ಹೌದು, ಆರ್ಎಸ್ಎಸ್ ತಪ್ಪು ಮಾಡಿದೆ!

-ಡಾ.ಬಿ.ವಿ.ವಸಂತಕುಮಾರ್

ಆರ್.ಎಸ್.ಎಸ್. ಮಾಡಿದ ಬಹುದೊಡ್ಡ ತಪ್ಪೆಂದರೆ ಜಾತಿ, ಮತ, ಪಂಥ, ಪ್ರದೇಶ, ಭಾμÉ, ಬಣ್ಣ, ಸಂಸ್ಕೃತಿಗಳೆಲ್ಲವನ್ನೂ ಮೀರಿ ಹಿಂದೂಗಳು ಒಂದಾಗುವಂತೆ ಮಾಡಿದ್ದು. ಹಾಗಾಗಿ ಎಲ್ಲಾ ಹಿಂದೂ ವಿರೋಧಿಗಳೂ ಆರ್.ಎಸ್.ಎಸ್.ನ್ನು ನಿರಂತರವಾಗಿ ಖಂಡಿಸುತ್ತಾ ಬಂದಿದ್ದಾರೆ.

ಸಮಾಜಮುಖಿ ಪತ್ರಿಕೆ ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಾಡುತ್ತಿರುವ ತಪ್ಪುಗಳೇನು…?’ ಎಂಬ ಪ್ರಶ್ನೆಯೊಂದಿಗೆ ಚರ್ಚೆಗೆ ವೇದಿಕೆ ಕಲ್ಪಿಸಿದೆ. ಈ ಚರ್ಚೆಯಿಂದ ಪರಸ್ಪರರನ್ನು ಹೆಚ್ಚೆಚ್ಚು ಅರ್ಥ ಮಾಡಿಕೊಳ್ಳಲು ನೆರವಾಗಿ ಅಪಾರ್ಥಗಳು ದೂರವಾಗಲಿ. ವಿರೋಧಕ್ಕಾಗಿಯೇ ವಿರೋಧಿಸುವ ವಿಕೃತವಾದಿಗಳನ್ನು ಯಾವ ಪ್ರಕೃತಿಯೂ, ಸಂಸ್ಕøತಿಯೂ, ಚರ್ಚೆಯೂ ಸರಿಪಡಿಸಲಾಗದು. ಏಕೆಂದರೆ, ಮಲಗಿದವರನ್ನು ಎಬ್ಬಿಸಬಹುದು. ಆದರೆ ಮಲಗಿದಂತೆ ನಟಿಸುವವರನ್ನು ಎಬ್ಬಿಸಲಾಗದು. ಹಾಗಾಗಿ “ಹಿಂದುತ್ವ ವಿಚಾರಧಾರೆಯ ಸಂಘಟನೆಗಳ ಮೂಲಧಾತುವಾದ ಆರೆಸ್ಸೆಸ್ಸಿನ ಬಗ್ಗೆ ಮುಕ್ತ ಚರ್ಚೆಯಾಗಿಲ್ಲ. ವಿಚಾರವಾದಿಗಳಲ್ಲಿ ಬಹುತೇಕರು ಆರೆಸ್ಸೆಸ್ಸಿನ ತತ್ವ ಸಿದ್ಧಾಂತಗಳೇ ತಪ್ಪು ಮತ್ತು ದೇಶಕ್ಕೆ ಮಾರಕ ಎಂದು ತಳ್ಳಿಹಾಕುತ್ತಾರೆ” ಎಂದು ಹೇಳಿ ಮುಕ್ತ ಚರ್ಚೆಗೆ ಅವಕಾಶ ಕಲ್ಪಿಸಿದ ಪತ್ರಿಕೆಗೆ ನನ್ನ ವಂದನೆಗಳು.

ಆರ್.ಎಸ್.ಎಸ್. 1925ರಲ್ಲಿ ಪ್ರಾರಂಭವಾಗಿದೆ. ಅದೇ ವರ್ಷ ಕಮ್ಯುನಿಸ್ಟ್ ಪಾರ್ಟಿಯೂ ಪ್ರಾರಂಭವಾಗಿದೆ. 1920ರಲ್ಲಿಯೇ ಮಹಾತ್ಮಾ ಗಾಂಧಿ, ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರೂ ಸಾಮಾಜಿಕ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ. ಆ ಹೊತ್ತಿಗಾಗಲೇ 1906ರಲ್ಲಿ ಮುಸ್ಲಿಂ ಲೀಗ್ ಸ್ಥಾಪನೆಯಾಗಿತ್ತು. 1905ರಲ್ಲಿ ಹಿಂದೂ ಮುಸ್ಲಿಂ ಆಧಾರದ ಮೇಲೆ ಬಂಗಾಳ ವಿಭಜನೆಯಾಗಿ, 1911ರಲ್ಲಿ `ವಂದೇ ಮಾತರಂ’ ಗೀತೆಯ ಆಂದೋಲನದಿಂದಾಗಿ ಮರಳಿ ಒಂದಾಗಿತ್ತು. ಆದರೆ, 1910ರ ಜನಗಣತಿಯ ಸಂದರ್ಭದಲ್ಲಿ ದಲಿತರನ್ನು ಹಿಂದೂಗಳೆಂದು ಪರಿಗಣಿಸಬಾರದೆಂದು ಮುಸ್ಲಿಂ ಲೀಗ್ ಬ್ರಿಟಿμï ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.

ಒಡೆದು ಆಳುವ ನೀತಿಯ ಬ್ರಿಟಿಷರು ಸ್ಪøಶ್ಯರು-ಅಸ್ಪøಶ್ಯರು-ಮುಸ್ಲಿಂರು ಎಂದು ಇಡೀ ದೇಶದ ಜನಸಂಖ್ಯೆಯನ್ನು ಮೂರು ಭಾಗಮಾಡಿ ನೋಡುವುದನ್ನು ಆರಂಭಿಸಿದ್ದರು. ಇದರಲ್ಲಿ ಮುಸ್ಲಿಂ ಲೀಗ್ ಪಾತ್ರವೆಷ್ಟು, ಬ್ರಿಟಿಷರ ಪಾತ್ರವೆಷ್ಟು ಎನ್ನುವ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬೇಕು. ಈ ಎರಡೂ ಶಕ್ತಿಗಳು ಸೇರಿ ಹಿಂದೂಗಳನ್ನು ವಿಭಜಿಸಿ ದುರ್ಬಲಗೊಳಿಸುವ, ತಾವು ಸಬಲರಾಗುವ ರಾಜನೀತಿಯನ್ನು ಸಾಮಾಜಿಕ, ಸಾಂಸ್ಕøತಿಕ ನೆಲೆಯಲ್ಲಿ ಆರಂಭಿಸಿದ್ದರು. ಆದರೆ, ಆ ದಿನಮಾನದ ಪ್ರಬಲ ರಾಜಕೀಯ ಪಕ್ಷವಾಗಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1919ರಲ್ಲಿ ಖಿಲಾಫತ್ ಚಳವಳಿಯನ್ನು ಬೆಂಬಲಿಸಿ ಹೋರಾಡುವ ಮೂಲಕ ಹಿಂದೂ ಮುಸ್ಲಿಂರ ಐಕ್ಯತೆಯನ್ನು ಸಾಧಿಸುವ ಆದರ್ಶವನ್ನು ಎತ್ತಿಹಿಡಿಯಿತು. ಆದರೆ, ಮುಸ್ಲಿಂ ಲೀಗ್ ದ್ವಿರಾಷ್ಟ್ರ ಸಿದ್ಧಾಂತವನ್ನು ಮಂಡಿಸಿತು. ಕಡೆಗೂ ದೇಶವನ್ನು ತುಂಡು ಮಾಡಿಯೇ ಮುಸ್ಲಿಂ ದೇಶ ಪಾಕಿಸ್ತಾನ ಅಸ್ತಿತ್ವಕ್ಕೆ ಬರಲು ಕಾರಣವಾಯಿತು. ಇಂದಿಗೂ ಭಾರತಕ್ಕೆ ಭಯೋತ್ಪಾದನೆ ಹಾಗೂ ಮತಾಂಧತೆಯ ಮೂಲಕ ಮಗ್ಗುಲ ಮುಳ್ಳಾಗಿದೆ.

ಅದೇ ಹೊತ್ತಿನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ದಲಿತರ ಪರವಾಗಿ ಹೋರಾಟ ಕಟ್ಟಿ ದುಂಡು ಮೇಜಿನ ಸಭೆಯಲ್ಲಿ ಗಾಂಧಿಯ ಎದುರು ನಿಂತು ವಾದಿಸಿ ತಮ್ಮ ಬೇಡಿಕೆ ಈಡೇರಿಸಿಕೊಂಡಿದ್ದರು. ಆದರೆ, ಯರವಾಡ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಗಾಂಧೀಜಿಯವರ ಪ್ರಾಣ ಉಳಿಸಿದ ಅಂಬೇಡ್ಕರ್ ಪೂನಾ ಒಪ್ಪಂದದ ಮೂಲಕ ಸ್ಪøಶ್ಯರು, ಅಸ್ಪøಶ್ಯರು ಶಾಶ್ವತವಾಗಿ ವಿಭಜಿಸಿ ಹೋಗುವುದನ್ನು ತಪ್ಪಿಸಿ ಹಿಂದೂಗಳ ಐಕ್ಯತೆಯನ್ನು ಸಾರಿದರು. ಅದೇ ಅಂಬೇಡ್ಕರರು ಮುಂದೆ ಹಿಂದೂ ಕೋಡ್ ಬಿಲ್ ಮಂಡಿಸಿ ದೇಶದ ಎಲ್ಲಾ ಹಿಂದೂಗಳನ್ನು ಒಂದು ಕಾನೂನಿನ ಅಡಿಯಲ್ಲಿ ತಂದು ಒಂದು ಮಾಡಲು ಪ್ರಯತ್ನಿಸಿದರು, ಆದರೆ, ಆ ಬಿಲ್ ಅಂಗೀಕಾರವಾಗದೇ ಹೋಗಿ ಅಂಬೇಡ್ಕರ್ ರಾಜೀನಾಮೆ ಕೊಡುವಂತಾದದ್ದು ಭಾರತದ ಸಾಮಾಜಿಕ ಸುಧಾರಣೆಯ ಹಾದಿಯಲ್ಲಿ ಸಂಭವಿಸಿದ ದೊಡ್ಡ ದುರಂತ.

ಇμÉ್ಟಲ್ಲ ಪ್ರಸ್ತಾಪಿಸಿದ ಉದ್ದೇಶ ಇμÉ್ಟ. 1910ರಿಂದಲೇ ಹಿಂದೂಗಳನ್ನು ವಿಭಜಿಸಿ ದುರ್ಬಲ ಮಾಡಲು ನಡೆಯುತ್ತಿದ್ದ ವಿದ್ಯಮಾನಗಳ ನಡುವೆ ಆರ್.ಎಸ್.ಎಸ್. ಹಿಂದುತ್ವವನ್ನು ತನ್ನ ಧ್ಯೇಯವಾಗಿಸಿಕೊಂಡು ಅಸ್ತಿತ್ವಕ್ಕೆ ಬಂದಿದೆ. ಆರ್.ಎಸ್.ಎಸ್. ಮಾಡಿದ ಬಹುದೊಡ್ಡ ತಪ್ಪೆಂದರೆ ಜಾತಿ-ಮತ-ಪಂಥ-ಪ್ರದೇಶ-ಭಾμÉ-ಬಣ್ಣ-ಸಂಸ್ಕøತಿಗಳೆಲ್ಲವನ್ನೂ ಮೀರಿ ಹಿಂದೂಗಳು ಒಂದಾಗುವಂತೆ ಮಾಡಿದ್ದು. ಹಾಗಾಗಿ ಎಲ್ಲಾ ಹಿಂದೂ ವಿರೋಧಿಗಳೂ ಆರ್.ಎಸ್.ಎಸ್.ನ್ನು ನಿರಂತರವಾಗಿ ಖಂಡಿಸುತ್ತಾ ಬಂದಿದ್ದಾರೆ. ಹಿಂದೂಗಳು ಸದಾ ತುಂಡಾಗಿರಬೇಕು ಎಂದು ಬಯಸುವವರಿಗೆ ಆರ್.ಎಸ್.ಎಸ್. ಮಾಡಿದ ದೊಡ್ಡ ತಪ್ಪು ಹಿಂದೂಗಳ ಸಂಘಟನೆ.

ಆದರೆ, ಮಹಾತ್ಮಾ ಗಾಂಧೀಜಿ ಮತ್ತು ಅಂಬೇಡ್ಕರ್ ಪೂನಾ ಒಪ್ಪಂದದ ಮೂಲಕ ಸಾಧಿಸಿದ್ದು ಇದೇ ಹಿಂದೂ ಸಂಘಟನೆ. ಅಂದು ಮುಸ್ಲಿಂ ಲೀಗ್ ಮತ್ತು ಮಹಮ್ಮದಾಲಿ ಜಿನ್ನಾಗೆ ಹಿಂದೂ ಪಕ್ಷವಾಗಿ ಕಂಡದ್ದು ಇಂದಿನ ಬಿಜೆಪಿಯಲ್ಲ, ಅಂದಿನ ಕಾಂಗ್ರೆಸ್ ಎಂಬುದೂ ಗಮನಾರ್ಹ. 1922ರ ಚುನಾವಣೆಯಲ್ಲಿ ಇಂದಿನ ಪಾಕಿಸ್ತಾನದ ಪ್ರಾಂತಗಳಲ್ಲಿ ಒಬ್ಬನೇ ಒಬ್ಬ ಕಾಂಗ್ರೆಸ್ ನೇತಾರ ಗೆಲ್ಲಲಿಲ್ಲ ಎಂಬುದೂ ಅμÉ್ಟೀ ಸತ್ಯ. ಖಿಲಾಫತ್ ಚಳವಳಿಯಾದಿಯಾಗಿ ಇಂದಿನವರೆಗೂ ಹಿಂದೂ ಮುಸ್ಲಿಂ ಐಕ್ಯತೆಗಾಗಿ ಹಂಬಲಿಸುವ ಕಾಂಗ್ರೆಸ್ ಹಿಂದೂಗಳನ್ನು ಮುಂದುವರೆದ-ಹಿಂದುಳಿದ-ದಲಿತ ಮತ್ತು ಹತ್ತಾರು ಜಾತಿ ಸಮ್ಮೇಳನಗಳ ಮೂಲಕ ಮೂಲಕ ‘ಜಾತ್ಯತೀತ’ ಹೆಸರಿನಲ್ಲಿ ಜಾತಿವಾದವನ್ನೇ ಪೆÇೀಷಿಸಿಕೊಂಡು ಬಂದಿತು. ಅದರ ಪರಿಣಾಮವಾಗಿಯೇ ಆರ್.ಎಸ್.ಎಸ್. ದಿನದಿಂದ ದಿನಕ್ಕೆ ಬೆಳೆಯುತ್ತಾ, ಬದಲಾಗುತ್ತಾ ಇಂದು ಕೇಂದ್ರ ಸ್ಥಾನಕ್ಕೆ ಬಂದು ನಿಂತಿದೆ. ಗಾಂಧೀಜಿ ಹತ್ಯೆಯ ಆರೋಪದಿಂದ ಹಿಡಿದು ನಿμÉೀಧಗಳಾಗಿ ಎಲ್ಲಾ ವಿರೋಧ ಹಾಗೂ ಹತ್ತಿಕ್ಕುವ ಪ್ರಭುತ್ವದ, ವಿಚಾರವಾದದ ಪ್ರಯತ್ನಗಳನ್ನು ವಿಫಲಗೊಳಿಸಿ ಮೇಲೆದ್ದುನಿಂತಿದೆ.

ಆರ್.ಎಸ್.ಎಸ್. ಮಾಡಿರುವ ತಪ್ಪುಗಳು

  1. ಹಿಂದೂಗಳನ್ನೆಲ್ಲ ಒಂದು ಮಾಡಿ ದೇಶವನ್ನು ಪ್ರಬಲಗೊಳಿಸಿದ್ದು.
  2. ಹಿಂದೂಸ್ತಾನದಲ್ಲಿರುವ ಪ್ರತಿಯೊಬ್ಬರೂ ಹಿಂದೂಗಳು ಎನ್ನುವ

            ಮೂಲಕ ಭಾರತೀಯ ಮುಸ್ಲಿಂಮರು, ಕ್ರಿಶ್ಚಿಯನ್ನರೂ ಹಿಂದೂಗಳು

            ಎಂದದ್ದು.

  1. ಹಿಂದೂಗಳಲ್ಲೇ ಇರುವ ಬ್ರಾಹ್ಮಣ ಎಡಪಂಥೀಯ ವಿಚಾರವಾದಿಗಳ

            ನಿರಂತರ ಸರ್ವಾಧಿಕಾರ, ರಕ್ತಪಾತ, ವರ್ಗಸಂಘರ್ಷದ ಕಮ್ಯುನಿಸಂನ

            ವಿರುದ್ಧ ದಿಟ್ಟತನದ ಹೋರಾಟ ಸಾರಿದ್ದು.

  1. ಬ್ರಾಹ್ಮಣವಾದಿ ಸಂಘಟನೆ ಎಂಬುದನ್ನು ಹುಸಿಮಾಡಿ

            ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ಅಸ್ಪøಶ್ಯ ಮೊದಲಾದ ಎಲ್ಲಾ

            ಜಾತಿ ಸಮುದಾಯಗಳನ್ನೂ ಒಳಗೊಂಡು ಬೆಳೆದದ್ದು.

  1. ದೇಶವಿರೋಧಿ ಶಕ್ತಿಗಳ ವಿರುದ್ಧ ಪ್ರಾಣಾರ್ಪಣೆಗೂ ಸಿದ್ಧವಾಗುವಂತಹ

            ಕಾರ್ಯಕರ್ತರನ್ನು ನಿರ್ಮಾಣ ಮಾಡಿದ್ದು.

ಹೀಗೆ ಪಟ್ಟಿಯನ್ನು ಬೆಳೆಸುತ್ತಾ ಹೋಗಬಹುದು. ಆದರೆ, ಇವುಗಳೆಲ್ಲ ತಪ್ಪುಗಳೋ, ಸರಿಗಳೋ ಎಂಬುದನ್ನು ದೇಶದ ಶ್ರೀಸಾಮಾನ್ಯರು ತೀರ್ಮಾನಿಸಿದ್ದಾರೆ, ತೀರ್ಮಾನಿಸುತ್ತಿದ್ದಾರೆ, ತೀರ್ಮಾನಿಸುತ್ತಾರೆ. 1984ರ ಆನಂತರ ಮೂವತ್ತು ವರ್ಷಗಳ ಬಳಿಕ 2014ರಲ್ಲಿ ಹಿಂದುತ್ವದ ಆಧಾರದ ಮೇಲೆ ಅಧಿಕಾರಕ್ಕೆ ಬಂದಿರುವಂತಹ ಬಿಜೆಪಿಗೆ ಹಿಂದೂಸ್ತಾನದ ಪ್ರತಿಯೊಬ್ಬ ಪ್ರಜೆಯನ್ನೂ ಹಿಂದೂವೆಂದೇ ಪರಿಗಣಿಸಿ ಸಬ್‍ಕಾ ಸಾಥ್, ಸಬ್‍ಕಾ ವಿಕಾಸ್, ಸಬ್‍ಕಾ ವಿಶ್ವಾಸ್ ಸಿದ್ಧಾಂತವನ್ನು ನೈಜವಾಗಿ ಅನುμÁ್ಠನಕ್ಕೆ ತರಬೇಕಾದ ಸವಾಲಿದೆ.

ಭಾರತದ ಹಿಂದುಳಿದವರು, ದೀನ ದಲಿತರು ‘ಅಲ್ಲಿ ನಮ್ಮ ಉದ್ಧಾರ ಸಾಧ್ಯವಾಗಲಿಲ್ಲ, ಇಲ್ಲಿಯಾದರೂ ನಮ್ಮ ಉದ್ಧಾರವಾಗಬಹುದೆಂದು’ ಬಲ ತುಂಬಿದ್ದಾರೆ, ಅಧಿಕಾರಕ್ಕೆ ತಂದಿದ್ದಾರೆ. ಅವರು ಭ್ರಮನಿರಸನಕ್ಕೆ ಒಳಗಾಗದೆ ಇರುವಂತೆ ನೋಡಿಕೊಳ್ಳಬೇಕಾದ ಬಹುದೊಡ್ಡ ಹೊಣೆಗಾರಿಕೆ ಹಿಂದೆಂದಿಗಿಂತಲೂ ಇಂದು ಆರ್.ಎಸ್.ಎಸ್. ನೆತ್ತಿಯ ಮೇಲಿದೆ. ಮತ್ತೆ ಹಿಂದೂಸ್ತಾನದ ಪ್ರಜೆಗಳು, ಸ್ವಾತಂತ್ರ್ಯ ಹೋರಾಟದ ಆದರ್ಶಗಳು, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಉಳಿಯಲಿಲ್ಲ ಎಂದು ಕಂಗಾಲಾದಂತೆ ಆದರೆ ಇಂದು ರಾಷ್ಟ್ರೀಯ ಕಾಂಗ್ರೆಸ್‍ಗೆ ಬಂದಿರುವಂತಹ ಸ್ಥಿತಿಯೇ ಮುಂದೊಂದು ದಿನ ಬಿಜೆಪಿಗೂ ಬರುತ್ತದೆ ಎಂಬ ಎಚ್ಚರವನ್ನು ಇತಿಹಾಸ ಮತ್ತು ವರ್ತಮಾನ ಸಾರುತ್ತಿದೆ.

ಆರ್.ಎಸ್.ಎಸ್. ಬ್ರಾಹ್ಮಣವಾದಿ, ಜಾತೀವಾದಿ, ದಲಿತ ವಿರೋಧಿ, ಮಹಿಳಾವಿರೋಧಿ, ಪ್ರಗತಿ ವಿರೋಧಿ, ಜೀವ ವಿರೋಧಿ, ಪ್ರತಿಗಾಮಿ ಹೀಗೆ ಸಾಲು ಸಾಲು ಆರೋಪ ಮಾಡುತ್ತಾ ಬಂದ ಹಲವು ಬುದ್ಧಿ ಜೀವಿಗಳ ಆರೋಪಗಳನ್ನು ಆರ್.ಎಸ್.ಎಸ್. ಹುಸಿಗೊಳಿಸಿ ದೊಡ್ಡ ತಪ್ಪು ಮಾಡಿದೆ. ನಾನು 1982-83ರಿಂದ ಆರ್.ಎಸ್.ಎಸ್. ಕಾರ್ಯಕರ್ತ. ಆದರೆ, ಕಳೆದ 32 ವರ್ಷಗಳಿಂದ ಯಾರೂ ಎಂದೂ ನನ್ನ ಜಾತಿ ಕೇಳಲಿಲ್ಲ. ಜಾತಿ ನೋಡಿ ಮಣೆ ಹಾಕಲಿಲ್ಲ. ಜಾತಿಯ ಕಾರಣಕ್ಕೆ ಅಪಮಾನ ಮಾಡಲಿಲ್ಲ. ಬದಲಾಗಿ ನಾನು ಬಸವಣ್ಣನವರ ಮಹಾಮನೆಯಲ್ಲಿ ತಳ ಸಮುದಾಯದ ಶರಣರು ಗಳಿಸಿದಂತೆ ಆತ್ಮಗೌರವವನ್ನು, ಆತ್ಮವಿಶ್ವಾಸವನ್ನು ದೇಶಭಕ್ತಿಯನ್ನೂ, ಈಶಭಕ್ತಿಯನ್ನೂ ಪಡೆದಿದ್ದೇನೆ. ನನ್ನ ತಾಯಿ, ತಂದೆ, ಮನೆ ಎಬಿವಿಪಿಗೆ ಹೋದರೆ ಎಂದೂ ತಲ್ಲಣಗೊಳಿಸದೆ ನಿರಾತಂಕದಿಂದ ಇದ್ದರು.

ಆರ್.ಎಸ್.ಎಸ್. ಸಿದ್ಧಾಂತ ಯಾವುದು ಎಂದು ಕೇಳಿದಾಗ ಡಾಕ್ಟರ್‍ಜಿ ಹಾಗೂ ಗುರೂಜಿ ಹೇಳಿದ ಮಾತು `ನಮ್ಮ ಕಾರ್ಯಕರ್ತರೇ ನಮ್ಮ ಸಿದ್ಧಾಂತ’. ಅವರ ಮಾತು-ನಡವಳಿಕೆಯೇ ನಮ್ಮ ಸಿದ್ಧಾಂತ. ಇದು ಇಂದಿನ ಆರ್.ಎಸ್.ಎಸ್. ಬೆಳೆದಿರುವುದಕ್ಕೆ

ಮೂಲ ಕಾರಣ. ಅಂದರೆ ಸಿದ್ಧಾಂತ, ಕಾರ್ಯಕರ್ತ ಬೇರೆ ಬೇರೆ ಅಲ್ಲ. ಅದೊಂದು ರೀತಿ ಶರಣರು ಹೇಳಿದ ನಡೆ-ನುಡಿ ಸಿದ್ಧಾಂತ. ರಕ್ತಕ್ರಾಂತಿ ವಿನಾಶಕಾರಿ ಚಟುವಟಿಕೆಗಳಿಂದ ಸಾಮಾಜಿಕ ಬದಲಾವಣೆ ಸಾಧ್ಯವಿಲ್ಲ. ಮನಸ್ಸಿನ ಪರಿವರ್ತನೆಯಿಂದ ಸಾಮಾಜಿಕ ಸಾಮರಸ್ಯದಿಂದ ರಾಷ್ಟ್ರ ಪುನರ್‍ನಿರ್ಮಾಣ ಸಾಧ್ಯ ಎಂದು ನಂಬಿ ಬದುಕಿರುವುದು ಸಿದ್ಧಾಂತ. ಆರ್.ಎಸ್.ಎಸ್. ಸಿದ್ಧಾಂತ ಪುಸ್ತಕದಲ್ಲಿಲ್ಲ, ಕಾರ್ಯಕರ್ತರ ನಡವಳಿಕೆಯಲ್ಲಿದೆ. ಅಲ್ಲಿಂದ ಅದು ಕಾಣೆಯಾದಂದು ಆರ್.ಎಸ್.ಎಸ್. ಪತನವೂ ಆರಂಭವಾಗುತ್ತದೆ. ಎಡಪಂಥೀಯ ಸಂಘಟನೆಗಳ ಮಹಾಪತನಕ್ಕೆ ಅವರ ವಿಚಾರ ಎಷ್ಟು ಕಾರಣವೋ ಅವರು ನುಡಿದಂತೆ ನಡೆಯಲಿಲ್ಲ ಎಂಬುದೂ ಕಾರಣ. ಇದು ಎಲ್ಲರಿಗೂ ಪಾಠ.

ಆರ್.ಎಸ್.ಎಸ್. ಚಟುವಟಿಕೆಗಳ ನಿಧಿಯ ಮೂಲ ಯಾವುದು ಎಂಬ ಪ್ರಶ್ನೆಯೂ ಹಲವರನ್ನು ಕಾಡುತ್ತದೆ. ಕಾರ್ಯಕರ್ತರ ತನು-ಮನ-ಧನಗಳ ಸಮರ್ಪಣಾ ಮನೋಭಾವವೇ ಆರ್.ಎಸ್.ಎಸ್.ನ ಅಕ್ಷಯ ಪಾತ್ರೆ. ಅಲ್ಲಿರುವಂತಹ ಸಾವಿರಾರು ಪೂರ್ಣಾವಧಿ ಕಾರ್ಯಕರ್ತರು, ಪ್ರಚಾರಕರು ಸಂಬಳಕ್ಕೆ ಡುಡಿವವರಲ್ಲ. ಅವರ ನಿತ್ಯದ ಖರ್ಚು ವೆಚ್ಚಗಳಿಗಾಗಿ ಗೃಹಸ್ಥ ಕಾರ್ಯಕರ್ತರು ಪ್ರತಿ ತಿಂಗಳು ಅಲ್ಲಲ್ಲಿ ಸ್ಥಳೀಯವಾಗಿ ನೀಡುವ ಅಕ್ಷಯ ನಿಧಿ, ಗುರುದಕ್ಷಿಣೆ ಸಮರ್ಪಣೆ ಇಂದು ನೆನ್ನೆಯದಲ್ಲ. ಸಾವಿರಾರು ಕಾರ್ಯಕರ್ತರು ತಮ್ಮ ಮನೆಗಳನ್ನೇ ಈ ಧ್ಯೇಯಕ್ಕೆ ಕಾರ್ಯಾಲಯವಾಗಿ ನೀಡಿರುವುದು ಒಂದಲ್ಲ, ಹತ್ತಾರು ಪಿಎಚ್‍ಡಿ ವಸ್ತುಗಳಾಗಬಹುದು.

ಆರ್.ಎಸ್.ಎಸ್.ನ ಪರಿವಾರ ಸಂಘಟನೆಗಳು, ಅವುಗಳು ನಡೆಸುತ್ತಿರುವ ಅಸಂಖ್ಯಾತ ಕಾರ್ಯಚಟುವಟಿಕೆಗಳು ವಿಶ್ವದ ನೆಲೆಯಿಂದ ಹಿಡಿದು ವನವಾಸಿ ಸಮುದಾಯದವರೆಗೂ ನಡೆಯುತ್ತಿದೆ. ಆರ್.ಎಸ್.ಎಸ್. ತನ್ನ ಚಟುವಟಿಕೆಗಳಿಗೆ ವಿದೇಶಿ

ಫಂಡನ್ನೋ, ಸರ್ಕಾರದ ಅನುದಾನವನ್ನೋ, ರಾಜಕೀಯ ಭ್ರμÁ್ಟಚಾರವನ್ನೋ ನಂಬಿ ಕುಳಿತಿಲ್ಲ. ತಾನೇ ತನ್ನ ಧ್ಯೇಯದ ಮೂಲಕ ನಿರ್ಮಿಸಿದ ಕಾರ್ಯಕರ್ತರು ಅವರ ಮೂಲಕ ಇಡೀ ಸಮಾಜ ಆರ್.ಎಸ್.ಎಸ್.ನ ತನು-ಮನ-ಧನವಾಗಿದೆ.

*ಲೇಖಕರು ಮೈಸೂರಿನ ಮಹಾರಾಣಿ ಕಲಾ ಕಾಲೇಜಿನಲ್ಲಿ ಪ್ರಾಧ್ಯಾಪಕರು; ಪ್ರಸ್ತುತ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು.

Leave a Reply

Your email address will not be published.