ಸಬಕೇ ಸಾಥ್ ಸಬ್ ಕಾ ವಿಕಾಸ್

ಹಿಂದೆ ಕೇಂದ್ರ ಸರ್ಕಾರ ಹೆಚ್ಚಾಗಿ ಭ್ರಷ್ಟಾಚಾರದಿಂದಲೇ ಫೇಮಸ್ ಆಗಿರುತ್ತಿತ್ತು; 2ಜಿ ಹಗರಣ, ಕಲ್ಲಿದ್ದಿಲು ಹಗರಣಗಳಿಂದ ಎಲ್ಲರ ಮನೆಮಾತಾಗಿತ್ತು. ಆದರೆ ಮೋದಿ ಸರ್ಕಾರವು ಇಂತಹ ಯಾವುದೇ ಹಗರಣವನ್ನೂ ಮಾಡದೇ ಸ್ವಚ್ಛ ಸರ್ಕಾರವಾಗಿ ಗುರುತಿಸಿಕೊಂಡಿದೆ. ರಾಜಕಾರಣಿಗಳು ಸ್ವಚ್ಛವಾಗಿರುವಂತೆ ನೋಡಿಕೊಂಡಿರುವುದು ಮೋದಿಯ ಸಾಧನೆ.

ದೇಶಕ್ಕೆ ನರೇಂದ್ರ ಮೋದಿ ಬೇಕೇಬೇಕು. ಯಾಕೆಂದರೆ, ಆತ ನನ್ನ ದೇಶವನ್ನು ಸರಿ ದಾರಿಯಲ್ಲಿ ಕರೆದೊಯ್ಯುತ್ತಾನೆಂದು, ಭ್ರಷ್ಟಾಚಾರವಿಲ್ಲದೆ ಕೆಲಸ ಮಾಡುತ್ತಾನೆಂದು, ಭ್ರಷ್ಟರನ್ನು ಶಿಕ್ಷಿಸುತ್ತಾನೆಂದು ಹಾಗೂ ದೇಶದ ಸೈನಿಕರಿಗೆ ಉತ್ತಮ ಸೌಲಭ್ಯ ಒದಗಿಸುತ್ತಾನೆಂದು ಮೋದಿ ಬೇಕು. ಅಷ್ಟಲ್ಲದೇ, ಉತ್ತಮ ಆರ್ಥಿಕ ಶಿಸ್ತು ಕಾಪಾಡುವ ಮೂಲಕ ಉದ್ಯೋಗ ಹೆಚ್ಚಿಸುತ್ತಾನೆಂದು, ದೇಶದಲ್ಲಿ ಭಯೋತ್ಪಾದನೆ ನಡೆಯದಂತೆ ತಡೆಯುತ್ತಾನೆಂದು, ದೇಶದ ಎಲ್ಲರಿಗೂ ಸಮಾನ ಅವಕಾಶ ಮತ್ತು ಯೋಜನೆಗಳನ್ನು ತರುತ್ತಾನೆಂದು ಹಾಗೂ ದೇಶವನ್ನು ಸರ್ವತೋಮುಖ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಾನೆಂದು ಮೋದಿ ಬೇಕಾಗಿದ್ದಾರೆ.

ಅನಿವಾರ್ಯ

ಸದೃಢ ಸರಕಾರ ಭಾರತದ ಜನತೆಗೆ ಬೇಕು ಅಂತಾದರೆ ಮೋದಿ ಮತ್ತು ಅವರ ಸರಕಾರ ಅನಿವಾರ್ಯವಾಗಿದೆ. ಕಾರಣ ದುರ್ಬಲ ವಿರೋಧ ಪಕ್ಷಗಳು ಮತ್ತು ಅಸಂಘಟಿತ ಮೈತ್ರಿ ಪಕ್ಷಗಳು. ಮೈತ್ರಿ ರಾಜಕಾರಣ ಪ್ರಯೋಗ ಭಾರತ ದೇಶದಲ್ಲಿ ಎಂದೂ ಯಶಸ್ವಿಯಾಗಿಲ್ಲ ಎಂಬುದು ರಾಜಕೀಯ ಇತಿಹಾಸ ಬಲ್ಲ ಎಲ್ಲರಿಗೂ ತಿಳಿದದ್ದೆ.

ಈ ಹಿಂದೆ ರಾಜಕೀಯದಲ್ಲಿ ನೈತಿಕತೆ ಉತ್ತಂಗ ಸ್ಥಿತಿಯಲ್ಲಿದ್ದಾಗ ರಾವiಮನೋಹರ ಲೋಹಿಯಾ ಶುರು ಮಾಡಿದ್ದ ಮೈತ್ರಿಯುಗ, ವಾಜಪೇಯಿ ಯುಗದವರೆಗೂ ಬರಿ ಕಹಿ ಅನುಭವ. ಇಂದಿನ ವಿರೋಧ ಪಕ್ಷಗಳು, ಅವುಗಳ ನೈತಿಕತೆ ಗಮನಿಸಿದರೆ ಪ್ರಸ್ತುತ ದೇಶದ ಸನ್ನಿವೇಶಕ್ಕೆ ನರೇಂದ್ರ ಮೋದಿ ಅನಿವಾರ್ಯವಾಗಿದ್ದಾರೆ.

ಬಡಾಯಿ ವೀರನಲ್ಲ

ಮೋದಿ ಅಭಿವೃದ್ಧಿ ಹರಿಕಾರ ಹೌದೋ ಅಲ್ಲವೋ ಆಮೇಲೆ ವಿಶ್ಲೇಷಿಸೋಣ. ಅದರೆ ಮೋದಿ ಬಡಾಯಿ ವೀರನಲ್ಲಾ ಎಂದು ಗಂಟಾಘೋಷವಾಗಿ ಹೇಳಬಹುದು. ಏಕೆಂದರೆ, ಭಾರತವನ್ನು ಮತ್ತು ಮೋದಿಯನ್ನು ಅಧಿಕಾರಕ್ಕೇರಿದ ಮೊದಲನೇ ದಿನದಿಂದ ಇಡೀ ವಿಶ್ವ ತುಂಬ ಸೂಕ್ಷ್ಮವಾಗಿ ಗಮನಿಸುತ್ತಿದೆ. ನಿಜವಾಗಿ ಆತ ಬಡಾಯಿ ವೀರನಾಗಿದ್ದರೆ ತುಂಬ ಹಿಂದೆಯೇ ಮತ್ತು ಬಲು ಬೇಗನೇ ಮೂಲೆ ಸೇರಬೇಕಿತ್ತು.

ನಮ್ಮ ವಯೋಮಾನದವರು ಕಂಡ, ಅತ್ಯುತ್ತಮ ಅಡಳಿತ ನಡೆಸಿದ ಕೇಂದ್ರ ಸರಕಾರ ಇದಾಗಿದೆ.

ಇನ್ನು ಅಭಿವೃದ್ಧಿ ಬಗ್ಗೆ…

1. ನರೇಂದ್ರ ಮೋದಿ ಸರ್ಕಾರ ಆರ್ಥಿಕತೆಯನ್ನು ಬಲಿಷ್ಟಗೊಳಿಸಿ ದೇಶವನ್ನು ಮೊದಲ ಸ್ಥಾನದಲ್ಲಿ ನಿಲ್ಲಿಸಿದೆ.

2. ಪ್ರಧಾನಿಯ ವಿದೇಶ ಪ್ರವಾಸದ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿವೆ. ಆದರೆ ಪ್ರಧಾನಿಯ ವಿದೇಶ ಪ್ರವಾಸದಿಂದಾಗಿ ಭಾರತಕ್ಕೆ ಹಲವು ಮಿತ್ರರಾಷ್ಟ್ರಗಳು ಸಿಕ್ಕಿವೆ. ಇದರಿಂದ ಅಂತರರಾಷ್ಟ್ರೀಯ ಸಂಬಂಧದ ಬಲವರ್ಧನೆಯಾಗಿದೆ.

3. ಹಿಂದಿನ ಪ್ರಧಾನಿಯ ನೇತ್ವತ್ವದಲ್ಲಿ ಭಾರತವು ಸೈನ್ಯದ ವಿಚಾರದಲ್ಲಿ ಭಾರೀ ಸಮಸ್ಯೆ ಎದುರಾಗಿ ಅಪಖ್ಯಾತಿ ಪಡೆಯುವ ಹಂತಕ್ಕೆ ತಲುಪಿತ್ತು. ಆದರೆ ಪ್ರಧಾನಿ ಮೋದಿ ಇಂತಹ ಸೂಕ್ಷ್ಮ ವಿಚಾರವನ್ನು ನಾಜೂಕಾಗಿ ನಿಭಾಯಿಸಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದ ವಿಚಾರದಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್, ಪಾಕಿಗಳ ಬೇಸ್ ಕ್ಯಾಂಪ್ ಗಳನ್ನು ನಾಶಗೊಳಿಸಿದ್ದು ಇದಕ್ಕೆ ಸಾಕ್ಷಿಯಾಗಿವೆ. ಅರುಣಾಚಲ ಪ್ರದೇಶ ಮತ್ತು ದಲಾಯಿ ಲಾಮ ವಿಚಾರಗಳಲ್ಲಿ ಚೀನಾವನ್ನು ಮುಖಾಮುಖಿ ಎದುರಿಸಿದ್ದು ಭಾರತದ ಸಾಧನೆಯಾಗಿದೆ.

4. ಹಲವು ಯೋಜನೆಗಳ ಮೂಲಕ ಉಗ್ರರ ಹಣಕಾಸು ವ್ಯವಸ್ಥೆಯನ್ನು ಅಲುಗಾಡಿಸಿ ಹಲವು ಟೆರರಿಸ್ಟ್ ಗಳನ್ನು ಮತ್ತು ಕ್ರಿಮಿನಲ್‍ಗಳನ್ನು ಹೆಡೆಮುರಿ ಕಟ್ಟಿದರು. ಕೆಲವರನ್ನು ಹಿಡಿಯುವಲ್ಲಿ ಭದ್ರತಾ ಪಡೆ ಯಶಸ್ವಿಯಾಗಿದೆ.

5. ಮೇಕ್ ಇನ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾ.

6. ಹಿಂದೆ ಕೇಂದ್ರ ಸರ್ಕಾರ ಹೆಚ್ಚಾಗಿ ಭ್ರಷ್ಟಾಚಾರದಿಂದಲೇ ಫೇಮಸ್ ಆಗಿರುತ್ತಿತ್ತು; 2ಜಿ ಹಗರಣ, ಕಲ್ಲಿದ್ದಲ್ಲು ಹಗರಣಗಳಿಂದ ಎಲ್ಲರ ಮನೆಮಾತಾಗಿತ್ತು. ಆದರೆ ಮೋದಿ ಸರ್ಕಾರವು ಇಂತಹ ಯಾವುದೇ ಹಗರಣವನ್ನೂ ಮಾಡದೇ ಸ್ವಚ್ಛ ಸರ್ಕಾರವಾಗಿ ಗುರುತಿಸಿಕೊಂಡಿದೆ. ರಾಜಕಾರಣಿಗಳು ಸ್ವಚ್ಛವಾಗಿರುವಂತೆ ನೋಡಿಕೊಂಡಿರುವುದು ಮೋದಿಯ ಸಾಧನೆ.

7. ಸ್ವಚ್ಛ ಭಾರತ ಪರಿಕಲ್ಪನೆ.

8. ಜಿಎಸ್ಟಿ ಜಾರಿ ಸ್ವಾತಂತ್ರ್ಯ ನಂತರದಲ್ಲಿ ತೆರಿಗೆ ವಿಚಾರದಲ್ಲಿ ಭಾರತ ತೆಗೆದುಕೊಂಡ ಒಂದು ದೊಡ್ಡ ನಿರ್ಧಾರವಾಗಿದೆ.

9. ಸ್ವಾತಂತ್ರ್ಯ ಬಂದ ನಂತರ ಕೇಂದ್ರ ಮಟ್ಟದಲ್ಲಿ ಹಲವು ಪ್ಲಾನಿಂಗ್ ಕಮಿಷನ್ ಇದ್ದರೂ ಸರಿಯಾದ ಯೋಜನೆಯನ್ನು ರೂಪಿಸುತ್ತಿರಲಿಲ್ಲ. ಹಾಗಾಗಿ ಅದರ ಬದಲಾಗಿ ನೀತಿ ಆಯೋಗ ರಚನೆ ಮಾಡಲಾಗಿದೆ. ಪ್ರತಿ ರಾಜ್ಯಕ್ಕೂ ಸಮಾನ ಅವಕಾಶ ಕಲ್ಪಿಸಿ, ಕೇಂದ್ರಕ್ಕೆ ಪ್ಲಾನ್ ಮಾಡಲು ಎಷ್ಟು ಅವಕಾಶಗಳಿವೆಯೋ ಹಾಗೆ ರಾಜ್ಯ ಸರ್ಕಾರವೂ ಕೂಡ ತನ್ನ ರಾಜ್ಯದ ಸಮಸ್ಯೆಗಳ ವಿಚಾರದಲ್ಲಿ ಅಷ್ಟೇ ಪ್ಲಾನ್ ರೂಪಿಸಲು ಅವಕಾಶ ನೀಡಲಾಗಿದೆ.

10. ಮೋದಿ ಸರ್ಕಾರವು ರಾಜಕೀಯ ಓಲೈಕೆ ತಂತ್ರದಿಂದ ದೂರ ಉಳಿದಿದೆ. ತ್ರಿವಳಿ ತಲಾಕ್‍ನ್ನು ಸುಪ್ರೀಂ ಕೋರ್ಟ್ ಅಸಾಂವಿಧಾನಿಕವೆಂದು ತೀರ್ಪಿತ್ತು, 6 ತಿಂಗಳ ಒಳಗಾಗಿ ಒಂದು ಕಾನೂನು ರಚಿಸುವಂತೆ ಸರ್ಕಾರಕ್ಕೆ ತಿಳಿಸಿತ್ತು. ಈ ನಿರ್ಧಾರದ ಬಗ್ಗೆ ವಿವಿಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಆದರೆ ಮುಸ್ಲೀಂ ಮಹಿಳೆಯರು ನೇರವಾಗಿ ಸರ್ಕಾರಕ್ಕೆ ಬೆಂಬಲ ಸೂಚಿಸಿದರು.

Leave a Reply

Your email address will not be published.