ಮುಖ್ಯಚರ್ಚೆಗೆ-ಪ್ರವೇಶ

ಸೋಂಕುರೋಗ ಪ್ರೇರೇಪಿಸಿದ ಆನ್‌ಲೈನ್ ಕ್ರಾಂತಿ ಶಾಶ್ವತವೇ..?

ನಮ್ಮ ದೈನಂದಿನ ಆಗುಹೋಗುಗಳ ಭರಾಟೆಯನ್ನು ಸಂಪೂರ್ಣವಾಗಿ ಕದಡಿ ವ್ಯಾವಹಾರಿಕ ಸಮಾಜದ ಮೂಲಸ್ತಂಭಗಳನ್ನೇ ಅಲುಗಾಡಿಸಿರುವ ಕೋವಿಡ್-19 ಸಾಂಕ್ರಾಮಿಕ ರೋಗ ಕಳೆದ ಮೂರು ತಿಂಗಳುಗಳಲ್ಲಿ ನಮ್ಮ ಸಂವಹನದ ಗುಣಲಕ್ಷಣಗಳನ್ನೇ ಬದಲಾಯಿಸಿದೆ. ಆತ್ಮೀಯವಾಗಿ ಕೈಕುಲುಕಿ, ಪ್ರೀತಿ ಹೆಚ್ಚಾದರೆ ತಬ್ಬಿಕೊಂಡು, ಶಾಲೆ ಕಾಲೇಜು ಕಛೇರಿ ಸಭೆ ಸಮಾರಂಭಗಳಲ್ಲಿ ನಮ್ಮ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವ ಮುಕ್ತ ಪರಿಸರದ ಬದಲಿಗೆ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಮೂಲಕವೇ ಆನ್‌ಲೈನ್ ಸಂವಹನ ಮಾಡುವ ಅನಿವಾರ್ಯತೆ ಎದುರಾಗಿದೆ. 

  • ಕೊರೊನಾ ಪ್ರೇರೇಪಿಸಿದ ಆನ್ಲೈನ್ ಸಂವಹನ ಕ್ರಾಂತಿ ಶಾಶ್ವತವೇ..? ಅಥವಾ ಕೊರೊನಾ ನಂತರ ಹಿಂದಿನ ಭರವಸೆಯ ಆಫ್ಲೈನ್ ವ್ಯವಹಾರ ಮರಳುವುದೇ..?
  • ಇಲ್ಲವೆ, ಕೊರೊನಾ ನಂತರದ ಯುಗದಲ್ಲಿ ಆನ್ಲೈನ್ ಅಂಶ ಹೆಚ್ಚಾಗಿ ಅತ್ಯಗತ್ಯ ಸಂದರ್ಭಗಳಲ್ಲಿ ಮಾತ್ರ ನಾವು ಶಾಲೆ, ಕಾಲೇಜು, ಕಛೇರಿ, ಸಭೆ, ಸಮಾರಂಭಗಳಲ್ಲಿ ಪರಸ್ಪರ ಸೇರಿ ಮುಖತಃ ವ್ಯವಹರಿಸುವ ಸನ್ನಿವೇಶ ಒದಗಿ ಬರಲಿದೆಯೇ..?

ಮುಂದಿನ ತಿಂಗಳುಗಳಲ್ಲಿ ನಮ್ಮಯ ಶಿಕ್ಷಣ, ವ್ಯವಹಾರ, ಸಾಂಸ್ಕೃತಿಕ ಪರಿಸರ ಹಾಗೂ ಕೌಟುಂಬಿಕ ಸಂಬಂಧಗಳನ್ನು ವ್ಯಾಖ್ಯಾನಿಸುವ ಈ ಪ್ರಶ್ನೆಗಳಿಗೆ ಅತ್ಯಗತ್ಯ ಹಾಗೂ ಅನಿವಾರ್ಯ ಉತ್ತರಗಳನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮುಂದಿನ ಪುಟಗಳಲ್ಲಿ ಮಾಡಲಾಗಿದೆ.

Leave a Reply

Your email address will not be published.