2021 ಇಸವಿಯಲ್ಲಿ ನೀವು ಬಯಸುವ ಆಶಾದಾಯಕ ಸಂಗತಿಗಳೇನು..?

2021 ಅಥವಾ ಮುಂದಿನ ಬೇರಾವುದೇ ವರುಷ 2020ರಷ್ಟು ಕೆಟ್ಟದಾಗಿರಲಾರದು. ಆದರೆ 2021ನೆಯ ಇಸವಿ ಕೆಲವು ಹೊಸತನ್ನೂ ಹೊತ್ತು ನಮಗೆ ಆಶಾದಾಯಕವಾಗಿ ಕಾಣುತ್ತಿದೆ. 2021ಕ್ಕೆ ಕಾಯುವ ನಮ್ಮ ಆತುರಕ್ಕೆ ಇಂಬು ಕೊಡುವಂತೆ ಇನ್ನೂ ಹಲವಾರು ಆಶಾದಾಯಕ ರಾಷ್ಟ್ರೀಯ-ಅಂತರರಾಷ್ಟ್ರಿಯ ಸಂಗತಿಗಳು ಮತ್ತು ಆರೋಗ್ಯ-ಆರ್ಥಿಕ ಬೆಳವಣಿಗೆಗಳು ನಮಗೆ ಗೋಚರವಾಗುತ್ತಿವೆ.

  • ಫೈಝರ್, ಮಾಡೆರ್ನಾ ಹಾಗೂ ಆಕ್ಸ್‍ಫರ್ಡ್ ಲಸಿಕೆಗಳು ತಮ್ಮ

            ಪ್ರಾಯೋಗಿಕ ಪರೀಕ್ಷೆಗಳನ್ನು ಮುಗಿಸಿ ನಮ್ಮ ದೇಹದ ರೋಗ ನಿರೋಧಕ

            ಶಕ್ತಿ ಹೆಚ್ಚಿಸಲು ಕಾಯುತ್ತಿವೆ.

  • ಲಸಿಕೆಗೆ ಮೊದಲೇ ದೇಶಾದ್ಯಂತ ಸಮೂಹ ರೋಗ ನಿರೋಧಕ ಶಕ್ತಿ

            ಪಸರಿಸಿರುವುದು ವ್ಯಕ್ತವಾಗಿದೆ.

  • ಕೋವಿಡ್ ಸೃಷ್ಟಿಸಿದ್ದ ಆರ್ಥಿಕ ಬಿಕ್ಕಟ್ಟು ನಿಧಾನವಾಗಿಯಾದರೂ ಪರಿಹಾರ

            ಕಾಣುವಂತಾಗಿದೆ.

  • ಅಮೆರಿಕದಲ್ಲಿ ಹುಚ್ಚುದೊರೆ ಡಾನಲ್ಡ್ ಟ್ರಂಪ್ ಆಳ್ವಿಕೆ ಮುಗಿದು

            ಉದಾರವಾದಿ ಜೋ ಬೈಡೆನ್ ಆಡಳಿತ ಶುರುವಾಗಲಿದೆ.

  • ಕಮಲಾ ಹ್ಯಾರಿಸ್ ಸೇರಿದಂತೆ ಡೆಮಾಕ್ರೆಟಿಕ್ ಪಕ್ಷದ ಗೆಲುವು ಪುರೋಗಾಮಿ

            ಹೋರಾಟಗಳಿಗೆ ಸಂದ ಜಯವಾಗಿದೆ. ಪರಿಸರ ಪ್ರಜ್ಞೆ ಹಾಗೂ ಜಾಗತಿಕ

            ಹೊಣೆಗಾರಿಕೆಗೆ ಬಲ ನೀಡಿದಂತಾಗಿದೆ.

  • ಅದಾರ್ ಪೂನಾವಾಲಾ, ಸೋನು ಸೂದ್ ಸೇರಿದಂತೆ ನಿರಾಡಂಬರದಿಂದ

            ಆತಂಕ-ಸಂಕಟದ ಸಮಯದಲ್ಲಿ ದೇಶದ ನಿಸ್ವಾರ್ಥ ಸೇವಿಗಳಾಗಿ

            ಮುಂದೆ ಬಂದ ಕೋವಿಡ್ ವಾರಿಯರ್ಸ್‍ಗಳು ಅಚ್ಚರಿಯ ಆಶಾದಾಯಕ

            ವ್ಯಕ್ತಿಗಳಾಗಿದ್ದಾರೆ.

2021ನೇ ಇಸವಿಯಲ್ಲಿ ನಮಗೆ ಕಾಣುತ್ತಿರುವ ಮೇಲಿನ ಕೆಲವು ಅಂಶಗಳ ಜೊತೆಗೆ ವಿವಿಧ ಹಿನ್ನೆಲೆಯ ಹತ್ತಾರು ಜನರಿಗೆÀ ಆಶಾದಾಯಕವಾಗಿ ಕಾಣುವ ಸಂಗತಿ-ಸಾಧ್ಯತೆಗಳನ್ನು ಈ ಸಂಚಿಕೆಯ ಚರ್ಚೆಯಲ್ಲಿ ಕಾಣಬಹುದು.

Leave a Reply

Your email address will not be published.