ಅನಿಶ್ಚಿತ ಆರ್ಥಿಕ ನೀತಿ ಅಭಿವೃದ್ಧಿಗೆ ಕಾಡುವ ಭೀತಿ!

- ಡಾ.ಟಿ.ಆರ್.ಚಂದ್ರಶೇಖರ

ಅನಿಶ್ಚಿತ ಆರ್ಥಿಕ ನೀತಿ ಅಭಿವೃದ್ಧಿಗೆ ಕಾಡುವ ಭೀತಿ!
- ಡಾ.ಟಿ.ಆರ್.ಚಂದ್ರಶೇಖರ

ರೈತರ ವರಮಾನವನ್ನು 2022ರಲ್ಲಿ ದುಪ್ಪಟ್ಟು ಮಾಡುತ್ತೇವೆ, ಭಾರತದ ಜಿಡಿಪಿಯನ್ನು 2024ರಲ್ಲಿ ಐದು ಟ್ರಿಲಿಯನ ಡಾಲರ್ ಮಾಡುತ್ತೇವೆ ಎಂಬುದೆಲ್ಲ ಕೇವಲ ‘ಭಾಷಣದ ಸರಕು’ ಎಂಬುದು ಜನಕ್ಕೆ ಈಗ ತಿಳಿದಿದೆ!. – ಡಾ.ಟಿ.ಆರ್.ಚಂದ್ರಶೇಖರ ಇಂದು ಭಾರತವು ಸಂಪೂರ್ಣ ಖಾಸಗೀಕರಣ ಪರ್ವದಲ್ಲಿ ಹಾದು ಹೋಗುತ್ತಿದೆ. ಉದಾರವಾದಿ ನೀತಿಯು ಆರಂಭವಾದ 1991ರಿಂದ 2014ರವರೆಗೆ ನಮಲ್ಲಿದ್ದುದು ಮಿತ ಖಾಸಗೀಕರಣ. ಈಗ 2014ರ ನಂತರ ಆರ್ಥಿಕತೆಯ ಪೂರ್ಣ ಖಾಸಗೀಕರಣ ನಡೆದಿದೆ. 1991 ಮತ್ತು 2014ರ ಆರ್ಥಿಕ ನೀತಿಗಳಲ್ಲಿನ ಈ ಭಿನ್ನತೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಕೇಂದ್ರ […]

ಭಕ್ತಿ ಮತ್ತು ಪ್ರಭುತ್ವ ಪರಂಪರೆ ಹಿನ್ನೆಲೆಯಲ್ಲಿ ಅಯೋಧ್ಯೆಯ ರಾಮ ಮಂದಿರ

- ಪೃಥ್ವದತ್ತ ಚಂದ್ರಶೋಭಿ

ಭಕ್ತಿ ಮತ್ತು ಪ್ರಭುತ್ವ ಪರಂಪರೆ ಹಿನ್ನೆಲೆಯಲ್ಲಿ ಅಯೋಧ್ಯೆಯ ರಾಮ ಮಂದಿರ
- ಪೃಥ್ವದತ್ತ ಚಂದ್ರಶೋಭಿ

ರಾಮಮಂದಿರದ ನಿರ್ಮಾಣವು ರಾಜಕಾರಣದ ಪ್ರೇರಣೆಯನ್ನು ಹೊಂದಿದೆ ಎನ್ನುವ ಮಾತು ಆಗಾಗ ಕೇಳಿಬರುತ್ತದೆ. ಇದು ಸತ್ಯ. ದೇವಾಲಯಗಳು ಐತಿಹಾಸಿಕವಾಗಿ ಸಹ ಯಾವಾಗಲೂ ರಾಜಕಾರಣದ ಗುರಿಗಳು ಮತ್ತು ಆಶಯಗಳನ್ನು ಪ್ರತಿಪಾದಿಸುವ ಯೋಜನೆಗಳೆ ಆಗಿದ್ದವು. – ಪೃಥ್ವದತ್ತ ಚಂದ್ರಶೋಭಿ ಕಳೆದ ಮೂರು ದಶಕಗಳಿಂದ ಭಾರತೀಯ ಸಮಾಜ ಮತ್ತು ರಾಜಕಾರಣಗಳನ್ನು ಗಾಢವಾಗಿ ಕಲಕಿದ ಮತ್ತು ಬದಲಿಸಿದ ರಾಮಜನ್ಮಭೂಮಿ ವಿವಾದಕ್ಕೆ ಆಗಸ್ಟ್ 5ರಂದು ಒಂದು ತಾರ್ಕಿಕ ಅಂತ್ಯ ದೊರಕಿದೆ. ಆ ದಿನದಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಮನಿಗೆ ಹೊಸದೊಂದು ದೇವಾಲಯವನ್ನು ಕಟ್ಟುವ ಕೆಲಸ […]

ಇತಿಹಾಸದಲ್ಲಿ ಪೂಜಾಸ್ಥಳಗಳ ನಿರ್ಮಾಣ ಧರ್ಮ ಮತ್ತು ರಾಜಕಾರಣ

- ರಾಜೇಂದ್ರ ಚೆನ್ನಿ

ಇತಿಹಾಸದಲ್ಲಿ ಪೂಜಾಸ್ಥಳಗಳ ನಿರ್ಮಾಣ ಧರ್ಮ ಮತ್ತು ರಾಜಕಾರಣ
- ರಾಜೇಂದ್ರ ಚೆನ್ನಿ

ಚರಿತ್ರೆ ಹೇಳುವ ಸತ್ಯವೆಂದರೆ ಎಲ್ಲಾ ಧರ್ಮಗಳ ಪೂಜಾಸ್ಥಳಗಳು ಪಾರಮಾರ್ಥಿಕ ಸತ್ಯಗಳ ಪ್ರತೀಕಗಳಾಗುವ ಜೊತೆಗೆ ಅಂದಂದಿನ ರಾಜಕೀಯದ ಭಾಗವೂ ಆಗಿದ್ದವು; ಆಗಿವೆ. ಹೀಗಾಗಿ ಭಾರತದಲ್ಲಿ ಮಾತ್ರವಲ್ಲ ಜಗತ್ತಿನ ಪ್ರಾಯಶಃ ಎಲ್ಲಾ ದೇಶಗಳಲ್ಲಿ ಪ್ರತಿನಿತ್ಯವೂ ಅವುಗಳ ಬಗ್ಗೆ ವಿವಾದಗಳು ಸಂಘರ್ಷಗಳು ನಡೆಯುತ್ತಿವೆ. – ರಾಜೇಂದ್ರ ಚೆನ್ನಿ ಮಾರ್ಕಂಡೇಯರು ಹೇಳಿದರು: “ಕೃತಯುಗದಲ್ಲಿ ಈ ಭೂಮಿಯ ಮೇಲೆ ದೇವಸ್ಥಾನವನ್ನು ಕಟ್ಟಲಿಲ್ಲ, ಓ ದೊರೆಯೆ, ಜನರು ದೇವರುಗಳನ್ನು ತಮ್ಮ ಕಣ್ಣೆದುರಿಗೆ ಕಾಣುತ್ತಿದ್ದರು. ತ್ರೇತ ಹಾಗೂ ದ್ವಾಪರ ಯುಗಗಳಲ್ಲಿ, ಜನರು ದೇವರುಗಳನ್ನು ತಮ್ಮ ಕಣ್ಣೆದುರಿಗೇ ನೋಡುತ್ತಿದ್ದರೂ […]

ಕಾವ್ಯನಾಯಕನ ಆದರ್ಶದ ಬೆಳಕಿಗಾಗಿ ರಾಮಮಂದಿರ

- ಗ.ನಾ.ಭಟ್ಟ

ಕಾವ್ಯನಾಯಕನ ಆದರ್ಶದ ಬೆಳಕಿಗಾಗಿ ರಾಮಮಂದಿರ
- ಗ.ನಾ.ಭಟ್ಟ

ಭಾರತದ ಮಹಾಕಾವ್ಯವೊಂದರ ನಾಯಕನ ಆದರ್ಶದ ಬೆಳಕಿನಲ್ಲಿ ರಾಮ ಮಂದಿರ ನಿರ್ಮಾಣ ಆಗುತ್ತಿರುವುದು ಇದೇ ಮೊದಲು. ಬಹುಶಃ ಭಾರತದ ಯಾವ ದೇವಾಲಯಕ್ಕೂ, ದೇವರಿಗೂ ಇಂತಹ ಮಹಾಕಾವ್ಯದ ಹಿನ್ನೆಲೆಯಿಲ್ಲ. – ಗ.ನಾ.ಭಟ್ಟ ಭಾರತದಲ್ಲಿ ಅಸಂಖ್ಯಾಕ ದೇವಾಲಯಗಳಿವೆ. ಒಂದೊಂದು ದೇವಾಲಯವೂ ಒಂದೊಂದು ಇತಿಹಾಸವನ್ನು, ಚರಿತ್ರೆಯನ್ನು, ದಂತಕಥೆಯನ್ನು, ಮಹಾತ್ಮ್ಯವನ್ನು ಹೇಳುತ್ತದೆ. ಭಕ್ತರೂ ಕೂಡಾ ತಂಡೋಪತಂಡವಾಗಿ ದೇವಾಲಯಗಳಿಗೆ ಭೇಟಿಯಿತ್ತು, ದೇವರ ದರ್ಶನ ಪಡೆದು, ತೀರ್ಥ-ಪ್ರಸಾದ ಸ್ವೀಕರಿಸಿ, ಧನ್ಯತೆಯನ್ನು ಪಡೆಯುತ್ತಾರೆ. ಆದರೂ ದೇವಾಲಯಗಳ ಕಟ್ಟಡ, ನಿರ್ಮಾಣ, ಪ್ರತಿಷ್ಠಾಪನೆ, ಪೂಜೆ, ಅರ್ಚನೆ, ಧ್ಯಾನ, ಭಜನೆ ಯಾವುದೂ ನಿಂತಿಲ್ಲ. […]

ಇಂದಿನ ನ್ಯಾಯಾಂಗ ವ್ಯವಸ್ಥೆ ಸ್ವರೂಪಗಳು, ‘ಭಿನ್ನ’ ರೂಪಗಳು!

- ಡಾ.ವೆಂಕಟಾಚಲ ಹೆಗಡೆ

ಇಂದಿನ ನ್ಯಾಯಾಂಗ ವ್ಯವಸ್ಥೆ  ಸ್ವರೂಪಗಳು, ‘ಭಿನ್ನ’ ರೂಪಗಳು!
- ಡಾ.ವೆಂಕಟಾಚಲ ಹೆಗಡೆ

ಕೆಲವು ಮುಖ್ಯ ನ್ಯಾಯಾಧೀಶರನ್ನು ಕುರಿತು ಹಿರಿಯ ನ್ಯಾಯವಾದಿ ಪ್ರಶಾಂತ ಭೂಷಣ್ ಮಾಡಿದ ಟ್ವೀಟ್ ಮತ್ತು ಸರ್ವೋಚ್ಚ ನ್ಯಾಯಾಲಯದ ಪೀಠ ಅವರ ವಿರುದ್ಧ ಹೂಡಿರುವ ನ್ಯಾಯಾಲಯ ನಿಂದನೆ ಮೊಕದ್ದಮೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. – ಡಾ.ವೆಂಕಟಾಚಲ ಹೆಗಡೆ ನಮ್ಮ ದೇಶದ ಆಗುಹೋಗುಗಳ ಎಲ್ಲ ನಿಯಂತ್ರಣ ಸಂವಿಧಾನದ ಪರಿಧಿಯಲ್ಲೆ ಆಗಬೇಕೆಂಬುದನ್ನು ನಾವೆಲ್ಲ ಒಪ್ಪಿಕೊಳ್ಳುತ್ತೇವೆ. ಅದಕ್ಕಾಗಿ ನಾವು ಎಪ್ಪತ್ತು ವಸಂತಗಳ ಹಿಂದೆ ಅತ್ಯಂತ ವಿವರವಾದ ಮತ್ತು ಎಲ್ಲವನ್ನು ಒಳಗೊಳ್ಳುವಂತಿರುವ ಸಂವಿಧಾನವನ್ನು ಸಾಕಷ್ಟು ವಿಚಾರ ವಿನಿಮಯಗಳ ನಂತರ ಆರಿಸಿಕೊಂಡಿದ್ದೇವೆ. ನಮ್ಮ ಸರಕಾರ ಹೇಗಿರಬೇಕು […]

ಸಾಂಕ್ರಾಮಿಕದ ಅಂತ್ಯ ಹೇಗೆ..? ಚಿಕಿತ್ಸೆಯೋ..? ಲಸಿಕೆಯೋ..? ಸಮೂಹ ರೋಗನಿರೋಧಕ ಶಕ್ತಿಯೋ..?

ಪ್ರವೇಶ

ಕೊರೊನಾ ವೈರಾಣುವಿನಿಂದ ಹಬ್ಬಿದ ಕೋವಿಡ್-19 ಸಾಂಕ್ರಾಮಿಕ ರೋಗ ಕೊನೆಗಾಣುವುದು ಹೇಗೆ ಎಂಬ ಚರ್ಚೆ ಇಂದು ಪ್ರಸ್ತುತವಾಗಿದೆ. ಯಾವ ದಾರಿಯಲ್ಲಿ ವೈರಾಣುವಿನಿಂದ ಪ್ರಾಣಭಯ ದೂರವಾಗುವುದೋ ಹಾಗೂ ಯಾವ ರೀತಿಯಲ್ಲಿ ವೈರಾಣುವಿನ ಹರಡುವಿಕೆ ತಪ್ಪುವುದೋ ಎಂಬುದು ಮುಂದಿನ ತಿಂಗಳುಗಳಲ್ಲಿ ನಿರ್ಧಾರವಾಗಲಿದೆ. ಹಲವು ಚುಚ್ಚುಮದ್ದು ಹಾಗೂ ಔಷಧಿಗಳು ಬಂದಿವೆ. ಆದರೆ ಯಾವುದೂ ನೂರಕ್ಕೆ ನೂರರಷ್ಟು ಪ್ರಾಣಹಾನಿ ತಡೆಯುವ ಭರವಸೆ ನೀಡುತ್ತಿಲ್ಲ. ಅನೇಕ ಲಸಿಕೆಗಳು ಲ್ಯಾಬೊರೇಟರಿಗಳಿಂದ ಆಚೆ ಬಂದು ಜನರ ನಡುವೆ ಪ್ರಯೋಗವಾಗುತ್ತಿವೆ. ಇವು ದೊಡ್ಡ ಸಂಖ್ಯೆಯಲ್ಲಿ ಎಲ್ಲರಿಗೂ ಲಭ್ಯವಾಗಲು ತಿಂಗಳುಗಳೇ ಬೇಕು. […]

ಸಾಂಕ್ರಾಮಿಕದ ಅಂತ್ಯ ಹೇಗೆ..? ಚಿಕಿತ್ಸೆಯೋ..? ಲಸಿಕೆಯೋ..? ಸಮೂಹ ರೋಗನಿರೋಧಕ ಶಕ್ತಿಯೋ..?

- ಡಾ.ಬಿ.ಆರ್.ಮಂಜುನಾಥ್

ಸಾಂಕ್ರಾಮಿಕದ ಅಂತ್ಯ ಹೇಗೆ..?  ಚಿಕಿತ್ಸೆಯೋ..? ಲಸಿಕೆಯೋ..?  ಸಮೂಹ ರೋಗನಿರೋಧಕ ಶಕ್ತಿಯೋ..?
- ಡಾ.ಬಿ.ಆರ್.ಮಂಜುನಾಥ್

ಅನೇಕ ವಿದ್ಯಾವಂತರು, ಕ್ರಿಯಾಶೀಲರು ಮತ್ತೆ ಮತ್ತೆ ಕೇಳುವ, ತಮ್ಮನ್ನೇ ಕೇಳಿಕೊಳ್ಳುವ ಪ್ರಶ್ನೆಗಳು… ನಮ್ಮ ಬದುಕು ಮತ್ತೆ ಮಾಮೂಲಾಗುತ್ತದೆಯೇ? ಮತ್ತೆ ನಾನು ರಸ್ತೆಯಲ್ಲಿ ನಿಂತು ನಿರಾತಂಕವಾಗಿ ತಿಂಡಿ ತಿಂದು ಟೀ ಕುಡಿಯಬಲ್ಲೆನೇ? ಮತ್ತೆ ಸಹಸ್ರಾರು ಜನರೊಂದಿಗೆ ಬೆರೆಯಬಲ್ಲೆನೇ? ಈ ಪ್ರಶ್ನೆಗಳಿಗೆ ವಿಜ್ಞಾನದ ಉತ್ತರವೇನು? ಕೋವಿಡ್ ಕಲಿಗಾಲ ಮುಗಿಯುತ್ತದೆಯೇ? ಮುಗಿಯುವುದಿದ್ದರೆ ಯಾವಾಗ ಮುಗಿಯುತ್ತದೆ, ಹೇಗೆ ಮುಗಿಯುತ್ತದೆ, ಯಾವ ಕ್ರಮಗಳಿಂದ, ಎಷ್ಟರಮಟ್ಟಿಗೆ ಮುಗಿಯುತ್ತದೆ? ಇದೆಲ್ಲಕ್ಕೂ ಖಚಿತವಾದ ಉತ್ತರಗಳು ಕಷ್ಟವಾದರೂ, ವಿವಿಧ ದೇಶಗಳಲ್ಲಿ ಖಂಡಗಳಲ್ಲಿ ನಡೆದಿರುವ ಹಲವಾರು ಅಧ್ಯಯನಗಳು ಚೆಲ್ಲಿರುವ ಬೆಳಕು ಇಲ್ಲಿದೆ. […]

ರೋಗರಕ್ಷಣಾ ವ್ಯವಸ್ಥೆಯೇ ಸಮರ್ಥ ಮಾರ್ಗ

- ಡಾ.ಶ್ರೀನಿವಾಸ ಕಕ್ಕಿಲ್ಲಾಯ

ರೋಗರಕ್ಷಣಾ ವ್ಯವಸ್ಥೆಯೇ  ಸಮರ್ಥ ಮಾರ್ಗ
- ಡಾ.ಶ್ರೀನಿವಾಸ ಕಕ್ಕಿಲ್ಲಾಯ

2021ರ ಮಧ್ಯದ ವೇಳೆಗಷ್ಟೇ ಲಸಿಕೆಗಳು ಲಭ್ಯವಾಗಬಹುದು; ಅವನ್ನು ಉತ್ಪಾದಿಸಿ, ಎಲ್ಲರಿಗೆ ಕೊಡುವುದಕ್ಕೆ ವರ್ಷಗಳು ಬೇಕಾಗಬಹುದು, ಕೋಟಿಗಟ್ಟಲೆ ಹಣವೂ ಬೇಕು. ವೈರಾಣು ಅದಕ್ಕೆಲ್ಲ ಕಾಯದೆ ಈ ವರ್ಷಾಂತ್ಯದೊಳಗೆ 60-70% ಜನರನ್ನು ಸೋಂಕಿ, ಸಾಮೂಹಿಕವಾಗಿ ಸೋಂಕು ನಿರೋಧಕ ಶಕ್ತಿಯನ್ನುಂಟು ಮಾಡಿ ತಾನಾಗಿ ವಿರಳಗೊಳ್ಳಲಿದೆ. – ಡಾ.ಶ್ರೀನಿವಾಸ ಕಕ್ಕಿಲ್ಲಾಯ ಹೊಸ ಕೊರೋನ ವೈರಸ್ ಚೀನಾದಿಂದ ಬಂದಾಗಿದೆ, ಭಾರತದಲ್ಲಿ ಹರಡಲಿದೆ, ಶತಮಾನಗಳವರೆಗೆ ಶಾಶ್ವತವಾಗಿ ಇರಲಿದೆ ಎಂದು ಮಾರ್ಚ್ನಲ್ಲಿ ಹೇಳಿದ್ದಾಗ ಸರಕಾರದ ಬೆಂಬಲಿಗರೆಂಬವರು ಗೇಲಿ ಮಾಡಿದ್ದರು. ಭಾರತದಂತಹ ಪುಣ್ಯಭೂಮಿಗೆ ಕೊರೋನದಂತಹ ಚೀನಿ ವೈರಸ್ ಬರಲು […]

ಕೊರೋನಾ ವೈರಸ್ ಬಿಕ್ಕಟ್ಟು

- ನೈಗೇಲ್ ಮ್ಯಾಕ್ ಮಿಲನ್

ಕೊರೋನಾ ವೈರಸ್ ಬಿಕ್ಕಟ್ಟು
- ನೈಗೇಲ್ ಮ್ಯಾಕ್ ಮಿಲನ್

ಒಂದು ವ್ಯಾಕ್ಸಿನ್ ಮತ್ತು ಸಮೂಹ ರೋಗ ನಿರೋಧಕ ಸಾಮರ್ಥ್ಯವು ಕೊರೋನಾ ವೈರಸ್ ಸಾಂಕ್ರಾಮಿಕ ರೊಗವನ್ನು ಕೊನೆಗಾಣಿಸಬಹುದೇ?. – ನೈಗೇಲ್ ಮ್ಯಾಕ್ ಮಿಲನ್ ನಾವು ಒಟ್ಟಾಗಿ ಕಾಫಿ ಕುಡಿಯುತ್ತಿದ್ದ, ಜೊತೆಯಾಗಿ ಕುಳಿತು ಸಿನಿಮಾ ನೋಡುತ್ತಿದ್ದ, ಗುಂಪಾಗಿ ನೆರೆದು ಸಂಗೀತ ಕೇಳಿ ಕಾಲಿನಲ್ಲಿ ತಾಳ ಹಾಕುತ್ತಾ, ಆಟಗಳನ್ನು ನೋಡುತ್ತ ಆನಂದಿಸುತ್ತಿದ್ದ ಹಿಂದಿನ ಜಗತ್ತಿನ ಬದುಕಿಗೆ ನಾವು ಮರಳುವುದು ಹೇಗೇ? ಇದರ ಸಾಧ್ಯತೆಯ ಬಗ್ಗೆ ಎರಡು ಅಭಿಪ್ರಾಯಗಳು ಕೇಳಿಬರುತ್ತವೆ. ಒಂದು- ಪರಿಣಾಮಕಾರಿಯಾದ ಲಸಿಕೆ (ವ್ಯಾಕ್ಸಿನ್). ಮತ್ತೊಂದು ಸಮೂಹ ಬೆಳೆಸಿಕೊಳ್ಳುವ ನಿರೋಧಕ ಶಕ್ತಿ […]

ಗಾಢ ಮಬ್ಬಿನಲ್ಲಿ ಮಹಾಮಾರಿ: ಇದರ ಅಂತ್ಯಕ್ಕೆ ಎಲ್ಲಿದೆ ದಾರಿ?

- ನಾಗೇಶ ಹೆಗಡೆ

ಗಾಢ ಮಬ್ಬಿನಲ್ಲಿ ಮಹಾಮಾರಿ: ಇದರ ಅಂತ್ಯಕ್ಕೆ ಎಲ್ಲಿದೆ ದಾರಿ?
- ನಾಗೇಶ ಹೆಗಡೆ

ಕೊರೊನಾ ವೈರಾಣುವನ್ನು ಮಣಿಸಲು ಸಾಧ್ಯವಿಲ್ಲದಿದ್ದರೂ ಅದನ್ನು ಮೂಲೆಗೊತ್ತಲಂತೂ ನಮಗೆ ಸಾಧ್ಯವಿದೆ. ಅದು ಒಂದು ರಾಷ್ಟ್ರದ ಇಚ್ಛಾಶಕ್ತಿಗೆ ಸಂಭಂದಿಸಿದ ವಿಚಾರ. – ನಾಗೇಶ ಹೆಗಡೆ ಈಗಿನ್ನೂ ಇದು ಸರಿಯಾಗಿ ಆರಂಭವೇ ಆದಂತಿಲ್ಲ, ಆಗಲೇ ಸಂಪಾದಕರು “ಈ ಸಾಂಕ್ರಾಮಿಕದ ಅಂತ್ಯ ಹೇಗೆ?” ಎಂದು ಕೇಳುತ್ತಿದ್ದಾರಲ್ಲ! ಇರಲಿ, ಆರಂಭವಾಗಿದ್ದಕ್ಕೆಲ್ಲ ಒಂದು ಅಂತ್ಯ ಅನ್ನೋದು ಇದ್ದೇ ಇರುತ್ತದೆ ಎಂಬ ಆಶಾವಾದಿಗಳು ಈ ಜಗತ್ತಿನಲ್ಲಿ ತುಂಬ ಜನರಿದ್ದಾರೆ. ಕೆಲವರಂತೂ ಕೋವಿಡ್ ನಂತರದ ಬದುಕು ಹೇಗಿರುತ್ತದೆ ಎಂಬ ಘನಗಂಭೀರ ಚರ್ಚೆಯಲ್ಲಿ ತೊಡಗಿದ್ದಾರೆ. “ಕೋವಿಡ್ ನಂತರದ ಬದುಕು” […]

ಸೋಂಕು ಮಣಿಸುವಲ್ಲಿ ಸಮಾಜದ ಪಾತ್ರವೇ ಪ್ರಮುಖ

- ಡಾ.ಕಿರಣ್ ವಿ.ಎಸ್.

ಸೋಂಕು ಮಣಿಸುವಲ್ಲಿ ಸಮಾಜದ ಪಾತ್ರವೇ ಪ್ರಮುಖ
- ಡಾ.ಕಿರಣ್ ವಿ.ಎಸ್.

ಕೋವಿಡ್-19 ಸಮಸ್ಯೆಯ ಅಂತ್ಯ ಯಾವ ದಾರಿಯಲ್ಲಾದರೂ ಆಗಬಹುದು. ಯಾವಾಗ ಎಂಬ ಪ್ರಶ್ನೆಗೆ ನಿಖರ ಉತ್ತರವಿಲ್ಲ! ಇದು ಹಲವಾರು ಅಸ್ಥಿರತೆಗಳ ಮೂಲಕ ಹಾದುಹೋಗುವುದರಿಂದ, ನಿಶ್ಚಿತವಾಗಿ ಹೇಳಲಾಗದು. ಆದರೆ, ಅದರ ಅಂತ್ಯವಂತೂ ಖಚಿತ! ಅಂತ್ಯದ ಕೆಲವು ಮಾರ್ಗಗಳನ್ನು ಊಹಿಸಬಹುದು. – ಡಾ.ಕಿರಣ್ ವಿ.ಎಸ್. “ಈ ಹಾಳು ಕರೊನಾವೈರಸ್ ಕಾಯಿಲೆ ಯಾವಾಗ ಕೊನೆಯಾಗುತ್ತೋ ಕಾಣೆ” ಎನ್ನುವುದು ಪ್ರತಿಯೊಬ್ಬರ ಅಂತರಾಳದ ಮಾತು! ಮಾನವ ಇತಿಹಾಸ ಇಂತಹ ಹಲವಾರು ಜಾಗತಿಕ ವಿಪತ್ತುಗಳನ್ನು ಕಂಡಿದೆ. 1961ರಲ್ಲಿ ಆರಂಭವಾದ ಕಾಲರಾ ರೋಗದ 7ನೆಯ ಜಾಗತಿಕ ಆವೃತ್ತಿ ಇಂದಿಗೂ […]

ಮೂವರು ವೈದ್ಯರು ಎಂಟು ಪ್ರಶ್ನೆಗಳು!

ಡಾ.ಸಿ.ಎನ್.ಮಂಜುನಾಥ

ಮೂವರು ವೈದ್ಯರು ಎಂಟು ಪ್ರಶ್ನೆಗಳು!
ಡಾ.ಸಿ.ಎನ್.ಮಂಜುನಾಥ

ಕೋವಿಡ್ ರೋಗಕ್ಕೆ ಸಂಬಂಧಿಸಿದಂತೆ ಉಪಯುಕ್ತ ಮಾಹಿತಿ ಪಡೆಯಲು ‘ಸಮಾಜಮುಖಿ’ ಮೂವರು ತಜ್ಞ ವೈದ್ಯರನ್ನು ಸಂದರ್ಶಿಸಿತು. ತಮ್ಮ ಬಿಡುವಿಲ್ಲದ ಕಾರ್ಯ ಬಾಹುಳ್ಯದ ನಡುವೆಯೂ ಈ ವೈದ್ಯರು ತಮ್ಮೆದುರು ಇರಿಸಿದ ಎಂಟು ನಿರ್ದಿಷ್ಟ ಪ್ರಶ್ನೆಗಳಿಗೆ ಸಮಚಿತ್ತದಿಂದ ನೀಡಿದ ಉತ್ತರಗಳು ಇಲ್ಲಿವೆ. ಡಾ.ಸಿ.ಎನ್.ಮಂಜುನಾಥ 1250 ಹಾಸಿಗೆ ಸಾಮರ್ಥ್ಯ ಹೊಂದಿರುವ ಬೆಂಗಳೂರಿನ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯು ದಕ್ಷಿಣ ಏಷ್ಯಾದಲ್ಲೇ ಅತಿದೊಡ್ಡ ಸರಕಾರಿ ಹೃದ್ರೋಗ ಚಿಕಿತ್ಸಾ ಸಂಸ್ಥೆ. ಸ್ವತಃ ಹೃದಯರೋಗ ತಜ್ಞರಾಗಿರುವ ಡಾ.ಸಿ.ಎನ್.ಮಂಜುನಾಥ ಅವರು ಮುಖ್ಯಸ್ಥರಾಗಿ ಈ ಸಂಸ್ಥೆಯನ್ನು ಖಾಸಗಿ ಪಂಚತಾರಾ […]

ಕೊರೊನಾ ಲಸಿಕೆ: ಬೃಹತ್ ಉತ್ಪಾದನೆಯೇ ಇಂದಿನ ಅಗತ್ಯ

ಮೂಲ: ದ ಎಕಾನಾಮಿಸ್ಟ್  ಅನುವಾದ: ಡಾ.ಜ್ಯೋತಿ

ಕೊರೊನಾ ಲಸಿಕೆ:  ಬೃಹತ್ ಉತ್ಪಾದನೆಯೇ ಇಂದಿನ ಅಗತ್ಯ
ಮೂಲ: ದ ಎಕಾನಾಮಿಸ್ಟ್  ಅನುವಾದ: ಡಾ.ಜ್ಯೋತಿ

ಕೊರೊನಾ ವೈರಸ್ ಲಸಿಕೆ ಉತ್ಪಾದನೆಗಾಗಿ ಜಗತ್ತಿನ್ನೂ ಸಾಕಷ್ಟು ಖರ್ಚು ಮಾಡುತ್ತಿಲ್ಲ. ಇದನ್ನು ದುಂದು ವೆಚ್ಚವೆಂದು ಭಾವಿಸಲಾಗಿದೆ. ಆದರೆ ಲಸಿಕೆ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸುವ ಬದಲಾಗಿ, ಯಶಸ್ವೀ ಲಸಿಕೆಗಾಗಿ ಸುಮ್ಮನೆ ಕಾಯುವುದು ನಿಜವಾದ ದುಂದುವೆಚ್ಚ! ಮೂಲ: ದ ಎಕಾನಾಮಿಸ್ಟ್  ಅನುವಾದ: ಡಾ.ಜ್ಯೋತಿ ಒಂದು ಕ್ಷಣ ಈ ಚಿಂತನಾ ಪ್ರಯೋಗವನ್ನು ಗಮನಿಸಿ. ನೀವು, ಇನ್ನು ಕೇವಲ ಒಂದು ಗಂಟೆಯೊಳಗೆ ಪಿಜ್ಜಾ ತಿನ್ನಲು ವಿಫಲವಾದರೆ, ಹಸಿವಿನಿಂದ ಸಾಯುತ್ತೀರಿ ಅಂದುಕೊಳ್ಳಿ. ಆಗ ನೀವೇನು ಮಾಡುತ್ತೀರಿ? ಹೆಚ್ಚಿನ ಜನ ತಕ್ಷಣವೇ ಪಿಜ್ಜಾ ಆರ್ಡರ್ ಮಾಡುತ್ತಾರೆ- […]

ಮೌಢ್ಯ ಮತ್ತು ಮಾಧ್ಯಮಗಳು

- ಡಾ.ಲೋಕೇಶ್ ಮೊಸಳೆ

ಮೌಢ್ಯ ಮತ್ತು ಮಾಧ್ಯಮಗಳು
- ಡಾ.ಲೋಕೇಶ್ ಮೊಸಳೆ

ಪಿ.ಹೆಚ್.ಡಿ. ಸಾರಾಂಶ – ಡಾ.ಲೋಕೇಶ್ ಮೊಸಳೆ ಸಂಶೋಧನೆಯ ವಿಷಯ: ‘ಕರ್ನಾಟಕ ರಾಜ್ಯದಲ್ಲಿ ಮೌಢ್ಯ ನಿವಾರಣೆಯಲ್ಲಿ ವಿದ್ಯುನ್ಮಾನ ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮಗಳ ಪಾತ್ರ: ಒಂದು ತೌಲನಿಕ ಅಧ್ಯಯನ’ ಸಂಶೋಧಕರು: ಲೋಕೇಶ್ ಮೊಸಳೆ, ಮೈಸೂರು.          ಮಾರ್ಗದರ್ಶಕರು: ಪ್ರೊ.ಬಿ.ಪಿ.ಮಹೇಶ್ ಚಂದ್ರ ಗುರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗ, ಮಾನಸ ಗಂಗೋತ್ರಿ, ಮೈಸೂರು. ಮನುಷ್ಯ ಸಮಾಜದಲ್ಲಿ ಮಾನವೀಯತೆ ಮೆರೆಯಬೇಕಾದ ಜಾಗದಲ್ಲಿ ಕಂದಾಚಾರಗಳು, ಶೋಷಣೆ ಮತ್ತು ಅನಾಗರಿಕತೆಗಳು ಬೆಳೆಯುತ್ತ ಭಯ, ಆತಂಕ, ಬೌದ್ಧಿಕ ದಾರಿದ್ರ್ಯಗಳು ವಿಜೃಂಭಿಸುವ ಸನ್ನಿವೇಶವನ್ನು ಈ […]

ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಯಶಸ್ವಿಯಾದ ವಿನೋದ್ ಪಾಟೀಲ

ಸಂದರ್ಶನ: ಅಜಮೀರ ನಂದಾಪುರ.

ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಯಶಸ್ವಿಯಾದ  ವಿನೋದ್ ಪಾಟೀಲ
ಸಂದರ್ಶನ: ಅಜಮೀರ ನಂದಾಪುರ.

ಪ್ರಾಥಮಿಕ ಶಾಲೆ ಸೇರುವಾಗ ಆವರಣ ನೋಡಿ ಗಾಬರಿಯಿಂದ ಓಡಿ ಹೋದ ಹುಡುಗನನ್ನು ಎಳೆದು ತಂದು ತರಗತಿಯಲ್ಲಿ ಕೂಡಿಸಿದ್ರು. ಅಂದು ಓಡಿದ್ದ ಹುಡುಗ ವಿನೋದ್ ಪಾಟೀಲ ಸುರತ್ಕಲ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿ, ಇಂದು ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೆ ನೂರ ಇಪ್ಪತ್ಮೂರು, ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದಿದ್ದಾನೆ. ಈ ಹಿಂದೆ 402ನೇ ರ‍್ಯಾಂಕ್ ಪಡೆದು ಐ.ಆರ್.ಎಸ್.ಗೆ ಆಯ್ಕೆಯಾಗಿದ್ದ ಗಂಗಾವತಿಯ ವಿನೋದ್ ಸತತ 5ನೇ ಬಾರಿ ಪರೀಕ್ಷೆ ಎದುರಿಸಿ ಇದೀಗ ಐಎಎಸ್/ಐಪಿಎಸ್ ಗೆ ಅರ್ಹತೆ ಪಡೆದಿದ್ದಾರೆ. ಅವರ ಕಿರು ಸಂದರ್ಶನ… ಸಂದರ್ಶನ: […]

ವಿಶ್ವ ವಿದ್ಯಮಾನ

-ಪುರುಷೋತ್ತಮ ಆಲದಹಳ್ಳಿ

ಸಂಭ್ರಮವಿಲ್ಲದ ವಿಶ್ವಸಂಸ್ಥೆಯ 75ನೇ ವಾರ್ಷಿಕೋತ್ಸವ 2020ರ ಆಗಸ್ಟ್ ತಿಂಗಳಿಗೆ ವಿಶ್ವಸಂಸ್ಥೆಯು ತನ್ನ ಇರುವಿಕೆಯ 75 ವರ್ಷಗಳನ್ನು ಮುಗಿಸಿ ‘ವಜ್ರ ಮಹೋತ್ಸವ’ವನ್ನು ಆಚರಿಸಿಕೊಂಡಿದೆ. 1945ರ ಆಗಸ್ಟ್ ತಿಂಗಳಿನಲ್ಲಿ ದ್ವಿತೀಯ ಮಹಾಯುದ್ಧದ ನಂತರದ ದಿನಗಳಲ್ಲಿ ವಿಶ್ವಸಂಸ್ಥೆಯ ಸ್ಥಾಪನೆಯಾಗಿತ್ತು. ಸಾಮಾನ್ಯ ಸಂದರ್ಭದಲ್ಲಿ ಈ ವಜ್ರ ಮಹೋತ್ಸವವನ್ನು ಅತ್ಯಂತ ಸಡಗರದಿಂದ ಆಚರಿಸಬೇಕೆನ್ನುವ ಮತ್ತು ವಿಶ್ವಸಂಸ್ಥೆಯ ಆದರ್ಶಗಳಿಗೆ ಮತ್ತೊಮ್ಮೆ ತೊಡಗಿಸಿಕೊಳ್ಳಬೇಕೆನ್ನುವ ಕೂಗು ಕೇಳಿಬರಬೇಕಿತ್ತು. ಆದರೆ ಕೋವಿಡ್ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ವಿಡಿಯೋ ಕಾನ್ಫೆರೆನ್ಸ್ ಮುಖಾಂತರ ಮಾಡಲಾಗುವ ಒಂದೆರೆಡು ವಿಶೇಷ ಅಧಿವೇಶನಗಳನ್ನು ಹೊರತುಪಡಿಸಿ ಯಾವುದೇ ಸಡಗರದ […]

ಗೂಗಲ್ ಇರುವಾಗ ಗುರುವೇಕೆ?

- ಡಾ.ವಿಷ್ಣು ಎಂ. ಶಿಂದೆ

ಗೂಗಲ್ ಇರುವಾಗ ಗುರುವೇಕೆ?
- ಡಾ.ವಿಷ್ಣು ಎಂ. ಶಿಂದೆ

ಗುರುವಿಗೆ ಪ್ರಶ್ನೆ ಮಾಡಬಲ್ಲ ಮತ್ತು ಅದರಂತೆ ಸಮರ್ಥವಾಗಿ ವಿದ್ಯಾರ್ಥಿಯನ್ನು ಜ್ಞಾನ, ಅನುಭವ ಮತ್ತು ಕಲಿಕೆಯಲ್ಲಿ ಸಂತೃಪ್ತಿಗೊಳಿಸುವ ಪರ್ಯಾಯ ತಂತ್ರಜ್ಞಾನ ಮಾರ್ಗಗಳು ಬಂದಿರುವುದರಿಂದ ಗುರುಬೇಕೆ ಎಂಬ ಪ್ರಶ್ನೆ ಗಟ್ಟಿಗೊಳ್ಳುತ್ತಿದೆ. – ಡಾ.ವಿಷ್ಣು ಎಂ. ಶಿಂದೆ ಶಿಕ್ಷಕರನ್ನು ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಹೋಲಿಸುವುದು ಸಂಪ್ರದಾಯಿಕ ಕ್ರಮ. ಇಂದು ಕಾಲ ಬದಲಾದಂತೆ ವಿದ್ಯಾರ್ಥಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವಾತಾವರಣವು ಬದಲಾಗಿದೆ. ಈ ನೆಲೆಯಲ್ಲಿ ವಿದ್ಯಾರ್ಥಿಗಳ ಕಲಿಕಾ ಸನ್ನಿವೇಶ, ಅವಕಾಶ ಮತ್ತು ಅಗತ್ಯಗಳು ಸಂಪೂರ್ಣ ಬದಲಾಗಿವೆ. ಇಯಾನ್ ಗಿರ್ಲ್ಬ್ಟ್ ತನ್ನ ಇಂಗ್ಲೀಷ್ […]

ಆರು ಚಾರ್ಟುಗಳಲ್ಲಿ ಆರ್ಥಿಕತೆಯ ಚಿತ್ರಣ

ಉದಿತ್ ಮಿಶ್ರಾ

ಆರು ಚಾರ್ಟುಗಳಲ್ಲಿ ಆರ್ಥಿಕತೆಯ ಚಿತ್ರಣ
ಉದಿತ್ ಮಿಶ್ರಾ

ಈ ವಾರ ಆರ್‌ಬಿಐ ಬಡ್ಡಿ ದರಗಳನ್ನು ಕಡಿತಗೊಳಿಸದೆ ಇರಲು ಹಾಗೂ ಡಿಸೆಂಬರ್ ತಿಂಗಳವರೆಗೂ ಯಾಕೆ ದರಗಳನ್ನು ಕಡಿತಗೊಳಿಸುವುದು ಸಾಧ್ಯವಾಗುವಂತಿಲ್ಲ ಎನ್ನುವುದಕ್ಕೆ ಹಲವು ಕಾರಣಗಳಿವೆ; ಪ್ರಸ್ತುತ ಆರ್ಥಿಕತೆಯ ಬೆಳವಣೆಗೆಯ ಹೊರೆ ಸಂಪೂರ್ಣವಾಗಿ ಸರ್ಕಾರದ ಹೆಗಲ ಮೇಲಿದೆ..  – ಉದಿತ್ ಮಿಶ್ರಾ ಆತ್ಮೀಯ ಓದುಗರೇ, ಅರವತ್ತರ ದಶಕದಲ್ಲಿ ಭಾರತದಲ್ಲಿಯೂ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಂತಹ, ಕೆನಡಾ ದೇಶದ ಮೂಲದ ಯುಎಸ್‌ನ ಅರ್ಥಶಾಸ್ತ್ರಜ್ಞ ಜಾನ್ ಕೆನ್ನೆತ್ ಗಲಬ್ರೇತ್ ಅವರ ಮಾತುಗಳ ಪ್ರಕಾರ, “ಎರಡು ರೀತಿಯ ಮುನ್ಸೂಚಕರಿದ್ದಾರೆ: ಗೊತ್ತಿಲ್ಲದೆ ಇರುವವರು ಹಾಗೂ ತಮಗೆ ಗೊತ್ತಿಲ್ಲ ಎಂದು […]

ಮುಂಬರುವ ಬೃಹತ್ ವಲಸೆ

- ಸೋನಿಯಾ ಶಾ

ಮುಂಬರುವ ಬೃಹತ್ ವಲಸೆ
- ಸೋನಿಯಾ ಶಾ

ಇಲ್ಲಿ ಅನುವಾದಿಸಿ ನೀಡಲಾಗಿರುವ ಅಧ್ಯಾಯವನ್ನು ಸೋನಿಯಾ ಶಾ ಅವರ ‘ದಿ ನೆಕ್ಸ್ಟ್ ಮೈಗ್ರೇಶನ್’ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ. ಸೋನಿಯಾ ಶಾ ಅವರು ಭಾರತ ಮೂಲದ ಅಮೆರಿಕದ ಪತ್ರಕರ್ತೆ. ಸೋನಿಯಾರವರ ತಂದೆತಾಯಿ ಇಬ್ಬರೂ ವೃತ್ತಿಯಲ್ಲಿ ವೈದ್ಯರಾಗಿ ಭಾರತದಿಂದ ವಲಸೆ ಹೊರಟು ಅಮೆರಿಕದಲ್ಲಿ ನೆಲೆಸಿದವರು. 1969ರಲ್ಲಿ ಜನಿಸಿದ ಸೋನಿಯಾ ಪತ್ರಿಕೋದ್ಯಮದಲ್ಲಿ ಪದವಿ ಪಡೆದರೂ ನಂತರದಲ್ಲಿ ತತ್ವಶಾಸ್ತ್ರದಿಂದ ಮಾನಸಿಕ ವಿಜ್ಞಾನದವರೆಗೂ ವೈವಿಧ್ಯಪೂರ್ಣ ಓದು ಮುಗಿಸಿದವರು. ತಮ್ಮ ಕೂಲಂಕಷ ಸಂಶೋಧನೆ ಹಾಗೂ ಹರಿತ ಬರವಣಿಗೆಯ ಶೈಲಿಯಿಂದ ತಾವು ಕೈಗೆತ್ತಿಕೊಂಡ ಯಾವುದೇ ವಿಷಯವಸ್ತುವಿಗೆ ನ್ಯಾಯ ಒದಗಿಸಬಲ್ಲವರು. […]

ಜಾತಕದ ಅಪದ್ಧ ಮೀರಿ ಪುರುಷೋತ್ತಮನಾಗಿ ಬೆಳೆದ ರೋಯ್ತಾ!

- ಸದಾನಂದ ಗಂಗನಬೀಡು

ಜಾತಕದ ಅಪದ್ಧ ಮೀರಿ  ಪುರುಷೋತ್ತಮನಾಗಿ ಬೆಳೆದ ರೋಯ್ತಾ!
- ಸದಾನಂದ ಗಂಗನಬೀಡು

ಡಾ.ಪುರುಷೋತ್ತಮ ಬಿಳಿಮಲೆ ಅವರ ‘ಕಾಗೆ ಮುಟ್ಟಿದ ನೀರು’ ಆತ್ಮಚರಿತ್ರೆಯ ಪೂರ್ವಾರ್ಧ ಕೋಮು ರಾಜಕಾರಣದೊಂದಿಗಿನ ಪಯಣದಂತೆ ಕಂಡರೆ, ಉತ್ತರಾರ್ಧ ಪ್ರವಾಸ ಕಥನದಂತೆಯೂ, ಸಂಶೋಧನಾ ಪ್ರಬಂಧದಂತೆಯೂ ಭಾಸವಾಗುತ್ತದೆ.  – ಸದಾನಂದ ಗಂಗನಬೀಡು    ಕಾಗೆ ಮುಟ್ಟಿದ ನೀರು ಡಾ.ಪುರುಷೋತ್ತಮ ಬಿಳಿಮಲೆ ಪುಟ: 304  ಬೆಲೆ: ರೂ.300 ಅಹರ್ನಿಶಿ ಪ್ರಕಾಶನ ಶಿವಮೊಗ್ಗ ದೂ: 94491 74662 ಸಿನಿಮಾ ಪ್ರಿಯರಿಗೆ ಈ ಸಂಗತಿ ಬಹಳ ಚೆನ್ನಾಗಿ ತಿಳಿದಿರುತ್ತದೆ. ನಟ ಅಂಬರೀಶ್ ಅಮರನಾಥ ಮಾತ್ರ ಆಗಿದ್ದಾಗ ತಮ್ಮ ಕಾಲೇಜು ದಿನಗಳಲ್ಲಿ ಬಹಳ ತುಂಟರಾಗಿದ್ದರು. ಕಾಲೇಜಿನಲ್ಲಿ ತರಗತಿ […]

1 24 25 26 27 28 49