ಹೊಸ ಪುಸ್ತಕ

ರೈತರ ಆದಾಯವರ್ಧನೆಗೆ ಮೌಲ್ಯವರ್ಧನೆ

ಶ್ರೀ ಪಡ್ರೆ

ಪುಟ: 166 ಬೆಲೆ: ರೂ. 160

ಪ್ರಥಮ ಮುದ್ರಣ: 2021

ಪ್ರಕಾಶನ: ಕೃಷಿ ಮಾಧ್ಯಮ ಕೇಂದ್ರ ಮತ್ತು ಫಾರ್ಮರ್ ಫಸ್ಟ್ ಟ್ರಸ್ಟ್

ಸಂಪರ್ಕ: 9483757707

ಕೃಷಿ ಕ್ಷೇತ್ರಕ್ಕೆ, ರೈತರಿಗೆ ಸ್ಫೂರ್ತಿದಾಯಕ ಬರಹಗಳು ಕೃತಿಯಲ್ಲಿವೆ. ಚಿಕ್ಕು 1 ರುಚಿ 21, ನಾನಾ ಸ್ವಾದದ ನೆಲ್ಲಿಗೆ ನಾಲ್ದೆಸೆಯ ಬೇಡಿಕೆ, ಅನನ್ಯ ರುಚಿಯ ತೆಂಗಿನ ಜೆಲ್ಲಿ, ಸೌರಶಕ್ತಿಯೇ ಊರುಗೋಲು, ಬೊಂಡದ ಜೆಲ್ಲಿ, ಸೋಲುಗಳನ್ನು ಸೋಲಿಸಿದ ಸಿಹಿ ಹಂಚಿಕೆದಾರ, ಇತರ ಲೇಖನಗಳು ಇಲ್ಲಿವೆ.

ಮತ ಧರ್ಮ ಆಧ್ಯಾತ್ಮ ಮತ್ತು ಸೆಕ್ಯುಲಾರಿಸಮ್

ಡಾ.ಎಂ.ರಾಮಕೃಷ್ಣ

ಪುಟ: 156 ಬೆಲೆ: ರೂ. 130

ಪ್ರಥಮ ಮುದ್ರಣ: 2020

ಪ್ರಕಾಶನ: ಅಖಿಲಾ ಏಜೆನ್ಸಿಸ್

ಸಂಪರ್ಕ: 8152099996

ಪುಸ್ತಕದ ಹೆಸರು ಸೂಚಿಸಿರುವಂತೆ ಮತ, ಧರ್ಮ, ಆಧ್ಯಾತ್ಮ ಮತ್ತು ಸೆಕ್ಯುಲಾರಿಸಂ ಕುರಿತ ನಾಲ್ಕು ಲೇಖನಗಳು ಇದರಲ್ಲಿವೆ. ತಂದೆ-ತಾಯಿಯ ಒಂದೆರಡು ವರ್ತನೆಗಳು ಮಕ್ಕಳಲ್ಲಿ ಕಂಡು ಬಂದರೂ ಅದು ಚಿಛಿquiಡಿeಜ ಮಾತ್ರ ಜೀವಾತ್ಮದ ಸಾಧನೆ ಸಿಮ್ (ನೀವು) ಹಾದಿಯಲ್ಲಿ ನಡೆಯುತ್ತದೆ. ಉದ್ಧಾರ, ಪತನಗಳು ನಿಮ್ಮ ಕೈಯಲ್ಲಿದೆ ಎಂದು ಲೇಖಕರು ಆರಂಭದಲ್ಲಿ ಹೇಳುತ್ತಾರೆ.

ಚಂದ್ರಶಿಕಾರಿ

ಚಳವಳಿಯ ಅಸಲಿ ಕಸುಬುದಾರ

ಸಂಪಾದಕ: ಕೈದಾಳ್ ಕೃಷ್ಣಮೂರ್ತಿ

ಪುಟ: 276 ಬೆಲೆ: ರೂ. 150

ಪ್ರಥಮ ಮುದ್ರಣ: 2021

ವಿಪ್ಲವ ಪ್ರಕಾಶನ

ಸಂಪರ್ಕ: 9972899131

ಅಕಾಲವಾಗಿ ಸಾವುಕಂಡ ಚಂದ್ರಶೇಖರ ತೋರಣಘಟ್ಟ ಅವರ ವ್ಯಕ್ತಿತ್ವ ಕಟ್ಟಿಕೊಡುವ ಕೃತಿ ಇದು. ಕರುಳಬಳ್ಳಿಯ ಕಥನ, ಕೃಷ್ಣಪ್ಪರ ಡೈರಿಯಿಂದ, ಮೈದುನನೋ ಒಡಹುಟ್ಟಿದವನೋ ಪ್ರೀತಿಯ ಖಣಿಯಂತಿದ್ದ ಚಂದ್ರು, ಯಶೋ ಸಾಂಗತ್ಯ, ಸಿದ್ಧರಹಳ್ಳಿ ಎಂಬ ಕುಲುಮೆಯಲ್ಲಿ, ಹಕ್ಕಿಪಿಕ್ಕಿ ಕ್ಯಾಂಪಿಗೆ ಶಾಲೆ ಬಂದದ್ದು, ಬುದ್ಧನ ಪ್ರೀತಿಯ ಚಂದ್ರಣ್ಣ, ದ್ವಾವ್ರಂತ ಮನ್ಸ, ಇತರ ಲೇಖನಗಳು ಇಲ್ಲಿವೆ.

ಮಾಧ್ಯಮ ಸಂಕಥನ

ಪ್ರೊ. ಎಚ್.ಎಸ್. ಈಶ್ವರ

ಪುಟ: 112 ಬೆಲೆ: ರೂ. 100

ಪ್ರಥಮ ಮುದ್ರಣ: 2021

ವಿಕಾಸ ಪ್ರಕಾಶನ

ಸಂಪರ್ಕ: 9900095204

ಪ್ರೊ. ಈಶ್ವರ ಅವರು ಬರೆದ ಮಾಧ್ಯಮ ಸಂಬಂಧಿತ 5 ಲೇಖನ ಮತ್ತು ಮೂರು ಭಾಷಣಗಳು ಕೃತಿಯಲ್ಲಿವೆ. ಕೃತಿಯ ಬೆನ್ನುಡಿಯಲ್ಲಿ ಡಾ. ನಿರಂಜನ ವಾನಳ್ಳಿ ಬರೆದ ಒಂದು ಸಾಲು ಹೀಗಿದೆ: ಕನ್ನಡದಲ್ಲಿ ಇವತ್ತಿಗೂ ಹೆಚ್ಚಾಗಿ ಲಭ್ಯವಿಲ್ಲದ ಸಂವಹನ ಸಿದ್ಧಾಂತಗಳಿಗೆ ಈ ಪುಸ್ತಕ ಮಾರ್ಗಸೂಚಿಯಾಗಿದ್ದು, ಸಮಕಾಲೀನ ಮಾಧ್ಯಮಗಳ ತವಕ ತಲ್ಲಣಗಳಿಗೆ ಅವರು ಬರೆದ ಭಾಷ್ಯದಂತಿದೆ.

ಕರ್ನಾಟಕ ಗುರುಪಂಥ

ರಹಮತ್ ತರೀಕೆರೆ

ಪುಟ: 328 ಬೆಲೆ: ರೂ.300

ಪ್ರಥಮ ಮುದ್ರಣ:2020

ಪ್ರಕಾಶನ: ಪ್ರಸಾರಂಗ, ಕನ್ನಡ ವಿವಿ,

ಸಂಪರ್ಕ: 080 22372388

ಲೇಖಕರು ಕರ್ನಾಟದ ಗುರುಪಂಥವನ್ನು ಅರ್ಥ ಮಾಡಿಕೊಳ್ಳಲು ಹಲವಾರು ವರ್ಷ ತಿರುಗಾಡಿದವರು. ಜನರ ಜತೆ ನಡೆಸಿದ ಮಾತುಕತೆ, ಆಲಿಸಿದ ಹಾಡು, ಆಚರಣೆಗಳ ಚಿಂತನೆ ಈ ಕೃತಿಯಲ್ಲಿದೆ. ಇದೊಂದು ಸಾಂಸ್ಕøತಿಕ ಕಥನ. ಜನ ಸೃಷ್ಟಿಯ ನಾನಾ ಮುಖಗಳ ಸಾಂಸ್ಕøತಿಕ ವಿಶ್ಲೇಷಣೆ ಮತ್ತು ವ್ಯಾಖ್ಯಾನ. ಇಲ್ಲಿ ಜ್ಞಾನಾನುಸಂಧಾನದ ಹೆಜ್ಜೆಗಳೂ ಇವೆ.

ನಿಂದ ನಿಲುವಿನ ಘನ

ಕಥಾ ಸಂಕಲನ

ಕಲ್ಲೇಶ್ ಕುಂಬಾರ್

ಪುಟ: 128 ಬೆಲೆ: ರೂ.150

ಪ್ರಥಮ ಮುದ್ರಣ: 2020

ಸಿವಿಜಿ ಪಬ್ಲಿಕೇಶನ್ಸ್,

ಸಂಪರ್ಕ: 9448528818

ಗಾಳಿಯ ಸೊಡರು, ಹೂ ಹುಡುಗಿ, ಇದಿರ ಹರಿದು, ಕಪಿಲೆ, ನೆಲ ತಳವಾರನಾದಡೆ, ನಿಂದ ನಿಲುವಿನ ಘನ, ಒಳಗಣ ಜ್ಯೋತಿ, ರಜಿಯಾ, ಉತ್ಪಾತ ಕಥೆಗಳು ಈ ಸಂಕಲನದಲ್ಲಿವೆ. ಕಲ್ಲೇಶ್ ಅವರ ಕಥೆಗಳಲ್ಲಿ ರೂಪಕಗಳು, ದೃಷ್ಟಾಂತಗಳು ಗಮನಸೆಳೆಯುತ್ತವೆ. ಜತೆಗೆ ಉತ್ತರ ಕರ್ನಾಟಕದ ಭಾಷೆಯ ಸೊಗಡು ಮೇಳೈಸಿದೆ.

ದೀಪದೊಳಗಿನ ದೀಪ

ಕವನ ಸಂಕಲನ

ವೈದೇಹಿ

ಪುಟ: 152 ಬೆಲೆ: ರೂ. 140

ಪ್ರಥಮ ಮುದ್ರಣ: 2020

ವಿಕಾಸ ಪ್ರಕಾಶನ,

ಸಂಪರ್ಕ: 9900095204

ಕವನಗಳು ಭಾಗ-1 ಮತ್ತು 2, ಮಕ್ಕಳ ನಾಟಕದ ಹಾಡುಗಳು, ಬಿಂದುಸಾರ, ಅಸ್ತಮಾನದ ಕವಿತೆಗಳು ವಿಭಾಗದಲ್ಲಿ ಕವನಗಳನ್ನು ಈ ಕೃತಿಯಲ್ಲಿ ನೀಡಲಾಗಿದೆ. ಮಳೆ ಹಾಡು, ಆನಿಗುಡ್ಡಿ ಗಣ್ಪತಿಯೇ ಕಣ್ತರೆ, ತೇರು ಬಂತೋ ತೇರು, ಕಮಲದೆಲೆಯ ಬಿಂದು ಇತರ ಕವನಗಳಿವೆ. ವೈದೇಹಿ ಅವರ ತಾಯಿ ಹಾಡುತ್ತಿದ್ದ ಶ್ರೀ ದತ್ತಾತ್ರೇಯ ಜನನ ಕುರಿತ ಕಥನಗೀತೆ ಗಮನ ಸೆಳೆಯುತ್ತದೆ.

ರುದ್ರ ಭಾರತ

ನಾಟಕ

ಡಾ. ಸಿ. ವೀರಣ್ಣ

ಪುಟ: 64 ಬೆಲೆ: ರೂ. 60

ಪ್ರಥಮ ಮುದ್ರಣ: 2020

ಪ್ರಕಾಶನ: ಕರ್ನಾಟಕ ಸಾಹಿತ್ಯ ಪರಿಷತ್ತು,

ಸಂಪರ್ಕ: 9448119060

ನಾಟಕದ ಆರಂಭದಲ್ಲಿ (ಪ್ರವೇಶ) ಸೂತ್ರಧಾರ ಹೇಳುವ ಮಾತಿನ ಸಾಲುಗಳಿವು: ಯುದ್ಧ ಮುಗಿದ ತಕ್ಷಣ ಮಹಾಭಾರತ ಮುಗಿದು ಹೋಗಲಿಲ್ಲ…… ಬದುಕಿ ಉಳಿದವರ ಬದುಕು ಚದುರಿ ಚೆಲ್ಲಾಡಿ ಹೋಗಿ, ಬದುಕಿದ್ದೇ ತಪ್ಪಾಯಿತು ಎನ್ನುವಂತಾದ ಕಥೆಯನ್ನು ಇಲ್ಲಿ ಬಿಚ್ಚಿಡಲಾಗಿದೆ. ಅದಕ್ಕಾಗಿಯೇ ಈ ನಾಟಕಕ್ಕೆ ರುದ್ರಭಾರತ ಎಂದು ಕರೆಯಲಾಗಿದೆ.

ತೊಗಲು ತತ್ತಿ

ಕಥಾ ಸಂಕಲನ

ಸರಸ್ವತಿ ರಾ. ಭೋಸಲೆ

ಪುಟ: 108 ಬೆಲೆ: ರೂ. 100

ಪ್ರಥಮ ಮುದ್ರಣ: 2020

ದಾಕ್ಷಾಯಿಣಿ ಪ್ರಕಾಶನ

ಸಂಪರ್ಕ: 9449034529

ಲೇಖಕಿಯ 2ನೇ ಕಥಾಸಂಕಲನವಿದು. ಪೂರ್ಣ ವಿರಾಮ, ಅಂತರಂಗ, ಬದುಕು, ಕಟ್ಟಾಣಿ ಗಂಡ, ಸ್ನೇಹ ಕವನ, ಗೋಂದಳ, ಕ್ಯಾಲೆಂಡರಿನ ಕೊನೆಯ ಪುಟ, ರಂಗಮ್ಮ ಸೇರಿದಂತೆ 20 ಕಥೆಗಳು ಈ ಪುಸ್ತಕದಲ್ಲಿವೆ. ಸರಳವಾದ ಅನುಭವವನ್ನು ತಮ್ಮದೇ ಆದ ಕಥನಕೌಶಲದಲ್ಲಿ ತೆರೆದಿಟ್ಟಿದ್ದಾರೆ ಕಥೆಗಾರ್ತಿ.

ಬೆಟ್ಟದ ಬೇರು

ಪ್ರಾತಿನಿಧಿಕ ಕವನ ಸಂಕಲನ

ಸಂ: ಎಂ.ಎಸ್. ಮಕಾನದಾರ, ಈಶ್ವರಪ್ಪ ರೇವಡಿ

ಪುಟ: 152 ಬೆಲೆ: ರೂ. 150

ಪ್ರಥಮ ಮುದ್ರಣ: 2019

ಬಸವ ಪ್ರಕಾಶನ

ಸಂಪರ್ಕ: 9845775150/9986815166

ರೋಣ, ಗಜೇಂದ್ರಗಡ ತಾಲೂಕಿನ ಕವಿಗಳ 106 ಕವನಗಳನ್ನು ಒಳಗೊಂಡ ಸಂಕಲನವಿದು. ಅಂದಾನಪ್ಪ ದೊಡ್ಡಮೇಟಿಯವರ ‘ಪರಾಶಕ್ತಿ ಭಾರತ ಮಾತೆ’, ಡಾ. ಗಿರಡ್ಡಿ ಗೋವಿಂದರಾಜು ಅವರ ‘ಸತಿ ಅನಸೂಯೆ’ ಕವನಗಳು ಆರಂಭದಲ್ಲಿವೆ. ಎಂ.ಡಿ. ಗೋಗೇರಿ, ಜಯಶ್ರೀ ಜೆ. ಅಬ್ಬಿಗೇರಿ, ನೀ. ಶ್ರೀಶೈಲ, ಶಿವಕುಮಾರ ನಿಡಗುಂದಿ, ಆರ್.ಎಲ್. ಕಮ್ಮಾರ, ಎಂ.ಎಸ್. ಮಕಾನದಾರ, ಇತರರ ಕವನಗಳು ಕೃತಿಯಲ್ಲಿವೆ.

ಹಿಂದೂ ಧರ್ಮ

ಸಂಶೋಧಿತ ವಿವೇಚನೆ

ಪ್ರಬಂಧಗಳು

ಮರಾಠಿ ಮೂಲ: ವಿ.ಕೆ. ರಾಜವಾಡೆ

ಕನ್ನಡಕ್ಕೆ: ಚಂದ್ರಕಾಂತ ಪೋಕಳೆ

ಪುಟ: 96  ಬೆಲೆ: ರೂ. 100

ಪ್ರಥಮ ಮುದ್ರಣ: 2021

ವೇದೋಕ್ತ, ‘ಮಗ’ ಬ್ರಾಹ್ಮಣರು ಯಾರು?, ನಮ್ಮ ಪುರಾಣಗಳು ಮತ್ತು ಅಸೀರಿಯಾದಲ್ಲಿಯ ಹೊಸ ಶೋಧ, ಹಿಂದೂಸ್ತಾನದಲ್ಲಿಯ ಆರ್ಯರ ವರ್ಣ, ಹಿಂದೂ ಪದದ ಇತಿಹಾಸ, ಹಿಂದೂ ಸಮಾಜದಲ್ಲಿ ಹಿಂದೂವೇತರರ ಸಮಾವೇಶ, ಜಾತಿ ಮತ್ತು ಅಜಾತಿ ಸಂಸ್ಥೆಗಳ ಸಮಾಜ ಎಂಬ ಪ್ರಬಂಧಗಳು ಈ ಕೃತಿಯಲ್ಲಿ ನೀಡಲಾಗಿದೆ.

ವಿಜ್ಞಾನದ ತಾತ್ವಿಕ ನೆಲೆ

ವಿ.ಕೆ. ತಾಳಿತ್ತಾಯ

ಪುಟ: 112 ಬೆಲೆ: ರೂ.120

ಪ್ರಥಮ ಮುದ್ರಣ: 2021

ವಿಜ್ಞಾನ ಮತ್ತು ತತ್ವಜ್ಞಾನಗಳೊಳಗಿನ ವಿಶಿಷ್ಟ ಸಂಬಂಧದ ಕುರಿತು ಜನಸಾಮಾನ್ಯರಿಗೆ ಸಂಕ್ಷಿಪ್ತ ಪರಿಚಯ ನೀಡುವ ಕೃತಿಯಿದು. ವಿಜ್ಞಾನ, ಪ್ರಕೃತಿಯ ನಿಯಮಗಳು, ವಿಜ್ಞಾನದ ಬೆಳವಣಿಗೆ, ಮುಗಿಯದ ಕೆಲಸ, ವೈಜ್ಞಾನಿಕ ವಿಧಾನ, ದೇವರು ಜೂಜಾಡುವುದಿಲ್ಲ, ವಿಜ್ಞಾನ ಮತ್ತು ವಸ್ತುನಿಷ್ಠೆ, ವಿಜ್ಞಾನ ಮತ್ತು ನೀತಿ, ವಿಜ್ಞಾನ ಮತ್ತು ಭವಿಷ್ಯ, ಈ ಕಲ್ಪನೆಗೆ ಅವನು ಬೇಕಿಲ್ಲ ಎಂಬ ಲೇಖನಗಳು ಇಲ್ಲಿವೆ.

ಸಾಧಾರಣ ಜನ

ಅಸಾಧಾರಣ ಶಿಕ್ಷಕರು

ಭಾರತದ ನಿಜವಾದ ಧೀರರು

ಎಸ್. ಗಿರಿಧರ್

ಪುಟ: 240 ಬೆಲೆ: ರೂ. 250

ಪ್ರಥಮ ಮುದ್ರಣ: 2021

ಗಿರಿಧರ್ ಅವರು ತಾವು ಕಾರ್ಯನಿರ್ವಹಿಸಿದ ಸರ್ಕಾರಿ ಶಾಲೆಗಳ ಶಿಕ್ಷಕರ ಕಾರ್ಯಶೀಲತೆ, ಉತ್ಸಾಹ, ಸ್ಫೂರ್ತಿಯನ್ನು ಇಲ್ಲಿ ದಾಖಲಿಸಿದ್ದಾರೆ. ಸದಾ ಹೊಸತಿಗೆ ಮಿಡಿಯುವ, ಸೃಜನಶೀಲ ಮನಸ್ಸಿನ, ದೃಢಚಿತ್ತರೂ, ಕರುಣಾಮಯಿಗಳೂ ಆದ ಸರ್ಕಾರಿ ಶಾಲಾ ಶಿಕ್ಷಕರು ನಿರ್ವಹಿಸುವ ವೈವಿಧ್ಯಮಯ ಪಾತ್ರಗಳನ್ನು ಮತ್ತು ಅವರ ಬದ್ಧತೆ, ಪರಿಶ್ರಮಗಳು ಇಲ್ಲಿ ಒಡಮೂಡಿವೆ.

ಈ 3 ಪುಸ್ತಕಗಳ ಪ್ರಕಾಶಕರು ನವಕರ್ನಾಟಕ, ಸಂಪರ್ಕ: 080-22161900

 

ಮೂಚಿಮ್ಮ

ಕಥಾ ಸಂಕಲನ

ಡಾ. ಅಜಿತ್ ಹರೀಶಿ

ಪುಟ: 118 ಬೆಲೆ: ರೂ. 170

ಪ್ರಥಮ ಮುದ್ರಣ: 2020

ಆವಿ, ನಟ, ಮೂಚಿಮ್ಮ, ಪತನ, ದಹನ, ಜನಾರ್ದನ, ಬೆಸುಗೆ, ತಾನೊಂದು ಬಗೆದರೆ, ಪರಿವರ್ತನೆ ಕಥೆಗಳು ಈ ಸಂಕಲನದಲ್ಲಿವೆ. ಡಾ. ಅಜಿತ್‍ರ ಕಥೆಗಳಲ್ಲಿ ಮಾನವೀಯ ಸಂಬಂಧಗಳ ಮಿಡಿತ ಗಾಢವಾಗಿದೆ. ಮಲೆನಾಡಿನ ಮೂಲೆಯ ಪುಟ್ಟ ಹಳ್ಳಿಯ ವ್ಯಕ್ತಿತ್ವದಿಂದ ಹಿಡಿದು ನಗರ ಜೀವನದ ಪಾತ್ರಗಳವರೆಗೆ ಅವರ ಕಥೆಗಳು ವಿಸ್ತಾರ ಹೊಂದಿವೆ.

ನಮಾಮಿ ಗಂಗೆ

ಕಾದಂಬರಿ

ಕೆ.ಆರ್. ಚಂದ್ರಶೇಖರ್

ಪುಟ:166 ಬೆಲೆ: ರೂ.185

ಪ್ರಥಮ ಮುದ್ರಣ: 2021

ನದಿಗಳಿಗೆ ತೇಲಿಬಿಡುತ್ತಿರುವ ಕೊಚ್ಚೆ, ರಾಸಾಯನಿಕಗಳ ಪರಿಣಾಮ ಎಷ್ಟೊಂದು ಭೀಕರವಾಗುತ್ತದೆ, ಪರಿಹಾರ ಕ್ರಮಗಳೇನು ಎಂಬುದರ ಕುರಿತ ಕಥಾವಸ್ತುವನ್ನು ಈ ಕಾದಂಬರಿ ಹೊಂದಿದೆ. ಬೆಂಗಳೂರನ್ನು ಕೇಂದ್ರ ಮಾಡಿಕೊಂಡ ವಸ್ತುವನ್ನು ಹೊಂದಿರುವ ಕೃತಿ ಮುಂದೆ ಒದಗುವ ದುರಂತದ ಕಡೆಗೆ ಗಮನ ಸೆಳೆಯುತ್ತದೆ.

ಸ್ಟಾರ್ಟ್ ಅಪ್

ನೀವೂ ಕಟ್ಟಬಹುದು!

ಸತ್ಯೇಷ್ ಎನ್. ಬೆಳ್ಳೂರ್

ಪುಟ:160  ಬೆಲೆ: ರೂ. 200

ಪ್ರಥಮ ಮುದ್ರಣ: 2020

ವೃತ್ತಿ ಜೀವನದ ಬಹು ಸಮಯವನ್ನು ಲೇಖಕರು ಸ್ಟಾರ್ಟ್‍ಅಪ್ ಕಂಪನಿಗಳಲ್ಲಿಯೇ ಲೇಖಕರು ಕಾರ್ಯನಿರ್ವಹಿಸಿದ್ದಾರೆ. ಈ ಕೃತಿಯನ್ನು ಎರಡು ಭಾಗಗಳಲ್ಲಿ ಓದಬಹುದು. ಮೊದಲನೇ ಭಾಗ ಸಿಲಿಕಾನ್ ವ್ಯಾಲಿಗಳ ಕುರಿತಾಗಿ. ಎರಡನೆಯದು ಸ್ಟಾರ್ಟ್‍ಅಪ್. ಈ ಭಾಗದಲ್ಲಿ ಸ್ಟಾರ್ಟ್ ಕಂಪನಿಗಳ ಆಗುಹೋಗು, ಒಳಹೊರಗು, ಏಳು-ಬೀಳು ಹೀಗೆ ಹಲವು ವಿಷಯಗಳನ್ನು ಲೇಖಕರು ಬಿಚ್ಚಿಟ್ಟಿದ್ದಾರೆ. 

3019 ಂಆ

ಡಾ. ಶಾಂತಲ

ಪುಟ: 244 ಬೆಲೆ: ರೂ. 250

ಪ್ರಥಮ ಮುದ್ರಣ: 2021

ಮನುಷ್ಯನ ವಂಶವಾಹಿಗಳ ಒಳಗುಟ್ಟು ತಿಳಿದು, ಅದನ್ನು ಬೇಕಾದಂತೆ ಬದಲಾಯಿಸಿದಲ್ಲಿ ಅನೇಕ ಸಾಧ್ಯತೆಗಳು, ಅನೇಕ ವಿಧವಾದ ಕೃತಕ ಮನುಷ್ಯರು ಅಸ್ತಿತ್ವಕ್ಕೆ ಬರುತ್ತಾರೆ. ಇಂತಹ ಪ್ರತ್ಯೇಕ ‘ಮಾನವರು’ 3019ನೇ ಶತಮಾನದಲ್ಲಿ ನಮಗೆ ಕಾಣಸಿಗಬಹುದು ಎಂಬ ಕಲ್ಪಿತ ಕಥಾವಸ್ತುವಿನ ಹಿನ್ನೆಲೆಯಲ್ಲಿ ಈ ಕೃತಿ ಮೂಡಿಬಂದಿದೆ. ಅಲ್ಲದೇ, ಯಂತ್ರವನ್ನೇ ಮನುಷ್ಯರ ಶರೀರದಲ್ಲಿ ಬೆಸೆದುಕೊಂಡ ಸೈಬಾರ್ಗ್‍ಗಳಿಗೂ ಪಾತ್ರವಿದೆ.

ಈ 4 ಪುಸ್ತಕಗಳ ಪ್ರಕಾಶನ: ಮೈಲ್ಯಾಂಗ್ ಬುಕ್ಸ್. ಸಂಪರ್ಕ: 8296332054

Leave a Reply

Your email address will not be published.