2020ರಲ್ಲಿ ಡಿಜಿಟಲ್ ಪ್ರಜಾತಂತ್ರಕ್ಕೆ ಕಾದಿದೆ ಗಂಭೀರ ಸವಾಲು

ಒಂದು ದಶಕದ ಕಾಲ ತಮ್ಮ ಪ್ರಜಾತಾಂತ್ರಿಕ ಮೌಲ್ಯ ಮತ್ತು ನಿಲುಮೆಗಳ ಬಗ್ಗೆ ಬೆನ್ನುತಟ್ಟಿಕೊಳ್ಳುತ್ತಿದ್ದ ಸಾಮಾಜಿಕ ಮಾಧ್ಯಮಗಳಾದ ಫೇಸ್‍ಬುಕ್, ಟ್ವಿಟರ್ ಮತ್ತು ಗೂಗಲ್ ಪ್ರಜಾತಂತ್ರಕ್ಕೆ ಮಾರಕವಾಗಿ ಪರಿಣಮಿಸಲಿವೆ!

ಬ್ರಿಟನ್ನಿನಲ್ಲಿ ಡಿಸೆಂಬರ್ 2019ರ ಚುನಾವಣೆಗಳ ನಂತರ ಅಮೆರಿಕದಲ್ಲಿ ನವಂಬರ್ 2020ರಲ್ಲಿ ನಡೆಯಲಿರುವ ಚುನಾವಣೆಗಳ ನಡುವೆ, ಈ ಪ್ರಮುಖ ಜಾಗತಿಕ ತಂತ್ರಜ್ಞಾನ ವೇದಿಕೆಗಳು ತಮ್ಮ ಮೇಲಿನ ವಿಧಿಸಲಾಗಬಹುದಾದ ನಿರ್ಬಂಧಗಳನ್ನು ಸಡಿಲಗೊಳಿಸುವಂತೆ ಮೊರೆ ಹೋಗಲು ಸಜ್ಜಾಗಿವೆ. ಸ್ವನಿಯಂತ್ರಣದ ನೆಪ ಹೂಡಿ ಫೇಸ್‍ಬುಕ್, ಟ್ವಿಟರ್ ಮತ್ತು ಗೂಗಲ್ ಸಂಸ್ಥೆಗಳು ಜವಾಬ್ದಾರಿಯುತವಾಗಿ ವರ್ತಿಸಲು ಬೇಕಾದ ಮಾರ್ಗಗಳಿಗಾಗಿ ಹುಡುಕಾಡುತ್ತಿದ್ದು, ಈ ಎರಡು ಚುನಾವಣೆಗಳ ಅಖಂಡತೆಯನ್ನು ರಕ್ಷಿಸಲು ಪಣತೊಟ್ಟಿವೆ. ಟ್ವಿಟರ್ ಈಗಾಗಲೇ ರಾಜಕೀಯ ಜಾಹೀರಾತು ಪ್ರಕಟಿಸುವುದನ್ನು ನಿಲ್ಲಿಸುವುದಾಗಿ ಘೋಷಿಸಿದ್ದು, ಗೂಗಲ್ ಮತ್ತು ಫೇಸ್‍ಬುಕ್ ಯಾವುದೇ ರಾಜಕೀಯ ಜಾಹೀರಾತುಗಳನ್ನು ನಿರ್ದಿಷ್ಟವಾಗಿ ಬಿತ್ತರಿಸುವ ಪ್ರಕ್ರಿಯೆಗೆ ತಡೆ ನೀಡಲಿದೆ.

2016ರಲ್ಲಿ ನಡೆದ ಫಿಲಿಪೈನ್ಸ್ ಚುನಾವಣೆಗಳಲ್ಲಿ ರಾಡ್ರಿಗೋ ಡೂಟರ್ಟ್ ಅವರ ಆಯ್ಕೆಯಲ್ಲಿ, ಬ್ರೆಕ್ಸಿಟ್ ಜನಾಭಿಪ್ರಾಯ ಸಂಗ್ರಹಣೆಯಲ್ಲಿ, ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಗೆಲುವಿನಲ್ಲಿ ಫೇಸ್‍ಬುಕ್ ಮಹತ್ವದ ಪಾತ್ರ ವಹಿಸಿತ್ತು. 2016ರ ಈ ಆಘಾತದಿಂದ ಸಾಮಾಜಿಕ ಮಾಧ್ಯಮಗಳು ಪ್ರಜಾತಂತ್ರ ವ್ಯವಸ್ಥೆಯನ್ನು ಅಪಮೌಲ್ಯಗೊಳಿಸುತ್ತಿರುವುದರ ಬಗ್ಗೆ ವಿಶ್ವದಾದ್ಯಂತ ಪತ್ರಕರ್ತರು ಮತ್ತು ನಿಯಂತ್ರಕರು ಜಾಗೃತರಾಗಿದ್ದರು. ಒಂದು ದಶಕದ ಕಾಲ ಪ್ರಜಾತಂತ್ರ ವ್ಯವಸ್ಥೆಯ ಸಮರ್ಥಕರಂತೆ ವರ್ತಿಸಿದ್ದ ಫೇಸ್‍ಬುಕ್, ಟ್ವಿಟರ್ ಮತ್ತು ಗೂಗಲ್ ಪ್ರಜಾತಂತ್ರಕ್ಕೆ ಮಾರಕ ಎಂದು ಈಗ ಸ್ಪಷ್ಟವಾದಂತಿದೆ.

ಮೊದಲನೆಯದಾಗಿ, ಈ ಸಂಸ್ಥೆಗಳು ನಿಯೋಜಿಸುವ ನಿರ್ದಿಷ್ಟ ಜಾಹೀರಾತು ಸೇವೆಗಳು, ಈ ಸೇವೆಗಳನ್ನು ಬಳಸಿಕೊಳ್ಳುವ ರಾಜಕೀಯ ಪಕ್ಷಗಳು ಮತ್ತು ಪ್ರಚಾರ ಗುಂಪುಗಳಿಂದ ಯಾವುದೇ ಉತ್ತರದಾಯಿತ್ವನ್ನು ಅಪೇಕ್ಷಿಸುವುದಿಲ್ಲ. ಜಾಹೀರಾತುಗಳು ಯಾರನ್ನು ಉದ್ದೇಶಿಸಿರುವುವೋ ಅವರನ್ನು ತಲುಪುವಂತೆ ಕಾರ್ಯ ನಿರ್ವಹಿಸುವುದರಿಂದ ವಿರೋಧ ಪಕ್ಷಗಳ ತಪಾಸಣೆಯಾಗಲೀ, ಪರಿಶೀಲನೆಯಾಗಲಿ, ಪತ್ರಕರ್ತರ, ಟೀಕಾಕಾರರ ಪ್ರತಿಕ್ರಿಯೆಯಾಗಲೀ ಇಲ್ಲಿ ಮುಖ್ಯವಾಗುವುದಿಲ್ಲ.

ಎರಡನೆಯದಾಗಿ, ಈ ಜಾಹೀರಾತು ಸಂಸ್ಥೆಗಳು ಅನುಸರಿಸುವ ವಿಧಾನಗಳು ಭಾವನಾತ್ಮಕ ಅಂಶಗಳನ್ನೊಳಗೊಂಡಿರುವುದರಿಂದ ಪ್ರಚೋದನಕಾರಿಯಾಗಿಯೂ ಇರುತ್ತವೆ. ಇದರಿಂದ ಮತದಾರರಲ್ಲಿ ಜುಗುಪ್ಸೆ ಹುಟ್ಟಿಸುವುದೇ ಅಲ್ಲದೆ ಪ್ರಜಾಸತ್ತಾತ್ಮಕ ರಾಜಕಾರಣದಲ್ಲಿ, ಪ್ರಜಾತಾಂತ್ರಿಕ ಸಂಸ್ಥೆಗಳಲ್ಲಿ, ಅಲ್ಪಸಂಖ್ಯಾತರಲ್ಲಿನ ವಿಶ್ವಾಸ ಕುಂದುವಂತೆ ಮಾಡುತ್ತದೆ.

ಮೂರನೆಯದಾಗಿ, ಫೇಸ್‍ಬುಕ್, ಟ್ವಿಟರ್ ಮತ್ತು ಗೂಗಲ್ ಸಾಮಾಜಿಕ ಮಾಧ್ಯಮಗಳು ಸಾಮಾನ್ಯವಾಗಿ ಜನರಿಗೆ ಮತ ಚಲಾಯಿಸಲು ಅಥವಾ ಷಾಪಿಂಗ್ ಮಾಡಲು ಪ್ರೇರೇಪಿಸುವಂತೆ ವಿನ್ಯಾಸವಾಗಿರುತ್ತವೆ. ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಚಿಂತಿಸುವ ಪ್ರವೃತ್ತಿಯನ್ನು ಉದ್ದೇಶಪೂರ್ವಕವಾಗಿಯೇ ಅಲ್ಲಗಳೆಯಲಾಗುತ್ತದೆ. ಆದರೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರೇರಣೆ ಮತ್ತು ಚರ್ಚೆ ಅತಿ ಅವಶ್ಯಕವಾಗಿರುತ್ತದೆ. 2016ರ ಚುನಾವಣೆಗಳಲ್ಲ ಫೇಸ್‍ಬುಕ್ ಸಹಾಯದಿಂದಲೇ ಅಮೆರಿಕದ ಅಧ್ಯಕ್ಷ ಟ್ರಂಪ್ ತನ್ನ ರಾಷ್ಟ್ರೀಯವಾದಿ ಬೆಂಬಲಿಗರಲ್ಲಿ ಪ್ರೇರಣೆ ಮೂಡಿಸುವುದು ಸಾಧ್ಯವಾಗಿತ್ತು. ಈಗ ಟ್ರಂಪ್ ಅವರ ಭವಿಷ್ಯ ಫೇಸ್‍ಬುಕ್, ಟ್ವಿಟರ್ ಮತ್ತು ಗೂಗಲ್‍ನ ಟೀಕಾಕಾರರನ್ನು ಅವಲಂಬಿಸಿದಷ್ಟೇ ಬೆಂಬಲಿಗರನ್ನೂ ಅವಲಂಬಿಸಿದೆ.

ಆದರೆ 2020ರಲ್ಲಿ 60ಕ್ಕೂ ಹೆಚ್ಚು ದೇಶಗಳಲ್ಲಿ ಚುನಾವಣೆಗಳು ನಡೆಯುತ್ತವೆ. ಬಹುತೇಕ ಚುನಾವಣೆಗಳಲ್ಲಿ ಗೂಗಲ್ ಮತ್ತು ಫೇಸ್‍ಬುಕ್ ಪ್ರಮುಖ ಪಾತ್ರ ವಹಿಸುತ್ತವೆ. ಮೊದಲನೆಯ ಚುನಾವಣೆ ಜನೆವರಿಯಲ್ಲಿ ತೈವಾನ್‍ನಲ್ಲಿ ನಡೆಯಲಿದೆ. ಈ ಚುನಾವಣೆಗಳಲ್ಲಿ ಮತಚಲಾಯಿಸುವವರ ಪೈಕಿ ಶೇ.89ರಷ್ಟು ಜನರು ಫೇಸ್‍ಬುಕ್ ಬಳಸುತ್ತಾರೆ. ಇತರ ಯಾವುದೇ ದೇಶಗಳಿಗಿಂತಲೂ ಇದು ಹೆಚ್ಚಿನ ಪ್ರಮಾಣದಲ್ಲಿದೆ. ಹಾಂಕಾಂಗ್‍ನಲ್ಲಿರುವ ಪ್ರಕ್ಷುಬ್ಧತೆ ಮತ್ತು ಪಶ್ಚಿಮ ಚೀನಾದಲ್ಲಿ ಚೀನಾ ಸರ್ಕಾರ ಅನುಸರಿಸುತ್ತಿರುವ ದಮನಕಾರಿ ಆಡಳಿತ ನೀತಿಯ ಹಿನ್ನೆಲೆಯಲ್ಲಿ ಈ ಚುನಾವಣೆಗಳಲ್ಲಿ ಆತಂಕದ ಪ್ರಮಾಣ ಹೆಚ್ಚಾಗಿಯೇ ಇರುತ್ತದೆ. ಚೀನಾದ ಏಜೆಂಟರು ತಮ್ಮ ಪ್ರಚಾರ ಸಾಮಗ್ರಿಯನ್ನು ಫೇಸ್‍ಬುಕ್‍ನಲ್ಲಿ ತುಂಬುವ ನಿರೀಕ್ಷೆಯೂ ಹೆಚ್ಚಾಗಿದೆ.

ಫೇಸ್‍ಬುಕ್ ಮತ್ತು ಗೂಗಲ್ ಪ್ರಮುಖ ಪಾತ್ರ ವಹಿಸಲಿರುವ ಇತರ 2020ರ ಚುನಾವಣೆಗಳೆಂದರೆ ಪೋಲೆಂಡ್, ಗ್ರೀಸ್, ಮಾಲ್ಡೋವ ಮತ್ತು ಫ್ರಾನ್ಸ್. ಫ್ರಾನ್ಸ್‍ನ ಸೆನೇಟ್ ಚುನಾವಣೆಗಳಲ್ಲಿ ಸ್ಥಳೀಯ ರಾಷ್ಟ್ರೀಯವಾದಿ ಗುಂಪುಗಳು ರಾಷ್ಟ್ರ ಮಟ್ಟದಲ್ಲಿ ಮತ್ತು ಹೊರದೇಶಗಳಲ್ಲಿನ ಯೂರೋಪ್ ಒಕ್ಕೂಟದ ವಿರೋಧಿಗಳು ಪ್ರಚಾರವನ್ನು ತೀವ್ರಗೊಳಿಸುವ ಸಾಧ್ಯತೆಗಳಿವೆ. ಸರ್ಬಿಯಾ, ಲಿಥುವೇನಿಯಾ, ಜಾರ್ಜಿಯಾ, ಪೆರು ಮತ್ತು ವೆನೆಜುವೆಲಾ ದೇಶಗಳ ಸಂಸತ್ ಚುನಾವಣೆಗಳಲ್ಲೂ ಇದೇ ರೀತಿಯ ಬೆಳವಣಿಗೆಗಳನ್ನು ನಿರೀಕ್ಷಿಸಬಹುದಾಗಿದೆ.

ಮಹಾಯುದ್ಧದ ತನ್ನ ಎರಡು ಶತ್ರು ರಾಷ್ಟ್ರಗಳು ಇತ್ತೀಚೆಗಿನ ವರ್ಷಗಳಲ್ಲಿ ಕುಸಿದಿರುವುದನ್ನು ಗಮನಿಸಿದ್ದರೂ ಫ್ರಾನ್ಸ್‍ನ ಮತದಾರರು ದೇಶದಲ್ಲಿ ಫ್ಯಾಸಿಸ್ಟರು ಅಧಿಕಾರಕ್ಕೆ ಬರದಂತೆ ತಡೆಗಟ್ಟುವುದರಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾದ ಫ್ರಾನ್ಸ್ ಮತ್ತು ಚೀನಾ ತಮ್ಮ ಹಿತಾಸಕ್ತಿಯ ಬಗ್ಗೆ ಎಚ್ಚರವಹಿಸಲು ಸಾಧ್ಯವಿದೆ. ಈ ದೇಶಗಳ ಸಾರ್ವಜನಿಕ ವ್ಯಾಪ್ತಿ ವೈವಿಧ್ಯಮಯವಾಗಿದೆ. ಎರಡೂ ದೇಶಗಳ ಪ್ರಜೆಗಳು ಮಾಹಿತಿಯ ಹಲವು ಮೂಲಗಳನ್ನು ಹೊಂದಿದ್ದು ಪರಸ್ಪರ ಮಾಹಿತಿ ಹಂಚಿಕೊಳ್ಳುವ ಹಲವು ವಿಧಾನಗಳನ್ನೂ ಹೊಂದಿವೆ. ಮಹಾಯುದ್ಧದ ತನ್ನ ಎರಡು ಶತ್ರು ರಾಷ್ಟ್ರಗಳು ಇತ್ತೀಚೆಗಿನ ವರ್ಷಗಳಲ್ಲಿ ಕುಸಿದಿರುವುದನ್ನು ಗಮನಿಸಿದ್ದರೂ ಫ್ರಾನ್ಸ್‍ನ ಮತದಾರರು ದೇಶದಲ್ಲಿ ಫ್ಯಾಸಿಸ್ಟರು ಅಧಿಕಾರಕ್ಕೆ ಬರದಂತೆ ತಡೆಗಟ್ಟುವುದರಲ್ಲಿ ಯಶಸ್ವಿಯಾಗಿದ್ದಾರೆ. ಟ್ರಂಪ್ ಅವರ ಜನಪ್ರಿಯತೆ ಕುಸಿಯುತ್ತಿದ್ದು ವ್ಯಾಪಕವಾಗಿ ಹರಡಿದೆ. ಟ್ರಂಪ್ ಅವರಿಗೆ ನ್ಯಾಯಾಲಯ ಛೀಮಾರಿ ಹಾಕಿದ ನಂತರ ಜನಪ್ರಿಯತೆ ಇನ್ನೂ ಕುಸಿಯುತ್ತಿದೆ. ಇನ್ನು ಕೆಲವು ರಾಷ್ಟ್ರಗಳಲ್ಲಿ ಪ್ರಜೆಗಳು ತಮ್ಮ ಸರ್ಕಾರ ಮತ್ತು ಪ್ರಪಂಚವನ್ನು ಅರಿತುಕೊಳ್ಳಲು ಫೇಸ್‍ಬುಕ್ ಒಂದನ್ನೇ ಅವಲಂಬಿಸುವ ಸನ್ನಿವೇಶವೂ ಇದೆ.

2020ರಲ್ಲಿ ಮ್ಯಾನ್‍ಮಾರ್ ಮತ್ತು ಶ್ರೀಲಂಕಾದಲ್ಲೂ ಚುನಾವಣೆಗಳು ನಡೆಯಲಿವೆ. ಎರಡೂ ದೇಶಗಳಲ್ಲಿ ಬೌದ್ಧರು ಬಹುಸಂಖ್ಯೆಯಲ್ಲಿದ್ದು ಇತ್ತೀಚೆಗಿನ ವರ್ಷಗಳಲ್ಲಿ ಹೆಚ್ಚು ಹಿಂಸಾತ್ಮಕ ಮಾರ್ಗ ಅನುಸರಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಶ್ರೀಲಂಕಾ ಹಿಂದೂ ತಮಿಳು ಅಲ್ಪಸಂಖ್ಯಾತರ ವಿರುದ್ಧದ ಅಂತರಿಕ ಯುದ್ಧದಿಂದ ಹೊರಬಂದಿದೆ. ಮ್ಯಾನ್ಮಾರ್‍ನಲ್ಲಿ ರಾಷ್ಟ್ರೀಯವಾದಿಗಳು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವಾದ ರೋಹಿಂಗ್ಯಾಗಳ ವಿರುದ್ಧ ದ್ವೇಷ ಸಾಧಿಸಲು ಫೇಸ್‍ಬುಕ್ ಹೆಚ್ಚಾಗಿ ಬಳಸುತ್ತಾರೆ. ಮಾನವ ಹಕ್ಕು ಸಂಘಟನೆಗಳು ಹಲವು ವರ್ಷಗಳಿಂದ ಎಚ್ಚರಿಕೆ ನೀಡುತ್ತಿದ್ದು ಹಲವಾರು ಮನವಿಗಳನ್ನು ಸಲ್ಲಿಸಿದ್ದರೂ ಫೇಸ್‍ಬುಕ್ ಶ್ರೀಲಂಕಾ ಮತ್ತು ಮ್ಯಾನ್ಮಾರ್‍ನಲ್ಲಿ ತನ್ನ ಕಾರ್ಯಚಟುವಟಿಕೆಯನ್ನು ಬದಲಿಸಿಕೊಂಡಿಲ್ಲ.

ಯೂರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ಮೂರು ಪ್ರಮುಖ ಸಂಸ್ಥೆಗಳಾದ ಫೇಸ್‍ಬುಕ್, ಟ್ವಿಟರ್ ಮತ್ತು ಗೂಗಲ್ ಸಾಕಷ್ಟು ಆಂತರಿಕ ಸುಧಾರಣೆಗಳನ್ನು ಜಾರಿಗೊಳಿಸಲು ಶಿಫಾರಸು ಮಾಡಿವೆ. ಆದರೂ ಈ ಸಂಸ್ಥೆಗಳ ಪ್ರಯತ್ನಗಳಿಗೆ ಯೂರೋಪ್ ಮತ್ತು ಉತ್ತರ ಅಮೆರಿಕದ ಜನತೆಯ ಅನುಭವವೇ ಆಧಾರವಾಗಿದೆ. ಈ ಪ್ರಯತ್ನಗಳನ್ನು 2020ರ ಟ್ರಂಪ್ ಆಯ್ಕೆಯ ಹಿನ್ನೆಲೆಯಲ್ಲಿ ತೀರ್ಮಾನಿಸುವುದರ ಬದಲು, ತೈವಾನ್, ಶ್ರೀಲಂಕಾ ಮತ್ತು ಮ್ಯಾನ್ಮಾರ್ ಹಿನ್ನೆಲೆಯಲ್ಲಿ ನೋಡುವುದು ಒಳಿತು.

*ಲೇಖಕರು ವರ್ಜಿನಿಯಾ ವಿಶ್ವವಿದ್ಯಾಲಯದಲ್ಲಿ ಮಾಧ್ಯಮ ಅಧ್ಯಯನದ ಪ್ರಾಧ್ಯಾಪಕರು. ‘ಆ್ಯಂಟಿ ಸೋಷಿಯಲ್ ಮೀಡಿಯಾ: ಹೌ ಫೇಸ್ ಬುಕ್ ಡಿಸ್ ಕನೆಕ್ಟ್ಸ್ ಅಸ್ ಅಂಡ್ ಅಂಡರ್ಮೈನ್ಸ್ ಡೆಮಾಕ್ರಸಿ’ ಕೃತಿಯ ಕರ್ತೃ.

ಆಧಾರ: ದಿ ಗಾರ್ಡಿಯನ್
ಅನುವಾದ: ನಾ ದಿವಾಕರ

Leave a Reply

Your email address will not be published.