ಸಮಾಜಮುಖಿ ಪ್ರಕಾಶನದ ‘ಪ್ರಕಓ’ ಪುಸ್ತಕಮಾಲೆ

ಕನ್ನಡ ಪರಿಸರದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಸಾಮಾನ್ಯ ಕನ್ನಡಿಗರಿಗೆ ಉಪಯುಕ್ತವಾಗುವ ‘ರೀಡರ್’ ಮಾದರಿಯ ಪುಸ್ತಕಗಳ ಕೊರತೆಯಿದೆ. ಈ ಕೊರತೆಯನ್ನು ಪೂರೈಸಲು ಹಾಗೂ ‘ಪ್ರತಿಯೊಬ್ಬ ಕನ್ನಡಿಗನು ಓದಲೇಬೇಕಾದ’ (ಪ್ರಕಓ) ಪುಸ್ತಕಗಳನ್ನು ಹೊರತರಲು ಸಮಾಜಮುಖಿ ಪ್ರಕಾಶನ ಬಯಸಿದೆ.

ರೀಡರ್ ಎಂದರೇನು..?

ಯಾವುದಾದರೊಂದು ವಿಷಯದ ಬಗ್ಗೆ ಅಂದಿನವರೆಗೆ ಪ್ರಕಾಶಿತ ಪಠ್ಯಗಳ ಜ್ಞಾನಪ್ರಪಂಚವನ್ನು ಒಳಗೊಂಡು ಹಾಗೂ ಸಾಮಾನ್ಯವಾಗಿ ಅವಿವಾದಿತವಾದ ವಿಷಯ ವಸ್ತುಗಳೊಡನೆ ಸಮಗ್ರ ಚಿತ್ರಣ ನೀಡುವ ಹೊತ್ತಿಗೆಯನ್ನು ‘ರೀಡರ್’ ಎಂದು ವರ್ಗೀಕರಿಸಲಾಗಿದೆ. ಈ ರೀಡರ್‍ಗಳು ಸರಳ ಭಾಷಯಲ್ಲಿ ತನ್ನ ಆಯ್ಕೆಯ ವಿಷಯಗಳ ಬಗ್ಗೆ ಪ್ರಕಟಿತ ಸಂಶೋಧನೆಯಲ್ಲಿನ ಸ್ಥೂಲಚಿತ್ರಣ ನೀಡುವಂತಿರು ತ್ತವೆ. ಈ ರೀಡರ್‍ಗಳಲ್ಲಿ ಮೂಲ ಸಂಶೋಧನೆ ಮಾಡಲು ಹೊರಟಿರುವುದಿಲ್ಲ. ಇವುಗಳಲ್ಲಿ ಒಮ್ಮುಖದ ಯಾವುದೇ ವಾದ-ಪ್ರತಿವಾದನೆ ಇರುವುದಿಲ್ಲ. ಬದಲಿಗೆ, ಅತ್ಯಂತ ಸುಲಭವಾಗಿ ಅರ್ಥವಾಗುವ ಭಾಷಯಲ್ಲಿ ಆ ವಿಷಯವನ್ನು ತಿಳಿಯಬಯಸುವ ಜ್ಞಾನಾರ್ಥಿಗೆ ಬೇಕಿರುವ ಮೂಲಭೂತ ಹಾಗೂ ಸಮಗ್ರ ಪರಿಚಯಾತ್ಮಕ ಲೇಖನಗಳನ್ನು ಒಳಗೊಂಡಿರುತ್ತವೆ.

ಕನ್ನಡದಲ್ಲಿ ರೀಡರ್‍ಗಳ ಅತೀವ ಕೊರತೆಯಿದೆ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪಠ್ಯಗಳ ಹೊರತಾಗಿ ಸಿಗಬೇಕಾದ ಅಸಾಂಪ್ರದಾಯಿಕ ಶಿಕ್ಷಣದ ಗಂಭೀರ ನ್ಯೂನತೆಯಿದೆ. ಕನ್ನಡದ ಲೇಖಕರು ತಮ್ಮ ಸೃಜನಶೀಲ ಬರವಣಿಗೆಗೆ ಹೆಚ್ಚಿನ ಒತ್ತು ಕೊಟ್ಟು ಓದುಗರ ಅಗತ್ಯಗಳನ್ನು ಮರೆತಿ ರುವಂತೆ ಭಾಸವಾಗುತ್ತದೆ. ಸಾಮಾನ್ಯ ಓದುಗರ ಹಾಗೂ ವಿದ್ಯಾರ್ಥಿಗಳ ಅರಿವಿನ ಮಟ್ಟವನ್ನು ಹೆಚ್ಚಿಸುವ ಹೊಣೆಗಾರಿಕೆಯನ್ನು ಮರೆತಂತೆ ಅನ್ನಿಸುತ್ತದೆ. ಕನ್ನಡ ಸಮಾಜವನ್ನು ಮುಂದಿನ ದಿನಗಳಲ್ಲಿ ಉತ್ತಮಿಕೆಯೆಡೆಗೆ ಒಯ್ಯಬೇಕೆಂದರೆ ಉತ್ತಮ ಗುಣಮಟ್ಟದ ಈ ಅಸಾಂಪ್ರದಾಯಿಕ ಶಿಕ್ಷಣದ ಅಗತ್ಯವನ್ನು ಪೂರೈಸುವ ಜರೂರತೆಯಿದೆ.

ಪ್ರಕಓ ಪುಸ್ತಕಮಾಲೆ

ಉದ್ದೇಶಿಸಲಾಗಿರುವ ವಿಷಯ ವಸ್ತುಗಳು:

ಕನ್ನಡ ಭಾಷೆ ಮತ್ತು ಲಿಪಿಯ ಉಗಮದ ಇತಿಹಾಸ, ಹಳಗನ್ನಡ ಕಾವ್ಯ ಪರಿಚಯ, ನಡುಗನ್ನಡ ಕಾವ್ಯ ಪರಿಚಯ, ಸ್ವಾತಂತ್ರ್ಯಪೂರ್ವ ಹೊಸಗನ್ನಡ ಸಾಹಿತ್ಯ, ಸ್ವಾತಂತ್ರ್ಯೋತ್ತರ ಆಧುನಿಕ ಕನ್ನಡ ಸಾಹಿತ್ಯ, ಕುವೆಂಪು ಸಾಹಿತ್ಯ, ಕರ್ನಾಟಕದ ಆರ್ಥಿಕ ಇತಿಹಾಸ, ಭಾರತೀಯ ಸಂವಿಧಾನ, ಬಂಡವಾಳಶಾಹಿ ನೀತಿ ಮತ್ತು ಜಾಗತೀಕರಣ, ಸಾರ್ವಜನಿಕ ನೀತಿ ಮತ್ತು ಆಯವ್ಯಯ ಮಂಡನೆ, ಕರ್ನಾಟಕ ವಿಧಾನಮಂಡಲ ಶಾಸನ ಚರಿತೆ, ಕರ್ನಾಟಕದಲ್ಲಿ ಸಮಾಜವಾದಿ ಚಳವಳಿ, ಕರ್ನಾಟಕದಲ್ಲಿ ಭಕ್ತಿ-ಧರ್ಮ ಪರಂಪರೆ, ಮಹಾವೀರ ಮತ್ತು ಜೈನಧರ್ಮ, ಬಸವಣ್ಣ – ಲಿಂಗಾಯಿತ ವೀರಶೈವ ಪರಂಪರೆ, ಕರ್ನಾಟಕದಲ್ಲಿ ಡಿಜಿಟಲ್ ಕ್ರಾಂತಿ, ಮೀಸಲಾತಿ ಚರ್ಚೆ, ಕಾವೇರಿ ವಿವಾದ ಮತ್ತು ಕರ್ನಾಟಕದ ನೀರಾವರಿ, ಹಿಂದೂ ಧರ್ಮ, ಮೊಹಮ್ಮದ್ ಪೈಗಂಬರ್ ಮತ್ತು ಇಸ್ಲಾಮ್‍ಧರ್ಮ, ಯೇಸು ಕ್ರಿಸ್ತ ಮತ್ತು
ಕ್ರೈಸ್ತಧರ್ಮ.

ಮೇಲಿನ ವಿಷಯವಸ್ತುಗಳ ಬಗ್ಗೆ ರೀಡರ್ ಸಿದ್ಧಪಡಿಸುವ ಇರಾದೆಯ ಲೇಖಕರು ಕೂಡಲೇ ಸಂಪರ್ಕಿಸಿ:

ಸಂಪಾದಕರು, ‘ಚಿಂತನಶೀಲ ಸಮಾಜಮುಖಿ’
111, 4ನೇ ಮಹಡಿ, ಕೃಷ್ಣಪ್ಪ ಕಾಂಪೌಂಡ್, ಲಾಲ್‍ಬಾಗ್ ರಸ್ತೆ, ಬೆಂಗಳೂರು-560027
email: samajamukhi2017@gmail.com Phones: 9448520414

Leave a Reply

Your email address will not be published.