ಹೊಸ ಪುಸ್ತಕ

ಮಧುಬನಿ

ಹನಿಗವನ

ಸಂತೋಷಕುಮಾರ ಕರಹರಿ

ಪುಟ: 84 ಬೆಲೆ: ರೂ.80

ಪ್ರಥಮ ಮುದ್ರಣ: 2020

ಪ್ರಕಾಶನ: ಬುದ್ಧಾಂಕುರ ಪ್ರಕಾಶನ, ಕಲಬುರಗಿ. ಮು: ರಾಮನಗರ, ಪೋ: ಕಪನೂರ, ಕೇಂದ್ರೀಯ ಅಬಕಾರಿ ಕಚೇರಿ ವಸತಿಗೃಹ ಹತ್ತಿರ, ಹುಮನಾಬಾದ ರಿಂಗ್ ರಸ್ತೆ, ಕಲಬುರಗಿ-585104

ಪುಟ್ಟ ಪುಟ್ಟ ಕವನಗಳ ಸಂಕಲನವಿದು. ಕೆಲವೊಮ್ಮೆ ಒಂದು ಸಾಲು ಪ್ರತಿನಿಧಿಸುತ್ತವೆ. ಇನ್ನೂ ವಿಸ್ತರಣೆಯಾದರೆ ಉತ್ತಮ. ಅನುಭವ ಮತ್ತು ಪಕ್ವತೆಗೆ ಹೆಜ್ಜೆಯಾಗಿದೆ ಈ ಕವನ ಸಂಕಲನ.

ನೀರು ಮತ್ತು ಪ್ರೀತಿ

ಕಾದಂಬರಿ

ಅಗ್ರಹಾರ ಕೃಷ್ಣಮೂರ್ತಿ

ಪುಟ: 108 ಬೆಲೆ: ರೂ.110

ದ್ವಿತೀಯ ಮುದ್ರಣ: 2020

ಪ್ರಕಾಶನ: ಅಹರ್ನಿಶಿ ಪ್ರಕಾಶನ, ಜ್ಞಾನವಿಹಾರ ಬಡಾವಣೆ, ಕಂಟ್ರಿಕ್ಲಬ್ ಹತ್ತಿರ, ವಿದ್ಯಾನಗರ, ಶಿವಮೊಗ್ಗ-577203

ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಬಹುಮಾನ ಪಡೆದ ‘ನೀರು ಮತ್ತು ಪ್ರೀತಿ’ ಕಾದಂಬರಿಯು 2001ರಲ್ಲಿ ಮೊದಲ ಮುದ್ರಣ ಗೊಂಡಿತ್ತು. ಕೃತಿಯ ಕುರಿತು ಹಿರಿಯ ಬರಹಗಾರ ಎಸ್.ದಿವಾಕರ್ ಹೇಳಿರುವ ಮಾತಿನಲ್ಲಿ ಒಂದು ಸಾಲು ಇದು: “ಪ್ರೀತಿಗೆ ಕಾರಣವಾಗುವ ನೀರು ಇಲ್ಲೊಂದು ಸಾರ್ಥಕ ಪ್ರತಿಮೆಯಾಗಿದೆ”. ಕಾದಂಬರಿಯಲ್ಲಿ ಗಂಡು-ಹೆಣ್ಣಿನ ವಾಸ್ತವಿಕ ಬದುಕಿನಲ್ಲಿ ಎದುರಾಗುವ ಸನ್ನಿವೇಶಗಳು, ಮನುಷ್ಯ ಸಂಬAಧಗಳು, ಅವುಗಳನ್ನು ಸ್ವೀಕರಿಸುವ ಪರಿಯನ್ನು ಹಿಡಿದಿಡಲಾಗಿದೆ.

ಬೆಳಕು ನಗುವ ಪರಿ

ಕವನ ಸಂಕಲನ

ಶಿ ಕಾ ಬಡಿಗೇರ

ಪುಟ: 78 ಬೆಲೆ: ರೂ.80

ಪ್ರಥಮ ಮುದ್ರಣ: 2020

ಪ್ರಕಾಶನ: ಬೆರಗು ಪ್ರಕಾಶನ, ‘ಅವ್ವ’ ಸದನ, ಸಾಯಿಬಾಬಾ ದೇವಸ್ಥಾನದ ಹತ್ತಿರ, ಭಾಗ್ಯನಗರ ರಸ್ತೆ, ಕೊಪ್ಪಳ-583231

ಕವಿ ಶಿ ಕಾ ಬಡಿಗೇರ ಅವರು ಈ ಕವನ ಸಂಕಲನದಲ್ಲಿನ ಕವನಗಳ ಮೂಲಕ ಕಾವ್ಯದ ಸೊಗಸಿನ ಮಾಲೆಯೊಂದಿಗೆ ಕಲ್ಪನೆಯ ಜತೆಗೆ ವಾಸ್ತವ ಬದುಕು, ಸಂದಿಗ್ಧ ಸ್ಥಿತಿಯ ಎದುರಿಸುವ ಚಿತ್ರಣ, ತುಮಲ, ಸಂವೇದನೆ, ಮಾಯದ ಗಾಯಗಳು, ಸಂಬAಧಗಳ ನವಿರು ನೆನಪುಗಳನ್ನು ಹಿಡಿದಿಟ್ಟಿದ್ದಾರೆ.

ಲೋಕವಿಮರ್ಶೆ

ಲೇಖನಗಳು

ರಾಜೇಂದ್ರ ಚೆನ್ನಿ

ಪುಟ: 344 ಬೆಲೆ: ರೂ.300

ಪ್ರಥಮ ಮುದ್ರಣ: 2020

ಪ್ರಕಾಶನ: ಅಭಿರುಚಿ ಪ್ರಕಾಶನ, ನಂ.386, 14ನೆಯ ಮುಖ್ಯರಸ್ತೆ, 3ನೆಯ ಅಡ್ಡರಸ್ತೆ, ಸರಸ್ವತೀಪುರ, ಮೈಸೂರು-570009

ಕಳೆದ ಮೂರು ವರ್ಷಗಳಲ್ಲಿ ಸಮಾಜ ಮುಖಿ ಹಾಗೂ ಇತರ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳ ಸಂಕಲನವಿದು. ಬೆಸಗರಹಳ್ಳಿ ರಾಮಣ್ಣನವರ ಕತೆಗಳು, ಎ.ಕೆ. ರಾಮಾನುಜನ್ ಕಾದಂಬರಿಗಳು, ಬ್ರೆಕ್ಟ್ ಕಾವ್ಯ, ಗಾಂಧಿ ಕಟ್ಟಿ ಕೊಟ್ಟ ರಾಷ್ಟಿçÃಯತೆ, ನಮ್ಮ ಬಿಕ್ಕಟ್ಟುಗಳು, ಅಂಬೇಡ್ಕರ್, ಆಧುನಿಕ ಗುಲಾಮಗಿರಿ, ಮಲೆಗಳಲ್ಲಿ ಮದುಮಗಳು, ಅಂಧಯುಗ, ಪ್ರಾಕೃತ ಜಗದ್ವಲಯ, ಇತರ ಲೇಖನಗಳು ಈ ಪುಸ್ತಕದಲ್ಲಿವೆ. ಚೆನ್ನಿ ಅವರ ಬರಹದ ಸರಳ; ಅಷ್ಟೇ ಮೊನಚಾದ ಶೈಲಿಯನ್ನು ಇಲ್ಲಿನ ಲೇಖನಗಳಲ್ಲಿಯೂ ಕಾಣಬಹುದು.

ಜನನಾಯಕ

ಚಿನುವ ಅಚಿಬೆ ಅವರ ಇಂಗ್ಲಿಷ್ ಮೂಲಕೃತಿ

ಎ ಮ್ಯಾನ್ ಆಫ್ ದಿ ಪೀಪಲ್

ಕನ್ನಡಕ್ಕೆ: ವಿಕ್ರಂ ಚದುರಂಗ

ಪುಟ: 206 ಬೆಲೆ: ರೂ.210

ಪ್ರಥಮ ಮುದ್ರಣ: 2020

ಪ್ರಕಾಶನ: ಚಿಂತನ ಚಿತ್ತಾರ, ಮೂಡಾ ಸಂಕೀರ್ಣ, ಒಂದನೇ ಬ್ಲಾಕ್, ರಾಮಕೃಷ್ಣ ನಗರ, ಆಂದೋ ಲನ ಸರ್ಕಲ್ ಬಳಿ, ಮೈಸೂರು-570022

ಡಾ.ಎಸ್.ಎನ್.ವಿಕ್ರಮ್ ರಾಜ್ ಅರಸ್ ಅವರು ಕನ್ನಡದ ಪ್ರಸಿದ್ಧ ಸಾಹಿತಿ ದಿ. ಚದುರಂಗರ ಪುತ್ರ. ಆಫ್ರಿಕಾದ ನೈಜಿರಿಯಾ ಪ್ರಾಂತ್ಯದ ಅಚಿಬೆ (1930-2013) ಜಾಗತಿಕ ಖ್ಯಾತಿಯ ಬರಹಗಾರ. ಎ ಮ್ಯಾನ್ ಆಫ್ ದಿ ಪೀಪಲ್ ಕೃತಿಯು ಅಚಿಬೆ ಅವರ ರಾಜಕೀಯ ಒಲವು-ನಿಲುವುಗಳ ಹಿನ್ನೆಲೆಯಲ್ಲಿ ರಚಿತವಾಗಿರುವ ಕೃತಿ. ಆಗ ತಾನೆ ಸ್ವಾತಂತ್ರ್ಯ ಗಳಿಸಿದ ಅನಾಮಿಕ ರಾಜ್ಯದ ಕಥೆಯನ್ನು ಹೇಳುತ್ತದೆ. ಕ್ಷಿಪ್ರ ಕ್ರಾಂತಿಯ ತಲ್ಲಣಗಳು, ಸರ್ವಾಕಾರಿ ಧೋರಣೆಗಳು, ನಿರಾಶ್ರಿತರ ಸಮಸ್ಯೆಗಳನ್ನು ಈ ಪುಸ್ತಕದಲ್ಲಿ ವರ್ಣಿಸಲಾಗಿದೆ.

ಬಯಲ ಬೆಳಕು

ವೈಚಾರಿಕ ಲೇಖನಗಳು

ಡಾ.ಬಸವರಾಜ ಸಬರದ

ಪುಟ: 380 ಬೆಲೆ: ರೂ.300

ಪ್ರಥಮ ಮುದ್ರಣ: 2020

ಪ್ರಕಾಶನ: ಕ್ರಿಯಾ ಮಾಧ್ಯಮ, 4ನೇ ಅಡ್ಡ ರಸ್ತೆ, ಮಹಾಲಕ್ಷಿö್ಮ ಬಡಾವಣೆ, ಬೆಂಗಳೂರು-560086

ವಿಚಾರವಾದ-ಜಾಗತೀಕರಣ, ಧರ್ಮ-ದೇವರು, ಸಂಸ್ಕೃತಿ-ಸವಾಲುಗಳು, ಚಳವಳಿ-ಹೋರಾಟ, ಭಾಷೆ-ಶಿಕ್ಷಣ ಮತ್ತು ಮಹಿಳೆ, ಸಂಕೀರ್ಣ ವಿಭಾಗದಲ್ಲಿ ಒಟ್ಟು 27 ಲೇಖನಗಳು ಈ ಕೃತಿಯಲ್ಲಿದೆ. ಕೊನೆಯಲ್ಲಿ ಲೇಖಕರ ಲೇಖನ, ವೈಚಾರಿಕ ಕೃತಿಗಳು, ಪ್ರಕಟಿತ ವಿವರಗಳಿವೆ. ಡಾ. ಬಸವರಾಜ ಸಬರದ ಅವರ ಲೇಖನಗಳಲ್ಲಿ ಸ್ಪಷ್ಟತೆ, ಚಳವಳಿಯ ಕಾವು, ವಿದ್ವತ್, ವೈವಿಧ್ಯ ಇದೆ.

ಕೇಳು ಜನಮೇಜಯ

ಕಾದಂಬರಿ

ಶಿವಾನAದ ಹೊಳೆಪ್ಪನವರ

ಪುಟ: 194 ಬೆಲೆ: ರೂ.200

ಪ್ರಥಮ ಮುದ್ರಣ: 2020

ಪ್ರಕಾಶನ: ಸಾಧನಾ ಪ್ರಕಾಶನ, ಬಸವಲಿಂಗನಗರ, ಮುಧೋಳ, ಜಿ: ಬಾಗಲಕೋಟ

ಮಹಾಭಾರತದ ಕುರಿತು ಅಧ್ಯಯನ, ಪ್ರವಾಸಗಳ ಮೂಲಕ ಅರಿತು ರಚಿಸಿದ ಕೃತಿ ಕೇಳು ಜನಮೇಜಯ. ಕುರುಕ್ಷೇತ್ರ ಯುದ್ಧದ ಬಳಿಕ 36 ವರ್ಷಗಳ ಘಟನೆಗಳನ್ನು ವಸ್ತುವಾಗಿ ಟ್ಟುಕೊಂಡು ಈ ಕಾದಂಬರಿ ರಚಿಸಲಾಗಿದೆ.

ಕಾವ್ಯ ಸಂಗಮ

ಆಯ್ದ ಕವಿತೆಗಳು

ಡಾ. ವಿಜಯಶ್ರೀ ಸಬರದ

ಪುಟ: 308 ಬೆಲೆ: ರೂ.250

ಪ್ರಥಮ ಮುದ್ರಣ: 2019

ಪ್ರಕಾಶನ: ಸಿವಿಜಿ ಇಂಡಿಯಾ, ಕಸ್ತೂರಬಾ ಭವನ, ಗಾಂಧಿ ಭವನ ಆವರಣ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-01

ನಿವೃತ್ತ ಪ್ರಾಧ್ಯಾಪಕಿ ಡಾ.ವಿಜಯಶ್ರೀ ಸಬರದ ಅವರ `ಕಾವ್ಯ ಸಂಗಮ’ದಲ್ಲಿ 1979ರಲ್ಲಿ ಪ್ರಕಟವಾದ ಪ್ರಥಮ ಕವನ ಸಂಕಲನ `ಜ್ವಲಂತ’ದಿAದ ಆರಂಭವಾಗಿ ಇತ್ತೀಚೆಗೆ ಪ್ರಕಟವಾಗಿರುವ `ಆಧುನಿಕ ವಚನಗಳು’ ಸಂಕಲನದವರೆಗಿನ ಆಯ್ದ ಕವನಗಳಿವೆ. ಕಾವ್ಯ ಬರಹದ ಆರಂಭದ ದಿನಗಳಲ್ಲಿದ್ದ ಬಂಡಾಯದ ಗುಣ, ನಂತರದ ದಿನಗಳಲ್ಲಿನ ಕಾವ್ಯಸೂಕ್ಷö್ಮತೆ ಈ ಕೃತಿಯಲ್ಲಿ ಕಂಡುಬರುತ್ತದೆ. ಹಿಂದಿನ ಕೃತಿಗಳಿಂದ ಕವಿತೆಗಳು, ಹಾಡುಗವಿತೆಗಳು, ಹನಿಗವಿತೆಗಳು, ಆಧುನಿಕ ವಚನಗಳನ್ನು ಈ ಕೃತಿಯಲ್ಲಿ ಹೆಕ್ಕಿ ಕೊಡಲಾಗಿದೆ.

ಗಾಂಧಿ ಪ್ರತಿಮೆ

ಪ್ರಬಂಧಗಳು

ಪ್ರೊ.ಎಚ್.ಟಿ.ಪೋತೆ

ಪುಟ: 110 ಬೆಲೆ: ರೂ.95

ಪ್ರಥಮ ಮುದ್ರಣ: 2020

ಪ್ರಕಾಶನ: ಸಪ್ನ ಬುಕ್ ಹೌಸ್, 3ನೇ ಮುಖ್ಯ ರಸ್ತೆ, ಗಾಂಧಿನಗರ, ಬೆಂಗಳೂರು- 560009

`ಗಾಂಧಿ ಪ್ರತಿಮೆ’ ಸಂಕಲನದಲ್ಲಿ ಒಟ್ಟು 12 ಲಲಿತಪ್ರಬಂಧಗಳಿವೆ. `ದೇವರ ಕ್ಲಾಸು’, `ಗಾಂಧಿ ಪ್ರತಿಮೆ’, `ಬಾಡೂಟದ ಪುರಾಣ’, ‘ಆರಣೆ ದುಡ್ಡು’ ಮತ್ತು ಇತರ ಲಲಿತ ಪ್ರಬಂಧಗಳಿವೆ. ಈ ಬರಹಗಳ ಮೂಲಕ ಪ್ರೊ. ಪೋತೆ ಅವರು ಅಂಬೇಡ್ಕರ್, ಬುದ್ಧ, ಬಸವ, ಸಾವಿತ್ರಿಬಾಯಿ ಫುಲೆ ಅವರ ವಿಚಾರಗಳನ್ನು ಓದುಗರಿಗೆ ತಲುಪಿಸುತ್ತಾರೆ. ಹೀಗಾಗಿ ಈ ಲಲಿತಪ್ರಬಂಧಗಳು ಚಿಂತನೆಯ ವಿಸ್ತಾರವನ್ನು ಪಡೆಯುತ್ತವೆ.

ಕೆಂಡದ ನೆರಳು

ಕಾದಂಬರಿ

ವೈ.ಎಸ್. ಹರಗಿ

ಪುಟ: 336 ಬೆಲೆ: ರೂ.350

ಪ್ರಥಮ ಮುದ್ರಣ: 2020

ಪ್ರಕಾಶನ: ಶ್ರೀಗಂಗಾ ಪ್ರಕಾಶನ, ಕೇರಾಫ್ ಮಹಾಬಲೇಶ್ವರ ಎಂ.ಎಸ್., ರಾಮನಬೈಲ್, ಶಿರಸಿ-581401

ಗ್ರಾಮಗಳಲ್ಲಿ ಶೋಷಕರಿಂದ ನರಳುವ ಮುಗ್ಧರ ದಯನೀಯ ಬದುಕನ್ನು ಚಿತ್ರಿಸುತ್ತದೆ ಈ ಕಾದಂಬರಿ. ಈಗಲೂ ಹಲವು ಹಳ್ಳಿಗಳಲ್ಲಿ ಧರ್ಮ, ಆಚರಣೆಯ ಹೆಸರಿನಲ್ಲಿ ಮೌಢ್ಯ, ಕುರುಡು ನಂಬಿಕೆ ಹೇರಲಾಗುತ್ತಿರುವುದನ್ನು ವಿವರಿಸುತ್ತದೆ ‘ಕೆಂಡದ ನೆರಳು’.

ಗೈರ ಸಮಜೂತಿ

(ಒಂದು ಆಧುನಿಕ ಪುರಾಣ)

ರಾಘವೇಂದ್ರ ಪಾಟೀಲ

ಪುಟ: 456 ಬೆಲೆ: ರೂ.450

ಪ್ರಥಮ ಮುದ್ರಣ: 2020

ಇದು ಮಹಾ ಕಾದಂಬರಿ. ಗೈರ ಸಮಜೂತಿ ಎಂದರೆ ತಪ್ಪು ಕಲ್ಪನೆ, ಭ್ರಾನ್ಸಿ ಎಂಬ ಅರ್ಥ ವಿಸ್ತಾರ ಹೊಂದಿದ ಪದ. “ಗೈರ ಸಮಜೂತಿ ಪುಸ್ತಕವು ಸಮಕಾಲೀನ ಸಾಹಿತ್ಯ ಸಂದರ್ಭದ ಒಂದು ಘನವಾದ ಕೃತಿ” ಎಂದು ಹಿರಿಯ ಬರಹಗಾರ ಎಚ್ಚೆಸ್ವಿ ಹೇಳಿದ್ದಾರೆ. ಕನ್ನಡ ಮಣ್ಣಿನ ಭಾಷಾ ಸೊಗಡಿನ ಕಂಪು, ಬದುಕಿನ ನಂಬಿಕೆ, ಜಾತಿ, ಧರ್ಮ, ಮದ, ಮೋಹ, ಮತ್ಸರಗಳು ಈ ಮಹಾ ಕಾದಂಬರಿಯಲ್ಲಿ ಸಹಜವಾಗಿ ಚಿತ್ರಿತವಾಗಿವೆ.

ಕನಸುಗಳು ಖಾಸಗಿ

ಕಥಾಸಂಕಲನ

ನರೇAದ್ರ ಪೈ

ಪುಟ: 100 ಬೆಲೆ: ರೂ.90

ಪ್ರಥಮ ಮುದ್ರಣ: 2020

‘ಕನಸುಗಳು ಖಾಸಗಿ’, ‘ಹಿಂಸಾರೂಪೇಣ’, ‘ರುಕ್ಕುಮಣಿ’ ಸೇರಿದಂತೆ 9 ಕಥೆಗಳ ಸಂಕಲನವಿದು. ಕನ್ನಡ, ತುಳು, ಕೊಂಕಣಿ, ಬ್ಯಾರಿ ಭಾಷೆ ಮತ್ತು ದಕ್ಷಿಣ ಕನ್ನಡ ಪರಿಸರ ನರೇಂದ್ರ ಪೈ ಅವರ ಕಥೆಗಳಲ್ಲಿ ಪ್ರತಿಬಿಂಬಿಸುತ್ತದೆ. ಬದುಕಿನ ಸೂಕ್ಷ್ಮತೆಗಳನ್ನು ಸರಳವಾಗಿ ಬಿಡಿಸಿಡುತ್ತವೆ. ಗಂಭೀರ ವಿಷಯವನ್ನು ಲಘು ಹಾಸ್ಯದಲ್ಲಿ ಹೇಳುವ ಪರಿ ಕಥೆಗಳನ್ನು ಆಪ್ತವಾಗಿಸುತ್ತದೆ.

ಗಲ್ಲುಗಂಬದ ಆತಂಕದಲ್ಲಿ

ಮರಣದAಡನೆಗೀಡಾದ ಕೈದಿಗಳ ಕಥೆಗಳು

ಡಾ.ಡಿ.ವಿ.ಗುರುಪ್ರಸಾದ್

ಪುಟ: 144 ಬೆಲೆ: ರೂ.140

ಪ್ರಥಮ ಮುದ್ರಣ: 2020

ಈ ಪುಸ್ತಕ ಮರಣದಂಡನೆ ಶಿಕ್ಷೆಗೆ ಈಡಾಗಿರುವ ಕೈದಿಗಳ ಕಥೆಗಳ ಸಂಕಲನ. ಇದರಲ್ಲಿ ಏಳು ಕಥೆಗಳಿವೆ. ಲೇಖಕರು ಇವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲವಾದರೂ ಅವರ ಕಥೆಗಳನ್ನು ಪೊಲೀಸ್ ಅಧಿಕಾರಿಗಳ ಸಂದರ್ಶನಗಳು ಮತ್ತು ನ್ಯಾಯಾಲಯದ ಕಡತಗಳ ಮೂಲಕ ಸಂಗ್ರಹಿಸಿದ್ದಾರೆ. ಪುಣೆಯ ಅಭಯಂಕರ್ ಕುಟುಂಬದ ಹತ್ಯೆ, ಕೊಲ್ಕತ್ತಾದಲ್ಲಿ ನಡೆದ ಬಂಗಾಳದ ನಿರ್ಭಯಾ ಅಪರಾಜಿತ, ಚಿಗುರಲ್ಲೇ ಚಿವುಟಿಹೋದ ಅಮಾಯಕ ಮಕ್ಕಳು, ಉತ್ತರ ಕರ್ನಾಟಕದ ಟ್ಯಾಕ್ಸಿ ಹಂತಕರು ಮತ್ತು ಇತರ ಲೇಖನಗಳು ಈ ಕೃತಿಯಲ್ಲಿವೆ.

ತಂಬಿಟ್ಟು

ನಗೆಬರಹಗಳ ಸಂಕಲನ

ಪ್ರಶಾAತ ಆಡೂರ

ಪುಟ: 172 ಬೆಲೆ: ರೂ.160

ಪ್ರಥಮ ಮುದ್ರಣ: 2020

ಹುಬ್ಬಳ್ಳಿ-ಧಾರವಾಡ ಜವಾರಿ ಕನ್ನಡದ ಸೊಗಸಿನ 30 ನಗೆಬರಹಗಳ ಸಂಕಲನವಿದು. ‘ಕೈಗೆತ್ತಿಕೊಂಡು ಓದಲಾರಂಭಿಸಿದರೆ ಯಾರೇ ಆದರೂ ಪೂರ್ತಿ ಓದಿ ಮುಗಿಸದೆ ಕೆಳಗಿಡಲಾರರು’ ಎಂಬ ಮುನ್ನುಡಿಯಲ್ಲಿ ಎಚ್.ದುಂಡಿರಾಜ್ ಬರೆದಿರುವುದು ದಿಟವಾದದ್ದು. ಈ ಬರಹಗಳನ್ನು ಓದಿದಾಗ ಮನಸ್ಸು ಪ್ರಪುಲ್ಲವಾಗುತ್ತದೆ. ಜೀವನವೆಂಬುದು ಜಂಜಾಟಗಳ ಸಂತೆ ಎಂದುಕೊAಡವರಿಗೆ ಅದರಲ್ಲಿಯೇ ಹಾಸ್ಯದ ಹಾಯಿದೋಣಿಯನ್ನು ಪ್ರಶಾಂತ ಆಡೂರ ತೆರೆದಿಡುತ್ತಾರೆ.

ಚಾಂದನಿ ಚೌಕ್

ಕಥಾ ಸಂಕಲನ

ಬಸವರಾಜ ಡೋಣೂರ

ಪುಟ: 150 ಬೆಲೆ: ರೂ.140

ಪ್ರಥಮ ಮುದ್ರಣ: 2020

9 ಕಥೆಗಳನ್ನು ಒಳಗೊಂಡಿರುವ ಚಾಂದನಿ ಚೌಕ್ ಪುಸ್ತಕವು ಬಸವರಾಜ ಡೋಣೂರರ ಆರನೆಯ ಕಥಾ ಸಂಕಲನ. ವಿಜಯಪುರ ಜಿಲ್ಲೆಯ ಶಾಂತನಾಳ ಗ್ರಾಮದೊಂದಿಗೆ ಬೆಸೆದುಕೊಂಡ ಜನಜೀವನದ ಕಥೆಗಳಿವು. ಜನಸಾಮಾನ್ಯರ ಬದುಕಿನ ಕ್ರರ‍್ಯ, ನಿಷ್ಕಲ್ಮಷ ಪ್ರೇಮ, ಉದಾತ್ತ ಚಿಂತನೆಗಳು ಇಲ್ಲಿನ ಕಥೆಗಳಲ್ಲಿ ಒಡಮೂಡಿವೆ.

Leave a Reply

Your email address will not be published.