1947ರ ವಜ್ರಮಹೋತ್ಸವದಲ್ಲಿ ನಮ್ಮ ಆರ್ಥಿಕ ಸ್ವಾತಂತ್ರ್ಯ ಹೇಗಿದೆ..?

ಇದೇ 2021 ಆಗಸ್ಟ್ 15 ರಿಂದ ಒಂದು ವರ್ಷಗಳವರೆಗೆ ನಾವು 1947 ಸ್ವಾತಂತ್ರ್ಯದಿನದ ವಜ್ರಮಹೋತ್ಸವವನ್ನು ಆಚರಿಸಲಿದ್ದೇವೆ. ದೇಶಾದ್ಯಂತ ಸಭೆ, ಸಮಾರಂಭ, ಗೋಷ್ಠಿ, ಉತ್ಸವಗಳಲ್ಲಿ ಸ್ವಾತಂತ್ರ್ಯೋತ್ಸವದ ಗುಣಗಾನ ಮಾಡಲಿದ್ದೇವೆ. ಕೆಲವರು ಸಂದರ್ಭದಲ್ಲಿ ನಮ್ಮ ರಾಜಕೀಯ ಸ್ವಾತಂತ್ರ್ಯದ ವಿಷಯಗಳಾದ ಪ್ರಜಾಪ್ರಭುತ್ವ, ಮಾನವೀಯ ಹಕ್ಕುಗಳು, ವಾಕ್ ಸ್ವಾತಂತ್ರ್ಯ ಭ್ರಷ್ಟಾಚಾರ ರಹಿತ ಚುನಾವಣೆ ಮತ್ತಿತರ ವಿಷಯಗಳನ್ನು ಚರ್ಚಿಸಬಹುದು.

ಸಂದರ್ಭದಲ್ಲಿ ನಿಮ್ಮ ಸಮಾಜಮುಖಿ ಪತ್ರಿಕೆ ಭಾರತೀಯರ ಆರ್ಥಿಕ ಸ್ವಾತಂತ್ರ್ಯದ ಪರಿಶೀಲನೆ ಕೈಗೆತ್ತಿಕೊಳ್ಳುತ್ತಿದೆ. ಕಳೆದ 75 ವರ್ಷಗಳಲ್ಲಿ ನಾವು ಸಾಧಿಸಿರುವ/ಸಾಧಿಸಲಾಗದ ಊಟವಸತಿಉದ್ಯೋಗದ ವಿವೇಚನೆಗಳನ್ನು ಕೆಲವು ಪ್ರಶ್ನೆಗಳಲ್ಲಿ ನಿಮ್ಮ ಮುಂದಿಟ್ಟಿದೆ.

  • ಜಿಡಿಪಿ ಮತ್ತು ತಲಾ ಜಿಡಿಪಿಗಳು ಅಭಿವೃದ್ಧಿಯ ಸೂಚಕವಾದರೆ ನೆರೆಹೊರೆಯ ದೇಶಗಳ ನಡುವೆಯಾದರೂ ತೌಲನಿಕವಾಗಿ ನಾವು ಪ್ರಗತಿ ಸಾಧಿಸಿದ್ದೇವೆಯೇ..?

  • ನಮ್ಮಲ್ಲಿಚಮಚಾ ಬಂಡವಾಳಶಾಹಿ(ಕ್ರೋನಿ ಕ್ಯಾಪಿಟಲಿಸಮ್) ಮತ್ತು ಭ್ರಷ್ಟಾಚಾರಿ / ಸ್ವಜನ ಪಕ್ಷಪಾತಿ ಪ್ರಗತಿಯ ಮಾದರಿಗಳು ಏಕೆ ಯಶಸ್ವಿಯಾಗಿವೆ..?

  • ಉಳ್ಳವರ ಮತ್ತು ಸಾಮಾನ್ಯರ ನಡುವಿನ ಆದಾಯ/ಸಂಪತ್ತಿನ ಅಂತರ ಹಿಗ್ಗುತ್ತಿದ್ದರೂ ನಮ್ಮ ಸಮಾಜವೇಕೆ ಅದನ್ನು ಗಂಭೀರ ಮತ್ತು ಅಪಾಯಕಾರಿಯೆಂದು ಪರಿಗಣಿಸಿಲ್ಲ..?

  • ದೇಶದ ಸಾಂಸ್ಥಿಕ ಬಿಕ್ಕಟ್ಟು ಮತ್ತು ಮುಕ್ತ ಉದ್ಯಮಶೀಲತೆಗೆ ಒದಗಿರುವ ಅಡೆತಡೆಗಳನ್ನು ನಾವೇಕೆ ಗುರುತಿಸುತ್ತಿಲ್ಲ..?

  • ನಮ್ಮ ಕೃಷಿ ಬಿಕ್ಕಟ್ಟು, ನಗರೀಕರಣದ ಅಸ್ತವ್ಯಸ್ತ ಸ್ಥಿತಿ, ನಿರುದ್ಯೋಗ ಮತ್ತು ದಲಿತಹಿಂದುಳಿದವರ ಅಸಹಾಯಕತೆ ನಮ್ಮನ್ನೇಕೆ ಬೆಚ್ಚಿಬೀಳಿಸುತ್ತಿಲ್ಲ..?

ವಜ್ರಮಹೋತ್ಸವದ ಸಂದರ್ಭದಲ್ಲಿ ಪ್ರಶ್ನೆಗಳನ್ನು ಎತ್ತುವುದು ನಮ್ಮ ಕನಿಷ್ಠ ಕರ್ತವ್ಯವೆಂದು ಭಾವಿಸಿ ಚರ್ಚೆಯನ್ನು ಶುರುಮಾಡಿದ್ದೇವೆ.

Leave a Reply

Your email address will not be published.