-ಕೆ.ಪಿ.ಸುರೇಶ ರಾಜ್ಯಾಧಿಕಾರ ಗಳಿಸಿ ಉಳಿಸಿಕೊಳ್ಳುವುದು ತನ್ನ ಅಜೆಂಡಾಕ್ಕೆ ಬಲು ಮುಖ್ಯ ಎಂದು ಆರೆಸ್ಸೆಸ್ ಭಾವಿಸಿದ ಕ್ಷಣವೇ ಅದಕ್ಕಿದ್ದ ಆತ್ಮ ಶುದ್ಧತೆ ಮಾಯವಾಯಿತು. ಈಗೇನಿದ್ದರೂ ಮುಸ್ಲಿಂ ವಿರೋಧಿ ಪ್ರಚಾರ ನಡೆಸುತ್ತಾ ಚುನಾವಣೆಯಲ್ಲಿ ಭಾಜಪವನ್ನು ಗೆಲ್ಲಿಸುವುದಷ್ಟೇ ಆರೆಸ್ಸೆಸ್ಸಿನ ಕೆಲಸ. ಅಧಿಕಾರ ಪಡೆದ ತನ್ನ ಪಕ್ಷ ಏನು ಮಾಡುತ್ತಿದೆ ಎಂಬುದನ್ನು ಮಾನಿಟರ್ ಮಾಡುವ ಕೆಲಸವನ್ನು ಆರೆಸ್ಸೆಸ್ ಎಂದೋ ಕೈಬಿಟ್ಟಾಗಿದೆ. ಆರೆಸ್ಸೆಸ್ಸಿಗೆ ತಾನು ಪ್ರತಿಪಾದಿಸುವ “ನೈಜ ರಾಷ್ಟ್ರೀಯತೆ” (ಹಾಗೊಂದು ಇಲ್ಲ! ಆದರೂ) ಬಗ್ಗೆ ಕೂಡಾ ತುಂಬಾ ಬದ್ಧತೆ ಇರುವಂತೆ ಕಂಡಿಲ್ಲ. ಅಮೆರಿಕೆಯ ಶ್ವೇತ […]
-ಪುರುಷೋತ್ತಮ ಬಿಳಿಮಲೆ ಸಾಮಾನ್ಯವಾಗಿ ಎಲ್ಲದರ ಬಗ್ಗೆಯೂ ಮಾತಾಡುವ ಭಾರತೀಯರು ಸಂಘದ ಬಗ್ಗೆ ಬಹಿರಂಗವಾಗಿ ಮಾತಾಡುವುದಿಲ್ಲ. ಒಂದು ವೇಳೆ ಮಾತಾಡಿದರೂ ಸ್ವರ ತಗ್ಗಿಸಿ ಹೆದರಿಕೊಂಡು ಮಾತಾಡುತ್ತಾರೆ. ಇಂತಹ ಭಯ ಹುಟ್ಟಿಸುವ ವಾತಾವರಣವನ್ನು ಅದು ಹುಟ್ಟು ಹಾಕಿದ್ದಂತೂ ನಿಜ. ಸಮಾಜವು ಮುಂದಕ್ಕೆ ಚಲಿಸುತ್ತಿದ್ದಂತೆ ಜನರನ್ನು ಹಿಂದಕ್ಕೆ ಕೊಂಡೊಯ್ಯುವ ಕೆಲಸವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕಳೆದ 96 ವರ್ಷಗಳಿಂದ ಮಾಡುತ್ತಲೇ ಬರುತ್ತಿದೆ. ನಾವ್ಯಾರೂ ಬದುಕಿರದ ಒಂದು ಕಾಲದ ಬಗ್ಗೆ ಅದಕ್ಕೆ ಅದಮ್ಯ ವ್ಯಾಮೋಹ. ವರ್ತಮಾನದ ಚೌಕಟ್ಟಿನಲ್ಲಿ ಕಲ್ಪಿಸಿಕೊಂಡ ಇತಿಹಾಸ ಮತ್ತು […]
-ಡಾ.ಬಿ.ವಿ.ವಸಂತಕುಮಾರ್ ಆರ್.ಎಸ್.ಎಸ್. ಮಾಡಿದ ಬಹುದೊಡ್ಡ ತಪ್ಪೆಂದರೆ ಜಾತಿ, ಮತ, ಪಂಥ, ಪ್ರದೇಶ, ಭಾμÉ, ಬಣ್ಣ, ಸಂಸ್ಕೃತಿಗಳೆಲ್ಲವನ್ನೂ ಮೀರಿ ಹಿಂದೂಗಳು ಒಂದಾಗುವಂತೆ ಮಾಡಿದ್ದು. ಹಾಗಾಗಿ ಎಲ್ಲಾ ಹಿಂದೂ ವಿರೋಧಿಗಳೂ ಆರ್.ಎಸ್.ಎಸ್.ನ್ನು ನಿರಂತರವಾಗಿ ಖಂಡಿಸುತ್ತಾ ಬಂದಿದ್ದಾರೆ. ಸಮಾಜಮುಖಿ ಪತ್ರಿಕೆ ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಾಡುತ್ತಿರುವ ತಪ್ಪುಗಳೇನು…?’ ಎಂಬ ಪ್ರಶ್ನೆಯೊಂದಿಗೆ ಚರ್ಚೆಗೆ ವೇದಿಕೆ ಕಲ್ಪಿಸಿದೆ. ಈ ಚರ್ಚೆಯಿಂದ ಪರಸ್ಪರರನ್ನು ಹೆಚ್ಚೆಚ್ಚು ಅರ್ಥ ಮಾಡಿಕೊಳ್ಳಲು ನೆರವಾಗಿ ಅಪಾರ್ಥಗಳು ದೂರವಾಗಲಿ. ವಿರೋಧಕ್ಕಾಗಿಯೇ ವಿರೋಧಿಸುವ ವಿಕೃತವಾದಿಗಳನ್ನು ಯಾವ ಪ್ರಕೃತಿಯೂ, ಸಂಸ್ಕøತಿಯೂ, ಚರ್ಚೆಯೂ ಸರಿಪಡಿಸಲಾಗದು. ಏಕೆಂದರೆ, […]
-ಸೌಮ್ಯಾ ಕೋಡೂರು ಕ್ರೈಸ್ತರು ಮತ್ತು ಕಮ್ಯುನಿಸ್ಟರಿಗಿಂತ ಸಂಘದ ನೇರ ದ್ವೇಷಕ್ಕೆ ಗುರಿಯಾಗಿರುವವರು ನೆರೆಹೊರೆಯ ಮುಸಲ್ಮಾನರು. ಇಸ್ಲಾಂ ಕುರಿತಾದ ಸಂಘದ ಈ ಬಗೆಯ ದ್ವೇಷ ಪರೋಕ್ಷವಾಗಿ ಮುಸಲ್ಮಾನರ ಒಗ್ಗಟ್ಟನ್ನು ಬಲಪಡಿಸುತ್ತಿದೆಯೇ ಹೊರತು, ಹಿಂದೂಗಳನ್ನು ಒಂದಾಗಿಸುತ್ತಿಲ್ಲ ಎಂಬುದು ಗಮನಾರ್ಹ. ಮುಸಲ್ಮಾನರ ಈ ಬಗೆಯ ಒಗ್ಗಟ್ಟು ಇನ್ನೊಂದು ಬಗೆಯ ಅತಿರೇಕಕ್ಕೆ ಎಡೆಮಾಡಿಕೊಟ್ಟಿದೆ! `ರಾಷ್ಟ್ರೀಯ ಸ್ವಯಂಸೇವಕ ಸಂಘ’ದ ಹೆಸರೇ ಹೇಳುವಂತೆ ಸ್ವಯಂ ಪ್ರೇರಣೆಯಿಂದ ಸೇವೆ ಸಲ್ಲಿಸುವ ಕಾರ್ಯಕರ್ತರೆ ಈ ಸಂಘ ಇಲ್ಲಿಯವರೆಗೆ ಸಾಗಿಬರಲು ಕಾರಣಕರ್ತರು. ಆದರೆ ಅವರ ಧ್ಯೇಯ ಕೇವಲ ಬಲಿಷ್ಠ ರಾಷ್ಟ್ರವನ್ನು […]
-ಡಾ. ಜ್ಯೋತಿ ಮಾರ್ಚ್ 08 ವಿಶ್ವ ಮಹಿಳಾ ದಿನ. ನಮ್ಮ ದೇಶದ ಮಟ್ಟಿಗೆ ಹೇಳುವುದಾದರೆ, ಈ ಸಂದರ್ಭದಲ್ಲಿ ಆಗಬೇಕಾದ ಮುಖ್ಯ ಚರ್ಚೆ- ಹೆಚ್ಚುತ್ತಿರುವ ಹಿಂದುತ್ವ ಪ್ರಾಬಲ್ಯ, ಮಹಿಳಾ ಸಬಲೀಕರಣಕ್ಕೆ ಪೂರಕವೇ ಅಥವಾ ಮಾರಕವೇ? ಮಾರ್ಚ್ 08 ವಿಶ್ವ ಮಹಿಳಾ ದಿನ. ಆ ದಿನದಂದು ಸಾಮಾನ್ಯವಾಗಿ, ಪ್ರಪಂಚದಾದ್ಯಂತ ಸಂಘ ಸಂಸ್ಥೆಗಳು ಇತಿಹಾಸದ ಮಹಿಳಾ ಸಾಧಕಿಯರನ್ನು ನೆನಪಿಸಿಕೊಳ್ಳುತ್ತಾ, ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆ ಮುನ್ನೆಡೆಯಬೇಕಾದ ದಾರಿಯ ರೂಪುರೇಶೆಗಳನ್ನು ವಿಶ್ಲೇಸುತ್ತವೆ. ನಮ್ಮ ದೇಶದ ಮಟ್ಟಿಗೆ ಹೇಳುವುದಾದರೆ, ಈ ಸಂದರ್ಭದಲ್ಲಿ ಆಗಬೇಕಾದ ಮುಖ್ಯ ಚರ್ಚೆ-ಹೆಚ್ಚುತ್ತಿರುವ […]
-ಪ್ರೊ.ದೇವಿ ಶ್ರೀಧರ್ ಅನು: ಹೇಮಂತ್ ಎಲ್. ವಿಶ್ವವ್ಯಾಪಿಯಾಗಿರುವ ಸಾಂಕ್ರಾಮಿಕ ರೋಗಕ್ಕೆ ಅಂತ್ಯ ಹಾಡಲು ಸಂಚಾರ ನಿಯಂತ್ರಣ ಹೇರುವುದು ಮತ್ತು ಎಲ್ಲಾ ದೇಶಗಳಿಗೂ ಲಸಿಕೆ ಲಭ್ಯವಾಗುವಂತೆ ಮಾಡುವುದು ಬಹುಮುಖ್ಯ. ವಸಂತಕಾಲದ ಅಸ್ತವ್ಯಸ್ತತೆಗೆ ಈಗಾಗಲೇ ಹಲವಾರು ಮಂದಿ ತಮ್ಮ ಆಶಾಭಾವನೆಗಳನ್ನು ಹೊಂದಿಸಿಕೊಂಡಿದ್ದರೂ, ಮತ್ತಷ್ಟು ಜನ ಸದ್ದಿಲ್ಲದೆ ಬೇಸಿಗೆಗೆ ಅಥವಾ ಶರತ್ಕಾಲದ ಒಳಗೆ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್ (ಯುನೈಟೆಡ್ ಕಿಂಗ್ಡಮ್- ಯುಕೆ)ನ ಪರಿಸ್ಥಿತಿ ಸುಧಾರಿಸಬಹುದೆಂಬ ಅಂದಾಜಿನಲ್ಲಿದ್ದಾರೆ. ಅವರ ಆತ್ಮವಿಶ್ವಾಸವಾದರೂ ಎಷ್ಟರ ಮಟ್ಟಿಗೆ ಸರಿ? ಲಾಕ್ ಡೌನ್ನಂತಹ ಕ್ರಮಗಳತ್ತ ಮತ್ತೆ ಜಾರದಿರಲು […]
-ಮಲ್ಲಿಕಾ ಜೋಷಿ ಅನುವಾದ: ನಾ ದಿವಾಕರ ದೆಹಲಿಯಲ್ಲಿ ನಡೆಯುತ್ತಿರುವ ರೈತ ಮುಷ್ಕರವನ್ನು ಬೆಂಬಲಿಸುವ ನಿಟ್ಟಿನಲ್ಲಿ ಸಿದ್ಧಪಡಿಸಲಾಗಿರುವ, ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಶೇರ್ ಮಾಡಿರುವ ಟೂಲ್ ಕಿಟ್ ವಿರುದ್ಧ ದೆಹಲಿಯ ಸೈಬರ್ ಅಪರಾಧ ಪಡೆಯ ಪೊಲೀಸರು ರಾಜದ್ರೋಹ, ಕ್ರಿಮಿನಲ್ ಪಿತೂರಿ ಮತ್ತು ದ್ವೇಷ ಹರಡುವ ಆರೋಪಗಳನ್ನು ಹೊರಿಸಿ ಎಫ್ಐಆರ್ ದಾಖಲಿಸಿದ್ದಾರೆ. ಈ ಎಫ್ಐಆರ್ನಲ್ಲಿ ಯಾವುದೇ ವ್ಯಕ್ತಿಯನ್ನು ಹೆಸರಿಸಿಲ್ಲವಾದರೂ, ವಿಶೇಷ ಕ್ರೈಂಬ್ರಾಂಚಿನ ಅಧಿಕಾರಿ ಪ್ರವೀರ್ ರಂಜನ್ ಹೇಳಿರುವಂತೆ, ಈ ಟೂಲ್ ಕಿಟ್ ಸಿದ್ಧಪಡಿಸುವಲ್ಲಿ ಪೊಯೆಟಿಕ್ ಜಸ್ಟಿಸ್ ಫೌಂಡೇಷನ್ ಎಂಬ […]
-ಎಂ.ಕೆ.ಆನಂದರಾಜೇ ಅರಸ್ ಸಾಮಾಜಿಕ ಮಾಧ್ಯಮಗಳ ಶಕ್ತಿ ಜಗತ್ತನ್ನೇ ಅಲುಗಾಡಿಸುತ್ತಿದೆ. ಇದು ಸಕಾರಾತ್ಮಕದ್ದಾದರೆ ಮನುಷ್ಯ ಈವರೆಗೆ ಕಂಡುಹಿಡಿದಿರುವ ಅತ್ಯಂತ ಪ್ರಭಾವಿ ಮಾಧ್ಯಮವಾಗಿ ಉಳಿದುಬಿಡುತ್ತದೆ. ಒಂದು ಪಕ್ಷ ಇದರ ಋಣಾತ್ಮಕ ಗುಣಗಳು ಹೆಚ್ಚಾದಲ್ಲಿ, ಜಗತ್ತು ಈ ಮಾಧ್ಯಮಗಳಿಂದ ಉದ್ಭವಿಸಬಹುದಾದ ಜಟಿಲ ಸಮಸ್ಯೆಗಳನ್ನು ಬಗೆಹರಿಸುವುದರಲ್ಲೇ ಮುಳುಗಬೇಕಾಗುತ್ತದೆ. ಗ್ರೀssಸ್ ಪುರಾಣದಲ್ಲಿ ಪ್ರಾಚೀನ ಗ್ರೀಸ್ ಕವಿ ಹೆಸಿಯಾಡ್ನ ಪ್ರಕಾರ ಪ್ರಮೀತಿಯಸ್ ಸ್ವರ್ಗದಿಂದ ಬೆಂಕಿ ಕದ್ದಾಗ, ಗ್ರೀಸರ ದೇವತೆಗಳ ರಾಜ ಜಿûೀಯಸ್ ಪ್ರಮೀತಿಯಸ್ನ ಸಹೋದರ ಎಪಿಮೆಥಿಯಸ್ಗೆ ಪ್ಯಾಂಡೋರಳನ್ನು ಉಡುಗೆಯಾಗಿ ನೀಡಿ ಸೇಡು ತೀರಿಸಿಕೊಳ್ಳುತ್ತಾನೆ. ಪ್ಯಾಂಡೋರ, ಅಗ್ನಿ, […]
-ಪುರುಷೋತ್ತಮ ಆಲದಹಳ್ಳಿ 2019ರಲ್ಲಿ ಮ್ಯಾನ್ಮಾರ್ನ (ಬರ್ಮಾ) ಆಂಗ್ಸಾನ್ ಸೂಚಿಯವರು ರೊಹಿಂಗ್ಯಾ ನರಹತ್ಯೆಯ ವಿಷಯದಲ್ಲಿ ಅಂತರರಾಷ್ಟ್ರೀಯ ನ್ಯಾಯಿಕ ಸಂಸ್ಥೆಯ ಮುಂದೆ ಬರ್ಮಾದ ಸೈನ್ಯವನ್ನು ಬೆಂಬಲಿಸಿ ಮಾತನಾಡಿದ್ದಾಗ ಇಡೀ ವಿಶ್ವವೇ ಆಂಗ್ಸಾನ್ ಸೂಕಿಯವರನ್ನು ಟೀಕಿಸಿ ಮಾತನಾಡಿತ್ತು. ಮ್ಯಾನ್ಮಾರ್ನ ಪ್ರಜಾತಂತ್ರದ ಚಳುವಳಿಯ ಸಂದರ್ಭದಲ್ಲಿ ತಾವು ಆಂಗ್ಸಾನ್ ಸೂಕಿಗೆ ನೀಡಿದ್ದ ಬೆಂಬಲ ವ್ಯರ್ಥ ಹಾಗೂ ನಿರರ್ಥಕವಾಗಿತ್ತು ಎಂದು ವಾದಿಸಲಾಗಿತ್ತು. ಆದರೆ ಮ್ಯಾನ್ಮಾರ್ನ ಶೈಶವ ಪ್ರಜಾಪ್ರಭುತ್ವವನ್ನು ಉಳಿಸಲು ಸೂಚಿಯವರು ಎಷ್ಟೆಲ್ಲಾ ತ್ಯಾಗ ಮಾಡುತ್ತಿದ್ದಾರೆ ಹಾಗೂ ಎಷ್ಟು ಒತ್ತಡಕ್ಕೆ ಒಳಗಾಗಿದ್ದಾರೆ ಎಂಬುದನ್ನು ವಿಶ್ವದ ಮಾಧ್ಯಮಗಳು ಮರೆತಿದ್ದವು. […]
-ರಂಗಸ್ವಾಮಿ ಮೂಕನಹಳ್ಳಿ ‘ಹಣ ಎಂದಿಗೂ ಮುಖ್ಯವಲ್ಲ’ ಎನ್ನುತ್ತಾರೆ ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿ ಇಲಾನ್ ಮಸ್ಕ್; ಇದು ಅವರ ಎಲ್ಲಾ ಉದ್ದಿಮೆಗಳ ಪ್ರಥಮ ಮಂತ್ರ ಕೂಡಾ! ಇಲಾನ್ ಮಸ್ಕ್ ಜನವರಿ 8, 2021 ರಂದು ಅಮೆಜಾನ್ ಸ್ಥಾಪಕ ಜೆಫ್ ಬೇಸೂಸ್ ಅವರನ್ನ ಹಿಂದಿಕ್ಕಿ ಜಗತ್ತಿನ ಅತ್ಯಂತ ಶ್ರೀಮಂತ ಎನ್ನುವ ಪಟ್ಟವನ್ನ ಪಡೆದುಕೊಂಡಿದ್ದಾರೆ. ಅವರ ಎಲೆಕ್ಟ್ರಿಕ್ ಕಾರು ಉತ್ಪಾದನೆ ಮಾಡುವ ಸಂಸ್ಥೆ ಟೆಸ್ಲಾ ಷೇರುಗಳು ಏರಿಕೆ ಕಂಡದ್ದು ಇದಕ್ಕೆ ಕಾರಣ. ವರ್ಷದ ಹಿಂದೆ ಮಸ್ಕ್ ಅವರು ಬೇಸೂಸ್ ಅವರನ್ನ […]
-ಸುಧೀಂದ್ರ ಕುಲಕರ್ಣಿ ಈ ಮತ್ರ್ಯಲೋಕದಲ್ಲಿ ಸಕಲವೂ ನಾಶವಾಗುತ್ತವೆ. ಆದರೆ ಚಿಂತನೆಗಳು ಮತ್ತು ಕನಸುಗಳು ನಾಶವಾಗುವುದಿಲ್ಲ. ಈ ಜಗತ್ತಿನಲ್ಲಿ ಯಾವ ಚಿಂತನೆಯೂ ನೋವಿನ ಮತ್ತು ತ್ಯಾಗದ ಸತ್ವಪರೀಕ್ಷೆಯನ್ನು ದಾಟದೆ ಪರಿಪೂರ್ಣವಾಗಿಲ್ಲ ನೇತಾಜಿ ಸುಭಾಷ್ ಚಂದ್ರ ಬೋಸ್ ಇದೀಗ ಮತ್ತೆ ಚಾಲ್ತಿಗೆ ಬಂದಿದ್ದಾರೆ. ಇದು ಅವರ 125ನೇ ಹುಟ್ಟುಹಬ್ಬದ ಸಂದರ್ಭ. ವಿವಿಧ ರಾಜಕೀಯ ಪಕ್ಷಗಳು ನೇತಾಜಿ ಸ್ಮರಣೆಯ ನೆಪದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಿವೆ. ಈ ಪಕ್ಷಗಳಿಗೆ ಕಾಲದ ಅಗತ್ಯ ಮತ್ತು ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಗಾಂಧಿ, ಪಟೇಲ್, ನೇತಾಜಿ […]
-ರಾಜೇಂದ್ರ ಚೆನ್ನಿ ಸಮಕಾಲೀನ ಜಗತ್ತಿನ ಬಹು ಭಾಗಗಳು, ರಾಷ್ಟ್ರಗಳು ಹಿಂಸೆ ಹಾಗೂ ಆತ್ಮವಿನಾಶದ ದಾರಿಯಲ್ಲಿ ಅತಿ ಉತ್ಸಾಹದಿಂದ ಸಾಗುತ್ತಿರುವ ಈ ಕಾಲದಲ್ಲಿ ಅಶ್ವತ್ಥಾಮನೂ ನಮ್ಮ ಸಮಕಾಲೀನನಾಗಿ ಕಾಣವುದು ನಾಟಕದ ಶಕ್ತಿಯೂ ಹೌದು. ನಮ್ಮ ಚರಿತ್ರೆಯ ದೌರ್ಭಾಗ್ಯವೂ ಹೌದು. ಸಹಗಮನ ಮತ್ತು ಸಾಯುವನೇ ಚಿರಂಜೀವಿ (ಎರಡು ನಾಟಕಗಳು) ಶಶಿಧರ ಭಾರಿಘಾಟ್ ಮುದ್ರಣ: 2021 ಪುಟ: 112 ಬೆಲೆ: ರೂ.90 ಅಂಕುರ ಪ್ರಕಾಶನ ನಂ.656, 2ನೇ ಮೇನ್, 11ನೇ ಬ್ಲಾಕ್ ನಾಗರಬಾವಿ 2ನೇ ಹಂತ, ಬೆಂಗಳೂರು-560072 ಶಶಿಧರ ಭಾರಿಘಾಟ್ ಅವರು […]
-ಮಂಜುನಾಥ ಡಿ.ಡೊಳ್ಳಿನ ಹಳ್ಳಿಗಾಡಿನ ಬಡ ಪ್ರತಿಭೆಯೊಂದು ಸೌಲಭ್ಯ, ಪೆÇ್ರೀತ್ಸಾಹಗಳ ಕೊರತೆಯ ಮಧ್ಯೆಯೂ ತನ್ನ ಅಂತರಾಳದಲ್ಲಿದ್ದ ಛಲವೊಂದರಿಂದಲೇ ಸಾಧನೆಯ ಹಾದಿಯನ್ನು ಕ್ರಮಿಸಿ, ಗಮ್ಯ ತಲುಪಿದ ಬಗೆಯನ್ನು ಈ ಕೃತಿ ದಾಖಲಿಸಿದೆ. ಇದು ಭವಿಷ್ಯತ್ತನ್ನು ಕಟ್ಟಿಕೊಳ್ಳಲು ಕಾತರರಾಗಿರುವ ಯುವ ಮನಸ್ಸುಗಳಿಗೆ ಕೈ ದೀವಿಗೆಯಂತಿದೆ. ಹಾದಿಗಲ್ಲು ಆತ್ಮವೃತ್ತಾಂತದ ಮೊದಲ ಚರಣ ಕೆ.ಎ.ದಯಾನಂದ ಮುದ್ರಣ: 2020 ಪುಟ: 292 ಬೆಲೆ: ರೂ.250 ಸಮನ್ವಿತ ಪ್ರಕಾಶನ ಮೊ: 9844192952 ಹಿರಿಯ ಐಎಎಸ್ ಅಧಿಕಾರಿ ಕೆ.ಎ.ದಯಾನಂದ ಅವರ ಆತ್ಮವೃತ್ತಾಂತದ ಮೊದಲ ಚರಣ “ಹಾದಿಗಲ್ಲು”. ಮುದ್ರಣಗೊಂಡ ಕೆಲವೇ […]
-ಡಾ. ಬಸು ಬೇವಿನಗಿಡದ ಈ ಸಂಕಲನದ ವೈಶಿಷ್ಟವೆಂದರೆ ಇದರೊಳಗೆ ಹುದುಗಿರುವ ಭಾವ ಸಾಂದ್ರತೆ, ಕುತೂಹಲಕಾರಿ ನಿರೂಪಣೆ ಹಾಗೂ ಜೀವಪರವಾಗಿರುವ ಹೆಣ್ಣಿನ ದೃಷ್ಟಿಕೋನವೊಂದು ಎಲ್ಲ ಪ್ರಬಂಧಗಳಲ್ಲಿ ಅಡಗಿ ಕುಳಿತಿರುವುದು. ಬಗೆದಷ್ಟು ಜೀವಜಲ ಪ್ರಬಂಧಗಳು ಮಾಲತಿ ಪಟ್ಟಣಶೆಟ್ಟಿ ಪುಟ: 156 ಬೆಲೆ: ರೂ. 120 ಪ್ರಥಮ ಮುದ್ರಣ: ನವೆಂಬರ್ 2020 ಪ್ರಕಾಶನ: ಸಪ್ನಾ ಬುಕ್ ಹೌಸ್ ಸಂಪರ್ಕ: 94801 99214 ಒಳ್ಳೆಯ ಗದ್ಯದಲ್ಲಿ ಹೇಳಿದ್ದನ್ನು ತೀರ ಸಾಮಾನ್ಯವೆನಿಸುವ ಪದ್ಯದಲ್ಲಿ ಹೇಳಬೇಡ ಎಂಬುದು ಪ್ರಸಿದ್ಧ ಇಂಗ್ಲಿಷ್ ಕವಿ ಎಜ್ರಾ ಪೌಂಡ್ ಅವರ […]
ಇಂತಿ ನಮಸ್ಕಾರಗಳು ಕವನ ಸಂಕಲನ ಪ್ರಕಾಶ್ ಕೊಡಗನೂರ್ ಪುಟ: 128 ಬೆಲೆ: ರೂ.150 ಪ್ರಥಮ ಮುದ್ರಣ: 2019 ಪ್ರಕೃತಿ ಪ್ರಕಾಶನ, ರೈಲ್ವೇ ನಿಲ್ದಾಣ ಹತ್ತಿರ, ಕೊಡಗನೂರು, ದಾವಣಗೆರೆ-577534 ಭಲೇ ಭಾರತ, ನಿವೇದನೆ ಮಹಾಸಂಗಮ, ಅಮರ, ಅರುಣೋದಯ, ಮಹಾಪತನ, ನಮ್ಮೂರ ಬಾಷ, ಇತರ 40 ಕವನಗಳು ಈ ಸಂಕಲನದಲ್ಲಿವೆ. ಬಂಡಾಯದ ನಡುವೆ ಮಾನವೀಯತೆಯ ಪದರು ಹೊದ್ದಿರುವ ಕವನಗಳಿವು. ಸಂಗೀತಗಾರರು ಹಾಸ್ಯ ಪ್ರಸಂಗಗಳು ಎಸ್.ಶಶಿಧರ್ ಪುಟ: 115 ಬೆಲೆ: ರೂ.120 ಪ್ರಥಮ ಮುದ್ರಣ: 2015 ಎಸ್.ಶಶಿಧರ್, 43/220, ಈಸ್ಟ್ಪಾರ್ಕ್ ರಸ್ತೆ, […]
-ಹುರುಕಡ್ಲಿ ಶಿವಕುಮಾರ ರಂಗಪ್ಪನ ಜಾತ್ರೆ ಮುಗಿಸಿ ಊರಿಗೆ ಬರುವಷ್ಟರಲ್ಲೇ ಕತ್ತಲಾಗಿಬಿಡುತ್ತಿತ್ತು. ಆದರೆ ಪೂರ್ವ ದಿಗಂತದಲ್ಲಿ ಹುಣ್ಣಿಮೆಯ ಚಂದಿರ ಬೆಳಕು ಚೆಲ್ಲುತ್ತಾ ಬಂದು ಕತ್ತಲೆಯನ್ನು ಓಡಿಸುತ್ತಿದ್ದ. ಮರುದಿನ ಬೆಳಿಗ್ಗೆ ಬಣ್ಣದೋಕುಳಿ ಆಡಲು ಸನ್ನದ್ಧರಾಗಿ ನಮ್ಮೂರೆಲ್ಲಾ ನಿದ್ರೆಗೆ ಜಾರುತ್ತಿತ್ತು. ಇದು ಈಗಲೂ ಮುಂದುವರೆದೇ ಇದೆ. ಆದರೆ… ಕರೋನಾ ಹಾವಳಿಯಲ್ಲಿ ಈ ವರ್ಷ ಕ್ಯಾ ಕರೋನಾ…? ತಂಬ್ರಹಳ್ಳಿ, ಬಾಚಿಗೊಂಡನಹಳ್ಳಿ, ಮುತ್ಕೂರು, ಕಿತ್ತನೂರು, ರಾಮೇಶ್ವರಬಂಡಿ, ತೆಲುಗೋಳಿ… ಹೀಗೆ ಹತ್ತಾರು ಹಳ್ಳಿಯ ರೈತಾಪಿ ಕುಟುಂಬಗಳಿಗೆ ಬಳ್ಳಾರಿ ಜಿಲ್ಲೆ ತಂಬ್ರಹಳ್ಳಿಯ ರಂಗಪ್ಪನ ಜಾತ್ರೆಯೆಂದರೆ ವರ್ಷಕ್ಕೊಮ್ಮೆ ಸಿಗುವ […]
-ಸ್ಮಿತಾ ಅಮೃತರಾಜ್ ಉಯ್ಯಾಲೆ ಆಡುತ್ತಿದ್ದ ಸಮಯದಲ್ಲಿ ಎರಡು ಹಗ್ಗವನ್ನು ಬಲವಾಗಿ ಹಿಡಿದುಕೊಂಡು, ಕಣ್ಣನ್ನು ಗಟ್ಟಿಯಾಗಿ ಮುಚ್ಚಿಕೊಂಡು, ಅದೆಷ್ಟು ರಭಸದಲ್ಲಿ ತೂಗಿಸಿಕೊಳ್ಳುತ್ತಿದ್ದೆವೆಂದರೆ ಮುಗಿಲಿಗೆ ಕಾಲು ತಾಕಲು ಸ್ವಲ್ಪವೇ ಕಡಿಮೆ ಅಂತ ನಿರಾಶೆಯಾಗಿ ಮತ್ತಷ್ಟು ರಭಸದಲಿ ಒಯ್ದು ಕಾಲನ್ನು ಮತ್ತಷ್ಟು ಏರಿಸಲು ಪ್ರಯತ್ನಿಸುತ್ತಿದ್ದೆವು ನಮ್ಮ ತೋಟದಲ್ಲಿ ಮಂಗಗಳ ಕಾಟ ಜಾಸ್ತಿ. ಲೆಕ್ಕ ಹಾಕೋಕೆ ಸಾಧ್ಯವಾಗಿದ್ದರೆ ಬಹುಶಃ; ನಮ್ಮೂರಿನ ಜನಸಂಖ್ಯೆಗಿಂತ ಮಂಗಗಳ ಸಂಖ್ಯೆಗಳೇ ಜಾಸ್ತಿ ಸಿಗಬಹುದು ಅಂದುಕೊಂಡಿರುವೆ. ಮಂಗಗಳು ಎಷ್ಟಾದರೂ ಸಂಖ್ಯೆ ಏರಿಸಿಕೊಳ್ಳಲಿ, ಅದಕ್ಕೆ ನಮ್ಮ ತಕರಾರುಗಳೇನೂ ಇಲ್ಲ. ಆದರೆ ಅದರ […]
-ಬಾಲಚಂದ್ರ ಬಿ.ಎನ್. ಮೀಸಲಾತಿಗಾಗಿ ಹೋರಾಡುವವರ ಹಿಂಡಿನ ನಡುವೆ ತೂರಿಕೊಂಡು ಬಂದ ತಂಡ ಮುಖ್ಯಮಂತ್ರಿಗೆ ವಿಚಿತ್ರ ಮನವಿ ಸಲ್ಲಿಸಿತು. ಆ ಮನವಿ ಕೇಳಿದ ಮುಖ್ಯಮಂತ್ರಿ ಮತ್ತು ಅವರ ಸುಪುತ್ರ ಆಘಾತಕ್ಕೊಳಗಾದರು! ಮುಖ್ಯಮಂತ್ರಿಗಳು ತೂಕಡಿಸುತ್ತಾ ಕುಳಿತಿರುವಾಗ ಇದ್ದಕ್ಕಿದ್ದಂತೆಯೇ ಸುಪುತ್ರ ಬಂದು ಎಬ್ಬಿಸಿದ. ಕಣ್ಣೊರೆಸಿಕೊಂಡು ಎದ್ದ ಮುಖ್ಯಮಂತ್ರಿಗಳು ಕಣ್ಣ ಮುಂದಿದ್ದ ಫೈಲುಗಳ ರಾಶಿಯತ್ತೊಮ್ಮೆ ದುರಾಶಾಪೂರಿತ ದೃಷ್ಟಿಯನ್ನು ಹಾಯಿಸಿ, ‘ಯಾವ ಏರಿಯಾ ಮಗನೇ?’ ಎಂದು ಪ್ರಶ್ನಿಸಿದರು. ‘ಏರಿಯಾ? ಅಪ್ಪಾ ಇನ್ನೂ ಎಲ್ಲಿದ್ದೀರಾ?’ ಎಂದು ಮಗ ಕರುಣಾಜನಕವಾಗಿ ಪ್ರಶ್ನಿಸಿದ. ಇತ್ತೀಚಿಗೆ ಅರಳುಮರುಳಾಗಿ ವರ್ತಿಸುತ್ತಿದ್ದ ಮುಖ್ಯಮಂತ್ರಿಗಳೊಮ್ಮೆ […]
-ಸುಬ್ರಾಯ ಮತ್ತೀಹಳ್ಳಿ ಇತ್ತೀಚೆಗೆ ಶಿರಸಿಯಲ್ಲಿ ಡಾ.ಶ್ರೀಪಾದ ಭಟ್ ನಿರ್ದೇಶನದಲ್ಲಿ ‘ಯಶೋಧರಾ’ ನಾಟಕ ಪ್ರದರ್ಶನಗೊಂಡಿತು. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ತೊಂಬತ್ತು ವರ್ಷಗಳ ಹಿಂದೆ ಬರೆದ, ಈವರೆಗೆ ರಂಗಪ್ರಯೋಗವೇ ಆಗಿರದ ಈ ನಾಟಕ ಹಳಗನ್ನಡ ಮತ್ತು ಹೊಸಗನ್ನಡದ ಮಿಶ್ರಣ. ‘ಕೇವಲ ದೈಹಿಕ ಚಿಕಿತ್ಸೆಯೊಂದೇ ಅಲ್ಲ, ಸಾಂಸ್ಕೃತಿಕ ಚಿಕಿತ್ಸೆಯೂ ಸಮುದಾಯಕ್ಕೆ ಅವಶ್ಯಕ’ ಎಂಬ ಅರ್ಥಪೂರ್ಣ ಸಂದೇಶವನ್ನು ಕಳೆದ ಒಂದು ದಶಕದಿಂದಲೇ ಉತ್ತರಕನ್ನಡದ ವೈದ್ಯಸಮುದಾಯ, ಜನಮಾನಸದಲ್ಲಿ ಬಿತ್ತುತ್ತಿದೆ. ಮೊನ್ನೆ ಶಿರಸಿಯಲ್ಲಿ ತಮ್ಮ ವೃತ್ತಿಯ ಹತ್ತುಹಲವು ಸವಾಲುಗಳ ನಡುವೆಯೂ ವೈದ್ಯಬಂಧುಗಳು, ‘ಯಶೋಧರೆ’ ನಾಟಕದ […]