ಹೊಸ ಸೌರಾತೀತ ಗ್ರಹ `ಟಿಒಐ-561ಬಿ’ ಕೆರಳಿಸಿದ ಕುತೂಹಲ

-ಎಲ್.ಪಿ.ಕುಲಕರ್ಣಿ ಬಾದಾಮಿ

ಇದುವರೆಗಿನ ಅಧ್ಯಯನದ ಪ್ರಕಾರ ಈ ಹೊಸ ಗ್ರಹದಲ್ಲಿ ಜೀವಾಂಕುರ ಇರುವ ಯಾವ ಲಕ್ಷಣಗಳೂ ಕಂಡುಬAದಿಲ್ಲ. ಗ್ರಹದ ಆಂತರಿಕ ಅಧ್ಯಯನ ಇನ್ನೂ ನಡೆದಿದೆ. ಸಂಪೂರ್ಣ ಅಧ್ಯಯನದ ನಂತರ, ಅದರಲ್ಲಿ ಜೀವಿಗಳು ಇರುವ ಬಗ್ಗೆ ನಿಖರ ಮಾಹಿತಿ ಸಿಗಬಹುದು!

ಆಕಾಶದಲ್ಲಿ ಹೊಳೆಯುವ ನಕ್ಷತ್ರ, ಗ್ರಹ, ಧೂಮಕೇತು ಮುಂತಾದ ಆಕಾಶಕಾಯಗಳ ಕುರಿತು ತಿಳಿದುಕೊಳ್ಳುವುದೆಂದರೆ ಎಲ್ಲಿಲ್ಲದ ಆಸಕ್ತಿ. ಸದ್ಯ, ಆಕಾಶ ವೀಕ್ಷಕರಿಗೆ, ಖಭೌತಶಾಸ್ತçಜ್ಞರಿಗೆ ಅಂತಹದ್ದೊAದು ಕುತೂಹಲಕರ ವಿಷಯ ಕಾದಿದೆ.

ಸೂರ್ಯನಂತೆ ಹಲವಾರು ನಕ್ಷತ್ರಗಳನ್ನು ಒಳಗೊಂಡ ಗ್ಯಾಲಕ್ಸಿ ನಮಗೆಲ್ಲರಿಗೂ ಗೊತ್ತಿದೆ. ಅಂತಹ ಗ್ಯಾಲಕ್ಸಿಗಳಲ್ಲಿ ನಮ್ಮ ಮಿಲ್ಕಿ ವೇ ಅರ್ಥಾತ್ ಹಾಲು ಹಾದಿ ಇಲ್ಲವೇ ಕ್ಷೀರ ಪಥ, ಆಕಾಶ ಗಂಗೆಯೂ ಒಂದು. ಕಳೆದ 30 ವರ್ಷಗಳಲ್ಲಿ ವಿಜ್ಞಾನಿಗಳು 4,000ಕ್ಕೂ ಹೆಚ್ಚು ಸೌರಾತೀತ ಗ್ರಹ (ಎಕ್ಸೋಪ್ಲಾನೆಟ್)ಗಳನ್ನು ಕಂಡು ಹಿಡಿದಿದ್ದಾರೆ. ಈಗ ಮಿಲ್ಕಿ ವೇ ಗ್ಯಾಲಕ್ಸಿಯಲ್ಲಿರುವ ಒಂದು ಅತ್ಯಂತ ಹಳೆಯ ನಕ್ಷತ್ರದ ಸುತ್ತಲು ಪ್ರದಕ್ಷಿಣೆ ಹಾಕುತ್ತಿರುವ ಸೂಪರ್ ಅರ್ಥ್ ಪತ್ತೆ ಹಚ್ಚಲ್ಪಟ್ಟಿದೆಯಂತೆ. ಇದರ ಬಗ್ಗೆ ತಿಳಿಯುವುದಕ್ಕೂ ಮುಂಚೆ ನಮ್ಮ ಮಿಲ್ಕಿ ವೇ ಗ್ಯಾಲಕ್ಸಿ ಹೇಗಿದೆ ಎಂದು ಒಮ್ಮೆ ಕಣ್ಣಾಡಿಸಿ ಬರೋಣ.

ಹಲವಾರು ನಕ್ಷತ್ರಗಳಿಂದ ಕೂಡಿದ ಒಂದು ಸಮೂಹವೇ ಗ್ಯಾಲಕ್ಸಿ. ಅದರಲ್ಲೂ ಆಕಾಶಗಂಗೆ ಗ್ಯಾಲಕ್ಸಿ ವಿಶೇಷವಾಗಿರುವುದು. ಸುರಳಿಯ ಹಾಗೆ ಸುತ್ತಿಕೊಂಡಿರುವ ಈ ನಕ್ಷತ್ರ ಸಮೂಹ ನಮ್ಮ ಮಿಲ್ಕೀ ವೇ ಗ್ಯಾಲಕ್ಸಿ. ಇದರ ವಿಸ್ತಾರ ಒಂದು ಲಕ್ಷ ಜ್ಯೋತಿರ್ವರ್ಷಗಳು. ಕೇಂದ್ರದಲ್ಲಿ ಪ್ರಾಯಶಃ ತೂಕದ ಬ್ಲಾ÷್ಯಕ್ ಹೋಲ್ ಇದೆ. ಹೊರ ಅಂಚಿನಲ್ಲಿ ನಮ್ಮ ಸೂರ್ಯ ಮತ್ತು ನಾವು ಇದ್ದೇವೆ. ಇಂತಹ ವೈವಿಧ್ಯಮಯ ಮಿಲ್ಕೀ ವೇ ಗ್ಯಾಲಕ್ಸಿಯನ್ನು ಮೊಟ್ಟ ಮೊದಲು ನೋಡಿದ್ದು ಗೆಲಿಲಿಯೋ ಗೆಲಿಲಿ.

ಇಲ್ಲಿ ಸುರಳಿ ಸುತ್ತಿಕೊಂಡ ರೂಪದಲ್ಲಿ 15 ಬಿಲಿಯನ್ ನಕ್ಷತ್ರಗಳಿವೆ ಎಂಬುದಾಗಿ ವಿಜ್ಞಾನಿ ಶ್ಯಾಪ್ಲೀ ವಿವರಿಸುತ್ತಾರೆ. ಇದರ ಅಂಚಿನಲ್ಲಿರುವ ನಕ್ಷತ್ರವೊಂದರ ಗ್ರಹದಲ್ಲಿನ ಜೀವಿ 14000 ವರ್ಷಗಳ ಹಿಂದೆ ಬೆಳಕಿನ ವೇಗದಲ್ಲಿ ನಡೆಯಲು ಪ್ರಾರಂಭಿಸಿ ಗ್ಯಾಲಕ್ಸಿಯ ಕೇಂದ್ರ ತಲುಪಲು ಅದು 21 ಸಾವಿರ ವರ್ಷಗಳನ್ನು ತೆಗೆದುಕೊಳ್ಳುತ್ತದೆ! ಎಂದರೆ ಆಲೋಚಿಸಿ ನೋಡಿ ಗ್ಯಾಲಕ್ಸಿಯ ಕೇಂದ್ರ ಎಷ್ಟು ದೂರವಿದ್ದೀತೆಂದು.

ಈಗ ವಿಜ್ಞಾನಿಗಳು ಈ ನಮ್ಮ ಆಕಾಶಗಂಗೆ ಗ್ಯಾಲಕ್ಸಿಯಲ್ಲಿ ಸೂಪರ್ ಅರ್ಥ್ ಇಲ್ಲವೆ ಸೌರಾತೀತ ಗ್ರಹವೊಂದನ್ನು ಹಚ್ಚಿದ್ದಾರೆ. 14 ಬಿಲಿಯನ್ ವರ್ಷಗಳ ಹಿಂದಿನಿAದಲೇ ಇದು ಅಸ್ತಿತ್ವದಲ್ಲಿದೆ ಎಂಬುದಾಗಿ ಹೇಳುತ್ತಿದ್ದಾರೆ. ಇದಕ್ಕವರು ಇಟ್ಟ ಹೆಸರು `ಟಿಒಐ-561ಬಿ’. ಸೂಪರ್ ಅರ್ಥ್ ಎಂದರೆ ಅದು ನಮ್ಮ ಭೂಮಿಯನ್ನೇ ಹೋಲುತ್ತದೆಂದಲ್ಲಾ. ಈ ಹೊಸ ಗ್ರಹದ ರಾಶಿಯು ಭೂಮಿಯ ರಾಶಿಗಿಂತ ಮೂರುಪಟ್ಟು ಹೆಚ್ಚಾಗಿದೆ. ಗಾತ್ರದಲ್ಲಿ ಭೂಮಿಗಿಂತ 50% ಹೆಚ್ಚು ದೊಡ್ಡದಾಗಿದೆಯಂತೆ. ತಾನಿರುವ ನಕ್ಷತ್ರದ ಸುತ್ತ ಒಂದು ಸುತ್ತು ಹಾಕಿಬರಲು, ಅದು, ಭೂಮಿಯು ಸೂರ್ಯನ ಸುತ್ತ ಸುತ್ತಿಬರಲು ತೆಗೆದುಕೊಳ್ಳುವ ದಿನದ ಅರ್ಧಕ್ಕಿಂತಲೂ ಕಡಿಮೆ ತೆಗೆದುಕೊಳ್ಳುತ್ತದಂತೆ. ಈ ಗ್ರಹದ ಮೇಲ್ಮೈ ತಾಪವು ಸುಮಾರು 3140 ಡಿಗ್ರಿ ಫ್ಯಾರನ್ಹೀಟ್ ಗಿಂತಲೂ ಜಾಸ್ತಿನೇ ಇದೆ ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಖಭೌತಶಾಸ್ತç ವಿಭಾಗದ ಪ್ರೊಫೇಸರ್ ಆದ ಸ್ಟಿಫನ್ ಕೈನೆ ಹೇಳುತ್ತಾರೆ.

ಈ ರೀತಿಯಾಗಿರುವ ಎಕ್ಸೊ ಪ್ಲಾನೆಟ್‌ಗಳ ಕುರಿತು ಅಧ್ಯಯನಮಾಡಲೆಂದೇ 2018 ರಲ್ಲಿ ಪ್ರತಿಷ್ಠಿತ ಸಂಸ್ಥೆ `ನಾಸಾ’ (ನ್ಯಾಷನಲ್ ಏರೊನಾಟಿಕ್ಸ್ ಆಂಡ್ ಸ್ಪೇಸ್ ಎಡ್ಮಿನಿಸ್ಟ್ರೈಷನ್) `ಟಿ.ಇ.ಎಸ್.ಎಸ್.’ (ಟ್ರಾನ್ಸಿಟಿಂಗ್ ಎಕ್ಸೊಪ್ಲಾನೆಟ್ ಸರ್ವೇ ಸ್ಯಾಟಲೈಟ್ ) ಉಡಾಯಿಸಿತ್ತು. ಟಿ.ಇ.ಎಸ್.ಎಸ್. ಉಡಾವಣೆಯ ಮುಖ್ಯ ಉದ್ದೇಶ ಇಂತಹ ಎಕ್ಸೋ ಪ್ಲಾನೆಟ್‌ಗಳ ಸಂಶೋಧನೆ. ಹೊಸದಾಗಿ ಕಂಡ ಈ `ಟಿಒಐ-561ಬಿ’ ಗ್ರಹದ ದ್ರವ್ಯರಾಶಿ, ತ್ರಿಜ್ಯ, ಸಾಂದ್ರತೆ ಹಾಗೂ ಆಂತರಿಕ ರಚನೆಗಳ ಕುರಿತು ಅಧ್ಯಯನ ಮಾಡಲು ತಜ್ಞರು ಹವಾಯಿಯಲ್ಲಿರುವ ಡಬ್ಲೂ÷್ಯ.ಎಮ್.ಕೆಕ್ ಆಬ್ಸರ್ವೇಟರಿಯಲ್ಲಿ ಕಳೆದ ಹಲವಾರು ತಿಂಗಳಿAದ ತೊಡಗಿಸಿಕೊಂಡಿದ್ದಾರೆ.

“ಟಿಒಐ-561ಬಿ ಗ್ರಹದ ದ್ರವ್ಯರಾಶಿಯು ಭೂಮಿಯ ದ್ರವ್ಯರಾಶಿಗಿಂತ ಮೂರುಪಟ್ಟಿದೆ. ಸಾಂದ್ರತೆ ಮಾತ್ರ ಭೂಮಿಯಷ್ಟೇ ಇದೆ. ಸಾಂದ್ರತೆಯಲ್ಲಿ ವ್ಯತ್ಯಾಸವಾಗಬಹುದೆಂದು ನಿರೀಕ್ಷಿಸಿದ್ದೆವು. ಆದರೆ ಅದು ಹಾಗಾಗಲಿಲ್ಲ.” ಎನ್ನುತ್ತಾರೆ ಖಭೌತಶಾಸ್ತçಜ್ಞ ಸ್ಟಿಫನ್ ಕೈನೆ. ಅಲ್ಲದೇ ಇದುವರೆಗಿನ ಅಧ್ಯಯನದ ಪ್ರಕಾರ ಈ ಹೊಸ ಗ್ರಹದಲ್ಲಿ ಜೀವಾಂಕುರ ಇರುವ ಯಾವ ಲಕ್ಷಣಗಳೂ ಕಂಡುಬರುತ್ತಿಲ್ಲ. ಗ್ರಹದ ಆಂತರಿಕ ಅಧ್ಯಯನ ಇನ್ನೂ ನಡೆದಿದೆ. ಸಂಪೂರ್ಣ ಅಧ್ಯಯನದ ನಂತರ, ಅದರಲ್ಲಿ ಜೀವಿಗಳು ಇರುವ ಬಗ್ಗೆ ನಿಖರ ಮಾಹಿತಿ ಸಿಕ್ಕರೂ ಸಿಗಬಹುದೆಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.

Leave a Reply

Your email address will not be published.