ಹೋರಾಟಗಾರ್ತಿ

ಮರಾಠಿ ಮೂಲ: ಸರ್ವೋತ್ತಮ ಸಾತಾಳಕರ

ಸರ್ವೋತ್ತಮ ಸಾತಾಳಕರ

ಥರ್ಮಲ್ ಪಾವರ್ ವಿಭಾಗದಲ್ಲಿ ಎಂ.ಇ. ಮಾಡಿರುವ ಸರ್ವೋತ್ತಮ ಸಾತಾಳಕರ ಅವರು ಕಲಬುರ್ಗಿಯ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಇವರ ಮೂರು ಕಥಾ ಸಂಗ್ರಹಗಳು, ಒಂದು ಕಾದಂಬರಿ ಹಾಗೂ ವಿವಿಧ ವಿಷಯಗಳ ಲೇಖನಗಳು ಮರಾಠಿಯಲ್ಲಿ ಪ್ರಕಟಗೊಂಡಿವೆ. ಅಲ್ಲದೆ, ಸೃಜನಾತ್ಮಕ ಸಾಹಿತ್ಯಕ್ಕೆ ಮೀಸಲಾದ ‘ಭಾವ ಅನುಬಂಧ’ ಎಂಬ ಮರಾಠಿ ತ್ರೈಮಾಸಿಕದ ಕಾರ್ಯಕಾರಿ ಸಂಪಾದಕರಾಗಿದ್ದಾರೆ.

ಪ್ರಕಾಶ ಪರ್ವತೀಕರ

ಅನುವಾದಕರು ಮೂಲತಃ ಕರ್ನಾಟಕದ ವಿಜಯಪುರದವರು; ವೃತ್ತಿಯಲ್ಲಿ ಸಿವಿಲ್ ಇಂಜನೀಯರ್. ತಮಿಳುನಾಡಿನ ತಿರುಪೂರಿನಲ್ಲಿ ತಮ್ಮದೇ ಆದ ಆರ್ಕಿಟೆಕ್ಟ್ ಸಂಸ್ಥೆಯನ್ನು ಹೊಂದಿದ್ದಾರೆ. ನೂರಕ್ಕು ಹೆಚ್ಚು ಕಥೆಗಳು ಪ್ರಕಟಗೊಂಡಿವೆ. ಇದರಲ್ಲಿ ಮರಾಠಿ, ಇಂಗ್ಲಿಷ್ ಹಾಗೂ ಹಿಂದಿಯಿಂದ ಭಾಷಾಂತರಗೊಂಡ ಕಥೆಗಳೂ ಸೇರಿವೆ. ಹಿಂದುಸ್ತಾನಿ ಸಂಗೀತ, ಕಥಕ ನೃತ್ಯ ಹಾಗೂ ಇತಿಹಾಸದಲ್ಲಿ ಆಸಕ್ತಿ.

ಹೋರಾಟಗಾರ್ತಿ

‘ಒನ್ ನೈಟ್ @ ಗೆಸ್ಟ್ ಹೌಸ್’ ಚಿತ್ರದಲ್ಲಿಯ ನಗ್ನದೃಶ್ಯ ಹಾಗೂ ಚಿತ್ತವನ್ನು ವಿಚಲಿತಗೊಳಿಸುವ ಬಲಾತ್ಕಾರ ದೃಶ್ಯದ ಮೇಲೆ ಆಕ್ಷೇಪಣೆ ತೆಗೆದುಕೊಂಡು, ಕಾಯ್ದೆ-ಸುವ್ಯವಸ್ಥೆಯ ಕಾರಣವನ್ನು ಮುಂದೆ ಮಾಡಿ ಸರಕಾರ ಈ ಚಲನಚಿತ್ರದ ಮೇಲೆ ಹೇರಿದ ನಿಷೇಧವು ಕಾನೂನುಬಾಹಿರವಾಗಿದೆ ಎಂದು ಈ ನ್ಯಾಯಾಲಯ ಅಭಿಪ್ರಾಯ ಪಡುತ್ತದೆ. ಈ ಅನಾವಶ್ಯಕ ದೃಶ್ಯಗಳನ್ನು, ಗಲ್ಲಾಪೆಟ್ಟಿಗೆ ದೃಷ್ಟಿಯಿಂದ ಸೇರಿಸಲಾಗಿದ್ದರೂ, ಚಲನಚಿತ್ರವನ್ನು ಹೇಗೆ ನಿರ್ಮಿಸಬೇಕು ಎಂಬ ಸ್ವಾತಂತ್ರ್ಯ ನಿರ್ಮಾಪಕನಿಗೆ ಇರುತ್ತದೆ. ಸರಕಾರ ಒಂದು ಹಿಂದು ಸಂಘಟನೆಯ ಒತ್ತಡದಲ್ಲಿ ತೆಗೆದುಕೊಂಡ ಈ ನಿರ್ಣಯ, ಕಲಾಕಾರನ ಅಭಿವ್ಯಕ್ತಿ ಸ್ವಾತಂತ್ರ್ಯದ ಕತ್ತು ಹಿಸುಕುವುದೇ ಆಗಿದೆ. ಅದಕ್ಕಾಗಿ ಈ ನ್ಯಾಯಾಲಯ, ಸರಕಾರ ಹೇರಿದ ನಿಷೇಧವನ್ನು ರದ್ದುಪಡಿಸಿದೆ ಮತ್ತು ಈ ಚಿತ್ರವನ್ನು ಮೂಲಸ್ವರೂಪದಲ್ಲಿಯೆ ಪ್ರದರ್ಶಿಸಲು ಆದೇಶ ನೀಡುತ್ತದೆ.’ ನ್ಯಾಯಾಧೀಶರು ಈ ತೀರ್ಪನ್ನು ಓದುತ್ತಿರುವಂತೆಯೇ, ನ್ಯಾಯಾಲಯದ ಆವರಣದಲ್ಲಿ ಹರ್ಷೋಲ್ಹಾಸದ ವಾತಾವರಣ ಉಂಟಾಯಿತು. ಅಲ್ಲಿ ಜಮಾಯಿಸಿದ, ಸಾಮಾಜಿಕ ಕಾರ್ಯಕರ್ತರು, ಪತ್ರಿಕೆಯ ವರದಿಗಾರರು ಹಾಗೂ ಚಲನಚಿತ್ರಕ್ಕೆ ಸಂಬಂಧಿಸಿದ ವ್ಯಕ್ತಿಗಳು ಚಪ್ಪಾಳೆ, ಶಿಳ್ಳೆಯಿಂದ ತಮ್ಮ ಆನಂದವನ್ನು ವ್ಯಕ್ತಪಡಿಸಿದರು. ಚಲನಚಿತ್ರದ ನಿರ್ಮಾಪಕ ಹಾಗೂ ದಿಗ್ದರ್ಶಕರು ಗಟ್ಟಿಯಾಗಿ ಅಪ್ಪಿಕೊಂಡರು. ಅವರಿಬ್ಬರು ಸಾಮಾಜಿಕ ಕಾರ್ಯಕರ್ತೆ ಊರ್ವಶಿ ಮಿಶ್ರಾ ಕಡೆಗೆ ಧಾವಿಸಿ ಬಂದರು.

‘ಥ್ಯಾಂಕ್ಯೂ ಊರ್ವಶಿ ಮೇಡಮ್, ನಿಮ್ಮಿಂದಲೇ ನನ್ನ ಚಿತ್ರಕ್ಕೆ ಜೀವದಾನ ದೊರಕಿತು. ನಾನು ದಿವಾಳಿ ಅಗುವುದರಿಂದ ತಪ್ಪಿಸಿಕೊಂಡೆ. ನಿಮಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು. ಮತ್ತೆ ನಿಮಗೆ ಒಂದು ದೊಡ್ಡ ಥ್ಯಾಂಕ್ಸ್.’ ನಿರ್ಮಾಪಕ ಹರಬನ್ಸಲಾಲ, ಊರ್ವಶಿಯ ಪಾದಕ್ಕೆ ಬೀಳುವುದೊಂದೇ ಬಾಕಿಯಿತ್ತು. ಅವನ ಹಿಂದೆ ನಿಂತಿದ್ದ ದಿಗ್ದರ್ಶಕ ಪವನ ಧಿಂಗರಾನ ಮುಖದ ಮೇಲೆ ಕೃತಜ್ಞತಾ ಭಾವ ತುಂಬಿ ತುಳುಕಾಡುತಿತ್ತು.

ನನ್ನ ಚಲನಚಿತ್ರವನ್ನು ಮಣ್ಣಿನಲ್ಲಿ ಹುಗಿದು ಹಾಕುತ್ತಿತ್ತು. ಬ್ಲಡಿ, ಫಂಡಮೆಂಟಲಿಸ್ಟ್, ಬಾಸ್ಟಡ್ರ್ಸ್.’ ದಿಗ್ದರ್ಶಕ ಪವನ ಧಿಂಗರಾ ಸಂತಾಪದಿಂದ ನುಡಿಯುತಿದ್ದ.

‘ನಿಜವಾಗಿಯೂ, ನೀವು ಪಿ.ಐ.ಎಲ್. ಗುಜರಾಯಿಸಿ, ಕೋರ್ಟಿನಲ್ಲಿ ಹೋರಾಡಿದಿರಿ ಎಂದೇ ನನ್ನ ಚಲನಚಿತ್ರ ಮೋಕ್ಷ ಕಂಡಿತು. ಇಲ್ಲದಿದ್ದರೆ ಈ ನಕಲಿ ಹಿಂದು ಸಂಘಟನೆ ಹಾಗೂ ಈ ಮತಾಂಧ ಸರಕಾರ ನನ್ನನ್ನು, ನನ್ನ ಚಲನಚಿತ್ರವನ್ನು ಮಣ್ಣಿನಲ್ಲಿ ಹುಗಿದು ಹಾಕುತ್ತಿತ್ತು. ಬ್ಲಡಿ, ಫಂಡಮೆಂಟಲಿಸ್ಟ್, ಬಾಸ್ಟಡ್ರ್ಸ್.’ ದಿಗ್ದರ್ಶಕ ಪವನ ಧಿಂಗರಾ ಸಂತಾಪದಿಂದ ನುಡಿಯುತಿದ್ದ.

‘ನಾನೊಬ್ಬಳೆ ಈ ಗೌರವಕ್ಕೆ ಅರ್ಹಳಲ್ಲ. ಇದು ನಾನು ‘ಹಮರಾಹಿ’ ಸಂಸ್ಥೆ ಜೊತೆಗೂಡಿ ಮಾಡಿದ ಕಾರ್ಯ. ಸಮಾಜದಲ್ಲಿನ ಪ್ರತಿಗಾಮಿ ಶಕ್ತಿಗಳ ವಿರುಧ್ಧ ಹೋರಾಡುವುದು ನಮ್ಮ ಸಂಸ್ಥೆಯ ಉದ್ದಿಷ್ಟ ಕಾರ್ಯವಾಗಿದೆ. ಏನೇ ಇರಲಿ ನೀವು ನನ್ನನ್ನು ಇಷ್ಟೊಂದು ಹೊಗಳುತ್ತಿದ್ದೀರಿ, ಅದಕ್ಕಾಗಿ ಮೆನಿ ಮೆನಿ ಥ್ಯಾಂಕ್ಸ್.’ ಊರ್ವಶಿಗೂ ಸಂತೋಷವಾಗಿತ್ತು. ಒಳ್ಳೆಯ ಕಾರ್ಯ ಮಾಡಿದ ಸಂತೃಪ್ತಿ ಆಕೆಯ ಮುಖದ ಮೇಲಿತ್ತು. ತತ್ವಕ್ಕಾಗಿ ಹೋರಾಡಿ ಜಯಗಳಿಸಿದ ಅನಂದ, ಅದು ಬೇರೆಯೇ ಇರುತ್ತದೆ ಎಂಬ ವಿಚಾರ ಆಕೆಯ ಮನದಲ್ಲಿ ಬಂದು ಹೋಯಿತು. ಆಗ ಒಮ್ಮೆಲೆ ಯಾವುದೋ ಮಹಾಶಯನಿಗೆ ಪತ್ರಿಕಾಗೋಷ್ಠಿ ಕರೆಯಬೇಕೆಂದೆನಿಸಿತು. ಕೆಲ ಉತ್ಸಾಹಿ ತರುಣರು, ಅಲ್ಲಿ ಇಲ್ಲಿ ಓಡಾಡಿ ಕೋರ್ಟಿನ ಆವರಣದಲ್ಲಿಯೇ ಇದ್ದ ನಾಲ್ಕಾರು ಕುರ್ಚಿ, ಒಂದು ಚಿಕ್ಕ ಟೇಬಲ್ಲು ತಂದು ಇಟ್ಟರು. ನಿರ್ಮಾಪಕ ಹರಬನ್ಸಲಾಲ, ದಿಗ್ದರ್ಶಕ ಪವನ ಧಿಂಗರಾ ಹಾಗೂ ಊರ್ವಶಿ ಕುರ್ಚಿಯ ಮೇಲೆ ಆಸೀನರಾದರು. ಓರ್ವ ಪತ್ರಕರ್ತ ಊರ್ವಶಿಗೆ ವಿಚಾರಿಸಿದ, ‘ಮ್ಯಾಡಮ್, ಈ ಚಲನಚಿತ್ರದ ಮೇಲೆ ಹಾಕಿದ ನಿಷೇಧದ ವಿರುಧ್ಧ ನೀವು ಕೋರ್ಟಿಗೆ ಹೋಗಿದ್ದೀರಿ, ಅದರ ಹಿನ್ನೆಲೆ ಏನು?”

‘ನಮ್ಮ ಪಾಲಿಗೆ ಇಂದಿನ ದಿನ ತುಂಬಾ ಸಂತೋಷದ ದಿನ. ಸಾಂಸ್ಕೃತಿಕ ಭಯೋತ್ಪಾದಕತೆ ಹಾಗು ಸರಕಾರದ ದಮನ ನೀತಿಯ ವಿರುಧ್ಧ ನಾವು ನಡೆಸಿದ ಹೋರಾಟಕ್ಕೆ ಹಾಗು ಪ್ರಜಾಪ್ರಭುತ್ವಕ್ಕೆ ಗೆಲವು ದೊರಕಿದೆ. ಇದೆಂತಹ ದೇಶ.? ಏನು ನಡೆಯುತ್ತಿದೆ ಇಲ್ಲಿ.? ಯಾವದೋ ಖೊಟ್ಟಿ ಸಂಘಟನೆ ಚಟ್ಟನೆ ಎದ್ದು ನಿಲ್ಲುತ್ತದೆ, ಹಾಗು ಪುಸ್ತಕ, ನಾಟಕ, ಸಿನೇಮಾಗಳ ಮೇಲೆ ಪ್ರತಿಬಂಧ ಹಾಕಲು ಮುಂದಾಗುತ್ತದೆ. ಗುಂಡಾಗಿರಿ ಮಾಡಿಯೋ, ಇಲ್ಲವೇ ಸರಕಾರಿ, ಖಾಸಗಿ ಸೊತ್ತುಗಳನ್ನು ಧ್ವಂಸ ಮಾಡುತ್ತ, ಭಯಾನಕ ವಾತಾವರಣ ನಿರ್ಮಾಣ ಮಾಡಿ, ಸರಕಾರದ ಮೆಲೆ ಒತ್ತಡ ಹೇರುತ್ತದೆ. ಸರಕಾರ ಕೂಡ ಸಾರಾಸಾರ ವಿಚಾರ ಮಾಡದೇ ನಿಷೇಧ ಹಾಕುತ್ತದೆ. ಇದೇನು ಪ್ರಜಾತಂತ್ರವೋ ಇಲ್ಲವೇ ಸರ್ವಾಧಿಕಾರತ್ವವೋ? ಈ ಪರಿಸ್ಥಿತಿಯನ್ನು ಸಹನೆ ಮಾಡುವದು ನನಗೆ ಶಕ್ಯವಾಗಲಿಲ್ಲ, ಅದಕ್ಕಾಗಿಯೇ ನ್ಯಾಯಾಲಯಕ್ಕೆ ನಾನು ಶರಣು ಹೋದೆ. ಕೊನೆಗೂ ಸತ್ಯದ ಮೇಲುಗೈ ಆಯಿತು.’

ಆಂದೋಲನದಿಂದ ಹಾಗು ಕೋರ್ಟಿನ ತೀರ್ಪಿನಿಂದ ನಿಮಗೆ ಬಹಳಷ್ಟು ಪ್ರಸಿಧ್ಧಿ ದೊರಕಿದೆ. ಅದರ ಪರಿಣಾಮವಾಗಿ ಈ ಚಲನಚಿತ್ರ ಚೆನ್ನಾಗಿ ಓಡುವದು ಹಾಗು ಗಲ್ಲಾಪೆಟ್ಟಿಗೆ ತುಂಬುವದು ಎಂದು ನಿರ್ಮಾಪಕರಾದ ನಿಮಗೆ ಅನಿಸುವದಿಲ್ಲವೆ.?’

‘ಪವನ ಧಿಂಗರಾಜಿಯವರೆ, ಚಲನಚಿತ್ರದಲ್ಲಿ ಸಂಪೂರ್ಣ ನಗ್ನ ದೃಶ್ಯ ಹಾಗು ಬಲಾತ್ಕಾರದ ಭಿಭೀತ್ಸ ಪ್ರಸಂಗವನ್ನು ತೋರಿಸುವದು ನಿಜವಾಗಿಯೂ ಅವಶ್ಯವಿತ್ತೇ ?’

‘ನೋಡಿ, ಇದು ನನ್ನ ಸಿನೇಮಾ.’ ದಿಗ್ದರ್ಶಕ ಪವನ ಧಿಂಗರಾ ತುಸು ಮುನಿಸಿನಿಂದ ಹಾಗು ಆವೇಶದಿಂದ ಮಾತನಾಡತೊಡಗಿದ,

‘ಧಿಸ್ ಈಜ ಮಾಯ್ ಬೇಬಿ, ಚಲನಚಿತ್ರ ಹೇಗೆ ಮೂಡಿ ಬರಬೇಕು, ದೃಶ್ಯಗಳ ಸಂಯೋಜನೆ ಹೇಗೆ ಮಾಡಬೇಕು ಎಂಬುದನ್ನು ನಿರ್ಣಯಿಸುವವನು ನಾನು. ಕಲಾತ್ಮಕ ಪರಿಣಾಮಗಳಿಗಾಗಿ ಈ ದೃಶ್ಯಗಳ ಸೇರ್ಪಡೆ ಅವಶ್ಯವಾಗಿತ್ತು ಎಂದು ಇಷ್ಟು ಮಾತ್ರ ಹೇಳಬಲ್ಲೆ.’

‘ಹರಬನ್ಸಲಾಲ ಅವರೇ, ಈ ಆಂದೋಲನದಿಂದ ಹಾಗು ಕೋರ್ಟಿನ ತೀರ್ಪಿನಿಂದ ನಿಮಗೆ ಬಹಳಷ್ಟು ಪ್ರಸಿಧ್ಧಿ ದೊರಕಿದೆ. ಅದರ ಪರಿಣಾಮವಾಗಿ ಈ ಚಲನಚಿತ್ರ ಚೆನ್ನಾಗಿ ಓಡುವದು ಹಾಗು ಗಲ್ಲಾಪೆಟ್ಟಿಗೆ ತುಂಬುವದು ಎಂದು ನಿರ್ಮಾಪಕರಾದ ನಿಮಗೆ ಅನಿಸುವದಿಲ್ಲವೆ.?’

‘ಈ ಚಿತ್ರ ಕೇವಲ ನನ್ನದಲ್ಲ. ಸುಮಾರು ಎರಡುನೂರಾ ಐವತ್ತು ಜನರು ಅಹೋರಾತ್ರಿ ದುಡಿದಿದ್ದಾರೆ. ಅವರು ಹರಿಸಿದ ಬೆವರು, ಹಾಗು ಅನುಭವಿಸಿದ ಕಷ್ಟಗಳಿಗಾದರೂ ಈ ಚಿತ್ರ ಓಡಲೇಬೇಕು ಎಂದು ನನ್ನ ಬಯಕೆ ಆಗಿದೆ. ಯಾವದೇ ಚಲನಚಿತ್ರ ನಿರ್ಮಾಪಕ, ತನ್ನ ಚಿತ್ರಪಟದ ಮೇಲೆ ನಿಷೇಧ ಹಾಕುವದಾಗಲಿ, ಕೋರ್ಟ ಕೇಸವಾಗಲಿ ಎಂದು ಬಯಸುವದಿಲ್ಲ. ಏನೇ ಆಗಲಿ, ಅಂದೋಲನದಿಂದ, ಹಾಗು ಸರಕಾರದ ಕೃತಿಯಿಂದ ಅದಕ್ಕೆ ಪ್ರಸಿಧ್ಧಿ ದೊರಕಿರಬಹುದು. ಚಿತ್ರ ಚೆನ್ನಾಗಿ ಓಡಿದರೆ ನನ್ನದೇನೂ ತಕರಾರು ಇಲ್ಲ. ನಾನು ಅವರಿಬ್ಬರಿಗೆ ಆಭಾರ ಮನ್ನಿಸಲೇಬೇಕು.’

ಹರಬನ್ಸಲಾಲನು, ಸರಕಾರದ ಮೇಲೆ ಮಾಡಿದ ವ್ಯಂಗ್ಯಾತ್ಮಕ ಟಿಪ್ಪಣೆಯಿಂದ ಪತ್ರಿಕಾ ಸಮ್ಮೇಳನದಲ್ಲಿ ನಗೆ ಉಕ್ಕಿ ಹರಿಯಿತು. ಕೆಲವೇ ನಿಮಿಷಗಳಲ್ಲಿ ಸಮ್ಮೇಳನ ಮುಕ್ತಾಯವಾಯಿತು.

ಪತ್ರಿಕಾ ಸಮ್ಮೇಳನ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಊರ್ವಶಿಯ ಮನಸ್ಸು ಭಾವೋದ್ರೇಕದಿಂದ ತುಂಬಿತ್ತು. ಆನಂದದಿಂದ ಮೆಲ್ಲನೆ ಭಾವಗೀತೆಯೊಂದನ್ನು ಗುನುಗುಣಿಸುತ್ತಲೇ ಮಾರುತಿ ಕಾರು ನಡೆಸುತ್ತಿದ್ದಳು. ಇಂದಿನ ನ್ಯಾಯಾಲಯದ ತೀರ್ಪಿನಿಂದ ಅಕೆ ಟಿ.ವಿ.ಗಳಲ್ಲಿ ಹಾಗು ನಾಳಿನ ವರ್ತಮಾನಪತ್ರಿಕೆಯಲ್ಲಿ ಮೊದಲಿನ ಪುಟದಲ್ಲಿ ಮಿನುಗುವವಳಿದ್ದಳು. ಈ ವರೆಗೆ ಕಾರ್ಯಕರ್ತೆಯೆಂದು ತಾನು ಮಾಡಿದ ಸೇವೆಗೆ ಅತ್ಯುತ್ತಮ ಪ್ರತಿಫಲ ದೊರಕಿತ್ತು.

ಊರ್ವಶಿ ಸಾಮಾಜಿಕ ಕಾರ್ಯದಲ್ಲಿ ತೊಡಗುವದು, ಅದಕ್ಕಾಗಿ ಓಡಾಡುವದು ಶರದೇಂದ್ರುವಿಗೆ ಸರಿ ಬೀಳಲಿಲ್ಲ. ಗಂಡನ ನವಾಬ ಥಾಟಿನ ಜೀವನ ಪಧ್ಧತಿ, ಜ್ವಲಂತ ಸಮಸ್ಯೆಗಳಿಗೆ ಸಾರ್ವಜನಿಕ ವಿಷಯಗಳಿಗೆ ಸ್ಪಂದಿಸದೇ ತಣ್ಣಗೆ ಇರುವದು, ಇದು ಊರ್ವಶಿಗೆ ಇಷ್ಟವಾಗಲಿಲ್ಲ.

ಒಮ್ಮೆಲೆ ಮೊಬೈಲಿನ ಧ್ವನಿ ಆಕೆಯನ್ನು ಎಚ್ಚರಿಸಿತು. ಅದು ಶರದೇಂದ್ರು ಮುಖರ್ಜಿಯ ಕರೆ ಆಗಿತ್ತು. ಶರದೇಂದ್ರು… ಆಕೆಯ ಮಾಜಿ ಪತಿ. ಒಳ್ಳೆಯ ಇಂಗ್ಲೀಶ ಬರಹಗಾರನಾಗಿದ್ದ ಆತ ಇಂಗ್ಲೀಶ ಸಾಹಿತ್ಯ ಲೋಕದಲ್ಲಿ ತುಂಬಾ ಹೆಸರುವಾಸಿ ಆಗಿದ್ದ. ಅವರಿಬ್ಬರದು ಪ್ರೇಮ ವಿವಾಹವಾಗಿತ್ತು. ಆದರೆ ಕೆಲವೇ ದಿನಗಳ ನಂತರ ಊರ್ವಶಿ ಅವನಿಂದ ಘಟಸ್ಫೋಟ ತೆಗೆದುಕೊಂಡಿದ್ದಳು. ಊರ್ವಶಿ ಸಾಮಾಜಿಕ ಕಾರ್ಯದಲ್ಲಿ ತೊಡಗುವದು, ಅದಕ್ಕಾಗಿ ಓಡಾಡುವದು ಶರದೇಂದ್ರುವಿಗೆ ಸರಿ ಬೀಳಲಿಲ್ಲ. ಗಂಡನ ನವಾಬ ಥಾಟಿನ ಜೀವನ ಪಧ್ಧತಿ, ಜ್ವಲಂತ ಸಮಸ್ಯೆಗಳಿಗೆ ಸಾರ್ವಜನಿಕ ವಿಷಯಗಳಿಗೆ ಸ್ಪಂದಿಸದೇ ತಣ್ಣಗೆ ಇರುವದು, ಇದು ಊರ್ವಶಿಗೆ ಇಷ್ಟವಾಗಲಿಲ್ಲ. ಅವರಿಬ್ಬರಲ್ಲಿಯ ವಾದ, ವಿವಾದ, ಜಗಳಗಳು ತಾರಕಕ್ಕೆ ಮುಟ್ಟಿದವು. ಆಗ ಬೇರೆ ಆಗುವ ನಿರ್ಣಯವನ್ನು ಅವರಿಬ್ಬರೂ ತೆಗೆದುಕೊಳ್ಳಲೇಬೇಕಾಯಿತು. ಆದರೆ ಅವರ ಮೈತ್ರಿ ಮಾತ್ರ ಅಬಾಧಿತವಾಗಿತ್ತು.

‘ಅಭಿನಂದನೆಗಳು ಮ್ಯಾಡಮ್. ಈಗ ತಾನೆ ಟಿ.ವ್ಹಿ.ಯಲ್ಲಿ ನಿನ್ನನ್ನು ನೋಡಿದೆ. ಕಂಗ್ರಾಚುಲೇಶನ್ಸ.’

’ನನ್ನನ್ನು ಜ್ಞಾಪಕದಲ್ಲಿಟ್ಟುಕೊಂಡು ಫೋನು ಮಾಡಿದ್ದಕ್ಕೆ ಥ್ಯಾಂಕ್ಸ.’ ಬೇರು ಬಿಟ್ಟ ವ್ಯವಸ್ಥೆಯೊಂದರ ಕೂಡ, ಅದೂ ಪ್ರತಿಕೂಲ ಘಳಿಗೆಯಲ್ಲಿ ಹೋರಾಡಲಿಕ್ಕೆ ಧೈರ್ಯ ಹಾಗು ನಿರಂತರ ಪರಿಶ್ರಮ ಬೇಕಾಗುತ್ತದೆ. ನೀನು ನಿಜವಾಗಿಯೂ ಬಹಳ ಹಠವಾದಿ ಹಾಗು ಮೊಂಡಿ ಇದ್ದೀ, ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿರುವೆ. ಈ ಗುಣಗಳು ನಿನ್ನಲ್ಲಿ ಇರದಿದ್ದರೆ, ಬಹುಶಃ ನಮ್ಮ ವಿವಾಹ ವಿಚ್ಛೇದನ ಆಗುತ್ತಿರಲಿಲ್ಲ ಎಂದು ಆಗಾಗ್ಗೆ ನನಗೆ ಅನಿಸುವದುಂಟು.’

‘ಸಾರಿ, ಮಿಸ್ಟರ ಶರುದೇಂದ್ರು, ನಮ್ಮ ಘಟಸ್ಫೋಟಕ್ಕೆ ನನ್ನ ಹಟಮಾರಿ ಗುಣ ಕಾರಣವಲ್ಲ. ನಿನ್ನ ವಿಲಾಸಿ ಜೀವನ ಹಾಗು ಎಡಬಿಡಂಗಿ ವೃತ್ತಿಯೇ ಅದಕ್ಕೆ ಕಾರಣ. ಒಂದು ಉದಾತ್ತ ತತ್ವಕ್ಕಾಗಿ ಧೃಢ ನಿಶ್ಚಯದಿಂದ ಹೋರಾಟ ಮಾಡುವದರಲ್ಲಿ ತಪ್ಪೇನು.? ನಿನ್ನ ಹಾಗೆ ಮೈ ಬಗ್ಗಿಸದೆ ಆರಾಮವಾಗಿ ಕಾಲ ಕಳೆಯುತ್ತ ಕೂಡ ಬೇಕೇನು.?’ ಆಕೆಗೆ ತನ್ನ ಮಾತು ಯಾವಾಗ, ತೀವ್ರ ಹಾಗು ಆಕ್ರಮಕವಾಗಿದ್ದು ಆಕೆಗೆ ತಿಳಿಯಲಿಲ್ಲ.

ತಾನಾದರೂ ಏನು ಮಾಡಬಲ್ಲಳು.? ತನ್ನ ಸ್ವಭಾವವೇ ಹಾಗಿದೆ. ನಮ್ಮ ಬಾಜು ಬಲವಾಗಿದ್ದಾಗ ಎದುರಿಗೆ ಇದ್ದವನ ಮಾತುಗಳನ್ನು ಸುಮ್ಮನೆ ಕೇಳುತ್ತ ಕೂಡಬೇಕೆ? ನಮ್ಮ ಪಕ್ಷವನ್ನು ಆಕ್ರಮಕವಾಗಿ ಮಂಡಿಸಲೇ ಬೇಕಲ್ಲವೇ.? ಕೊನೆಗೂ ನಾನು ಓರ್ವ ಕಾರ್ಯಕರ್ತೆ ಇದ್ದೇನೆ, ಅಲ್ಲವೇ?

‘ಒಕೆ, ಒಕೆ. ಸಾರಿ, ನಾನು ತಪ್ಪಿದೆ. ಎನಿ ವೇ ಒನ್ಸ ಅಗೇನ ಕಾಂಗ್ರಾಚ್ಯುಲೇಶನ್ಸ.’

ಶರದೇಂದ್ರು ಫೋನು ಕೆಳಗೆ ಇಟ್ಟ. ಊರ್ವಶಿಗೆ ತಾನು ಈ ರೀತಿ ಕಡ್ಡಿ ಮುರಿದಂತೆ ಕಟುವಾಗಿ ಮಾತನಾಡಬಾರದಿತ್ತು ಎಂದು ಅನಿಸಿತು. ಅಯ್ಯೋ ಪಾಪ. ಹಳೆಯ ಸಂಬಂಧದ ನೆನಪು ಇಟ್ಟುಕೊಂಡು ನನಗೆ ಫೋನು ಮಾಡಿದ್ದ. ಆದರೆ ತಾನಾದರೂ ಏನು ಮಾಡಬಲ್ಲಳು.? ತನ್ನ ಸ್ವಭಾವವೇ ಹಾಗಿದೆ. ನಮ್ಮ ಬಾಜು ಬಲವಾಗಿದ್ದಾಗ ಎದುರಿಗೆ ಇದ್ದವನ ಮಾತುಗಳನ್ನು ಸುಮ್ಮನೆ ಕೇಳುತ್ತ ಕೂಡಬೇಕೆ? ನಮ್ಮ ಪಕ್ಷವನ್ನು ಆಕ್ರಮಕವಾಗಿ ಮಂಡಿಸಲೇ ಬೇಕಲ್ಲವೇ.? ಕೊನೆಗೂ ನಾನು ಓರ್ವ ಕಾರ್ಯಕರ್ತೆ ಇದ್ದೇನೆ, ಅಲ್ಲವೇ?

ಈ ಸಾಮಾಜಿಕ ಕಾರ್ಯದಲ್ಲಿ ತೊಡಗುವ ಹುಚ್ಚು ಊರ್ವಶಿ ತಲೆಯಲ್ಲಿ ಯಾವಾಗ ಹೊಕ್ಕಿತು.? ಹಾಗೆ ನೋಡಿದರೆ ಅವರ ಮನೆಯಲ್ಲಿ ಸಾಮಾಜಿಕ ಕಾರ್ಯಕರ್ತರು ಒಬ್ಬರೂ ಇರಲಿಲ್ಲ. ಅವರ ತಂದೆ ವ್ಯಾಪಾರಿ ಅಗಿದ್ದರು. ವಾಹನಗಳ ಬಿಡಿ ವಸ್ತುಗಳ ಅಂಗಡಿ ಅವರದಿತ್ತು. ಅದರಿಂದ ಅವರು ಸಾಕಷ್ಟು ಆದಾಯ ಮಾಡಿಕೊಂಡಿದ್ದರು. ಊರ್ವಶಿ ಚಿಕ್ಕವಳಿದ್ದಾಗಲೇ ಅವಳ ತಾಯಿ ನಿಧನಳಾಗಿದ್ದಳು. ತಂದೆ ಮರುಮದುವೆ ಮಾಡಿಕೊಳ್ಳಲಿಲ್ಲ. ಮದ್ಯ, ಮಾನಿನಿಯರ ಸಹವಾಸಲ್ಲಿದ್ದರೂ, ಊರ್ವಶಿಯ ಪಾಲನೆ ಪೋಷಣೆಯಲ್ಲಿ ಯಾವದೇ ಕಡಿಮೆ ಮಾಡಲಿಲ್ಲ. ಊರ್ವಶಿ ಶ್ರೀಮಂತಿಕೆಯ ಸುಖ ಸೊಪ್ಪತ್ತಿಗೆಯಲ್ಲಿ ಬೆಳೆದಳು. ಊರ್ವಶಿ ಉಚ್ಚ ಶಿಕ್ಷಣ ಹೊಂದಬೇಕು, ತನ್ನ ವ್ಯಾಪಾರದ ಅನುಭವ ತೆಗೆದುಕೊಂಡು ತನ್ನ ವ್ಯವಹಾರವನ್ನು ಮುಂದುವರೆಸಬೇಕು ಎಂದು ತಂದೆಯ ಇಚ್ಛೆ ಆಗಿತ್ತು. ಅದರೆ ಕಾಲೇಜು ಶಿಕ್ಷಣ ಪಡೆಯುತ್ತಿದ್ದಾಗ ಊರ್ವಶಿಯ ಜೀವನದಲ್ಲಿ ತಿರುವು ಕಾಣಿಸಿತು.

ಕಾಲೇಜಿನಲ್ಲಿ ಎರಡನೇ ವರ್ಷದಲ್ಲಿ ಕಲಿಯುತ್ತಿದ್ದಾಗ ಆಕೆಗೆ ಪಾಠ ಹೇಳುತ್ತಿದ್ದ ಪ್ರಾಧ್ಯಾಪಕನೊಬ್ಬ ಆಕೆಯ ಮೊದಲನೆಯ ಕ್ರಶ್. ಎತ್ತರ ನಿಲುವಿನ, ಕನ್ನಡಕ ಹಾಕಿಕೊಂಡು, ಮುಖದ ಮೇಲಿದ್ದ ದಾಡಿಯನ್ನು ಸದಾ ನೀವಿಕೊಳ್ಳುತ್ತಿದ್ದ ಈ ವ್ಯಕ್ತಿ ತಾನು ಎಡ ಪಂಥದವ ಎಂದು ಹೇಳಿಕೊಳ್ಳುತಿದ್ದ. ತಾನು ಆದರ್ಶವಾದಿ ಎಂದು ಬಿಂಬಿಸುತಿದ್ದ ಈತ ಸಾಮಾಜಿಕ ಚಳವಳಿಗಳಲ್ಲಿ ಭಾಗವಹಿಸುತಿದ್ದ. ಊರ್ವಶಿ ಆತನನ್ನು ಪ್ರೇಮಿಸತೊಡಗಿದಳು. ಅವನ ಮೆಚ್ಚುಗೆ ಗಳಿಸಲು, ಆಕೆ ಆತನ ಕೂಡ ಚಳುವಳಿಗಳಲ್ಲಿ ಭಾಗವಹಿಸುತ್ತ ಆತನ ಹತ್ತಿರವಾಗುತ್ತ ಹೋದಳು. ಆದರೆ ಕೆಲವೇ ದಿನಗಳಲ್ಲಿ ಆಕೆಯ ಭ್ರಮ ನಿರಸನವಾಯಿತು. ಅವನ ನಿಜವಾದ ಬಣ್ಣ ಬಯಲಾಯಿತು. ಆತನ ಆದರ್ಶವಾದ ಕೇವಲ ಭಾಷಣಕ್ಕೆ ಸೀಮಿತವಾಗಿತ್ತು. ಆತ ಅವಕಾಶವಾದಿ ಆಗಿದ್ದ. ವೈಯಕ್ತಿಕ ಲಾಭಕ್ಕಾಗಿ ಸಮಯಕ್ಕೆ ತಕ್ಕಂತೆ ತನ್ನ ದೋರಣೆಗಳನ್ನು ಊಸರವಳ್ಳಿಯ ಹಾಗೆ ಬದಲಾಯಿಸುತಿದ್ದುದನ್ನು ಕಂಡು, ಊರ್ವಶಿಗೆ ಅವನಲ್ಲಿದ್ದ ಅಕರ್ಷಣೆ ಕಡಿಮೆ ಅಗುತ್ತ ಹೋಯಿತು. ಆದರೆ ಈ ವೇಳೆಯಲ್ಲಿ ಅವಳಲ್ಲಿದ್ದ ಜಿದ್ದು, ಕಾರ್ಯ ಸಾಧನೆಗಾಗಿ ಬೇಕಾಗುವ ಪರಿಶ್ರಮ, ಪ್ರಖರವಾದ ವಕ್ತøತ್ವ ಹಾಗು ಆಕ್ರಮಕ ಮುಂದಾಳತ್ವ, ಇವು ಮತ್ತಿಷ್ಟು ಹೊಳಪುಗೊಂಡವು. ಕಾಲೇಜು ಶಿಕ್ಷಣ ಮುಗಿಯುವದರಲ್ಲಿ ಆಕೆ ತರುಣ ಹೋರಾಟಗಾರ್ತಿಯೆಂದು ಪ್ರಸಿಧ್ಧಳಾದಳು. ನಂತರ ಆಕೆ ತನ್ನ ಸಂಪೂರ್ಣ ವೇಳೆಯನ್ನು ಸಾಮಾಜಿಕ ಕಾರ್ಯದಲ್ಲಿ ಮೀಸಲಾಗಿಟ್ಟಳು. ಈ ವೇಳೆಯಲ್ಲಿ ತೀವ್ರಗಾಮಿಗಳ, ಬುಧ್ಧಿಜೀವಿಗಳ ಸಂಪರ್ಕದಲ್ಲಿ ಬಂದಿದ್ದಳು. ನಂತರ ‘ಹಮರಾಹಿ’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದಳು. ಈಗ ಆಕೆ ರಾಜ್ಯದಲ್ಲಿ ಮಂಚೂಣಿಯಲ್ಲಿದ್ದ ಹೆಸರುವಾಸಿ ಸಾಮಾಜಿಕ ಕಾರ್ಯಕರ್ತೆ ಆಗಿದ್ದಳು.

ಟಿ,ವಿ,ಯಲ್ಲಿ ಈ ವಿಷಯದ ಬಗ್ಗೆ ವಾದ ವಿವಾದಗಳು ಚರ್ಚೆಗಳು ನಡೆದವು. ಚಲನಚಿತ್ರದಲ್ಲಿಯ ಕೆಲ ಕಲಾವಿದರು ಈ ದೃಶ್ಯಗಳ ಬಗ್ಗೆ ಕೋಪ ವ್ಯಕ್ತಪಡಿಸಿದರೆ, ಎಡಪಂಥದವರು, ಪುರೋಗಾಮಿ ವಿಚಾರವಾದಿಗಳು, ಇದು ಕಲಾವಿದನ ಸೃಜನಾತ್ಮಕ ಕಲಾಕೃತಿ ಎಂದರು.

ಕೇಂದ್ರದಲ್ಲಿ ಹಾಗು ರಾಜ್ಯದಲ್ಲಿ ಬಲಪಂಥ ವಿಚಾರ ಧಾರೆಯ ಶಾಸನವಿದ್ದುದರಿಂದ, ಅಸಹಿಷ್ಣುತೆ ಬಹಳ ಬೆಳೆದಿದೆ ಎಂಬುದು ಉದಾರಮತವಾದಿಗಳಾದ ಸಾಮಾಜಿಕ ಕಾರ್ಯಕರ್ತರ ಹಾಗು ಊರ್ವಶಿಯ ಮತವಾಗಿತ್ತು. ಅಲ್ಲದೆ ಆಕೆಗೆ ಅದರ ಅನುಭವವೂ ಆಗಿತ್ತು. ಯಾವದೋ ಕ್ಷುಲ್ಲಕ ಜಾತೀಯ ಸಂಘಟನೆ ಮೇಲೆ ಎದ್ದು, ಪುಸ್ತಕ, ನಾಟಕ, ಇಲ್ಲವೆ ಚಲನಚಿತ್ರದ ವಿರೋಧವಾಗಿ ಚಳವಳಿ ಮಾಡುತಿತ್ತು.

‘ಒನ್ ನೈಟ್ @ ಗೆಸ್ಟ್ ಹೌಸ್’ ಈ ಚಲನಚಿತ್ರ ಕೂಡ ಸಾಕಷ್ಟು ಪ್ರತಿಭಟನೆಗಳು ಎದುರಿಸಬೇಕಾಯಿತು. ದಿಗ್ದರ್ಶಕ ಪವನ ಧಿಂಗಾರಾ ಜೀವನೋಪಾಯಕ್ಕಾಗಿ ದುಡಿಯುತ್ತಿರುವ ಓರ್ವ ತರುಣಿಯ ಲೈಂಗಿಕ ಶೋಷಣೆಯ ಕಥೆಯನ್ನು ವಿಸ್ತøತವಾಗಿ ತೋರಿಸಿದ್ದ. ಇದೊಂದು ವ್ಯಾವಸಾಯಿಕ ಚಲನಚಿತ್ರವಾಗಿತ್ತು. ಈ ಚಿತ್ರಕ್ಕಾಗಿ ಅತ ಮಾದಕ ಕಣ್ಣುಗಳ, ಶಿಲಾ ಬಾಲಿಕೆಯರಂತೆ ಅಂಗ ಸೌಷ್ಠವ ಹೊಂದಿದ ಬಿಂಧಾಸ್ತ ನಟಿಯೆಂದೇ ಪ್ರಸಿಧ್ಧಳಾದ ನಿಹಾರಿಕಾ ಚೊಪ್ರಾಳನ್ನು ಆಯ್ಕೆ ಮಾಡಿದ್ದ. ಈ ಚಿತ್ರದಲ್ಲಿ ನಿಹಾರಿಕೆಯ ಸಂಪೂರ್ಣ ನಗ್ನ ದೃಶ್ಯವಿತ್ತು. ಮತ್ತು ಚಿತ್ತ ಉನ್ಮತ್ತಗೊಳಿಸುವ ಬಲಾತ್ಕಾರದ ದೃಶ್ಯವಿತ್ತು. ಚಲನಚಿತ್ರದ ಜಾಹೀರಾತಿನಲ್ಲಿ ಹಾಗೂ ಟ್ರೇಲರುಗಳಲ್ಲಿ ಇವುಗಳಿಗೆ ಹೆಚ್ಚಿನ ಪ್ರಸಿಧ್ಧಿ ಕೊಡಲಾಗಿತ್ತು. ಟಿ,ವಿ,ಯಲ್ಲಿ ಈ ವಿಷಯದ ಬಗ್ಗೆ ವಾದ ವಿವಾದಗಳು ಚರ್ಚೆಗಳು ನಡೆದವು. ಚಲನಚಿತ್ರದಲ್ಲಿಯ ಕೆಲ ಕಲಾವಿದರು ಈ ದೃಶ್ಯಗಳ ಬಗ್ಗೆ ಕೋಪ ವ್ಯಕ್ತಪಡಿಸಿದರೆ, ಎಡಪಂಥದವರು, ಪುರೋಗಾಮಿ ವಿಚಾರವಾದಿಗಳು, ಇದು ಕಲಾವಿದನ ಸೃಜನಾತ್ಮಕ ಕಲಾಕೃತಿ ಎಂದರು. ಪ್ರದರ್ಶನಕಿಂತ ಮೊದಲೇ ಚಿತ್ರಕ್ಕೆ ಪ್ರಚಾರ ಸಿಕ್ಕು ಸಾರ್ವಜನಿಕರ ಮನ ಸೆಳೆದು, ಬಿಡುಗಡೆ ಆದ ಮೊದಲು ದಿನದಿಂದ ಗಲ್ಲಾ ಪೆಟ್ಟಿಗೆ ತುಂಬತೊಡಗಿತು. ಅತ್ಯಂತ ಯಶಸ್ವಿ ಅಗುವ ದಿಕ್ಕಿನ ಕಡೆಗೆ ಅದು ನಡೆದಿತ್ತು. ಅಕಸ್ಮಾತ್ತಾಗಿ ನಾಲ್ಕು ದಿನಗಳ ನಂತರ, ಹಿಂದು ಚೇತನಾ ಪರಿಷದ್ ಎಂಬ ಅಷ್ಟೇನು ಪ್ರಸಿಧ್ಧವಲ್ಲದ ಒಂದು ಜಾತೀಯ ಸಂಘಟನೆ, ಚಿತ್ರಕ್ಕೆ ವಿರೋಧ ಮಾಡಲು ಪ್ರಾರಂಭಿಸಿತು. ಅದರ ಕಾರ್ಯಕರ್ತರು ರಸ್ತೆಯ ಮೇಲೆ ಇಳಿದರು. ಅಂದೋಲನ ಮಾಡಿದರು, ವಿರೋಧ ಪ್ರದರ್ಶನ, ಮೆರವಣಿಗೆ ಮಾಡಿದರು. ಥೇಟರನಲ್ಲಿ ಹೊಕ್ಕು ಗಲಾಟೆ ಮಾಡಿದರು. ಥೇಟರಿನ ಗಾಜುಗಳು ಚೂರು ಚೂರಾದವು. ಚಿತ್ರಪಟದ ಭಿತ್ತಿಚಿತ್ರಗಳನ್ನು ಹರಿದು ಬೀಸಾಕಲಾಯಿತು. ಪ್ರೇಕ್ಷಕ ಈ ಘಟನೆಯಿಂದ ದಿಗ್ಭ್ರಮೆಗೊಂಡು ಹೊರಗೆ ಪಲಾಯನ ಮಾಡಿದ. ನಂತರ ಈ ಸಂಘಟನೆ ಟಿ.ವಿ.ಯಲ್ಲಿ ಹಾಗು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಪಟದ ವಿರುಧ್ಧ ವಿಷ ಕಾರತೊಡಗಿತು. ಪತ್ರಿಕೆ ಮಾಧ್ಯಗಳು ಇದಕ್ಕೆ ಸಾಕಷ್ಟು ಪ್ರಚಾರ ಕೊಟ್ಟವು. ಚಿತ್ರದಲ್ಲಿಯ ದೃಶ್ಯಗಳು ಭಾರತೀಯ ಸಂಸ್ಕೃತಿಯ ವಿರೋಧಿ ಅಗಿವೆ, ಇದರಿಂದ ಸಮಾಜದಲ್ಲಿಯ ನೀತಿಮತ್ತೆ ಮಾಯವಾಗಿ ಅನೈತಿಕತೆ ಜನರಲ್ಲಿ ಬೇರು ಬಿಡುವದು, ಈ ಕಾರಣಕ್ಕೆ ಚಿತ್ರದ ಮೇಲೆ ನಿಷೇಧ ಹೇರಬೇಕು ಎಂದು ಸರಕಾರದ ಮುಂದೆ ಬೇಡಿಕೆಗಳು ಬರತೊಡಗಿದವು. ವಾತಾವರಣದಲ್ಲಿ ಕಾವೇರಿದಾಗ ಕೊನೆಗೆ ಸರಕಾರ ಚಿತ್ರದ ಮೇಲೆ ನಿಷೇಧ ಹೇರಿತು. ಎಡ ಪಂಥದವರು, ಪ್ರಗತಿಶೀಲ ವೈಚಾರಿಕರು ಈ ಚಿತ್ರದ ಪ್ರತಿಬಂಧಕಾಜ್ಞೆ ವಿರುಧ್ಧ ಧ್ವನಿ ಎತ್ತಿದರು. ಚಲನಚಿತ್ರದ ದರ್ಜೆ ಹಾಗು ಗುಣಮಟ್ಟದ ಬಗ್ಗೆ ವಿಶ್ಲೇಷಿಸುವದನ್ನು ಬಿಟ್ಟು ಗುಂಡಾಗಿರಿ ಹಾಗು ಹಿಂಸಾಚಾರದ ಮಾರ್ಗದಿಂದ ಚಲನಚಿತ್ರವನ್ನು ತಡೆ ಹಿಡಿಯುವದು ಇದು ಫ್ಯಾಸಿಸಮ್ ಆಗಿದ್ದು, ಈ ಕೃತ್ಯದ ಹಿಂದಿರುವ ಸಂಘಟನೆ ಹಾಗು ಸರಕಾರ ಇಬ್ಬರೂ ಫ್ಯಾಸಿಸ್ಟರು ಎಂದು ಅವರ ಅಭಿಪ್ರಾಯವಾಗಿತ್ತು. ಕಲಾತ್ಮಕ ಹಾಗು ಹೊಸ ಅಲೆಯ ಚಿತ್ರ ನಿರ್ಮಾಣ ಮಾಡುವ ನಿರ್ಮಾಪಕರು, ದಿಗ್ದರ್ಶಕರು. ಪತ್ರಕಾರರು, ಸಾಹಿತಿಗಳು, ಬುಧ್ಧಿಜೀವಿಗಳು ಈ ಚಿತ್ರಕ್ಕೆ ಬೆಂಬಲ ನೀಡಿದರು. ಕಲಾವಿದನಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇರಲೇಬೇಕು. ಹಾಗು ಚಲನಚಿತ್ರದ ಗುಣಮಟ್ಟದ ಬಗ್ಗೆ ಪ್ರೇಕ್ಷಕರು ನಿರ್ಣಯ ಕೊಡಲಿ ಎಂಬುದು ಅವರ ಬೇಡಿಕೆ ಆಗಿತ್ತು. ಊರ್ವಶಿ ಈ ಚಿತ್ರಪಟಕ್ಕೆ ಬೆಂಬಲ ನೀಡಿದಳು. ಚಿತ್ರಪಟದ ನಿಮಿತ್ತದಿಂದ ಊರ್ವಶಿಯಲ್ಲಿದ್ದ ಸಾಮಾಜಿಕ ಕಾರ್ಯಕರ್ತೆ ಮತ್ತಿಷ್ಟು ಜಾಗೃತಳಾದಳು. ಚಿತ್ರಪಟದ ಸಮರ್ಥನೆಗಾಗಿ ಚಳವಳಿ ಮಾಡಲಾರಂಭಿಸಿದಳು. ವೃತ್ತಪತ್ರಿಕೆಯಲ್ಲಿ ಲೇಖನ ಬರೆಯುವದು, ಟಿ.ವಿ.ಯ ಚರ್ಚೆಯಲ್ಲಿ ಭಾಗವಹಿಸುವದು, ಹಾಗು ನಿಷೇಧಾಜ್ಞೆ ತೆಗೆದು ಹಾಕಲು ನಾಗರಿಕರ ಸಹಿಗಳನ್ನು ಸಂಗ್ರಹಿಸುವದು, ಹೀಗೆ ಅನೇಕ ವಿಧಾನಗಳಿಂದ ಚಲನಚಿತ್ರವನ್ನು ಬೆಂಬಲಿಸುವ ವಾತಾವರಣವನ್ನು ತಯಾರ ಮಾಡಿದಳು. ಆ ಮತೀಯ ಸಂಘಟನೆ ಹಾಗು ಸರಕಾರದ ಮೇಲೆ ಕಡು ಟೀಕಾಪ್ರಹಾರ ಮಾಡತೊಡಗಿದಳು.

ಅವಶ್ಯವಾದ ದಾಖಲು, ದಸ್ತವೇಜುಗಳನ್ನು ಸಿಧ್ಧ ಪಡಿಸುವದು, ವಕೀಲರ ಕಛೇರಿಗೆ ಸುತ್ತಾಟ, ಚಲನಚಿತ್ರ ಜಗತ್ತಿಗೆ ಸಂಬಂಧ ಪಟ್ಟ ಜನರನ್ನು ತನ್ನ ಪಕ್ಷ ವಹಿಸಿ ಮಾತನಾಡಲು ನ್ಯಾಯಾಲಯಕ್ಕೆ ಕರೆದುಕೊಂಡು ಬರುವದು, ಇದರಲ್ಲಿಯೇ ಊರ್ವಶಿ ತನ್ನನ್ನು ತೊಡಗಿಸಿಕೊಂಡಳು.

ಚಲನಚಿತ್ರದ ಮೇಲಿರುವ ನಿಷೇಧವನ್ನು ತೆಗೆದು ಹಾಕಲು ಆಕೆ ಜನಹಿತ ಯಾಚಿಕೆ ನ್ಯಾಯಾಲಯಕ್ಕೆ ಸಲ್ಲಿಸಿದಳು. ಈ ವ್ಯಾಜ್ಯಕ್ಕಾಗಿ ತಗಲುವ ವೆಚ್ಚವನ್ನು ಕೊಡುವದಾಗಿ ನಿರ್ಮಾಪಕ ಹರಬನ್ಸಲಾಲ ಹೇಳಿದ್ದ. ಆಗ ಈ ಮೊಕದ್ದಮೆ ಗೆಲ್ಲುವದಕ್ಕೆ ಹೆಣಗಾಟ ಸುರು ಆಯಿತು. ಅವಶ್ಯವಾದ ದಾಖಲು, ದಸ್ತವೇಜುಗಳನ್ನು ಸಿಧ್ಧ ಪಡಿಸುವದು, ವಕೀಲರ ಕಛೇರಿಗೆ ಸುತ್ತಾಟ, ಚಲನಚಿತ್ರ ಜಗತ್ತಿಗೆ ಸಂಬಂಧ ಪಟ್ಟ ಜನರನ್ನು ತನ್ನ ಪಕ್ಷ ವಹಿಸಿ ಮಾತನಾಡಲು ನ್ಯಾಯಾಲಯಕ್ಕೆ ಕರೆದುಕೊಂಡು ಬರುವದು, ಇದರಲ್ಲಿಯೇ ಊರ್ವಶಿ ತನ್ನನ್ನು ತೊಡಗಿಸಿಕೊಂಡಳು. ಚಲನಚಿತ್ರದ ಮೇಲೆ ಹಾಕಿರುವ ನಿಷೇಧವನ್ನು ತೆಗೆದು ಹಾಕುವದು ಆಕೆಯ ಧ್ಯೇಯವಾಗಿತ್ತು.

‘ಈ ತೃತೀಯ ದರ್ಜೆಯ ಚಲನಚಿತ್ರದ ಬಗ್ಗೆ ನೀನು ಏಕೆ ಧಡಪಡಿಸುತ್ತಿರುವೆ.’ ಮಗಳ ಓಡಾಟ ಕಂಡು ಊರ್ವಶಿಯ ತಂದೆ ಘನಶ್ಯಾಮ ಮಿಶ್ರಾ ವಿಚಾರಿಸಿದರು.

‘ಡ್ಯಾಡಿ, ಈ ವಿಷಯ ನಿಮಗೆ ತಿಳಿಯಲಾರದು. ನೀವು ವ್ಯಾಪಾರಿ. ಕೇವಲ ಲಾಭ ನಷ್ಟದ ಬಗ್ಗೆ ಮಾತ್ರ ವಿಚಾರ ಮಾಡುತ್ತೀರಿ. ನಿಮಗೆ ಸಾಮಾಜಿಕ ಪ್ರಶ್ನೆಗಳ ಮಹತ್ವ ಹೇಗೆ ತಿಳಿಯಬೇಕು.?’

ಆದರ್ಶವಾದಿ ಹಾಗು ಸ್ವಲ್ಪ್ಪ ಮುಗ್ಧಳಾದ ತಮ್ಮ ಮಗಳ ಮಾತು ಕೇಳಿ ಅವರ ಮುಖದ ಮೇಲೆ ಮುಗುಳ್ನಗೆ ಮೂಡಿತು. ಊರ್ವಶಿಯಂತಹ ಕಾರ್ಯಕರ್ತರ ಚಿಂತನ ಶೈಲಿಯ ಬಗ್ಗೆ ಆಶ್ಚರ್ಯವಾಯಿತು. ಒಂದು ಪ್ರಶ್ನೆಗೆ ಅನೇಕ ಮಗ್ಗಲುಗಳಿರುತ್ತವೆ. ಕೇವಲ ತನ್ನದೇ ಸರಿಯಾದ ಮಾರ್ಗ ಎಂದು ಗ್ರಹಿಸುವದು ಹಾಗು ಗೊಂದಲ ನಿರ್ಮಾಣ ಮಾಡುವದು, ಇದು ಹುಚ್ಚುತನ ಎಂದೇ ಅವರ ಅಭಿಪ್ರಾಯ. ಸರಕಾರ ನಿಯಂತ್ರಣ ಹಾಗು ವ್ಯವಸ್ಥೆ ತಮ್ಮದೇ ಆದ ಮಾರ್ಗದಲ್ಲಿ ಹೇಗೆ ನಡೆಯುತ್ತವೆ ಎಂಬುದು, ಅವರಿಗೆ ಗೊತ್ತು, ಯಾಕೆಂದರೆ ಅವರಿಗೆ ಹಿಂದಿನ ಹಾಗು ಇಂದಿನ ಸರಕಾರದ ಕಾರ್ಯ ವೈಖರಿಯ ಅನುಭವವಿತ್ತು. ವ್ಯವಸ್ಥೆಯ ಕೂಡ ಹೊಂದಿಕೊಂಡು ಹೋಗಲು ಯಾರಿಗೆ ಬರುವದಿಲ್ಲವೋ ಅವರು ವ್ಯವಸ್ಥೆ ಬದಲಾಯಿಸುವ ಭಾಷೆಗಳನ್ನು ಆಡುತ್ತಾರೆ ಎಂದು ಅವರ ಮತವಾಗಿತ್ತು. ಹೀಗಾಗಿ ಊರ್ವಶಿಯ ಈ ಚಟುವಟಿಕೆಗಳ ಬಗ್ಗೆ ಅವರಿಗೆ ಅಸಮಾಧಾನವಿತ್ತು. ಆದರೂ ಸುಮ್ಮನಿದ್ದರು. ಕಾರಣ ಇಷ್ಟೇ, ನಿಷ್ಕಪಟಿಯಾದ ಮಗಳು ಊರ್ವಶಿಯ ಮೇಲೆ ಅತ್ಯಂತ ಪ್ರೀತಿ ಇತ್ತು. ಆಫ ಕೋರ್ಸ ಶಿ ಈಜ ಎ ಫೂಲ, ಬಟ್ ಶಿ ಇಜ ಇನೊಸೆಂಟ ಫೂಲ,

‘ಸರಿ, ಸರಿ, ನಿಮಗೆ ಚಲನಚಿತ್ರ ಕೇವಲ ಒಂದು ನಿಮಿತ್ತ ಮಾತ್ರ. ಇದರ ಹಿಂದೆ ಇರುವ ಸತ್ಯ ಏನೆಂದರೆ ಸರಕಾರದ ಮೇಲೆ ನಿಮ್ಮ ಕೋಪವಿದೆ.’ ಚೇಷ್ಟೆಯಿಂದ ಘನಶ್ಯಾಮ ನುಡಿದರು.

‘ನಾನು ಈ ಚಲನಚಿತ್ರದ ಟ್ರೇಲರ, ಪೋಸ್ಟರ ನೋಡಿದ್ದೇನೆ. ಅದು ಸಂಪೂರ್ಣವಾಗಿ ವ್ಯಾಪಾರೀ ಚಿತ್ರವಾಗಿದೆ. ಜಾಹಿರಾತದಲ್ಲಿ, ಆ ನಟಿಯ ನಗ್ನ ದೃಶ್ಯ ಹಾಗು ಬಲಾತ್ಕಾರ ದ್ರಶ್ಯವನ್ನು ಎದ್ದು ಕಾಣಿಸುವ ಹಾಗೆ ತೋರಿಸಿದ್ದಾರೆ. ಅಲ್ಲದೇ ಸಂವಾದದಲ್ಲಿ ಕೂಡ ಅಶ್ಲೀಲದ ಸೋಂಕು ಇದೆ. ಇದು ಜನರ ಭಾವನೆಯ ಕೂಡ ಆಟವಾಡಿ ಹಣ ಗಳಿಸುವ ವ್ಯಾಪಾರವೇ ಆಗಿದೆ. ನಿನ್ನಂತಹ ಆದರ್ಶವಾದಿ ಕಾರ್ಯಕರ್ತೆ, ಇದಕ್ಕೆ ಬೆಂಬಲ ಕೊಡುವದು ಹಾಗು ಅದರ ಬಗ್ಗೆ ಇಷ್ಟು ಧಡಪಡಿಸುವ ಕಾರಣವಾದರೂ ಏನು.?’

‘ಪ್ರಶ್ನೆ ಅದಲ್ಲ. ಪ್ರಶ್ನೆ ತತ್ವದ್ದು ಆಗಿದೆ. ಚಲನಚಿತ್ರದ ಗುಣಮಟ್ಟ ಹೇಗೆಯೇ ಇರಲಿ, ಉದ್ದೇಶ ಏನೇ ಇರಲಿ, ಅದು ಒಂದು ಕಲಾಕೃತಿ ಆಗಿದೆ. ಚಲನಚಿತ್ರ ಹೇಗೆ ನಿರ್ಮಿಸಬೇಕು, ಅದರ ಪ್ರಚಾರ ಹೇಗೆ ಮಾಡಬೇಕು ಎಂಬುದು ನಿರ್ಮಾಪಕರಿಗೆ ಬಿಟ್ಟ ವಿಷಯ. ಚಿತ್ರ ಚೆನ್ನಾಗಿರದಿದ್ದರೆ ಜನ ಥೇಟರದ ಕಡೆಗೆ ಹಾಯುವದಿಲ್ಲ. ಆದರೆ ಜಾತೀ ಸಂಘಟನೆಯೊಂದು ಗುಂಡಾಗಿರಿ ಮಾಡಿ ಇಲ್ಲವೇ ಹಿಂಸೆಯ ಮಾರ್ಗ ಅವಲಂಬಿಸಿ ಚಿತ್ರಪಟವನ್ನು ನಿಲ್ಲುಸುವದು ಹಾಗು ಸರಕಾರ ನಿಷೇಧ ಹೇರುವದು, ಇದನ್ನು ನಾವು ಪ್ರತಿಭಟಿಸಲೇಬೇಕು. ಸರ್ವಾಧಿಕಾರಿ ಪ್ರವೃತ್ತಿಯ, ಜಾತೀಯವಾದಿ ಆದ ಶಾಸನದ ಕೂಡ ನಾವು ಸತತವಾಗಿ ಸಂಘರ್ಷ ಮಾಡಲೇಬೇಕು.’

‘ಸರಿ, ಸರಿ, ನಿಮಗೆ ಚಲನಚಿತ್ರ ಕೇವಲ ಒಂದು ನಿಮಿತ್ತ ಮಾತ್ರ. ಇದರ ಹಿಂದೆ ಇರುವ ಸತ್ಯ ಏನೆಂದರೆ ಸರಕಾರದ ಮೇಲೆ ನಿಮ್ಮ ಕೋಪವಿದೆ.’ ಚೇಷ್ಟೆಯಿಂದ ಘನಶ್ಯಾಮ ನುಡಿದರು.

‘ಹೌದು. ಆಯ್ ಹೇಟ ದಿಸ್ ಫ್ಯಾಸಿಸ್ಟ ಗವ್ಹರ್ನಮೆಂಟ.’ ಊರ್ವಶಿ ಸಿಟ್ಟಿಗೆದ್ದು ನುಡಿದಳು. ‘ನಾನು ಈ ಸರಕಾರವನ್ನು ದ್ವೇಷಿಸುತ್ತೇನೆ. ಸರಕಾರದ ಧೋರಣೆ ಹಾಗು ಕಾರ್ಯನೀತಿಯ ವಿರುಧ್ಧ ಹೋರಾಡುತ್ತೇನೆ. ಪ್ರಜಾತಂತ್ರ ವ್ಯವಸ್ಥೆಗೆ ಈ ಸರಕಾರದಿಂದ ಗಂಡಾಂತರವಿದೆ ಎಂದು ನನ್ನ ಸ್ಪಷ್ಟ ಮತ.’

ಈ ಸರಕಾರವೂ ಪ್ರಜಾಪ್ರಭುತ್ವ ಪಧ್ಧತಿಯಿಂದಲೆ ಆರಿಸಿಬಂದಿಲ್ಲವೇ.? ಎಂದು ಘನಶ್ಯಾಮ ಊರ್ವಶಿಗೆ ಹೇಳಬಹುದಿತ್ತು. ಅದರಿಂದ ಯಾವ ಪ್ರಯೋಜನನೂ ಆಗುವದಿಲ್ಲ ಎಂಬುದು ಅವರಿಗೆ ಗೊತ್ತು. ಯಾಕೆಂದರೆ, ಹಿಟ್ಲರನೂ ಪ್ರಜಾತಂತ್ರ ವಿಧಾನಗಳಿಂದಲೇ ಆರಿಸಿ ಬಂದಿದ್ದ ಎಂದು ವಾಡಿಕೆಯಂತೆ ಊರ್ವಶಿ ಮಾತಿನ ಬಾಣದಿಂದ ಪ್ರತ್ಯುತ್ತರ ಕೊಡುತ್ತಿದ್ದಳು.

ಕಲೆಯ ಹೆಸರಿನಿಂದ ನಗ್ನದೃಶ್ಯ ಹಾಗು ಬಲಾತ್ಕಾರದ ದೃಶ್ಯ ತೋರಿಸಿ ತನ್ನ ತಿಜೋರಿ ತುಂಬಿಸುತ್ತಾನೆ, ಇದಕ್ಕೆ ನಿಮ್ಮ ಸಮರ್ಥನೆ ಇದೆಯೇ? ಸ್ತ್ರೀಯನ್ನು ಸರಕು ಹಾಗು ಉಪಭೋಗ್ಯ ವಸ್ತು ಎಂದು ತಿಳಿದು ಆಕೆಯನ್ನು ಹೀಗೆ ವಾಣಿಜ್ಯೀಕರಣ ಮಾಡುವದು ಸರಿಯೇ.?”

‘ಅದು ಹೋಗಲಿ,’ ಘನಶ್ಯಾಮ ಮಾತಿನ ವರಸೆ ಬದಲಿಸಿದರು. ‘ಪ್ರಗತಿಪರರಾದ ನೀವು ಸ್ತ್ರೀಸ್ವಾತಂತ್ರ್ಯವಾದಿಗಳು ತಾನೆ.? ಹಣದ ಬೆನ್ನು ಹಿಂದೆ ಬಿದ್ದಿರುವ ಉದ್ಯಮಿಯೊಬ್ಬ, ಕಲೆಯ ಹೆಸರಿನಿಂದ ನಗ್ನದೃಶ್ಯ ಹಾಗು ಬಲಾತ್ಕಾರದ ದೃಶ್ಯ ತೋರಿಸಿ ತನ್ನ ತಿಜೋರಿ ತುಂಬಿಸುತ್ತಾನೆ, ಇದಕ್ಕೆ ನಿಮ್ಮ ಸಮರ್ಥನೆ ಇದೆಯೇ? ಸ್ತ್ರೀಯನ್ನು ಸರಕು ಹಾಗು ಉಪಭೋಗ್ಯ ವಸ್ತು ಎಂದು ತಿಳಿದು ಆಕೆಯನ್ನು ಹೀಗೆ ವಾಣಿಜ್ಯೀಕರಣ ಮಾಡುವದು ಸರಿಯೇ.?”

‘ನಿಮ್ಮ ಮಾತಿನಲ್ಲಿ ಸತ್ಯ ಅಡಗಿದೆ.’ ಮೆಲ್ಲಗಿನ ಧ್ವನಿಯಲ್ಲಿ ಊರ್ವಶಿ ಮಾತನಾಡಿದಳು.

‘ನಮ್ಮ “ಹಮರಾಹಿ“ ಸಂಸ್ಥೆಯ ಒಂದು ಸಭೆಯಲ್ಲಿ ಸಬಿನಾ ಶೇಖ, ಈ ವಿಷಯವನ್ನು ಮಂಡಿಸಿದ್ದಳು. ಈ ಚಿತ್ರದ ಮೇಲೆ ನಿಷೇಧವಿಲ್ಲದಿದ್ದರೆ ಬಹುಶಃ ನಾವು ಈ ಚಿತ್ರದಲ್ಲಿಯ ಸ್ತ್ರೀಯ ವಿಕೃತ ಪ್ರದರ್ಶನದ ವಿರುಧ್ಧ ಚಳುವಳಿ ಮಾಡುತ್ತಿದ್ದೆವು. ಸ್ತ್ರೀಯನ್ನು ಒಂದು ಸರಕು ಎಂದು ತಿಳಿದು ವ್ಯಾಪಾರಿ ವಸ್ತುವನ್ನಾಗಿ ಮಾಡುವದು ನಮಗೂ ಮಾನ್ಯವಿಲ್ಲ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸ್ತ್ರೀಯ ವ್ಯಾಪಾರೀಕರಣಕ್ಕಿಂತ, ಗುಂಡಾಗಿರಿ ಹಾಗು ಫ್ಯಾಸಿಸಮ್ ಹೆಚ್ಚು ಗಂಡಾಂತರಕಾರಿ ಎಂದು ಅನಿಸುತ್ತದೆ. ಸದ್ಯಕ್ಕೆ ಚಿತ್ರಪಟದ ಕಡೆಗೆ ದುರ್ಲಕ್ಷ್ಯ ಮಾಡಿ, ಉಳಿದೆರಡು ದುಷ್ಟ ಪ್ರವೃತ್ತಿಯ ವಿರುಧ್ಧ ಹೋರಾಡಬೇಕಾಗಿದೆ. ಚಿತ್ರ ಅಶ್ಲೀಲವಾಗಿದ್ದರೆ ಜನಸಾಮಾನ್ಯರು ಅದನ್ನು ತಿರಸ್ಕರಿಸುತ್ತಾರೆ, ಹಾಗು ಅದು ಮಕಾಡೆ ಮಲಗುತ್ತದೆ. ಈ ಉದ್ದೇಶದಿಂದಲೇ ನಾವು ಚಲನಚಿತ್ರಕ್ಕೆ ಬೆಂಬಲ ಕೊಟ್ಟು ಶಾಸನದ ವಿರುಧ್ಧ ಹೋಡಲು ನಿಶ್ಚಯಿಸಿದೆವು.’

‘ಆದರೆ, ಚಿತ್ರಪಟದ ನಿಮಿತ್ತದಿಂದ ಅ ನಟಿಯ ಲೈಂಗಿಕ ಶೋಷಣೆ ಆಗಿದೆಯಲ್ಲ. ಅದಕ್ಕೇನು?’

‘ಆದರೆ ಡ್ಯಾಡಿ, ಆ ನಟಿಯ ಒಪ್ಪಿಗೆ ಇರಲೇಬೇಕಲ್ಲವೇ.? ಚಿತ್ರಪಟದ ಕಥೆಯನ್ನು ಆಕೆ ಕೇಳಿರಬೇಕು, ದಿಗ್ದರ್ಶಕನ ಕೂಡ ಚರ್ಚೆ ಮಾಡಿರಬೇಕು, ಅಲ್ಲದೆ ನಗ್ನ ಹಾಗು ಬಲಾತ್ಕಾರದ ದೃಶ್ಯಗಳಿಗೆ ಮಾನ್ಯತೆ ಕೊಟ್ಟಿರಬೇಕು. ನಿಹಾರಿಕಾ ಚೋಪ್ರಾ ಓರ್ವ ಪ್ರಬುಧ್ಧ ಹಾಗು ಅನುಭವಿ ನಟಿ ಇದ್ದಾಳೆ. ವಿವೇಕಿ ಆದ ಆಕೆ ತನ್ನ ಮರ್ಜಿಯಿಂದಲೆ ಈ ಎಲ್ಲ ದ್ರಶ್ಯಗಳಲ್ಲಿ ಅಭಿನಯಿಸಿದ್ದಾಳೆ, ಅಂದ ಮೇಲೆ ಇದರಲ್ಲಿ ಶೋಷಣೆ ಎಲ್ಲಿಂದ ಬಂದಿತು.?’

ಕೊನೆಗೆ ಆ ಹಿಂದು ಸಂಘಟನೆಯ ಪ್ರತಿನಿಧಿ ಚರ್ಚೆಯನ್ನು ಬಿಟ್ಟು ಹೊರಗೆ ನಡೆದ. ನ್ಯಾಯಾಲಯ ತೀರ್ಪು ಕೊಟ್ಟು ನಾಲ್ಕು ದಿನಗಳಾಗಿದ್ದವು. “ಹಮರಾಹಿ” ಸಂಸ್ಥೆಯ ಸಭೆ ಮುಗಿಸಿ ಊರ್ವಶಿ ತನ್ನ ಫ್ಲಾಟಿಗೆ ಬಂದಳು.

ಘನಶ್ಯಾಮ ಸುಮ್ಮನೆ ಕುಳಿತರು. ಆದರೆ ಅವರಿಗೆ ಸಂಪೂರ್ಣವಾಗಿ ಸಮಾಧಾನವಾಗಿರಲಿಲ್ಲ. ಅದರೆ, ಪ್ರಾಜ್ಞಳಾದ ಮಗಳು ತನ್ನ ಬುಧ್ಧಿಚಾತುರ್ಯದಿಂದ ಹಾಗು ತರ್ಕಗಳಿಂದ ಎದುರಿಗಿದ್ದವನನ್ನು ವಾದವಿವಾದದಲ್ಲಿ ಸೋಲಿಸಿ ಸುಮ್ಮನಾಗಿಸುತ್ತಾಳೆ ಎಂಬುದು ಅವರಿಗೆ ಗೊತ್ತಿತ್ತು. ಆದರೂ ಘನಶ್ಯಾಮರಿಗೆ ಈ ಪ್ರಕರಣದಲ್ಲಿ ಏನೋ ತಪ್ಪು ಇದೆ ಎಂದು ಅನಿಸಿತ್ತು.

ಅದೇ ದಿನ ರಾತ್ರಿ ಟಿ.ವಿ. ಚನೆಲ್ಲ ಒಂದರ ಚರ್ಚೆಯಲ್ಲಿ, ಹಿಂದು ಚೇತನಾ ಪರಿಷದ್ ಪ್ರತಿನಿಧಿಯ ಕೂಡ ವಾಗ್ವಿವಾದದಲ್ಲಿ ತೊಡಗಿದ್ದಳು.

‘ಈ ದೇಶ ಕೇವಲ ಹಿಂದುಗಳದ್ದಲ್ಲ. ಇತರ ಧರ್ಮಗಳ ಹಾಗು ದೇವರನ್ನು ನಂಬದ ನನ್ನಂತಹ ನಾಸ್ತಿಕವಾದಿಗಳ ದೇಶವೂ ಹೌದು. ನಿಮ್ಮ ಅಪ್ಪನ ಆಸ್ತಿ ಈ ದೇಶ ಎಂದು ತಿಳಿಯದಿರಿ. ನಿಮ್ಮ ಗುಂಡಾಗಿರಿ, ದಬ್ಬಾಳಿಕೆಗೆ ನಾವು ಹೆದರಲಾರೆವು. ನಿಮ್ಮನ್ನು ವಿರೋಧಿಸುವೆವು. ಕೊನೆಗೂ ವಿಜಯ ನಮ್ಮದೇ ಆಗಿದೆ’.

ಆಕೆಯ ಈ ಹೇಳಿಕೆಗೆ, ಚರ್ಚೆಯಲ್ಲಿ ಭಾಗವಹಿಸಿದ್ದ ಓರ್ವ ಎಡಪಂಥದ ಚಿಂತಕ ಹಾಗು ಕಾರ್ಯಕ್ರಮದ ಸೂತ್ರಧಾರ ಬೆಂಬಲ ಕೊಟ್ಟರು. ಹಿಂದು ಸಂಘಟನೆಯ ಪ್ರತಿನಿಧಿ ಉತ್ತರ ಕೊಡಲು ಮುಂದಾದ. ಆದರೆ ಅವನ ಉತ್ತರದಲ್ಲಿ ತಾರ್ಕಿಕತೆಯ ಕೊರತೆ ಇತ್ತು. ತನ್ನ ಪಕ್ಷವನ್ನು ಸಮರ್ಥಿಸಲು ಸಾದ್ಯವಾಗದೇ ಆತ ಕೇವಲ ಹಿಂದು ಧರ್ಮದ ಹಿರಿಮೆ, ಶ್ರೇಷ್ಠತೆ ಹೇಳುತ್ತ ಹೋದ. ಈಗ ಅವನ ಹಾಗು ಊರ್ವಶಿಯ ನಡುವೆ ಶಾಬ್ದಿಕ ಚಕಮಕಿಗಳಾದವು. ಕೊನೆಗೆ ಆ ಹಿಂದು ಸಂಘಟನೆಯ ಪ್ರತಿನಿಧಿ ಚರ್ಚೆಯನ್ನು ಬಿಟ್ಟು ಹೊರಗೆ ನಡೆದ. ನ್ಯಾಯಾಲಯ ತೀರ್ಪು ಕೊಟ್ಟು ನಾಲ್ಕು ದಿನಗಳಾಗಿದ್ದವು. “ಹಮರಾಹಿ” ಸಂಸ್ಥೆಯ ಸಭೆ ಮುಗಿಸಿ ಊರ್ವಶಿ ತನ್ನ ಫ್ಲಾಟಿಗೆ ಬಂದಳು. ಸಭೆ ಬಹಳ ಹೊತ್ತು ನಡೆದಿತ್ತು. ಗಡಿಯಾರದಲ್ಲಿ ವೇಳೆ ನೋಡಿದಳು. ವೇಳೆ ರಾತ್ರಿಯ ಹನ್ನೊಂದುವರೆ ಆಗಿತ್ತು.

‘ಮ್ಯಾಡಮ್, ಆಪಸೆ ಮಿಲನೆ ಕೇಲಿಯೇ ಏಕ ಬುರಖೇವಾಲಿ ಔರತ ಆಯಿ ಹೈ. ಕಾರೊಡೋರ ಮೆ ಆಪಕಾ ಇಂತಜಾರ ಕರ ರಹಿ ಹೈ,’ ಸೆಕ್ಯುರಿಟಿಯವ ಬಂದು ಹೇಳಿದ. ತಲಾಕ ಪೀಡಿತ ಮುಸಲ್ಮಾನ ಮಹಿಳೆ ಇರಬಹುದು, ದಣಿದು ಬಂದಿದ್ದ ತನಗೆ ಆಕೆಯ ಗೋಳಿನ ಕಥೆಯನ್ನು ಕೇಳುªಷ್ಟು ತ್ರಾಣ ಉಳಿದಿದೆಯೇ.? ಎಂದು ವಿಚಾರ ಮಾಡುತ್ತ ಊರ್ವಶಿ ತನ್ನ ಫ್ಲಾಟಿನ ಹತ್ತಿರ ಬಂದಾಗ, ಆ ಬುರಖಾಧಾರಿ ಸ್ತ್ರೀ ದಾರಿ ಕಾಯುತ್ತ ಅಲ್ಲಿಯೇ ನಿಂತಿದ್ದಳು. ಊರ್ವಶಿ ಆಕೆಯನ್ನು ಒಳಗೆ ಕರೆದುಕೊಂಡು ಹೋಗಿ ಕುರ್ಚಿಯ ಮೇಲೆ ಕೂಡಲು ಹೇಳಿ ಬಚ್ಚಲು ಮನೆಗೆ ಹೋಗಿ ಮುಖ ತೊಳೆದುಕೊಂಡು ಮರಳಿ ಬಂದು ಆ ಮಹಿಳೆಗೆ ಕೇಳಿದಳು.

ಬುರಖಾ ತೆಗೆದ ಮೇಲೆ ಜೀನ್ ಪ್ಯಾಂಟ ಹಾಗು ಟೀ ಶರ್ಟ ಹಾಕಿದ ಆಕೆ, ಆತ್ಮವಿಶ್ವಾಸದಿಂದ ಕೂಡಿದ ಅದುನಿಕ ತರುಣಿಯಂತೆ ಕಾಣಿಸುತಿದ್ದಳು. ‘ನೀನು ನಿಹಾರಿಕಾ ತಾನೆ ? ಒನ್ ನೈಟ @ ಗೆಸ್ಟ ಹೌಸ ಚಿತ್ರದ ನಾಯಕಿ ತಾನೆ.?’

‘ಈಗ ಹೇಳಿ ನನ್ನಿಂದ ಏನು ಆಗ ಬೇಕಿತ್ತು?’

ಆ ಮಹಿಳೆ ತನ್ನ ಬುರಖಾ ತೆಗೆದು ಮಗ್ಗಲಿಗೆ ಇಟ್ಟಳು. ಆಕೆಯ ಮುಖವನ್ನು ಕಂಡು ಊರ್ವಶಿ ಚಕಿತಳಾದಳು. ದೇವರೇ, ಈಕೆ ನಟಿ ನಿಹಾರಿಕಾ ಚೊಪ್ರಾ ಆಗಿದ್ದಳು. ‘ಒನ್ ನೈಟ @ ಗೆಸ್ಟ ಹೌಸ’ ಚಲನಚಿತ್ರದ ನಾಯಕಿ. ಗುಲಾಬಿ ಬಣ್ಣ, ಹಾಗು ಅಸದೃಶ ಚೆಲುವಿಕೆಯಿಂದ ಕೂಡಿದ ಮುಖ. ಚಲನಚಿತ್ರದಲ್ಲಿ ಮಾದಕವಾಗಿ ಕಾಣಿಸುತಿದ್ದ ಆಕೆ ಪ್ರತ್ಯಕ್ಷದಲ್ಲಿ ಅದಕಿಂತ ಹೆಚ್ಚು ಸುಂದರಿಯಾಗಿದ್ದಳು. ಹಾಗು ಬುರಖಾ ತೆಗೆದ ಮೇಲೆ ಜೀನ್ ಪ್ಯಾಂಟ ಹಾಗು ಟೀ ಶರ್ಟ ಹಾಕಿದ ಆಕೆ, ಆತ್ಮವಿಶ್ವಾಸದಿಂದ ಕೂಡಿದ ಅದುನಿಕ ತರುಣಿಯಂತೆ ಕಾಣಿಸುತಿದ್ದಳು. ‘ನೀನು ನಿಹಾರಿಕಾ ತಾನೆ ? ಒನ್ ನೈಟ @ ಗೆಸ್ಟ ಹೌಸ ಚಿತ್ರದ ನಾಯಕಿ ತಾನೆ.?’

‘ಹೌದು, ಆಕೆಯೇ ನಾನು. ಈಗಾಗಲೇ ನಾನು ಸಾಕಷ್ಟು ಜನಪ್ರಿಯಳಾಗಿದ್ದೆ. ‘ಒನ್ ನೈಟ @ ಗೆಸ್ಟ ಹೌಸ’ ಈ ಚಲನಚಿತ್ರ ಎಲ್ಲೆಡೆಯಲ್ಲಿ ಬಹಳಷ್ಟು ಪ್ರಚಾರ ಪಡೆಯುತ್ತಿದೆಯಲ್ಲಾ, ಈಗ ಅದು ನನ್ನನ್ನು ವಾದಗ್ರಸ್ತಳನ್ನಾಗಿ ಮಾಡಿದೆ. ನನಗೆ ಮುಕ್ತವಾಗಿ, ನಿರಾಂತಕವಾಗಿ ಹೊರಗೆ ಓಡಾಡಲೂ ಅಸಾಧ್ಯವಾಗಿದೆ. ಪತ್ರಕಾರರು, ಅಭಿಮಾನಿಗಳು ಹಾಗು ಸಾರ್ವಜನಿಕರು ನನ್ನ ಬೆನ್ನ ಹಿಂದೆ ಬೀಳುತ್ತಾರೆ. ಅವರಿಂದ ನನಗೆ ತೊಂದರೆ ಅಗುತ್ತದೆ. ಅದಕ್ಕಾಗಿ ನಾನು ನನ್ನ ಕೂಡ ಬೌನ್ಸರುಗಳನ್ನು ತೆಗೆದುಕೊಂಡು ಹೋಗುತ್ತೇನೆ. ಆದರೆ ನನಗೆ ನಿನ್ನ ಕೂಡ ಏಕಾಂತದಲ್ಲಿ ಭೆಟ್ಟಿಯಾಗುವದಿತ್ತು. ಅದಕ್ಕಾಗಿ ಬುರಖಾ ಹಾಕಿಕೊಂಡು ಒಬ್ಬಳೆ ಬಂದೆ. ನಿನಗೆ ಮಹತ್ವದ ವಿಷಯವೊಂದನ್ನು ಹೇಳಬೇಕಾಗಿದೆ.’

‘ನೀನು ನನಗೆ ಕೃತಜ್ಞತೆ ಸಲ್ಲಿಸಲು ಬಂದಿದ್ದರೆ ದಯವಿಟ್ಟು ಕ್ಷಮಿಸು. ನಿನ್ನ ಚಲನಚಿತ್ರವನ್ನು ಬಹು ದೊಡ್ಡ ಸಂಕಟದಿಂದ ನಾನು ದೂರ ಮಾಡಿದ್ದು ನಿಜವಿರಬಹುದು. ಆದರೆ ನಾನು ನಿನ್ನ ಮೇಲೆ ಉಪಕಾರವನ್ನೇನು ಮಾಡಿಲ್ಲ. ಇದೆಲ್ಲ ಮಾಡಿದ್ದು ನನ್ನ ತತ್ವಕ್ಕಾಗಿ ಅಷ್ಟೇ. ಯಾವದೇ ಪುಸ್ತಕ, ಚಲನಚಿತ್ರ, ಇಲ್ಲವೇ ನಿನ್ನ ಈ ಚಲನಚಿತ್ರದಂತಹ ಕಲಾಕೃತಿ …………’

ಛೇ. ಸತ್ಯವನ್ನು ತಿಳಿಯುವ ಗೋಜಿಗೆ ಹೋಗದೆ ಪ್ರತಿಯೊಂದು ಘಟನೆಗೆ ವಿಶಿಷ್ಟವಾದ ಬಣ್ಣ ಕೊಡುತ್ತ, ಮುದ್ರಣ ಹಾಗು ವಿದ್ಯುನ್ಮಾನ ಮಾಧ್ಯಮಗಳ ಸಹಾಯದಿಂದ ಚಳವಳಿ ಮಾಡುವ ನಿನ್ನ ಕೃತಿಯಿಂದ ನನ್ನ ಪರಿಸ್ಥಿತಿ ಏನಾಗಿದೆ ಎಂಬುದರ ಅರಿವು ಇದೆಯೇ.?’

ಒಮ್ಮೆಲೆ ನಿಹಾರಿಕಾ ಸಂತಾಪದಿಂದ ಒದರಿದಳು. ‘ಶಟ್ ಅಪ್. ಎಲ್ಲಿಯ ಕಲಾಕೃತಿ? ಇದು ಕಲಾಕೃತಿಯೇ? ನಿನ್ನ ಮೂರ್ಖತನ ಅತಿಯಾಯಿತು. ನಾನು ಇದನ್ನೇ ಹೇಳಲು ಬಂದಿದ್ದೇ. ನೀನು ತಿಳಿವಳಿಕೆ ಇಲ್ಲದವಳೂ, ಮೂರ್ಖಳೂ ಇರುವೆ. ಬ್ಲಡಿ ಫೂಲಿಶ ಆಕ್ಟಿವಿಸ್ಟ.’
ನಿಹಾರಿಕಾಳ ಕೋಪ ಒಮ್ಮೆಲೆ ಸ್ಫೋಟಗೊಂಡಿದ್ದನ್ನು ಕಂಡು ಊರ್ವಶಿ ಆಶ್ಚರ್ಯಚಕಿತಳಾದಳು. ‘ಏನು ಮಾತಾಡುತ್ತಿರುವೆ.?’

‘ಹೌದು. ನಾನು ಸತ್ಯವನ್ನು ನುಡಿಯುತ್ತಿದ್ದೇನೆ’. ಯಾವದೋ ದೋಷಪೂರಿತವಾದ ತತ್ವಗಳನ್ನು ಅಂಟಿಕೊಳ್ಳುವದು ಹಾಗು ತಲೆ ಚಿಟ್ಟು ಹಿಡಿಯುವ ಹಾಗೆ ಜನರ ಮನಸ್ಸಿನಲ್ಲಿ ಅದನ್ನು ತುಂಬುವದು…… ಛೇ. ಸತ್ಯವನ್ನು ತಿಳಿಯುವ ಗೋಜಿಗೆ ಹೋಗದೆ ಪ್ರತಿಯೊಂದು ಘಟನೆಗೆ ವಿಶಿಷ್ಟವಾದ ಬಣ್ಣ ಕೊಡುತ್ತ, ಮುದ್ರಣ ಹಾಗು ವಿದ್ಯುನ್ಮಾನ ಮಾಧ್ಯಮಗಳ ಸಹಾಯದಿಂದ ಚಳವಳಿ ಮಾಡುವ ನಿನ್ನ ಕೃತಿಯಿಂದ ನನ್ನ ಪರಿಸ್ಥಿತಿ ಏನಾಗಿದೆ ಎಂಬುದರ ಅರಿವು ಇದೆಯೇ.?’

ನಿಹಾರಿಕಾಳ ಮಾತಿನ ಹಲ್ಲೆಯಿಂದ ಕ್ಷಣ ಹೊತ್ತು ದಿಗ್ಭ್ರಮೆಗೊಂಡ ಊರ್ವಶಿ ಆಕೆ ನುಡಿದ ಕೊನೆಯ ವಾಕ್ಯದಿಂದ ಕೋಪಗೊಂಡಳು.

‘ನೀನು ಏನು ಬೊಗಳುತ್ತಿದ್ದಿ ಅದರ ಅರಿವು ನಿನಗೆ ಇದೆಯೇ.? ನಿನ್ನ ಚಲನಚಿತ್ರ ನಿಂತು ಹೋಗಿತ್ತು. ನಿನ್ನ ಈ ಚಲನಚಿತ್ರ, ಆ ಮತಾಂಧ ಸಂಘಟನೆಯ ಅಂದೋಲನ ಹಾಗು ಸರಕಾರದ ನಿಷೇಧದದಿಂದ ಕುಸಿದು ಬೀಳುವ ಹಂತದಲ್ಲಿತ್ತು. ನಿನ್ನ ವೃತ್ತಿ ಜೀವನ ಗಂಡಾಂತರದಲ್ಲಿತ್ತು. ನಾನು ಆ ಸಂಘಟನೆ ವಿರುಧ್ಧ ಸಂಘರ್ಷ ಮಾಡಿದೆ. ಶಾಸನದ ವಿರುಧ್ಧ ನ್ಯಾಯಾಲಯದ ಹೊಸ್ತಲು ತಟ್ಟಿದೆ. ಹಗಲು ರಾತ್ರಿ ದುಡಿದು ನಿನ್ನ ಚಲನಚಿತ್ರಕ್ಕೆ ಹಿಡಿದ ಗ್ರಹಣ ದೂರ ಮಾಡಿದೆ. ಈವತ್ತು ಈ ಚಿತ್ರ ಭರಭರಾಟೆಯಿಂದ ಓಡುತ್ತಿದೆ. ನೀನು ಸ್ಟಾರ ನಟಿ ಆದೆ. ನನಗೆ ದೋಷ ಕೊಡುತ್ತೀಯಾ.? ಇದಕ್ಕೆ ಸ್ವಾರ್ಥ ಹಾಗು ಕೃತಘ್ನತೆ ಎನ್ನುತ್ತಾರೆ.’ ಅರಳು ಹುರಿದ ಹಾಗೆ ಊರ್ವಶಿಯ ಮುಖದಿಂದ ಶಬ್ದಗಳು ಹೊರಗೆ ಬರುತ್ತಿದ್ದವು.

ಬಾಲಿವುಡ್ಡದಲ್ಲಿ ಸೆಕ್ಸ ಹಾಗು ಗ್ಲಾಮರಗೆ ಕೊಡುವ ಮಹತ್ವ ನನಗೆ ಗೊತ್ತಿತ್ತು. ಅದಕ್ಕಾಗಿ ಈ ವಿಷಯದಲ್ಲಿ ನಾನು ಸಹಕರಿಸಲು ಸಿಧ್ಧಳಾದೆ. ಅರೆ ನಗ್ನ ಉಡುಗೆಗಳನ್ನು ಧರಿಸಿದೆ.

‘ಕಲಾವಿದರು ನಿರ್ಭಯದಿಂದ ತಮ್ಮ ಕಲೆಯ ಸಾದರೀಕರಣ ಮಾಡಲಿ ಎಂದೇ ನಾನು ಧಡಪಡ ಮಾಡಿದೆ. ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ……….’

‘ಅಭಿವ್ಯಕ್ತಿ ಸ್ವಾತಂತ್ರ್ಯ…….. ಮಾಯ್ ಫೂಟ್..’ ಮತ್ತೆ ನಿಹಾರಿಕಾಳ ಕೋಪ ತಾರಕ್ಕೇರಿತು. ‘ಅದಕ್ಕಾಗಿಯೇ ನಾನು ಅಂದದ್ದು, ಸತ್ಯ ಪರಿಸ್ಥಿತಿ ಏನಿದೆ ಎಂಬುದು ನಿನಗೆ ಅರಿವೇ ಇಲ್ಲ..’

‘ಸರಿ’ ತಿರಸ್ಕಾರದ ನಗೆಯಿಂದ ಊರ್ವಶಿ ನುಡಿದಳು, ‘ಹೆಚ್ಚು ಬುಧ್ಧಿವಂತಿಕೆ ತೋರಿಸಬೇಡ. ಆದರೆ ನಿನ್ನ ನಿಜ ಪರಿಸ್ಥಿತಿ ಏನು ಎಂಬುದನ್ನಾದರೂ ಹೇಳು. ನನ್ನಿಂದಾದ ತಪ್ಪು ನನಗೆ ತಿಳಿಯಲಿ.’

‘ಹಾಗಾದರೆ ಕೇಳು. ಈ ಚಲನಚಿತ್ರಕ್ಕಾಗಿ ನನಗೆ ಕರೆ ಬಂದಾಗ ನನಗೆ ಖುಷಿಯಾಗಿತ್ತು. ಏಕೆಂದರೆ ಈ ಚಿತ್ರದಲ್ಲಿ ಬಾಲಿವುಡ್ ಚಲನಚಿತ್ರದಲ್ಲಿರುವಂತೆ ನಾಯಕಿಗೆ ಮೂರು ನಾಲ್ಕು ಹಾಡುಗಳಿರಲಿಲ್ಲ. ಹಾಗು ಆಕೆ ಕೇವಲ ಶೋಭೆಯ ಗೊಂಬೆ ಅಗಿರಲಿಲ್ಲ. ಕಥೆ ನಾಯಕಿಯ ಮೇಲೆ ಕೇಂದ್ರೀತವಾಗಿತ್ತು. ಸಂಪ್ರದಾಯವಲ್ಲದ, ಹೊಸ ಅಲೆಯದ ಚಲನಚಿತ್ರವಾಗಿತ್ತು. ಇದರಲ್ಲಿ ನನ್ನ ಅಭಿನಯ ಕೌಶಲ್ಯವನ್ನು ತೋರಿಸುವ ಸಂಧಿ ನನಗೆ ಪ್ರಾಪ್ತವಾಗಿತ್ತು. ಪ್ರಾರಂಭದಲ್ಲಿ ಚಿತ್ರೀಕರಣ ಚೆನ್ನಾಗಿಯೇ ನಡೆಯಿತು. ನಾನೂ ಕೂಡ ಪ್ರತಿ ದೃಶ್ಯದಲ್ಲಿ ತಾದಾತ್ಮಳಾಗಿ ಅಭಿನಯಿಸುತಿದ್ದೆ. ಬಾಲಿವುಡ್ಡದಲ್ಲಿ ಸೆಕ್ಸ ಹಾಗು ಗ್ಲಾಮರಗೆ ಕೊಡುವ ಮಹತ್ವ ನನಗೆ ಗೊತ್ತಿತ್ತು. ಅದಕ್ಕಾಗಿ ಈ ವಿಷಯದಲ್ಲಿ ನಾನು ಸಹಕರಿಸಲು ಸಿಧ್ಧಳಾದೆ. ಅರೆ ನಗ್ನ ಉಡುಗೆಗಳನ್ನು ಧರಿಸಿದೆ. ಬಾಥರೂಮದಲ್ಲಿ ಕೇವಲ ಟು ಪೀಸಗಳನ್ನು ಧರಿಸಿ ಸ್ನಾನದ ದೃಶ್ಯದಲ್ಲಿ ಪಾಲುಗೊಂಡೆ. ನಾಯಕ ನಟನೊಡನೆ ದೀರ್ಘವಾದ ಚುಂಬನ ದೃಶ್ಯಕ್ಕೆ ಸಹಕರಿಸಿದೆ.

ಒಂದು ದಿನ ದಿಗ್ದರ್ಶಕ ಪವನ ಧಿಂಗರಾ ದೃಶ್ಯವೊಂದರ ವಿವರಣೆ ನೀಡಲು ನನ್ನಲ್ಲಿಗೆ ಬಂದ. ಆ ದೃಶ್ಯದಲ್ಲಿ ನಾನು ಸಂಪೂರ್ಣ ನಗ್ನಳಾಗಿ ಅಭಿನಯಿಸಬೇಕಾಗಿತ್ತು. ನಾನು ಸ್ಪಷ್ಟವಾಗಿ ನಿರಾಕರಿಸಿದೆ. ಆದರೆ ಆತ ಒತ್ತಾಯ ಮಾಡತೊಡಗಿದ. ಏಕೆಂದರೆ ಆ ದೃಶ್ಯ, ಮೂಲ ಚಿತ್ರಕಥೆಯಲ್ಲಿ ಇರಲೇ ಇಲ್ಲ. ನಾನು ಇಂತಹ ದೃಶ್ಯಗಳಲ್ಲಿ ಅಭಿನಯಿಸುವದಿಲ್ಲ. ಏಕೆಂದರೆ ಗ್ಲ್ಯಾಮರ ಹಾಗು ಅಶ್ಲೀಲತೆಯಲ್ಲಿ ಅಂತರವಿದೆ. ಪ್ರಾರಂಭದಲ್ಲಿ ಪವನ ಧಿಂಗರಾ, ಈ ದೃಶ್ಯಗಳು ಹೇಗೆ ಅನಿವಾರ್ಯವಾಗಿವೆ ಎಂಬುವದನ್ನು ವಿವರಿಸಲು ಯತ್ನಿಸಿದ. ಬಹಳಷ್ಟು ವಿನಂತಿ ಮಾಡಿದ. ಆದರೆ ನಾನು ನನ್ನ ನಿರ್ಣಯಕ್ಕೆ ಬಧ್ಧನಾಗಿದ್ದೆ. ಆತ ಸಿಟ್ಟಿಗೆದ್ದು ನನ್ನ ಕೂಡ ಜಗಳಾಡಿದ. ನಂತರ ಹೊರಟು ಹೋದ. ಕೆಲ ನಿಮಿಷಗಳ ನಂತರ ನಿರ್ಮಾಪಕ ಹರಬನ್ಸಲಾಲ ಬಂದರು. ಕೋಪದಿಂದ ಅವರು ನನಗೆ ಬೆದರಿಕೆ ಹಾಕಿದರು. ಈ ವಿಷಯದಲ್ಲಿ ಸಹಕರಿಸದಿದ್ದರೆ ಪರಿಣಾಮ ಭೋಗಿಸಬೇಕಾಗುವದು, ಇತರ ಚಲನಚಿತ್ರಗಳಲ್ಲಿ ಕೆಲಸ ಮಾಡುವದು ಕಠಿಣವಾಗುವದು, ಎಂದು ಎಚ್ಚರಿಕೆ ಕೊಟ್ಟರು. ನಾನೂ ಕೂಡ ಅವರ ಬೆದರಿಕೆಗೆ ಸೊಪ್ಪು ಹಾಕದೆ, ಶೂಟಿಂಗ ಬಿಟ್ಟು ಅಲ್ಲಿಂದ ಹೊರಟು ಬಂದೆ. ಮೂರು ದಿನಗಳ ನಂತರ ನನಗೆ ಒಂದು ಫೋನು ಬಂದಿತು. ಕಂಚಿನ ಕಂಠದಿಂದ ಅಪರಿಚಿತ ವ್ಯಕ್ತಿಯೊಬ್ಬ ಮಾತನಾಡುತ್ತಿದ್ದ.

ನೀವು ಇಂತಹ ದೃಶ್ಯದಲ್ಲಿ ಪಾಲುಗೊಳ್ಳದಿದ್ದರೆ ನಮ್ಮ ಚಿತ್ರ ಹಿಟ್ ಹೇಗೆ ಆಗಬೆಕು? ಹಾಗು ನಾವು ತೊಡಗಿಸಿದ ಹಣ ಹೇಗೆ ಮರಳಿ ಬರಬೇಕು.? ಬಾಯಿ ಮುಚ್ಚಿಕೊಂಡು ಅವರು ಹೇಳಿದ ಹಾಗೆ ಚಿತ್ರದಲ್ಲಿ ಭಾಗವಹಿಸಿರಿ.

‘ನಮಸ್ತೆ, ನಿಹಾರಿಕಾ ಮ್ಯಾಡಮ್. ಭಾಯೀ ಕೆ ತರಫ ಸೆ ಬೋಲ ರಹಾ ಹೂಂ.’ ‘ಭಾಯಿ ? ಯಾರು ಭಾಯಿ?’ ನಾನು ಚಕಿತಳಾಗಿ ನುಡಿದೆ.

‘ವೋ, ಮ್ಯಾಡಮ್, ಭಾಯಿಕಾ ಮತಲಬ, ಅಂಡರವಲ್ರ್ಡ್ ಕಾ ಭಾಯಿ. ನೀವು ಹರಬನ್ಸಲಾಲರ ಚಲನಚಿತ್ರದಲ್ಲಿ ಅಭಿನಯಿಸುತ್ತಿದ್ದೀರಿ, ಆ ಚಲನಚಿತ್ರಕ್ಕೆ ನಮ್ಮ ಭಾಯಿ ಕೂಡ ಬಂಡವಾಳ ಹಾಕಿದ್ದಾರೆ. ನೀವು ನಗ್ನ ದೃಶ್ಯವೊಂದರಲ್ಲಿ ಭಾಗವಹಿಸಲು ನಿರಾಕರಿಸಿದಿರಂತೆ. ನೀವು ಇಂತಹ ದೃಶ್ಯದಲ್ಲಿ ಪಾಲುಗೊಳ್ಳದಿದ್ದರೆ ನಮ್ಮ ಚಿತ್ರ ಹಿಟ್ ಹೇಗೆ ಆಗಬೆಕು? ಹಾಗು ನಾವು ತೊಡಗಿಸಿದ ಹಣ ಹೇಗೆ ಮರಳಿ ಬರಬೇಕು.? ಬಾಯಿ ಮುಚ್ಚಿಕೊಂಡು ಅವರು ಹೇಳಿದ ಹಾಗೆ ಚಿತ್ರದಲ್ಲಿ ಭಾಗವಹಿಸಿರಿ. ಇಲ್ಲದಿದ್ದರೆ ಇದರ ಪರಿಣಾಮ ನೀವು ಭೋಗಿಸ ಬೇಕಾಗುವದು’ ಶಾಂತರೀತಿಯಲ್ಲಿ ನಿರ್ಭಾವುಕನಾಗಿ ಆತ ಮಾತನಾಡುತ್ತಿದ್ದ. ನಾನು ಕೆಲ ಕ್ಷಣ ಭಯಭೀತಳಾದೆ. ಆದರೆ ಅದನ್ನು ತೋರ್ಪಡಿಸದೆ ಶಕ್ತಿ ಸಂಚಯ ಮಾಡಿಕೊಂಡು ನುಡಿದೆ.

‘ಯಾರು ನೀವು ? ಇಂತಹ ಗೊಡ್ಡು ಬೆದರಿಕೆಗಳಿಗೆ ನಾನು ಸೊಪ್ಪು ಹಾಕುವವಳಲ್ಲ. ಈ ಧಮಕಿಗೆ ಅಂಜುವವಳು ನಾನಲ್ಲ. ನಿಮ್ಮಿಂದ ಏನು ತಾನೆ ಮಾಡಲು ಸಾಧ್ಯ.?’

‘ಮ್ಯಾಡಮ್, ಈ ಪಟ್ಟಣದಲ್ಲಿ ಅನೇಕ ಜನರನ್ನು ಬಾಂಬು ಹಾಕಿ ಕೊಲ್ಲುವ ಸಾಮಥ್ರ್ಯ ಇದ್ದ ನಮಗೆ ನಿಮ್ಮ ಮನೆಯ ಸದಸ್ಯನನ್ನು ಅಪಹರಿಸುವದಕ್ಕೆ,

ಹಾಗು ನಿಮ್ಮ ಮುಖದ ಮೇಲೆ ಆಸಿಡ ಎರಚಿ ನಿಮ್ಮ ಭವಿಷ್ಯ ಹಾಳು ಮಾಡಲು ಎಷ್ಟೊಂದು ವೇಳೆ ಬೇಕಾಗುವದು? ಸುಮ್ಮನೆ ಹೆಚ್ಚಿನ ನಖರಾ ಮಾಡಬೇಡಿ, ಡೈರೆಕ್ಟರ ಹೇಳಿದ ಹಾಗೆ ಕೇಳಿರಿ’ ಅತ ಫೋನು ಇಟ್ಟ. ಭಯದಿಂದ ನಾನು ನಡುಗತೊಡಗಿದೆ. ಅಂಡರವಲ್ರ್ಡ್ ಈ ಚಲನಚಿತ್ರಕ್ಕೆ ಬಂಡವಾಳ ಪೂರೈಸುತಿತ್ತೇ ? ಆ ನೀಚ ಹರಬನ್ಸಲಾಲಗೆ ಅಂಡರವಲ್ರ್ಡ್‍ನ ನೆಂಟು ಇದೆ. ನಾನು ಅವರಿಗೆ ಸಹಕಾರ ನೀಡದಿದ್ದರೆ ನನಗೆ ಹಾಗು ನನ್ನ ಕುಟುಂಬದ ಸದಸ್ಯರಿಗೆ ಅಪಾಯವಿದೆ. ಮರುದಿನ ಹರಬನ್ಸಲಾಲ ಹಾಗು ಪವನ ಧಿಂಗರಾ ನನ್ನ ಕಡೆಗೆ ಬಂದರು. ನನಗೆ ಮತ್ತೆ ಆ ದೃಶ್ಯಗಳಲ್ಲಿ ಭಾಗವಹಿಸಲು ವಿನಂತಿ ಮಾಡಿದರು. ಅವರ ಮಾತಿನಲ್ಲಿ ಕಪಟತನವಿತ್ತು. ಅವರ ಕಣ್ಣಿನಲ್ಲಿ ಧೂರ್ತತೆ ಎದ್ದು ಕಾಣುತಿತ್ತು. ನನ್ನ ಮನದ ತುಂಬ ರೋಷ ತುಂಬಿ ತುಳುಕಾಡುತಿತ್ತು. ಆದರೆ ನಾನು ಅಸಾಹಾಯಕಳಾಗಿದ್ದೆ. ನಾನು ಮೂಕಳಾಗಿ ಎಲ್ಲ ದೃಶ್ಯಗಳಲ್ಲಿ ಬಾಗವಹಿಸುವದನ್ನು ಬಿಟ್ಟರೆ ಮತ್ತೇನು ಮಾಡಲು ಸಾಧ್ಯವಿರಲಿಲ್ಲ.’

ದೇವೇಂದ್ರ ಖಳ ನಾಯಕನಾಗುವ ಮೊದಲು ಸ್ಟಂಟ್‍ಮನ್ ಆಗಿದ್ದ. ನಿಜ ಅರ್ಥದಲ್ಲಿ ಕೆಚ್ಚದೆಯ ಗಂಡು ಅಗಿದ್ದ. ಆತನೂ ಆ ದೃಶ್ಯ ಮಾಡಲು ನಿರಾಕರಿಸಿದ. ಹರಬನ್ಸಲಾಲ ಹಾಗು ಪವನ ಧಿಂಗರಾ ಒಂದು ಶಬ್ದವನ್ನೂ ನುಡಿಯದೇ ಸುಮ್ಮನಾದರು.

ನಿಹಾರಿಕಾಳ ಮಾತುಗಳನ್ನು ಕೇಳಿ ಊರ್ವಶಿ ಆಶ್ಚರ್ಯಗೊಂಡು ಸ್ತಬ್ಧಳಾಗಿ ನಿಂತಳು. ಬೇರೆ ಯಾವದೋ ಚಿತ್ರ ಅವಳ ಕಣ್ಣೆದುರು ಬರುತಿತ್ತು. ಅಂದರೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತೀಕವೆಂದು ತಿಳಿದುಕೊಂಡಿದ್ದ ಈ ಚಲನಚಿತ್ರ, ಭೂಗತ ಪಾತಕಿಗಳ ಧನಸಹಾಯದಿಂದ ನಿರ್ಮಾಣವಾಗಿದೆ. ಆಕೆಯ ಮನದಲ್ಲಿ ಸಂಶಯ ಮೂಡಿತು. ‘ಮತ್ತೆ ಆ ಬಲಾತ್ಕಾರದ ದೃಶ್ಯ…….. ?’

‘ಅದೂ ಅದೇ ತೆರದಲ್ಲಿ ಅಯಿತು. ಕಾಮಪ್ರಚೋದಕ, ಮನ ಕೆರಳಿಸುವ ಆ ದೃಶ್ಯ ಮಾಡಲು ನನಗಂತೂ ಇಚ್ಛೆಯೇ ಇರಲಿಲ್ಲ. ನನ್ನ ಮೇಲೆ ಬಲಾತ್ಕಾರ ಮಾಡುವ ದೃಶ್ಯದಲ್ಲಿ ಖಳನಾಯಕನ ಪಾತ್ರ ಮಾಡುವ ದೇವೇಂದ್ರನೂ ಆ ದೃಶ್ಯದಲ್ಲಿ ಪಾಲುಗೊಳ್ಳಲು ನಿರಾಕರಿಸಿದ. ದೇವೇಂದ್ರ ಖಳ ನಾಯಕನಾಗುವ ಮೊದಲು ಸ್ಟಂಟ್‍ಮನ್ ಆಗಿದ್ದ. ನಿಜ ಅರ್ಥದಲ್ಲಿ ಕೆಚ್ಚದೆಯ ಗಂಡು ಅಗಿದ್ದ. ಆತನೂ ಆ ದೃಶ್ಯ ಮಾಡಲು ನಿರಾಕರಿಸಿದ. ಹರಬನ್ಸಲಾಲ ಹಾಗು ಪವನ ಧಿಂಗರಾ ಒಂದು ಶಬ್ದವನ್ನೂ ನುಡಿಯದೇ ಸುಮ್ಮನಾದರು.

ಎಂಟು ದಿವಸಗಳ ನಂತರ ಆ ಚಲನಚಿತ್ರದ ಸೆಟ್ ಮೇಲೆ ಇಬ್ಬರು ಗುಂಡಾಗಳು ಆಗಮಿಸಿದರು. ತಮ್ಮ ಸಂಗಡ ದೇವೇಂದ್ರನನ್ನು ಕರೆದುಕೊಂಡು ಹೋದರು. ನಾಕೈದು ಘಂಟೆಗಳ ನಂತರ ಮರಳಿದಾಗ ದೇವೇಂದ್ರನ ಭಯ ತುಂಬಿದ ಮುಖ ಬೆವರಿನಿಂದ ತೋಯ್ದಿತ್ತು. ಆ ಗುಂಡಾಗಳಲ್ಲಿ ಒಬ್ಬ, ದಿಗ್ದರ್ಶಕ ಪವನ ಧಿಂಗರಾಗೆ ಹೇಳಿದ.

‘ನೀವು ರೇಪ ದೃಶ್ಯ ಶೂಟ ಮಾಡುವದಿದ್ದರೆ ಮಾಡಿ. ನಾವು ದೇವೇಂದ್ರನಿಗೆ ತಿಳಿಸಿ ಹೇಳಿದ್ದೇವೆ. ಚಿಂತಿಸಬೇಡಿ, ಆತ ನಿಹಾರಿಕಾ ಮ್ಯಾಡಮ್‍ರನ್ನೂ ಶೂಟಿಂಗದಲ್ಲಿ ಭಾಗವಹಿಸಲು ಒಪ್ಪಿಸುತ್ತಾನೆ.” ಇಷ್ಟು ಹೇಳಿ ಹೊರಟು ಹೋದರು. ನಾನು ದೇವೇಂದ್ರನ ಕಡೆಗೆ ಪ್ರಶ್ನಾರ್ಥಕವಾಗಿ ನೋಡಿದೆ. ಆತ ನನ್ನನ್ನು ಕೋಣೆಯೊಂದರಲ್ಲಿ ಕರೆದುಕೊಂಡು ಹೋಗಿ ನಡೆದ ಘಟನೆಗಳನ್ನು ಹೇಳಿದ. ಆ ಗುಂಡಾಗಳು ಇವನನ್ನು ಏಕಾಂತ ಸ್ಥಳಕ್ಕೆ ಕರೆದುಕೊಂಡು ಹೋದರಂತೆ. ಇವನ ಎದೆಯ ಮೇಲೆ ಪಿಸ್ತೂಲ ಇಟ್ಟು ಬೆದರಿಕೆ ಹಾಕಿದರು. ಪಿಸ್ತೂಲನ್ನು ಯಾವಾಗಲೂ ಜೇಬಿನಲ್ಲಿ ಇಟ್ಟುಕೊಂಡು ತಿರುಗುವ ಭೂಗತ ಪಾತಕರನ್ನು ಎದುರು ಹಾಕಿಕೊಳ್ಳುವದು ಹೇಗೆ ಸಾಧ್ಯ. ?

ಹೇಗಾದರೂ ಮಾಡಿ ಹಣ ಜೋಡಣೆ ಮಾಡಬೇಕಲ್ಲ. ಹೀಗೆ ಮಾಡುವಾಗ ಕೈ ತಪ್ಪಿ ಕೆಲ ಪ್ರಮಾದಗಳು ಅಗುವದುಂಟು. ದಯವಿಟ್ಟು ನೀವು ಚಿಂತಿಸದಿರಿ. ಈ ದೃಶ್ಯದ ಶೂಟಿಂಗ್ ಆದ ಮೇಲೆ ನಿಮಗೆ ಯಾವದೇ ತೊಂದರೆ ಆಗಲಾರದೆಂದು ನಾನು ನಿಮಗೆ ಭರವಸೆ ಕೊಡುತ್ತೇನೆ.’

ನಂತರ ಸೆಟ್ ಮೇಲೆ ನಿರ್ಮಾಪಕ ಹರಬನ್ಸಲಾಲ ಬಂದು, ನಡೆದ ಘಟನೆ ಬಗ್ಗೆ ದುಃಖ ವ್ಯಕ್ತಪಡಿಸಿದ. ‘ಏನು ಮಾಡಲಿ ಮ್ಯಾಡಮ್, ಮಾರ್ಕೆಟ್ಟಿನಲ್ಲಿ ಹಣದ ಬಹು ತೊಂದರೆ ಇದೆ. ಆದರೆ ಹೇಗಾದರೂ ಮಾಡಿ ಹಣ ಜೋಡಣೆ ಮಾಡಬೇಕಲ್ಲ. ಹೀಗೆ ಮಾಡುವಾಗ ಕೈ ತಪ್ಪಿ ಕೆಲ ಪ್ರಮಾದಗಳು ಅಗುವದುಂಟು. ದಯವಿಟ್ಟು ನೀವು ಚಿಂತಿಸದಿರಿ. ಈ ದೃಶ್ಯದ ಶೂಟಿಂಗ್ ಆದ ಮೇಲೆ ನಿಮಗೆ ಯಾವದೇ ತೊಂದರೆ ಆಗಲಾರದೆಂದು ನಾನು ನಿಮಗೆ ಭರವಸೆ ಕೊಡುತ್ತೇನೆ.’

ನಾವಿಬ್ಬರೂ ಮೌನಕ್ಕೆ ಶರಣಾಗಿದ್ದೆವು. ಮರುದಿನ ವಿಧೇಯರಂತೆ ಬಾಯಿ ಮುಚ್ಚಿಕೊಂಡು ಶೂಟಿಂಗದಲ್ಲಿ ಭಾಗವಹಿಸಿದೆವು. ಇದು ನಡೆದ ಕಥೆ.

ನಿಹಾರಿಕೆಯ ಮಾತು ಕೇಳಿ ತಲ್ಲಣಗೊಂಡ ಊರ್ವಶಿ ಅಂಗಡಿಯಲ್ಲಿಯ ಗೊಂಬೆಯಂತೆ ಸುಮ್ಮನೆ ನಿಂತಳು. ಅತ್ಯಂತ ಭೀಷಣವಾದ, ದಿಗಿಲುಂಟು ಮಾಡುವ ವಾಸ್ತವತೆ ಆಕೆಯ ಎದುರು ಇತ್ತು. ಓರ್ವ ನೀಚ ನಿರ್ಮಾಪಕ, ಭೂಗತ ಪಾತಕಿಗಳ ಬೆಂಬಲದಿಂದ ಅಸಹಾಯಕ ನಟಿಗೆ ಬೆದರಿಕೆ ಹಾಕಿ, ಅಕೆಯ ಮನಸ್ಸಿನ ವಿರುಧ್ಧ ಕೆಟ್ಟ ಅಭಿರುಚಿಯ ದೃಶ್ಯದಲ್ಲಿ ಬಾಗವಹಿಸಲು ಒತ್ತಾಯ ತಂದಿದ್ದ. ‘ಒ ಮಾಯ್ ಗಾಡ್. ನನಗೆ ತಿಳಿಯದಂತೆ ನಾನು ದೊಡ್ಡ ತಪ್ಪು ಮಾಡಿದೆ ಎಂದು ಕಾಣುತ್ತದೆ, ಪುರೋಗಾಮಿ ವಿಚಾರಗಳ ಮತ್ತಿನಲ್ಲಿ, ಗುಂಡಾಗಳ ಅಕ್ರಮ ಕೃತ್ಯಗಳಿಗೆ ಪರೋಕ್ಷವಾಗಿ ಸಹಾಯ ಮಾಡಿದಂತಾಗಲಿಲ್ಲವೇ.? ನಾವು ಈ ತತ್ವಗಳ ಭ್ರಮೆಯಲ್ಲಿ ಏಕೆ ಸಿಕ್ಕು ಬೀಳುತ್ತೇವೆ ? ಪ್ರತಿ ಪ್ರಕರಣಕ್ಕೆ ಮತ್ತೊಂದು ಮಗ್ಗಲು ಇರುತ್ತದೆ ಎಂಬುದನ್ನು ನಾವು ವಿಚಾರ ಏಕೆ ಮಾಡುವದಿಲ್ಲ.?’

ಆದರೆ ಒಮ್ಮೆಲೆ ಆಕೆಯ ಮನಸ್ಸಿನಲ್ಲಿ ಹಳೆಯ ವಿಚಾರಗಳು ಸುತ್ತುವರೆದವು. ಛೇ ತನ್ನದೇನು ತಪ್ಪು? ಈ ಚಲನಚಿತ್ರದಲ್ಲಿಯ ಕೆಲವು ದೃಶ್ಯಗಳನ್ನು ನಿಹಾರಿಕಾಳಿಗೆ ಬೆದರಿಕೆ ಹಾಕಿ ಮಾಡಿಸಿಕೊಂಡಿರಬಹುದು, ಆಕೆಯ ಮೇಲೆ ಅನ್ಯಾಯವೂ ಅಗಿದೆ. ಅದು ನಿಂದನೀಯವೂ ಹೌದು. ಆದರೂ ಚಿತ್ರಪಟದ ವಿರುಧ್ಧ ನಡೆದ ಗುಂಡಾಗಿರಿ, ಹಾಗು ಶಾಸನ ಹಾಕಿದ ನಿಷೇಧವು ಯೋಗ್ಯವೇ? ಟು ರಾಂಗ್ಸ ಡೋಂಟ ಮೇಕ ಎ ರೈಟ’.

‘ನಿಹಾರಿಕಾ, ನಿನ್ನ ಮೇಲೆ ಅನ್ಯಾಯವಾಗಿದೆ, ಇದನ್ನು ನಾನು ಮಾನ್ಯ ಮಾಡುತ್ತೇನೆ. ಅಷ್ಟೇ ಅಲ್ಲ, ನನ್ನ ‘ಜನುಮದ ಜೋಡಿ’ ಈ ಸಾಮಾಜಿಕ ಸಂಸ್ಥೆ ನಿನಗಾಗಿ ಹೋರಾಟಕ್ಕೆ ಇಳಿಯಲೂಬಹುದು. ಆದರೆ ಅದೇ ವೇಳೆಯಲ್ಲಿ ಚಲನಚಿತ್ರಕ್ಕೆ ನಿಷೇಧ ಹಾಕಿದ ಸರಕಾರದ ಕೃತಿಯ ವಿರೋಧ ಮಾಡಲೇಬೇಕಲ್ಲವೇ? ನಿನಗಾದ ಶೋಷಣೆ ಅತ್ಯಂತ ಖಂಡನೀಯ. ಆದರೆ ಮೂಲಭೂತವಾದಿಗಳ ಗುಂಡಾಗಿರಿ, ಹಾಗು ಅದಕ್ಕೆ ಶಾಸನದ ಬೆಂಬಲ ಎಷ್ಟೊಂದು ಸಮರ್ಥನೀಯ?’

ನನ್ನಲ್ಲಿ ಸೇಡಿನ ಭಾವನೆ ಸಿಡಿದೆದ್ದು ನಿಂತಿತು. ಆದರೆ ನನಗೆ ಬಹಿರಂಗವಾಗಿ ಏನನ್ನೂ ಮಾಡಲು ಅಸಾಧ್ಯವಾಗಿತ್ತು. ಹಾಗೆ ಮಾಡುವದು ಅಪಾಯಕರವಾಗಿತ್ತು. ಆದರೆ ಹೇಗಾದರೂ ಮಾಡಿ ಆ ದುಷ್ಟರಿಗೆ ಪಾಠ ಕಲಿಸಬೇಕೆಂದು ನಿಶ್ಚಯಿಸಿದೆ.

‘ಮತ್ತೆ ನೀನು ಅದೇ ತಪ್ಪು ಮಾಡುತ್ತಿದ್ದಿ. ನಿನಗೆ ಗೊತ್ತೇ, ಚಲನಚಿತ್ರದ ಮೇಲೆ ನಿಷೇಧ ಹಾಕಲು ನಾನೇ ಒತ್ತಾಯಿಸಿದ್ದೆ’.

‘ಎನು? ನಿನ್ನ ಚಿತ್ರಪಟದ ಮೇಲೆ ನಿಷೇದ ಹಾಕಲು ನೀನೇ ಯತ್ನಿಸಿದೆಯಾ.? ಇದು ಹೇಗೆ ಸಾಧ್ಯ?’ ‘ಚಲನಚಿತ್ರದ ಚಿತ್ರೀಕರಣ ಮುಗಿದಿತ್ತು. ಆದರೆ ನನ್ನ ಮನ ಅಸ್ತವ್ಯಸ್ತಗೊಂಡಿತ್ತು. ಆ ನಿರ್ಮಾಪಕ ಹಾಗು ದಿಗ್ದರ್ಶಕರ ನೀಚ ಜೋಡಿ, ಗುಂಡಾಗಳ ಬೆದರಿಕೆ ಹಾಕಿ ನನ್ನನ್ನು ಲೈಂಗಿಕವಾಗಿ ಶೋಷಣೆ ಮಾಡಿ ಅವಮಾನಗೊಳಿಸಿದ್ದರು. ಸ್ತ್ರೀಕುಲಕ್ಕೆ ನನ್ನಿಂದ ಆದ ಅವಹೇಳನದಿಂದ ನನ್ನ ಆತ್ಮಸಾಕ್ಷಿಯ ಎದುರು ನಾನು ತಲೆ ತಗ್ಗಿಸುವಂತೆ ಆಗಿತ್ತು. ಬಲಾತ್ಕಾರ ನಿಜವಾಗಿ ನಡೆಯದಿದ್ದರೂ, ನನ್ನ ವಿವೇಕದ ಮೇಲೆ ಮತ್ತು ಸ್ವಾಭಿಮಾನದ ಮೇಲೆ ಒಂದು ರೀತಿಯ ಅತ್ಯಾಚಾರವೇ ಆಗಿತ್ತು. ಹೀಗಾಗಿ ನನ್ನಲ್ಲಿ ಸೇಡಿನ ಭಾವನೆ ಸಿಡಿದೆದ್ದು ನಿಂತಿತು. ಆದರೆ ನನಗೆ ಬಹಿರಂಗವಾಗಿ ಏನನ್ನೂ ಮಾಡಲು ಅಸಾಧ್ಯವಾಗಿತ್ತು. ಹಾಗೆ ಮಾಡುವದು ಅಪಾಯಕರವಾಗಿತ್ತು. ಆದರೆ ಹೇಗಾದರೂ ಮಾಡಿ ಆ ದುಷ್ಟರಿಗೆ ಪಾಠ ಕಲಿಸಬೇಕೆಂದು ನಿಶ್ಚಯಿಸಿದೆ. ನಾನು ರಹಸ್ಯವಾಗಿ ರಾಜ್ಯದ ಸಾಂಸ್ಕೃತಿಕ ಮಂತ್ರಿಯನ್ನು ಭೆಟ್ಟಿಯಾದೆ. ಈ ಮಂತ್ರಿ ಅತ್ಯಂತ ಸನಾತನಿ ಹಾಗು ಕಟ್ಟಾ ಹಿಂದುತ್ವವಾದಿ ಎಂದು ಪ್ರಸಿಧ್ಧನಾಗಿದ್ದ. ಅಧುನಿಕ ಮಹಿಳೆಯಾದ ನನ್ನನ್ನು ಅತ ಭೆಟ್ಟಿ ಆಗಲು ಒಪ್ಪಬಹುದೆ ಎಂದು ನನ್ನ ಮನದಲ್ಲಿ ಶಂಕೆ ಇತ್ತು. ಹಣೆಯ ಮೇಲೆ ಕುಂಕುಮದ ಬೊಟ್ಟು ಹಚ್ಚಿಕೊಂಡ ಈ ಮನುಷ್ಯ, ನನ್ನ ಮಾತುಗಳನ್ನು ಶಾಂತರೀತಿಯಿಂದ ಕೇಳಿಕೊಂಡ.

‘ಮ್ಯಾಡಮ್, ನೀವು ಈ ಮೊದಲೇ ನನ್ನ ಕಡೆಗೆ ಬರಬೇಕಾಗಿತ್ತು. ಸೆನ್ಸಾರ ಬೋರ್ಡಿನವರಿಗೆ ಹೇಳಿ ಅಡ್ಡಿ ಪಡಿಸುತಿದ್ದೆ.’

’ನಾನು ಗೊಂದಲದ ಮನಸ್ಥಿತಿಯಲ್ಲಿದ್ದೆ. ಈ ವೇಳೆಯಲ್ಲಿ ಪಾಪಿ ಹರಬನ್ಸಲಾಲ, ಸೆನ್ಸಾರ್ ಬೋರ್ಡಿನ ಸದಸ್ಯರಿಗೆ ಕೈ ಬಿಸಿ ಮಾಡಿ ಚಲನಚಿತ್ರಕ್ಕೆ, ‘ಎ’ ಹಾಗು

‘ಯು’ ಸರ್ಟಿಫಿಕೇಟ ತೆಗೆದುಕೊಂಡದ್ದು ನನಗೆ ಗೊತ್ತಾಗಲೇ ಇಲ್ಲ’.

‘ಇರಲಿ, ಏನೂ ತೊಂದರೆ ಇಲ್ಲ. ಸೆನ್ಸಾರ ಬೋರ್ಡ ಪಾಸ ಮಾಡಿದ್ದರಿಂದ ಈಗ ನಮಗೆ ಅಧಿಕೃತವಾಗಿ ಏನೂ ಮಾಡಲು ಶಕ್ಯವಿಲ್ಲ. ನೀವು ಕಾಳಜಿ ಮಾಡಬೇಡಿರಿ. ನಾನು ಏನಾದರೂ ವ್ಯವಸ್ಥೆ ಮಾಡುತ್ತೇನೆ.’

‘ಎನು ಮಾಡುವಿರಿ.?’

‘ಇಂತಹ ಕ್ಲಿಷ್ಟ ಹಾಗು ತೊಡಕಿನ ಪ್ರಸಂಗಗಳಿಗಾಗಿ ನಾವು ಕೆಲವೊಂದು ಸಂಘಟನೆಗಳನ್ನು ಕಟ್ಟಿರುತ್ತೇವೆ. ಈ ಕಾರ್ಯವನ್ನು ಸಂಘಟನೆಯೊಂದಕ್ಕೆ ವಹಿಸಿ ಕೊಡುತ್ತೇನೆ’.

ಈಗಾಗಲೇ ಬಹು ಪ್ರಸಿಧ್ಧಿ ಪಡೆದ ಈ ಚಿತ್ರ ನಿಮಾಪಕನ ತಿಜೋರಿ ತುಂಬಿಸುತ್ತಿದೆ. ನೂರು ಕೋಟಿಯನ್ನು ಸುಲಭವಾಗಿ ತಲುಪುತ್ತದೆ ಎಂದು ಹೇಳುತಿದ್ದಾರೆ.

ಮುಂದೆ ನಡೆದದ್ದು ನಿನಗೆ ಗೊತ್ತೇ ಇದೆ, ಆ ಸಂಘಟನೆ ಚಿತ್ರಮಂದಿರ ಒಳಗೆ ಹಾಗು ಹೊರಗೆ ಗೊಂದಲ ಹಾಕಿದ್ದು ನಂತರ ಶಾಸನ ನಿಷೇಧ ಹೇರಿದ್ದು.

ನಾನು ನನ್ನ ಸೇಡು ತೀರಿಸಿಕೊಂಡಿದ್ದೆ. ಚಲನಚಿತ್ರ ಫ್ಲಾಪ್ ಆಗುವ ಹಂತಕ್ಕೆ ಬಂದಿತ್ತು. ತಮಗೆ ನಷ್ಟ ಆಗುವದು ನಿಶ್ಚಿತವೆಂದು ಕಂಗಾಲಾದ ಹರಬನ್ಸಲಾಲ ಹಾಗು ದಿಗ್ದರ್ಶಕ ಪವನ ಧಿಂಗರಾ ಚಡಪಡಿಸುತಿದ್ದರು. ಹಾಗು ಇದನ್ನೆಲ್ಲ ಮಾಡಿದವಳು ನಾನು ಎಂಬುದು ಅವರಿಗೆ ಸ್ವಲ್ಪವೂ ಸಂಶಯ ಬಂದಿರಲಿಲ್ಲ. ನಾನು ಸೇಡು ತೀರಿಸಿಕೊಂಡೆ ಎಂದು ನಾನು ಆನಂದತುಂದಿಲನಾಗಿದ್ದೆ.

ಒಮ್ಮಿಂದೊಮ್ಮೆ ಈ ಪ್ರಕರಣದಲ್ಲಿ ನಿನ್ನ ಪ್ರವೇಶವಾಯಿತು. ಎಲ್ಲವೂ ಬದಲಾಯಿತು. ಅರ್ಥಹೀನ ತತ್ವಗಳ ಬೆನ್ನು ಹತ್ತಿ, ಉತ್ಸಾಹದ ಅತಿರೇಕತನದಲ್ಲಿ, ಸರಕಾರದ ಮೇಲಿದ್ದ ದ್ವೇಷಕ್ಕಾಗಿ ನೀನು ನಿಷೇಧದ ವಿರುಧ್ಧ ಚಳುವಳಿ ಮಾಡಿದೆ. ಮೋರ್ಚಾ, ಪ್ರಚಾರ ಹಾಗು ಜನಹಿತ ಯಾಚಿಕೆ ಈ ನಾನಾ ಮಾರ್ಗಗಳಿಂದ ಅಕಾಶ ಭೂಮಿ ಒಂದು ಮಾಡಿದೆ. ಹಾಗು ನಿಷೇಧಾಜ್ಞೆ ತೆರವು ಮಾಡಿಸಿದೆ. ಈಗಾಗಲೇ ಬಹು ಪ್ರಸಿಧ್ಧಿ ಪಡೆದ ಈ ಚಿತ್ರ ನಿಮಾಪಕನ ತಿಜೋರಿ ತುಂಬಿಸುತ್ತಿದೆ. ನೂರು ಕೋಟಿಯನ್ನು ಸುಲಭವಾಗಿ ತಲುಪುತ್ತದೆ ಎಂದು ಹೇಳುತಿದ್ದಾರೆ. ನನ್ನ ಶೋಷಣೆ ಮಾಡಿದ ಹರಬನ್ಸಲಾಲ ಎರಡೂ ಕೈಗಳಿಂದ ಹಣ ದೋಚುತ್ತಾನೆ, ಹಾಗೆಯೇ ನನಗೆ ಬೆದರಿಕೆ ನೀಡಿದ ಅಂಡರವಲ್ರ್ಡ್ ಗುಂಡಾನಿಗೂ ಸಾಕಷ್ಟು ಲಾಭವಾಗುವದು. ಇದೆಲ್ಲ ನಿನ್ನ ಈ ಕಾರ್ಯಸಾಧನೆ ಹಾಗು ಸಾಮಾಜಿಕ ಹೋರಾಟದ ಫಲ’. ನಿಹಾರಿಕೆಯ ಧ್ವನಿಯಲ್ಲಿ ಅಪಹಾಸ್ಯವಿತ್ತು, ತಿರಸ್ಕಾರವಿತ್ತು.

ಊರ್ವಶಿ ಸ್ತಬ್ಧಳಾಗಿ ಗರ ಹೊಡೆದವರ ಹಾಗೆ ಸುಮ್ಮನೆ ನಿಂತಿದ್ದಳು. ಏನು ಮಾತನಾಡಬೇಕೆಂಬುದು ಅಕೆಗೆ ತಿಳಿಯುತ್ತಿರಲಿಲ್ಲ. ಮಾತನಾಡುವ ವಿಷಯ ಯಾವದೂ ಉಳಿದಿರಲಿಲ್ಲ. ಅಜಾಗರೂಕತೆಯಿಂದ ತನ್ನಿಂದ ದೊಡ್ಡ ಪ್ರಮಾದ ಘಟಿಸಿದೆ ಎಂಬುದರ ಅರಿವು ಆಕೆಗೆ ಅಗಿತ್ತು. ತನಗೆ ಅರಿವಾಗದಂತೆ, ಶೋಷಣೆ ಮಾಡುವ ಅನೈತಿಕ ವ್ಯವಸ್ಥೆಗೆ ಸಹಾಯ ಮಾಡಿದ್ದಳು. ಇಂದು ಆಕೆಗೆ ತನಗೆ ದೊರಕಿದ ಯಶ ಹಾಗು ವಿಜಯದ ಬಗ್ಗೆ ತಿರಸ್ಕಾರ ಹುಟ್ಟಿತು.
ಎಷ್ಟೊಂದು ವೇಳೆ ಆಕೆ ಪುತ್ಥಳಿಯಂತೆ ನಿಂತಿದ್ದಳು. ಅಕೆಯ ಎದುರಿನಲ್ಲೆ ನಿಹಾರಿಕಾ ಯಾವಾಗ ಹೋದಳೋ ಅಕೆಗೆ ತಿಳಿಯಲಿಲ್ಲ.
ಒಮ್ಮೆಲೆ ಆಕೆಯ ಮೋಬೈಲು ಅನುರಣಿಸಲಾರಂಭಿಸಿತು. ಅನಾಸಕ್ತಳಂತೆ ಅದರ ಕಡೆಗೆ ನೋಡುತ್ತಲಿದ್ದಳು. ನಂತರ ಒಲ್ಲದ ಮನಸ್ಸಿನಿಂದ ಮೋಬೈಲು ಎತ್ತಿಕೊಂಡಳು.

‘ಊರ್ವಶಿ, ಧನ್ಯವಾದಗಳು. ಸಂತೋಷದ ಸಮಾಚಾರವೊಂದು ಈಗ ತಾನೆ ತಿಳಿದು ಬಂದಿದೆ’.

‘ಹಮರಾಹಿ’ ಸಂಸ್ಥೆಯ ಸದಸ್ಯನಾದ ವೆಂಕಟರಾವ್ ಅತಿ ಉತ್ಸಾಹದಿಂದ ಮಾತನಾಡುತಿದ್ದ. ‘ಬಜಾಜ ಫೌಂಡೇಶನದ ವತಿಯಿಂದ ಪ್ರತಿ ವರ್ಷ ಕೊಡಲಾಗುತ್ತಿರುವ ಅತ್ಯುತ್ತಮ ಸಾಮಾಜಿಕ ಕಾರ್ಯಕರ್ತೆಯ ಪುರಸ್ಕಾರ ಈ ವರ್ಷ ನಿಮಗೆ ಕೊಡಲಾಗಿದೆ. ಅದಕ್ಕಾಗಿ ಮತ್ತೊಮ್ಮೆ ಅಭಿನಂದನೆಗಳು. ನಾಳೆ ಆಫೀಸಿನಲ್ಲಿ ಅಧ್ಧೂರಿಯಾಗಿ ಆಚರಿಸೋಣ. ಯೆಸ್ ಯು ಡಿಸರ್ವ ಇಟ್ ಹಂಡ್ರೆಡ ಪರಸೆಂಟ’.

‘ನೋ, ಆಯ್ ಡೋಂಟ’. ಊರ್ವಶಿ ಉದ್ವೇಗದಿಂದ ಕೂಗಿದಳು.

‘ವೆಂಕಟರಾವ್, ಸಾರಿ.. ..ನಾನು ಈ ಪುರಸ್ಕಾರ ಸ್ವೀಕರಿಸುವದಿಲ್ಲವೆಂದು ಅವರಿಗೆ ತಿಳಿಸಿಬಿಡಿ.’ ಅಕೆ ಮೋಬೈಲು ಕೆಳಗೆ ಇಟ್ಟಳು.

‘ಊರ್ವಶಿ, ಊರ್ವಶಿ,’ ಅತ್ತ ಕಡೆಯಿಂದ ವೆಂಕಟರಾವನ ಧ್ವನಿ ಕೇಳಿಸುತ್ತಲೇ ಇತ್ತು. ಈ ಮೊದಲು ಪುರಸ್ಕಾರಗಳು ದೊರಕಿದ ಸಮಾಚಾರ ಕೇಳಿ, ಉನ್ಮಾದದಿಂದ ಹುಚ್ಚಿಯ ಹಾಗೆ ವರ್ತಿಸುತಿದ್ದ ಊರ್ವಶಿ, ಇಂದು ಏಕೆ ಹೀಗೆ ವರ್ತಿಸುತ್ತಿದ್ದಾಳೆ ಎಂಬುದು ಅವನಿಗೆ ತಿಳಿಯದಾಯಿತು. ಊರ್ವಶಿ ಮೂಲೆಯಲ್ಲಿ ಹತಾಶಳಾಗಿ, ಅಸಹಾಯಕಳಾಗಿ, ಪಶ್ಚಾತ್ತಾಪಳಾದವಳಂತೆ ಸುನ್ನಳಾಗಿ ಕುಳಿತಿದ್ದಳು,

Leave a Reply

Your email address will not be published.