ಹಣವಿದೆ, ಅರಣ್ಯ ಬೆಳೆಸುವವರಿಲ್ಲ!

ರಾಜ್ಯದಲ್ಲಿ ಪಶ್ಚಿಮ ಘಟ್ಟದ ಮಾದರಿಯನ್ನು ಹೊಂದಿರುವ, 35000 ಹೆಕ್ಟೇರ್ ಪ್ರದೇಶದಲ್ಲಿ ಹಬ್ಬಿರುವಕೊಂಡಿರುವ ನೈಸರ್ಗಿಕ ರಮಣೀಯ ತಾಣವೆ ಸಂಡೂರು. ಉತ್ಕöÈಷ್ಟವಾದ ಕಬ್ಬಿಣದ ಅದಿರನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವುದೇ ಈ ಅರಣ್ಯಕ್ಕೆ ಕಂಟಕವಾಗಿ ಪರಿಣಮಿಸಿದೆ.

ಅಧಿಕಾರಿಗಳ ನಿರ್ಲಕ್ಷ್ಯತನ, ರಾಜಕಾರಣಿಗಳ ಹಸ್ತಕ್ಷೇಪದಿಂದ ಸಂಡೂರಿನ ಬೆಟ್ಟಗಳಲ್ಲಿ ಅವ್ಯಾಹತ ಅಕ್ರಮ ಗಣಿಗಾರಿಕೆ ನಡೆದು ಲಕ್ಷಾಂತರ ಮರಗಳು, ವನ್ಯಜೀವಿಗಳು ಅಕ್ರಮ ಗಣಿಗಾರಿಕೆಗೆ ಬಲಿಯಾಗುವುದರ ಜೊತೆಗೆ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ಹಣ ನಷ್ಟವಾಗಿರುವುದು ಒಂದೆಡೆಯಾದರೆ ಪರಿಸರದ ಮೇಲಾಗಿರುವ ನಷ್ಟವನ್ನು ಅಂದಾಜಿಸಲು ಅಸಾಧ್ಯ.

ಘನ ಸುಪ್ರೀಂಕೋರ್ಟಿನ ಹಸಿರು ಪೀಠದಿಂದ ಕಠಿಣ ಕಾನೂನು ಕ್ರಮಗಳ ಮೂಲಕ ಸಂಡೂರು ಭಾಗದಲ್ಲಿ ಗುಡ್ಡಗಳಲ್ಲಿ ಹಸಿರು ವಾತಾವರಣದ ಸೊಬಗು ಪುನಶ್ಚೇತನ ಪಡೆಯುತ್ತಿದೆ. ಕರ್ನಾಟಕವು ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ನಡೆಸುತ್ತಿರುವ ಗಣಿ ಗುತ್ತಿಗೆದಾರರಿಂದ ಪರ್ಯಾಯ ಅರಣ್ಯ ಬೆಳೆಸುವುದಕ್ಕಾಗಿಯೇ ಛಿomಠಿeಟಿsಚಿಣoಡಿಥಿ ಚಿಜಿಜಿoಡಿesಣಚಿಣioಟಿ ಚಿಛಿಣ ಅಡಿಯಲ್ಲಿ ಜನೆವರಿ 2019ರವರೆಗೆ ರೂ.54000 ಕೋಟಿ ಹಣ ಅಂಒP ಖಾತೆಯಲ್ಲಿ ಕೊಳೆಯುತ್ತಿದೆ. ಸಾವಿರಾರು ಕೋಟಿ ರೂಪಾಯಿ ಹಣವನ್ನು ಸದ್ಬಳಕೆ ಮಾಡಿಕೊಂಡು ದೇಶದಲ್ಲಿನ ಅರಣ್ಯವನ್ನು ಬೆಳೆಸಬೇಕಿತ್ತು. ಪರಿಸರದ ಮೇಲೆ ಅಧಿಕಾರಿಗಳಿಗಿರುವ ನಿರ್ಲಕ್ಷ÷್ಯತನ, ಮಂತ್ರಿಗಳ ಬೇಜವಾಬ್ದಾರಿತನದಿಂದ ಪರ್ಯಾಯ ಅರಣ್ಯ ಬೆಳೆಸುವುದಕ್ಕಾಗಿಯೇ ಮೀಸಲಿಟ್ಟ ಈ ಮೊತ್ತ ವ್ಯರ್ಥವಾಗುತ್ತಿದೆ.

ಅರಣ್ಯ ಅಭಿವೃದ್ಧಿಯಲ್ಲಿನ ನಿರಾಸಕ್ತಿ ಕೇವಲ ದೇಶದ ಮಟ್ಟದಲ್ಲಿನ ಅಧಿಕಾರಸ್ಥರಲ್ಲಿ ಮಾತ್ರವಲ್ಲ, ಕರ್ನಾಟಕಕ್ಕೂ ಇದು ಹಬ್ಬಿದೆ. ಘನ ಸುಪ್ರೀಂ ಕೋರ್ಟ್ ಅಕ್ರಮ ಗಣಿಗಾರಿಕೆಗೆ ಅಂಕುಶ ಹಾಕಿದ ನಂತರ ಅಕ್ರಮ ಗಣಿಗಾರಿಕೆ ಹೊಡೆತಕ್ಕೆ ಸಿಲುಕಿದ ಈ ಭಾಗದ ಅರಣ್ಯವನ್ನು ಪುನಶ್ಚೇತನಗೊಳಿಸುವುದಕ್ಕಾಗಿಯೇ ವಿಶೇಷ ಜಾರಿ ವಾಹನ (SPV) ಪ್ರತ್ಯೇಕವಾದ ನಿಧಿಯನ್ನು ಸ್ಥಾಪಿಸಿ ಅರಣ್ಯ ಪುನಶ್ಚೇತನ ಮಾಡಲೆಂದೇ ಪ್ರತ್ಯೇಕವಾಗಿ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ (KMERC) ಸ್ಥಾಪಿಸಿ ಈ ನಿಗಮದ ಮೂಲಕ ಗಣಿ ಅದಿರು ಮಾರಾಟದ ಶೇಕಡ 10ರಷ್ಟು ಹಣವನ್ನು ಅರಣ್ಯ, ವನ್ಯಜೀವಿಗಳ ಸಂರಕ್ಷಣೆ, ಸಸ್ಯಕ್ಷೇತ್ರಗಳ ನಿರ್ಮಾಣ ಸೇರಿದಂತೆ ಗಣಿಬಾಧಿತ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಆರ್ಥಿಕ ಯೋಜನೆಯನ್ನು ರೂಪಿಸಿತು. ಈ ಯೋಜನೆಯಡಿ ರಾಜ್ಯದಲ್ಲಿ ಕಬ್ಬಿಣದ ಅದಿರು ಮಾರಾಟ ಒಂದರಿಂದಲೆ 2011 ರಿಂದ ಇಲ್ಲಿಯವರೆಗೆ ರೂ.14000 ಕೋಟಿ ಹಣ SPV ನಿಧಿಯಲ್ಲಿ ಸಂಗ್ರಹವಾಗಿದೆ ಈ ನಿಧಿಯನ್ನು ಬಳಸಿಕೊಳ್ಳದೆ ಇದ್ದುದರಿಂದ ಈ ಮೊತ್ತಕ್ಕೆ ಬಡ್ಡಿಯೇ ರೂ.4000 ಕೋಟಿ ದಾಟಿದೆ.

ಇದರಿಂದ ಸ್ಪಷ್ಟವಾಗಿ ಕಾಣುವುದೇನೆಂದರೆ ಅರಣ್ಯ ಪರಿಸರವನ್ನು ಅಭಿವೃದ್ಧಿ ಮಾಡಲು ಸಂಪನ್ಮೂಲದ ಕೊರತೆ ಕಾಣುತ್ತಿಲ್ಲ. ಈ ಅನುದಾನ ಬಳಸಿಕೊಂಡು ದೇಶ/ ರಾಜ್ಯದ ಅರಣ್ಯವನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಪುನಶ್ಚೇತನಗೊಳಿಸಬೇಕಿತ್ತು. ದಿನಕಳೆದಂತೆ ರಾಜ್ಯ/ದೇಶದಲ್ಲಿನ ಅರಣ್ಯ ಪ್ರದೇಶ ಕಡಿಮೆಯಾಗಿ ಪರಿಸರ ಮಾಲಿನ್ಯ ಉಂಟಾಗುತ್ತಿದ್ದು, ವನಮಹೋತ್ಸವ, ಗಿಡನೆಡುವ ಕಾರ್ಯಕ್ರಮಗಳು ಕೇವಲ ಪ್ರಚಾರ ಮಟ್ಟಕ್ಕೆ ಸೀಮಿತವಾಗದೆ ಸಾವಿರಾರು ಕೋಟಿ ಸಂಪನ್ಮೂಲವನ್ನು ಬಳಸಿಕೊಂಡು ಅರಣ್ಯವನ್ನು ಅಭಿವೃದ್ಧಿ ಪಡಿಸುವಲ್ಲಿ ಸಂಬಂಧಿಸಿದ ಇಲಾಖೆಗಳು/ಮಂತ್ರಿಗಳು ಸಜ್ಜಾಗುವುದರ ಜೊತೆಗೆ ಅಭಿವೃದ್ಧಿ ಹೆಸರಿನಲ್ಲಿ ಅರಣ್ಯವನ್ನು ಬೇಕಾಬಿಟ್ಟಿ ಬಳಕೆಗೆ ಕಡಿವಾಣ ಹಾಕಬೇಕು. ಹಾಗಾದಾಗ ಮಾತ್ರ ಕಲುಷಿತವಾಗಿರುವ ಪರಿಸರವನ್ನು ಪುನರ್ನಿರ್ಮಾಣ ಮಾಡಲು ಸಾಧ್ಯ.

 

 

Leave a Reply

Your email address will not be published.