ಸಾರ್ವಜನಿಕ ಸತ್ಯ-ಮೌಲ್ಯಗಳ ಅನುಷ್ಠಾನ ಎಲ್ಲಾ ತಲೆಮಾರುಗಳ ಕರ್ತವ್ಯ

ನಾರಾಯಣಮೂರ್ತಿಯವರು ಗುರುತಿಸಿರುವ ಮಿತಿಗಳು ನಮ್ಮ ದೇಶದಲ್ಲಿ ಇಂದು ಎದ್ದುಕಾಣುತ್ತವೆ. ಹಾಗಾಗಿ ಅವರೇನು ಮಿಥ್ಯೆಗಳನ್ನು ಹರಡುತ್ತಿಲ್ಲ. ಆದರೆ ಅವರು ಭಾರತದ ಮಿತಿಗಳನ್ನು ವಿವರಿಸಲು ಮುಂದಿಡುತ್ತಿರುವ ಸಾಂಸ್ಕೃತಿಕ ವಿಶ್ಲೇಷಣೆಯು ಐತಿಹಾಸಿಕ ನೆಲೆಯಲ್ಲಿ ನೋಡಿದಾಗ ನಮ್ಮ ಮನ ಮುಟ್ಟುವುದಿಲ್ಲ.

-ಪೃಥ್ವಿದತ್ತ ಚಂದ್ರಶೋಬಿ

1ಹಿಂದುಳಿದಿರುವಿಕೆಗೆ ಸಾಂಸ್ಕೃತಿಕ ಕಾರಣಗಳಿವೆಯೆ? ಶ್ರಮದ ನೈತಿಕತೆಯೇನು? ಈ ಪ್ರಶ್ನೆಗಳನ್ನು ಕುರಿತಂತೆ ಐತಿಹಾಸಿಕವಾಗಿ ಚಿಂತಿಸುವುದು ಹೇಗೆ?

ಸಂಸ್ಕೃತಿ ಮತ್ತು ಆರ್ಥಿಕ ಅಭಿವೃದ್ಧಿಗಳ ನಡುವಣ ಸಂಬಂಧವನ್ನು ಮೊದಲ ಬಾರಿಗೆ ಶಾಸ್ತ್ರೀಯವಾಗಿ ವಿಶ್ಲೇಷಿಸಿದವನು ಜರ್ಮನ್ ಸಮಾಜಶಾಸ್ತ್ರಜ್ಞನಾದ ಮ್ಯಾಕ್ಸ್ ವೆಬರ್ (1864-1920). ಅವನು ಕೇಳಿಕೊಂಡಿದ್ದು ಒಂದು ಸರಳವಾದ ಪ್ರಶ್ನೆಯನ್ನು: ಪಶ್ಚಿಮ ಯೂರೋಪಿನಲ್ಲಿಯೇ ಏಕೆ ಕೈಗಾರಿಕಾ ಕ್ರಾಂತಿ ಮತ್ತು ಮಾರುಕಟ್ಟೆ ಆಧಾರಿತ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಗಳು ಹುಟ್ಟಿದವು? ವೆಬರನ ಕಾಲಕ್ಕಾಗಲೆ ಕೈಗಾರಿಕೀಕರಣ ಕೇಂದ್ರಿತ ಅಭಿವೃದ್ಧಿಯ ಮಾದರಿಯು ಪಶ್ಚಿಮ ಯೂರೋಪಿನ ದೇಶಗಳಲ್ಲಿ ನೆಲೆಯೂರಿತ್ತು. ಜೊತೆಗೆ ಎಲ್ಲ ದೇಶಗಳು ಸಹ ಇಂತಹ ಅಭಿವೃದ್ಧಿಯ ಪಥದಲ್ಲಿ ಸಾಗುವುದು ಅನಿವಾರ್ಯವೆನ್ನುವ ನಿಲುವನ್ನು ಯೂರೋಪಿನಲ್ಲಿ ಮಾತ್ರವಲ್ಲ, ಜಗತ್ತಿನ ಎಲ್ಲೆಡೆಯೂ ಜನರು ಒಪ್ಪಿಕೊಳ್ಳಲಾರಂಭಿಸಿದ್ದರು. ಇದಕ್ಕೆ ಮತ್ತೊಂದು ಕಾರಣ ಯೂರೋಪಿನ ದೇಶಗಳು ಇಡಿ ಪ್ರಪಂಚವನ್ನೆ ತಮ್ಮ ವಸಾಹತುಗಳಾಗಿ ಪರಿವರ್ತಿಸಿಕೊಂಡಿದ್ದು ಸಹ ಇರಬಹುದು.

ತನ್ನ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಲು ವೆಬರ್ ಎರಡು ನಿರ್ದಿಷ್ಟವಾದ ಕ್ಷೇತ್ರಗಳನ್ನು ತನ್ನ ಅಧ್ಯಯನದಲ್ಲಿ ಶೋಧಿಸಿದ. ಮೊದಲಿಗೆ, ಆರ್ಥಿಕ ಅಭಿವೃದ್ಧಿಗೆ ಸಾಂಸ್ಕೃತಿಕ ಕಾರಣಗಳನ್ನು ಹುಡುಕುವಾಗ ಅವನು ವಿಶೇಷವಾಗಿ ಧರ್ಮದ ಪಾತ್ರವನ್ನು ವಿಶ್ಲೇಷಿಸಿದ. ‘ಪ್ರಾಟಸ್ಟೆಂಟ್ ಎಥಿಕ್ ಅಂಡ್ ದ್ ಸ್ಪಿರಿಟ್ ಕ್ಯಾಪಿಟಲಿಸಮ್’ (ಪ್ರಾಟಸ್ಟೆಂಟ್ ನೈತಿಕತೆ ಮತ್ತು ಬಂಡವಾಳಶಾಹಿಯ ಚೈತನ್ಯ) ಎಂಬ ಕೃತಿಯಲ್ಲಿ ವೆಬರ್ ಒಂದು ಸರಳವಾದ ವಾದವನ್ನು ಮುಂದಿಟ್ಟನು. ಅವನು ಹೇಳಿದ್ದು ಇಷ್ಟೆ: ಮಧ್ಯಕಾಲೀನ ಯುಗದ ಕಡೆಯ ಹೊತ್ತಿಗೆ ಕ್ರಿಶ್ಚಿಯನ್ನರಲ್ಲಿ ಹುಟ್ಟಿಬಂದ ಪ್ರಾಟೆಸ್ಟೆಂಟ್ ಪಂಥದ ಮೂಲನಂಬಿಕೆಗಳು ಬಂಡವಾಳಶಾಹಿಯ ಬೆಳವಣಿಗೆಗೆ ಕಾರಣವಾಯಿತು. ಇದರ ಜೊತೆಗೆ ತರ್ಕಬದ್ಧ ಮತ್ತು ಕಾನೂನಿನ ಚೌಕಟ್ಟನ್ನು ಉಳ್ಳ ರಾಷ್ಟ್ರ-ರಾಜ್ಯ (ನೇಷನ್ ಸ್ಟೇಟ್)ಗಳು ಸಹ ಇದೇ ಕಾರಣದಿಂದ ಯೂರೋಪಿನಲ್ಲಿ ಮೂಡಿದವು ಎಂದು ಅವನು ವಾದಿಸಿದನು.

ಪ್ರಾಟಸ್ಟೆಂಟರ ನೈತಿಕತೆಯು ಭೂಮಿಯ ಮೇಲೆ ಬದುಕಿರುವಾಗ ಕಷ್ಟ ಪಟ್ಟು ದುಡಿಯುವಂತೆ ಪ್ರೇರೇಪಿಸುತ್ತದೆ. ಕ್ಯಾಥೋಲಿಕರು ನಂಬಿದ್ದಂತೆ ಕೇವಲ ಚರ್ಚಿನ ಸದಸ್ಯನಾಗಿರುವುದಷ್ಟೆ ಸಾಲದು ಎಂದು ಪ್ರಾಟಸ್ಟೆಂಟರು ಭಾವಿಸಿದ್ದರು. ಕೆಲಸವೆಂದರೆ ಅದೊಂದು ದೈವಿಕ ಕರೆ (ಕಾಲಿಂಗ್) ಎಂದೆ ತಿಳಿದು ಸಂಪತ್ತನ್ನು ಗಳಿಸಲು ಅವರು ಶ್ರಮಿಸಿದರು. ಆದರೆ ಹೀಗೆ ಗಳಿಸಿದ ಸಂಪತ್ತನ್ನು ಐಷಾರಾಮಿ ಬದುಕಿಗೆ ಬಳಸುವ ಬದಲು, ಅದನ್ನು ಮತ್ತೆ ಬಂಡವಾಳವಾಗಿ ಹೂಡಿ ಮತ್ತಷ್ಟು ಸಂಪತ್ತನ್ನು ಗಳಿಸಲು ಪ್ರಾಟಸ್ಟೆಂಟರು ಬಯಸಿದರು. ಆರ್ಥಿಕ ಅಸಮಾನತೆಯ ಬಗ್ಗೆ ಅಷ್ಟೇನು ತಲೆ ಕೆಡಿಸಿಕೊಳ್ಳದ ಪ್ರಾಟಸ್ಟೆಂಟರು, ಹೆಚ್ಚಿನ ಲಾಭವನ್ನು ಗಳಿಸುವುದಕ್ಕೆ ತಮ್ಮ ಧರ್ಮದ ಅಧಿಕೃತ ಒಪ್ಪಿಗೆಯನ್ನು ಗಳಿಸಿಕೊಂಡರು. ವೆಬರ್ ಈ ಒಂದು ಪ್ರಾಪಂಚಿಕ ದೃಷ್ಟಿಕೋನವನ್ನೆ ಪ್ರಾಟಸ್ಟೆಂಟ್ ನೈತಿಕತೆಯೆಂದು ಗುರುತಿಸಿ, ಅದನ್ನು ಬಂಡವಾಳಶಾಹಿಯ ಚೈತನ್ಯಕ್ಕೆ ತಳುಕು ಹಾಕಿದ.

ಅವನ ಹುಡುಕಾಟವಿದ್ದುದು ಬಂಡವಾಳಶಾಹಿ ಮತ್ತು ರಾಷ್ಟ್ರ-ರಾಜ್ಯ ವ್ಯವಸ್ಥೆಗಳು ಯೂರೋಪಿನಲ್ಲಿ ಯಾಕೆ ಹುಟ್ಟಿದವು ಎಂದು ಕೇಳಿಕೊಳ್ಳುವುದರ ಜೊತೆಗೆ ಭಾರತ, ಚೀನಾ ಮತ್ತಿತರ ಪ್ರಾಚೀನ ನಾಗರಿಕತೆಗಳಲ್ಲಿ ಏಕೆ ಮೂಡಲಿಲ್ಲ ಎನ್ನುವುದನ್ನು ಅರಿಯುವುದು ಸಹ ಆಗಿತ್ತು.

ವೆಬರನ ಅಧ್ಯಯನದ ಎರಡನೆಯ ಆಯಾಮವಿದು. ಬಂಡವಾಳಶಾಹಿಯು ಮೂಡಿಬಂದ ಸಂದರ್ಭವನ್ನು ಅರಿಯಲು ಕೇವಲ ಪಶ್ಚಿಮ ಯೂರೋಪಿನ ಸಮಾಜಗಳು ಮತ್ತು ಸಂಸ್ಕೃತಿಗಳ ಅಧ್ಯಯನ ಮಾಡಿದರೆ ಸಾಲುವುದಿಲ್ಲ ಎನ್ನುವುದನ್ನು ಗ್ರಹಿಸಿದ ವೆಬರ್ ಪ್ರಪಂಚದ ನಾಗರಿಕತೆಗಳ ತುಲನಾತ್ಮಕ ಅಧ್ಯಯನಕ್ಕೆ ಕೈಹಾಕಿದ. ಅಂದರೆ ಅವನ ಹುಡುಕಾಟವಿದ್ದುದು ಬಂಡವಾಳಶಾಹಿ ಮತ್ತು ರಾಷ್ಟ್ರ-ರಾಜ್ಯ ವ್ಯವಸ್ಥೆಗಳು ಯೂರೋಪಿನಲ್ಲಿ ಯಾಕೆ ಹುಟ್ಟಿದವು ಎಂದು ಕೇಳಿಕೊಳ್ಳುವುದರ ಜೊತೆಗೆ ಭಾರತ, ಚೀನಾ ಮತ್ತಿತರ ಪ್ರಾಚೀನ ನಾಗರಿಕತೆಗಳಲ್ಲಿ ಏಕೆ ಮೂಡಲಿಲ್ಲ ಎನ್ನುವುದನ್ನು ಅರಿಯುವುದು ಸಹ ಆಗಿತ್ತು.

ಉದಾಹರಣೆಗೆ, ವೆಬರ್ ಕೇವಲ ಪ್ರಾಟಸ್ಟೆಂಟ್ ಕ್ರಿಶ್ಚಿಯಾನಿಟಿಯನ್ನು ಮಾತ್ರ ಅಭ್ಯಸಿಸಲಿಲ್ಲ. ಜೊತೆಗೆ ಭಾರತ ಮತ್ತು ಚೀನಾಗಳ ಧರ್ಮಗಳ ಬಗ್ಗೆ ಉದ್ಗ್ರಂಥಗಳನ್ನು ಸಹ ಬರೆದನು. ಈ ಕೃತಿಗಳಲ್ಲಿ ಭಾರತ ಮತ್ತು ಚೀನಾಗಳಲ್ಲಿ ಬಂಡವಾಳಶಾಹಿಯ ಉಗಮವಾಗಲಿಲ್ಲ ಎನ್ನುವ ಪ್ರಶ್ನೆಯನ್ನೆ ಕೇಳಿಕೊಳ್ಳುತ್ತ, ಪೌರ್ವಾತ್ಯ ಸಮಾಜಗಳಲ್ಲಿ ಪ್ರಚಲಿತವಾಗಿದ್ದ ಮೌಲ್ಯಗಳನ್ನು ಗುರುತಿಸಲು ಪ್ರಯತ್ನಿಸಿದನು. ಉದಾಹರಣೆಗೆ, ಭಾರತದ ಧರ್ಮಗಳ ಬಗ್ಗೆ ವೆಬರ್ ಈ ಮಾತುಗಳನ್ನು ಹೇಳುತ್ತಾನೆ: ಅಲ್ಲಿನ ಧರ್ಮಗಳು ಮೋಕ್ಷಸಾಧನೆಯನ್ನು ಮನುಷ್ಯನ ಗುರಿಯಾಗಿ ಮುಂದಿಡುತ್ತವೆ. ಹಾಗಾಗಿ ಭೂಮಿಯ ಮೇಲಿನ ಬದುಕಿನ ಬಗ್ಗೆ ಈ ಧರ್ಮಗಳಿಗೆ ಅಂತಹ ಆಸಕ್ತಿಯಿಲ್ಲ. ಹೀಗೆ ಪಾರಮಾರ್ಥಿಕ ಬದುಕಿನ ಬಗೆಗಿನ ಒಲವು ಸಂಪತ್ತಿನ ಸಾಧನೆ, ಭೌತಿಕ ಪ್ರಪಂಚವನ್ನು ಕಟ್ಟುವ ಮತ್ತು ಸುಧಾರಿಸುವ ಪ್ರಯತ್ನ ಮಾಡದಂತೆ ಭಾರತೀಯರನ್ನು ತಡೆಯುತ್ತದೆ.

ವೆಬರನ ಮಾತುಗಳು ಸಾಮಾನ್ಯವಾಗಿ ಆಧುನಿಕ ಯೂರೋಪಿನ ಚಿಂತಕರ ಬರಹಗಳಲ್ಲಿ ಕಂಡುಬರುವಂತಹುದು. ಪೌರ್ವಾತ್ಯ ಧರ್ಮಗಳು ಸಾಮಾನ್ಯವಾಗಿ ಪಾರಮಾರ್ಥಿಕ ಗುರಿಗಳನ್ನು ತಮ್ಮ ಅನುಯಾಯಿಗಳ ಮುಂದೆ ಇಡುತ್ತವೆ ಎನ್ನುವುದನ್ನು ಪೂರ್ವದ ನಾಗರಿಕತೆಗಳ ಲಕ್ಷಣವೆಂದೆ ಈ ಚಿಂತಕರು ಭಾವಿಸಿದರು. ಅದರ ಜೊತೆಗೆ ಈ ನಾಗರಿಕತೆಗಳ ಸಾಮಾಜಿಕ ವ್ಯವಸ್ಥೆಯನ್ನು ಸಹ ಅಭ್ಯಸಿಸಿ, ಅವುಗಳು ಇಡೀ ಸಮಾಜದ ಆರ್ಥಿಕ ಅಭಿವೃದ್ಧಿಗೆ ಹೇಗೆ ತಡೆಯಾಗುತ್ತವೆ ಎನ್ನುವುದನ್ನು ಸಹ ಚರ್ಚಿಸಿದರು. ಉದಾಹರಣೆಗೆ, ಸ್ವತಃ ವೆಬರ್ ಭಾರತದಲ್ಲಿನ ಜಾತಿ ವ್ಯವಸ್ಥೆಯ ಬಗ್ಗೆ ಬರೆಯುತ್ತಾನೆ. ಅದರ ಧಾರ್ಮಿಕ ಬೇರುಗಳನ್ನು ಪುನಾರಚಿಸುವುದರ ಜೊತೆಗೆ ಅವನು ಜಾತಿಯಿಂದ ಇಡೀ ಸಮಾಜವೆ ಒಂದು ಘಟಕ ಎನ್ನುವ ಭಾವನೆ ಮೂಡುವುದಿಲ್ಲ ಎನ್ನುತ್ತಾನೆ. ಹೀಗಾಗಿ ಎಲ್ಲರ ಒಳಿತಿಗಾಗಿ ಕೆಲಸ ಮಾಡಬೇಕು ಎನ್ನುವ ಭಾವನೆ ಭಾರತೀಯ ಸಮಾಜದಲ್ಲಿ ಮೂಡುವುದಿಲ್ಲ ಎಂದು ವೆಬರ್ ವಾದಿಸುತ್ತಾನೆ.

2ಭಾರತದ ಹಿಂದುಳಿದಿರುವಿಕೆಗೆ ಸಾಂಸ್ಕೃತಿಕ ಕಾರಣಗಳಿವೆಯೆ ಎನ್ನುವ ಚರ್ಚೆಯನ್ನು ವೆಬರನ ಚಿಂತನೆಗಳ ಮೂಲಕ ಪ್ರಾರಂಭಿಸಿರುವುದರ ಉದ್ದೇಶ ಓದುಗರಿಗೆ ಸ್ಪಷ್ಟವಾಗಿದೆ ಎಂದು ಭಾವಿಸುತ್ತೇನೆ. ಕಳೆದ ಐದು ದಶಕಗಳಲ್ಲಿ ಭಾರತದಲ್ಲಿ ಬಂಡವಾಳಶಾಹಿ ಆರ್ಥಿಕತೆಗೆ ನವಚೈತನ್ಯ ನೀಡಿರುವವರಲ್ಲಿ ಎನ್.ಆರ್.ನಾರಾಯಣಮೂರ್ತಿಯವರು ಪ್ರಮುಖರು. ಯಾವುದೆ ಔದ್ಯಮಿಕ ಹಿನ್ನೆಲೆಯಿಲ್ಲದ ಮತ್ತು ಮಧ್ಯಮವರ್ಗದ ಕುಟುಂಬವೊಂದರಿಂದ ಬಂದ ನಾರಾಯಣಮೂರ್ತಿಯವರು ಭಾರತದ ಹಿಂದುಳಿದಿರುವಿಕೆ ಮತ್ತು ಅದರ ಸಾಂಸ್ಕೃತಿಕ ಬೇರುಗಳನ್ನು ಗುರುತಿಸುವಾಗ, ವೆಬರನ ಪಥದಲ್ಲಿಯೆ ಸಾಗುವಂತೆ ಕಾಣುತ್ತಾರೆ.

ಅಗತ್ಯವಿರುವ ಸಂಸ್ಥೆಗಳನ್ನು ಕಟ್ಟಲು ಸಾಧ್ಯವಾಗಿಲ್ಲ ಎಂದು ಅವರು ವಾದಿಸುತ್ತಿದ್ದಾರೆ. ಅಭಿವೃದ್ಧಿ ಹೊಂದಿದ ಮತ್ತು ಪ್ರಗತಿ ಕಾಣದ ದೇಶಗಳ ನಡುವಿನ ವ್ಯತ್ಯಾಸವನ್ನು ಮೌಲ್ಯಗಳು ಮತ್ತು ಮನೋಭಾವದ ನೆಲೆಯಲ್ಲಿ ನಾರಾಯಣಮೂರ್ತಿಯವರು ಗುರುತಿಸುತ್ತಿರುವುದು ಇಲ್ಲಿ ಗಮನಾರ್ಹವಾದ ಅಂಶವಾಗಿದೆ.

ಭಾರತೀಯ ಸಂಸ್ಕೃತಿಗೆ ಅರ್ಹತೆ, ಪ್ರಾಮಾಣಿಕತೆ ಹಾಗೂ ಸ್ಪರ್ಧಾತ್ಮಕ ಮನೋಭಾವಗಳನ್ನು ಬೆಳಸುವಲ್ಲಿ ಯಶಸ್ಸು ದೊರಕಿಲ್ಲ. ಆದುದರಿಂದ ವೈಜ್ಞಾನಿಕ ಅನ್ವೇಷಣೆಗಳು ಭಾರತದಲ್ಲಿ ನಡೆಯುತ್ತಿಲ್ಲ ಮತ್ತು ಪ್ರತಿಭಾವಂತ ಭಾರತೀಯರನ್ನು ದೇಶದಲ್ಲಿ ಉಳಿಸಿಕೊಂಡು, ಅವರಿಗೆ ಅಗತ್ಯವಿರುವ ಸಂಸ್ಥೆಗಳನ್ನು ಕಟ್ಟಲು ಸಾಧ್ಯವಾಗಿಲ್ಲ ಎಂದು ಅವರು ವಾದಿಸುತ್ತಿದ್ದಾರೆ. ಅಭಿವೃದ್ಧಿ ಹೊಂದಿದ ಮತ್ತು ಪ್ರಗತಿ ಕಾಣದ ದೇಶಗಳ ನಡುವಿನ ವ್ಯತ್ಯಾಸವನ್ನು ಮೌಲ್ಯಗಳು ಮತ್ತು ಮನೋಭಾವದ ನೆಲೆಯಲ್ಲಿ ನಾರಾಯಣಮೂರ್ತಿಯವರು ಗುರುತಿಸುತ್ತಿರುವುದು ಇಲ್ಲಿ ಗಮನಾರ್ಹವಾದ ಅಂಶವಾಗಿದೆ.

ನಾರಾಯಣಮೂರ್ತಿಯವರು ಎತ್ತಿಹಿಡಿಯುತ್ತಿರುವ ಸಮಸ್ಯೆಗಳು ಕೆಲವರಿಗೆ ಇತ್ತೀಚಿನ ಶತಮಾನಗಳಲ್ಲಿ ಹುಟ್ಟಿವೆ ಎನ್ನಿಸಿದರೆ ತಪ್ಪೇನಿಲ್ಲ. ಆದರೆ ಅವರು ಈ ಸಮಸ್ಯೆಗಳು ಎರಡು-ಮೂರು ಸಾವಿರ ವರ್ಷಗಳಿಂದಲೂ ಭಾರತದಲ್ಲಿ ಮನೆ ಮಾಡಿವೆ. ಇವುಗಳನ್ನು ಸರಿಪಡಿಸಲು ಅಗತ್ಯವಿರುವ ಸಾಂಸ್ಕೃತಿಕ ಬದಲಾವಣೆಗಳನ್ನು ತರಲು ಸಾವಿರ ವರ್ಷಗಳೆ ಬೇಕಾಗಬಹುದು ಎನ್ನುವ ಆತಂಕವನ್ನೂ ನಾರಾಯಣಮೂರ್ತಿಯವರು ವ್ಯಕ್ತಪಡಿಸಿದ್ದಾರೆ.

ಈ ಅಂಶಗಳ ಚರ್ಚೆಯನ್ನು ಮುಂದುವರೆಸುವ ಮೊದಲು ಮೂರು ಅಂಶಗಳನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಮೊದಲಿಗೆ, ಹಿಂದುಳಿದಿರುವಿಕೆ ಎಂದರೇನು ಎನ್ನುವ ಮಾತಿನ ಬಗ್ಗೆಯೆ ನಮ್ಮಲ್ಲಿ ಗೊಂದಲವಿರಬಾರದು. ನಾರಾಯಣಮೂರ್ತಿಯವರ ಮನಸ್ಸಿನಲ್ಲಿರುವ ಹಿಂದುಳಿದಿರುವಿಕೆ ಆಧುನಿಕ ಅರ್ಥಶಾಸ್ತ್ರದ ವ್ಯಾಖ್ಯೆಯಲ್ಲಿನ ಆರ್ಥಿಕ ಅಭಿವೃದ್ಧಿಯ ಕಲ್ಪನೆಗಳಿಗೆ ಸಂಬಂಧಿಸಿರುವುದು ಎನ್ನುವುದನ್ನು ಮೊದಲು ಗುರುತಿಸೋಣ. ಈ ಹಿನ್ನೆಲೆಯಲ್ಲಿ, ಅಭಿವೃದ್ಧಿಯೆಂದರೆ ಬಂಡವಾಳಶಾಹಿ ಅರ್ಥವ್ಯವಸ್ಥೆ ಮತ್ತು ಕೈಗಾರಿಕೀಕರಣಗಳನ್ನು ಒಳಗೊಳ್ಳುವ ಆಧುನಿಕ ಪರಿಕಲ್ಪನೆ. ಈ ವ್ಯವಸ್ಥೆಯಿದ್ದಾಗ ಮತ್ತು ಅದರ ಮೂಲಕ ಸಂಪತ್ತು ಸೃಷ್ಟಿಯಾದಾಗ, ದೇಶದ ಎಲ್ಲ ಪ್ರಜೆಗಳಿಗೂ ಅಗತ್ಯವಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಮತ್ತು ನಿರ್ವಹಿಸಲು ಸಾಧ್ಯ ಎನ್ನುವ ನಂಬಿಕೆಯನ್ನು ನಾರಾಯಣಮೂರ್ತಿಯವರು ಹೊಂದಿದ್ದಾರೆ.

ಅಭಿವೃದ್ಧಿಯ ಪರ್ಯಾಯ ವ್ಯಾಖ್ಯೆಗಳು ಮತ್ತು ಪರಿಕಲ್ಪನೆಗಳ ಬಗ್ಗೆ ಸಾಕಷ್ಟು ಚರ್ಚೆಗಳು ಭಾರತದಲ್ಲಿ ಇತ್ತೀಚಿನ ದಶಕಗಳಲ್ಲಿ ನಡೆಯುತ್ತಿವೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೆ. ಹೀಗಿದ್ದರೂ ಸಹ ಮಾರುಕಟ್ಟೆ ಕೇಂದ್ರಿತ, ಆಧುನಿಕ ಬಂಡವಾಳಶಾಹಿ ವ್ಯವಸ್ಥೆಗೆ ಪರ್ಯಾಯವೊಂದನ್ನು ಆಚರಣೆಗೆ ತರುವ ಯಾವುದೆ ಗಂಭೀರ ಪ್ರಯತ್ನ ನಡೆದಿಲ್ಲ ಎನ್ನುವುದು, ಅಂತಹ ಪ್ರಯತ್ನಗಳು ಇಂದು ಅಪೇಕ್ಷಣೀಯ ಮತ್ತು ಅನಿವಾರ್ಯವಾಗಿರಬಹುದು. ಆದರೆ ಅವುಗಳು ಅವಾಸ್ತವಿಕ ಎನ್ನುವುದು ಸಹ ವ್ಯಾಪಕವಾಗಿ ಬಹುತೇಕರು ಒಪ್ಪುವ ಅಂಶವಾಗಿದೆ. ಹೀಗಾಗಿ, ಇಂದು ಆರ್ಥಿಕ ಅಭಿವೃದ್ಧಿಯೆಂದರೆ ಕೈಗಾರಿಕೀಕರಣ ಮತ್ತು ಜಾಗತಿಕ ಆರ್ಥಿಕ ವ್ಯವಸ್ಥೆಯ ಅಂಗವಾಗಿರುವುದು ಎಂದೆ ಅರ್ಥ. ಈ ವ್ಯವಸ್ಥೆಯೊಳಗೆ ಇತರರಿಗಿಂತ ಹೆಚ್ಚು ದಕ್ಷವಾಗಿ ವಸ್ತುಗಳನ್ನು ತಯಾರಿಸುವ, ಸೇವೆಗಳನ್ನು ಒದಗಿಸುವ ಸಾಮಥ್ರ್ಯಗಳು ನಮಗಿರಬೇಕು. ನಾರಾಯಣಮೂರ್ತಿಯವರು ಇದನ್ನೆ ಬಯಸುತ್ತಿರುವುದು.

ಹದಿನೆಂಟನೆಯ ಶತಮಾನದ ಪ್ರಾರಂಭದಲ್ಲಿ, ಭಾರತದ ಅರ್ಥವ್ಯವಸ್ಥೆಯು ಜಗತ್ತಿನ ಜಿ.ಡಿ.ಪಿ.ಯ ನಾಲ್ಕನೆಯ ಒಂದು ಭಾಗವಾಗಿತ್ತು. ಆದರೆ 1947ರ ಹೊತ್ತಿಗೆ ಭಾರತದ ಪಾಲು ಶೇ3ಕ್ಕೆ ಇಳಿದಿತ್ತು. ಇದು ವಸಾಹತುಶಾಹಿಯಿಂದ ಭಾರತಕ್ಕೆ ಆದ ನಷ್ಟವೆಂದು ಒಂದೆಡೆ ಅನ್ನಿಸಿದರೆ ಅದರಲ್ಲಿ ತಪ್ಪೇನಿಲ್ಲ.

ಹಿಂದುಳಿದಿರುವಿಕೆ ಮತ್ತು ಅಭಿವೃದ್ಧಿಗಳ ಈ ವ್ಯಾಖ್ಯೆಗಳನ್ನು ನಿರಾಕರಿಸುವವರು ಇಂದು ಅನುಷ್ಟಾನಗೊಳಿಸ ಬಹುದಾಗಿರುವ ಪರ್ಯಾಯ ಪರಿಕಲ್ಪನೆಗಳನ್ನು ಮುಂದಿಡಬೇಕಾಗುತ್ತದೆ.

ಎರಡನೆಯದಾಗಿ, ಆಧುನಿಕ ಆರ್ಥಿಕವ್ಯವಸ್ಥೆಯ ಮಾನದಂಡಗಳ ಸಂದರ್ಭದಲ್ಲಿ ಭಾರತವು ಹಿಂದುಳಿದಿದ್ದರೂ ಸಹ, ವಸಾಹತುಪೂರ್ವ ಕಾಲದಲ್ಲಿ ಭಾರತವು ಶ್ರೀಮಂತವಾಗಿರಲಿಲ್ಲವೆ ಎನ್ನುವ ಪ್ರಶ್ನೆಯು ನಮ್ಮ ಮನಸ್ಸಿನಲ್ಲಿ ಏಳುತ್ತದೆ. ಉದಾಹರಣೆಗೆ, ವಸಾಹತುಶಾಹಿ ವ್ಯವಸ್ಥೆಯು ಭಾರತದಲ್ಲಿ ನೆಲೆಯೂರುವ ಸಂದರ್ಭದಲ್ಲಿ, ಅಂದರೆ ಹದಿನೆಂಟನೆಯ ಶತಮಾನದ ಪ್ರಾರಂಭದಲ್ಲಿ, ಭಾರತದ ಅರ್ಥವ್ಯವಸ್ಥೆಯು ಜಗತ್ತಿನ ಜಿ.ಡಿ.ಪಿ.ಯ ನಾಲ್ಕನೆಯ ಒಂದು ಭಾಗವಾಗಿತ್ತು. ಆದರೆ 1947ರ ಹೊತ್ತಿಗೆ ಭಾರತದ ಪಾಲು ಶೇ3ಕ್ಕೆ ಇಳಿದಿತ್ತು. ಇದು ವಸಾಹತುಶಾಹಿಯಿಂದ ಭಾರತಕ್ಕೆ ಆದ ನಷ್ಟವೆಂದು ಒಂದೆಡೆ ಅನ್ನಿಸಿದರೆ ಅದರಲ್ಲಿ ತಪ್ಪೇನಿಲ್ಲ.

ಕೈಗಾರಿಕಾ ಕ್ರಾಂತಿಯು ನಡೆದಿದ್ದು ವಸಾಹತುಗಳ ಸ್ಥಾಪನೆಯಾಗುತ್ತಿದ್ದ ಸಂದರ್ಭದಲ್ಲಿಯೆ. ಹಲವಾರು ಆರ್ಥಿಕತೆಯ ಇತಿಹಾಸಕಾರರು ವಸಾಹತುಗಳಿಂದ ಕೈಗಾರಿಕಾ ಕ್ರಾಂತಿಗೆ ಆದ ಲಾಭಗಳ ಬಗ್ಗೆ ವಿಶದವಾಗಿ ಅಧ್ಯಯನ ಮಾಡಿದ್ದಾರೆ. ಪಶ್ಚಿಮ ಯೂರೋಪಿನ ದೇಶಗಳಿಗೆ ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ಬೇಕಾದ ಹೆಚ್ಚುವರಿ ಬಂಡವಾಳ, ಕಚ್ಚಾಪದಾರ್ಥಗಳು ಮತ್ತು ಸಿದ್ಧವಸ್ತುಗಳನ್ನು ಮಾರಲು ಬೇಕಾದ ಮಾರುಕಟ್ಟೆಗಳೆಲ್ಲವೂ ವಸಾಹತುಗಳಲ್ಲಿ ದೊರಕಿದವು ಎನ್ನುವುದನ್ನು ಈ ಇತಿಹಾಸಕಾರರು ತೋರಿಸುತ್ತಾರೆ. ಯೂರೋಪಿನಲ್ಲಿ ವೈಜ್ಞಾನಿಕ ಕ್ರಾಂತಿ ಮತ್ತು ತಾಂತ್ರಿಕ ಅನ್ವೇಷಣೆಗಳು ನಡೆದದ್ದು ನಿಜವಾದರೂ ಸಹ, ವಸಾಹತುಶಾಹಿಯಿಂದ ಪಶ್ಚಿಮ ಯೂರೋಪಿನ ದೇಶಗಳಿಗೆ ಅಪಾರವಾದ ಅನುಕೂಲವಾದದ್ದನ್ನು ಅಲ್ಲಗಳೆಯುವಂತಿಲ್ಲ.

ಈ ಆರ್ಥಿಕ ಚರಿತ್ರೆಗಳಲ್ಲಿ ಮತ್ತೊಂದು ಪ್ರಶ್ನೆಯನ್ನು ಸಹ ಎತ್ತಲಾಗುತ್ತಿದೆ. ಅದೇನೆಂದರೆ ವಸಾಹತುಶಾಹಿಯ ಇಂತಹ ಅನುಕೂಲಗಳಿಲ್ಲದೆ ಭಾರತದಂತಹ ದೇಶಗಳು ಇಂಗ್ಲೆಂಡ್, ಜರ್ಮನಿ ಮತ್ತು ಅಮೆರಿಕಾಗಳಂತೆ ಕೈಗಾರಿಕೀಕರಣವನ್ನು ಸಾಧಿಸಲು ಸಾಧ್ಯವೆ ಎನ್ನುವ ಪ್ರಶ್ನೆ. ಇಂದು ಕೂಡ ನಮ್ಮ ಕಾಲದ ಅತ್ಯಂತ ದೊಡ್ಡ ಅರ್ಥವ್ಯವಸ್ಥೆಗಳಲ್ಲಿ ಒಂದಾದ ಚೀನಾವು ಸಹ ಆಫ್ರಿಕಾ ಮತ್ತು ಏಷ್ಯಾದ ಹಲವೆಡೆಗಳಲ್ಲಿ ನವವಸಾಹತುಶಾಹಿ ತಂತ್ರಗಳನ್ನು ಹೂಡುತ್ತ ತನ್ನ ಕೈಗಾರಿಕೀಕರಣವನ್ನು ಸಾಧಿಸುತ್ತಿದೆ. ಇದಕ್ಕೆ ಉದಾಹರಣೆಯಾಗಿ ಆಫ್ರಿಕಾ, ಏಷ್ಯಾ ಮತ್ತು ಆಸ್ಟ್ರೇಲಿಯಾಗಳಲ್ಲಿನ ಗಣಿಗಳು ಮತ್ತಿತರ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಚೀನಾವು ಗಳಿಸಿರುವ ನಿಯಂತ್ರಣವನ್ನು ಹಾಗೂ ಇದೇ ದೇಶಗಳ ಮಾರುಕಟ್ಟೆಗಳ ಮೇಲೆ ಅದಕ್ಕಿರುವ ಹತೋಟಿಯನ್ನು ಗಮನಿಸಿ.

ಈ ಮೇಲೆ ವಾದದ ಅರ್ಥವಿಷ್ಟೆ. ನಾರಾಯಣಮೂರ್ತಿಯವರು ಗುರುತಿಸುತ್ತಿರುವ ಸಾಂಸ್ಕೃತಿಕ ಮೌಲ್ಯಗಳು ಎಷ್ಟೆ ಮುಖ್ಯವಾದರೂ ಸಹ, ವಸಾಹತುಶಾಹಿಯ ನೆರವಿಲ್ಲದೆ ಕೈಗಾರಿಕಾ ಕ್ರಾಂತಿ ಯಶಸ್ವಿಯಾಗುತ್ತಿತ್ತೆ ಎನ್ನುವ ಪ್ರಶ್ನೆಯಿದೆ. ಅಲ್ಲದೆ ಭಾರತವು 1750ರ ತನಕ ಜಗತ್ತಿನ ಅತ್ಯಂತ ಶ್ರೀಮಂತ ರಾಷ್ಟ್ರವಾಗಿತ್ತು ಎನ್ನುವ ವಾಸ್ತವವೂ ನಮ್ಮ ಮುಂದಿದೆ.   

ಈ ಅಂಶವು ನಮ್ಮನ್ನು ಈ ಚರ್ಚೆಯ ಮೂರನೆಯ ಆಯಾಮದತ್ತ ಕೊಂಡೊಯ್ಯುತ್ತದೆ. ನಾರಾಯಣಮೂರ್ತಿಯವರು ಗುರುತಿಸುತ್ತಿರುವ ಪ್ರಾಮಾಣಿಕತೆ, ಪ್ರತಿಭೆ-ಅರ್ಹತೆಗಳನ್ನು ಗುರುತಿಸುವ ಮತ್ತು ಪುರಸ್ಕರಿಸುವ ವ್ಯವಸ್ಥೆ, ದೇಶಪ್ರೇಮ, ಸ್ಪರ್ಧಾತ್ಮಕ ಮನೋಭಾವ ಮತ್ತು ಚುರುಕುತನಗಳು ನಮ್ಮ ದೇಶದಲ್ಲಿ ನೆಲೆಗೊಳ್ಳದಂತೆ ತಡೆಯುತ್ತಿರುವ ಸಾಂಸ್ಕೃತಿಕ ಅಡೆತಡೆಗಳು ಯಾವುವು?

ಯಶಸ್ಸನ್ನು ಕಾಣುತ್ತಿರುವ ಚೀನಾದ ನಾಗರಿಕತೆಯು ಸಹ ಭಾರತದಂತೆಯೆ ಒಳಮುಖಿಯಾಗಿಯೆ ಉಳಿದಿತ್ತು. ಅಂದು ಮತ್ತು ಇಂದು ಚೀನಾದ ನಾಗರಿಕತೆಯೆ ಶ್ರೇಷ್ಟವೆನ್ನುವ ವಾದವನ್ನು ಮಾಡುತ್ತಿದೆ ಮತ್ತು ಇತರರನ್ನು ಅನಾಗರಿಕರು ಎನ್ನುತ್ತಿದೆ.

ಭಾರತದ ಶ್ರಮಜೀವಿ ವರ್ಗವು ಆಧುನಿಕಪೂರ್ವ ಯುಗದಲ್ಲಿ ಸೋಮಾರಿಯಾಗಿತ್ತು ಎಂದು ಹೇಳಲು ಯಾವುದೆ ಆಧಾರಗಳು ದೊರಕುವುದಿಲ್ಲ. ಚೀನಾದಷ್ಟು ವೈಜ್ಞಾನಿಕ ಮತ್ತು ತಾಂತ್ರಿಕ ಅನ್ವೇಷಣೆಗಳು ಪ್ರಾಚೀನ ಹಾಗೂ ಮಧ್ಯಕಾಲೀನ ಭಾರತದಲ್ಲಿ ನಡೆಯದಿದ್ದರೂ, ಭಾರತದಲ್ಲಿ ಔದ್ಯಮಿಕತೆ ಮತ್ತು ತಾಂತ್ರಿಕತೆಗಳ ಅಲಭ್ಯತೆಯಾಗಲಿ, ಕೊರತೆಯಾಗಲಿ ಇರಲಿಲ್ಲ. ಬದಲಿಗೆ ಭಾರತದ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಿತ್ತು. ಭಾರತೀಯರು ಜಗತ್ತಿನ ಇತರ ಭಾಗಗಳ ಬಗ್ಗೆ ಕುತೂಹಲವನ್ನು ತೋರಿಸಲಿಲ್ಲ ಎನ್ನುವುದು ನಿಜವೆ. ಹಾಗಾಗಿ, ಇತರೆ ಸಂಸ್ಕೃತಿಗಳನ್ನು ಅಧ್ಯಯನ ಮಾಡುವ, ಪ್ರಪಂಚವನ್ನು ಅನ್ವೇಷಿಸುವ ಚಾಕಚಕ್ಯತೆಗಳನ್ನು ಪ್ರದರ್ಶಿಸಲಿಲ್ಲ. ಆದರೆ ಇಂದು ಯಶಸ್ಸನ್ನು ಕಾಣುತ್ತಿರುವ ಚೀನಾದ ನಾಗರಿಕತೆಯು ಸಹ ಭಾರತದಂತೆಯೆ ಒಳಮುಖಿಯಾಗಿಯೆ ಉಳಿದಿತ್ತು. ಅಂದು ಮತ್ತು ಇಂದು ಚೀನಾದ ನಾಗರಿಕತೆಯೆ ಶ್ರೇಷ್ಟವೆನ್ನುವ ವಾದವನ್ನು ಮಾಡುತ್ತಿದೆ ಮತ್ತು ಇತರರನ್ನು ಅನಾಗರಿಕರು ಎನ್ನುತ್ತಿದೆ.

ಭಾರತದ ಧರ್ಮಗಳೆಲ್ಲವು ಪಾರಮಾರ್ಥಿಕ ಸತ್ಯಗಳ ಬಗ್ಗೆ ಉತ್ಸುಕವಾಗಿದ್ದರೂ ಸಹ, ಇಲ್ಲಿನ ಬದುಕನ್ನು ನಿರ್ಲಕ್ಷಿಸುವಂತೆ ಮತ್ತು ಸಂಪತ್ತಿನ ಸೃಷ್ಟಿಯ ಬಗ್ಗೆ ನಿರಾಸಕ್ತರಾಗುವಂತೆ ತಮ್ಮ ಅನುಯಾಯಿಗಳನ್ನು ಪ್ರೇರೇಪಿಸಲಿಲ್ಲ. ಜೈನರು ಮತ್ತು ಬೌದ್ಧರೆಲ್ಲರೂ ವಣಿಕವರ್ಗಗಳ ಬೆಂಬಲವನ್ನು ಅಪಾರವಾಗಿ ಹೊಂದಿದ್ದರು. ವಣಿಕ ಮತ್ತು ಕುಶಲಕರ್ಮಿ ವರ್ಗಗಳು ಭಾರತದ ಇತಿಹಾಸದುದ್ದಕ್ಕೂ ಗಣನೀಯ ಯಶಸ್ಸನ್ನೆ ಕಂಡಿದ್ದವು.

ಜಾತಿವ್ಯವಸ್ಥೆಯಿಂದ ಅನ್ವೇಷಣೆ ಮತ್ತು ಜ್ಞಾನಪ್ರಸರಣಕ್ಕೆ ತೊಂದರೆಯಾಯಿತು ಎನ್ನುವ ವಾದವನ್ನು ಮಾಡಬಹುದು. ಇಲ್ಲಿ ಪ್ರತಿಯೊಂದು ಜಾತಿಯೂ ಸಹ ಒಂದು ವೃತ್ತಿಯ ಮೇಲೆ, ಅದರಲ್ಲಿಯೂ ಆ ವೃತ್ತಿಗೆ ಸಂಬಂಧಿಸಿದ ಜ್ಞಾನ-ತಾಂತ್ರಿಕತೆಗಳ ಮೇಲೆ, ನಿಯಂತ್ರಣ ಸಾಧಿಸಿತ್ತು ಎನ್ನುವ ಅಂಶವನ್ನು ನೆನಪಿಸಿಕೊಳ್ಳಬಹುದು. ಇದರಿಂದ ಹೊಸ ಅನ್ವೇಷಣೆಗಳನ್ನು ಮಾಡಲು ಅವಶ್ಯಕವಾದ ಮುಕ್ತತೆಯಿರಲಿಲ್ಲ ಎನ್ನುವುದರಲ್ಲಿ ಸ್ವಲ್ಪ ಸತ್ಯವಿದೆ.

ಆದರೆ ಈ ಯಾವ ಅಂಶಗಳು ಸಹ ಭಾರತದಲ್ಲಿ ಪ್ರಾಮಾಣಿಕತೆ, ಶ್ರಮಸಂಸ್ಕೃತಿ ಮತ್ತು ದೇಶದ ಪ್ರಗತಿಗೆ ಶ್ರಮಿಸುವ ಮನೋಭಾವಗಳನ್ನು ಹುಟ್ಟುಹಾಕುವುದನ್ನು ತಡೆಯಬೇಕಿರಲಿಲ್ಲ. ನಮ್ಮನ್ನು ಚಕಿತಗೊಳಿಸಬೇಕಿರುವ ಅಂಶವಿದು. ನಾರಾಯಣಮೂರ್ತಿಯವರು ಗುರುತಿಸಿರುವ ಮಿತಿಗಳು ನಮ್ಮ ದೇಶದಲ್ಲಿ ಇಂದು ಎದ್ದುಕಾಣುತ್ತವೆ. ಹಾಗಾಗಿ ಅವರೇನು ಮಿಥ್ಯೆಗಳನ್ನು ಹರಡುತ್ತಿಲ್ಲ. ಆದರೆ ಅವರು ಭಾರತದ ಮಿತಿಗಳನ್ನು ವಿವರಿಸಲು ಮುಂದಿಡುತ್ತಿರುವ ಸಾಂಸ್ಕೃತಿಕ ವಿಶ್ಲೇಷಣೆಯು ಐತಿಹಾಸಿಕ ನೆಲೆಯಲ್ಲಿ ನೋಡಿದಾಗ ನಮ್ಮ ಮನ ಮುಟ್ಟುವುದಿಲ್ಲ.

ಹಾಗಾದರೆ ನಾರಾಯಣಮೂರ್ತಿಯವರು ಪ್ರತಿಪಾದಿಸುತ್ತಿರುವ ಮೌಲ್ಯಗಳನ್ನು ಕಟ್ಟಿಕೊಳ್ಳುವುದು ಮತ್ತು ನಮ್ಮ ಸಮಾಜದಲ್ಲಿ ಜೀವಂತವಾಗಿರುವಂತೆ ನೋಡಿಕೊಳ್ಳುವುದು ಹೇಗೆ?

ಇತಿಹಾಸದ ವಿದ್ಯಾರ್ಥಿಯಾಗಿ ನನಗೆ ಅರಿವಾಗಿರುವ ಸತ್ಯವೊಂದು ಹೀಗಿದೆ. ನಮ್ಮ ಸಂಸ್ಕೃತಿ ಎಷ್ಟೆ ಶ್ರೇಷ್ಟವಾದುದು ಮತ್ತು ದೈವದತ್ತವಾದುದು ಎಂದು ನಾವು ನಂಬಿದರೂ, ಅದರ ಮೌಲ್ಯಗಳ ಉತ್ಕೃಷ್ಟತೆಯನ್ನು ಎಷ್ಟೆ ಕೊಂಡಾಡಬಹುದು. ಆದರೆ ಸಾರ್ವಕಾಲಿಕ ಸತ್ಯಗಳು ಮತ್ತು ಮೌಲ್ಯಗಳನ್ನು ಅನುಷ್ಟಾನಗೊಳಿಸುವ ಕೆಲಸವನ್ನು ಪ್ರತಿಯೊಂದು ತಲೆಮಾರು ಸಹ ಹೊಸದಾಗಿಯೆ ಮಾಡಬೇಕು. ನಮ್ಮ ಹಿರಿಯರನ್ನು ಅನುಸರಿಸುತ್ತ, ಅವರಿಂದ ಮೌಲ್ಯಗಳನ್ನು ಕಲಿಯುತ್ತೇವೆ ಎಂದಾಗಲೂ ಕೂಡ, ಅದು ಪ್ರತಿಬಾರಿಯೂ ಹೊಸ ಸವಾಲೆ. ಒಮ್ಮೆ ಸಾಧಿಸಿ, ಯಾವಾಗಲೂ ಸ್ವಾಭಾವಿಕವಾಗಿಯೆ ಉಳಿಯುವ ವಿದ್ಯಮಾನಗಳಲ್ಲ.

ಹಾಗಾಗಿ ನಾರಾಯಣಮೂರ್ತಿಯವರು ಗುರುತಿಸಿರುವ ಭಾರತೀಯರ ಮಿತಿಗಳು ವಾಸ್ತವದಲ್ಲಿ ಇವೆ ಎನ್ನುವುದಾದರೆ ನಾವು ಆತ್ಮವಂಚನೆ ಮಾಡಿಕೊಳ್ಳುವುದರಿಂದ ಬಚಾವಾಗುತ್ತೇವೆ. ನಿಜವಾಗಿಯೂ ಅಪ್ರಾಮಾಣಿಕರು, ಸೋಮಾರಿಗಳು ಮತ್ತು ದೇಶ-ಸಮಾಜಗಳ ಒಳಿತಿನ ಬಗ್ಗೆ ಹೆಚ್ಚಿನ ಕಳಕಳಿ ಉಳ್ಳವರಾಗಿದ್ದರೆ, ಅದನ್ನು ಗುರುತಿಸುವುದು ಮೊದಲ ಹೆಜ್ಜೆ. ನಂತರದಲಿ ಪ್ರಾಮಾಣಿಕರಾಗುವ, ಸಮಾಜಮುಖಿಗಳಾಗುವ ಕಡೆಗೆ ಕಾರ್ಯತತ್ಪರರಾಗಬಹುದು. ಆದರೆ ಇದು ಸತತವಾಗಿ ನಡೆಯುವ ಪ್ರಕ್ರಿಯೆ ಎನ್ನುವುದನ್ನು ಮರೆಯಬಾರದು. 

Leave a Reply

Your email address will not be published.