ಗೂಗಲ್ ಇರುವಾಗ ಗುರುವೇಕೆ?

- ಡಾ.ವಿಷ್ಣು ಎಂ. ಶಿಂದೆ

ಗೂಗಲ್ ಇರುವಾಗ ಗುರುವೇಕೆ?
- ಡಾ.ವಿಷ್ಣು ಎಂ. ಶಿಂದೆ

ಗುರುವಿಗೆ ಪ್ರಶ್ನೆ ಮಾಡಬಲ್ಲ ಮತ್ತು ಅದರಂತೆ ಸಮರ್ಥವಾಗಿ ವಿದ್ಯಾರ್ಥಿಯನ್ನು ಜ್ಞಾನ, ಅನುಭವ ಮತ್ತು ಕಲಿಕೆಯಲ್ಲಿ ಸಂತೃಪ್ತಿಗೊಳಿಸುವ ಪರ್ಯಾಯ ತಂತ್ರಜ್ಞಾನ ಮಾರ್ಗಗಳು ಬಂದಿರುವುದರಿಂದ ಗುರುಬೇಕೆ ಎಂಬ ಪ್ರಶ್ನೆ ಗಟ್ಟಿಗೊಳ್ಳುತ್ತಿದೆ. – ಡಾ.ವಿಷ್ಣು ಎಂ. ಶಿಂದೆ ಶಿಕ್ಷಕರನ್ನು ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಹೋಲಿಸುವುದು ಸಂಪ್ರದಾಯಿಕ ಕ್ರಮ. ಇಂದು ಕಾಲ ಬದಲಾದಂತೆ ವಿದ್ಯಾರ್ಥಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವಾತಾವರಣವು ಬದಲಾಗಿದೆ. ಈ ನೆಲೆಯಲ್ಲಿ ವಿದ್ಯಾರ್ಥಿಗಳ ಕಲಿಕಾ ಸನ್ನಿವೇಶ, ಅವಕಾಶ ಮತ್ತು ಅಗತ್ಯಗಳು ಸಂಪೂರ್ಣ ಬದಲಾಗಿವೆ. ಇಯಾನ್ ಗಿರ್ಲ್ಬ್ಟ್ ತನ್ನ ಇಂಗ್ಲೀಷ್ […]

ಆರು ಚಾರ್ಟುಗಳಲ್ಲಿ ಆರ್ಥಿಕತೆಯ ಚಿತ್ರಣ

ಉದಿತ್ ಮಿಶ್ರಾ

ಆರು ಚಾರ್ಟುಗಳಲ್ಲಿ ಆರ್ಥಿಕತೆಯ ಚಿತ್ರಣ
ಉದಿತ್ ಮಿಶ್ರಾ

ಈ ವಾರ ಆರ್‌ಬಿಐ ಬಡ್ಡಿ ದರಗಳನ್ನು ಕಡಿತಗೊಳಿಸದೆ ಇರಲು ಹಾಗೂ ಡಿಸೆಂಬರ್ ತಿಂಗಳವರೆಗೂ ಯಾಕೆ ದರಗಳನ್ನು ಕಡಿತಗೊಳಿಸುವುದು ಸಾಧ್ಯವಾಗುವಂತಿಲ್ಲ ಎನ್ನುವುದಕ್ಕೆ ಹಲವು ಕಾರಣಗಳಿವೆ; ಪ್ರಸ್ತುತ ಆರ್ಥಿಕತೆಯ ಬೆಳವಣೆಗೆಯ ಹೊರೆ ಸಂಪೂರ್ಣವಾಗಿ ಸರ್ಕಾರದ ಹೆಗಲ ಮೇಲಿದೆ..  – ಉದಿತ್ ಮಿಶ್ರಾ ಆತ್ಮೀಯ ಓದುಗರೇ, ಅರವತ್ತರ ದಶಕದಲ್ಲಿ ಭಾರತದಲ್ಲಿಯೂ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಂತಹ, ಕೆನಡಾ ದೇಶದ ಮೂಲದ ಯುಎಸ್‌ನ ಅರ್ಥಶಾಸ್ತ್ರಜ್ಞ ಜಾನ್ ಕೆನ್ನೆತ್ ಗಲಬ್ರೇತ್ ಅವರ ಮಾತುಗಳ ಪ್ರಕಾರ, “ಎರಡು ರೀತಿಯ ಮುನ್ಸೂಚಕರಿದ್ದಾರೆ: ಗೊತ್ತಿಲ್ಲದೆ ಇರುವವರು ಹಾಗೂ ತಮಗೆ ಗೊತ್ತಿಲ್ಲ ಎಂದು […]

ಮುಂಬರುವ ಬೃಹತ್ ವಲಸೆ

- ಸೋನಿಯಾ ಶಾ

ಮುಂಬರುವ ಬೃಹತ್ ವಲಸೆ
- ಸೋನಿಯಾ ಶಾ

ಇಲ್ಲಿ ಅನುವಾದಿಸಿ ನೀಡಲಾಗಿರುವ ಅಧ್ಯಾಯವನ್ನು ಸೋನಿಯಾ ಶಾ ಅವರ ‘ದಿ ನೆಕ್ಸ್ಟ್ ಮೈಗ್ರೇಶನ್’ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ. ಸೋನಿಯಾ ಶಾ ಅವರು ಭಾರತ ಮೂಲದ ಅಮೆರಿಕದ ಪತ್ರಕರ್ತೆ. ಸೋನಿಯಾರವರ ತಂದೆತಾಯಿ ಇಬ್ಬರೂ ವೃತ್ತಿಯಲ್ಲಿ ವೈದ್ಯರಾಗಿ ಭಾರತದಿಂದ ವಲಸೆ ಹೊರಟು ಅಮೆರಿಕದಲ್ಲಿ ನೆಲೆಸಿದವರು. 1969ರಲ್ಲಿ ಜನಿಸಿದ ಸೋನಿಯಾ ಪತ್ರಿಕೋದ್ಯಮದಲ್ಲಿ ಪದವಿ ಪಡೆದರೂ ನಂತರದಲ್ಲಿ ತತ್ವಶಾಸ್ತ್ರದಿಂದ ಮಾನಸಿಕ ವಿಜ್ಞಾನದವರೆಗೂ ವೈವಿಧ್ಯಪೂರ್ಣ ಓದು ಮುಗಿಸಿದವರು. ತಮ್ಮ ಕೂಲಂಕಷ ಸಂಶೋಧನೆ ಹಾಗೂ ಹರಿತ ಬರವಣಿಗೆಯ ಶೈಲಿಯಿಂದ ತಾವು ಕೈಗೆತ್ತಿಕೊಂಡ ಯಾವುದೇ ವಿಷಯವಸ್ತುವಿಗೆ ನ್ಯಾಯ ಒದಗಿಸಬಲ್ಲವರು. […]

ಜಾತಕದ ಅಪದ್ಧ ಮೀರಿ ಪುರುಷೋತ್ತಮನಾಗಿ ಬೆಳೆದ ರೋಯ್ತಾ!

- ಸದಾನಂದ ಗಂಗನಬೀಡು

ಜಾತಕದ ಅಪದ್ಧ ಮೀರಿ  ಪುರುಷೋತ್ತಮನಾಗಿ ಬೆಳೆದ ರೋಯ್ತಾ!
- ಸದಾನಂದ ಗಂಗನಬೀಡು

ಡಾ.ಪುರುಷೋತ್ತಮ ಬಿಳಿಮಲೆ ಅವರ ‘ಕಾಗೆ ಮುಟ್ಟಿದ ನೀರು’ ಆತ್ಮಚರಿತ್ರೆಯ ಪೂರ್ವಾರ್ಧ ಕೋಮು ರಾಜಕಾರಣದೊಂದಿಗಿನ ಪಯಣದಂತೆ ಕಂಡರೆ, ಉತ್ತರಾರ್ಧ ಪ್ರವಾಸ ಕಥನದಂತೆಯೂ, ಸಂಶೋಧನಾ ಪ್ರಬಂಧದಂತೆಯೂ ಭಾಸವಾಗುತ್ತದೆ.  – ಸದಾನಂದ ಗಂಗನಬೀಡು    ಕಾಗೆ ಮುಟ್ಟಿದ ನೀರು ಡಾ.ಪುರುಷೋತ್ತಮ ಬಿಳಿಮಲೆ ಪುಟ: 304  ಬೆಲೆ: ರೂ.300 ಅಹರ್ನಿಶಿ ಪ್ರಕಾಶನ ಶಿವಮೊಗ್ಗ ದೂ: 94491 74662 ಸಿನಿಮಾ ಪ್ರಿಯರಿಗೆ ಈ ಸಂಗತಿ ಬಹಳ ಚೆನ್ನಾಗಿ ತಿಳಿದಿರುತ್ತದೆ. ನಟ ಅಂಬರೀಶ್ ಅಮರನಾಥ ಮಾತ್ರ ಆಗಿದ್ದಾಗ ತಮ್ಮ ಕಾಲೇಜು ದಿನಗಳಲ್ಲಿ ಬಹಳ ತುಂಟರಾಗಿದ್ದರು. ಕಾಲೇಜಿನಲ್ಲಿ ತರಗತಿ […]

ವಿಜಯಶಂಕರ ಅವರ ‘ಎಚ್ಚೆಸ್ವಿ ಕಾವ್ಯ ಸಾತತ್ಯ’ ಕವಿಪರ ವಕೀಲನಾದ ವಿಮರ್ಶಕ!

ಡಾ.ಸುಭಾಷ್ ರಾಜಮಾನೆ

ವಿಜಯಶಂಕರ ಅವರ ‘ಎಚ್ಚೆಸ್ವಿ ಕಾವ್ಯ ಸಾತತ್ಯ’ ಕವಿಪರ ವಕೀಲನಾದ ವಿಮರ್ಶಕ!
ಡಾ.ಸುಭಾಷ್ ರಾಜಮಾನೆ

ಲೇಖಕರು ಇಲ್ಲಿಯ ಬರಹಗಳನ್ನು ವಿಮರ್ಶಾ ಲೇಖನಗಳೆಂದು ಕರೆದುಕೊಂಡಿದ್ದಾರೆ. ಆದರೆ ಈ ಕೃತಿಯ ಬಹುದೊಡ್ಡ ಮಿತಿಯೆಂದರೆ ಕೇವಲ ಪರಿಚಯಾತ್ಮಕ ಜಾಡಿನಲ್ಲಿಯೇ ಸಾಗಿರುವುದು. ಅದಕ್ಕಾಗಿಯೇ ಏನೋ ವಿಜಯಶಂಕರ ಅವರಿಗೆ ಹೊಸ ಒಳನೋಟಗಳನ್ನು ನೀಡಲು ಸಾಧ್ಯವಾಗಿಲ್ಲ. – ಡಾ.ಸುಭಾಷ್ ರಾಜಮಾನೆ    ಎಚ್ಚೆಸ್ವಿ ಕಾವ್ಯ ಸಾತತ್ಯ ಎಸ್.ಆರ್. ವಿಜಯಶಂಕರ ಪುಟ: 164 ಬೆಲೆ: ರೂ 100 ಪ್ರಕಾಶನ: ಚಿಂತನ ಚಿತ್ತಾರ 2, ಮುಡಾ ಕಾಂಪ್ಲೆಕ್ಸ್, ಒಂದನೇ ಬ್ಲಾಕ್ ರಾಮಕೃಷ್ಣನಗರ, ಮೈಸೂರು-570022 ಲೇಖಕರಾದ ಎಸ್.ಆರ್.ವಿಜಯಶಂಕರ ಅವರು ತಮ್ಮನ್ನು ತಾವು ಅಂಕಣಕಾರರೆಂದೇ ಗುರುತಿಸಿಕೊಂಡವರು. ಹಲವು […]

ಸಾಂಪ್ರದಾಯಿಕ ನಂಬಿಕೆ ಅಲ್ಲಾಡಿಸುವ ದೇವದತ್ತ ಪಟ್ಟನಾಯಕರ ‘ಸೀತಾ’

-ಡಾ.ಸರಜೂ ಕಾಟ್ಕರ್

ಸಾಂಪ್ರದಾಯಿಕ ನಂಬಿಕೆ ಅಲ್ಲಾಡಿಸುವ  ದೇವದತ್ತ ಪಟ್ಟನಾಯಕರ ‘ಸೀತಾ’
-ಡಾ.ಸರಜೂ ಕಾಟ್ಕರ್

ಕೃತಿಯ ಹೆಸರು ‘ಸೀತಾ’ ಎಂದಿದ್ದರೂ ಕಟ್ಟಿಕೊಡುವುದು ಮಾತ್ರ ನಿಯಮನಿಷ್ಠ ರಾಮನ ಕಥೆಯನ್ನು. ಇದು ರಾಮಾಯಣದ ಬಗೆಗಿನ ಅನೇಕ ನಂಬಿಕೆಗಳನ್ನು, ಶ್ರದ್ಧೆ, ಪೂಜ್ಯತಾಭಾವವನ್ನು ಮರು ಪರಿಶೀಲಿಸುವಂತೆ ಮಾಡುತ್ತದೆ.  -ಡಾ.ಸರಜೂ ಕಾಟ್ಕರ್   ಸೀತಾ ರಾಮಾಯಣದ ಸಚಿತ್ರ ಮರುಕಥನ ದೇವದತ್ತ ಪಟ್ಟನಾಯಕ ಅನು: ಪದ್ಮರಾಜ ದಂಡಾವತಿ ಪುಟ: 374, ಬೆಲೆ: ರೂ.700 ಪ್ರಥಮ ಮುದ್ರಣ: 2020 ಮನೋಹರ ಗ್ರಂಥಮಾಲ, ಲಕ್ಷ್ಮೀ ಭವನ ಸುಭಾಷ್ ರಸ್ತೆ, ಧಾರವಾಡ-580001  ದೇವದತ್ತ ಪಟ್ಟನಾಯಕರು ಇಂಗ್ಲಿಷಿನಲ್ಲಿ ಸೀತೆಯ ಬಗೆಗೆ ಬರೆದ ಬೃಹತ್ ಕೃತಿ, ಕನ್ನಡಕ್ಕೆ ಅನುವಾದವಾಗಿ […]

ಹೊಸ ಪುಸ್ತಕ

ತುಸುವೆ ಕುಡಿವ ಗಂಡನ್ನ ಕೊಡು ತಾಯಿ… ಲಲಿತ ಪ್ರಬಂಧಗಳ ಸಂಕಲನ ಗಣೇಶ ಅಮೀನಗಡ ಪುಟ: 168 ಬೆಲೆ: ರೂ. 150 ಪ್ರಥಮ ಮುದ್ರಣ: 2020 ಕವಿತಾ ಪ್ರಕಾಶನ 101, ಸೃಷ್ಟಿ ಸಾಲಿಗ್ರಾಮ ಅಪಾರ್ಟಮೆಂಟ್ ಜಯ ಲಕ್ಷ್ಮೀ ವಿಲಾಸ ರಸ್ತೆ, ಚಾಮರಾಜಪುರಂ ಮೈಸೂರು-570025 ದೂ: 98801 05526 ಲೇಖಕ, ನಾಟಕಕಾರ, ಪತ್ರಕರ್ತ ಗಣೇಶ ಅಮೀನಗಡ ಅವರು ಏಳೆಂಟು ವರ್ಷಗಳಿಂದ ಬರೆದ 28 ಲಲಿತ ಪ್ರಬಂಧಗಳನ್ನು ಇಲ್ಲಿ ಸಂಕಲಿಸಿದ್ದಾರೆ. ರಾಜೀವ ತಾರಾನಾಥ ಅವರು ಮುನ್ನುಡಿಯಲ್ಲಿ ಗುರುತಿಸಿದಂತೆ, ‘ಈ ಸಂಕಲನ ನಮ್ಮೆಲ್ಲರಿಗೂ […]

ಕನ್ನಡದ ಮೊದಲ ಉಪಲಬ್ಧ ಕೃತಿ ಕವಿರಾಜಮಾರ್ಗ

- ಡಾ.ವಿ.ಸಿ.ಕಟ್ಟೆಪ್ಪನವರ

ಕನ್ನಡದ ಮೊದಲ ಉಪಲಬ್ಧ ಕೃತಿ ಕವಿರಾಜಮಾರ್ಗ
- ಡಾ.ವಿ.ಸಿ.ಕಟ್ಟೆಪ್ಪನವರ

ಕವಿರಾಜಮಾರ್ಗದಿಂದ ಅಂದಿನ ಸಮಕಾಲೀನ ಜೀವನ ಪರಿಣತಿಯ ಚಿತ್ರ ದೊರೆಯುವಂತೆಯೇ ಅದಕ್ಕಿಂತ ಹಿಂದಿನ ಸಾಹಿತ್ಯ ಪರಂಪರೆಯ ಸೂಚನೆಯೂ ಸಾಕಷ್ಟು ದೊರೆಯುತ್ತದೆ. ಹಾಗಾಗಿ ಇದು ಕನ್ನಡ ಸಾಹಿತ್ಯದ ಕತ್ತಲು ಯುಗದ ದಾರಿದೀಪವಾಗಿ ಮುಂದಿನ ಸಾಹಿತ್ಯದ ರಾಜಮಾರ್ಗವಾಗಿ ಕಾಣಿಸುತ್ತದೆ. – ಡಾ.ವಿ.ಸಿ.ಕಟ್ಟೆಪ್ಪನವರ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಹತ್ವದ ಸ್ಥಾನವನ್ನು ಹೊಂದಿರುವ ಕವಿರಾಜಮಾರ್ಗ ಕೃತಿಯು ಕನ್ನಡದ ಮೊಟ್ಟಮೊದಲ ಉಪಲಬ್ಧ ಕೃತಿಯಾಗಿದೆ. ಇದರ ಕಾಲ ಕ್ರಿ.ಶ. ಸು. 850. ಕೆ.ಬಿ.ಪಾಠಕರು ಕವಿರಾಜಮಾರ್ಗ ಕೃತಿಯನ್ನು ಕ್ರಿ.ಶ 1898ರಲ್ಲಿ ಸಂಪಾದಿಸಿದ್ದಾರೆ. ಕನ್ನಡ ಸಾಹಿತ್ಯದ ಕುರಿತು ಅಮೂಲ್ಯವಾದ ಸಂಗತಿಗಳನ್ನು […]

ಅಜ್ಜಿ ಅಡುಗೆ, ಗಾಂಧೀ ಮಾದರಿಗೆ ಮರು ನಡಿಗೆ!

- ಪ್ರೊ.ಶಿವರಾಮಯ್ಯ

ಅಜ್ಜಿ ಅಡುಗೆ, ಗಾಂಧೀ ಮಾದರಿಗೆ ಮರು ನಡಿಗೆ!
- ಪ್ರೊ.ಶಿವರಾಮಯ್ಯ

ಪ್ರಸ್ತುತ ಕೊರೊನಾ ಪಿಡುಗಿನಿಂದ ನಾವು ದೂರ ಉಳಿಯಬೇಕಾದರೆ ಪುನಃ ಅಜ್ಜಿ ಮಾಡುತ್ತಿದ್ದ ಅಡುಗೆ ಪದ್ಧತಿಗೆ, ಗಾಂಧಿಯ ಮಾದರಿಗೆ ಮರು ಪಯಣ ಮಾಡುವುದು ಅನಿವಾರ್ಯ. – ಪ್ರೊ.ಶಿವರಾಮಯ್ಯ ಎಂಬತ್ತು ವರ್ಷ ದಾಟಿದ ನಮ್ಮಂತಹವರಿಗೆ ಆರೋಗ್ಯ ಭಾಗ್ಯ ಇನ್ನೂ ಉಳಿದಿರುವುದಕ್ಕೆ ನಾವು ಚಿಕ್ಕಂದಿನಲ್ಲಿ ತಿಂದ ಆಹಾರ ವಿಹಾರವೇ ಇರಬೇಕೆಂದು ನನ್ನ ಊಹೆ. ಯಾರಾದರೂ `ಅಜ್ಜ ನಿಮ್ಮ ಆರೋಗ್ಯದ ಗುಟ್ಟೇನು’ ಎಂದು ಕೇಳಿದರೆ `ಕೋಳಿ ತಿಂದಂಗೆ ತಿನ್ನೋದು ನಾಯಿ ಸುತ್ತಿದಂತೆ ಸುತ್ತೋದು’ ಎಂದು ನಾನು ಜೋಕು ಮಾಡಿದ್ದು ನಮ್ಮ ಎಳೆಯರ ಬಳಗದಲ್ಲಿ […]

ನೆನೆವುದೆನ್ನ ಮನಂ ನಮ್ಮೂರ ಮೊಹರಂ

- ಹುರುಕಡ್ಲಿ ಶಿವಕುಮಾರ

ನೆನೆವುದೆನ್ನ ಮನಂ ನಮ್ಮೂರ ಮೊಹರಂ
- ಹುರುಕಡ್ಲಿ ಶಿವಕುಮಾರ

ಊರಿನ ಹಿಂದೂ ಮುಸಲ್ಮಾನರೆಲ್ಲರೂ ಒಂದಾಗಿ ಮೊಹರಂ ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದಿದೆಯಲ್ಲ… ಅದು ನೀಡುವ ಸಂದೇಶವೇ ಬೇರೆ! – ಹುರುಕಡ್ಲಿ ಶಿವಕುಮಾರ ನಮ್ಮೂರು ಬಾಚಿಗೊಂಡನಹಳ್ಳಿಯ ಮೊಹರಂ ಹಬ್ಬದ ಕೊನೆಯ ದಿನವನ್ನು ನಾನು ಎಂದಿಗೂ ತಪ್ಪಿಸಿಕೊಳ್ಳಲಾರೆ. ಬೇರೆ ಯಾವ ಕೆಲಸವಿದ್ದರೂ ನಾನು ಆ ಕಡೆ ಗಮನ ಕೊಡದೇ ಅಂದು ಸಾಯಂಕಾಲದ ಮೊಹರಂ ಮೆರವಣಿಗೆಗೆ ತಪ್ಪದೇ ಹಾಜರಾಗಿಬಿಡುವೆ. ಸಾಹಿತಿಯೆಂದೂ, ಪತ್ರಕರ್ತನೆಂದೂ, ರೈತ ಹೋರಾಟಗಾರನೆಂದೂ ನಮ್ಮ ಊರಲ್ಲಿ ಹೆಸರಾದ ನಾನು ಈ ಮೊಹರಂ ಮೆರವಣಿಗೆಯ ಮುಂದೆ ನಿಂತು ತದೇಕ ಚಿತ್ತದಿಂದ ವೀಕ್ಷಿಸುವುದನ್ನು ಕಂಡು ನಮ್ಮೂರ […]

ರಾಗಾಭೈರವಿ ಬಿಡುಗಡೆಯಾಗದ ಸದಭಿರುಚಿ ಸಿನಿಮಾ

- ಪ್ರೇಮಕುಮಾರ್ ಹರಿಯಬ್ಬೆ

ರಾಗಾಭೈರವಿ  ಬಿಡುಗಡೆಯಾಗದ ಸದಭಿರುಚಿ ಸಿನಿಮಾ
- ಪ್ರೇಮಕುಮಾರ್ ಹರಿಯಬ್ಬೆ

ಬಿಡುಗಡೆ ಆಗದ, ಒಟಿಟಿಗೂ ಬಾರದ ಸಿನಿಮಾಗಳು ಹೇಗಿವೆ ಎಂಬ ಕುತೂಹಲ ನನ್ನಂತೆ ಅನೇಕರಿಗೆ ಇರಬಹುದು. ಅಂಥದೊಂದು ಸಿನಿಮಾ ನೋಡುವ ಅವಕಾಶ ಇತ್ತೀಚೆಗೆ ಸಿಕ್ಕಿತು. – ಪ್ರೇಮಕುಮಾರ್ ಹರಿಯಬ್ಬೆ        ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಿನಿಮಾಗಳ ನಿರ್ಮಾಣ ಹೆಚ್ಚಾಗಿದೆ. ಕಳೆದ ವರ್ಷವೊಂದರಲ್ಲೇ 190 ಸಿನಿಮಾಗಳು ಬಿಡುಗಡೆ ಆಗಿವೆ. ಈ ಸಿನಿಮಾಗಳನ್ನು ಎಷ್ಟು ಜನ ನೋಡಿದರು? ಅವಕ್ಕೆ ಹಾಕಿದ್ದ ಬಂಡವಾಳ ಹಿಂದಕ್ಕೆ ಬಂತೇ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಯಾರಲ್ಲೂ ಇಲ್ಲ. ಬಿಡುಗಡೆಯೇ ಆಗದ ಸಿನಿಮಾಗಳೂ ಇವೆ. ಅವು […]

ಅವನೌವ್ನ ಏನ ಸಿಂಗಾಪುರಾ…!

- ಚೂಟಿ ಚಿದಾನಂದ

ಅವನೌವ್ನ ಏನ ಸಿಂಗಾಪುರಾ…!
- ಚೂಟಿ ಚಿದಾನಂದ

‘ಎಪ್ಪಾ ಲೇ, ಎಪ್ಪಾ ಲೇ, ಎಲ್ಲೆದಿಯೋ…?’ ಮಗನ ಕೂಗಿಗೆ ಅಪ್ಪನ ಉತ್ತರ, ‘ಲೇ ಮಂಗಸೂಳೀ ಮಗನಾ, ಡ್ಯಾಡೀ ಅನ್ನಲೇ ಭೋಸುಡ್ಕೆ..!’  – ಚೂಟಿ ಚಿದಾನಂದ   ನಮ್ಮ ಸಂಗ್ಯಾ ಹಳ್ಳಿ ಊರಾಗ ರೈತನ ಮಗ. ಮನೀ ತುಂಬ ಜನ್ರಿಗಿಂತ ದನಗಳು ತುಂಬಿದ್ವು. ಸಂಗ್ಯಾ ಸಣ್ಣವನಿದ್ದಾಗಿಂದ ಸಗಣ್ಯಾಗ ಬಿದ್ದು ಒದ್ದಾಡಿ ಬೆಳದಾವ. ಅವ್ರವ್ವ ನನ ಮಗ ಸಾಲಿ ಕಲೀಲಿ ಅಂತಾ ಸಾಲೀಗೆ ಕಳ್ಸತಿದ್ಲು. ಅವ್ರಪ್ಪ ಬ್ಯಾಡಲೆ ಮಗನಾ ಹೊಲಕ್ಕ ನಡೀ, ಕುಂಟೀ ಹೊಡಿ ಅಂತಿದ್ದ. ಅವ್ರವ್ವ ಹಟಮಾರಿ ಅಂದ್ರ […]

ಹಸಿ ಮಣ್ಣ ಧ್ಯಾನ

-ಸ್ಮಿತಾ ಅಮೃತರಾಜ್, ಸಂಪಾಜೆ

ಹಸಿ ಮಣ್ಣ ಧ್ಯಾನ
-ಸ್ಮಿತಾ ಅಮೃತರಾಜ್, ಸಂಪಾಜೆ

ಬಿದ್ದಿದ್ದಾರೆ ಪೈಪೋಟಿಗೆ ಎಲ್ಲರೂ ದುರ್ಬೀನು ಧರಿಸಿ ಹಸಿ ಮಣ್ಣ ಅರಸಿ ಗುದ್ದಲಿ ಪೂಜೆ ನಡೆಸಿ ಲೇಪಿಸುತ್ತಿದ್ದಾರೆ ಡಾಂಬರು ಫೌಂಡೇಶನ್ ಕ್ರೀಂ ಹಚ್ಚುವಂತೆ.   ಸಂಕಟ ಸುಲಭಕ್ಕೆ ದಕ್ಕುವ ಸಂಗತಿಯಲ್ಲವೀಗ ಹಾರ ಬಯಸುವ ದೂಳ ಕಣಕಣದ ಚಡಪಡಿಕೆಗೆ ಎಷ್ಟು ಚೆಂದ ಮಿರುಗು ಬಣ್ಣದ ಲೇಪ?   ಏದುಸಿರು ಬಿಡುವಾಗ ಬಿರುಬಿಸಿಲಿನಲ್ಲಿ ರೂಪಾಂತರಗೊಂಡ ಪ್ರಾಣವಾಯು ಹೇಳಿಕೊಡಲಾಗುತ್ತಿದೆ ಇಲ್ಲಿ ಎಳೆಯರಿಗೆ ಚಿತ್ರಕ್ಕೆ ಬಣ್ಣ ತುಂಬುವ ಪಾಠ ಫ್ಯಾನಿನಡಿಯಲ್ಲಿ ಕುಳ್ಳಿರಿಸಿ.   ತಲೆಯೆತ್ತಿದೆ ವಿಶಾಲ ಸಭಾಂಗಣ ತೇವದ ಕುರುಹೇ ಸಿಗದಂತೆ ಕೆರೆಯ ಸಮಾಧಿಯ […]

ನಿಜ ಆದ ಅನುಮಾನ!

ನಿಜ ಆದ ಅನುಮಾನ!

ಕೊರೊನೋತ್ತರ ಅವಧಿಯಲ್ಲಿ ಜನರ ಜೀವನದೃಷ್ಟಿ ಮತ್ತು ಜೀವನಶೈಲಿಯಲ್ಲಿ ಗಮನಾರ್ಹ ಸ್ಥಿತ್ಯಂತರ ಆಗಬಹುದೆಂದು ಅನೇಕರು ಕನಸು ಕಂಡಿದ್ದೆವು. ಹಾಗಾಗದಿರಲೂ ಸಾಧ್ಯ ಎಂಬ ಸಣ್ಣ ಶಂಕೆ ಮತ್ತು ವಾಸ್ತವ ಪ್ರಜ್ಞೆಯೂ ಜೊತೆಗಿತ್ತು. ಆದರೆ ಫಲಿತಾಂಶಕ್ಕಾಗಿ ಕೊರೊನಾ ಅವಧಿ ಮುಗಿಯುವವರೆಗೂ ಕಾಯುವ ಅಗತ್ಯ ಕೂಡಾ ಇಲ್ಲದಂತಾಗಿದೆ. ಈಗಾಗಲೇ ಜನಸಾಮಾನ್ಯರ ವ್ಯಕ್ತಿಗತ ಸ್ವಾರ್ಥ ಮತ್ತು ಅಧಿಕಾರಸ್ಥರ ಹಣದಾಹ ಪ್ರಖರವಾಗಿ ಪ್ರಕಟಗೊಂಡಿದೆ. ನಮ್ಮೊಳಗಿನ ಅನುಮಾನವೇ ನಿಜ ಆಗಿ, ಆಶಯ ಘಾಸಿಗೊಂಡಿದ್ದಕ್ಕೆ ಪುರಾವೆಗಳ ಕೊರತೆಯಿಲ್ಲ. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕರ್ನಾಟಕ ಬಿಜೆಪಿ ಸರ್ಕಾರ ಕೊರೊನಾ ಸಂದರ್ಭದಲ್ಲಿ ಆರಂಭದಿಂದ […]

ವಿಶೇಷ ಸಂದರ್ಭದ ವಿಶಿಷ್ಟ ಶಿಶು!

-ಡಾ.ಬಿ.ಎಲ್.ಶಂಕರ್

ವಿಶೇಷ ಸಂದರ್ಭದ ವಿಶಿಷ್ಟ ಶಿಶು!
-ಡಾ.ಬಿ.ಎಲ್.ಶಂಕರ್

‘ಬದಲಾವಣೆಯೇ ಶಾಶ್ವತ’ –ಇದು ರೂಢಿಗತ ನುಡಿ. ಜೊತೆಗೆ, ಸತ್ಯವೂ ಕೂಡಾ. ಈಗಂತೂ ವೈಜ್ಞಾನಿಕ ಸಂಶೋಧನೆಗಳ ಫಲರೂಪವಾದ ವಿಪರೀತ ಆಯ್ಕೆಗಳು ಬೇರೆ. ಪರಿಸ್ಥಿತಿ ಹೀಗಿರುವಾಗ ‘ಶಾಶ್ವತ’ ಪದಕ್ಕೆ ನೆಲೆಯೆಲ್ಲಿ? ‘ಅಕ್ಷರ’ ಎಂದರೆ ಶಾಶ್ವತ ಎಂದರ್ಥ. ಅಕ್ಷರ ಜ್ಞಾನವೇ ಶಿಕ್ಷಣ. ಅಕ್ಷರವೇ ಶಾಶ್ವತವಾಗಿರಬೇಕೇ ವಿನಾ ಶಿಕ್ಷಣ ವಿಧಾನ ಶಾಶ್ವತವಾಗಿರಬಾರದು. ಹಿಂದಿನ ವಿಧಾನಕ್ಕಿಂತ ಶ್ರೇಷ್ಠ ವಿಧಾನದ ಅನ್ವೇಷಣೆಯಾಗಬೇಕಲ್ಲದೆ, ಸಂಪೂರ್ಣ ರೂಪಾಂತರ ಉಚಿತವಲ್ಲ. ಭಾರತೀಯ ಶಿಕ್ಷಣಪದ್ಧತಿ ವಿಶ್ವದಲ್ಲೇ ಹೆಸರುವಾಸಿಯಾಗಿತ್ತು. ಮಕ್ಕಳ ಬೌದ್ಧಿಕ, ಮಾನಸಿಕ, ಅಧ್ಯಾತ್ಮಿಕ ವಿಕಾಸಕ್ಕೆ ಪೂರಕವಾದ ಶಿಕ್ಷಣ ಪದ್ಧತಿ ಆಚರಣೆಯಲ್ಲಿತ್ತು. ಮಕ್ಕಳ […]

ಕ್ರಾಂತಿಯೇ ಅಲ್ಲದ ಆನ್ ಲೈನ್ ಕ್ರಾಂತಿ!

-ರಾಜೇಂದ್ರ ಚೆನ್ನಿ

ಕ್ರಾಂತಿಯೇ ಅಲ್ಲದ ಆನ್ ಲೈನ್ ಕ್ರಾಂತಿ!
-ರಾಜೇಂದ್ರ ಚೆನ್ನಿ

ಕೊರೊನಾ ವೈರಾಣು ಆಗಲೇ ಮಾರುಕಟ್ಟೆ ಹಾಗೂ ರಾಜಕೀಯ ಶಕ್ತಿಯ ಬೆಂಬಲ ಪಡೆದಿದ್ದ online ಶಿಕ್ಷಣಕ್ಕೆ ಅಪಾರ ವೇಗವನ್ನು ಹಾಗೂ ವಿಸ್ತಾರವನ್ನು ಸೃಷ್ಟಿಸಿದೆಯೇ ಹೊರತು ಅದು ಈ ಪಿಡುಗಿನಿಂದಾಗಿ ಅನಿವಾರ್ಯವಾಗಿ ಹುಟ್ಟಿಕೊಂಡ ಹೊಸ ವಿದ್ಯಮಾನ ಖಂಡಿತ ಅಲ್ಲ. ಒಂದು ಕುತೂಹಲದ ಅಂಶವೆAದರೆ ಅಂತರ್‌ಜಾಲವು ಭಾರತವನ್ನು ಪ್ರವೇಶ ಮಾಡಿದ್ದು ಶಿಕ್ಷಣ ಹಾಗೂ ಸಂಶೋಧನೆಯ ಶಿಕ್ಷಣ ಸಂಸ್ಥೆಗಳ ಮೂಲಕವೆ.  1986ರಲ್ಲಿ Educational Research Network (ERNET) ತಂತ್ರಜ್ಞಾನವನ್ನು ಭಾರತೀಯ ವಿಜ್ಞಾನ ಸಂಸ್ಥೆ, ಐ.ಐ.ಟಿ.ಗಳು ಸಂಶೋಧನೆಗಾಗಿ ಬಳಸಿಕೊಳ್ಳತೊಡಗಿದವು. ಅಲ್ಲಿಂದ 9 ವರ್ಷಗಳ ನಂತರ […]

ನ್ಯಾಯಾಲಯದಲ್ಲಿ ಆನ್‌ಲೈನ್ ಕಲಾಪ ಸಾಧ್ಯವೇ?

-ಶಿವಯೋಗಿ ಸಾಲಿಮಠ

ನ್ಯಾಯಾಲಯದಲ್ಲಿ ಆನ್‌ಲೈನ್ ಕಲಾಪ ಸಾಧ್ಯವೇ?
-ಶಿವಯೋಗಿ ಸಾಲಿಮಠ

ಆನ್‌ಲೈನ್ ಮೂಲಕ ನ್ಯಾಯಾಲಯದ ಕಾರ್ಯಕಲಾಪ ನಡೆಸಿದಲ್ಲಿ ಅವಸರದ ಪ್ರಕ್ರಿಯೆಯಿಂದ ವ್ಯಾಜ್ಯದಾರರಿಗೆ ಹಾನಿಯಾಗುವುದೇ ಹೆಚ್ಚು. ನ್ಯಾಯಾಲಯದ ಕಾರ್ಯಕಲಾಪಗಳನ್ನು ಆನ್‌ಲೈನ್‌ನಲ್ಲಿ ಯಶಸ್ವಿಯಾಗಿ ನಡೆಸಲು ಸಾಧ್ಯವೇ? ಈಗಿರುವ ಯಾರೂ ನಿರೀಕ್ಷಿಸದ ಅನಿವಾರ್ಯ ಸಂದರ್ಭದಲ್ಲಿ ಈ ಪ್ರಶ್ನೆ ಅಮುಖ್ಯವೆನಿಸಲಾರದು. ಕಳೆದ 38 ವರ್ಷಗಳಿಂದ ವಕೀಲನಾಗಿ ಆಸಕ್ತಿಯಿಂದ ಕಾರ್ಯನಿರ್ವಹಿಸುತ್ತಿರುವ ನನ್ನಂಥವರು ನ್ಯಾಯಾಂಗದಲ್ಲಿ ಸಾಕಷ್ಟು ಬದಲಾವಣೆ, ಸುಧಾರಣೆ, ಅನುಕೂಲತೆ, ಅನಾನುಕೂಲತೆ, ಅನಿವಾರ್ಯತೆ ನೋಡುತ್ತಲೇ ಬಂದಿದ್ದೇವೆ. ನಮ್ಮ ವೃತ್ತಿಯ ಪ್ರಾರಂಭದ ದಿನಗಳಲ್ಲಿ ಇದ್ದ ವ್ಯವಸ್ಥೆಗೂ ಇತ್ತೀಚಿನ ದಿನಗಳಲ್ಲಿಯ ಕಾರ್ಯಕಲಾಪಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಅಂದಿನ ದಿನಗಳಲ್ಲಿ ವಾಜ್ಯಗಳು ಪ್ರಾರಂಭವಾಗಿ […]

ಕೊರೊನಾ ಕಾಲದಲ್ಲಿ ಉನ್ನತ ಶಿಕ್ಷಣ

-ಡಾ.ಎನ್.ಎಸ್.ಗುಂಡೂರ

ಕೊರೊನಾ ಕಾಲದಲ್ಲಿ ಉನ್ನತ ಶಿಕ್ಷಣ
-ಡಾ.ಎನ್.ಎಸ್.ಗುಂಡೂರ

ಶಿಕ್ಷಣ ವಲಯದಲ್ಲಿ, ವಿಶೇಷವಾಗಿ ಉನ್ನತ ಶಿಕ್ಷಣದಲ್ಲಿ ಮರುಹೊಂದಾಣಿಕೆ ಹೇಗೆ ರೂಪುಗೊಳ್ಳುತ್ತದೆಂದು ಅವಲೋಕಿಸುತ್ತ, ಇಲ್ಲಿ ಉಂಟಾಗುತ್ತಿರುವ ಸಮಸ್ಯೆ ಹಾಗೂ ಸವಾಲುಗಳ ಕುರಿತು ಆಲೋಚಿಸುವುದು ಈ ಲೇಖನದ ಮುಖ್ಯ ಆಶಯ. ಮನುಕುಲದ ಇತಿಹಾಸದಲ್ಲಿ ಆಗಿಹೋದ ಬೇರೆಲ್ಲ ಸೋಂಕು ರೋಗಗಳಿಗೆ ಹೋಲಿಸಿ ನೋಡಿದರೆ, ಕೊರೊನಾದಿಂದ ಉಂಟಾಗುತ್ತಿರುವ ಸಾವು-ನೋವುಗಳ ಪ್ರಮಾಣ ಕಡಿಮೆ ಎಂದೇ ಹೇಳಬಹುದು. ಆದರೆ ಜಗತ್ತಿನಾದ್ಯಂತ ಏಕಕಾಲಕ್ಕೆ ಕೊರೊನಾ ಉಂಟು ಮಾಡಿರುವ ಪರಿಣಾಮ ಮತ್ತು ಬಿಕ್ಕಟ್ಟು ಇನ್ನುಳಿದ ಯಾವ ವಿದ್ಯಮಾನವು ಮಾಡಿರಲಿಕ್ಕಿಲ್ಲ! ಇಡೀ ಜಗತ್ತನ್ನೇ ಒಂದು ಬಾರಿ ಮೂಗುಹಿಡಿದು ನಿಲ್ಲಿಸಿದಂತಾಗಿದೆ. ಆದಾಗ್ಯೂ […]

ಆನ್‌ಲೈನ್ ಶಿಕ್ಷಣ: ವರವೋ? ಶಾಪವೋ?

-ವೆಂಕಟೇಶ್ ಎಸ್.

ಆನ್‌ಲೈನ್ ಶಿಕ್ಷಣ:  ವರವೋ? ಶಾಪವೋ?
-ವೆಂಕಟೇಶ್ ಎಸ್.

ಕೇಳುಗರಿಗೆ ಉಪಕರಣಗಳು ಬೇಕು, ಹೇಳುವವರಿಗೆ ಪ್ರೋತ್ಸಾಹವೂ ಬೇಕು! ತಂತ್ರಜ್ಞಾನವು ಜಗತ್ತನ್ನು ಒಂದು ಪುಟ್ಟ ಗ್ರಾಮವನ್ನಾಗಿಸುತ್ತಿದೆ. ಇದರಿಂದ ಜಗತ್ತು ಬೆರಳಿನ ತುದಿಯಲ್ಲಿದೆ. ಸಂಶೋಧನಾತ್ಮಕವಾಗಿ ಹೇಳುವುದಾದರೆ ಬಹಳ ಹಿಂದಿನಿಂದ ಸಂಪಾದಿಸಿದ ಜ್ಞಾನಕ್ಕೆ ಹೋಲಿಸಿದರೆ 1700ರಲ್ಲಿ ಜ್ಞಾನ ದ್ವಿಗುಣವಾಯಿತು. 1900ರಲ್ಲಿ ಹಿಂದೆ ಇರುವ ಜ್ಞಾನಕ್ಕೆ ಹೋಲಿಕೆ ಮಾಡಿದರೆ ಮತ್ತೆ ದ್ವಿಗುಣವಾಯಿತು. ಹೊಸ ಅನ್ವೇಷಣೆಯ ಮೂಲಕ 1950ರಲ್ಲಿ ಮತ್ತೆ ಹಿಂದಿನ ಎಲ್ಲಾ ಜ್ಞಾನ ದ್ವಿಗುಣವಾಯಿತು. ಇದು ಮುಂದುವರೆಯುತ್ತಾ ಮುಂದೆ 20 ಅಥವಾ 15 ವರ್ಷಗಳಿಗೊಮ್ಮೆ ಹಿಂದಿನ ಜ್ಞಾನ ದ್ವಿಗುಣಗೊಳ್ಳುತ್ತಾ ಬಂದಿದೆ. ಇದನ್ನು ಗಮನದಲ್ಲಿಟ್ಟುಕೊಂಡು […]

1 23 24 25 26 27 47