಳಿ ಪ್ರಸ್ತಾವನೆಗಳನ್ನು ಪಡೆದುಕೊಂಡಿದ್ದಾರೆ. ಎರಡನೇ ದರ್ಜೆ ನಗರಗಳಿಗೆ ಆದ್ಯತೆ ಕೊಡುವಂತೆ ಕೇಳಿದ್ದೇವೆ. ಮೌಖಿಕವಾಗಿ ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ. ಶೇ. 99ರಷ್ಟು ನಮ್ಮ ಬೇಡಿಕೆಗಳನ್ನು ಪರಿಗಣಿಸಲಾಗುತ್ತದೆ ಎಂಬ ಭರವಸೆ ನಮಗಿದೆ. ಮಹಿಳಾ ಉದ್ದಿಮೆದಾರರಾಗಲಿ, ಪರಿಶಿಷ್ಟರು ಮತ್ತು ಸಾಮಾನ್ಯ ಉದ್ದಿಮೆದಾರರಾಗಲಿ ಒಟ್ಟಾರೆ ಸಣ್ಣ ಕೈಗಾರಿಕೆಗಳಿಗೆ ಈ ಸರಕಾರದಿಂದ ಸ್ಪಂದನೆ ಚೆನ್ನಾಗಿದೆ. ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸರಕಾರದ ಬಗ್ಗೆ ಅಸ್ಥಿರ ವಾತಾವರಣ ಇರುವುದರಿಂದ ಬಹಳಷ್ಟು ಜನಇಲ್ಲಿ ಬಂಡವಾಳ ಹೂಡಿಕೆಗೆ ಹಿಂಜರಿಯುತ್ತಿದ್ದಾರೆ. ಪ್ರತಿಪಕ್ಷಗಳು ಈ ಸರಕಾರ ಇವತ್ತು ಬೀಳುತ್ತದೆ, ನಾಳೆ ಬೀಳುತ್ತದೆ ಎಂದು ಸುದ್ದಿ ಮಾಡುತ್ತಿರುವುದರಿಂದ ಕಡತಗಳು ಮುಂದೆ ಹೋಗದೆ ಕೆಲಸಗಳು ವಿಳಂಬವಾಗುತ್ತಿವೆ. ಸರಕಾರದ ಅಸ್ಥಿರ ವಾತಾವರಣವನ್ನೇ ಬಳಸಿಕೊಂಡು ಕೆಲವು ಅಧಿಕಾರಿಗಳು ಕೆಲಸವನ್ನು ಮುಂದಕ್ಕೆ ಹಾಕುವ ನೀತಿ ಅನುಸರಿಸುತ್ತಿದ್ದಾರೆ.

ಹಗರಣಗಳ ಬಗ್ಗೆ ಗಮನ ಹರಿಸಬೇಕಿದೆ

ರಾಜ್ಯದಲ್ಲಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮವಿದೆ. ಅದು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅಲ್ಲಿಗೆ ಬರುವ ಅಧಿಕಾರಿಗಳು ಮೂರು ತಿಂಗಳಿಗೆ ಒಬ್ಬರು ಬದಲಾಗುತ್ತಾರೆ. ಅಲ್ಲಿಗೆ ಬರುವ ಅಧಿಕಾರಿಗಳನ್ನು ಕನಿಷ್ಠ ಎರಡು ವರ್ಷ ಬದಲಾಯಿಸದಿದ್ದರೆ ಸ್ವಲ್ಪ ಸುಧಾರಿಸಲು ಸಾಧ್ಯವಿದೆ. ಈ ಬಗ್ಗೆ ಮಂತ್ರಿಗಳಿಗೆ, ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಅವರುಅದನ್ನು ಸುಧಾರಿಸುವ ಭರವಸೆ ನೀಡಿದ್ದಾರೆ. ಆದಾಗ್ಯೂ ಅಲ್ಲಿ ಯಾವುದೇ ಸುಧಾರಣೆಗಳು ಕಂಡುಬರುತ್ತಿಲ್ಲ.

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಕರ್ನಾಟಕ ಸಣ್ಣಕೈಗಾರಿಕಾ ಅಭಿವೃದ್ಧಿ ಮಂಡಳಿಗಳಲ್ಲಿ ಹಲವು ಹಗರಣಗಳಾಗಿವೆ. ಅವು ಈ ಸರಕಾರದ ಅವಧಿಯಲ್ಲಿ ಆಗಿವೆ ಎಂದು ನಾನು ಹೇಳಲಾರೆ. ಆದರೆ ಹಗರಣಕ್ಕೆ ಕಾರಣವಾದ ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಈ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ.

ಒಟ್ಟಾರೆಯಾಗಿ ನನ್ನ ಪ್ರಕಾರ, ನನ್ನ 25 ವರ್ಷಗಳ ಅನುಭವದಲ್ಲಿ ಸಣ್ಣ ಕೈಗಾರಿಕೆಗಳಿಗೆ ಪೂರಕವಾಗಿರುವುದು ಮುಖ್ಯವಾಗಿ ಒಂದು ಮಾರುಕಟ್ಟೆ, ಇನ್ನೊಂದು ಹಣಕಾಸು. ಈ ಸರಕಾರಅವಧಿ ಸಾಲದ ಮೂಲಕ ಹಣಕಾಸನ್ನು ಸರಳಗೊಳಿಸಿದೆ. ಇನ್ನು ಮಾರುಕಟ್ಟೆ ವಿಚಾರದಲ್ಲಿ ‘ಸಾರ್ಥಕ’ ಎಂಬ ಒಂದು ಒಳ್ಳೆಯ ಯೋಜನೆಯನ್ನು ರೂಪಿಸಿದೆ. ಅದು ಇನ್ನು ಜಾರಿಗೆ ಬಂದಿಲ್ಲ. ಈ ಯೋಜನೆ ಪ್ರಕಾರ ಖಾಸಗಿ ಉದ್ದಿಮೆಗಳ ವಲಯದಲ್ಲಿ ಸಬ್ಸಿಡಿಯಲ್ಲಿ ತಮ್ಮ ದೇಶೆಡ್ಡು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಸಣ್ಣ ಕೈಗಾರಿಕೆಗಳು ತಮ್ಮದೇ ಬ್ರ್ಯಾಂಡ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಉತ್ಪನ್ನಗಳನ್ನು ಪ್ರಚಾರ ಮಾಡಬಹುದಾಗಿದೆ. ಇದಕ್ಕೆ ಅನುದಾನ ಕಡಿಮೆಯಿದ್ದರೂ ಯೋಜನೆ ಮಾತ್ರಚೆನ್ನಾಗಿದೆ.

ಬೆಂಗಳೂರಿನ ಪೀಣ್ಯ ಕೈಗಾರಿಕಾ ವಲಯದಲ್ಲಿ ಮಾಲಿನ್ಯ ಹೊರಹಾಕುವ ಉದ್ಯಮಗಳು ಹೆಚ್ಚಿವೆ. ಇದನ್ನು ತಡೆಗಟ್ಟಲು ಸಾಮಾನ್ಯ ಸೌಲಭ್ಯ ಕೇಂದ್ರ ಅಭಿವೃದ್ಧಿ ಯೋಜನೆಯಡಿ ಕೇಂದ್ರ ಅಭಿವೃದ್ಧಿ ಪಡಿಸಲುರೂ.10 ಕೋಟಿಕೊಟ್ಟಿದೆ. ಅದನ್ನುರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ವಹಣೆಗೆ ವಹಿಸಲಾಗಿದೆ. ಅಲ್ಲದೇ ಪೀಣ್ಯ ಕೈಗಾರಿಕಾ ಪ್ರದೇಶದ ಮೂಲ ಸೌಕರ್ಯ ಅಭಿವೃದ್ಧಿಗೆ ರೂ.56 ಕೋಟಿಕೊಟ್ಟಿದೆ. ಒಟ್ಟಾರೆಯಾಗಿ ಸಣ್ಣ ಕೈಗಾರಿಕೆಗಳಿಗೆ ಪೂರಕವಾಗಿ ಈ ಸರಕಾರ ಕೆಲಸ ಮಾಡುತ್ತಿದೆ.

ಈ ಸರಕಾರದ ದೊಡ್ಡ ಲೋಪವೆಂದರೆ ಕೇಂದ್ರ ಸರಕಾರದ ನಿಯಮಗಳ ಪ್ರಕಾರ 40 ಮೈಕ್ರಾನ್ ಮೇಲ್ಪಟ್ಟ ಪ್ಲಾಸ್ಟಿಕ್ ಬಳಸಲು ಅವಕಾಶವಿದೆ. ಆದರೆ ಈ ಸರಕಾರ ಸಂಪೂರ್ಣ ಪ್ಲಾಸ್ಟಿಕ್ ಬಳಕೆಯ ಮೇಲೆ ನಿಷೇಧ ಹಾಕಿತು. ಇದರಿಂದ ಪ್ಲಾಸ್ಟಿಕ್ ಉತ್ಪಾದನೆಯಲ್ಲಿ ತೊಡಗಿದ್ದ ಹಲವು ಕಂಪನಿಗಳು ಮುಚ್ಚಬೇಕಾಗಿ ಬಂತು. ಅಲ್ಲದೇ ಇದರಲ್ಲಿ ತೊಡಗಿಸಿ ಕೊಂಡಿದ್ದ ಸಾವಿರಾರು ಜನರು ಉದ್ಯೋಗ ಕಳೆದುಕೊಂಡರು. ಕೇಂದ್ರ ಸರಕಾರದ ನಿಯಮವನ್ನು ಬದಿಗಿರಿಸಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಮಾಡುವ ಅಗತ್ಯವಿರಲಿಲ್ಲ. ಕನಿಷ್ಠ ವೇತನವನ್ನು ರೂ.5500 ರೂಪಾಯಿಗಳಿಂದ ರೂ.11000ಕ್ಕೆ ಹೆಚ್ಚಿಸಿರುವುದು ನಮ್ಮ ದೃಷ್ಟಿಯಲ್ಲಿ ಈ ಸರಕಾರದ ಲೋಪವಾಗಿದೆ. ಹಾಗೆಯೇ ಮಾಲಿನ್ಯ ನಿಯಂತ್ರಣದ ಹೆಸರಿನಲ್ಲಿ ವಿವಿಧ ಸಂಘಟನೆಗಳು ಕೈಗಾರಿಕೆಗಳಿಗೆ ತೆರಳಿ ಹಫ್ತಾ ವಸೂಲಿ ಮಾಡುತ್ತಿವೆ.

*ಲೇಖಕರು ಗೌರವ ಅಧ್ಯಕ್ಷರು, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ, ಬೆಂಗಳೂರು.

Leave a Reply

Your email address will not be published.