ಹೊಸ ಪುಸ್ತಕ

ಜೀವ ನದಿಗಳ ಸಾವಿನ ಕಥನ
ಶಿವಾನಂದ ಕಳವೆ
ಪುಟ: 160,
ಬೆಲೆ: ರೂ.150
ಪ್ರಕಾಶಕರು:
ಸಾಹಿತ್ಯ ಪ್ರಕಾಶನ,
ಕೊಪ್ಪಿಕರ್ ಬೀದಿ,
ಹುಬ್ಬಳ್ಳಿ-580020
ದೂ: 0836-2367676
ಲೇಖಕ ಶಿವಾನಂದ ಕಳವೆ ಕಳೆದ ಎರಡು ದಶಕಗಳಿಂದ ಜಲ ಸಂರಕ್ಷಣೆಯ ಜನ ಜಾಗೃತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಹಲವಾರು ನದಿ ಕಣಿವೆಗಳು, ಹಳ್ಳ-ಕೊಳ್ಳಗಳನ್ನು ಸುತ್ತಾಡಿ ಅಧ್ಯಯನ ನಡೆಸಿದ್ದಾರೆ. ಪ್ರಸ್ತುತ ಕೃತಿಯಲ್ಲಿ ರಾಜ್ಯದ ನದಿಗಳ ಪರಿಸ್ಥಿತಿಯ ವಾಸ್ತವ ಲೋಕವನ್ನು ತೆರೆದಿಟ್ಟಿದ್ದಾರೆ. ನದಿಗಳ ಸಾವಿನ ಕಾರಣಗಳು ಮತ್ತು ಪರಿಹಾರದ ಮಾರ್ಗಗಳನ್ನು ಇಲ್ಲಿ ಸೂಚಿಸಿದ್ದಾರೆ.

ಮೌನಗರ್ಭದ ಒಡಲು
ಮಾಧವಿ ಭಂಡಾರಿ ಕೆರೆಕೋಣ
ಪುಟ: 80,
ಬೆಲೆ: ರೂ.70
ಪ್ರಕಾಶಕರು:
ಬಂಡಾಯ ಪ್ರಕಾಶನ,
`ಸಹಯಾನ’ ಕೆರೆಕೋಣ ಅರೇಅಂಗಡಿ,
ಹೊನ್ನಾವರ, ಉತ್ತರ ಕನ್ನಡ-581334
ದೂ: 8762518640
ಇದೊಂದು ಕವನ ಸಂಕಲನವಾಗಿದ್ದು, 45 ಕವನಗಳನ್ನು ಒಳಗೊಂಡಿದೆ. ಕವಯತ್ರಿ ಮಾಧವಿ ಭಂಡಾರಿಯವರ `ಮೌನಗರ್ಭದ ಒಡಲು’ ಕವನ ಸಂಕಲನ ಇಂದಿನ ಪ್ರಕ್ಷುಬ್ದ ಭಾರತದ ಚಿತ್ರಣವನ್ನು ಒಡಲಲ್ಲಿಟ್ಟುಕೊಂಡು ಯಾವುದೇ ವಾದಗಳಿಗೆ ಅಂಟಿಕೊಳ್ಳದೆ ಹೇಳಬೇಕಾದ್ದನ್ನು ಕವನಗಳ ಮೂಲಕ ನೇರವಾಗಿ ಹೇಳುತ್ತದೆ. ಹೇಳುವ ದನಿ ಮೃದುವಾದರೂ ನಿಲುವು ಮಾತ್ರ ಗಟ್ಟಿಯಾಗಿರುವುದು ಸ್ಪಷ್ಟ.

ರಮ್ಯಗಾನ
ಜೀವರಾಜ ಹನುಮಂತಪ್ಪ ಛತ್ರದ
ಪುಟ: 84,
ಬೆಲೆ: ರೂ.110
ಪ್ರಕಾಶಕರು:
ಖುಷಿ ಪ್ರಕಾಶನ,
ನಂ-117, ಶ್ರಾವಣಿ
ಪ್ಯಾಲೇಸ್, ಹಿರೇಹಳ್ಳಿ
ಪೋಸ್ಟ್, ತಾಲ್ಲೂಕು ಮತ್ತು
ಜಿಲ್ಲೆ-ತುಮಕೂರು-572168
ದೂ: 9964649325
ಜೀವರಾಜ ಛತ್ರದ ಗ್ರಾಮೀಣ ಸೊಗಡಿನ ಕವಿ. “ಉದಯ ರಶ್ಮಿ’’ ಕವನ ಸಂಕಲನದ ಮೂಲಕ ಸಾರಸ್ವತಲೋಕ ಪ್ರವೇಶಿಸಿದವರು. ಒಂದು ವಿಷಯ ವಸ್ತುವಿಗೆ ಕಟ್ಟುಬೀಳದೆ ವಿಭಿನ್ನ ಆಯಾಮಗಳಲ್ಲಿ ಕವಿತೆ ಕಟ್ಟುವ ಕಲೆಯನ್ನು “ಇವರ ರಮ್ಯಗಾನ’’ ಕವನ ಸಂಲನದಲ್ಲಿ ಕಾಣಬಹುದು. ಈ ಕವನ ಸಂಕಲನದಲ್ಲಿ 61 ಕವಿತೆಗಳಿದ್ದು, ಗಾನಪ್ರಧಾನವಾಗಿರುವುದು ವಿಶೇಷ.

ಶಾಂತಿದೂತ
ದತ್ತಗುರು ಕಂಠಿ
ಪುಟ: 114, ಬೆಲೆ: ರೂ.125
ಪ್ರಕಾಶಕರು:
ಶಿಖರ ಸಾಹಿತ್ಯ, ಅನಗೋಳ,
ಬೆಳಗಾವಿ. ದೂ: 9483648230
ಇದೊಂದು ಮಕ್ಕಳ ಕಥಾ ಸಂಕಲನ.
ಇದರಲ್ಲಿ 30 ಕಥೆಗಳಿವೆ. ಕಥೆ ಗಾರರಾದ ದತ್ತ ಗುರು ಕಂಠಿ ತಮ್ಮ ಜೀವನ ಅನುಭವದ ಹಿನ್ನೆಲೆಯಲ್ಲಿ ಪ್ರಸಕ್ತ ಬೆಳ ವಣಿಗೆಗಳನ್ನು ಸೇರಿಸುತ್ತ ಮಕ್ಕಳ ಅಭಿರುಚಿ, ನೀತಿ ಪ್ರಜ್ಞೆ ಹಾಗೂ ಮನೋವಿಕಾಸಗೊಳ್ಳುವ ಹಾಗೆ ಕಥೆಗಳನ್ನು ನಿರೂಪಿಸಿದ್ದಾರೆ.

ಮೊಳಕೆ ಕಾಳು
ಗೌಡಗೆರೆ ಮಾಯೂಶ್ರೀ
ಪುಟ: 144,
ಬೆಲೆ: ರೂ.100
ಪ್ರಕಾಶಕರು:
ಜನಮುಖಿ ಪ್ರಕಾಶನ,
ಸಂ.ಯು-8, ನೀಲಗಿರಿ ಪಾಪಣ್ಣ ಬಡಾವಣೆ,
6ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ,
ಶ್ರೀರಾಮಪುರ, ಬೆಂಗಳೂರು- 560021
ದೂ: 9972516266
ಲೇಖಕ ಮಾಯೂಶ್ರೀ ತಮ್ಮ ಜೀವನದ ಎರಡು ದಶಕಗಳ ಕಾಲಮಾನದಲ್ಲಿ ಆಯಾಯ ಸಂದರ್ಭಕ್ಕೆ ಹಾಗೂ ಬೆಳವಣಿಗೆಗಳಿಗೆ ಪ್ರತಿಸ್ಪಂದಿಯಾಗಿ ಬರೆದ ವಿಶ್ಲೇಷಣೆ ರೂಪದ 43 ಲೇಖನಗಳನ್ನು ಒಟ್ಟುಗೂಡಿಸಿ ಇಲ್ಲಿ ಪ್ರಕಟಿಸಿದ್ದಾರೆ. “ಮೊಳಕೆ ಕಾಳು’’ ಲೇಖಕರ ಮೊದಲ ಕೃತಿಯಾದರೂ ಕೆಲವು ಗಂಭೀರ ಚಿಂತನೆಯ ಲೇಖನಗಳಿಂದ ಕೃತಿಯ ಮೌಲ್ಯ ಹೆಚ್ಚುತ್ತದೆ.

 

ಪ್ರಸ್ತಾಪನ
ಪುಟ: 252
ಬೆಲೆ: ರೂ.220
ಲೇಖಕ ಡಾ.ಜಾಜಿ ದೇವೇಂದ್ರಪ್ಪ
ಹೊಸ ತಲೇಮಾರಿನ ಪ್ರತಿಭಾವಂತ ಬರಹಗಾರರು.
ಕನ್ನಡ ಮತ್ತು ತೆಲಗು ಭಾಷೆಗಳ ಸಾಹಿತ್ಯವನ್ನು ಚೆನ್ನಾಗಿ ತಿಳಿದುಕೊಂಡವರು. ಈ ಕೃತಿಯಲ್ಲಿ ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿನ ದ್ವಿಭಾಷೆಗಳ ಪರಿಸರ, ಶಾಸನಗಳು, ಜಾನಪದ ಮತ್ತು ವೈಚಾರಿಕ ಸಾಹಿತ್ಯ, ಸಮುದಾಯ ಅಧ್ಯಯನ ಹೀಗೆ ಹಲವು ವಿಷಯಗಳ ಸಂಶೋಧನಾ ಲೇಖನಗಳು ಒಳಗೊಂಡಿವೆ.

ಸ್ಥಳನಾಮಗಳು
ಪುಟ: 368,
ಬೆಲೆ: ರೂ.310

ಕನ್ನಡದಲ್ಲಿ ಸ್ಥಳನಾಮಗಳ ಅಧ್ಯಯನ ತುಂಬ ಅಪರೂಪವಾದುದು. ಅಂಥದ್ದರಲ್ಲಿ ಲೇಖಕ ಡಾ.ಜಾಜಿ ದೇವೇಂದ್ರಪ್ಪ ಅವರು ದ್ವಿಭಾಷಿಕ ಅಂದರೆ ಕರ್ನಾಟಕ ಹಾಗೂ ಆಂಧ್ರಪ್ರದೇಶದ ತಲಾ ಎರಡು ತಾಲ್ಲೂಕುಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿನ ಊರುಗಳ ನಾಮಗಳ ಮೂಲಕ ಭಾಷೆ, ಸಾಮಾಜಿಕ ಮತ್ತು ಭೌಗೋಳಿಕ ಪರಿಸರ, ಜೀವನ ವಿಧಾನ, ಇತಿಹಾಸ ಮತ್ತು ಸಂಸ್ಕೃತಿಯನ್ನು ತೌಲನಿಕವಾಗಿ ಅಧ್ಯಯನ ಮಾಡಿದ್ದಾರೆ. ಆ ಅಧ್ಯಯನ ಪ್ರಬಂಧವೇ ಈ ಕೃತಿ.

ನೇಕಾರ ಮಹಿಳೆ ಸಂಸ್ಕೃತಿ
ಪುಟ: 56,
ಬೆಲೆ: ರೂ.50

ನೇಕಾರಿಕೆ ಇಂದು ತೀವ್ರ ಸಂಕಷ್ಟದಲ್ಲಿದೆ. ಮೊದಲಿನಂತೆ ಬಟ್ಟೆ ನೇಯ್ದು, ಮಾರಾಟ ಮಾಡಿ ಬಂದ ಹಣದಿಂದ ನೆಮ್ಮದಿ ಜೀವನ ನಡೆಸುವ ಕಾಲ ಇದಲ್ಲ. ದೊಡ್ಡ ದೊಡ್ಡ ಕಾರ್ಖಾನೆಗಳು ಬಂದ ಮೇಲೆ ನೇಕಾರ ಮಹಿಳೆಯರು ಕೂಲಿ ಕೆಲಸ ಮಾಡುವಂತಾಗಿದೆ. ಪ್ರಸ್ತುತ ಕೃತಿಯಲ್ಲಿ ನೇಕಾರ ಮಹಿಳೆಯರ ಬದಲಾದ ಜೀವನ ಸ್ಥಿತಿ ಮತ್ತು ಪಾರಂಪರಿಕ ಸಂಸ್ಕೃತಿಯ ವಿವರವಾದ ಅಧ್ಯಯನವನ್ನು ಕ್ಷೇತ್ರಕಾರ್ಯದ ಮೂಲಕ ಮಾಡಲಾಗಿದೆ.

ಮೇಲಿನ ಮೂರು ಪುಸ್ತಕಗಳ ಲೇಖಕರು ಡಾ.ಜಾಜಿ ದೇವೇಂದ್ರಪ್ಪ. ಪ್ರಕಾಶಕರು: ಎಸ್.ಎಲ್.ಎನ್.ಪಬ್ಲಿಕೇಷನ್, ನಂ.3437, 4ನೇ ಮುಖ್ಯರಸ್ತೆ, ಶಾಸ್ತ್ರೀನಗರ, ಬನಶಂಕರಿ 2ನೇ ಹಂತ, ಬೆಂಗಳೂರು-560028 ದೂ: 9972129376

ಬಾರೆಲೆ ಹಕ್ಕಿ
ಭಾಗೀರಥಿ ಹೆಗಡೆ
ಪುಟ: 128,
ಬೆಲೆ: ರೂ.105
ಲೇಖಕಿ ಭಾಗೀರತಿ ಹೆಗಡೆ
ಸಣ್ಣಕತೆ, ಕವಿತೆ, ನಾಟಕ, ಕಾದಂಬರಿ ಹಾಗೂ ನಗೆಬರಹ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿದವರು. ಪ್ರಸ್ತುತ ಕೃತಿಯಲ್ಲಿ 13 ಲಲಿತ ಪ್ರಬಂಧಗಳು ಮತ್ತು ಮೂರು ವೈಚಾರಿಕ ಪ್ರಬಂಧಗಳನ್ನು ಬರೆದಿದ್ದಾರೆ. ಲೋಕವನ್ನು ಸುತ್ತಿ, ಎಲ್ಲವನ್ನು ಕಂಡು ಓದುಗನ ತುಟಿಯಂಚಿನಲ್ಲಿ ನಗೆ ಮೂಡಿಸುವುದೇ ಇವುಗಳ ವೈಶಿಷ್ಟ್ಯ.

ಮುಂಜಾವದ ಹನಿಗಳು
ಗಾಯಿತ್ರೀ ರಾಘವೇಂದ್ರ
ಪುಟ: 104,
ಬೆಲೆ: ರೂ.80

ಮಲೆನಾಡಿನ ಪ್ರತಿ ಮುಂಜಾವು ಹೊಸತಾಗಿರುತ್ತದೆ. ನಿಸರ್ಗದ ನಡುವೆ ವಾಸಿಸುವ ಇಲ್ಲಿನ ಜನರಲ್ಲಿ ಉಲ್ಲಾಸ, ಉತ್ಸಾಹವನ್ನು ತುಂಬುವುದೆ ಈ ಮುಂಜಾವು. ಇಂಥ ಮುಂಜಾವಿನ ವಾತಾವರಣದಲ್ಲಿರುವ ಕವಯತ್ರಿ ಗಾಯಿತ್ರಿ ರಾಘವೇಂದ್ರ ಅವರು ಕಣ್ಣಿಗೆ ಕಾಣುವ ನಿಸರ್ಗದ ದೃಶ್ಯಗಳನ್ನು ಕಂಡು ಅನುಭವಿಸಿ ಹನಿಗವನಗಳ ರೂಪದಲ್ಲಿ ತಮ್ಮ ಭಾವನೆಗಳನ್ನು ಇಲ್ಲಿ ವ್ಯಕ್ತಪಡಿಸಿದ್ದಾರೆ.

ಮೇಲಿನ ಎರಡು ಪುಸ್ತಕಗಳ ಪ್ರಕಾಶಕರು: ಅಕ್ಷಯ ಪ್ರಕಾಶನ, ನಂ-90, ಬಸಪ್ಪ ಬಡಾವಣೆ, ಪಟ್ಟಣಗೆರೆ ರಾಜರಾಜೇಶ್ವರಿನಗರ,  ಬೆಂಗಳೂರು-560098 ದೂ:9986477035

ಮಹಿಳೆ ಮತ್ತು ದೇಹರಾಜಕಾರಣ
ಡಾ.ಭಾರತೀದೇವಿಪಿ.
ಪುಟ: 86, 
ಬೆಲೆ: ರೂ.100

ಅತೀ ಸೂಕ್ಷ್ಮವಾದ ಸ್ತ್ರೀವಾದದ ಬರಹಗಳನ್ನು ಒಳಗೊಂಡ ಕೃತಿ ಇದಾಗಿದೆ. ಪುಸ್ತಕದ ಹೆಸರೇ ಹೇಳುವಂತೆ “ಮಹಿಳೆ ಮತ್ತು ದೇಹರಾಜಕಾರಣ” ಎನ್ನುವುದು ಹೆಣ್ಣು ಶೋಷಣೆಯ ಸರಕಾಗಿರುವುದನ್ನು ವಿವಿಧ ಆಯಾಮಗಳಲ್ಲಿ ಅಭಿವ್ಯಕ್ತಿಸುತ್ತದೆ. ಲೇಖಕಿ ಡಾ.ಭಾರತೀದೇವಿಯವರು ಹೆಣ್ಣಿನ ತಲ್ಲಣ, ನೋವು, ಆತಂಕ ಮತ್ತು ಆಕೆ ಅನುಭವಿಸುತ್ತಿರವ ಹಿಂಸೆಯನ್ನು ಸೂಕ್ಷ್ಮ ಚಿಂತನೆಗಳ ಮೂಲಕ ಈ ಕೃತಿಯಲ್ಲಿ ಬಿಡಿಸಿಟ್ಟಿದ್ದಾರೆ.

ಸ್ತ್ರೀ ಮನದ ಬಿಂಬ-ಪ್ರತಿಬಿಂಬ
ಡಾ.ಕೆ.ಆರ್.ಸಂಧ್ಯಾರೆಡ್ಡಿ
ಪುಟ: 106, 
ಬೆಲೆ: ರೂ.120

ಲೇಖಕಿ ಡಾ.ಕೆ.ಆರ್.ಸಂಧ್ಯಾರೆಡ್ಡಿಯವರು ಪ್ರಮುಖ ಸ್ತ್ರೀವಾದಿ ಲೇಖಕಿ. ಪ್ರಸ್ತುತ ಕೃತಿಯಲ್ಲಿ ಸ್ತ್ರೀ ಶೋಷಣೆಯ ಕುರುಹುಗಳನ್ನು ಜಾನಪದ ಕಾವ್ಯಗಳ ಮೂಲಕ ಉದಾಹರಣೆ ಸಮೇತ ವಿಶ್ಲೇಷಿಸುವ ಪ್ರಯತ್ನವನ್ನು ಇಲ್ಲಿ ಮಾಡಿದ್ದಾರೆ. ಆದಿಕಾಲದಿಂದಲೂ ಹೆಣ್ಣನ್ನು ಆಕೆ ಇದ್ದ ಸ್ಥಿತಿಯಲ್ಲೇ ಶೋಷಣೆಗೆ ಈಡುಮಾಡಿದ ಪರಿಯನ್ನು ಲೇಖಕರು ಸರಳವಾಗಿ ಬಿಡಿಸಿಟ್ಟಿದ್ದಾರೆ.

ಮೇಲಿನ ಎರಡು ಪುಸ್ತಕಗಳ ಪ್ರಕಾಶಕರು: ಕರ್ನಾಟಕ ಸಂಘ(ರಿ), ಎಂ.ಎಲ್.ಶ್ರೀಕಂಠೇಶಗೌಡ ಸಂಶೋಧನ ಕೇಂದ್ರ,ಗುರುಭವನದ ಹಿಂಭಾಗ, ಆರ್.ಪಿ.ರಸ್ತೆ,ಮಂಡ್ಯ-571401  ದೂ:08232-227755

Leave a Reply

Your email address will not be published.