ಸಾಂಕ್ರಾಮಿಕದ ಅಂತ್ಯ ಹೇಗೆ..? ಚಿಕಿತ್ಸೆಯೋ..? ಲಸಿಕೆಯೋ..? ಸಮೂಹ ರೋಗನಿರೋಧಕ ಶಕ್ತಿಯೋ..?

ಕೊರೊನಾ ವೈರಾಣುವಿನಿಂದ ಹಬ್ಬಿದ ಕೋವಿಡ್-19 ಸಾಂಕ್ರಾಮಿಕ ರೋಗ ಕೊನೆಗಾಣುವುದು ಹೇಗೆ ಎಂಬ ಚರ್ಚೆ ಇಂದು ಪ್ರಸ್ತುತವಾಗಿದೆ. ಯಾವ ದಾರಿಯಲ್ಲಿ ವೈರಾಣುವಿನಿಂದ ಪ್ರಾಣಭಯ ದೂರವಾಗುವುದೋ ಹಾಗೂ ಯಾವ ರೀತಿಯಲ್ಲಿ ವೈರಾಣುವಿನ ಹರಡುವಿಕೆ ತಪ್ಪುವುದೋ ಎಂಬುದು ಮುಂದಿನ ತಿಂಗಳುಗಳಲ್ಲಿ ನಿರ್ಧಾರವಾಗಲಿದೆ.

ಹಲವು ಚುಚ್ಚುಮದ್ದು ಹಾಗೂ ಔಷಧಿಗಳು ಬಂದಿವೆ. ಆದರೆ ಯಾವುದೂ ನೂರಕ್ಕೆ ನೂರರಷ್ಟು ಪ್ರಾಣಹಾನಿ ತಡೆಯುವ ಭರವಸೆ ನೀಡುತ್ತಿಲ್ಲ. ಅನೇಕ ಲಸಿಕೆಗಳು ಲ್ಯಾಬೊರೇಟರಿಗಳಿಂದ ಆಚೆ ಬಂದು ಜನರ ನಡುವೆ ಪ್ರಯೋಗವಾಗುತ್ತಿವೆ. ಇವು ದೊಡ್ಡ ಸಂಖ್ಯೆಯಲ್ಲಿ ಎಲ್ಲರಿಗೂ ಲಭ್ಯವಾಗಲು ತಿಂಗಳುಗಳೇ ಬೇಕು. ಮೇಲಾಗಿ ಈ ಲಸಿಕೆಗಳು ರೋಗದ ಸಾಂಕ್ರಾಮಿಕತೆಯನ್ನು ಹೇಗೆ ತಡೆಯುತ್ತವೆ ಎಂಬುದಿನ್ನೂ ಪ್ರಮಾಣಿತಗೊಳ್ಳಬೇಕಿದೆ.

ಈ ಮಧ್ಯೆ ಮಹಾನಗರಗಳಲ್ಲಿ ಈಗಾಗಲೇ ವೈರಾಣು ಶೇಕಡಾ 20ರಿಂದ 30ರಷ್ಟು ಜನರಲ್ಲಿ ಹಬ್ಬಿ ಸಮೂಹ ಪ್ರತಿರಕ್ಷೆಗೆ (ಹರ್ಡ್ ಇಮ್ಯುನಿಟಿ) ಬೇಕಾದ ಸಂಖ್ಯೆಯಷ್ಟು ಜನರಿಗೆ ಹಬ್ಬುವಲ್ಲಿಗೆ ಬೆಳೆಯುತ್ತಿದೆ.

ಹಾಗಾದರೆ ಈ ಸೋಂಕುರೋಗದ ‘ಸಾಂಕ್ರಾಮಿಕತೆ’ ಅಂತ್ಯ ಕಾಣುವುದು ಹೇಗೆ..? ಸಾಂಕ್ರಾಮಿಕ ತಜ್ಞರು, ವೈರಾಣು ತಜ್ಞರು, ಲಸಿಕೆ ತಜ್ಞರು ಮತ್ತಿತರ ಪರಿಣತರು ಏನು ಹೇಳುತ್ತಾರೆ?

Leave a Reply

Your email address will not be published.