ಹೊಸ ಪುಸ್ತಕ

ಗಬ್ಬೂರ್ ಗಜಲ್

ರಮೇಶ ಗಬ್ಬೂರ್
ಪುಟಸಂಖ್ಯೆ: 78, ಬೆಲೆ: ರೂ.78
ಪ್ರಕಾಶನ: ಆಲ್ಪೈನ್ ಪಬ್ಲಿಕೇಷನ್ಸ್, ಕೇರಾಫ್ ದೀಪ್ ಸಮಾಜ ಸೇವಾ ಕೇಂದ್ರ,
ಎಸ್. ತಿಮ್ಮಪ್ಪ ಸಿಂಗನಾಳ ಕಾಂಪ್ಲೆಕ್ಸ್, ಆರ್.ಜಿ.ರೋಡ, ಗಂಗಾವತಿ-583227 .

ದೂ: 9164635655

ಹೈದ್ರಾಬಾದ್ ಕರ್ನಾ ಟಕ ಸಾಹಿತ್ಯದ ಒಂದು ವಿಶಿಷ್ಠ ಪ್ರಕಾರ ಗಜಲ್. ಕೊಪ್ಪಳ ಜಿಲ್ಲೆಯವರಾದ ಕವಿ ರಮೇಶ ಗಬ್ಬೂರ್ ಗಜಲ್‍ಗಳ ಮೂಲಕ ತಮ್ಮ ಸುತ್ತಲಿನ ಪ್ರಪಂಚವನ್ನು ತೆರೆದಿಡುವ ಪ್ರಯತ್ನವನ್ನು ಇಲ್ಲಿ ಮಾಡಿದ್ದಾರೆ. ‘ಮನುಜ ಪ್ರೀತಿಯ ಕೃತಕತೆ ತಿಳಿಯಲು ದುರ್ಬೀನಿನ ಸಹಾಯ ನನಗೆ ಬೇಕೆನಿಸಲಿಲ್ಲ. ಸ್ವಾತಂತ್ರ್ಯದ ಮಾತು ಸಂತೆಯಲಿ ಮಾರುವ ವಸ್ತುವಾಗಿ ನಾನು ಕಷ್ಟಗಳ ಪ್ರೀತಿಸುತ್ತಿದ್ದೆ’ ಎನ್ನುವ ಮೂಲಕ ಕವಿ ರಮೇಶ್ ಗಬ್ಬೂರ್ ಸೋಗಲಾಡಿಗಳನ್ನು, ಜೀವವಿರೋಧಿಗಳನ್ನು ಛೇಡಿಸುತ್ತಾರೆ. ಜಾತಿ ವ್ಯವಸ್ತೆಯ ದೌರ್ಜನ್ಯಗಳನ್ನು ಮುಲಾಜಿಲ್ಲದೇ ಖಂಡಿಸುತ್ತಾ ಸಮಾಜದಲ್ಲಿನ ತವಕ ತಲ್ಲಣಗಳನ್ನು ಅವರು ಇಲ್ಲಿನ ಗಜಲ್‍ಗಳಲ್ಲಿ ದಾಖಲಿಸಿದ್ದಾರೆ.

ಅರಿವು ಅಕ್ಷರದಾಚೆ…

ಚಂದ್ರಶೇಖರ ವಸ್ತ್ರದ
ಪುಟ: 140, ಬೆಲೆ: ರೂ.100
ಪ್ರಕಾಶಕರು: ಕ್ಷಮಾ ಪ್ರಕಾಶನ,ಬೆಳಗು,ಆನಂದಾಶ್ರಮ ರಸ್ತೆ,
ಪಂಚಾಕ್ಷರಿ ನಗರ, 6ನೇ ಕ್ರಾಸ್, ಗದಗ-582101,
ದೂ: 9448185841

ಇದೊಂದು ಚೌಪದಿ ಕವನ ಸಂಕಲನ. ಕವಿ ಚಂದ್ರಶೇಖರ ವಸ್ತ್ರದ ತಮ್ಮ ಅನುಭವದ ಅನುಭೂತಿಯನ್ನು ಇಲ್ಲಿ ಚೌಪದಿಗಳ ಮೂಲಕ ತಿಳಿಯಪಡಿಸಿದ್ದಾರೆ. ಇದರಲ್ಲಿ ಲೋಕಸತ್ಯಗಳಿವೆ, ಬದುಕಿನ ಕಟುವಾಸ್ತವದ ಸಂಗತಿಗಳಿವೆ, ಹಾಗೆಯೇ ಬದುಕಿಗೆ ಬೇಕಾದ ಹಿತನುಡಿಗಳೂ ಇವೆ.

ತಾನೊಂದು
ಬಗೆದರೆ… ಮತ್ತೆ?

ಶ್ರೀಮತಿ ಯಶೋದಾ ಜೆನ್ನಿ
ಪುಟಸಂಖ್ಯೆ: 64, ಬೆಲೆ: ರೂ.60 ಪ್ರಕಾಶನ: ಇಂದಿರಾ
ಹಾಲಂಬಿ, ಸಂದೀಪ ಸಾಹಿತ್ಯ, ಆತ್ರಾಡಿ, ಉಡುಪಿ-576107
ದೂ: 9480655247
ಯಶೋದಾ ಜೆನ್ನಿ ಶಿಕ್ಷಕಿಯಾಗಿ, ಲೇಖಕಿಯಾಗಿ, ಮಾನವೀಯ ಚಿಂತನೆಗಳನ್ನು ಹೊಂದಿದ ಮಹಿಳಾಪರ ಧ್ವನಿಯಾಗಿ ಹೋರಾಟ ನಡೆಸಿ ದವರು. ಸಾಹಿತ್ಯದಲ್ಲೂ ಕಥೆ, ಕಾದಂಬರಿ, ಮಕ್ಕಳ ಸಾಹಿತ್ಯ ಹಾಗೂ ನಾಟಕ ಮೊದಲಾದ ಪ್ರಕಾರಗಳಲ್ಲಿ ಕೃಷಿ ಮಾಡಿದವರು. ಇದೀಗ ‘ತಾನೊಂದು ಬಗೆದರೆ…ಮತ್ತೆ? ಎಂಬ ಸಾಮಾಜಿಕ ನಾಟಕವನ್ನು ರಚಿಸಿದ್ದಾರೆ. ಇದು ಸಂಸಾರದಲ್ಲಿ ಅಸಮಾನತೆ ಹಾಗೂ ಗಂಡು ಮತ್ತು ಹೆಣ್ಣು ಮಕ್ಕಳಲ್ಲಿ ತಾರತಮ್ಯ ಮಾಡಬಾರದೆಂಬ ಸಂದೇಶ ನೀಡುವುದಾಗಿದೆ.

ಹಿಂದೂ ಮಂದಿರಗಳು ಹಾಗೂ ಔರಂಗಜೇಬನ ಆದೇಶಗಳು

ಮೂಲ ಉರ್ದು: ಬಿ.ಎನ್.ಪಾಂಡೆ, ಕನ್ನಡಕ್ಕೆ: ಹಸನ್ ನಯೀಂ ಸುರಕೋಡ
ಪುಟ: 56, ಬೆಲೆ: ರೂ.50

ಪ್ರೇಮಲೋಕದ ಮಾಯಾವಿ
ಹಸನ್ ನಯೀಂ ಸುರಕೋಡ
ಪುಟ: 158, ಬೆಲೆ: ರೂ.120

ರಸೀದಿ ತಿಕಿಟು
ಕನ್ನಡ ಅನುವಾದ: ಹಸನ್ ನಯೀಂ ಸುರಕೋಡ
ಪುಟ: 248, ಬೆಲೆ: ರೂ.160

ಈ ಮೂರು ಪುಸ್ತಕಗಳ ಪ್ರಕಾಶಕರು: ಲಡಾಯಿ ಪ್ರಕಾಶನ,
ನಂ.21, ಪ್ರಸಾದ್ ಹಾಸ್ಟೆಲ್, ಗದಗ -582101.
ದೂ: 9480286844.

ಹಾಯ್… ಅಂಗೋಲಾ!

ಪ್ರಸಾದ್ ನಾಯ್ಕ್
ಪುಟ: 240, ಬೆಲೆ: ರೂ.240
ಪ್ರಕಾಶನ: ಬಹುರೂಪಿ, 1,’ನಾಕುತಂತಿ,
ಬಸಪ್ಪ ಬಡಾವಣೆ, ಆರ್‍ಎಂವಿ 2ನೇ ಘಟ್ಟ,
ಸಂಜಯನಗರ, ಬೆಂಗಳೂರು-560094.
ದೂ: 7019182729

ಇದೂಂದು ಪ್ರವಾಸ ಕಥನ. ಸರಕಾರಿ ಕೆಲಸದ ನಿಮಿತ್ತ ದಕ್ಷಿಣ ಆಫ್ರಿಕಾದ ಅಂಗೋಲಾಕ್ಕೆ ಹೋಗುವ ಅವಕಾಶ ಪಡ್ಡೆದ ಲೇಖಕ ಪರಸದ ನಾಯ್ಕ ಆಂಗೋಲಾದಲ್ಲಿನ ಜನಜೀವನ, ಸಾಮಾಜಿಕ, ಆರ್ಥಿಕ ಸ್ಥಿತಿಗತಿ, ಅಲ್ಲಿನ ಕಾಡಿನ ವಾತಾವರಣ, ಜನರ ಜೀವನ ಶೈಲಿ, ಸರಕಾರಿ ವ್ಯವಸ್ಥೆ ಹೀಗೆ ಪ್ರತಿಯೊಂದನ್ನು ಕಂಡು, ಅನುಭವಿಸಿ ಈ ಕೃತಿಯ ಮೂಲಕ ನಾಡಿನ ಇತರ ಜನರಿಗೂ ಆ ಅನುಭವಗಳು ದಕ್ಕುವಂತೆ ಮಾಡ್ದಿದಾರೆ. ಇಲ್ಲಿ ಪ್ರಕಟಗೊಂಡ ಲೇಖನೆಗಳು ಕನ್ನಡದ ಕೆಲವು ಬ್ಲಾಗಗಳಲ್ಲಿ ಪ್ರಕಟಗೊಂಡಿದ್ದರೂ ಮತ್ತೆ ಮತ್ತೆ ಅವುಗಳನ್ನು ಓದಬೇಕೆನಿಸುವಷ್ಟು ಕುತೂಹಲಕಾರಿಯಾಗಿವೆ.

ಒಡಲ ಖಾಲಿ ಪುಟ

ಕಾವೇರಿಎಸ್.ಎಸ್.
ಪುಟ: 152, ಬೆಲೆ: ರೂ.120
ಪ್ರಕಾಶನ: ಪ್ರಜೋದಯ ಪ್ರಕಾಶನ,ಗಂಧದಕೋಠಿ ಹಿಂಭಾಗ,
ಗೋಕುಲ್ ಹೋಟೆಲ್‍ರಸ್ತೆ, ಕೆ.ಆರ್.ಪುರಂ, ಹಾಸನ-573201.
ದೂ: 8792276742

‘ಒಡಲ ಖಾಲಿ ಪುಟ’ ಲೇಖಕಿ ಕಾವೇರಿಅವರಎರಡನೇಕೃತಿ.ಈ ಕೃತಿಯಲ್ಲಿ ನಾಲ್ಕು ಭಾಗಗಳಿವೆ. ಮೊದಲ ಭಾಗದಲ್ಲಿಕಾವೇರಿತಮ್ಮ ಬಾಲ್ಯದ ನೋವು-ನಲಿವುಗಳನ್ನು ಹಂಚಿಕೊಂಡಿದ್ದಾರೆ.ಎರಡನೇ ಭಾಗ ಪ್ರಚಲಿತ ವಿದ್ಯಮಾನಗಳ ಕುರಿತಾಗಿದ್ದರೆ ಮೂರನೇ ಭಾಗದಲ್ಲಿ ಲೇಖಕಿ ತಮ್ಮ ಮನಸ್ಸಿನ ದುಗುಡವನ್ನುಅಭಿವ್ಯಕ್ತಿಗೊಳಿಸಿದ್ದಾರೆ.ಅಂತಿಮ ಭಾಗದಲ್ಲಿ ಪ್ರೇಮ,ಪ್ರಣಯದಕುರಿತಾದ ಬರಹಗಳಿದ್ದು ಒಟ್ಟಾರೆ ಬದುಕಿನ ವಿವಿಧ ಆಯಾಮಗಳನ್ನು ಓದುಗರುಇಲ್ಲಿ ಗಮನಿಸಬಹುದು.

ಅಂತರಾಳ

ಕೆ.ಭುವನೇಶ ಮೋಕಾ
ಪುಟ: 120, ಬೆಲೆ: ರೂ.90
ಪೆಕಾಶನ: ಸರ್ವಜ್ಞ ಪ್ರಕಾಶನ,
ಮೋಕಾ-583117, ಬಳ್ಳಾರಿ ಜಿಲ್ಲೆ.
ದೂ: 9611175755

ಇದೊಂದುಕಥಾಸಂಕಲನ. ಇದರಲ್ಲಿ ಹನ್ನೆರಡು ಕತೆಗಳಿವೆ. ಕತೆಗಾರ ಭುವನೇಶ ಮೋಕಾ ಅವರುತಮ್ಮ ಸುತ್ತಣ ಪರಿಸರದಲ್ಲಿಕಂಡು, ಕೇಳಿದ ಹಾಗೂ ಅನುಭವಿಸಿದ ಸನ್ನಿವೇಶಗಳನ್ನು ಕತೆಗಳ ರೂಪದಲ್ಲಿ ಜೋಡಿಸಿದ್ದಾರೆ.ಪ್ರತಿಯೊಂದುಊರಿನಲ್ಲಿಇಂತಹ ಘಟನೆಗಳು ನಡೆಯುತ್ತವೆಯಾದರೂಅವನ್ನು ಹೇಳುವ ಮೋಕಾ ಅವರ ಶೈಲಿ ಭಿನ್ನಅನುಭವದೊಂದಿಗೆ ಓದಿಸಿಕೊಂಡು ಹೋಗುವಂತಿದೆ.

ಹಮ್ಮಿಗೆ ಬ್ರಮ್ಮತಾಕೆಟ್ಟ

ಸಂಪಾದಕರು: ಡಾ.ಸಿ.ಬಿ.ಚಿಲ್ಕರಾಗಿ
ಪುಟ: 128, ಬೆಲೆ: ರೂ.100
ಪ್ರಕಾಶನ: ಅಲ್ಲಮ ಪ್ರಕಾಶನ,
ಕಾರಟಗಿ,ಕೊಪ್ಪಳ ಜಿಲ್ಲೆ-583229,
ದೂ: 7899404101

ಕನ್ನಡ ಸಾರಸ್ವತ ಲೋಕದಲ್ಲಿ ತತ್ವಪದಗಳು ತಮ್ಮದೇಆದ ಸ್ಥಾನ ಪಡೆದಿವೆ. ವಿಶೇಷವಾಗಿ ಉತ್ತರಕರ್ನಾಟಕ ಭಾಗದಲ್ಲಿತತ್ವಪದಕಾರರು, ಸೂಫಿ ಸಂತರು, ದಾಸರು, ಶಿವಶರಣರು ಸಮಾಜದಲ್ಲಿ ಸಾಮರಸ್ಯ ಮೂಡಿಸಲು, ಜನರಜೀವನ ಶೈಲಿ ಮತ್ತು ಸಂಸ್ಕೃತಿ ಶ್ರೀಮಂತಗೊಳ್ಳಲು ಪ್ರಮುಖರಾಗಿದ್ದಾರೆ. ಲೇಖಕರಾದ ಡಾ.ಸಿ.ಬಿ.ಚಿಲ್ಕರಾಗಿ ಅವರು ಬಿ.ದೇವೇಂದ್ರಪ್ಪ ಮಾಸ್ತರ್, ಅಮೀನಗಡದಗುರುಬಸವಶಾಸ್ತ್ರಿಗಳ ಹಾಗೂ ಹುಲ್ಲೂರು ಶಿವಣ್ಣ ಅವರ ತತ್ವಪದಗಳನ್ನು ಸಂಗ್ರಹಿಸಿ ಇಲ್ಲಿಕೊಟ್ಟಿದ್ದಾರೆ.

ನರ್ಮದೆಯ ನಾಡಿನಲ್ಲಿ

ವೆಂಕಟೇಶ ಮಾಚಕನೂರ
ಪುಟ: 136, ಬೆಲೆ: ರೂ.130
ಪ್ರಕಾಶನ: ಸಾಹಿತ್ಯ ಪ್ರಕಾಶನ,
ಕೊಪ್ಪಿಕರ್ ಬೀದಿ, ಹುಬ್ಬಳ್ಳಿ-580020,
ದೂ:0836-2367676

ಪ್ರವಾಸ ಕಥನಗಳನ್ನು ಬರೆಯುವುದರಲ್ಲಿ ವಿಶಿಷ್ಟತೆ ಹೊಂದಿರುವ ಲೇಖಕ ವೆಂಕಟೇಶ ಮಾಚಕನೂರಅವರು ಈಗಾಗಲೇ ಏಳು ಪ್ರವಾಸ ಕಥನಗಳನ್ನು ಬರೆದು ಸೈ ಎನಿಸಿಕೊಂಡಿದ್ದಾರೆ.ಅದರಲ್ಲಿಎರಡು ಪ್ರವಾಸ ಕಥನಗಳು ವಿಶ್ವವಿದ್ಯಾಲಯಗಳ ಪಠ್ಯವಾಗಿದ್ದರೆಇನ್ನೆರಡು ಕೃತಿಗಳು ಅಕಾಡೆಮಿಪ್ರಶಸ್ತಿಗೆ ಭಾಜನವಾಗಿವೆ. ಪ್ರಸ್ತುತ‘ನರ್ಮದೆಯ ನಾಡಿನಲ್ಲಿ’ಕೃತಿಯಲ್ಲಿ ಮಧ್ಯಪ್ರದೇಶದ ಪ್ರವಾಸಿ ತಾಣಗಳನ್ನು, ಅಲ್ಲಿನಇತಿಹಾಸ, ಸಂಸ್ಕೃತಿ ಮತ್ತುಭೌಗೋಳಿಕ ವಿವರಗಳನ್ನು ಲೇಖಕ ವೆಂಕಟೇಶ ಮಾಚಕನೂರ ನೀಡಿದ್ದಾರೆ.

ಕನಸು ನನಸು

ಡಾ.ವರದಾ ಶ್ರೀನಿವಾಸ
ಪುಟ: 96, ಬೆಲೆ: ರೂ.135
ಪ್ರಕಾಶನ: ನಿರಂತರ ಸಾಯಿ ಕಮ್ಯೂನಿಕೇಷನ್ಸ್ ಪ್ರೈ.ಲಿ.,
1572, 7ನೇ ಮುಖ್ಯರಸ್ತೆ, ಹಂಪಿನಗರ-560104,
ದೂ: 9632812541

ಇದುಡಾ.ವರದಾ ಶ್ರೀನಿವಾಸ ಅವರ ಕವಿತೆಗಳ ಸಂಕಲನ. ಇಲ್ಲಿನ ಕವಿತೆಗಳುಅವರು ಸ್ತ್ರೀ ಸಮಾನತೆಗಾಗಿ ಹಂಬಲಿಸುವವರುಎಂಬುದನ್ನುಎತ್ತಿತೋರಿಸುತ್ತವೆ. ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನಅವರ ಕವಿತೆಗಳಲ್ಲಿ ಕಾಣುತ್ತದೆ.ಮಾನವೀಯ ಮೌಲ್ಯಗಳು ಮರೆಯಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಮನುಷ್ಯತ್ವದ ಗುಣಗಳು ಬೆಳೆಯಬೇಕಾದ ಅಗತ್ಯವನ್ನುಕವಯತ್ರಿಇಲ್ಲಿಒತ್ತಿ ಹೇಳಿದ್ದಾರೆ.

Leave a Reply

Your email address will not be published.