ಹೊಸ ಪುಸ್ತಕ

ಒಡಲಾಳದ ಧ್ವನಿ

ಕವನ ಸಂಕಲನ

ಉತ್ತಮ ಎ.ದೊಡ್ಮನಿ

ಪುಟ: 60 ಬೆಲೆ: ರೂ.75

ಪ್ರಥಮ ಮುದ್ರಣ: 2020

ಬುದ್ಧಾಂಕುರ ಪ್ರಕಾಶನ, ಮು: ರಾಮನಗರ, ಪೋ: ಕಪನೂರ, ಕೇಂದ್ರಿಯ ಅಬಕಾರಿ ಕಚೇರಿ ವಸತಿಗೃಹ ಹತ್ತಿರ, ಹುಮನಾಬಾದ್ ರಿಂಗ್ ರಸ್ತೆ, ಕಲಬುರಗಿ- 585104

36 ಕವನಪುಷ್ಪಗಳಿಂದ ಹೆಣೆದ ಮಾಲೆ ಈ ಕೃತಿ; ಉತ್ತಮ ದೊಡ್ಮನಿ ಅವರ ಮೊದಲ ಕವನಸಂಕಲನ. ದಲಿತ ಪ್ರಜ್ಞೆ, ಯುವ ವಯಸ್ಸಿನ ಬಿಸಿ-ಬಂಡಾಯದ ಗುಣ ಇಲ್ಲಿನ ಕವನಗಳಲ್ಲಿವೆ. ಈ ಯುವ ಕವಿ ಇನ್ನಷ್ಟು ಮಾಗಿದರೆ, ಅನುಭವ ಸಂಪನ್ನನಾದರೆ ಗಟ್ಟಿತನದ ಕವನಗಳು ಇವರಿಂದ ಹೊರಹೊಮ್ಮುವ ಸಾಧ್ಯತೆಗಳು ಹೆಚ್ಚಿವೆ.

ಚರಕ ಸಂಹಿತೆ

ರOಗರೂಪ

ಪ್ರೊ.ಸತ್ಯನಾರಾಯಣರಾವ್ ಅಣತಿ

ಪುಟ: 100 ಬೆಲೆ: ರೂ.68

ಪ್ರಥಮ ಮುದ್ರಣ: 2020

ಪ್ರಕಟಣೆ: ಕರ್ನಾಟಕ ಗಾಂಧೀ ಸ್ಮಾರಕ ನಿಧಿ, ಗಾಂಧೀ ಭವನ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001

ಸ್ವಾತಂತ್ರ್ಯ ಸಂಗ್ರಾಮದ ಸ್ಮರಣೆಯಲ್ಲಿ ಬರೆದ ನಾಟಕವಿದು. ಗುರು-ಶಿಷ್ಯರ ಮಾತುಕತೆ, ಪ್ರಶ್ನೋತ್ತರಗಳ ಚರ್ಚೆ ಮೂಲಕ ಗಾಂಧಿ ವಿಚಾರಗಳನ್ನು, ನಡೆಯನ್ನು ಅರಿಯುವ ಪ್ರಯತ್ನ ಈ ನಾಟಕದಲ್ಲಿ ಮಾಡಲಾಗಿದೆ. ಈ ಮಾತುಕತೆಗಳು ಕುತೂಹಲಕರವಾಗಿ ತೆರೆದುಕೊಳ್ಳುತ್ತವೆ. ಸ್ವದೇಶಿ ಚಳವಳಿ, ಚರಕ, ಖಾದಿ, ಸ್ವಚ್ಛತೆ, ಸ್ವಾತಂತ್ರ್ಯ ಹೋರಾಟ, ಗಾಂಧಿ ಅವರ ನಿಲುವುಗಳು, ಭಜನೆಗಳನ್ನು ಇಲ್ಲಿ ಎಚ್ಚರಿಕೆಯಿಂದ ಹೆಣೆಯಲಾಗಿದೆ.

ಬಹುಮುಖಿ

ವಿಮರ್ಶಾ ಸಂಕಲನ

ಡಾ.ಜಗದೀಶ ಕೆರೆನಳ್ಳಿ

ಪುಟ: 196 ಬೆಲೆ: ರೂ.180

ಪ್ರಥಮ ಮುದ್ರಣ: 2020

ಪೃಥ್ವಿ ಪ್ರಕಾಶನ, ನಂ.07, 9ನೇ ತಿರುವು, 7ನೇ ಮುಖ್ಯರಸ್ತೆ, ವಿವೇಕಾನಂದ ನಗರ, ಮೈಸೂರು-570023

ಕನ್ನಡ ಸಾಹಿತ್ಯ, ಸಾಂಸ್ಕೃತಿಕ ವಿಷಯಗಳು, ಶಾಸನಗಳು, ಸಾಹಿತಿಗಳು, ತತ್ತ÷್ವಪದ ಸಾಹಿತ್ಯ ಸಂಪಾದನೆಯ ಸವಾಲುಗಳು, ತತ್ವಪದಕಾರರು, ಸಮುದಾಯಗಳ ಅಸ್ಮಿತೆಯ ಕಾವ್ಯ ಕುರಿತ ಲೇಖನಗಳು, ವಿಮರ್ಶೆ ಈ ಕೃತಿಯಲ್ಲಿದೆ. ಕನ್ನಡ ಕಾಲಜ್ಞಾನ ವಿಶ್ಲೇಷಣೆ, ಹೊಳಲ್ಕೆರೆ ತಾಲೂಕಿನ ಕೆರೆಗಳ ಸಾಂಸ್ಕೃತಿಕ ಅವಲೋಕನವೂ ಸೇರಿದೆ.

ಹಾವೇರಿಯಾಂವ್

ಅOಕಣ ಬರಹಗಳು

ಮಾಲತೇಶ ಅಂಗೂರ

ಪುಟ: 232 ಬೆಲೆ: ರೂ.200

ಪ್ರಥಮ ಮುದ್ರಣ: 2020

ಶ್ರಮಿಕ ಪ್ರಕಾಶನ, ಕೂಲಿಯವರ ಓಣಿ, ಹಾವೇರಿ.

ಕಾಕಾ ಕಾಲಮ್‌ನಲ್ಲಿ ಬರೆದ 44 ಅಂಕಣ ಬರಹಗಳ ಪುಸ್ತಕ. ಆ ಸಮಯದಲ್ಲಿ ನಡೆದ ಘಟನೆಗಳನ್ನು ಹಾಸ್ಯಮಯವಾಗಿ ಬರೆದಿದ್ದಾರೆ ಮಾಲತೇಶ ಅಂಗೂರ. ಶಾಸಕರು ರೆಸಾರ್ಟ್ನಲ್ಲಿ… ಅಧಿಕಾರಿಗಳು ಎಸಿ ರೂಂನಲ್ಲಿ…, ಪಾರ್ಲಿಮೆಂಟ್ ಅಂದ್ರ ಇವ್ರು ಮಾವುನ ಮನಿ ಅಂತ್ ತಿಳಕ್ಕಂಡಾರೇನೂ, ಮೋಜಿನಾಗೆ ಎಲ್ಲೆಯ ದಾಟಿ ಮೋಡಿಯ… ಇತರ ಲೇಖನಗಳು ಗ್ರಾಮೀಣ ಭಾಷೆಯೊಂದಿಗೆ ಮೆರಗು ಪಡೆದಿವೆ.

ಬೃಹತ್ ಶಿಲಾಯುಗದ ನೆಲೆ ಹಿರೇಬೆಣಕಲ್ ಚಾರಣ

ವಿಶಿಷ್ಠ ಅನುಭವದ ಹೂರಣ

(ಇಂಗ್ಲಿಷ್ ಆವೃತ್ತಿ ಸಹಿತ)

ಮಂಜುನಾಥ ಗುಡ್ಲಾನೂರ (ಮಗು)

ಪುಟ: 112 ಬೆಲೆ: ರೂ.200

ಪ್ರಥಮ ಮುದ್ರಣ: 2020

ಶ್ರೀಮತಿ ಲಕ್ಷಿö್ಮÃದೇವಿ ಮಂಜುನಾಥ ಗುಡ್ಲಾನೂರ ಪರಿಸರ ಪಬ್ಲಿಕೇಷನ್, ಸಿದ್ದಾಪುರ ಬಡಾವಣೆ, ಗಂಗಾವತಿ-583227

ಗOಗಾವತಿಯ ಹಿರೇಬೆಣಕಲ್ ಮೋರೇರ ಬೆಟ್ಟ ಬೃಹತ್ ಶಿಲಾಯುದ ಅಚ್ಚರಿಯ ಸ್ಮಾರಕಗಳ ತಾಣವೆಂಬುದು ಹೆಚ್ಚಿನ ಕನ್ನಡಿಗರಿಗೆ ತಿಳಿದಿಲ್ಲ. ಹೀಗಾಗಿ ಚಾರಣಿಗರಿಂದಲೂ ಈ ತಾಣ ದೂರವಾಗಿದೆ. ಈ ಪ್ರದೇಶದ ಸೌಂದರ್ಯ, ದೊಡ್ಡ ದೊಡ್ಡ ಕಲ್ಲುಗಳು, ಆ ಕಲ್ಲುಗಳ ಮೇಲಿನ ಚಿತ್ರ ಸೌಂದರ್ಯ, ಶಿಲಾ ಸಮಾಧಿ, ಶಿಲಾ ಹೊದಿಕೆಯ ಮನೆಗಳ ಕುರಿತ ಮಾಹಿತಿಯನ್ನು ಈ ಕೃತಿ ನೀಡುತ್ತದೆ.

ಕೊಲ್ಲುವವನೇ ದೇವರಾದನಲ್ಲ

ಕವನ ಸಂಕಲನ

ಶಿಲ್ಪ ಬೆಣ್ಣೆಗೆರೆ

ಪುಟ: 72 ಬೆಲೆ: ರೂ.80

ಪ್ರಥಮ ಮುದ್ರಣ: 2020

ಎನ್.ಕೆ.ಪ್ರಕಾಶನ, ನಂ.239/63, ಕಾಳೇಗೌಡ ಬಡಾವಣೆ, ರಾಜರಾಜೇಶ್ವರಿನಗರ, ಬೆಂಗಳೂರು-560098

ನಿಲುಗOಬ, ನಾಡನವಿಲು, ಯಯಾತಿಯ ಮಕ್ಕಳು, ದೇವಿ ಮಹಿಮೆ, ಮಳೆಯ ಉಮೇದು, ಮಲ್ಲಿಗೆಯ ಕೊಳ್ಳಿಯಂತಹ 44 ಕವನಗಳ ಸಂಕಲನವಿದು. ಕವಯಿತ್ರಿಯ ಚೊಚ್ಚಲ ಸಂಕಲನ. ವರ್ತಮಾನದ ತಲ್ಲಣಗಳಿಗೆ ಸ್ಪಂದನೆ ಇಲ್ಲಿನ ಕವನಗಳಲ್ಲಿದೆ.

ನೂರೊಂದು ನೆನಪು

ಕವನ ಸಂಕಲನ

ಸುಭಾಷ ಬಿ.ಎಂ. ಸಂಡೂರು

ಪುಟ: 74 ಬೆಲೆ: ರೂ.60

ಪ್ರಥಮ ಮುದ್ರಣ: 2017

ಸ್ವಾತಿ ಪ್ರಕಾಶನ, ಕೂಡ್ಲಿಗಿ-583135, ಬಳ್ಳಾರಿ ಜಿಲ್ಲೆ

ಕನ್ನಡಿಗ ಶಿವಾಜಿ, ಬಸವೇಶ್ವರ, ಸುಭಾಷ್‌ಚಂದ್ರ ಬೋಸ್, ನ್ಯಾಯದೇವತೆ, ಕುತೂಹಲ, ಕಾಮನಬಿಲ್ಲು, ಗಡಿ ರಾಜ್ಯ, ಈ ಲೋಕವೆಲ್ಲ ಮಾಯೆ ಸೇರಿದಂತೆ 80 ಸಣ್ಣ ಹಾಗೂ ಪುಟ್ಟ ಕವನಗಳ ಸಂಕಲನ ನೂರೊಂದು ನೆನಪು.

ನಿರುತ್ತರ

ಕವಿತೆಗಳು

ಕೆ.ಬಿ.ವೀರಲಿಂಗನಗೌಡ್ರ

ಪುಟ: 40 ಬೆಲೆ: ರೂ.50

ಪ್ರಥಮ ಮುದ್ರಣ: 2020

ಕಾಗದ ಸಾಂಗತ್ಯ ಪ್ರಕಾಶನ, ರಾಣಿ ಬೆನ್ನೂರ-581115

ಕಡಿಮೆ ಪದಗಳಲ್ಲಿ, ಪುಟ್ಟ ಪುಟ್ಟ ಸಾಲುಗಳಲ್ಲಿ ನಿರ್ಮಿತವಾದ ಕವನಗಳು ಇಲ್ಲಿವೆ. ಪ್ರೀತಿಯೆಂದರೆ, ತಂಗಾಳಿ, ಅಲ್ಲಮರ ಬಯಲು, ಚಿತ್ರಸಂತೆ, ಶುಗರ್‌ಲೆಸ್ ಸೇರಿದಂತೆ 26 ಕವನಗಳ ಸಂಕಲನವಿದು.

ಟಿವಿ ಮಾಧ್ಯಮದಲ್ಲಿ ದುಡಿವ ಮಹಿಳೆ

ಡಾ.ಶರಣು ಹುಲ್ಲೂರು

ಪುಟ: 260 ಬೆಲೆ: ರೂ.250

ಪ್ರಥಮ ಮುದ್ರಣ: 2020

ಕಾಯಕ ಪ್ರಕಾಶನ, #91, 1ನೇ ಮೈನ್ ದತ್ತಾತ್ರೇಯ ನಗರ, ನರಗುಂದ ಫಾರ್ಮಸಿ ಕಾಲೇಜ್ ಹತ್ತಿರ, ಹೊಸಕೆರೆಹಳ್ಳಿ, ಬನಶಂಕರಿ 3ನೇ ಹಂತ, ಬೆಂಗಳೂರು-85

ವಿದ್ಯುನ್ಮಾನ ಮಾಧ್ಯಮದಲ್ಲಿ ದುಡಿಯುವ ಸಮಸ್ಯೆಗಳು, ಸವಾಲುಗಳು, ಕೌಟುಂಬಿಕ ಪರದಾಟಗಳು, ಆರ್ಥಿಕ ಸಮಸ್ಯೆಗಳು, ಕನಸು ಕನವರಿಕೆಗಳ ಕುರಿತ ಲೇಖನಗಳು ಈ ಪುಸ್ತಕದಲ್ಲಿವೆ. ಹೊರನೋಟದಲ್ಲಿ ಆಕರ್ಷಣೆ ಬೀರುವ ಕ್ಷೇತ್ರದಲ್ಲಿ ಮಹಿಳೆಯರು ವಾಸ್ತವವಾಗಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಲೇಖನಗಳು ವಿವರಿಸುತ್ತವೆ.

ಬಾಬಾ ಸಾಹೇಬ ಮತ್ತು….

ಮಕ್ಕಳ ಕಥೆಗಳು

ಡಾ.ಕಮಲಾ ಹಂಪನಾ

ಪುಟ: 327 ಬೆಲೆ: ರೂ.250

ಪ್ರಥಮ ಮುದ್ರಣ: 2020

ಪ್ರಕಾಶಕರು: ಸ್ವಪ್ನ ಬುಕ್ ಹೌಸ್, ನಂ. 11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-560009

ಈ ಪುಸ್ತಕದಲ್ಲಿ ಬಾಬಾ ಸಾಹೇಬ ಡಾ.ಬಿ.ಆರ್. ಅಂಬೇಡ್ಕರ್, ಗರ್ವಭಂಗದ ಕಥೆಗಳು, ವೀರವನಿತೆ ಓಬವ್ವೆ, ಅಕ್ಕಮಹಾದೇವಿ, ಜನ್ನ, ಹೆಳವನಕಟ್ಟೆ ಗಿರಿಯಮ್ಮ, ಅವಂತೀ ಸುಕುಮಾರ ಮತ್ತು ಇತರ ಕಥೆಗಳಿವೆ. ಗರ್ವಭಂಗದ ಕಥೆಗಳು ವಿಭಾಗದಲ್ಲಿ ಗಣೇಶ: ಷಣ್ಮುಖ, ಭರತೇಶನ ಕಿರುಬೆರಳು: ಸೈನಿಕರು, ಹನುಮಂತ: ಭೀಮಸೇನ, ಚಾವುಂಡರಾಯ: ಗುಳಕಾಯಜ್ಜಿ, ಹನುಮಂತ: ಗರುಡ ಇತರ ಕಥೆಗಳಿವೆ.

ಕನ್ನಡ ಮಕ್ಕಳ ಕಂಠಾಭರಣ

ಮಕ್ಕಳಿಗಾಗಿ ಕವನಗಳು

ಇಂದಿರಾ ಹಾಲಂಬಿ

ಪುಟ: 120 ಬೆಲೆ: ರೂ. 120

ಪ್ರಥಮ ಮುದ್ರಣ: 2009

ಇಂದಿರಾ ಹಾಲಂಬಿ, ಸಂದೀಪ ಸಾಹಿತ್ಯ, ಆತ್ರಾಡಿ, ಉಡುಪಿ-576107

ಎಳೆಯರಿಂದ ಪ್ರೌಢಶಾಲಾ ಹಂತದವರೆಗಿನ ಮಕ್ಕಳು ಹಾಡಿ ನಲಿಯುವ ಕವನಗಳು ಸಂಕಲನದಲ್ಲಿವೆ. 90 ಕವನಗಳ ಪೈಕಿ 10 ಕಥನ ಕವನಗಳು. ಪುಟ್ಟಿಯ ಶಾಲೆ, ಸಂಜೆಯ ಹೊತ್ತು, ಕನ್ನಡ ಕಸ್ತೂರಿ, ತಂಗಿಯ ಹಾಡು, ಚೌತಿ ಗಣಪ, ಹುಲಿರಾಯ, ಪಂಚಮಿ ಹಬ್ಬ, ಕಂದನ ಕನಸು, ತೆರನೆಳೆಯ ಬನ್ನಿರಿ, ಇತರ ಕವನಗಳು ಮುದ ನೀಡುತ್ತವೆ.

 

ಸೀತಾಳೆದಂಡೆಯ ಸದ್ದಿಲ್ಲದ ಕಥೆಗಳು

ಭಾರತಿ ಹೆಗಡೆ

ಪುಟ: 246 ಬೆಲೆ: ರೂ.220

ಪ್ರಥಮ ಮುದ್ರಣ: 2019

ಕೊಂಕಣಿ ಚೌಡಿ ಮತ್ತು ದುಗ್ಗತ್ತೆ, ಗೋಡೆಯೊಂದಿಗೆ ಮಾತನಾಡುವ ಅವಳು!, ಸೀರೆ ಕದಿಯೋ ಶಾಮಣ್ಣ, ದಿಗ್ಭçಮೆ ವೆಂಕಟ್ರಮಣನ ದಶಾವತಾರಂಗಳು, ಪಾರ್ವತಿ-ಗಣಪಿಯರೆಂಬ ಜೀವಕೊರಳ ಗೆಳತಿಯರು ಸೇರಿದಂತೆ 17 ಕಥೆಗಳ ಸಂಕಲನವಿದು. ಉತ್ತರ ಕನ್ನಡ ಜಿಲ್ಲೆಯ ಪರಿಸರ ಮತ್ತು ಅಲ್ಲಿನ ಹವ್ಯಕ ಭಾಷೆಯೊಂದಿಗೆ ಕಥೆಗಳನ್ನು ಹೆಣೆಯಲಾಗಿದೆ.

ಮಣ್ಣಿನ ಗೆಳತಿ

ಕೃಷಿ ಮಹಿಳೆಯರ ಅನುಭವ ಕಥನ

ಭಾರತಿ ಹೆಗಡೆ

ಪುಟ: 192 ಬೆಲೆ: ರೂ.180

ಪ್ರಥಮ ಮುದ್ರಣ: 2019

ಒಡಲು ತಂಪಾಗಿಸಿದ ವಸುಂಧರೆಯರು, ಕೃಷಿ ಎಂದರೆ ಧರ್ಮ ಅವಳಿಗೆ, ಲಕ್ಕವ್ವನ ಹಸಿರ ಹೆಜ್ಜೆಗಳು, ಲಕ್ಷö್ಮಜ್ಜಿಯ ತೋಟ, ಸೊಪ್ಪು ಯಮುನಾ, ಬೀಜ ಮಾತೆಯರು ಸೇರಿದಂತೆ 38 ಕೃಷಿ ಸಾಧಕಿಯರ ಕುರಿತ ಲೇಖನಗಳ ಗುಚ್ಛ ಇದು. ರೈತ ಮಹಿಳೆಯರ ಮೌನ ಕೃಷಿ ಸಾಧನೆ ಇಲ್ಲಿ ಅನಾವರಣಗೊಂಡಿದೆ.

ದೀಪದೊಳಗಿನ ದೀಪ

ವೈದೇಹಿ

ಪುಟ: 152 ಬೆಲೆ: ರೂ.140

ಪ್ರಥಮ ಮುದ್ರಣ: 2020

ಹಿರಿಯ ಲೇಖಕಿ ವೈದೇಹಿ ಅವರ 88 ಕವನಗಳ ಸಂಕಲನ. ಭಾಗ-1ರಲ್ಲಿ ನಾನಾ ಪ್ರಕಾರದ ಕವನಗಳು, ಮಕ್ಕಳ ನಾಟಕದ ಹಾಡುಗಳು, ಬಿಂದುಸಾರ, ಅಸ್ತಮಾನದ ಕವಿತೆಗಳಿವೆ. ಭಾಗ-2ರಲ್ಲಿ ವಿದಾಯಗೀತೆ, ಶ್ರೀ ದತ್ತಾತ್ರೇಯ ಜನನ ಕವನಗಳಿವೆ. ಸಮಕಾಲೀನ ವಿಷಯಗಳ ಸ್ಪಂದನೆಯ ಜತೆಗೆ ವೈಭವ, ಪ್ರತಿಮೆ, ಸಂಕೇತಗಳು, ರೂಪಕಗಳು, ಉಪಮೆಗಳ ಹಂಗಿಗೆ ಹೆಚ್ಚು ಒಳಗಾಗದೆ ನೇರ ದಾರಿಯಲ್ಲಿ ಸಾಗಿರುವುದು ಇಲ್ಲಿನ ಕವನಗಳ ವಿಶೇಷ.

ಮೇಲಿನ ಮೂರೂ ಪುಸ್ತಕಗಳ ಪ್ರಕಾಶಕರು: ವಿಕಾಸ ಪ್ರಕಾಶನ, ನಂ. 1541, 16ನೇ ಮುಖ್ಯರಸ್ತೆ, ಎಂ.ಸಿ.ಲೇಔಟ್, ವಿಜಯನಗರ, ಬೆಂಗಳೂರು-560040

 

ಅಗಮ್ಯ

ಕಥಾ ಸಂಕಲನ

ಸಿದ್ಧಲಿOಗ ಪಟ್ಟಣಶೆಟ್ಟಿ

ಪುಟ: 228 ಬೆಲೆ: ರೂ.228

ಪ್ರಥಮ ಮುದ್ರಣ: 2020

14 ಕಥೆಗಳ ಸಂಕಲನವಿದು. ಹಳ್ಳಿ ಜೀವನದ ಸೊಗಡು, ಗಂಡು-ಹೆಣ್ಣಿನ ಸಂಬAಧಗಳ ಸಂಕೀರ್ಣತೆ, ತಿರುವುಗಳು, ಭಾವನಾತ್ಮಕ ಬದುಕು ವಾಸ್ತವದ ಮೇಲೆ ಬೀರುವ ಪರಿಣಾಮಗಳನ್ನು ಇಲ್ಲಿನ ಕಥೆಗಳಲ್ಲಿ ಕಾಣಬಹುದು. ಉತ್ತರ ಕರ್ನಾಟಕದ ಭಾಷೆ ಆಪ್ತತೆ ಒದಗಿಸುತ್ತದೆ.

ರಂಗ ವೃತ್ತಾಂತ

ರOಗಭೂಮಿ ಮತ್ತು ನಾಟಕ ಕುರಿತ ಲೇಖನಗಳು

ಡಾ.ಹೇಮಾ ಪಟ್ಟಣಶೆಟ್ಟಿ

ಪುಟ: 180 ಬೆಲೆ: ರೂ.160

ಪ್ರಥಮ ಮುದ್ರಣ: 2020

ಬೇಂದ್ರೆ ನಾಟ್ಯಯೋಗ, ನಾಟಕ ಸಾಹಿತ್ಯದಲ್ಲಿ ಸ್ತಿçà ಸಂವೇದನೆ, ಸರಸ್ವತಿಬಾಯಿ ರಾಜವಾಡೆಯವರ ನಾಟಕಗಳು ಸೇರಿದಂತೆ 12 ಲೇಖನಗಳು ಇಲ್ಲಿವೆ. ವೃತ್ತಿ ಮತ್ತು ಹವ್ಯಾಸಿ ರಂಗ ಕಲಾವಿದೆಯವರ ನೋವು-ತಲ್ಲಣಗಳು ಬರಹದಲ್ಲಿ ಪ್ರತಿಬಿಂತವಾಗಿವೆ.

ಚಿಂತಾಮಣಿ

ಕವಿತೆಗಳು

ಸಿದ್ಧಲಿOಗ ಪಟ್ಟಣಶೆಟ್ಟಿ

ಪುಟ: 156 ಬೆಲೆ: ರೂ.140

ಪ್ರಥಮ ಮುದ್ರಣ: 2020

ಉಳುಕು, ಶಂಕೆ, ನಿರಾಳ, ಸಖೀಸಂವಾದ, ಗೋವಿಂದ ಪಥ, ಹರಿಗೀತ, ಆರಾಧನೆ, ಅವತರಣ ಸೇರಿದಂತೆ 44 ಕವಿತೆಗಳನ್ನು ಈ ಸಂಕಲನದಲ್ಲಿ ಅಳವಡಿಸಲಾಗಿದೆ. ಕನಸು, ಬಕಧ್ಯಾನ, ಮನೆ, ಇತರ ಪುಟ್ಟ ಕವಿತೆಗಳು ಇಲ್ಲಿವೆ. ತೀರ್ಥಯಾತ್ರೆ ಕವನ ನಾಲ್ಕುವರೆ ಪುಟದಲ್ಲಿ ದೀರ್ಘವಾಗಿ ಮೂಡಿದೆ.

ಮೇಲಿನ ಮೂರು ಪುಸ್ತಕಗಳ ಪ್ರಕಾಶಕರು: ಅನನ್ಯ ಪ್ರಕಾಶನ, ‘ಹೂಮನೆ’, ಶ್ರೀದೇವಿನಗರ, ವಿದ್ಯಾಗಿರಿ, ಧಾರವಾಡ-580004.

Leave a Reply

Your email address will not be published.