ಹೊಸ ಪುಸ್ತಕ

ವರ್ಜಿನ್ ಮೊಹಿತೊ

ಕಥೆಗಳು

ಸತೀಶ್ ಚಪ್ಪರಿಕೆ

ಪುಟ: 120 ಬೆಲೆ: ರೂ.120

ಪ್ರಥಮ ಮುದ್ರಣ: 2020

ಅಂಕಿತ ಪುಸ್ತಕ, ನಂ. 53, ಶಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿ ಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು- 560004

ಪತ್ರಕರ್ತ ಸತೀಶ್ ಚಪ್ಪರಿಕೆ ಅವರ ಎರಡನೇ ಕಥಾಸಂಕಲನವಿದು. ಒಟ್ಟು ಹತ್ತು ಕಥೆಗಳಿವೆ. ಸೃಜನಶೀಲತೆ ಅವರ ಬರವಣಿಗೆಯಲ್ಲಿ ಎದ್ದು ಕಾಣುವ ಅಂಶ. ವಿಭಿನ್ನತೆ, ಹೊಸತನ, ವರ್ತಮಾನ ಸ್ಪಂದನೆ-ಸAಘರ್ಷ, ಒಳನೋಟ-ಒಲವುಗಳನ್ನು ಇಲ್ಲಿನ ಕಥೆಗಳಲ್ಲಿ ಕಾಣಬಹುದು. ಯಾವ ಕಥೆಯೂ ಬೇರೆಲ್ಲೂ ಪ್ರಕಟವಾಗಿಲ್ಲ. ಕಥೆಗಾರಿಕೆಯ ಭಾಷೆ, ತಂತ್ರ, ಹೆಣೆದ ಸರಳತೆಗಳು ಆಕರ್ಷಿಸುತ್ತವೆ. ಮಾನವೀಯ ನೆಲೆಯಲ್ಲಿ ಬಿಂಬಿತವಾಗಿವೆ.

ಭ್ರಷ್ಟಾಚಾರದ ಬೇರುಗಳು ಮತ್ತು ಬಿಳಿಲುಗಳು

ಪ್ರಚಲಿತ ವಿದ್ಯಮಾನಗಳ ಅನಾವರಣ

ಜಿ.ರಂಗನಗೌಡ ನಿಲೋಗಲ್

ಪುಟ: 134 ಬೆಲೆ: ರೂ.100

ಪ್ರಥಮ ಮುದ್ರಣ: 2020

ಕುಂಚಶ್ರೀ ಪ್ರಕಾಶನ, ನಿಲೋಗಲ್, ಚನ್ನಗಿರಿ ತಾಲೂಕು-577551

ಭ್ರಷ್ಟ ವ್ಯವಸ್ಥೆಯ ಕಬಂಧಬಾಹು ಎಲ್ಲೆಲ್ಲೂ ಆವರಿಸಿಕೊಂಡಿದೆ. ಅದಕ್ಕಿರುವ ನಾನಾ ಮುಖಗಳನ್ನು ಸಾಮಾನ್ಯರಿಗೂ ಅರ್ಥವಾಗುವಂತೆ ಜಿ.ರಂಗನಗೌಡರು ಈ ಕೃತಿಯ ಲೇಖನಗಳಲ್ಲಿ ತೆರೆದಿಟ್ಟಿದ್ದಾರೆ. ಸಣ್ಣ ಸಣ್ಣ ಯೋಜನೆಗಳಲ್ಲೂ ನಡೆಯುವ ಭ್ರಷ್ಟಾಚಾರ, ಅನಿವಾರ್ಯ ಎಂಬAತೆ ಒಪ್ಪಿಕೊಂಡು ಸುಮ್ಮನಿರುವ ನಿದರ್ಶನಗಳು ಇಲ್ಲಿ ದೊರೆಯುತ್ತವೆ.

ದಂದುಗ

ಕಾದAಬರಿ

(ಕೊರೊನಾ ಕಾಲದ ಸಂಕಷ್ಟಗಳ ಕುರಿತ ಕಥನ)

ಅಮರೇಶ ನುಗಡೋಣಿ

ಪುಟ: 256 ಬೆಲೆ: ರೂ.200

ಪ್ರಥಮ ಮುದ್ರಣ: 2020

ಪ್ರಕಾಶನ: ವಸಂತ ಪ್ರಕಾಶನ, ನಂ. 360, 10ನೇ ‘ಬಿ’ ಮುಖ್ಯರಸ್ತೆ, 3ನೇ ಬ್ಲಾಕ್, ಜಯನಗರ, ಬೆಂಗಳೂರು-560011

ಪ್ರಸಿದ್ಧ ಕಥೆಗಾರ ಅಮರೇಶ ನುಗಡೋಣಿ ಅವರ ಮೊದಲ ಕಾದಂಬರಿ ಇದು. ಕಥೆಗಳಿಂದಲೇ ಓದುಗಪ್ರಿಯರಾದ ನುಗಡೋಣಿ ಅವರಿಗೆ ಕೊರೊನಾ ಅವಧಿಯ ತಲ್ಲಣಗಳನ್ನು ಚಿತ್ರಿಸಲು ಮತ್ತು ದೀರ್ಘವಾಗಿ ಬರೆಯಲು ಸಮಯವು ದಕ್ಕಿದೆ. ಕಥೆಗಾರ ರಹಮತ್ ತರೀಕೆರೆ ಅವರು ಮುನ್ನುಡಿಯಲ್ಲಿ ಬರೆದಿರುವಂತೆ ಈ ಕಾದಂಬರಿ ನಾಲ್ಕು ಭೂಮಿಕೆಗಳಲ್ಲಿ ಪ್ರಸ್ತುತವಾಗಿದೆ. ಊರಿಗೆ ಹೊರಟ ಸುನಂದಾ-ನAದೀಶರು, ಬಸ್ಸು ಸಿಗದೆ ಪಟ್ಟಣದಲ್ಲಿರುವ ತಮ್ಮ ಸಹಪಾಠಿ ಮಲಿಕ್ ಜಾನ್‌ನ ರೂಮಿನಲ್ಲಿದ್ದು ಕಾಲ ಕಳೆಯುವುದು. ಇವರು ತಮ್ಮ ಊರಿಗೆ ಹೋಗಲು ಯತ್ನಿಸುವ ಸಾಹಸದಲ್ಲಿ ಚೆಕ್‌ಪೋಸ್ಟಿನಲ್ಲಿ ಹಿಡಿಯಲಾಗಿ ಶಾಲೆಯೊಂದರಲ್ಲಿ ಕ್ವಾರಂಟೈನ್‌ಗೆ ಒಳಗಾಗುವುದು. ಕೋವಿಡ್ ಸೋಂಕಿಗೆ ಒಳಗಾದ ಮಲಿಕ್ ಜಾನ್ ದವಾಖಾನೆಯಲ್ಲಿರುವ ಸಮಯ. ಮಲಿಕ್ ಜಾನ್ ಗುಣಮುಖನಾಗಿ ಹಳ್ಳಿಗೆ ಮರಳಿದಾಗ ಊರಹೊರಗೆ ತಬ್ಬಲಿಗಳಂತೆ ನಿಂತ ವಲಸೆ ಕಾರ್ಮಿಕರನ್ನು ಊರೊಳಗೆ ಬರುವಂತೆ ಮಾಡುವ ಕಾರ್ಯಾಚರಣೆ.

Saving Safa ಸಫಾ

ವಾರಿಸ್ ಡಿರೀ

ಕನ್ನಡಕ್ಕೆ: ಪ್ರಸಾದ್ ನಾಯ್ಕ್

ಪುಟ: 320 ಬೆಲೆ: ರೂ.350

ಪ್ರಥಮ ಮುದ್ರಣ: 2020

ಪ್ರಕಾಶನ: ಸೃಷ್ಟಿ ಪಬ್ಲಿಕೇಷನ್, ನಂ.121, 1ನೇ ಮಹಡಿ, 13ನೇ ಮುಖ್ಯರಸ್ತೆ, ಎಂ.ಸಿ. ಲೇಔಟ್, ವಿಜಯನಗರ, ಬೆಂಗಳೂರು-560040

ಧರ್ಮ, ಪರಂಪರೆಯ ಆಚರಣೆ ಎಂಬ ಹೆಸರಿನಲ್ಲಿ ಹೆಣ್ಣುಮಕ್ಕಳ ಮೇಲಿನ ಅಘೋರ, ಅಮಾನವೀಯ, ಪೈಶಾಚಿಕ ಕೃತ್ಯ ಇಲ್ಲಿ ವಿವರಿಸಲಾಗಿದೆ. ಬಲ್ಬಲಾದಲ್ಲಿ ನಡೆಯುವ ಯೋನಿ ಛೇದನ ಕ್ರಿಯೆಯಲ್ಲಿ ಹಳೆಯ ತುಕ್ಕು ಹಿಡಿದ ಬ್ಲೇಡಿನಿಂದ ಹೆಣ್ಣಿನ ಗುಪ್ತಾಂಗದ ಕ್ಲಿಟೋರಸ್ ಎಂಬ ಮುಖ್ಯಭಾಗವನ್ನು ಅನಸ್ತೇಶಿಯಾ ಸಹಾಯವಿಲ್ಲದೆ ಕತ್ತರಿಸಲಾಗುತ್ತದೆ. ಯೋನಿಯ ಇನ್ನೊಂದು ಭಾಗ ಲೇಬಿಯಾವನ್ನೂ ತೆಗೆದು, ನಂತರ ಪೊದೆಗಳಿಂದ ತೆಗೆದ ಮುಳ್ಳುಗಳಿಂದ ಹಸಿಯಾದ ಗಾಯವನ್ನು ಮುಚ್ಚಿ ಹೊಲಿಯಲಾಗುತ್ತದೆ. ಗಾಯವು ಒಣಗುವವರೆಗೆ ಬಾಲಕಿಯ ಎರಡೂ ಕಾಲುಗಳನ್ನು ಒಂದಕ್ಕೊAದು ಬಿಗಿಯಾಗಿ ಕಟ್ಟಲಾಗುತ್ತದೆ. ಯೋನಿಯನ್ನು ಬೆಂಕಿಕಡ್ಡಿಯ ತಲೆಯ ಗಾತ್ರದ ಚಿಕ್ಕ ತೂತೊಂದನ್ನಷ್ಟೇ ಮೂತ್ರ ವಿಸರ್ಜನೆಗಾಗಿ ಮತ್ತು ಮಾಸಿಕ ಋತುಸ್ರಾವದ ಕಾರ್ಯಕ್ಕೆ ಇಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ತೀವ್ರ ರಕ್ತಸ್ರಾವ, ಸೋಂಕು, ಆಘಾತದಿಂದ ಹೆಚ್ಚಿನ ಬಾಲಕಿಯರು ಮೃತಪಡುತ್ತಾರೆ. ಬದುಕಿದರೂ ಅಸಾಧ್ಯನೋವು, ನಾನಾ ಕಾಯಿಲೆ ಅನುಭವಿಸಿ, ನರಳಿನರಳಿ ಸಾಯುತ್ತಾರೆ.

ಮುಟ್ಟು ಏನಿದರ ಒಳಗುಟ್ಟು…?

ಸಂ: ಜ್ಯೋತಿ ಇ. ಹಿಟ್ನಾಳ್

ಪುಟ: 250 ಬೆಲೆ: ರೂ. 250

ಪ್ರಥಮ ಮುದ್ರಣ: 2020

ಪ್ರಕಾಶನ: ಅಂಗಳ ಪ್ರಕಾಶನ, ಕೊಪ್ಪಳ

‘ಮುಟ್ಟಿನ’ ಕುರಿತಾಗಿ ಡಾ.ವಸುಂಧರಾ ಭೂಪತಿ, ಡಾ.ಪುರುಷೋತ್ತಮ ಬಿಳಿಮಲೆ, ಶ್ರೀನಿವಾಸ್ ಕಾರ್ಕಳ, ಗುಲಾಬಿ ಬಿಳಿಮಲೆ, ವಿನಯಾ ಒಕ್ಕುಂದ, ಭಾನು ಮುಷ್ತಾಕ್, ಸುನಂದಾ ಕಡಮೆ, ಮಂಜುಳಾ ಹುಲಿಕುಂಟೆ, ಶ್ರಿದೇವಿ ಕೆರೆಮನೆ, ಪದ್ಮಜಾ ಜೋಯ್ಸ್ ಸೇರಿದಂತೆ 57 ಲೇಖಕರ ಬರಹಗಳು ಈ ಕೃತಿಯಲ್ಲಿವೆ. ಸಮಾಜದ ಎಲ್ಲ ರಂಗಗಳಲ್ಲಿ ಕೆಲಸ ಮಾಡುತ್ತಿರುವವರು ‘ಮುಟ್ಟಿನ’ ಕುರಿತು ಬರೆದಿದ್ದಾರೆ. ಬಾಲ್ಯದಲ್ಲೇ ಹೆಣ್ಣುಮಕ್ಕಳ ಹಿಂದೆಯೇ ಕಣ್ಣಿಡುವ ಅಮ್ಮ ಅಜ್ಜಿಯರು, ಶಾಲೆಯಲ್ಲಾದರೇ ಎಂಬ ಆತಂಕ, ಭಯ, ಮಟ್ಟಿನ ನೋವು-ಹಿಂಸೆ-ತಲ್ಲಣಗಳು, ಸಹಜತೆಯನ್ನು ಮೀರಿದ ನೋಟಗಳು… ಇಲ್ಲಿ ಕನ್ನಡಿಯಾಗಿವೆ. ಎಂ.ಎಸ್.ಆಶಾದೇವಿಯವರ ಲೇಖನದ ಕೊನೆಯಲ್ಲಿರುವ ಮಾತುಗಳಿವು: “ಬೆಪ್ಪುಕಾ ಪುರುಷರೇ, ನಿಮ್ಮ ಕೀಳರಿಮೆಯನ್ನು ಗೆಲ್ಲಲು ಮುಟ್ಟನ್ನು, ಯಾವ ಮುಟ್ಟಿಲ್ಲದೆ ನೀವೇ ಇಲ್ಲವೋ ಅದನ್ನು ಹೀಗೆ ಕೃತಕವಾಗಿ ಬಹಿಷ್ಕರಿಸುವುದು ಶುದ್ಧ ಅನಾಗರಿಕತನ ಎಂದು ಹೇಳಬೇಕು. ಇದನ್ನು ಹೇಳಿಕೊಡುವ ಎಂದರೆ ಮಗಳಿಲ್ಲದ ನೃತದೃಷ್ಟೆ ನಾನು. ಮಗನಿಗಂತೂ ಖಂಡಿತ ಹೇಳಿದ್ದೇನೆ.”

ಮೈಸೂರು ಸಂಸ್ಥಾನದ 25ನೇ ಮಹಾರಾಜ ಶ್ರೀಜಯಚಾಮರಾಜೇಂದ್ರ ಒಡೆಯರ್

ಪ್ರಧಾನ ಸಂಪಾದಕರು: ಬಾ.ಹ.ರಮಾಕುಮಾರಿ

ಸಂಪಾದಕರು: ಕೆ.ಪಿ.ಲಕ್ಷಿö್ಮಕಾಂತರಾಜೇ ಅರಸ್

ಪುಟ: 88 ಬೆಲೆ: ರೂ.50

ಪ್ರಥಮ ಮುದ್ರಣ: 20219

ಪ್ರಕಾಶನ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು “ಕನ್ನಡ ಭವನ” ಅಮಾನಿಕೆರೆ ಪಾರ್ಕ್ ಎದುರು, ತುಮಕೂರು-572101

ರಾಜರ ಆಳ್ವಿಕೆಯಲ್ಲಿ ಮೈಸೂರು ಸಂಸ್ಥಾನದ ಕೊನೆಯ ಅರಸರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಬದುಕು ಸಾಧನೆ, ತುಮಕೂರು ಜಿಲ್ಲೆಗೆ ಅವರ ಭೇಟಿ, ನೆನಪುಗಳು ಈ ಕೃತಿಯಲ್ಲಿವೆ. 2019 ಇವರ ಜನ್ಮಶತಾಬ್ದ ವರ್ಷವಾಗಿತ್ತು. ಕುವೆಂಪು ಅವರು ಜಯಚಾಮರಾಜೇಂದ್ರ ಒಡೆಯರ್ ಅವರನ್ನು ಕುರಿತು “ಎಲ್ಲರೂ ಸಿಂಹಾಸನಾಧೀಶರಾಗಿ ಮಹಾರಾಜರಾದರೆ ಇವರು ಅದನ್ನು ತ್ಯಜಿಸಿ ಮಹಾರಾಜರಾದರು” ಎಂದಿದ್ದಾರೆ.

ಕಾವ್ಯ ಕಂಬನಿ

ಎಚ್.ಎಸ್.ಬೇನಾಳರ ಕವನ ಸಂಕಲನ

ವಿಮರ್ಶೆ: ಸಂತೋಷ ಕುಮಾರ ಕರಹರಿ

ಪುಟ: 72 ಬೆಲೆ: ರೂ.80

ಪ್ರಥಮ ಮುದ್ರಣ: 2020

ಪ್ರಕಾಶನ: ಬುದ್ಧಾಂಕುರ ಪ್ರಕಾಶನ, ಕಲಬುರಗಿ. ಮು: ರಾಮನಗರ, ಪೋ: ಕಪನೂರ, ಕೇಂದ್ರೀಯ ಅಬಕಾರಿ ಕಚೇರಿ ವಸತಿಗೃಹ ಹತ್ತಿರ, ಹುಮನಾಬಾದ ರಿಂಗ್ ರಸ್ತೆ, ಕಲಬುರಗಿ-585104

ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ಚಿಂತನೆಯ ಕುರಿತು ಕಾರ್ಯನಿರ್ವಹಿಸಿರುವ ಎಚ್.ಎಸ್.ಬೇನಾಳರ ಕವನಗಳನ್ನು ಸಂತೋಷಕುಮಾರ ಕರಹರಿ ವಿಮರ್ಶೆ ಕೈಗೊಂಡಿದ್ದಾರೆ. ಅವರು ಬೇನಾಳ ಕಾವ್ಯ ಕೃಷಿಯ ಕುರಿತು ಮುಕ್ತವಾಗಿ ಹೇಳಿಕೊಂಡಿದ್ದಾರೆ. ತಮ್ಮದೇ ಆದ ಶೈಲಿಯ ಮೂಲಕ ಕಾವ್ಯವನ್ನು ವಿಮರ್ಶಿಸಿದ್ದಾರೆ ಕರಹರಿ ಅವರು.

ಭಾರತದ ಭಾಷಿಕ ಸನ್ನಿವೇಶ

ಅಂಬೇಡ್ಕರ್ ಚಿಂತನೆಗಳು

ಮೇಟಿ ಮಲ್ಲಿಕಾರ್ಜುನ

ಪುಟ: 162  ಬೆಲೆ: ರೂ.120

ಪ್ರಥಮ ಮುದ್ರಣ: 2019

“ಈ ಕೃತಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾಷಿಕ ಚಿಂತನೆಗಳ ಕುರಿತು ತಾನು ಕೈಗೊಂಡ ಯೋಜನೆಯ ಫಲಿತ” ಎಂದು ಲೇಖಕರು ಹೇಳಿದ್ದಾರೆ. ಡಾ.ಅಂಬೇಡ್ಕರ್ ಅವರ ಭಾಷಿಕ ಚಿಂತನೆಗಳನ್ನು ಆಧರಿಸಿಕೊಂಡು ಪ್ರಸ್ತುತ ಭಾರತದ ಭಾಷಿಕ ಸನ್ನಿವೇಶವನ್ನು ಮರುಪರಿಶೀಲಿಸುವ ಪ್ರಯತ್ನವನ್ನು ಕೃತಿಯಲ್ಲಿ ಕೈಗೊಳ್ಳಲಾಗಿದೆ. ಭಾರತದ ಭಾಷೆಗಳ ಸಂಕೀರ್ಣ ಸನ್ನಿವೇಶವನ್ನು ಆಡಳಿತದ ನೆಲೆಯಲ್ಲಿ ನಿರ್ವಹಿಸಲು ಯಾವ ರೀತಿಯ ಚಿಂತನೆಗಳನ್ನು ಅಂಬೇಡ್ಕರ್ ಕೈಗೊಂಡಿದ್ದರು ಎನ್ನುವುದನ್ನು ಕೃತಿಯಲ್ಲಿ ವಿಶ್ಲೇಷಿಸಲು ಯತ್ನಿಸಲಾಗಿದೆ.

ಭಾರತದ ಮುಸ್ಲಿಮರು

ಬೆಳಕು ಬೀರುವ ಭಾಷಣಗಳು

ಸಂ: ಮುನೀರ್ ಕಾಟಿಪಳ್ಳ, ಚೇತನಾ ತೀರ್ಥಹಳ್ಳಿ

ಪುಟ: 130 ಬೆಲೆ: ರೂ.90

ಪ್ರಥಮ ಮುದ್ರಣ: 2019

2017ರ ಮೇ 14, 15ರಂದು ಮಂಗಳೂರಿನಲ್ಲಿ ನಡೆದ ಮುಸ್ಲಿಂ ಯುವ ಸಮಾವೇಶದಲ್ಲಿ ನಡೆದ ಗೋಷ್ಠಿಗಳ ಸಂವಾದದ ಸಂಕಲನ ಈ ಕೃತಿ. ಡಿವೈಎಫ್‍ಐ ಅಖಿಲ ಭಾರತ ಅಧ್ಯಕ್ಷ ಮುಹಮ್ಮದ್ ರಿಯಾಜ್, ಮಾಜಿ ಸಚಿವ ಬಿ.ಎ.ಮೊಯ್ದಿನ್, ಪತ್ರಕರ್ತರಾದ ರಂಜಾನ್ ದರ್ಗಾ, ದಿನೇಶ್ ಅಮೀನ್ ಮಟ್ಟು, ಅಬ್ದುಸ್ಸಲಾಂ ಪುತ್ತಿಗೆ, ಎನ್.ಎ.ಎಂ.ಇಸ್ಮಾಯಿಲ್ ಹಾಗೂ ಪ್ರೊ.ರಹಮತ್ ತರೀಕೆರೆ, ಪ್ರೊ.ಮುಜಾಫರ್ ಅಸ್ಸಾದಿ ಇತರರು ಮಂಡಿಸಿದ ವಿಷಯಗಳು ಇಲ್ಲಿವೆ. ಮುಸ್ಲಿಂ ಸಮುದಾಯದ ಸಾಮಾಜಿಕ-ಶೈಕ್ಷಣಿಕ ಹಿಂದುಳಿಯುವಿಕೆ, ಮುಸ್ಲಿಮರ ರಾಜಕೀಯ ಪ್ರಾತಿನಿಧ್ಯ ಸಬಲೀಕರಣ, ಹೆಚ್ಚುತ್ತಿರುವ ಕೋಮುವಾದ: ಮುಸ್ಲಿಂ ಯುವಜನರ ಮುಂದಿರುವ ದಾರಿ, ಇತರ ವಿಷಯಗಳ ಕುರಿತು ತಜ್ಞರು ಮಾತನಾಡಿದ್ದಾರೆ.

ಜೆ.ಎನ್.ಯು ಅಂಗಳದಲ್ಲಿ ರಾಷ್ಟ್ರೀಯವಾದದ ಕ್ಲಾಸುಗಳು

ಸಂ. ಮಂಡಳಿ: ಜಾನಕಿ ನಾಯರ್, ರೋಹಿತ್ ಆಜಾದ್, ಮೊಹಿಂದರ್ ಸಿಂಗ್, ಮಲ್ಲಾರಿಕಾ ಸಿನ್ಹಾ ರಾಯ್

ಅನುವಾದ: ಬಿ.ಶ್ರೀಪಾದ ಭಟ್

ಪುಟ: 216 ಬೆಲೆ: ರೂ. 180

ಪ್ರಥಮ ಮುದ್ರಣ: 2020

2016ರ ಜೆಎನ್‍ಯು ಮೇಲಿನ ದಾಳಿಯ ನಂತರ ಉತ್ತರ ಹುಡುಕುವ ಭಾಗವಾಗಿ ಜೆಎನ್‍ಯು ಅಧ್ಯಾಪಕರ ಸಂಘ ಜೆಎನ್‍ಯು ಆಡಳಿತ ಬ್ಲಾಕಿನ ಅಂಗಳದಲ್ಲಿ ರಾಷ್ಟ್ರವಾದದ ಕುರಿತು ವಿವಿಧ ಜ್ಞಾನಕ್ಷೇತ್ರಗಳ ಹಲವು ಉಪನ್ಯಾಸ ಮಾಲೆ ಏರ್ಪಡಿಸಿತು. ಸುಮಾರು ಒಂದು ತಿಂಗಳ ಕಾಲ 24 ಉಪನ್ಯಾಸಗಳು ನಡೆದವು. 2016ರಲ್ಲೇ ಇಂಗ್ಲಿಷಿನಲ್ಲಿ ಈ ಉಪನ್ಯಾಸ ಮಾಲೆ ಪುಸ್ತಕವಾಗಿ ಪ್ರಕಟವಾಗಿತ್ತು.

ಜಾನಕಿ ನಾಯರ್, ಗೋಪಾಲ ಗುರು, ಜಿ. ಅರುಣಿಮಾ, ಆಯೇಶಾ ಕಿದ್ವಾಯಿ, ಮೃದುಲಾ ಮುಖರ್ಜಿ, ತನಿಕಾ ಸರ್ಕಾರ್, ರೋಮಿಲಾ ಥಾಪರ್, ಸತ್ಯಜಿತ್ ರಥ್, ಇತರರರು ಉಪನ್ಯಾಸ ನೀಡಿದ್ದರು. ‘ಜೆ.ಎನ್.ಯು. ವಸಂತಕ್ಕಾಗಿ ಟೀಚ್-ಇನ್’, ಭಾರತೀಯ ರಾಷ್ಟ್ರೀಯವಾದವನ್ನು ಗಂಭೀರವಾಗಿ ಪರಿಗಣಿಸಿದಾಗ, ದೇಶ ಮತ್ತು ಅದರ ಪ್ರದೇಶಗಳು: ಅವನ್ನೆಲ್ಲ ಜೋಡಿಸುವುದು ಹೇಗೆ?, ಭಾಷೆಗಳು ಮತ್ತು ಮಾತೃಭಾಷೆಗಳು? ಭಾರತದ ಭಾಷಾ ವೈವಿಧ್ಯತೆ, ನಾಗರಿಕ ಸ್ವಾತಂತ್ರ್ಯಗಳು ಮತ್ತು ಭಾರತೀಯ ರಾಷ್ಟ್ರೀಯವಾದ, ಬಾಪು ಗಾಂಧಿಯ ದೇಶ, ರಾಷ್ಟ್ರೀಯವಾದಿ ಎಂದುಕೊಳ್ಳುವ ಸಿದ್ಧಾಂತಗಳು ಕಂಡ ಗತಕಾಲ, ವೈವಿಧ್ಯ ಮತ್ತು ಏಕತೆಯ ವೈಜ್ಞಾನಿಕ ಆಯಾಮ, ಇತರ ವಿಷಯಗಳ ಉಪನ್ಯಾಸಗಳು ಕೃತಿಯಲ್ಲಿವೆ.

ಫ್ಯಾಸಿಸಂ ಹಿಂದುತ್ವ ಮತ್ತು ಭಾರತದ ಪ್ರಜಾಪ್ರಭುತ್ವ

ಪ್ರೊ. ಐಜಾಜ್ ಅಹ್ಮದ್

ಸಂದರ್ಶನ: ಜಿಪ್ಸನ್ ಜಾನ್, ಪಿ.ಎಂ.ಜಿತೀಶ್

ಅನುವಾದ: ಬಿ.ಶ್ರೀಪಾದ ಭಟ್

ಪುಟ: 52 ಬೆಲೆ: ರೂ.35

ಪ್ರಥಮ ಮುದ್ರಣ: 2019

ಇದು 2019ರ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದ ವೇಳೆ ಇಂಗ್ಲಿಷ್ ಪಾಕ್ಷಿಕ ‘ಫ್ರಂಟ್ ಲೈನ್’ ನಡೆಸಿದ ಪ್ರೊ.ಐಜಾಜ್ ಅಹ್ಮದ್ ಅವರ ಸಂದರ್ಶನದ ಅನುವಾದ. ಚುನಾವಣೆ ಫಲಿತಾಂಶ ಬಂದ ಬಳಿಕ ಈ ಸಂದರ್ಶನವನ್ನು ಪರಿಷ್ಕರಿಸಲಾಗಿತ್ತು. ಅದೇ ವರ್ಷದ ಆಗಸ್ಟ್ 2ರ ಸಂಚಿಕೆಯಲ್ಲಿ ಈ ಸಂದರ್ಶನ ಪ್ರಕಟವಾಯಿತು. “ಬಂಡವಾಳಶಾಹಿ ಅಥವಾ ಬಂಡವಳಿಗ ವರ್ಗ ಇರದಿದ್ದರೂ ಮಾನವ ಜೀವಿಗಳು ಕೆಲಸ ಮಾಡುತ್ತಿರುತ್ತಾರೆ, ಆದರೆ ಶ್ರಮಿಕ ವರ್ಗ ಇರುವುದಿಲ್ಲ. ‘ಕಮ್ಯುನಿಸಂ’ ಎಂಬ ಪದ ಇದನ್ನೇ ಸೂಚಿಸುತ್ತದೆ” ಎನ್ನುತ್ತಾರೆ ಪ್ರೊ.ಐಜಾಜ್ ಅಹ್ಮದ್.

 

ಮೇಲಿನ ನಾಲ್ಕು ಪುಸ್ತಕಗಳ ಪ್ರಕಾಶಕರು: ಕ್ರಿಯಾ ಮಾಧ್ಯಮ, 4ನೇ ಅಡ್ಡರಸ್ತೆ, ಮಹಾಲಕ್ಷ್ಮಿ ಬಡಾವಣೆ, ಬೆಂಗಳೂರು-560079

Leave a Reply

Your email address will not be published.