ಹೊಸ ಪುಸ್ತಕ

ಕಲ್ಲೆದೆಯ ಮೇಲೆ ಕೂತ ಹಕ್ಕಿ
ಕಾದಂಬಿನಿ
ಪುಟ: 160, ಬೆಲೆ: ರೂ.140
ಪ್ರಕಾಶಕರು: ಮೇಘಮಾಲಾ
ಪ್ರಕಾಶನ, ಡಿ ‘ಮೆಲ್ಲೊ’ಸ್‍ ನೆಸ್ಟ್,
ಯಡೇಹಳ್ಳಿ, ಆನಂದಪುರಂ-577412,
ಶಿವಮೊಗ್ಗಜಿಲ್ಲೆ .ದೂ: 9591575019

ಇದೊಂದು ಕವನ ಸಂಕಲನ. ಕವಯತ್ರಿ ಕಾದಂಬಿನಿ ಅವರೇ ಒಂದೆಡೆ ಹೇಳಿಕೊಂಡಂತೆ ಬದುಕಿನ ಒಂದು ಹಂತದಲ್ಲಿ ಅನುಭವಿಸಿದ ನೋವು ಅವರನ್ನು ಕಾವ್ಯ ರಚನೆಗೆ ಪ್ರೇರೇಪಿಸಿತು. ಹಾಗಾಗಿ ಈ ಕವನ ಸಂಕಲನದಲ್ಲಿನ ಕವಿತೆಗಳಲ್ಲೂ ಜೀವನದ ನೋವು-ನಲಿವುಗಳು ಅಭಿವ್ಯಕ್ತವಾಗಿವೆ. ಪ್ರೀತಿ ಮತ್ತು ನಿಸರ್ಗಮುಖಿ ಕವಿತೆಗಳೂ ಇಲ್ಲಿವೆ.

ಫೆಮಿನಿಸ್ಟ್‍ ಮ್ಯಾನಿಫೆಸ್ಟೊ
ಕನ್ನಡಕ್ಕೆ: ಕಾವ್ಯಶ್ರೀ.ಎಚ್
ಪುಟ:64, ಬೆಲೆ: ರೂ.50
ಒಬ್ಬ ಹೆಣ್ಣು ಮಗುವನ್ನು ಸ್ತ್ರೀವಾದಿಯಾಗಿ ಬೆಳೆಸುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರ ರೂಪವಾಗಿ ಚಿಮಮಾಂಡಳ 15 ಸಲಹೆಗಳನ್ನು ನೀಡಿದ್ದಾರೆ. ಆ ಸಲಹೆಗಳನ್ನು ಕಾವ್ಯಶ್ರೀ ಇಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಸ್ತ್ರೀವಾದನ ಮ್ಮೊಳಗೆ ಹಾಸು ಹೊಕ್ಕಾಗಬೇಕಾದ ಬಗೆಯನ್ನೂ ಇಲ್ಲಿ ತಿಳಿಸಲಾಗಿದೆ.

ಸಂವಿಧಾನ ಮತ್ತು ಮಹಿಳೆ
ಡಾ.ಎಚ್.ಎಸ್.ಅನುಪಮಾ
ಪುಟ: 108, ಬೆಲೆ: ರೂ.60
ಭಾರತ ಪುರಷ ಪ್ರಧಾನ ರಾಷ್ಟ್ರ. ಆದರೂ ದೇಶದ ಸಂವಿಧಾನವು ಮಹಿಳೆಯರಿಗೂ ಪುರುಷರಷ್ಟೇ ಸಮಾನ ಹಕ್ಕುಗಳನ್ನು ನೀಡಿದೆ. ಮಹಿಳೆಯರಿಗೆ ಕೆಲವು ವಿಶೇಷಹಕ್ಕುಗಳನ್ನೂ ಕೊಟ್ಟಿದೆ. ಈ ಹಕ್ಕು ಮತ್ತು ಕರ್ತವ್ಯಗಳನ್ನು ಪ್ರತಿಯೊಬ್ಬ ಮಹಿಳೆಯರು ಅರಿಯಬೇಕೆಂಬ ಒತ್ತಾಸೆಯ ಲೇಖನಗಳು  ಇಲ್ಲಿವೆ. ಮಹಿಳೆಯರು ಯಾವುದರಲ್ಲೂ ಕಡಿಮೆಯಿಲ್ಲ ಎನ್ನುವುದನ್ನು ತಿಳಿಸುವ ಜೊತೆಗೆ ಮಹಿಳೆಯರಿಗೆ ಸಂವಿಧಾನಾತ್ಮಕವಾಗಿ ಲಭ್ಯವಿರುವ ಕಾನೂನಿನ ಅರಿವು ಮೂಡಿಸುವ ಪ್ರಯತ್ನ ಈ ಪುಸ್ತಕವಾಗಿದೆ.

ಮೇಲಿನ ಎರಡೂ ಕೃತಿಗಳ ಪ್ರಕಾಶಕರು : ಲಡಾಯಿ ಪ್ರಕಾಶನ, #21, ಪ್ರಸಾದ ಹಾಸ್ಟೆಲ್,
ಗದಗ-582101 ದೂ:9480286844

ಓಡಿಹೋದ ಹುಡುಗ
ಬಸು ಬೇವಿನಗಿಡದ
ಪುಟ:156, ಬೆಲೆ: ರೂ.150
ಪ್ರಕಾಶಕರು: ಅಭಿನವ ಪ್ರಕಾಶನ, 17/18-2, 1ನೇ ಮುಖ್ಯ ರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040.
ದೂ: 9448804905.
ಇದೊಂದು ಗ್ರಾಮೀಣ ಭಾಗದ ಹುಡುಗನೊಬ್ಬನ ಜೀವನ ಕಥೆ ಆಧರಿಸಿದ ಕಾದಂಬರಿ. ಉತ್ತರ ಕರ್ನಾಟಕ ಪ್ರದೇಶದ, ಗ್ರಾಮೀಣ ಭಾಗದ ಗಜ್ಯಾ ಎಂಬ ಹುಡುಗ ತನ್ನ ಹದಿಹರೆಯದ ವಯಸ್ಸಿನಲ್ಲಿ ತೋರಿಸುವ ಚೆಲ್ಲಾಟ, ಸಹಾಸ, ಹೋರಾಟ ಹಾಗೂ ಅಂತಿಮವಾಗಿ ಪಡೆಯುವ ಯಶಸ್ಸಿನ ಕುರಿತಾದ ಕಥಾವಸ್ತುವನ್ನು ಈ ಕಾದಂಬರಿ ಹೊಂದಿದೆ. ಉತ್ತರ ಕರ್ನಾಟಕ ಪ್ರದೇಶದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ವಿಷಯಗಳ ಮೇಲೂ ಈ ಕಾದಂಬರಿ ಬೆಳಕು ಚೆಲ್ಲುತ್ತದೆ.

ಬೀಳದ ಗಡಿಯಾರ
ಬಸು ಬೇವಿನಗಿಡದ
ಪುಟ: 108, ಬೆಲೆ: ರೂ.90
ಪ್ರಕಾಶಕರು: ಪ್ರೇಮ ಪ್ರಕಾಶನ, 90, ‘ಬೆಳಕು’, ವಿವೇಕಾನಂದ ಬ್ಲಾಕ್, ಶಿಕ್ಷಕರ ಬಡಾವಣೆ, ಮೈಸೂರು-570029.
ದೂ: 9886026085.
ಇದೊಂದು ಮಕ್ಕಳ ಕಥಾ ಸಂಕಲನ. ಇದರಲ್ಲಿ 8 ಕತೆಗಳಿವೆ. ಬದಲಾವಣೆ ಜಗದ ನಿಯಮ ಎಂಬ ಮಾತು ಸರ್ವಕಾಲಿಕವಾದುದು. ಈ ಬದಲಾವಣೆಗೆ ತಕ್ಕಂತೆ ಇಂದಿನ ಮಕ್ಕಳು ಕೂಡ ಹೊಸ ಕಾಲದ ಮತ್ತು ವಾಸ್ತವ ಪ್ರಪಂಚದ ತಮ್ಮ ಸುತ್ತಲಿನ ಆಗು ಹೋಗುಗಳನ್ನು ಆಧರಿಸಿದ ಸಾಹಿತ್ಯವನ್ನು ಓದಬೇಕು. ಅದಕ್ಕೆ ತಕ್ಕಂತೆ ಇಲ್ಲಿನ ಕತೆಗಳು ಸಹಜವಾತಾವರಣದಲ್ಲಿ ಹುಟ್ಟಿದ ವಿಷಯವಸ್ತುವನ್ನು ಒಳಗೊಂಡಿವೆ. ಹೊಸಕಾಲದ ವಿವಿಧ ಬಗೆಯ ಮಕ್ಕಳ ಲೋಕವನ್ನು ಅರಿಯಲು ಮಕ್ಕಳು, ಪೋಷಕರು ಹಾಗೂ ಶಿಕ್ಷಕರು ಓದಬೇಕಾದ ಕತೆಗಳು ಇಲ್ಲಿವೆ.

ನನ್ನಪ್ಪ ಮುನಿಯಪ್ಪ
ಡಾ.ಎಂ.ವೆಂಕಟಸ್ವಾಮಿ
ಪುಟ: 40, ಬೆಲೆ: ರೂ.20
ಪ್ರಕಾಶಕರು: ಅಂತಾ ಸೈನಿಕದಳ, 21, ಮುದಗಲ್‍ ಅಪಾರ್ಟಮೆಂಟ್ಸ್,
3ನೇ ಕ್ರಾಸ್, ಗಾಂಧಿನಗರ, ಬೆಂಗಳೂರು-560009
ದಲಿತ ಪರ ಹಾಗೂ ಎಲ್ಲಾ ಬಗೆಯ ಶೋಷಿತರ ಪರ ಹೋರಾಟಗಳಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡವರು ಡಾ.ಎಂ.ವೆಂಕಟಸ್ವಾಮಿ. ಹೊಸ ದಿಕ್ಕು ಪ್ರಕಾಶನ ಸ್ಥಾಪಿಸಿ ಹಲವು ಮಹತ್ವದ ಕೃತಿಗಳನ್ನು ಪ್ರಕಟಿಸಿದವರು. ಇದೀಗ ತಮ್ಮ ತಂದೆಯ ಜೀವನ ಗಾಥೆಯನ್ನು ಈ ಪುಸ್ತಕದಲ್ಲಿ ಪರಿಚಯಿಸಿದ್ದಾರೆ.

 ಎಂ.ಎನ್.ಕಾಮತ್
ಡಾ.ಮಹಾಬಲೇಶ್ವರ ರಾವ್
ಪುಟ: 116, ಬೆಲೆ: ರೂ.90
ಪ್ರಕಾಶಕರು: ಸಿವಿಜಿ ಪಬ್ಲಿಕೇಷನ್ಸ್, ನಂ-277, 5ನೇ ಕ್ರಾಸ್, ವಿಧಾನಸೌಧ ಎಕ್ಸಟೆನ್ಶನ್, ಲಗ್ಗೆರೆ,
ಬೆಂಗಳೂರು-560058 ದೂ: 9448888399
ಇದೊಂದು ಮಕ್ಕಳ ಸಾಹಿತಿಯ ವ್ಯಕ್ತಿ ಪರಿಚಯದ ಕೃತಿ. ಕನ್ನಡ ಸಾಹಿತ್ಯದಲ್ಲಿ ಮಕ್ಕಳ ಸಾಹಿತ್ಯ ಒಂದು ಭಾಗ. ಅದರ ಇತಿಹಾಸವೂ ಇತ್ತೀಚಿನದು. ಎಂ.ಎನ್.ಕಾಮತ್  ಶಿವರಾಮ ಕಾರಂತ, ಜಿ.ಪಿ.ರಾಜರತ್ನಂ, ಸಿಂಪಿ ಲಿಂಗಣ್ಣ, ಮಿರ್ಜಿ ಅಣ್ಣಾ ರಾಯ, ದಿನಕರ್ ದೇಸಾಯಿ, ಸಿಸು ಸಂಗಮೇಶ ಮುಂತಾದವರು ಶಾಲಾ ಶಿಕ್ಷಕರು. ಈ ಎಲ್ಲ ಮಹನೀಯರು ಮಕ್ಕಳಿಗಾಗಿ ಸಾಹಿತ್ಯ ರಚಿಸಿದವರು. ಕರ್ನಾಟಕ ಏಕೀಕರಣದ 60 ನೇ ವರ್ಷಾಚರಣೆ ಹಿನ್ನೆಯಲ್ಲಿ ಮಕ್ಕಳ ಸಾಹಿತಿಗಳನ್ನು ಪರಿಚಯಿಸುವ ಮಾಲಿಕೆಯಲ್ಲಿ ಎಂ.ಎನ್.ಕಾಮತ್‍ ಅವರ ವ್ಯಕ್ತಿ ಪರಿಚಯವನ್ನು ಲೇಖಕರು ಈ ಕೃತಿಯಲ್ಲಿ ಮಾಡಿದ್ದಾರೆ.

ಶಿಕ್ಷಣದಲ್ಲಿ  ಭಾಷೆ  ಮತ್ತು  ಮಾಧ್ಯಮದ  ಸಮಸ್ಯೆಗಳು
ಡಾ.ಮಹಾಬಲೇಶ್ವರ ರಾವ್
ಪುಟ: 192, ಬೆಲೆ: ರೂ.210
ಪ್ರಕಾಶಕರು: ರಾಷ್ಟ್ರ ಕವಿ ಗೋವಿಂದ್ ಪೈ ಸಂಶೋಧನಾ ಕೇಂದ್ರ, ಮಣಿಪಾಲ್‍ ಅಕಾಡೆಮಿ ಆಫ್  ಹೈಯರ್ ಎಜುಕೇಷನ್, ಎಂಜಿಎಂ ಕಾಲೇಜು ಆವರಣ, ಉಡುಪಿ-576102 ದೂ: 0820-2521159
ಲೇಖಕರು ಭಾಷೆ ಮತ್ತು ಶಿಕ್ಷಣ ತಜ್ಞರು, ದಶಕಗಳಿಂದ  ಶಿಕ್ಷಣದ ಕುರಿತು ಚಿಂತನೆ  ಮತ್ತು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡವರು. ಅದರಲ್ಲೂ  ಭಾಷಾ ಶಿಕ್ಷಣ, ಶಿಕ್ಷಣ ಮಾಧ್ಯಮ ಹಾಗೂ ಕನ್ನಡ ಭಾಷೆ ಅವರ ಆಸಕ್ತಿಯ ವಿಷಯಗಳು. ಶೈಕ್ಷಣಿಕ ಲೇಖನಗಳ ಹತ್ತಾರು ಸಂಕಲನಗಳನ್ನು ಪ್ರಕಟಿಸಿರುವ ಲೇಖಕ ಮಹಾಬಲೇಶ್ವರ ರಾವ್ ಭಾಷೆಯ ಕಲಿಕೆ, ಮಾತೃ ಭಾಷೆಯಲ್ಲಿ ಬೋಧನೆ, ಭಾಷಾ ನೀತಿ ಮುಂತಾದ ವಿಷಯಗಳ ಕುರಿತ ಲೇಖನಗಳನ್ನು ಈ ಕೃತಿಯಲ್ಲಿ ಬರೆದಿದ್ದಾರೆ.

ಆನೆ ಕಾಡು
ಹಿ.ಚಿ.ಬೋರಲಿಂಗಯ್ಯ
ಪುಟ: 324, ಬೆಲೆ: ರೂ.250
ಪ್ರಕಾಶಕರು: ಚಾರುಮತಿ ಪ್ರಕಾಶನ, #224, 4ನೇ ಮುಖ್ಯ ರಸ್ತೆ, 3ನೇ ಅಡ್ಡ ರಸ್ತೆ, ಚಾಮರಾಜಪೇಟೆ,
ಬೆಂಗಳೂರು-560018 ದೂ: 080-26615510
ಲೇಖಕರು ಪ್ರತಿಷ್ಟಿತ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು, ಜಾನಪದ ಹಾಗೂ ಬುಡಕಟ್ಟು  ವಿದ್ವಾಂಸರೂ  ಹೌದು. 25 ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಲೇಖಕರೇ  ಹೇಳಿದಂತೆ  ಸಮಯ ಸಿಕ್ಕಾಗಲೆಲ್ಲ ಒಂದುರೀತಿ ಅಲೆಮಾರಿಯಾಗಿ ಗಿರಿಜನ ಹಾಡಿಗಳನ್ನು ಸುತ್ತಿದವರು. ಇದೀಗ ಕಾಡು ಮತ್ತು ಗಿರಿಜನ  ಹಾಡಿಗಳಲ್ಲಿನ  ಅಲೆದಾಟದ ಅನುಭವಗಳನ್ನು ಕಾದಂಬರಿ ರೂಪದಲ್ಲಿ ಕಟ್ಟಿಕೊಡುವ  ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಿದ್ದಾರೆ.

ರೈತರ ಆತ್ಮಹತ್ಯೆ ನಾಗರಿಕತೆಗೊಂದು ಕಳಂಕ
ಸಂಪಾದಕರು: ಅಲ್ಲಮಪ್ರಭು ಬೆಟ್ಟದೂರು, ಬಸವರಾಜ ಆಕಳವಾಡಿ
ಪುಟ: 440, ಬೆಲೆ: ರೂ.400
ಪ್ರಕಾಶಕರು: ಸಹಕಾರ ಪ್ರತಿಭಾ  ಪ್ರಕಾಶನ, ತಿರುಳ್ಗನ್ನಡ  ಸಾಹಿತಿಗಳ ಸಹಕಾರ ಸಂಘ, ನಿ. ಕೊಪ್ಪಳ-583231
ದೂ: 9844049205
ದೇಶದ ಕೃಷಿ ಬಿಕ್ಕಟ್ಟಿನಲ್ಲಿದೆ. ಭೂಮಿ ಊಳುವ ರೈತ ಸಂಕಷ್ಟದಲ್ಲಿದ್ದಾನೆ. ಕೃಷಿಯಲ್ಲಿ ನಿರೀಕ್ಷಿತ ಲಾಭ ದೊರೆಯದೇ  ಸಾಲ ಮಾಡಿಕೊಂಡ ರೈತ ಆತ್ಮಹತ್ಯೆಯ ದಾರಿ ಹಿಡಿದ್ದಾನೆ. ಇಂಥ ಸಂದರ್ಭದಲ್ಲಿ ಕೊಪ್ಪಳದ ಸಮಾನ ಮನಸ್ಕ ವಿಚಾರವಾದಿಗಳು ಒಂದು ಸಹಕಾರ ಸಂಘ ಮಾಡಿಕೊಂಡು ಅದರ ಮೂಲಕ ಸಾಹಿತಿಗಳು, ಕೃಷಿ ವಿಷಯ ತಜ್ಞರು, ಮನೋ ವಿಜ್ಞಾನಿಗಳು,  ತಜ್ಞ  ವೈದ್ಯರು ಹಾಗೂ ವಿಚಾರವಾದಿಗಳಿಂದ  ರೈತರ ಬದುಕನ್ನು ಹಸನುಗೊಳಿಸಲು ಅಗತ್ಯವಿರುವ ಮಾಹಿತಿಯುಳ್ಳ ಲೇಖನಗಳನ್ನು ಬರೆಸಿ ಪ್ರಕಟಿಸುವ ಮಹತ್ಕಾರ್ಯವನ್ನು ಪ್ರಸ್ತುತ ಕೃತಿಯ ಮೂಲಕ ಮಾಡಿದೆ. ರೈತರ ಆತ್ಮ ಹತ್ಯೆಗೆ ಕಾರಣ, ಪರಿಹಾರಗಳು, ಕುರಿತ ವಿಚಾರ ಪೂರ್ಣ ಲೇಖನಗಳು ಮತ್ತು ರೈತರ ಬದುಕಿನ ಬವಣೆಯನ್ನು ತೆರೆದಿಡುವ ಕವನಗಳು ಇಲ್ಲಿವೆ.

ಏರು ದಾರಿಯಲ್ಲಿ
ಡಾ. ನೀರ್ಕಜೆ ತಿರುಮಲೇಶ್ವರ  ಭಟ್ಟ
ಪುಟ: 174, ಬೆಲೆ: ರೂ.120
ಪ್ರಕಾಶನ: ಡಾ.ಎನ್.ತಿರುಮಲೇಶ್ವರ ಭಟ್ಟ, ‘ಮಕರಂದ’,  2ನೇಕ್ರಾಸ್,  ಮಾರುತಿ ನಗರ,  ಪರ್ಕಳ-576107. ದೂ:0820-2521990
ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ತಮ್ಮ ಸಹೋದ್ಯೋಗಿಯಾಗಿದ್ದು, ಜೊತೆಗೇ ನಿವೃತ್ತಿಗೊಂಡ ಕನ್ನಡ  ಪ್ರಾಧ್ಯಾಪಕ ಡಾ.ಉಪ್ಪಂಗಳ  ರಾಮ ಭಟ್ಟರ ಜೀವನ ಮತ್ತು  ಬರಹಗಳನ್ನು  ಈ  ಕೃತಿಯಲ್ಲಿ ಇಂಗ್ಲಿಷ  ಪ್ರಧ್ಯಾಪಕ ಡಾ.ನೀರ್ಕಜೆ ತಿರುಮಲೇಶ್ವರ ಭಟ್ಟ ಅವಲೋಕಿಸಿದ್ದಾರೆ.

ನಮ್ಮ ದಿನಗಳು ಮತ್ತು ಇತರ ಪ್ರಬಂಧಗಳು
ಮೇಟಿಕೆರೆ ಹಿರಿಯಣ್ಣ
ಪುಟ: 144, ಬೆಲೆ: ರೂ.100
ಪ್ರಕಾಶನ: ಜನಪದ ಪ್ರಕಾಶನ, ಚನ್ನರಾಯ ಪಟ್ಟಣ, ಹಾಸನ ಜಿಲ್ಲೆ. ದೂ: 9449580278
ಲೇಖಕರು ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಈ ಕೃತಿಯಲ್ಲಿ ಹದಿಮೂರು ಪ್ರಬಂಧಗಳಿವೆ. ನಮ್ಮ ಸುತ್ತಲಿನ ಸಮಾಜದಲ್ಲಿನ ಬೆಳವಣಿಗೆಗಳನ್ನು ಮುಂದಿಟ್ಟುಕೊಂಡು ವಿಡಂಬನೆ, ವಿಮರ್ಶೆ ಮಾಡಲಾಗಿದೆ. ಸಮಾಜದಲ್ಲಿನ ಬೈಗುಳ, ಜಾನಪದ ನುಡಿಗಟ್ಟುಗಳ ವಿಶ್ಲೇಷಣೆಯೂ ಈ ಪ್ರಬಂಧಗಳಲ್ಲಿದೆ.

Leave a Reply

Your email address will not be published.