ಸುಧಾರಣೆಗೆ ಸರ್ಕಾರ ಮನಸ್ಸು ಮಾಡಬೇಕು

ಸರಕಾರ ಬಡ ರೋಗಿಗಳಿಗಾಗಿ ಎಲ್ಲಾ ರೀತಿಯಲ್ಲಿ ಟಾಪ್ ಕ್ಲಾಸ್ ಸರಕಾರಿ ಆಸ್ಪತ್ರೆಗಳನ್ನು ಸ್ಥಾಪಿಸಿ ಜನರ ಕಷ್ಟಗಳನ್ನು ನಿವಾರಿಸಲು ಮನಸ್ಸೇಕೆ ಮಾಡಬಾರದು?

ಇಂದು ವೈದ್ಯರು ಮತ್ತು ಇಡೀ ವೈದ್ಯಕೀಯ ಕ್ಷೇತ್ರ ಜನರ ಸೇವೆಗೆ ಹುಟ್ಟಿಕೊಂಡಿದೆಯೋ ಇಲ್ಲ ಅವರ ಸುಲಿಗೆಗೆ ಹುಟ್ಟಿಕೊಂಡಿದೆಯೋ ಎಂಬ ಪ್ರಶ್ನೆ ಉದ್ಭವಿಸಿದೆ. ಜನರ ಈ ಭಾವನೆಯಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಹೊರಗೆ ಹಾಕಲೇಬೇಕಾಗಿದೆ. ಇಲ್ಲವಾದರೆ ಇದೊಂದು ಆರೋಪವಾಗಿಯೇ ಮುಂದುವರಿಯಬಹುದು. ಆದುದರಿಂದ ದೇಶದ ಬುದ್ಧಿಜೀವಿಗಳು, ವೈದ್ಯಕೀಯ ಕ್ಷೇತ್ರದ ಅನುಬಂಧಗಳನ್ನು ವಿಧಿಸುವ ಅಧಿಕಾರಿಗಳು, ರಾಜಕಾರಣಿಗಳು, ಎಲ್ಲಕ್ಕಿಂತ ಹೆಚ್ಚಿನದಾಗಿ ನುರಿತ ಹಾಗೂ ಹೃದಯವಂತ ವೈದ್ಯರು ಕೂಡಿರುವ ಒಂದು ಸಂಸ್ಥೆಯನ್ನೋ, ಆಯೋಗವನ್ನೋ ಸ್ಥಾಪಿಸಿ ಅದರ ಮುಖಾಂತರ ಜನರ ಇಂದಿನ ಭಾವನೆ ಸರಿಯೋ ಅಥವಾ ತಪ್ಪೋ ಎಂಬುದಕ್ಕೆ ಸರಿಯಾದ ಉತ್ತರ ನೀಡಬೇಕಾಗಿದೆ. ಇದಲ್ಲದೆ ಇಲಾಖೆ ಕಠಿಣ ನಿರ್ಬಂಧಗಳನ್ನು ಹಾಕಿ ಅವುಗಳು ಪ್ರಾಮಾಣಿಕವಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕಾಗಿದೆ.

ಸರಕಾರಿ ಆಸ್ಪತ್ರೆಗಳಿಗೆ ಹೋಗಲು ಜನರು ಹೆದರುತ್ತಾರೆ ಯಾಕೆ? ಅಲ್ಲಿನವರೆಲ್ಲ ನರಭಕ್ಷರೇ? ಕಟುಕರೇ? ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ನಿಂದನೆಯಿಂದ ಹೊರಬರಲು ಶೀಘ್ರ ಕ್ರಮಕೈಗೊಳ್ಳಬೇಕಾಗಿದೆ. ಈ ವಿಚಾರವಾಗಿ ನೋಡಿದಾಗ ಅನೇಕ ಸಂಶಯಗಳು ಮೂಡುತ್ತವೆ. ಅನೇಕ ವೈದ್ಯರು ಆಸ್ಪತ್ರೆಯ ಕೆಲಸಗಳ ಕಡೆಗೆ ನಿರ್ಲಕ್ಷ್ಯ ಮಾಡಿ ವಿಸಿಟಿಂಗ್ ವೈದ್ಯರಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಯಾಕೆಂದರೆ ಅಲ್ಲಿ ಅವರಿಗೆ ಹೆಚ್ಚಿನ ಸಂಭಾವನೆ ಸಿಗುತ್ತದೆ. ಇತ್ತ ಸರಕಾರಿ ಆಸ್ಪತ್ರೆಯಿಂದ ಸಂಬಳವು ಜೇಬು ತುಂಬುತ್ತದೆ. ಸರಕಾರಿ ಆಸ್ಪತ್ರೆಗಳ ಅವ್ಯವಸ್ಥೆಗೆ ಇದು ಬಹುಮುಖ್ಯ ಕಾರಣ.

ಖಾಸಗಿ ಆಸ್ಪತ್ರೆಗಳಲ್ಲಿ ಎಲ್ಲವೂ ಸರಿಯಾಗಿಯೇ ಇದೆ ಎಂದು ಹೇಳಲಾಗದು. ಇತ್ತೀಚೆಗೆ ನಾ ಅರಿತ ಒಂದು ವಿಷಯ ಏನೆಂದರೆ ಒಬ್ಬ ರೋಗಿ ಒಂದು ದೊಡ್ಡ ಆಸ್ಪತ್ರೆಗೆ ಆಡ್ಮಿಟ್ ಆಗಿದ್ದಾನೆ. ಅವನ ಸ್ಥಿತಿ ಗಂಭೀರವಾಗಿದೆ. ಚಿಕಿತ್ಸೆ ನಡೆಯುತ್ತಿರುತ್ತದೆ.

ಎಲ್ಲಾ ಕಡೆ ಖಾಸಗಿ ಆಸ್ಪತ್ರೆಗಳು ದೊಡ್ಡ ಆಲದ ಮರದ ಎತ್ತರಕ್ಕೆ ಬೆಳೆದು ನಿಂತಿರುವಾಗ ಸರಕಾರಿ ಆಸ್ಪತ್ರೆಗಳು ಅದೇ ರೀತಿ ಯಾಕೆ ಬೆಳೆಯಬಾರದು? ಘನ ಸರಕಾರದವರು ಮನಸ್ಸು ಮಾಡಿದರೆ ಇದು ಸಾಧ್ಯವಿಲ್ಲವೇ? ಅದೇಕೆ ಸರಕಾರದವರು ಈ ರೀತಿ ಯೋಚಿಸುತ್ತಿಲ್ಲ? ಖಾಸಗಿ ಆಸ್ಪತ್ರೆಗಳಲ್ಲಿ ಎಲ್ಲವೂ ಸರಿಯಾಗಿಯೇ ಇದೆ ಎಂದು ಹೇಳಲಾಗದು. ಇತ್ತೀಚೆಗೆ ನಾ ಅರಿತ ಒಂದು ವಿಷಯ ಏನೆಂದರೆ ಒಬ್ಬ ರೋಗಿ ಒಂದು ದೊಡ್ಡ ಆಸ್ಪತ್ರೆಗೆ ಆಡ್ಮಿಟ್ ಆಗಿದ್ದಾನೆ. ಅವನ ಸ್ಥಿತಿ ಗಂಭೀರವಾಗಿದೆ. ಚಿಕಿತ್ಸೆ ನಡೆಯುತ್ತಿರುತ್ತದೆ. ಇದ್ದಕ್ಕಿದ್ದ ಹಾಗೆ ಯಾವುದೋ ಒಂದು ಹೈಟೆಕ್ ತಪಾಸಣೆ ಮಾಡಿಸಬೇಕಾಗುತ್ತದೆ. ಅಷ್ಟೊಂದು ದೊಡ್ಡ ಆಸ್ಪತ್ರೆ ಆದರೂ ಅಲ್ಲಿ ಆ ಅನುಕೂಲವೇ ಇಲ್ಲದಿರುವುದು ಆಶ್ಚರ್ಯ. ಆ ತಪಾಸಣೆಯನ್ನು 15 ಕಿ.ಮೀ. ದೂರದ ಖಾಸಗಿ ತಪಾಸಣಾ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಮಾಡಿಸಿಕೊಂಡು ಬನ್ನಿ ಎಂದು ಹೇಳಿದರು. ಆಗ ಆತನನ್ನು ಸ್ಟ್ರೆಚ್ಚರ್ ನಲ್ಲಿ ಕರೆದೊಯ್ದು ತಪಾಸಣೆ ಮಾಡಿಸಿಕೊಂಡು ಬಂದಾಯಿತು. ಇನ್ನೆರಡು ದಿನಗಳಲ್ಲಿ ಮತ್ತೊಂದು ಟೆಸ್ಟ್ ಗೆ ಬೇರೆ ಕಡೆ ಕಳಿಸಿ ಅದೂ ಮುಗಿಯಿತು. ಹೀಗೆ ಆ ಬಡ ರೋಗಿ ಎರಡು-ಮೂರು ಸಲ ಓಡಾಡಿ ಬರುವಷ್ಟರಲ್ಲಿ ಸುಸ್ತಾಗಿದ್ದ. ಇದೇಕೆ ಹೀಗೆ? ಅಷ್ಟು ದೊಡ್ಡ ಆಸ್ಪತ್ರೆಯಲ್ಲಿ ಆ ಸೌಲಭ್ಯಗಳು ಏಕಿಲ್ಲ? ಇದರ ಹಿನ್ನೆಲೆ ಉದ್ದೇಶ ಏನು?

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅನೇಕಾನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ರೂಪಿಸಿವೆ. ಆದರೆ, ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಅವುಗಳ ಫಲ ಜನರಿಗೆ ಸರಿಯಾಗಿ ತಲುಪುವಂತೆ ಮಾಡುವಲ್ಲಿ ಸೋತಿವೆ.

ಈ ಹಿನ್ನೆಲೆಯಲ್ಲಿ ಸರಕಾರ ಬಡ ರೋಗಿಗಳ ಕಷ್ಟ-ಸುಖಗಳನ್ನು ಮನಗಂಡು ಎಲ್ಲಾ ರೀತಿಯಲ್ಲಿ ಟಾಪ್ ಕ್ಲಾಸ್ ಸರಕಾರಿ ಆಸ್ಪತ್ರೆಗಳನ್ನು ಸ್ಥಾಪಿಸಿ ಜನರ ಕಷ್ಟಗಳನ್ನು ನಿವಾರಿಸಲು ಮನಸ್ಸೇಕೆ ಮಾಡಬಾರದು? ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಸರಿಯಾದ ವ್ಯವಸ್ಥೆ ಇಲ್ಲವೇ ಇಲ್ಲ ಎಂದು ನಾನು ಹೇಳುತ್ತಿಲ್ಲ. ಇತ್ತೀಚೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅನೇಕಾನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ರೂಪಿಸಿವೆ. ಆದರೆ, ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಅವುಗಳ ಫಲ ಜನರಿಗೆ ಸರಿಯಾಗಿ ತಲುಪುವಂತೆ ಮಾಡುವಲ್ಲಿ ಸೋತಿವೆ. ಇದಕ್ಕೆಲ್ಲಾ ಕಾರಣ ಲಂಚ, ಭ್ರಷ್ಟಾಚಾರ ಮುಂತಾದ ಕೆಟ್ಟ ಚಾಳಿಗಳು ತಲೆಎತ್ತಿ ನಿಂತಿರುವುದೇ ಆಗಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಸುಲಿಗೆಗೆ ಕಡಿವಾಣ ಹಾಕಲು ಸರಕಾರ ಎರಡು ವರ್ಷದ ಹಿಂದೆ ಮುಂದಾದಾಗ ಎಲ್ಲರೂ ಒಟ್ಟಾಗಿ ಹೋರಾಟ ಮಾಡಿ ಆ ಕಡಿವಾಣವನ್ನು ಕಿತ್ತುಹಾಕಿರುವ ಸಂಗತಿ ಜನರಿಗೆ ತಿಳಿದಿದೆ. ಇದು ದುರಾದೃಷ್ಟಕರ. ಈ ಹೋರಾಟಕ್ಕೆ ಸರಕಾರ ಅದೇಕೆ ತಲೆಬಾಗಿತು? ಸ್ವಲ್ಪ ಯೋಚಿಸಿ ನೋಡಿ. ಕೇಂದ್ರ ಸರಕಾರ ಬಡವರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ‘ಜನೌಷಧಿ’ ಕೇಂದ್ರಗಳನ್ನು ಪ್ರಾರಂಭಿಸಿದೆ. ಈ ಜನರಿಕ್ ಔಷಧಿಯ ಉಪಯೋಗ ಕಂಡು ಅಮೆ ರಿಕ ಹೊಟ್ಟೆ ಉರಿಸಿಕೊಂಡು ಭಾರತದ ಕಾಲನ್ನು ಕೆಳಕ್ಕೆ ಎಳೆಯಲು ಪ್ರಯತ್ನಿಸುತ್ತಿದೆ. ಇದಕ್ಕೆ ತಕ್ಕ ಉತ್ತರವನ್ನು ಭಾರತ ಬೇಗನೇ ಅಮೆರಿಕಕ್ಕೆ ಎಸೆಯಬೇಕೆಂಬುದು ನನ್ನ ಆಶಯ.

*ಲೇಖಕರು ಕೊಡಗಿನವರು, ಕೃಷಿ ವಿಶ್ವವಿದ್ಯಾಲದ ನಿವೃತ್ತ ಪ್ರಾಧ್ಯಾಪಕರು. ಬೆಂಗಳೂರಿನ ನಗೆಕೂಟ ಚಟುವಟಿಕೆಗಳಲ್ಲಿ ಸಕ್ರಿಯರು.

Leave a Reply

Your email address will not be published.