ಹೊಸ ಪುಸ್ತಕ

ಇಂತಿ ನಮಸ್ಕಾರಗಳು

ಕವನ ಸಂಕಲನ

ಪ್ರಕಾಶ್ ಕೊಡಗನೂರ್

ಪುಟ: 128 ಬೆಲೆ: ರೂ.150

ಪ್ರಥಮ ಮುದ್ರಣ: 2019

ಪ್ರಕೃತಿ ಪ್ರಕಾಶನ, ರೈಲ್ವೇ ನಿಲ್ದಾಣ ಹತ್ತಿರ, ಕೊಡಗನೂರು, ದಾವಣಗೆರೆ-577534

ಭಲೇ ಭಾರತ, ನಿವೇದನೆ ಮಹಾಸಂಗಮ, ಅಮರ, ಅರುಣೋದಯ, ಮಹಾಪತನ, ನಮ್ಮೂರ ಬಾಷ, ಇತರ 40 ಕವನಗಳು ಈ ಸಂಕಲನದಲ್ಲಿವೆ. ಬಂಡಾಯದ ನಡುವೆ ಮಾನವೀಯತೆಯ ಪದರು ಹೊದ್ದಿರುವ ಕವನಗಳಿವು.

ಸಂಗೀತಗಾರರು ಹಾಸ್ಯ ಪ್ರಸಂಗಗಳು

ಎಸ್.ಶಶಿಧರ್

ಪುಟ: 115 ಬೆಲೆ: ರೂ.120

ಪ್ರಥಮ ಮುದ್ರಣ: 2015

ಎಸ್.ಶಶಿಧರ್, 43/220, ಈಸ್ಟ್‍ಪಾರ್ಕ್ ರಸ್ತೆ, 17ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-560055

ಆನೂರು ಅನಂತಕೃಷ್ಣ ಶರ್ಮ, ಕದ್ರಿ ಗೋಪಾಲನಾಥ್, ಚೆಂಬೈ ವೈದ್ಯನಾಥ ಭಾಗ ವತರು, ಟೈಗರ್ ವರದಾಚಾರ್, ಟಿ.ಬೃಂದಾ-ಟಿ.ಮುಕ್ತಾ, ಟಿ.ಎನ್.ಶೇಷಗೋಪಾಲನ್, ಎಂ.ಬಾಲಮುರಳಿಕೃಷ್ಣ, ಹೊನ್ನಪ್ಪ ಭಾಗವತರ್, ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಸೇರಿದಂತೆ 39 ಸಂಗೀತ ವಿದ್ವಾಂಸರ ಸಂಗೀತ ಕಛೇರಿ ಮತ್ತು ಆ ಬಳಿಕ ನಡೆದ ಹಾಸ್ಯ ಪ್ರಸಂಗಗಳನ್ನು ಸಂಗ್ರಹಿಸಿ ಕೃತಿಯಲ್ಲಿ ನೀಡಲಾಗಿದೆ. ಅನಾಮಧೇಯ ಪ್ರಸಂಗಗಳೂ ಇಲ್ಲಿವೆ.

ಭಾವದ ಅಲೆಗಳು

ಶೋಭ ಚೆಲುವಯ್ಯ

ಪುಟ: 58 ಬೆಲೆ: ರೂ.50

ಪ್ರಥಮ ಮುದ್ರಣ: 2019

ವಿವೇಕ ದೀಕ್ಷಾ ಪ್ರಕಾಶನ, ಮುಮ್ಮಡಿಕಾವಲು, ಪಿರಿಯಾಪಟ್ಟಣ ತಾಲ್ಲೂಕು, ಮೈಸೂರು ಜಿಲ್ಲೆ.

ಶೋಭ ಚೆಲುವಯ್ಯ ಅವರು ಶಿಕ್ಷಕಿಯಾಗಿರುವ ಕಾರಣ ಅವರ ಕವನಗಳಲ್ಲಿ ಮಕ್ಕಳ ಒಡನಾಟ ಸಮೃದ್ಧವಾಗಿ ಕಾಣುತ್ತೇವೆ. ನನ್ನ ಶಾಲೆಯ ಮಕ್ಕಳು, ಪ್ರವಾಸದ ಪ್ರಹಸನ, ರಾಜಾರಾಣಿ, ಸಂಜೆ ಮಳೆ ಕವನಗಳಲ್ಲಿ ಈ ಒಡನಾಟ ಚಿತ್ರಿತವಾಗಿದೆ. 25 ಕವನಗಳು ಇಲ್ಲಿವೆ.

ಡಾ.ವಿಕ್ರಮ ವಿಸಾಜಿ

ಬದುಕು-ಬರಹ

ಸಂಪಾದಕರು: ಆದರ್ಶ ವಿಸಾಜಿ

ಪುಟ: 88 ಬೆಲೆ: ರೂ.50

ಪ್ರಥಮ ಮುದ್ರಣ: 2014

ಬಸವ ಧರ್ಮ ಪ್ರಸಾರ ಸಂಸ್ಥೆ, ಹಿರೇಮಠ ಸಂಸ್ಥಾನ, ಭಾಲ್ಕಿ-585328, ಬೀದರ ಜಿಲ್ಲೆ.

ಚಿಕ್ಕ ವಯಸ್ಸಿನಲ್ಲೇ ಕವನಗಳನ್ನು ಬರೆಯಲು ಆರಂಭಿಸಿ ಹಿರಿಯರಿಂದ ಬೆನ್ನು ತಟ್ಟಿಸಿಕೊಂಡು ಸಾಹಿತ್ಯಲೋಕದಲ್ಲಿ ಪ್ರಮುಖ ಹೆಜ್ಜೆ ಗುರುತು ದಾಖಲಿಸುತ್ತಿರುವ ಡಾ. ವಿಕ್ರಮ ವಿಸಾಜಿ ಮತ್ತು ಅವರ ಕವನಗಳ ಕುರಿತು ಹಿರಿಯರಾದ ಡಾ.ಜಿ.ಎಸ್.ಶಿವರುದ್ರಪ್ಪ, ಶಾಂತರಸ, ಸುಮತೀಂದ್ರ ನಾಡಿಗ್, ಎಚ್.ಎಸ್.ರಾಘವೇಂದ್ರ ರಾವ್, ಆರ್.ಪೂರ್ಣಿಮಾ, ಇತರರು ಬರೆದ 26 ಲೇಖನಗಳು ಈ ಕೃತಿಯಲ್ಲಿವೆ.

ನಾಟಕಗಳಲ್ಲಿ ಅವ್ವ

ಸಂಪಾದಕರು: ಚಂದ್ರಶೇಖರ ವಸ್ತ್ರದ

ಪುಟ: 304 ಬೆಲೆ: ರೂ. 150

ಪ್ರಥಮ ಮುದ್ರಣ: 2020

ಪ್ರಕಾಶನ: ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್, ಸಂಪರ್ಕ: 9448677434

ತಾಯಿ ಮತ್ತು ತಾಯ್ತನ ಕೇಂದ್ರ ವಸ್ತುವಾಗಿರಿಸಿಕೊಂಡು ರಚಿಸಿದ 5 ನಾಟಕಗಳ ಸಂಕಲನವಿದು. ತನ್ನದಲ್ಲದ ಮಗುವಿಗೆ ತಾಯಿಯಾಗುವ ಲಂಬಾಣಿ ಹೆಣ್ಣೊಬ್ಬಳು ಲೋಕನಿಂದೆ, ಮಾನಸಿಕ ಹಿಂಸೆ ಸಹಿಸಿ ತಾಯ್ತನ ಮೆರೆವ ನಾಟಕ ‘ಹಡೆದವ್ವ’. ತಾಯ್ತನ ಎಂಬುದು ಕೇವಲ ಹೆರುವಿಕೆಗೆ ಸಂಬಂಧಿಸಿದ್ದಲ್ಲ, ಅದೊಂದು ಮಾನಸಿಕ ಸ್ಥಿತಿ ಎಂದು ಸಾರುವ ‘ಧರ್ಮಪುರಿಯ ಶ್ವೇತವೃತ್ತ’. ತಾಯಿ ಹೃದಯ ಸದಾ ವಾತ್ಸಲ್ಯಮಯ ಎಂಬುದನ್ನು ಬಿಂಬಿಸುವ ‘ತಾಯಿಯ ಕರಳು’. ತಾಯಿ ಪಾಲಿಗೆ ತನ್ನ ಮಕ್ಕಳಷ್ಟೇ ಮಕ್ಕಳಲ್ಲ, ಹಸಿದ ಹೊಟ್ಟೆಗಳನ್ನು ಹೊತ್ತವರೂ ಮಕ್ಕಳೇ ಎಂಬುದನ್ನು ಸಾರುವ ನಾಟಕ ‘ರೊಟ್ಟಿ’. ಪಿ. ಲಂಕೇಶ್‍ರ ಕವಿತೆ, ಬದುಕು ಆಧರಿಸಿ ರಚಿಸಿದ ತಾಯ್ತನ ವಾಸ್ತವತೆ ಚಿತ್ರಿಸುವ ನಾಟಕ ‘ಅವ್ವ’ ಇಲ್ಲಿದೆ. ಈ ಕೃತಿ ಏಕ ವಿಷಯ ಕೇಂದ್ರಿತ ಕನ್ನಡದ ಮೊದಲ ನಾಟಕಗಳ ಸಂಕಲನ.

ವೇದಾವತಿ ತೀರದಲ್ಲಿ

ಕಾದಂಬರಿ

ಡಾ.ಸಂಪಿಗೆ ನಾಗರಾಜ

ಪುಟ: 292  ಬೆಲೆ: ರೂ.300

ಪ್ರಥಮ ಮುದ್ರಣ: 2020

ಪ್ರಕಾಶನ: ಅನ್ನಪೂರ್ಣ ಪ್ರಕಾಶನ,

ಸಂಪರ್ಕ: 8762479216

ನಗರ ಪರಿಸರದಿಂದ ದೂರವಾದ ಗ್ರಾಮ ಜೀವನ, ಜಾತ್ರೆ, ದೇವಸ್ಥಾನ ಜೀರ್ಣೋದ್ಧಾರ, ಹರತಾಳ, ಭೂಮಿ-ನೀರುಗಳನ್ನು ಉಳಿಸಿಕೊಳ್ಳಲು ಜನಸಾಮಾನ್ಯರ ಹೋರಾಟ, ಗಾಂಧಿ ಆದರ್ಶದ ಹಿರಿಯರು, ಗಣಿಗಾರಿಕೆ, ರಾಜಕಾರಣ, ಸಿಮೆಂಟ್ ಫ್ಯಾಕ್ಟರಿಯಿಂದ ಜನ ಅನುಭವಿಸುವ ತೊಂದರೆಗಳು, ಕೆಳವರ್ಗದವರನ್ನು ತಮ್ಮ ಷಡ್ಯಂತ್ರಕ್ಕಾಗಿ ಬಳಸಿಕೊಳ್ಳುವುದು- ಇವೆಲ್ಲದರ ದರ್ಶನ ನೀಡುತ್ತದೆ ಈ ಕಾದಂಬರಿ. ದೇಶದ ಎಲ್ಲ ಗ್ರಾಮ್ಯ ಪರಿಸರಗಳಲ್ಲಿ ಕಂಡುಬರುವ ಈ ವಾಸ್ತವಿಕತೆ ಬಳ್ಳಾರಿ ಸೀಮೆಗೆ ಸಂಬಂಧಿಸಿ ಕನ್ನಡಿ ಹಿಡಿದಿದೆ.

ಸರಹದ್ದುಗಳಿಲ್ಲದ

ಭೂಮಿಯ ಕನಸು

ಕವಿತೆಗಳು

ನಿರ್ಮಲಾ ಶೆಟ್ಟರ

ಪುಟ: 103 ಬೆಲೆ: ರೂ.100

ಪ್ರಥಮ ಮುದ್ರಣ: 2020

ಪ್ರಕಾಶನ: ಪಾಲ್ಗುಣಿ ಪ್ರಕಾಶನ,

ಸಂಪರ್ಕ: 9986334719

ಕಣ್ಣ ಬಿದಿರು, ಪುಡಿ ಸಕ್ಕರೆ ಹಾಳೆ, ನೆರೆ ಬರೆ, ಹಚ್ಚಿಕೊಂಡರೆ ಸೇರಿದಂತೆ 44 ಕವನಗಳ ಸಂಕಲನವಿದು. ಈ ಕವನ ಸಂಕಲನಕ್ಕೆ ಹಿರಿಯ ಬರಹಗಾರ ಶೂದ್ರ ಶ್ರೀನಿವಾಸ್ ಅವರು ಆಶಯ ನುಡಿ ನೀಡಿದ್ದಾರೆ. ಹಿರಿಯ ಕವಯತ್ರಿ ಡಾ.ಎಚ್.ಎಲ್.ಪುಷ್ಪಾ ಪ್ರತಿಕ್ರಿಯೆ ನೀಡಿದ್ದಾರೆ. ಬದುಕನ್ನು ಸಹನೆಯಿಂದ ನೋಡುವ, ಸಹನೀಯವಾಗಿಸಿಕೊಳ್ಳುವ ನಿರಂತರವಾದ ಸೃಜನಶೀಲ ಮನಸ್ಸಿನ ವಿವಿಧ ಚಹರೆಗಳನ್ನು ನಿರ್ಮಲಾ ಇಲ್ಲಿನ ಕವಿತೆಗಳಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.

ಸುಮ್ಮನೆ ಬಿದ್ದಿರುವ ಬಿಕ್ಕುಗಳು

ಕವಿತೆಗಳು

ಮೌಲ್ಯ ಸ್ವಾಮಿ

ಪುಟ: 134 ಬೆಲೆ: ರೂ.130

ಪ್ರಥಮ ಮುದ್ರಣ: 2020

ಪ್ರಕಾಶನ: ವಾಗರ್ಥ ಪ್ರಕಾಶನ,

ಸಂಪರ್ಕ: 9901814238

ನಾಳೆಯ ಹೊಸಗೀತೆ, ನದಿ ಧ್ಯಾನ, ದೂರದ ಹೆಜ್ಜೆ, ಅಮ್ಮನೆಂದರೆ…, ಖರ್ಚಾಗದ ಮೌನಗಳು, ದೂರದ ಹೆಜ್ಜೆ, ಕನ್ನಡಿಯ ಸಾಕ್ಷಿ, ಪುನೀತ ಪಾಪಗಳು, ಚಿಟ್ಟೆ ಮತ್ತು

ಕತ್ತರಿ ಸೇರಿದಂತೆ 45 ಕವನಗಳ ಸಂಕಲನವಿದು. ಬದುಕಿನ ಲಯದಲ್ಲಿನ ನೋವು, ನಿರಾಸೆ, ಹತಾಶೆಗಳಿಗೆ ಮಿಡಿತವನ್ನು ಕವನಗಳಲ್ಲಿ ಕಾಣಬಹುದು.

ಕವಿಯತ್ರಿಯ ಮೊದಲ ಕವನಸಂಕಲನವಾದರೂ ಗಟ್ಟಿತನದ ಭರವಸೆಯ ಕವನಗಳು ಮೂಡಿಬಂದಿವೆ.

ಅಸ್ಪøಶ್ಯತೆ: ಸಮಾಜ ಮತ್ತು ಕಾನೂನು

ನ್ಯಾ. ಎಚ್.ಎನ್. ನಾಗಮೋಹನದಾಸ್

ಪುಟ: 76 ಬೆಲೆ: ರೂ.60

ತೃತೀಯ ಮುದ್ರಣ: 2020

ಪ್ರಕಾಶನ: ಸಹಯಾನ,

ಸಂಪರ್ಕ: 9448729359

ಅಸ್ಪøಶ್ಯತೆ ನಿವಾರಣಾ ಕಾನೂನುಗಳು ಮತ್ತು ಯೋಜನೆಗಳನ್ನು ಜನಸಾಮಾನ್ಯರಿಗೆ ತಿಳಿಯಪಡಿಸುತ್ತದೆ ಈ ಕೃತಿ. ಜಾತಿ ಪದ್ಧತಿಯ ಸಾಮಾಜಿಕ ಸಮಸ್ಯೆಗಳು, ಭಕ್ತಿಪಂಥ ಮತ್ತು ದಾಸ ಸಾಹಿತ್ಯ, ಅಸ್ಪøಶ್ಯತೆ ಅಪರಾಧ ಕಾಯ್ದೆ 1955, ಸರ್ಕಾರದ ಸೌಲಭ್ಯಗಳು, ನ್ಯಾಯಾಂಗದ ದೃಷ್ಟಿಯಲ್ಲಿ ಮತಾಂತರ, ನಾಗರಿಕ ಹಕ್ಕುಗಳ ಸಂರಕ್ಷಣಾ ಅಧಿನಿಯಮದ ಮುಖ್ಯಾಂಶಗಳು ಸೇರಿದಂತೆ 31 ಲೇಖನಗಳು ಈ ಕೃತಿಯಲ್ಲಿವೆ.

ಪಿಸುದನಿ

ಲೇಖನಗಳ ಸಂಗ್ರಹ

ಮಾಧವಿ ಭಂಡಾರಿ ಕೆರೆಕೋಣ

ಪುಟ: 156 ಬೆಲೆ: ರೂ.80

ಪ್ರಥಮ ಮುದ್ರಣ: 2020

ಪ್ರಕಾಶನ: ಬಂಡಾಯ ಪ್ರಕಾಶನ,

ಸಂಪರ್ಕ: 7338159699

ಉತ್ತರ ಕನ್ನಡ ಜಿಲ್ಲೆಯ ನಾನಾ ಲೇಖಕರ ಪುಸ್ತಕ ಪರಿಚಯ, ವ್ಯಕ್ತಿಪರಿಚಯ, ಮುನ್ನುಡಿ, ಮತ್ತು ರಂಗ ಅಧ್ಯಯನ ಕೇಂದ್ರ ಹಾಗೂ ಉ.ಕ. 17ನೇ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಿದ ಪ್ರಬಂಧ ಈ ಕೃತಿಯಲ್ಲಿವೆ. ಹಿರಿಯ, ಕಿರಿಯ ಬರಹಗಾರರ ಕೃತಿಗಳ ಕುರಿತು ಆತ್ಮೀಯವಾಗಿ ಪರಿಚಯಿಸಿರುವುದು ವಿಶೇಷ.

ಕುಂದಲತ

ಮಲಯಾಳಂನ ಮೊದಲ ಕಾದಂಬರಿ

ಮೂಲ ಲೇಖಕ: ಅಪ್ಪು ನೆಡುಙÁಡಿ

ಅನುವಾದ: ಮೋಹನ ಕುಂಟಾರ್

ಪುಟ: 160  ಬೆಲೆ: ರೂ. 150

ಪ್ರಥಮ ಮುದ್ರಣ: 2020

ಪ್ರಕಾಶನ: ಯಾಜಿ ಪ್ರಕಾಶನ,

ಸಂಪರ್ಕ: 9448722800

ಪ್ರೇಮ ಮತ್ತು ಯುದ್ಧದ ನಡುವೆ ಬೆಸುಗೆ ಹೊಂದಿರುವ ರೋಚಕ ಕಾದಂಬರಿ ಇದು. ಮೂಲ ಮಲಯಾಳ ಕಾದಂಬರಿ ಪ್ರಕಟವಾದದ್ದು 1887ರಲ್ಲಿ. ಕುಂದಲತ ಮಲಯಾಳಂನಲ್ಲಿ ಬರೆದ ಕಾದಂಬರಿಯಾದರೂ ಅದರಲ್ಲಿನ ಸ್ಥಳನಾಮವಾಗಲಿ, ವ್ಯಕ್ತಿ ನಾಮಗಳಾಗಲಿ ಯಾವುದೂ ಕೇರಳೀಯವಲ್ಲ. ದಂಡಕಾರಣ್ಯ, ವಿಲ್ವಾದಿಮಲ, ಧರ್ಮಪುರಿ ಗ್ರಾಮ, ಚಂದನೋದ್ಯಾನ, ಇತ್ಯಾದಿ ನಾಮಗಳು ಕೇರಳದಿಂದ ಹೊರಗಿನವು. ಕಳಿಂಗ ಮತ್ತು ಕುಂತಳ ರಾಜ್ಯಗಳ ಪರಸ್ಪರ ಸಂಘರ್ಷವೇ ಕಾದಂಬರಿಯ ಮುಖ್ಯ ಎಳೆ.

 

ಮಾಧ್ಯಮದ ಮಧ್ಯದಿಂದ

ಸ್ಫೋಟಕ ಹಗರಣಗಳು,

ಪ್ರಕರಣಗಳು, ವಿವಾದಗಳು

ಎ.ಎಸ್.ಎನ್.ಹೆಬ್ಬಾರ್

ಪುಟ: 284 ಬೆಲೆ: ರೂ.240

ಪ್ರಥಮ ಮುದ್ರಣ: 2020

ಮಾಧ್ಯಮ ಜಗತ್ತಿನಲ್ಲಿ ನಡೆದ, ನಡೆಯುತ್ತಿರುವ ವಿಷಯದ 50 ಲೇಖನಗಳ ಸರಮಾಲೆ. ಫತ್ವಾ-ಓಟು ಹಾಕಿದರೆ ಜಾಗ್ರತೆ!, ಕೆವಿನ್ ಕಾರ್ಟರ್ ದುರಂತ ಕಥೆ, ಪತ್ರಕರ್ತರು ಸಮಾಜವನ್ನು ಬಿಟ್ಟು ಇಲ್ಲ, ಸಾವಿನ ಸುದ್ದಿಗೆ ಮಾಧ್ಯಮದ ಕಾತರ-ಆತುರ, ಕುಟುಕು ಕಾರ್ಯಾಚರಣೆ ಎಂಬ ಬ್ರಹ್ಮಾಸ್ತ್ರ, ಇತರ ಲೇಖನಗಳು ಇಲ್ಲಿವೆ.

ಮಾಧ್ಯಮದ ಸುತ್ತಮುತ್ತ

ಸ್ವಾರಸ್ಯಕರ ಪ್ರಸಂಗಗಳ ಅಪೂರ್ವ ಸಂಗ್ರಹ

ಎ.ಎಸ್.ಎನ್.ಹೆಬ್ಬಾರ್

ಪುಟ: 352 ಬೆಲೆ: ರೂ.260

ಪ್ರಥಮ ಮುದ್ರಣ: 2020

ಮಾಧ್ಯಮ ಜಗತ್ತಿನ ಕುರಿತು ಎ.ಎಸ್.ಎನ್. ಹೆಬ್ಬಾರ್ ಬರೆದ ಇನ್ನೊಂದು ಕೃತಿ ಇದು. ಸ್ವಾರಸ್ಯಕರ ಪ್ರಸಂಗಗಳು ಇಲ್ಲಿವೆ. ನ್ಯಾಯಾಧೀಶರಿಂದಲೇ ನೌಕರರ ಕ್ಷೇಮನಿಧಿ ಗುಳುಂ!, ಚಿಲಿ ಎಂಬ ದೇಶ ಹುಲಿಯಾದ ಕಥೆ, ಮೂಗು ಕಳೆದುಕೊಂಡವಳಿಗೆ ಮೂಗು ನೀಡಿದ ಪತ್ರಿಕೆ, ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಕಪಾಳಮೋಕ್ಷ, ಮುತ್ತುಗಳ ಖ್ಯಾತಿಯ ಬಹರೈನ್‍ನಲ್ಲಿ ಅರಸೊತ್ತಿಗೆಗೆ ಕುತ್ತು, ಇತರ ಲೇಖನಗಳನ್ನು ಹೊಂದಿರುವ ಪುಸ್ತಕ.

ಮೇಲಿನ ಎರಡೂ ಪುಸ್ತಕಗಳ ಪ್ರಕಾಶಕರು: ವಿಕಾಸ ಪ್ರಕಾಶನ, ನಂ. 1541, ‘ಸಿರಿಗಂಧ, 16ನೇ ಮುಖ್ಯರಸ್ತೆ, ಎಂ.ಸಿ. ಲೇಔಟ್, ವಿಜಯನಗರ, ಬೆಂಗಳೂರು-560040

 

ಕವಿದರ್ಪಣ

(ಡಾ.ಬಿ.ಜಿವಿಸಾಜಿ ಕುರಿತ ಕವನಗಳ ಸಂಗ್ರಹ)

ಸಂಪಾದಕರು: ಆದರ್ಶ ವಿಸಾಜಿ

ಪುಟ: 72 ಬೆಲೆ: ರೂ.30

ಪ್ರಥಮ ಮುದ್ರಣ: 2013

ಡಾ.ಜಿ.ಬಿ.ವಿಸಾಜಿ ಬಗ್ಗೆ ವಿವಿಧ ಕವಿಗಳು ಬರೆದ 44 ಕವನಗಳು ಇಲ್ಲಿವೆ. ಕಾವ್ಯ, ಕಥೆ, ಚಿಂತನ, ಸಂಪಾದನೆ, ಜೀವನಚರಿತ್ರೆ, ಇತರ ಸಾಹಿತ್ಯ ಪ್ರಕಾರಗಳಲ್ಲಿ ಕೃತಿಗಳನ್ನು ಹೊರತಂದಿರುವ ಡಾ.ಜಿ.ಬಿ.ವಿಸಾಜಿ ಅವರ 70ನೇ ಜಯಂತ್ಯುತ್ಸವ ಸಂದರ್ಭ ಹೊರತಂದಿರುವ ಕೃತಿ ಇದು.

ಶಿವಗಾಂಗೇಯ

(ಡಾ. ಜಿ.ಬಿ. ವಿಸಾಜಿ: ಬದುಕು-ಬರಹ)

ಸಂಪಾದಕರು: ರಸವಂತಿ ದಿಲೀಪಕುಮಾರ, ಡಾ. ಪ್ರಕೃತಿ ಸಂತೋಷಕುಮಾರ

ಪುಟ: 77 ಬೆಲೆ: ರೂ.80

ಪ್ರಥಮ ಮುದ್ರಣ: 2010

ಶಿವಗಾಂಗೇಯ ಕಾವ್ಯನಾಮದಲ್ಲಿ ಬರೆಯುತ್ತಿರುವ ಜಿ.ಬಿ.ವಿಸಾಜಿ ಅವರ ಕುರಿತು 10 ಲೇಖಕರು ಬರೆದ ಬರಹಗಳ ಸಂಕಲನವಿದು. ಪುತ್ರ ಡಾ.ವಿಕ್ರಮ ವಿಸಾಜಿ ಅವರು ಅಪ್ಪನ ಕುರಿತ ಬರಹವನ್ನೂ ಇಲ್ಲಿ ನೀಡಲಾಗಿದೆ. ಪ್ರೊ.ಚಂದ್ರಶೇಖರ ಬಿರಾದಾರ, ಡಾ.ಗವಿಸಿದ್ಧಪ್ಪ ಪಾಟೀಲ, ಡಾ.ಜಯದೇವಿ ಗಾಯಕವಾಡ ಇತರರ ಬರಹಗಳು ಇದರಲ್ಲಿವೆ.

ಮೇಲಿನ ಎರಡೂ ಪುಸ್ತಕಗಳ ಪ್ರಕಾಶಕರು: ನೆಲದ ನುಡಿ ಪ್ರಕಾಶನ, ಭಾಲ್ಕಿ-585328 ಜಿಲ್ಲೆ: ಬೀದರ.

Leave a Reply

Your email address will not be published.