ಹೊಸಪುಸ್ತಕ

ಬಹುಜನ ಭಾರತ

ಡಾ.ವ್ಹಿ.ಮುನಿವೆಂಕಟಪ್ಪ

ಪುಟ: 119, ಬೆಲೆ: ರೂ.110

ಪ್ರಥಮ ಮುದ್ರಣ: 2019

ವಿದ್ಯಾವಿಶಾರದ ಪ್ರಕಾಶನ, ಗದಗ

ಇದು ವೈಚಾರಿಕ ಚಿಂತನೆಯ ಸಂಶೋಧನಾತ್ಮಕ ಬರಹಗಳ ಸಂಕಲನ. ಬುದ್ಧ, ಬಸವ, ಅಂಬೇಡ್ಕರ್, ಬಹುಜನ ಸಮಾಜ, ದಲಿತ ಚಳವಳಿ ಸಾಹಿತ್ಯ ಚಿಂತನೆಯ ವಸ್ತುಸ್ಥಿತಿಗಳ ಬಗ್ಗೆ ಇಲ್ಲಿ ವಿವರಿಸಿದ್ದಾರೆ. ಇಪ್ಪತ್ತೊಂದು ಲೇಖನಗಳಿರುವ ಈ ಕೃತಿ, ಇಲ್ಲಿನ ನಿಷ್ಟುರ ಚಿಂತನೆಗಳಿಗೆ, ಲೇಖಕರ ತೀಕ್ಷ್ಣ ಮಾತುಗಳಿಗಾಗಿ ಮುಖ್ಯವೆನಿಸುತ್ತದೆ. ದಸಂಸ ವಿಚಾರದಲ್ಲಿ ದೇವನೂರ ಮಹಾದೇವ ಹಾಗೂ ಸಿದ್ಧಲಿಂಗಯ್ಯ ಅವರನ್ನು ಇನ್ನೊಂದು ಆಯಾಮದಲ್ಲಿ ಓದುಗರ ಮುಂದಿಟ್ಟಿದ್ದಾರೆ.


ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕನ್ನಡ ಲೇಖಕರು

ಟಿ.ಪಿ. ಅಶೋಕ

ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಪುಟ: 112, ಬೆಲೆ: ರೂ.100

ಪ್ರಥಮ ಮುದ್ರಣ: 2020

ಇದು ನವಕರ್ನಾಟಕ ಪ್ರಕಾಶನದ ಸಾಹಿತ್ಯ ಸಂಪದ ಸರಣಿಯ 61ನೇ ಪುಸ್ತಕ. ಟಿ.ಪಿ.ಅಶೋಕ ಅವರ ಸಾಹಿತ್ಯ ಸೇವೆ ಕುರಿತಂತೆ ಇಲ್ಲಿ ಚರ್ಚಿಸಲಾಗಿದೆ. ಕನ್ನಡ ಸಾಹಿತ್ಯ ವಿಮರ್ಶಾ ಕ್ಷೇತ್ರದಲ್ಲಿ ಟಿ.ಪಿ.ಅಶೋಕ ಅವರ ವಿಮರ್ಶೆಗಳು ಮುಖ್ಯವಾಗುವ ಕಾರಣಗಳ ಬಗ್ಗೆ, ಅವರ ವಿಮರ್ಶೆಯಲ್ಲಿನ ಕೊರತೆಗಳ ಕುರಿತು ಪ್ರತ್ಯೇಕ ನೆಲೆಗಳಲ್ಲಿ ಇಲ್ಲಿನ ಲೇಖಕ ವಿಶ್ಲೇಷಿಸಿದ್ದಾರೆ. ಟಿ.ಪಿ.ಅಶೋಕರ ಸಾಹಿತ್ಯ ಕೊಡುಗೆ ಕುರಿತು ಸಂಕ್ಷಿಪ್ತ ಪರಿಚಯ ಒದಗಿಸುವ ಕೃತಿಯಿದು.

 

ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕನ್ನಡ ಲೇಖಕರು

ಸಿ.ಎನ್.ರಾಮಚಂದ್ರನ್

ಡಾ.ಸಿ.ನಾಗಣ್ಣ

ಪುಟ: 128, ಬೆಲೆ: ರೂ.100

ಪ್ರಥಮ ಮುದ್ರಣ: 2020

ಇದು ನವಕರ್ನಾಟಕ ಪ್ರಕಾಶನದ ಸಾಹಿತ್ಯ ಸಂಪದ ಸರಣಿಯ 57ನೇ ಪುಸ್ತಕ. ಹಿರಿಯ ಸಾಹಿತಿ ಸಿ.ಎನ್.ರಾಮಚಂದ್ರನ್ ಅವರ ಬರಹ, ಅನುವಾದ, ಅಧ್ಯಯನಗಳ ಕುರಿತು ಪರಿಚಯ ಒದಗಿಸುವ ಕೃತಿಯಿದು. ಸಿಎನ್‌ಆರ್ ಅವರ ತೌಲನಿಕ ಅಧ್ಯಯನಗಳು, ಪಾಶ್ಚಾತ್ಯ ಸಾಹಿತ್ಯದ ಜೊತೆಗೆ ನಮ್ಮ ಸಾಹಿತ್ಯದ ವಿವಿಧ ಆಯಾಮಗಳು, ಅಲ್ಲದೆ ವಿದೇಶಿ ನೆಲದಲ್ಲಿನ ಅಧ್ಯಯನಗಳ ಹಿನ್ನೆಲೆಯಲ್ಲಿ ಭಾಷಿಕ ಪ್ರಭುತ್ವಕ್ಕೆ ದೊರೆತ ಪರಿಷ್ಕಾರಕ ಶಕ್ತಿ ಸಾಮರ್ಥ್ಯವನ್ನು ಅವರು ಮುಂದಿಡುವ ಬಗ್ಗೆಯೂ ಈ ಕೃತಿ ವಿಶ್ಲೇಷಿಸುತ್ತದೆ.

ಮೇಲಿನ ಎರಡು ಕೃತಿಗಳ ಸಂಪಾದಕರು: ಡಾ.ಪ್ರಧಾನ್ ಗುರುದತ್ತ

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್


ಬೆಂಗಳೂರು ಅಂದ್ರೆ ಸುಮ್ನೇ ಅಲ್ಲ!

(ಬೆಂಗಳೂರಿಗೊಂದು ಕನ್ನಡಿ)

ಡಾ.ಟಿ.ಗೋವಿಂದರಾಜು

ಪುಟ: 222, ಬೆಲೆ: ರೂ.230

ಪ್ರಥಮ ಮುದ್ರಣ: 2019

ಐಬಿಎಚ್ ಪ್ರಕಾಶನ

#18/1, 1ನೇ ಮಹಡಿ, 2ನೇ ಮುಖ್ಯರಸ್ತೆ,

ಎನ್.ಆರ್.ಕಾಲೋನಿ, ಬೆಂಗಳೂರು-560019


1962 ಭಾರತ ಮತ್ತು ಚೈನಾ ನಡುವಿನ ಯುದ್ಧದ ಸುತ್ತ

ಯುದ್ಧ ಕಾಂಡ

ಯಡೂರು ಮಹಾಬಲ

ಪುಟ:274, ಬೆಲೆ: ರೂ.300

ಪ್ರಥಮ ಮುದ್ರಣ: 2019

ಕನ್ನಡದಲ್ಲಿ ಯುದ್ಧ ಸಾಹಿತ್ಯ ವಿರಳ ಎನಿಸುವ ಹೊತ್ತಿನಲ್ಲಿಯೇ ಈ ಕೃತಿ ಹೊರಬಂದಿದೆ. 1962ರ ಭಾರತ-ಚೈನಾ ಗಡಿ ವಿವಾದದ ಕುರಿತು ಹಲವು ಮಹತ್ವಪೂರ್ಣ ಮಾಹಿತಿಗಳನ್ನು ಲೇಖಕರು ಕಲೆ ಹಾಕಿದ್ದಾರೆ. ಅಲ್ಲದೆ ಯುದ್ಧ ಮತ್ತು ರಾಜಕೀಯ ಎಂಬುದು ಹೇಗೆ ಪರಸ್ಪರ ಪ್ರಭಾವಿಸುತ್ತವೆ ಎಂಬುದು ಕೂಡ ಇಲ್ಲಿನ ಅಂಶಗಳಿಂದ ತಿಳಿಯಬಹುದು. ಕಳಪೆ ನಾಯಕತ್ವ, ರಾಜಕೀಯ ಪ್ರೇರಿತವಾಗಿ ಹುದ್ದೆಗೇರುವ ಮುಖ್ಯಸ್ಥರು ಯುದ್ಧ ಸಂದರ್ಭದಲ್ಲಿ ವಹಿಸುವ ಪಾತ್ರ ಇಡೀ ಯುದ್ಧವನ್ನು, ಸೈನ್ಯವನ್ನು ಪರಿಣಮಿಸುವ ಬಗೆ… ಹೀಗೆ ಎಲ್ಲ ವಿಚಾರಗಳನ್ನು ಕುತೂಹಲಕಾರಿಯಾಗಿ ಈ ಕೃತಿ ತೆರೆದಿಡುತ್ತ ಸಾಗುತ್ತದೆ.


1962ರ ಯುದ್ಧದ ಹಿಂದಿನ ಬೆಳವಣಿಗೆಗಳು

ಯುದ್ಧ ಪೂರ್ವ ಕಾಂಡ

ಯಡೂರು ಮಹಾಬಲ

ಪುಟ: 640, ಬೆಲೆ: ರೂ.400

ಪ್ರಥಮ ಮುದ್ರಣ: 2019

ಈ ಕೃತಿ ಭಾರತ-ಚೈನಾ ನಡುವಿನ 1962ರ ಯುದ್ಧದ ಹಿಂದಿನ ಬೆಳವಣಿಗೆಗಳ ಕುರಿತು ಹಲವಾರು ಮಾಹಿತಿಗಳನ್ನು ಒದಗಿಸುತ್ತದೆ. ಭಾರತ ಚೀನಾ ಯುದ್ಧದ ಕುರಿತ ಓದಿಗೆ ಹಿನ್ನೆಲೆಯಾಗಿ ಇಲ್ಲಿನ ಮಾಹಿತಿಗಳು ಕಾಣಿಸುತ್ತವೆ. ಯುದ್ಧ ಸಂದರ್ಭದಲ್ಲಿ ಎರಡೂ ದೇಶಗಳಲ್ಲಿ ನಡೆಯುತ್ತಿದ್ದ ರಾಜಕೀಯ ಬೆಳವಣಿಗೆಗಳು ಹಾಗೂ ಯುದ್ಧದ ಕುರಿತ ಭಾರತೀಯ ಮನಸ್ಥಿತಿ ಇವೆಲ್ಲವನ್ನೂ ಇಟ್ಟುಕೊಂಡು ಈ ಕೃತಿ ಇತಿಹಾಸವನ್ನು ತೆರೆದಿಡುತ್ತಾ ಹೋಗುತ್ತದೆ.

 

ಮೇಲಿನ ಎರಡು ಕೃತಿಗಳ ಪ್ರಕಾಶಕರು

ಚಿಂತನ ಚಿಲುಮೆ ಪ್ರಕಾಶನ ಬೆಂಗಳೂರು


ದಲಿತರ ದೇವಸ್ಥಾನ ಪ್ರವೇಶದ ಸಾವಿರ ವರ್ಷ:

ದಲಿತರು ಮರೆತ ರಾಮಾನುಜ

ಎನ್.ಕೆ.ಮೋಹನ್‌ರಾಂ

ಪುಟ: 128, ಬೆಲೆ: ರೂ.120

ಪ್ರಥಮ ಮುದ್ರಣ: 2020

ಶಶಿಭ ಪ್ರಕಾಶನ, ನಂ.2, 6ನೇ ಅಡ್ಡರಸ್ತೆ,

ಮಲ್ಲೇಶ್ವರಂ, ಬೆಂಗಳೂರು 560003

ಈ ಕೃತಿಯು ರಾಮಾನುಜಾಚಾರ್ಯರ ವ್ಯಕ್ತಿತ್ವ, ಸಾಮಾಜಿಕ ನೆಲೆಯನ್ನು ಭಿನ್ನ ನೆಲೆಯಲ್ಲಿ ಚಿತ್ರಿಸುತ್ತದೆ. ರಾಮಾನುಜ ಅತಿ ದೊಡ್ಡ ಜಾತ್ಯತೀತ, ಸಾಮಾಜಿಕ ಕ್ರಾಂತಿಕಾರಿ ಎಂಬುದನ್ನು ಸಾಬೀತುಪಡಿಸುವಂತೆ ಇಲ್ಲಿನ ಬರಹಗಳು ಒಂದಕ್ಕೊಂದು ಪೂರಕವಾಗಿ ನಿಲ್ಲುತ್ತವೆ. ದಲಿತರಿಗೆ ದೇವಸ್ಥಾನ ಪ್ರವೇಶಕ್ಕೆ ಮೊದಲು ಅವಕಾಶ ನೀಡಿದ್ದು ರಾಮಾನುಜ ಎಂದು ಅಭಿಪ್ರಾಯಿಸುವ ಈ ಕೃತಿ ಜಾತಿ ವ್ಯವಸ್ಥೆ ಕುರಿತು ರಾಮಾನುಜಾಚಾರ್ಯ ಹಾಗೂ ಅಂದಿನ ಸಂದರ್ಭಗಳನ್ನೂ ಓದುಗರ ಮುಂದಿಡುವ ಪ್ರಯತ್ನ ಮಾಡುತ್ತದೆ.


ನವಿಲುಗರಿಯ ತೊಟ್ಟಿಲು

ಕಥಾ ಸಂಕಲನ

ಮೆಹಬೂಬ ಅಲಿ ಕೆ.ಎಂ.

ಪುಟ: 68, ಬೆಲೆ: ರೂ.80

ಪ್ರಥಮ ಮುದ್ರಣ: 2019

ಈ ಸಂಕಲನ 21 ಕಥೆಗಳನ್ನು ಒಳಗೊಂಡಿದೆ. ಬಹುತೇಕ ಇಲ್ಲಿನ ಕಥೆಗಳು ಪ್ರೀತಿ ಪ್ರೇಮದ ಬಗ್ಗೆಯೇ ಇವೆ. ಲೇಖಕರು ಮೊದಲ ಮಾತಿನಲ್ಲಿ ಹೇಳಿದಂತೆಯೇ ಪ್ರೇಮ ತನ್ನ ಹಸಿವು ಎಂಬಂತೆ ಇಲ್ಲಿನ ಕಥೆಗಳು ಮೂಡಿವೆ. ಉತ್ಕಟ ಪ್ರೇಮದ ಭಿನ್ನ ಆಯಾಮಗಳನ್ನು ಕಥೆಗಾರ ತನ್ನದೇ ಶೈಲಿಯಲ್ಲಿ ಚಿತ್ರಿಸಿದ್ದಾನೆ. ಇಲ್ಲಿ ಕೆಲವೊಂದು ಕಥೆಗಳು ಒಂದು ಪುಟದಷ್ಟು ಸಣ್ಣದಾದರೂ ಅವುಗಳಲ್ಲಿ ಒಂದು ಝಲಕ್ ಛಕ್ಕನೆ ಓದುಗನನ್ನು ಸೆಳೆದುಬಿಡುತ್ತದೆ.

 


ಕೂರಿಗಿ ತಾಳು

ಕವನ ಸಂಕಲನ

ಡಿ.ರಾಮಣ್ಣ ಅಲ್ರ‍್ಸಿಕೇರಿ

ಪುಟ:74, ಬೆಲೆ: ರೂ.100

ಪ್ರಥಮ ಮುದ್ರಣ: 2019

ಈ ಕವನ ಸಂಕಲನ ಕವಿಯ ನಿತ್ಯ ಬದುಕಿನ ಅನುಭವಗಳ ಜೊತೆಜೊತೆಗೆ ಸಮಾಜದ ಅವ್ಯವಸ್ಥೆಯನ್ನೂ ಚಿತ್ರಿಸುವ ಕವಿತೆಗಳನ್ನು ಒಳಗೊಂಡಿದೆ. ಪ್ರಕೃತಿಯ ಜೊತೆಗಿನ ನಂಟು, ಕವಿಯ ಆಶಾವಾದದ ಹಿನ್ನೆಲೆಗೆ ವಸ್ತುವಾಗಿ ಕಾಣಿಸುತ್ತದೆ. ಒಂದು ಬಗೆಯ ಉತ್ಸಾಹ ಕೆಲವು ಕವಿತೆಗಳಲ್ಲಿದ್ದರೆ ಇನ್ನು ಕೆಲವೆಡೆ, ಮರುಕ, ನಿರಾಶೆಯೂ ಕಾಣಬಹುದು. ಬದುಕಿನ ಏರಿಳಿತಗಳು ಭಾವದ ರೂಪದಲ್ಲಿ ಹೊಮ್ಮಿ ಕವಿತೆಗಳಾಗಿವೆ. ಪ್ರವಾಹದಿಂದ ದುರಂತ ಅನುಭವಿಸಿದವರು, ಅಗಲಿದ ಶಿಷ್ಯನ ಕುರಿತು, ಹೆತ್ತವರ ಬಗ್ಗೆ, ಹೀಗೆ ಹಲವು ಬಾವಗಳ ಕವಿತೆಗಳು ಇಲ್ಲಿವೆ.

 

ಮೇಲಿನ ಎರಡು ಕೃತಿಗಳ ಪ್ರಕಾಶಕರು

ನಿರಂತರ ಪ್ರಕಾಶನ, ಎಮ್.ಆರ್.ಅತ್ತಾರ ಬಿಲ್ಡಿಂಗ್,

ಅಮರೇಶ್ವರ 5ನೇ ಕ್ರಾಸ್, ಗದಗ. 582103

ಈ ಕೃತಿಯು ಬೆಂಗಳೂರು ನಗರದ ಕುರಿತಂತೆ ಹಲವಾರು ಕುತೂಹಲಕಾರಿ ಸಂಗತಿಗಳನ್ನು ತೆರೆದಿಡುತ್ತದೆ. ಬೆಂಗಳೂರಿನ ಇತಿಹಾಸದಿಂದ ತೊಡಗಿ ಇಡೀ ನಗರ ಬೆಳೆದು ಬಂದು ಪ್ರಸ್ತುತ ನಿಂತಿರುವ ಬಗೆಯನ್ನು ಲೇಖಕರು ಇಲ್ಲಿ ಸಮಗ್ರವಾಗಿ ಚಿತ್ರಿಸಿದ್ದಾರೆ. ಹಳೆಯ ಹಲವು ಚಿತ್ರಗಳೂ ಇಲ್ಲಿ ಇತಿಹಾಸ ಹೇಳುತ್ತವೆ. ಬೆಂಗಳೂರಿಗೆ ಗಣ್ಯರ ಭೇಟಿಯ ಸಂದರ್ಭ, ಬೆಳೆದು ಬಂದ ಸಂಸ್ಕೃತಿ, ಪರಂಪರೆ, ಪರಿಸರ ಹೀಗೆ ಪ್ರತ್ಯೇಕ ವಿಭಾಗಗಳಲ್ಲಿ ಬರಹಗಳನ್ನು ಕಾಣಬಹುದು.


 

ಸೀತಾ ರಾಮಾಯಣದ ಸಚಿತ್ರ ಮರುಕಥನ

ದೇವದತ್ತ ಪಟ್ಟನಾಯಕ

ಅನುವಾದ: ಪದ್ಮರಾಜ ದಂಡಾವತಿ

ಪುಟ: 374, ಬೆಲೆ: ರೂ.700

ಪ್ರಥಮ ಮುದ್ರಣ: 2020

ಮನೋಹರ ಗ್ರಂಥಮಾಲ, ಲಕ್ಷ್ಮಿ ಭವನ, ಸುಭಾಷ್ ರಸ್ತೆ, ಧಾರವಾಡ- 580001

ಈ ಕೃತಿಯು ರಾಮಾಯಣವನ್ನು ಸೀತೆಯ ಕಣ್ಣಿನಿಂದ ನೋಡುವ ಒಂದು ಪ್ರಯತ್ನವೂ ಹೌದು, ಸೀತೆಯನ್ನೂ ಹೊಸ ದೃಷ್ಟಿಯಲ್ಲಿ ತೋರಿಸುವ ಬಗೆಯೂ ಹೌದು. ಅಲ್ಲದೆ ಹಲವು ಆಯಾಮಗಳಲ್ಲಿ ರಾಮಾಯಣವನ್ನು ಇಲ್ಲಿ ಲೇಖಕರು ಗಂಭೀರವಾಗಿ ಚರ್ಚೆಗೆ ಒಳಪಡಿಸಿದ್ದಾರೆ. ಸಮರ್ಥವಾಗಿ ಕನ್ನಡೀಕರಣಗೊಂಡಿರುವ ಈ ಕೃತಿ ಸದ್ಯ ಪೌರಾಣಿಕ ಕಥಾ ಲೋಕದಲ್ಲಿ, ಕನ್ನಡ ಸಾಹಿತ್ಯ ವಲಯದಲ್ಲಿ ಮಹತ್ವ ಪಡೆದಿದೆ.


ಉತ್ಕಲ ವಂಗ-ಅವಿಮುಕ್ತ ಗಂಗಾ

ಪ್ರವಾಸ ಕಥನ

ವಿದ್ಯಾ ಗಣೇಶ್

ಪುಟ: 146, ಬೆಲೆ: ರೂ.180

ಪ್ರಥಮ ಮುದ್ರಣ: 2019

ಇಂದಿರಾ ಹಾಲಂಬಿ, ಸಂದೀಪ ಸಾಹಿತ್ಯ ಆತ್ರಾಡಿ, ಉಡುಪಿ, 576107.

ಈ ಕೃತಿಯು ಲೇಖಕಿಯ ಪ್ರವಾಸದ ಅನುಭವವನ್ನು ತೆರೆದಿಡುತ್ತಾ ಸಾಗುತ್ತದೆ. ಇಲ್ಲಿನ ಭಾಷೆ ಹಾಗೂ ನಿರೂಪಣಾ ಶೈಲಿಯಿಂದ ಕೃತಿ ತನ್ನಲ್ಲಿನ ಕುತೂಹಲಗಳನ್ನು ಉಳಿಸಿಕೊಳ್ಳುತ್ತಾ ಹೋಗುತ್ತದೆ. ಸ್ಥಳಗಳ ಕುರಿತು ಮಾಹಿತಿಗಳನ್ನು ನೀಡಿರುವ ಬಗೆಯಲ್ಲಿಯೂ, ವಾಹನ ಚಾಲಕರು, ಪ್ರಯಾಣಿಕರು, ದಾರಿಹೋಕರು ತಿಳಿಸಿದ ಹೆಸರುಗಳನ್ನೇ ಲೇಖಕಿ ಇಲ್ಲಿ ದಾಖಲಿಸಿದ್ದಾರೆ.


ಮಾಯಾಪಂಜರ

ಪ್ರಸನ್ನ ಸಂತೇಕಡೂರು

ಪುಟ: 172, ಬೆಲೆ: ರೂ.130

ಪ್ರಥಮ ಮುದ್ರಣ: 2018

ಮಲೆನಾಡು ಪ್ರಕಾಶನ, ಕಲ್ಯಾಣ ನಗರ,

6ನೇ ಕ್ರಾಸ್ ಜ್ಯೋತಿ ನಗರ,

ಚಿಕ್ಕಮಗಳೂರು- 577102

ಒಟ್ಟು ಹದಿಮೂರು ಕಥೆಗಳನ್ನು ಒಳಗೊಂಡಿರುವ ಈ ಸಂಕಲನ, ಲೇಖಕರ ಬದುಕಿನ ಸುತ್ತ ಕಟ್ಟಿಕೊಂಡ ಕಾಲ್ಪನಿಕ ಲೋಕ ಎನ್ನಬಹುದು. ಅಮೆರಿಕದಲ್ಲಿ ದಶಕಗಳ ಕಾಲ ಉದ್ಯೋಗದಲ್ಲಿದ್ದ ಲೇಖಕರು ಬಹುತೇಕ ಇಲ್ಲಿನ ಕಥೆಗಳಲ್ಲಿ ಅಮೆರಿಕವನ್ನೂ ತೋರಿಸುತ್ತಾರೆ. ಕನ್ನಡನಾಡಿನ ಚರಿತ್ರೆ, ವಚನ, ಪುರಾಣ, ಕವಿಸೂಕ್ತಿಗಳೆಲ್ಲ ಇಲ್ಲಿ ಕಥೆಗಳಿಗೆ ಇನ್ನಷ್ಟು ಮೆರುಗು ನೀಡಿವೆ.

Leave a Reply

Your email address will not be published.