ಸಮಾಜಮುಖಿಯಲ್ಲಿ ಪಿಹೆಚ್‍ಡಿ ಸಾರಾಂಶ

ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ಪ್ರತಿವರ್ಷವೂ ನೂರಾರು ಪಿಹೆಚ್‍ಡಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಗುತ್ತಿದೆ. ಈ ಪ್ರಬಂಧಗಳನ್ನು ವಿವಿಯ ಒಳಗಿನ ಹಾಗೂ ಹೊರಗಿನ ನುರಿತ ಪ್ರಾಧ್ಯಾಪಕರಿಂದ ಪರಿಶೀಲಿಸಿ ಡಾಕ್ಟರೇಟ್ ಪದವಿಗಳನ್ನೂ ನೀಡಲಾಗುತ್ತಿದೆ. ಆದರೆ ಈ ಸಂಶೋಧನೆಗಳ ಮಾಹಿತಿ ಮತ್ತು ಪ್ರಯೋಜನ ಸಮಾಜದ ಒಳಿತಿಗೆ ಸುಲಭವಾಗಿ ದಕ್ಕುತ್ತಿಲ್ಲ. ಸಂಶೋ ಧನೆಯ ಫಲಿತಾಂಶಗಳನ್ನು ಅಳವಡಿಸಿಕೊಳ್ಳಲಾಗುತ್ತಿಲ್ಲ. ಈ ಕೊರತೆಯನ್ನು ಸರಿದೂಗಿಸಲು ಸಮಾಜಮುಖಿ ಪತ್ರಿಕೆ ಮುಂದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸಲ್ಲಿಸಲಾದ ನಿಮ್ಮ ಪಿಹೆಚ್‍ಡಿ ಪ್ರಬಂಧವನ್ನು 1000 ಶಬ್ದಗಳ ಸಾರಾಂಶದೊಂದಿಗೆ ಪ್ರಕಟಣೆಗೆ ಸಲ್ಲಿಸಿ. ಆಯ್ದ ಸಾರಾಂಶಗಳನ್ನು ಮಾಸ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು. ಅತಿ ಉತ್ತಮ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ಕೂಡಾ ಹೊರತರಲಾಗುವುದು. ನಿಮ್ಮ ಸಂಶೋಧನೆಯನ್ನು ಸಮಾಜದೊಂದಿಗೆ ಹಂಚಿಕೊಳ್ಳಲು ನೆರವು ನೀಡಲಾಗುವುದು.

ನೀವೂ ಬರೆಯಿರಿ, ಜತೆಗಿರಿ

  •  ‘ಸಮಾಜಮುಖಿ’ಯ ಸ್ವರೂಪಕ್ಕೆ ತಕ್ಕ ಲೇಖನ, ಕವಿತೆ, ನೀಳ್ಗತೆ, ವ್ಯಂಗ್ಯಚಿತ್ರ, ಪ್ರಬಂಧಗಳನ್ನು ಪ್ರಕಟಣೆಗಾಗಿ ಕಳಿಸಬಹುದು. 
  •  ‘ನಮ್ಮೂರು’ ಅಂಕಣದಲ್ಲಿ ನಿಮ್ಮ ಊರಿನ ಜನ, ಭಾಷೆ, ವರ್ತನೆ, ಸೌಹಾರ್ದ, ಭೌಗೋಳಿಕತೆ, ಸಮಸ್ಯೆ, ಹೆಗ್ಗಳಿಕೆ ಕುರಿತ ವಿಶೇಷ ಅಂಶಗಳನ್ನು ಜೋಡಿಸಿ         ಪ್ರಬಂಧದ ಧಾಟಿಯಲ್ಲಿ ಬರೆಯಲು ಅವಕಾಶವಿದೆ. 
  • ‘ನನ್ನ ಕ್ಲಿಕ್’ ಅಂಕಣ ಛಾಯಾಚಿತ್ರಕಾರರಿಗೆ ಮೀಸಲು. ಛಾಯಾಚಿತ್ರಕಾರರು ತಮ್ಮ ಸಂಗ್ರಹದಿಂದ ತಾವೇ ಆಯ್ದ ವಿಶೇಷ, ವಿಶಿಷ್ಟ ಚಿತ್ರವನ್ನು ಪುಟ್ಟ ಟಿಪ್ಪಣಿಯೊಂದಿಗೆ ಕಳಿಸಬಹುದು. 
  • ಪ್ರಕಾಶಕರು ತಮ್ಮ ಇತ್ತೀಚಿನ ಪ್ರಕಟಣೆಗಳ ಎರಡು ಪ್ರತಿಗಳನ್ನು ಕಳಿಸಿದರೆ ಓದುಗರಿಗೆ ‘ಹೊಸ ಪುಸ್ತಕ’ ಅಂಕಣದಲ್ಲಿ ಪರಿಚಯಿಸಲಾಗುವುದು. 
  • ‘ಪ್ರತಿಬಿಂಬ’ ವಿಭಾಗದಲ್ಲಿ ನಿಮ್ಮ ನಿಷ್ಟುರ ನುಡಿಗಳಿಗೆ, ಗಂಭೀರ ಚರ್ಚೆಗೆ ಅವಕಾಶವಿದೆ.

ಸಮಾಜಮುಖಿ ಮಾಸಪತ್ರಿಕೆ,

ನಂ.111, 4ನೇ ಮಹಡಿ, ಕೃಷ್ಣಪ್ಪ ಕಾಂಪೌಂಡು, ಲಾಲ್‍ಬಾಗ್ ರಸ್ತೆ, ಬೆಂಗಳೂರು 560027

ದೂ: 9606934018, 7760191345, ಇಮೇಲ್: samajamukhi2017@gmail.com

Leave a Reply

Your email address will not be published.