ಅಂಬೇಡ್ಕರ್ ಸ್ಕೂಲ್‍ಗೆ ಆದ ಗತಿ ಬೆಂಗಳೂರು ಕೇಂದ್ರ ವಿವಿಗೂ ಕಾದಿದೆಯೇ?

-ಮೋಹನದಾಸ್.

ಅಂಬೇಡ್ಕರ್ ಶಾಲೆಗಾದ ಗತಿ ಬೆಂಗಳೂರು ಕೇಂದ್ರ ವಿವಿಗೆ ಸಹ ಬರಬಾರದು ಎಂಬ ನಮ್ಮ ಕಾಳಜಿಗೆ ಕುಮಾರಸ್ವಾಮಿ ಸ್ಪಂದಿಸುತ್ತಾರೆಂಬ ಆಶಯವಿದೆ. ಇಲ್ಲವಾದಲ್ಲಿ ಕರ್ನಾಟಕದ ತೆರಿಗೆ ಆದಾಯದ ನೂರಿನ್ನೂರು ಕೋಟಿ ರೂಗಳು ಪೋಲಾಗುವುದು ಗ್ಯಾರಂಟಿ. ಸಾಮಾನ್ಯವಾಗಿ ರಾಜ್ಯ ಮುಂಗಡಪತ್ರದಲ್ಲಿ ಉನ್ನತ ಶಿಕ್ಷಣದ ಬಗ್ಗೆ ಔಪಚಾರಿಕ ಉಲ್ಲೇಖವಿರುತ್ತದೆ. ಈ ವಲಯಕ್ಕೆ ನೀಡಿರುವ ಅನುದಾನದ ಮೊತ್ತದ ಜೊತೆಗೆ ಕರ್ನಾಟಕದ ಯಾವುದಾದರೊಂದು ಜಿಲ್ಲೆಯಲ್ಲಿ ಹೊಸ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವ ಘೋಷಣೆಯಿರುತ್ತದೆ. ಆದರೆ 2019-20ರ ಆಯವ್ಯಯಪತ್ರದಲ್ಲಿ ಎರಡು ವಿಶೇಷ ಉಲ್ಲೇಖಗಳಿವೆ. ಈ ಎರಡನ್ನೂ ಹೇಗಿತ್ತೋ ಹಾಗೆಯೇ ಇಲ್ಲಿ […]

ಚುನಾವಣೆಗಳಲ್ಲಿ ಘೋಷವಾಕ್ಯಗಳ ಚಲಾವಣೆ

-ಆನಂದರಾಜೇ ಅರಸ್ ಎಂ.ಕೆ.

ಪ್ರಸ್ತುತ ಸನ್ನೀವೇಶದಲ್ಲಿ ಭಾರತೀಯರ ಮನಸ್ಸಿನಲ್ಲಿ ಚೌಕಿದಾರ ಎಂಬ ಶಬ್ದ ಕೇಳಿದರೆ ಥಟ್ಟನೆ ನೆನಪಿಗೆ ಬರುವುದು ‘ಮೋದಿ’ ಹೆಸರು. ಬಿಜೆಪಿ ಈಗ ಈ ಪದಸಂಬಂಧವನ್ನೇ ಬಂಡವಾಳ ಮಾಡಿಕೊಂಡು ‘ಮೇ ಭಿ ಚೌಕಿದಾರ್’ ಎಂಬ ಅಭಿಯಾನವನ್ನು ಆರಂಭಿಸಿದೆ. ಇದು ಮೋದಿ ವಿರುದ್ಧದ ‘ಚೌಕಿದಾರ್ ಚೋರ್ ಹೈ’ ಘೋಷಣೆಗೆ ಪ್ರತಿದಾಳಿ! ಚುನಾವಣೆ ರಂಗು ಏರುತ್ತಿರುವಂತೆ ವಿವಿಧ ಪಕ್ಷಗಳು ತಮ್ಮ ಪ್ರಚಾರ ಕಾರ್ಯಕ್ರಮಗಳಿಗೆ ಹಾಗೂ ಜಾಹೀರಾತು ಪ್ರಚಾರಕ್ಕೆ (ಅಭಿಯಾನ) ಘೋಷಣಾ ವಾಕ್ಯಗಳನ್ನು ಹುಡುಕಲು ಆರಂಭಿಸುತ್ತವೆ. ಜನರ ಮನಸ್ಸಿನಲ್ಲಿ ನಿಲ್ಲಬಹುದಾದ ಎರಡು-ಮೂರು ಪದಗಳುಳ್ಳ ಆ […]

ಮಾಧ್ಯಮ ರಂಗದ ಭ್ರಷ್ಟಾಚಾರ ಪಾಪ ತೊಳೆಯಲು ಸಕಾಲ

-ಸತೀಶ್ ಚಪ್ಪರಿಕೆ.

ಮಾಧ್ಯಮ ಲೋಕದಲ್ಲಿನ ಭ್ರಷ್ಟಾಚಾರ ಧುತ್ತೆಂದು ಉದ್ಭವಿಸಿದ ಸಮಸ್ಯೆಯಿಲ್ಲ. ಈ ಹಿಂದೆ ಕೂಡ ಪತ್ರಕರ್ತರು ಹಲವೊಮ್ಮೆ ಭಾರಿ ಪ್ರಭಾವಗಳಿಗೆ ಒಳಗಾಗುತ್ತಿದ್ದರು ಮತ್ತು ಸಣ್ಣ-ಪುಟ್ಟ ಆಮಿಷಗಳಿಗೆ ಒಳಗಾಗುತ್ತಿದ್ದರು. ನನ್ನದೇ ಅನುಭವವೊಂದನ್ನು ನಿಮ್ಮ ಮುಂದಿಡುತ್ತೇನೆ. ಹದಿನೈದು ವರ್ಷಗಳ ಹಿಂದಿನ ಮಾತು. ‘ಪ್ರಜಾವಾಣಿ’ ದಾವಣಗೆರೆ ಬ್ಯುರೋದಲ್ಲಿ ಕೆಲಸ ಮಾಡುತ್ತಿದ್ದೆ. ರಾಜ್ಯದ ಅತ್ಯಂತ ಪ್ರಭಾವಿ ಜಾತಿಗೆ ಸೇರಿದ ಅತ್ಯಂತ ಶಕ್ತಿಶಾಲಿ ಹಾಗೂ ಹಿರಿಯ ಸ್ವಾಮಿಯೊಬ್ಬರ ಚಾತುರ್ಮಾಸ ಕಾರ್ಯಕ್ರಮ ವರದಿ ಮಾಡಲು ಹೋಗಿದ್ದೆ. ಸುಮಾರು ಹತ್ತರಿಂದ ಹದಿನೈದು ಪತ್ರಕರ್ತರು ನಮಗೆ ಮೀಸಲಾಗಿರಿಸಿದ್ದ ಜಾಗದಲ್ಲಿ ಕೂತಿದ್ದೇವು. ಕಾರ್ಯಕ್ರಮದ […]

ರೇಡಿಯೋ ಕಾಲರ್ ಏಕಿಲ್ಲ?

- ಕೆ.ಪಿ.ಸುರೇಶ.

ಟ್ಯಾಬ್ಲಾಯಿಡುಗಳ ಹೊಕ್ಕುಳೊಳಗಿಂದ ಟಿವಿ ಚಾನೆಲ್‍ಗಳು ಹುಟ್ಟಿದವು. ರಾಜಕೀಯ ಹಿನ್ನೆಲೆಯ ಧಣಿಯ ಆಶಯಕ್ಕೆ ತಕ್ಕಂತೆ ಸುದ್ದಿಯ ಬಣ್ಣ ಬದಲಾಯಿಸುವ ವರಸೆಗೆ ಶುರು ಹಚ್ಚಿಕೊಂಡ ದಿನವೇ ಮಾಧ್ಯಮ ತನ್ನ ಶೀಲ ಕಳೆದುಕೊಂಡಿತು. ಪಬ್ಲಿಕ್ ಟಿವಿಯ ಪತ್ರಕರ್ತನೊಬ್ಬ ಸುವಿಖ್ಯಾತ ವೈದ್ಯರನ್ನು ಬ್ಲಾಕ್‍ಮೈಲ್ ಮಾಡಹೊರಟು ಬಂಧನಕ್ಕೊಳಗಾದ ಸುದ್ದಿ, ಸ್ವತಃ ಮಾಧ್ಯಮಗಳಲ್ಲಿ ದುಡಿದ ಹಲವಾರು ಮಂದಿಗೆ ಮುಜುಗರ ತಂದಿದೆ. ಇದಕ್ಕೇನಾದರೂ ದಾರಿ ಹುಡುಕಬೇಕು ಎಂಬ ಕಾಳಜಿಯಲ್ಲಿ ಕೆಲವರು ಅಲ್ಲಿಲ್ಲಿ ಬರೆದಿದ್ದಾರೆ. ಪ್ರಜಾಸತ್ತೆಯ ನಾಲ್ಕನೆಯ ಸ್ತಂಭ ಮಾಧ್ಯಮ ಎಂದು ನಂಬಿದ್ದ ಕಾಲ ಹೊರಟುಹೋಗಿದೆ. ಹೆಚ್ಚಿನ ಮುದ್ರಣ […]

ಈಗ ಕಂಡಿರುವುದು ಹಿಮಗುಡ್ಡೆಯ ತುದಿ ಮಾತ್ರ!

-ಪದ್ಮರಾಜ ದಂಡಾವತಿ.

ಒಬ್ಬ ವರದಿಗಾರ ಭ್ರಷ್ಟನಾಗುವುದನ್ನು ಪತ್ತೆ ಮಾಡುವುದು ಸುಲಭ. ಪತ್ರಿಕೆಯ ಅಥವಾ ವಾಹಿನಿಯ ಮಾಲೀಕರೇ ಅಕ್ರಮ ಮಾರ್ಗದಿಂದ ಹಣ ಮಾಡಲು ಹೊರಟರೆ ಅದನ್ನು ಪತ್ರಿಕೋದ್ಯಮ ಎನ್ನಬಹುದೇ? ಮಾಧ್ಯಮವನ್ನು ಬಳಸಿಕೊಂಡು, ಪೆನ್ನನ್ನು ಮಾರಿಕೊಂಡು ಯಾರೆಲ್ಲ ನಮ್ಮ ಕಣ್ಣ ಮುಂದೆಯೇ ಏನೆಲ್ಲ ಆದರು, ವಿಧಾನಸೌಧದ ಗದ್ದುಗೆಗಳಲ್ಲಿ ಕುಳಿತರು! ಈಗ ಬೆಳಕಿಗೆ ಬಂದಿರುವುದು ಹಿಮಗುಡ್ಡೆಯ ಒಂದು ತುದಿ ಮಾತ್ರ. ಅದೃಷ್ಟ ಸರಿ ಇರಲಿಲ್ಲವೋ ಅಥವಾ ಆಸೆ ಪಟ್ಟಿದ್ದು ಹೆಚ್ಚಾಯಿತೋ ಒಂದು ಬಲಿ ಬಿತ್ತು. ಬಿದ್ದ ಬಲಿ ಚಿಕ್ಕದೇನೂ ಅಲ್ಲ; ದೊಡ್ಡ ಮಿಕವೇ ಸಿಕ್ಕಿ […]

ಮುಖ್ಯಚರ್ಚೆಗೆ ಪ್ರವೇಶ

ನರೇಂದ್ರ ಮೋದಿ ಅನಿವಾರ್ಯವೇ..? ಅನಗತ್ಯವೇ..? ನಾವು ಬೇಕು-ಬೇಡವೆಂದರೂ 2019ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಅಧ್ಯಕ್ಷೀಯ ಮಾದರಿಯ ಆಯ್ಕೆಗೆ ವೇದಿಕೆ ಸಜ್ಜಾಗಿದೆ. 2014ರಿಂದ 2019ರವರೆಗಿನ ಎನ್‍ಡಿಎ ಸರ್ಕಾರದ ಸಫಲತೆ-ವಿಫಲತೆಗಳನ್ನು ಅಳೆಯುವ ಮತ್ತು ಮುಂದಿನ ಐದು ವರ್ಷಗಳಲ್ಲಿ ನಮಗೆ ಯಾವ ಕೇಂದ್ರ ಸರ್ಕಾರ ಬೇಕೆನ್ನುವ ಚರ್ಚೆಗಿಂತಲೂ, ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಬೇಕೋ ಬೇಡವೋ ಎಂಬುದೇ ಚುನಾವಣೆಯ ವಿಷಯವಸ್ತುವಾಗಿದೆ. 2019ರ ಚುನಾವಣೆಯನ್ನು ವ್ಯಕ್ತಿ ಕೇಂದ್ರಿತ ಸ್ಪರ್ಧೆಯಾಗಿ ಮಾಡುವಲ್ಲಿಯೇ ಆಡಳಿತ ಪಕ್ಷ ತನ್ನ ಸಫಲತೆಯನ್ನು ಕಾಣಬಯಸಿದರೆ, ಮೋದಿ ವಿರೋಧಿ ಒಕ್ಕೂಟ ರಚನೆಯಲ್ಲಿ ವಿರೋಧ ಪಕ್ಷಗಳು […]

ಮೋದಿ ಎನ್ನುವ ಒಗಟು

-ಪೃಥ್ವಿದತ್ತ ಚಂದ್ರಶೋಭಿ.

ನರೇಂದ್ರ ಮೋದಿಯವರು ಕಳೆದ ಎರಡು ದಶಕಗಳ ಭಾರತೀಯ ಸಾರ್ವಜನಿಕ ಜೀವನದ ಕೇಂದ್ರದಲ್ಲಿದ್ದಾರೆ ಎಂದರೆ ಅದು ಉತ್ಪ್ರೇಕ್ಷೆಯ ಮಾತೇನಲ್ಲ. 2001ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ಮೋದಿಯವರು ಭಾರತದ ಮುಂದಿರುವ ಸವಾಲುಗಳಿಗೆ ತಮ್ಮ ಕ್ರಿಯೆ-ನಿಷ್ಕ್ರಿಯತೆಗಳಿಂದ ಮತ್ತು ವಿಚಾರಗಳು ಹಾಗೂ ತಮ್ಮ ಸರ್ಕಾರಗಳ ಸಾರ್ವಜನಿಕ ನೀತಿ ನಿರೂಪಣೆಗಳಿಂದ ಪ್ರತಿಕ್ರಿಯಿಸುತ್ತಲೆ ಇದ್ದಾರೆ. ಈ ಸವಾಲುಗಳು ಹಿಂದು ರಾಷ್ಟ್ರೀಯತೆ, ಆರ್ಥಿಕ ಅಭಿವೃದ್ಧಿ, ಆಡಳಿತ ವ್ಯವಸ್ಥೆ, ಸಾಮಾಜಿಕ ಬಿಕ್ಕಟ್ಟುಗಳು ಹೀಗೆ ಹಲವಾರು ವಿಷಯಗಳಿಗೆ ಸಂಬಂಧಿಸಿದ್ದರಬಹುದು. ವಿಷಯ ಯಾವುದೆ ಆಗಿದ್ದರೂ ಮೋದಿಯವರನ್ನು ನಿರ್ಲಕ್ಷಿಸಲು ಸಾಧ್ಯವಾಗಿಲ್ಲ. 2013ರ […]

ವ್ಯಕ್ತಿ ಕೇಂದ್ರಿತ ಚುನಾವಣೆ ಭಾರತಕ್ಕೆ ಹೊಸದೇ?

-ಸುಧೀಂದ್ರ ಬುಧ್ಯ.

ಇದು ಮತ್ತೊಮ್ಮೆ ‘ಮೋದಿ ವರ್ಸಸ್ ಅದರ್ಸ್’ ಚುನಾವಣೆ. ಹೀಗೆ ವ್ಯಕ್ತಿ ಕೇಂದ್ರಿತ ಚುನಾವಣೆ ನಡೆದಾಗ, ಫಲಿತಾಂಶ ಯಾವ ಬದಿಗೆ ವಾಲಿದೆ ಎಂಬುದನ್ನು ಇತಿಹಾಸ ಸ್ಪಷ್ಟವಾಗಿ ಹೇಳುತ್ತಿದೆ. ಮತ್ತೊಂದು ಚುನಾವಣೆ ಎದುರಿಗಿದೆ. ಗಡಿಯಲ್ಲಿನ ಗುಂಡಿನ ಚಕಮಕಿ, ವೈಮಾನಿಕ ದಾಳಿ-ಪ್ರತಿದಾಳಿ, ಸರ್ಜಿಕಲ್ ಸ್ಟ್ರೈಕ್ ಸುದ್ದಿಗಳು ಕೊಂಚ ತಣ್ಣಗಾಗಿ ಇದೀಗ ದೇಶದೊಳಗಿನ ರಾಜಕೀಯ ಕದನಕ್ಕೆ ವೇದಿಕೆ ಅಣಿಯಾಗುತ್ತಿದೆ. ಸತ್ಯದ ಮುಖವಾಡವಿರುವ ಸುಳ್ಳಿನ ಕೂರಂಬುಗಳು ಇನ್ನು ತಿಂಗಳೊಪ್ಪತ್ತಿನ ಕಾಲ ಅತ್ತಿಂದಿತ್ತ ಚಲಾಯಿಸಲ್ಪಡುತ್ತವೆ. ವೈಯಕ್ತಿಕ ಟೀಕೆ, ಎಲ್ಲೆ ಮೀರಿದ ನಿಂದನೆಗೆ ಪೈಪೋಟಿ ಏರ್ಪಡಲಿದೆ. ಹಣ, […]

ಗಾಂಧಾರಿ ವ್ರತ ಭಕ್ತಗಣದ ಪಥ!

-ಎನ್.ಎಸ್. ಶಂಕರ್.

ಪ್ರಸಕ್ತ ಚುನಾವಣೆ ‘ಮೋದಿ ಪ್ರಧಾನಿಯಾಗಬೇಕೋ ಬೇಡವೋ’ ಎಂಬ ಆಯ್ಕೆಯನ್ನು ದೇಶದ ಮುಂದೆ ಇಟ್ಟಿರಬಹುದು. ಆದರೆ ಅದಕ್ಕಿಂತ ಮುಖ್ಯವಾಗಿ ನಮ್ಮ ಮುಂದಿರುವ ಪ್ರಶ್ನೆ- ‘ನಮಗೆ ಗಾಂಧಿ ಭಾರತ ಬೇಕೋ, ಗೋಡ್ಸೆ ಭಾರತ ಬೇಕೋ?’ ಎಂಬುದು. ಮತ್ತು ಈ ಆಯ್ಕೆಯನ್ನು ನಮ್ಮ ಮುಂದಿಟ್ಟಿರುವುದು ಚೌಕೀದಾರ್ ನರೇಂದ್ರ ಮೋದಿ. ನರೇಂದ್ರ ಮೋದಿ 2014ರಲ್ಲಿ ಪ್ರಚಂಡ ಬಹುಮತದೊಂದಿಗೆ ಆರಿಸಿ ಬಂದಾಗ ಅದು ಬಿಜೆಪಿ ಗೆಲುವಿಗಿಂತ ಹೆಚ್ಚಾಗಿ ಮೋದಿಯವರ ವೈಯಕ್ತಿಕ ಗೆಲುವಾಗಿತ್ತು. ಆಗ ಲಕ್ಷಾಂತರ ಕೋಟಿ ರೂಪಾಯಿ ಹಗರಣಗಳ ತಿಪ್ಪೆಯಲ್ಲಿ ಯುಪಿಎ-2 ಸರ್ಕಾರ ಹೂತುಹೋಗಿದ್ದು ಕೂಡ, […]

ಸರ್ವಾಧಿಕಾರ ನಿಯಂತ್ರಿಸಲು ಅಸ್ಥಿರತೆ ಅನಿವಾರ್ಯ!

-ಎ.ನಾರಾಯಣ.

ಮೇಲ್ನೋಟಕ್ಕೆ ಇದು ಅಧ್ಯಕ್ಷೀಯ ಮಾದರಿಯ ಚುನಾವಣೆಯಂತೆ ಕಾಣಿಸಿದರೂ, ಸೂಕ್ಷ್ಮವಾಗಿ ನೋಡಿದರೆ ಇಲ್ಲಿ ಈರ್ವರು ನಾಯಕರು ಮುಖಾಮುಖಿಯಾದಂತೆ ಕಾಣಿಸುವುದಿಲ್ಲ. ಬಿಜೆಪಿಗೆ ಓಟುಹಾಕುವ ಬಹುತೇಕ ಮಂದಿ ಮೋದಿಯವರ ನಾಯಕತ್ವಕ್ಕಾಗಿ ಓಟು ಹಾಕಬಹುದು. ಆದರೆ ಕಾಂಗ್ರೆಸ್ಸಿಗೆ ಓಟು ಹಾಕುವ ಮಂದಿ ರಾಹುಲ್ ಗಾಂಧಿಯವರ ನಾಯಕತ್ವ ನೋಡಿ ಓಟು ಹಾಕುತ್ತಾರೆ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಹೋದ ಚುನಾವಣೆಯಲ್ಲಿ ನರೇಂದ್ರ ಮೋದಿ ಗೆದ್ದು ಅಧಿಕಾರ ಹಿಡಿದದ್ದು ಅವರು ಒಬ್ಬ ಉತ್ತಮ ನಾಯಕ ಎನ್ನುವ ಜನಾಭಿಪ್ರಾಯ ವ್ಯಾಪಕವಾಗಿ ಮೂಡಿದ ಕಾರಣ. ಈ ಬಾರಿ ಅವರು ಗೆದ್ದರೆ […]

ದೇಶದ ಘನತೆ ಎತ್ತಿಹಿಡಿಯಲು ಮತ್ತೆ ಮೋದಿ

-ಶೋಭಾ ಕರಂದ್ಲಾಜೆ.

ಮತ್ತೊಮ್ಮೆ ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿ ಆದರೆ ದೇಶವನ್ನು ಒಂದು ಅಥವಾ ಎರಡನೇ ಸ್ಥಾನಕ್ಕೆ ತಂದು ನಿಲ್ಲಿಸುತ್ತಾರೆ. ಮುಂದಿನ ದಿನಗಳಲ್ಲಿ ಭಾರತ ಎಲ್ಲ ರೀತಿಯಲ್ಲಿ ಸೂಪರ್ ಪವರ್ ಆಗುವುದಕ್ಕೆ ಸಾಧ್ಯವಿದೆ. ಕಳೆದ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ದೇಶದ ಜನಕ್ಕೆ ನಾಲ್ಕೈದು ವಿಚಾರಗಳಲ್ಲಿ ಬಹಳ ಸ್ಪಷ್ಟವಾಗಿ ಮನವಿ ಮಾಡಿದ್ದರು, ಭರವಸೆ ನೀಡಿದ್ದರು. ಅವರು ಮುಖ್ಯವಾಗಿ ಪ್ರಸ್ತಾಪಿಸಿದ್ದು ನಾಲ್ಕು ಅಂಶಗಳನ್ನು: ಮೊದಲನೇದಾಗಿ, ಭ್ರಷ್ಟಾಚಾರ ರಹಿತ ಆಡಳಿತ ಕೊಡುತ್ತೇನೆ ಅಂದಿದ್ದರು. ಅಂದಹಾಗೆ ಕಳೆದ ಐದು ವರ್ಷಗಳಲ್ಲಿ ಒಂದೂ ಭ್ರಷ್ಟಾಚಾರದ […]

ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲದು!

-ಬಸವರಾಜ ಹೊರಟ್ಟಿ.

ನಮ್ಮ ಹಳ್ಳಿಯ ಜನರಿಗೆ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಿಕ್ಷಣಕ್ಕೆ ಕಳಿಸಬೇಕೆನ್ನುವ ಹುಚ್ಚು ಹಿಡಿದಂತೆ ಕೆಲವರಿಗೆ ಮೋದಿ ಹುಚ್ಚು ಹಿಡಿದಿದೆ. ಗಿಡದೊಳಗಿನ ಮಂಗ ಮಾತಿಗೆ ಮರುಳಾಗಿ ಕೈಬಿಟ್ಟು, ಕೆಳಗೆ ಬಿದ್ದು, ಕೈಕಾಲು ಮುರಿದುಕೊಂಡಂತೆ ನಮ್ಮ ದೇಶದ ಜನರ ಪರಿಸ್ಥಿತಿ ಆಗಿದೆ. ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಅನಿವಾರ್ಯನೂ ಅಲ್ಲ, ಅನಗತ್ಯವೂ ಅಲ್ಲ. ಉತ್ತರ ಕರ್ನಾಟಕದಲ್ಲಿ ‘ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲೋದಿಲ್ಲ’ ಅಂತ ಒಂದು ಗಾದೆ ಮಾತಿದೆ. ಅಂದರೆ ಒಂದು ದೇಶಕ್ಕೆ ಯಾರೂ ಅನಿವಾರ್ಯ ಅಲ್ಲ. ನರೇಂದ್ರ ಮೋದಿ […]

ಮೋದಿಯ ಮೋಡಿ ಮಾಯವಾಗಿದೆ!

-ರಿಜ್ವಾನ್ ಅರ್ಷದ್.

ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಅಮಿತ್ ಷಾ ಎಂಬ ‘ಮಹಾ ಅವಿವೇಕಿ’ ತಯಾರಿಸುತ್ತಿದ್ದ ಸುಳ್ಳಿನ ಬೀಜಗಳನ್ನು ಚೀಲಗಳಲ್ಲಿ ತುಂಬಿಕೊಂಡು ದೇಶವ್ಯಾಪಿ ತಿರುಗಾಡಿದ ನರೇಂದ್ರ ಮೋದಿ ಎಂಬ ಪ್ರಚಾರಕ ಸಿಕ್ಕಲ್ಲೆಲ್ಲ ಬಿತ್ತಿದರು. ಅವು ಸತ್ಯವಾಗಿದ್ದರೆ ಬಹುಬೇಗ ಸತ್ತು ಹೋಗುತ್ತಿದ್ದವು. ಸುಳ್ಳಿಗೆ ಆಯುಷ್ಯವಷ್ಟೇ ಹೆಚ್ಚಲ್ಲ; ಅವು ಮೊಳಕೆಯೊಡೆಯುವ ಕ್ರಿಯೆಯೂ ಅಷ್ಟೇ ಶೀಘ್ರ ಎಂಬುದು ಈ ಕರಟಕ-ದಮನಕರಿಗೆ ಚೆನ್ನಾಗಿಯೇ ತಿಳಿದಿತ್ತು. ಸಮಸ್ಯೆ ಬಹಳ ದೊಡ್ಡದಿದೆ. ವಿಚಾರದ ಹರವೂ ವಿಶಾಲವಾಗಿದೆ. ಮೋದಿ ಮಾಡಿದ `ಮೋಡಿ’ಗಳಿಂದ ಭಕ್ತರು ಹೊರಬರದಿದ್ದರೂ, ಭಾರತದ ವಿವೇಕಿಗಳು, ಅವರನ್ನು ಒಂದಷ್ಟು […]

ಪರ್ಯಾಯ ನಾಯಕತ್ವ ಎಲ್ಲಿದೆ?

-ಬಸವರಾಜ ಬೊಮ್ಮಾಯಿ.

150 ವರ್ಷಗಳ ಹಳೆಯ ಪಕ್ಷ ಕಾಂಗ್ರೆಸ್ಸಿಗೆ ಇಂದು ಲೋಕಸಭೆಯ ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ರಾಜಕೀಯವಾಗಿ ಇಡೀ ದೇಶವನ್ನು ಮುನ್ನೆಡೆವ ನಾಯಕತ್ವ ಇಂದು ಕಾಂಗ್ರೆಸ್ ಪಕ್ಷ ಸೇರಿದಂತೆ ಬೇರೆ ಯಾವ ಪಕ್ಷಕ್ಕೂ ಇಲ್ಲ; ಹಾಗಾಗಿ ನರೇಂದ್ರ ಮೋದಿ ದೇಶಕ್ಕೆ ಅನಿವಾರ್ಯವಾಗಿದ್ದಾರೆ. ಭಾರತ ಪಕ್ಷಾಧಾರಿತವಾದ ಪ್ರಜಾಪ್ರಭುತ್ವವನ್ನು ಹೊಂದಿದ ಬಹುದೊಡ್ಡ ದೇಶ. ಈ ಇಡೀ ದೇಶವನ್ನು ಒಟ್ಟಿಗೆ ಕರೆದೊಯ್ಯುವ ಪರ್ಯಾಯ ನಾಯಕತ್ವ ಎಲ್ಲೂ ಕಾಣುತ್ತಿಲ್ಲ. ಹೀಗಾಗಿಯೇ ನರೇಂದ್ರ ಮೋದಿ ದೇಶಕ್ಕೆ ಅನಿವಾರ್ಯ ನಾಯಕರಾಗಿ ಹೊರಹೊಮ್ಮಿದ್ದಾರೆ. 21ನೇ ಶತಮಾನಕ್ಕೆ ಬೇಕಾಗಿರುವ […]

ಸಬಕೇ ಸಾಥ್ ಸಬ್ ಕಾ ವಿಕಾಸ್

-ವೀರೇಶ್ ಬ್ಯಾಲಾಳ.

ಹಿಂದೆ ಕೇಂದ್ರ ಸರ್ಕಾರ ಹೆಚ್ಚಾಗಿ ಭ್ರಷ್ಟಾಚಾರದಿಂದಲೇ ಫೇಮಸ್ ಆಗಿರುತ್ತಿತ್ತು; 2ಜಿ ಹಗರಣ, ಕಲ್ಲಿದ್ದಿಲು ಹಗರಣಗಳಿಂದ ಎಲ್ಲರ ಮನೆಮಾತಾಗಿತ್ತು. ಆದರೆ ಮೋದಿ ಸರ್ಕಾರವು ಇಂತಹ ಯಾವುದೇ ಹಗರಣವನ್ನೂ ಮಾಡದೇ ಸ್ವಚ್ಛ ಸರ್ಕಾರವಾಗಿ ಗುರುತಿಸಿಕೊಂಡಿದೆ. ರಾಜಕಾರಣಿಗಳು ಸ್ವಚ್ಛವಾಗಿರುವಂತೆ ನೋಡಿಕೊಂಡಿರುವುದು ಮೋದಿಯ ಸಾಧನೆ. ದೇಶಕ್ಕೆ ನರೇಂದ್ರ ಮೋದಿ ಬೇಕೇಬೇಕು. ಯಾಕೆಂದರೆ, ಆತ ನನ್ನ ದೇಶವನ್ನು ಸರಿ ದಾರಿಯಲ್ಲಿ ಕರೆದೊಯ್ಯುತ್ತಾನೆಂದು, ಭ್ರಷ್ಟಾಚಾರವಿಲ್ಲದೆ ಕೆಲಸ ಮಾಡುತ್ತಾನೆಂದು, ಭ್ರಷ್ಟರನ್ನು ಶಿಕ್ಷಿಸುತ್ತಾನೆಂದು ಹಾಗೂ ದೇಶದ ಸೈನಿಕರಿಗೆ ಉತ್ತಮ ಸೌಲಭ್ಯ ಒದಗಿಸುತ್ತಾನೆಂದು ಮೋದಿ ಬೇಕು. ಅಷ್ಟಲ್ಲದೇ, ಉತ್ತಮ ಆರ್ಥಿಕ […]

ಮೋದಿಯಲ್ಲೂ ಒಳ್ಳೆಯ ಗುಣಗಳಿವೆ

-ಪ.ರಾಮಕೃಷ್ಣ ಶಾಸ್ತ್ರಿ.

ಮೋದಿ ಮರಳಿ ಅಧಿಕಾರಕ್ಕೆ ಬರಬಾರದು ಎಂದು ಹೇಳುತ್ತಿರುವವರು ಇತರೆ ಪಕ್ಷಗಳಿಗೆ ಸೇರಿದವರು, ಒಂದಿಷ್ಟು ಕೋಮುವಾದಕ್ಕೆ ಬೆಂಕಿ ಸುರಿಯುವವರು ಮಾತ್ರ. ಈ ಮಾತನ್ನು ಹೇಳುವ ನಾನು ಸಂಘ ಪರಿವಾರದ ಅನುಯಾಯಿಯೆಂದು ಯಾರೂ ಭಾವಿಸಬಾರದು. ನಾನು ಯಾವುದೇ ಪಕ್ಷದ ನೀತಿಯನ್ನು ಕುರುಡು ದೃಷ್ಟಿಯಿಂದ, `ವ್ಹಾಹ್, ಭೇಷ್!’ ಎಂದು ಬೆಂಬಲಿಸುವುದಿಲ್ಲ. ಒಳ್ಳೆಯ ಗುಣಗಳು ಯಾವ ಪಕ್ಷದ ರಾಜಕಾರಣಿಯಲ್ಲಿದ್ದರೂ ಒಪ್ಪಿಕೊಳ್ಳುತ್ತೇನೆ. ಐದು ವರ್ಷ ಪ್ರಧಾನಿಯಾಗಿದ್ದುಕೊಂಡು ಮೋದಿ ಹೇಳಿದ್ದೆಲ್ಲವನ್ನೂ ಮಾಡಿದ್ದಾರೆ ಎಂಬ ತೃಪ್ತಿಯ ತೇಗು ಖಂಡಿತ ಇಲ್ಲ. ಮೋದಿಯಲ್ಲಿರುವ ದೌರ್ಬಲ್ಯಗಳನ್ನೇ ಪಟ್ಟಿ ಮಾಡಿ ಅವರು […]

‘ತ್ಯಾಜ್ಯದಿಂದ ವಿದ್ಯುತ್ ಉತ್ಪನ್ನ’ ಘಟಕಗಳು ಎಷ್ಟು ಪ್ರಯೋಜನಕಾರಿ?

-ಪೂರ್ಣಿಮಾ ಮಾಳಗಿಮನಿ.

ಕಸ ಸುಟ್ಟು ವಿದ್ಯುತ್ ಉತ್ಪಾದಿಸಿ ಲಾಭ ಪಡೆದುಕೊಳ್ಳಲು ನಾ ಮುಂದು ತಾ ಮುಂದು ಎಂದು ಸಾಕಷ್ಟು ಖಾಸಗಿ ಸಂಸ್ಥೆಗಳು ಮುಂದೆ ಬಂದವು. ಏನಾದರೂ ಮಾಡಿಕೊಳ್ಳಿ, ಆದರೆ ನಮ್ಮ ನಗರಗಳಲ್ಲಿ ಕಸ ಮಾತ್ರ ಕಾಣದಂತೆ ಮಾಡಿ ಎಂದು ಈ ಸಂಸ್ಥೆಗಳಿಗೆ ಸರ್ಕಾರ ಮತ್ತು ಪಾಲಿಕೆಗಳು ಎಲ್ಲ ರೀತಿಯ ಸವಲತ್ತುಗಳನ್ನು ನೀಡಿ, ಕೈ ತೊಳೆದುಕೊಂಡುಬಿಟ್ಟವು. ಕೆಲ ದಿನಗಳ ಹಿಂದೆ ನನ್ನ ಮಗಳ ಜೊತೆ ನಾನು ವಾಲ್-ಈ ಎನ್ನುವ ಒಂದು ಕಾರ್ಟೂನ್ ಸಿನೆಮಾವನ್ನು ನೋಡಿದೆ. ಮಕ್ಕಳ ಸಿನೆಮಾ ಎಂದು ಅರ್ಧ ಮನಸ್ಸಿನಿಂದ […]

ಪಾಕಿಸ್ತಾನ ಅತ್ತ ದರಿ ಇತ್ತ ಪುಲಿ

-ಎಂ.ಎ.ಪ್ರಥಮ್.

ಪ್ರಧಾನಿ ಮೋದಿ ಸಾರ್ವಜನಿಕ ಸಮಾವೇಶವೊಂದರಲ್ಲಿ ‘ಅಭಿನಂದನ್ ವಿಷಯದಲ್ಲಿ ಏನಾಯಿತೆಂದು ನಾನು ಮತ್ತೆ ಹೇಳಬೇಕಾಗಿಲ್ಲ’, ಎಂದು ಎದೆಯುಬ್ಬಿಸಿ ಹೇಳುತ್ತಾರೆ. ಭಾರತ ಹಾಗೂ ಮೋದಿಗೆ ಹೆದರಿ ಪಾಕಿಸ್ತಾನ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್‍ನನ್ನು ಯಾವುದೇ ವಿಳಂಬವಿಲ್ಲದೇ ಬಿಡುಗಡೆ ಮಾಡಿತೇ? ಪಾಕಿಸ್ತಾನ ಪುಲ್ವಾಮ ಘಟನೆಯ ನಂತರ ಉಗ್ರಗಾಮಿಗಳ ಮೇಲೆ ತೋರ್ಪಡಿಕೆಗಾದರೂ (ಅನಿವಾರ್ಯವೂ ಆಗಿದೆ) ತೆಗೆದುಕೊಳ್ಳುತ್ತಿರುವ ಕಠಿಣ ಕ್ರಮಗಳು ಆ ದೇಶದ ಸದ್ಯದ ಸಂದಿಗ್ಧತೆಯನ್ನು ತೋರಿಸುತ್ತದೆ. ಇದುವರೆಗೆ ಉಗ್ರಗಾಮಿಗಳನ್ನು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಂಬಲಿಸಿರುವ ಪಾಕಿಸ್ತಾನಕ್ಕೆ ಈ ನಂಟು ಹುಲಿ ಸವಾರಿ ಮಾಡಲು […]

ವಿಶ್ವ ವಿದ್ಯಮಾನ

-ಪುರುಷೋತ್ತಮ ಆಲದಹಳ್ಳಿ.

ವಲಸೆ ನೀತಿ ಸಡಿಲಿಸಿದ ಬ್ರಿಟನ್ ಬ್ರೆಕ್ಸಿಟ್ ವಿದ್ಯಮಾನಗಳಿಂದ ತತ್ತರಿಸಿಹೋಗಿರುವ ಯುನೈಟೆಡ್ ಕಿಂಗ್‍ಡಮ್ ಇದೀಗ ವಲಸೆ ನೀತಿಯನ್ನು ಸಡಿಲಿಸಿಕೊಂಡು ಡಿಜಿಟಲ್ ಯುಗದಲ್ಲಿ ತನ್ನ ಸ್ಪರ್ಧಾತ್ಮಕತೆಯನ್ನು ಉತ್ತಮವಾಗಿಸಲು ಹೊರಟಿದೆ. ಈ ಸುಧಾರಣೆಯಂತೆ ಪಿಹೆಚ್‍ಡಿ ಪದವಿ ಬಯಸುವ ಕೆಲಸಗಳಿಗೆ ನೀಡುವ ವೀಸಾ ಸಂಖ್ಯೆಯ ಮಿತಿಯನ್ನು ತೆಗೆದುಹಾಕಲಾಗಿದೆ. ಹಾಗಾಗಿ ಉತ್ತಮ ಕುಶಲತೆ ಬಯಸುವ ಉದ್ಯಮಗಳನ್ನು ಯಾವುದೇ ‘ವಲಸೆ ನೀತಿ’ ಹಾಗೂ ‘ವೀಸಾ ಮಿತಿ’ಯಿಲ್ಲದೆ ಬ್ರಿಟನ್‍ನಲ್ಲಿ ಪ್ರಾರಂಭ ಮಾಡಲು ಅನುವಾಗುತ್ತದೆ. ಡಿಜಿಟಲ್ ಮತ್ತಿತರ ಉತ್ತಮ ಕುಶಲತೆ ಬಯಸುವ ಈ ಉದ್ಯಮಗಳಲ್ಲಿ ಬಹುತೇಕ ಭಾರತೀಯರೇ ಅತ್ಯಂತ […]

ಇ-ಜ್ಞಾನ

-ಟಿ.ಜಿ.ಶ್ರೀನಿಧಿ.

ಟೆಕ್ ಸುದ್ದಿ ಮೊಬೈಲ್ ಡೇಟಾ ಬಳಕೆಯಲ್ಲಿ ಮುಂಚೂಣಿಯಲ್ಲಿರುವುದಷ್ಟೇ ಅಲ್ಲ, ಅತ್ಯಂತ ಕಡಿಮೆ ದರದಲ್ಲಿ ಮೊಬೈಲ್ ಡೇಟಾ ಒದಗಿಸುವಲ್ಲೂ ನಮ್ಮ ದೇಶ ಮೊದಲ ಸ್ಥಾನ ಪಡೆದುಕೊಂಡಿದೆ. ಪ್ರತಿ ಜಿಬಿ ಡೇಟಾ ಸರಾಸರಿ ಬೆಲೆ ಜಾಗತಿಕವಾಗಿ ಆರುನೂರು ರೂಪಾಯಿಗಳಷ್ಟಿದ್ದರೆ ನಮ್ಮ ದೇಶದಲ್ಲಿ ಅದು ಇಪ್ಪತ್ತು ರೂಪಾಯಿಗಿಂತ ಕಡಿಮೆಯಿದೆ ಎಂದು ಈತ್ತೀಚೆಗೆ ಪ್ರಕಟವಾದ ಸಮೀಕ್ಷೆಯೊಂದು ತಿಳಿಸಿದೆ. ವಿಶ್ವದಾದ್ಯಂತ 230 ದೇಶಗಳಲ್ಲಿನ ಆರು ಸಾವಿರಕ್ಕೂ ಹೆಚ್ಚು ಮೊಬೈಲ್ ಡೇಟಾ ಪ್ಲಾನುಗಳನ್ನು ಹೋಲಿಸುವ ಮೂಲಕ ಈ ಪಟ್ಟಿಯನ್ನು ತಯಾರಿಸಲಾಗಿದೆಯಂತೆ. ಅಂದಹಾಗೆ ಅತಿಹೆಚ್ಚು ಸ್ಮಾರ್ಟ್‍ಫೋನ್ ಬಳಕೆದಾರರಿರುವ […]

1 20 21 22 23 24 28