‘ತ್ಯಾಜ್ಯದಿಂದ ವಿದ್ಯುತ್ ಉತ್ಪನ್ನ’ ಘಟಕಗಳು ಎಷ್ಟು ಪ್ರಯೋಜನಕಾರಿ?

-ಪೂರ್ಣಿಮಾ ಮಾಳಗಿಮನಿ.

ಕಸ ಸುಟ್ಟು ವಿದ್ಯುತ್ ಉತ್ಪಾದಿಸಿ ಲಾಭ ಪಡೆದುಕೊಳ್ಳಲು ನಾ ಮುಂದು ತಾ ಮುಂದು ಎಂದು ಸಾಕಷ್ಟು ಖಾಸಗಿ ಸಂಸ್ಥೆಗಳು ಮುಂದೆ ಬಂದವು. ಏನಾದರೂ ಮಾಡಿಕೊಳ್ಳಿ, ಆದರೆ ನಮ್ಮ ನಗರಗಳಲ್ಲಿ ಕಸ ಮಾತ್ರ ಕಾಣದಂತೆ ಮಾಡಿ ಎಂದು ಈ ಸಂಸ್ಥೆಗಳಿಗೆ ಸರ್ಕಾರ ಮತ್ತು ಪಾಲಿಕೆಗಳು ಎಲ್ಲ ರೀತಿಯ ಸವಲತ್ತುಗಳನ್ನು ನೀಡಿ, ಕೈ ತೊಳೆದುಕೊಂಡುಬಿಟ್ಟವು. ಕೆಲ ದಿನಗಳ ಹಿಂದೆ ನನ್ನ ಮಗಳ ಜೊತೆ ನಾನು ವಾಲ್-ಈ ಎನ್ನುವ ಒಂದು ಕಾರ್ಟೂನ್ ಸಿನೆಮಾವನ್ನು ನೋಡಿದೆ. ಮಕ್ಕಳ ಸಿನೆಮಾ ಎಂದು ಅರ್ಧ ಮನಸ್ಸಿನಿಂದ […]

ಪಾಕಿಸ್ತಾನ ಅತ್ತ ದರಿ ಇತ್ತ ಪುಲಿ

-ಎಂ.ಎ.ಪ್ರಥಮ್.

ಪ್ರಧಾನಿ ಮೋದಿ ಸಾರ್ವಜನಿಕ ಸಮಾವೇಶವೊಂದರಲ್ಲಿ ‘ಅಭಿನಂದನ್ ವಿಷಯದಲ್ಲಿ ಏನಾಯಿತೆಂದು ನಾನು ಮತ್ತೆ ಹೇಳಬೇಕಾಗಿಲ್ಲ’, ಎಂದು ಎದೆಯುಬ್ಬಿಸಿ ಹೇಳುತ್ತಾರೆ. ಭಾರತ ಹಾಗೂ ಮೋದಿಗೆ ಹೆದರಿ ಪಾಕಿಸ್ತಾನ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್‍ನನ್ನು ಯಾವುದೇ ವಿಳಂಬವಿಲ್ಲದೇ ಬಿಡುಗಡೆ ಮಾಡಿತೇ? ಪಾಕಿಸ್ತಾನ ಪುಲ್ವಾಮ ಘಟನೆಯ ನಂತರ ಉಗ್ರಗಾಮಿಗಳ ಮೇಲೆ ತೋರ್ಪಡಿಕೆಗಾದರೂ (ಅನಿವಾರ್ಯವೂ ಆಗಿದೆ) ತೆಗೆದುಕೊಳ್ಳುತ್ತಿರುವ ಕಠಿಣ ಕ್ರಮಗಳು ಆ ದೇಶದ ಸದ್ಯದ ಸಂದಿಗ್ಧತೆಯನ್ನು ತೋರಿಸುತ್ತದೆ. ಇದುವರೆಗೆ ಉಗ್ರಗಾಮಿಗಳನ್ನು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಂಬಲಿಸಿರುವ ಪಾಕಿಸ್ತಾನಕ್ಕೆ ಈ ನಂಟು ಹುಲಿ ಸವಾರಿ ಮಾಡಲು […]

ವಿಶ್ವ ವಿದ್ಯಮಾನ

-ಪುರುಷೋತ್ತಮ ಆಲದಹಳ್ಳಿ.

ವಲಸೆ ನೀತಿ ಸಡಿಲಿಸಿದ ಬ್ರಿಟನ್ ಬ್ರೆಕ್ಸಿಟ್ ವಿದ್ಯಮಾನಗಳಿಂದ ತತ್ತರಿಸಿಹೋಗಿರುವ ಯುನೈಟೆಡ್ ಕಿಂಗ್‍ಡಮ್ ಇದೀಗ ವಲಸೆ ನೀತಿಯನ್ನು ಸಡಿಲಿಸಿಕೊಂಡು ಡಿಜಿಟಲ್ ಯುಗದಲ್ಲಿ ತನ್ನ ಸ್ಪರ್ಧಾತ್ಮಕತೆಯನ್ನು ಉತ್ತಮವಾಗಿಸಲು ಹೊರಟಿದೆ. ಈ ಸುಧಾರಣೆಯಂತೆ ಪಿಹೆಚ್‍ಡಿ ಪದವಿ ಬಯಸುವ ಕೆಲಸಗಳಿಗೆ ನೀಡುವ ವೀಸಾ ಸಂಖ್ಯೆಯ ಮಿತಿಯನ್ನು ತೆಗೆದುಹಾಕಲಾಗಿದೆ. ಹಾಗಾಗಿ ಉತ್ತಮ ಕುಶಲತೆ ಬಯಸುವ ಉದ್ಯಮಗಳನ್ನು ಯಾವುದೇ ‘ವಲಸೆ ನೀತಿ’ ಹಾಗೂ ‘ವೀಸಾ ಮಿತಿ’ಯಿಲ್ಲದೆ ಬ್ರಿಟನ್‍ನಲ್ಲಿ ಪ್ರಾರಂಭ ಮಾಡಲು ಅನುವಾಗುತ್ತದೆ. ಡಿಜಿಟಲ್ ಮತ್ತಿತರ ಉತ್ತಮ ಕುಶಲತೆ ಬಯಸುವ ಈ ಉದ್ಯಮಗಳಲ್ಲಿ ಬಹುತೇಕ ಭಾರತೀಯರೇ ಅತ್ಯಂತ […]

ಇ-ಜ್ಞಾನ

-ಟಿ.ಜಿ.ಶ್ರೀನಿಧಿ.

ಟೆಕ್ ಸುದ್ದಿ ಮೊಬೈಲ್ ಡೇಟಾ ಬಳಕೆಯಲ್ಲಿ ಮುಂಚೂಣಿಯಲ್ಲಿರುವುದಷ್ಟೇ ಅಲ್ಲ, ಅತ್ಯಂತ ಕಡಿಮೆ ದರದಲ್ಲಿ ಮೊಬೈಲ್ ಡೇಟಾ ಒದಗಿಸುವಲ್ಲೂ ನಮ್ಮ ದೇಶ ಮೊದಲ ಸ್ಥಾನ ಪಡೆದುಕೊಂಡಿದೆ. ಪ್ರತಿ ಜಿಬಿ ಡೇಟಾ ಸರಾಸರಿ ಬೆಲೆ ಜಾಗತಿಕವಾಗಿ ಆರುನೂರು ರೂಪಾಯಿಗಳಷ್ಟಿದ್ದರೆ ನಮ್ಮ ದೇಶದಲ್ಲಿ ಅದು ಇಪ್ಪತ್ತು ರೂಪಾಯಿಗಿಂತ ಕಡಿಮೆಯಿದೆ ಎಂದು ಈತ್ತೀಚೆಗೆ ಪ್ರಕಟವಾದ ಸಮೀಕ್ಷೆಯೊಂದು ತಿಳಿಸಿದೆ. ವಿಶ್ವದಾದ್ಯಂತ 230 ದೇಶಗಳಲ್ಲಿನ ಆರು ಸಾವಿರಕ್ಕೂ ಹೆಚ್ಚು ಮೊಬೈಲ್ ಡೇಟಾ ಪ್ಲಾನುಗಳನ್ನು ಹೋಲಿಸುವ ಮೂಲಕ ಈ ಪಟ್ಟಿಯನ್ನು ತಯಾರಿಸಲಾಗಿದೆಯಂತೆ. ಅಂದಹಾಗೆ ಅತಿಹೆಚ್ಚು ಸ್ಮಾರ್ಟ್‍ಫೋನ್ ಬಳಕೆದಾರರಿರುವ […]

ಅಮೆರಿಕೆಯ ಕಲಾಗ್ರಾಮ ಕಾರ್ಮೇಲ್

-ಮಾಲತಿ ಪಟ್ಟಣಶೆಟ್ಟಿ.

ಒಂದೇ ಊರಲ್ಲಿ ಇಷ್ಟು ಸಂಖ್ಯೆಯ ಕಲಾವಿದರು ತುಂಬಿಕೊಂಡು ವರ್ಷವಿಡೀ ಕಾರ್ಯಕ್ರಮಗಳನ್ನು ನಡೆಸುವ ಇನ್ನೊಂದು ಸ್ಥಳ ಬೇರೆಲ್ಲೂ ಇರಲಾರದು. ಅಮೆರಿಕೆಯ ಕ್ಯಾಲಿಫೋರ್ನಿಯಾ ಪ್ರಾಂತ್ಯದಲ್ಲಿ ಕಲೆ, ಕಲಾವಿದರನ್ನು ಗೌರವಿಸುತ್ತಿರುವ ಪ್ಯಾಸಿಫಿಕ್ ಮಹಾಸಾಗರದ ದಂಡೆಯಲ್ಲಿರುವ ವಿಶಿಷ್ಟ ಊರು -ಕಾರ್ಮೆಲ್. ಹಿಂದಿನ ದಿನವಷ್ಟೇ ಪ್ಲ್ಯಾನ್ ಮಾಡಿಕೊಂಡಂತೆ ಹನ್ನೊಂದು ಗಂಟೆಗೆ ಕಾರ್ಮೆಲ್ಲಿಗೆ ಹೊರಟಾಗ ಚಳಿಗಾಲದ ಅಬ್ಬರದ ಮಳೆ ಶುರುವಾಯ್ತು. ಇಂಥ ಮಳೆಯಲ್ಲಿ ಊರನ್ನು ನೋಡುವುದು ಹೇಗೆ ಎಂಬ ನಿರಾಶೆಯಾವರಿಸಿಕೊಂಡಿತು. ನಿರಾಶೆಗೆ ಕಾರಣವಿಲ್ಲ ಎಂಬಂತೆ ಸುರಿಯುವ ಮಳೆ ತನ್ನ ವಿವಿಧ ಮುಖಗಳ-ದರ್ಶನ ಮಾಡಿಸತೊಡಗಿತು. ಕಣ್ಣೆದುರಿಗೆ ಕವಿದ […]

ನಿಜವಾದ ನರೇಂದ್ರ ಮೋದಿ ಯಾರು? ಕೋಮುವಾದಿ ಸಾಮ್ರಾಟನೋ ಅಥವಾ ಒಳಗೊಳ್ಳುವಿಕೆ ರೂವಾರಿಯೋ?

-ಆರ್.ಜಗನ್ನಾಥನ್ ಅನುವಾದ: ಇಸ್ಮಾಯಿಲ್ ಜಬೀರ್ ಬಾವಾಜಿ

ಆರ್.ಜಗನ್ನಾಥನ್ ಅವರು ರಾಜಕಾರಣ ಮತ್ತು ಅರ್ಥಿಕ ವಿಷಯಗಳಲ್ಲಿ ಅಧಿಕಾರಯುತವಾಗಿ ವಿಶ್ಲೇಷಣೆ ಮಾಡಬಲ್ಲ ಭಾರತದ ಬಹುಮುಖ್ಯ ಪತ್ರಕರ್ತರು. ಅವರು ‘ಫೋಬ್ಸ್ ಇಂಡಿಯಾ’ದ ಮಾಜಿ ಮುಖ್ಯ ಸಂಪಾದಕರು; ಅದಕ್ಕೂ ಮುಂಚೆ ಫಸ್ರ್ಟ್‍ಪೋಸ್ಟ್.ಕಾಂ, ಬಿಸಿನೆಸ್ ಇಂಡಿಯಾ, ಬಿಸಿನೆಸ್ ವರ್ಲ್ಡ್, ಫೈನಾನ್ಸಿಯಲ್ ಎಕ್ಸ್ ಪ್ರೆಸ್ ಮತ್ತು ಡಿ.ಎನ್.ಎ.ಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಹಾರ್ಪರ್ ಕೊಲಿನ್ಸ್ ಪಬ್ಲಿಷರ್ಸ್ ಪ್ರಕಟಿಸಿರುವ ‘ಮೇಕಿಂಗ್ ಸೆನ್ಸ್ ಆಫ್ ಮೋದೀಸ್ ಇಂಡಿಯಾ’ ಕೃತಿಯಲ್ಲಿನ ಆರ್.ಜಗನ್ನಾಥನ್ ಅವರ ಲೇಖನದ ಅನುವಾದವನ್ನಿಲ್ಲಿ ನೀಡಿದ್ದೇವೆ. ನರೇಂದ್ರ ಮೋದಿ ಸಾಕಷ್ಟು ಜನರನ್ನು ನಿರಾಸೆಗೊಳಸಿದ್ದಾರೆ. ಅವರು ತಮ್ಮ ಹೊಗಳುಭಟ್ಟರನ್ನು […]

ಬೆಳದಿಂಗಳಲ್ಲಿ ರಮ್ಯಲೋಕ

-ಡಾ.ಎಸ್.ಬಿ.ಜೋಗುರ.

ಇದು ನಟರಾಜ್ ಹುಳಿಯಾರ್ ಅವರ ಮೊದಲ ಕಾದಂಬರಿ. ಮೂರು ದಶಕಗಳ ಹಿಂದಿನ ಈಸ್ಟ್‍ಮನ್ ಕಲರ್ ಸಿನೇಮಾದಂತೆ ಸುರಳಿಸುರಳಿಯಾಗಿ ಬೆಚ್ಚಗೆ ಬಿಚ್ಚಿಕೊಳ್ಳುತ್ತ, ರಮ್ಯವೆನಿಸುತ್ತಲೇ ಓದಿಸಿಕೊಂಡು ಹೋಗುವ ಈ ಕಾದಂಬರಿ, ಪ್ರತಿ ಅಧ್ಯಾಯದ ಮುಕ್ತಾಯದಲ್ಲೂ ಮುಂಬರುವ ಅಧ್ಯಾಯದ ಆರಂಭದ ಕುತೂಹಲವನ್ನು ಓದುಗನಲ್ಲಿ ಕಾಪಿಡುವ ಗುಣದೊಂದಿಗೆ ಮುಂದೆ ಸಾಗುತ್ತದೆ. ಎಲ್ಲೂ ಯಾಕೋ ಈ ಅಧ್ಯಾಯ ತುಸು ಬೋರ್ ಆಯಿತು, ಜಂಪ್ ಮಾಡಿ ಮುಂದೆ ಹೋಗುವಾ ಎಂಬ ಭಾವ ಬರದಂತೆ ಪಾತ್ರ ಪೋಷಣೆ, ನಿರೂಪಣೆ, ಸನ್ನಿವೇಶ ಸಮನ್ವಯ, ತಂತ್ರಗಾರಿಕೆಯ ಕುಶಲತೆಯನ್ನು ಕಾದಂಬರಿಕಾರ ಅತ್ಯಂತ […]

ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಕಾಡು: ಓದಲು ತೊಡಗಿದವನ ಪಾಡು

-ನಿತ್ಯಾನಂದ ಬಿ.ಶೆಟ್ಟಿ.

ಕಾಡನ್ನು ಅರ್ಥ ಮಾಡಿಕೊಳ್ಳದವರು ಮದುಮಗಳು ಕಾದಂಬರಿಯನ್ನು ಅರ್ಥಮಾಡಿಕೊಳ್ಳಿಯಾರೇ? ಮನುಷ್ಯರನ್ನು ಅರ್ಥಮಾಡಿಕೊಳ್ಳದವರು ಮದುಮಗಳು ಕಾದಂಬರಿಯನ್ನು ಹೇಗೆ ಓದಬಲ್ಲರು..? ನಾವು ಬದುಕುತ್ತಿರುವ ಸಮಾಜವನ್ನು ಎಡ-ಬಲ ಎಂದು ಈಗಾಗಲೇ ವಿಭಜಿಸಿಕೊಂಡಿರುವವರು ಈ ಕಾದಂಬರಿಯನ್ನು ಓದುವ ಪರಿ ಹೇಗಿದ್ದೀತು..? ಪಶ್ಚಿಮದ ಸಮಾಜಗಳಲ್ಲಿ ಬಹಳ ಮುಖ್ಯರಾದ ಸಾಹಿತಿ-ಕಲಾವಿದರನ್ನು, ರಾಜಕೀಯ ನಾಯಕರನ್ನು, ಆಟಗಾರರನ್ನು, ವಿಜ್ಞಾನಿಗಳನ್ನು, ಸಾಮಾಜಿಕ ಹೋರಾಟಗಾರರನ್ನು ಹಾಗೆಯೇ ಇನ್ನು ಕೆಲವು ಸಾಂಸ್ಕೃತಿಕ ವಿದ್ಯಮಾನಗಳನ್ನು ಸತತವಾಗಿ ಫಾಲೋ ಮಾಡುತ್ತ, ಆಳವಾಗಿ ಅಧ್ಯಯನ ಮಾಡಿದ, ಮಾಡುತ್ತಿರುವ ಅನೇಕ ಜನ ವಿದ್ವಾಂಸರು ಇದ್ದಾರೆ. ಆದರೆ ಅಂತಹ ಆಶಾದಾಯಕವಾದ ಪರಿಸ್ಥಿತಿ […]

ಫ್ಯಾಸಿಸಂನ ಅಂಗ ರಚನೆಯ ಛೇದನ

-ವಿದ್ಯಾಧರ ರೈ ಎಂ.ಆರ್. -ಐವನ್ ಎಫ್.ಲೋಬೊ

ದಿ ಅನಾಟಮಿ ಆಫ್ ಫ್ಯಾಸಿಸಂ ಗ್ರಂಥದಲ್ಲಿ ಲೇಖಕ ರಾಬರ್ಟ್ ಓ ಪ್ಯಾಕ್ಸ್ಟನ್ ಫ್ಯಾಸಿಸಂನ ವಿವಿಧ ಪ್ರ್ರಕ್ರಿಯೆಗಳು ಮತ್ತು ಹಂತಗಳನ್ನು ಗಂಭೀರವಾದ ಅಧ್ಯಯನಕ್ಕೊಳಪಡಿಸುತ್ತಾರೆ. ಈ ಅಧ್ಯಯನದಲ್ಲಿ ಫ್ಯಾಸಿಸಂನ ರೂಪುತಳೆಯುವಿಕೆ, ನೆಲೆಯೂರುವಿಕೆ, ಅಧಿಕಾರದ ಗದ್ದುಗೆ ಏರಿಕೆ, ಅಧಿಕಾರ ಚಲಾಯಿಸುವಿಕೆ, ದೀರ್ಘಕಾಲೀನ ಕ್ರಾಂತಿಕಾರಕತೆ ಹಾಗೂ ಅದರ ಹೊಸ ಅವತಾರಗಳು ಮತ್ತು ವಂಶಾವಳಿಗಳನ್ನು ಒಳಗೊಂಡಿವೆ. ಆಧುನಿಕ ಕಾಲಮಾನದ ಪ್ರಮುಖ ಅನ್ವೇಷಣೆ ಫ್ಯಾಸಿಸಂ. ಇದು ಈ ಕಾಲಘಟ್ಟದ ಪ್ರಮುಖ ದುಃಖದ ಮೂಲವೂ ಆಗಿದೆ. ಪ್ರಜಾತಂತ್ರ ಬೆಳೆದು ಹರಡುತ್ತಿದ್ದಂತೆಯೇ ಯೂರೋಪಿನಲ್ಲಿ ಕಾರ್ಮಿಕ ರಂಗಗಳು ಪ್ರಜಾತಾಂತ್ರಿಕ ವ್ಯವಸ್ಥೆಗಳಲ್ಲಿ […]

ಕೆವಿಎನ್ ಅವರ ‘ನುಡಿಗಳ ಅಳಿವು: ಬೇರೆ ದಿಕ್ಕಿನ ನೋಟ’ ನುಡಿಗಳ ಅಳಿವು ಕುರಿತ ಜಿಜ್ಞಾಸೆ

-ಮೇಟಿ ಮಲ್ಲಿಕಾರ್ಜುನ

ಇದು ಕೇವಲ ಕರ್ನಾಟಕ ಭಾಷಿಕ ಸನ್ನಿವೇಶ ಇಲ್ಲವೇ ಕನ್ನಡ ನುಡಿ ಅಳಿವನ್ನು ಕುರಿತಾದ ಅನುಮಾನದ ಬಗೆಗೆ ಮಾತ್ರ ನಿಗಾವಹಿಸದೇ, ಲೋಕದ ನುಡಿಗಳ ಅಳಿವಿನ ಬಗೆಗೆ ನಡೆಯುತ್ತಿರುವ ಈ ಹೊತ್ತಿನ ಚರ್ಚೆಗಳ ಕಾಳಜಿ ಯಾವುದು? ನುಡಿ ಅಳಿವಿನಿಂದ ಸಮೂಹಗಳ ಬದುಕಿನಲ್ಲಿ ಏರ್ಪಡಬಹುದಾದ ಬಿಕ್ಕಟ್ಟು ಎಂತಹದು? ಈ ಬಿಕ್ಕಟ್ಟನ್ನು ನಿಭಾಯಿಸಲು, ಈಗ ಅಸ್ತಿತ್ವದಲ್ಲಿರುವ ನುಡಿಗಳ ಬಗೆಗೆ ನಮ್ಮ ನಿಲುವುಗಳೇನು? ಆ ನುಡಿಗಳನ್ನೇ ನಂಬಿ ಜೀವನ ಸವೆಯುತ್ತಿರುವ ಸಮುದಾಯಗಳ ಬಗೆಗಿನ ನಮ್ಮ ಕಾಳಜಿಗಳು ಏನಾಗಿರಬೇಕು? ಎಂಬೆಲ್ಲ ಪ್ರಶ್ನೆಗಳ ಮೂಲಕ ಜಿಜ್ಞಾಸೆಯನ್ನು ಬೆಳೆಸಲಾಗಿದೆ. […]

ಹೊಸ ಪುಸ್ತಕ

ಕಾವ್ಯ ಸಂಗಮ ಸಂಪಾದಕ: ಮೇಟಿ ಮುದಿಯಪ್ಪ ಪುಟ: 176, ಬೆಲೆ: ರೂ.150 ಪ್ರಕಾಶನ: ಮೇಟಿ ಪ್ರಕಾಶನ, ಬೇವಿನಹಾಳು, ಗಂಗಾವತಿ ತಾಲ್ಲೂಕು, ಕೊಪ್ಪಳ ಜಿಲ್ಲೆ. ದೂ: 9448624331 ಈ ಕೃತಿಯ ಸಂಪಾದಕ ಮೇಟಿಯವರು ಶಿಕ್ಷಣ ತಜ್ಞರಾಗಿ, ಸಾಹಿತಿಯಾಗಿ, ರಂಗಕಲಾವಿದರಾಗಿ, ಸಂಘಟಕನಾಗಿ, ಸಮಾಜಸೇವೆ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಕೆಲಸ ಮಾಡಿದವರು. ಸ್ವತಃ ಹಲವು ಕೃತಿಗಳನ್ನು ರಚಿಸಿ ಸಾಹಿತ್ಯಲೋಕದಲ್ಲಿ ಗುರುತಿಸಿಕೊಂಡವರು. ಪ್ರಸ್ತುತ ಕೃತಿ ‘ಕಾವ್ಯಸಂಗಮ’ದಲ್ಲಿ ಉಡುಪಿ, ಮಂಗಳೂರು, ಕಾಸರಗೋಡು ಹಾಗೂ ಉತ್ತರ ಕನ್ನಡ […]

ಸಾಳ್ವ ಕವಿಯ ರಸರತ್ನಾಕರ

-ಡಾ.ಮಾನಕರಿ ಶ್ರೀನಿವಾಸಾಚಾರ್ಯ.

ರಸೋತ್ಪತ್ತಿಯು ಪ್ರೇಕ್ಷಕನಲ್ಲೇ ಉಂಟಾದರೂ ನಟರ ನಟನೆಯು ಅದಕ್ಕೆ ವಿಭಾವ ಮತ್ತು ಅನುಭಾವಗಳಾಗಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಗೊಂದಲವಿಲ್ಲದಂತೆ ಹೇಳಿರುವುದು ಕವಿ ಸಾಳ್ವನ ವಿಶೇಷತೆಯಾಗಿದೆ. ಗೇರುಸೊಪ್ಪೆಯ ಸಾಳ್ವ ಕವಿಯು (ಕ್ರಿ.ಶ.1550) ‘ಭಾರತ’, ‘ರಸರತ್ನಾಕರ’, ‘ವೈದ್ಯಸಾಂಗತ್ಯ’, ‘ಶಾರದಾವಿಲಾಸ’(?) ಎಂಬ ಕೃತಿಗಳನ್ನು ರಚಿಸಿದ್ದಾನೆ. ಇವನು ಜೈನಕವಿ. ಇವನ ತಂದೆ ಧರ್ಮಚಂದ್ರ; ಗುರು ದೇಶಿಗಣದ ಶ್ರುತಕೀರ್ತಿ. ಆಶ್ರಯದಾತ ಗೇರುಸೊಪ್ಪೆಯ (ನಗಿರ ರಾಜ್ಯದ) ಅರಸನಾದ ಸಾಳ್ವಮಲ್ಲ ದೇವರಾಯ. ‘ರಸರತ್ನಾಕರ’ವು ಒಂದು ಕನ್ನಡ ಅಲಂಕಾರ ಗ್ರಂಥ. ಇದರ ಆರಂಭದಲ್ಲಿ ಕವಿ ಸಾಳ್ವನು ಅಮೃತಾನಂದಿ, ರುದ್ರಭಟ್ಟ, ವಿದ್ಯಾನಾಥ, […]

ಬೆಳಗಿನ ನಡಿಗೆಯ ಬೆಡಗು

-ಅಮರಜಾ ಹೆಗಡೆ.

ಒಟ್ಟಿನಲ್ಲಿ ಮುಂಜಾನೆಯ ವಿಹಾರದಿಂದ ನನ್ನ ದೇಹಭಾರವು ಕಡಿಮೆಯಾಗದಿದ್ದರೂ ಆ ರಸಕ್ಷಣಗಳ ಸಿಹಿನೆನಪಿನಿಂದ ನನ್ನ ಇಡೀ ದಿನವು ಆಹ್ಲಾದದಾಯಕವಾಗಿ ಚೈತನ್ಯಯುಕ್ತವಾಗಿ ಕಳೆಯುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಕಳೆದ ಡಿಸೆಂಬರ್ 31ರಂದು ‘ಹೊಸವರ್ಷದ ಮೊದಲದಿನದಿಂದ ನಮ್ಮ ಬೆಳಗಿನ ವಾಕಿಂಗ್ ಶುರು’ ಎಂದು ಮಾಲು ಘೋಷಿಸಿದಾಗ, ತುಂಬ ದಿನಗಳಿಂದ ವಾಕಿಂಗ್ ಬಗ್ಗೆ ಪ್ಲಾನ್ ಮಾಡುತ್ತಲೇ ಕಾಲ ಕಳೆದಿದ್ದ ನಾನೂ ನನ್ನ ಏರುತ್ತಿರುವ ದೇಹಭಾರವನ್ನು ಗಮನಿಸಿ ಅದು ಜೀರೋ ಸೈಜಾಗುವ ಕನಸು ಕಾಣುತ್ತ ಸಡಗರದಿಂದಲೇ ಒಪ್ಪಿಕೊಂಡೆ. ಜೊತೆಗೆ ಏರುತ್ತಿರುವ ವಯಸ್ಸನ್ನು ಗಮನಿಸಿದಾಗ, ಮುಂಜಾನೆ […]

ರೈತರಿಗೆ ಕೃಷಿ ಆಹಾರವಲ್ಲ, ವ್ಯಾಪಾರ!

-ಸಿ.ಚಿಕ್ಕತಿಮ್ಮಯ್ಯ.

ಈಗ ನಮ್ಮೂರು ಬದಲಾಗಿರುವುದು ನಿಜ, ಹೊಸ ಪೀಳಿಗೆ ಬಂದಿರುವುದೂ ನಿಜ. ಆದರೆ, ಊರಿನ ಕುರಿತು ನನ್ನ ನೆನಪುಗಳು ಬದಲಾಗಿಲ್ಲ. ಊರಿನ ಬಗ್ಗೆ ಅದೇ ಪ್ರೀತಿ, ಅದೇ ವ್ಯಾಮೋಹ, ಅದೇ ಕಾಳಜಿ; ಸ್ವಲ್ಪವೂ ಮುಕ್ಕಾಗದೆ ಉಳಿದಿದೆ. ನಾನು ಹುಟ್ಟಿ ಬೆಳೆದ ಊರು ಹಂದನಕೆರೆ. ಈ ಊರನ್ನು ತೊರೆದು ಸುಮಾರು ನಲವತ್ತೆಂಟು ವರ್ಷಗಳಾಗಿವೆ. ಆದರೆ ನನ್ನೂರಿನ ಬಗೆಗಿನ ವ್ಯಾಮೋಹ, ಪ್ರೀತಿ, ಸೆಳೆತ ಸ್ವಲ್ಪವೂ ಕಡಿಮೆಯಾಗಿಲ್ಲ. ಈಗಲೂ ನಿವೃತ್ತಿ ಜೀವನವನ್ನು ಅಲ್ಲಿಯೇ ಕಳೆಯಬೇಕೆಂದು ಆಸೆ. ಆದರೆ ಡಾ.ರಹಮತ್ ತರೀಕೆರೆಯವರು ಒಂದು ಕಡೆ […]

ಕನ್ನಡ ವಿದ್ವತ್ತಿಗೆ ಭದ್ರ ಬುನಾದಿ ಹಾಕಿದ ಡಾ.ಫರ್ಡಿನಾಂಡ್ ಕಿಟೆಲ್

-ಡಾ.ಮ್ಯಾಥ್ಯೂ ಕೆ.ಎಂ.

ಕನ್ನಡಕ್ಕೆ ದುಡಿದ ಕ್ರೈಸ್ತ ವಿದ್ವಾಂಸರು ಎಂದಾಕ್ಷಣ ಮೊದಲು ನೆನಪಾಗುವವರು ಕಿಟೆಲ್. ಕನ್ನಡಕ್ಕೆ ಕ್ರೈಸ್ತರ ಸಾಹಿತ್ಯಿಕ ಕೊಡುಗೆ ಎಂದಾಕ್ಷಣ ಮೊದಲು ನೆನಪಾಗುವುದು ಕಿಟೆಲ್ ಕೋಶ. ಹೀಗೆ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ವ್ಯಕ್ತಿ ಕೃತಿ ದೃಷ್ಟಿಯಿಂದ ಮಹತ್ವದ ಪಾಶ್ಚಾತ್ಯ ವಿದ್ವಾಂಸರೆನಿಸಿದ್ದಾರೆ ಡಾ.ಫರ್ಡಿನಾಂಡ್ ಕಿಟೆಲ್. ಎಪ್ರಿಲ್ 7, ಅವರ ಜನ್ಮದಿನ. ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಪಾಶ್ಚಿಮಾತ್ಯರು ರಾಜಕೀಯ ಚಟುವಟಿಕೆಗಳನ್ನು ವಿಸ್ತರಿಸುವದರೊಂದಿಗೆ ಧಾರ್ಮಿಕ ಚಟುವಟಿಕೆಗಳನ್ನೂ ಪ್ರಾರಂಭಿಸಿದರು. ಧಾರ್ಮಿಕ ಶ್ರದ್ಧೆಯ ಕ್ರೈಸ್ತ ಪಾದ್ರಿಗಳು ಮತಪ್ರಸಾರಕ್ಕೆ ಮಾತ್ರ ಸೀಮಿತಗೊಳ್ಳದೆ, ಅನ್ಯ ಕ್ಷೇತ್ರಗಳನ್ನೂ ಆವರಿಸಿದರು. ಇದಕ್ಕೆ ಕಾರಣ […]

ಲೆಕ್ಕಾಚಾರದ ಆಟ ಎಂಬ ಚೌಕಾಬಾರ

-ಕೆ.ವಿ.ಪರಮೇಶ್.

ನಮ್ಮ ಗ್ರಾಮೀಣ ಕ್ರೀಡೆಗಳ ಹಿಂದೆ ನಿಖರವಾದ ಉದ್ದೇಶವಿತ್ತು ಎನ್ನುವುದು ನಿಸ್ಸಂಶಯ. ಏಕೆಂದರೆ ಇಂದಿಗೂ ಕೆಲವು ಆಟಗಳು ಜೀವಂತಿಕೆ ಹೊಂದಿವೆ ಎನ್ನುವುದಕ್ಕೆ ಮನುಕುಲದ ಅನುಕೂಲಕ್ಕೆ ಅವುಗಳನ್ನು ಬಳಸಿಕೊಂಡಿರುವುದೇ ಸಾಕ್ಷಿ. ಈಗ ಪರಿಚಯಿಸಲು ಹೊರಟಿರುವ ಆಟವನ್ನು ನಾವು ಬಾಲ್ಯದಲ್ಲಿ ಎಂದಾದರೊಮ್ಮೆ ಆಡಿರುತ್ತೇವೆ. ಹಬ್ಬಹರಿದಿನಗಳಲ್ಲಿ, ಬಿಡುವಿನ ವೇಳೆಯಲ್ಲಿ ಮೊದಲಿಗೆ ನೆನಪಿಗೆ ಬರುವ ಆಟವೇ ‘ಚೌಕಾಬಾರ’ ಅಥವಾ ಪಟ್ಟೆಮನೆ (ಕಟ್ಟೆಮನೆ). ವಿವಿಧ ಪ್ರದೇಶಗಳಲ್ಲಿ ಇದಕ್ಕೆ ಭಿನ್ನ ಹೆಸರುಗಳಿವೆ. ಆಟದಲ್ಲಿಯೂ ಕೊಂಚ ಭಿನ್ನತೆ ಇದೆ. ಬಳಸುವ ಕಾಯಿ ಹಾಗೂ ಆಡುವ ಲಟ್ಟುಗಳಕಲ್ಲೂ ವ್ಯತ್ಯಾಸವಿದೆ. ಇದಕ್ಕೆ […]

ಕಾಲ, ದೇಶದ ಹಂಗು ಮೀರಿ…

-ಬಿ.ಶ್ರೀಪಾದ ಭಟ್.

ಫೆಬ್ರವರಿ 21ರಿಂದ 28ರವರೆಗೆ ಬೆಂಗಳೂರಿನಲ್ಲಿ ನಡೆದ 11ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಕೆಲವು ಸಿನಿಮಾಗಳನ್ನು ಕುರಿತ ಟಿಪ್ಪಣಿಗಳು ಇಲ್ಲಿವೆ.   THREE FACES (ಮೂರು ಮುಖಗಳು) ಆಕೆ ಹದಿಹರೆಯದ ಹುಡುಗಿ, ಮಾರ್ಜಿಯಾ. ಇರಾನ್‍ನ ದೂರದ, ಬೆಟ್ಟಗಾಡುಗಳ ತಪ್ಪಲಲ್ಲಿರುವ ಹಳ್ಳಿಯಲ್ಲಿ ತನ್ನ ಪೋಷಕರು ಮತ್ತು ಅಣ್ಣನೊಂದಿಗೆ ವಾಸಿಸುತ್ತಿರುತ್ತಾಳೆ. ಅದು ಸಂಪೂರ್ಣ ಕರ್ಮಠತನದ, ಸಾಂಪ್ರದಾಯಿಕವಾದ, ಪುರುಷಾಧಿಪತ್ಯದಲ್ಲಿ ತೇಕುತ್ತಿರುವ ಗ್ರಾಮ. ಆದರೆ ಮಾರ್ಜಿಯಾಗೆ ಟೆಹರಾನ್‍ನಲ್ಲಿ ಸಂಗೀತ ಅಭ್ಯಾಸ ಮಾಡಿ ಚಿತ್ರನಟಿಯಾಗುವ ಆಸೆ. ಆದರೆ ಆಕೆಯ ಗ್ರಾಮದ ಸಂಪ್ರದಾಯವಾದಿಗಳು ಈ ಸಿನಿಮಾ, ಸಂಗೀತ […]

ನಿಮ್ಮ ಓಟು ಯಾರಿಗೆ ?

-ಎಂ.ಎಸ್.ನರಸಿಂಹಮೂರ್ತಿ.

ಟೀವಿಗಳಲ್ಲಿ ಕಾಣಿಸಿಕೊಂಡ ಮೋದಿ, ‘ಭಾಯಿಯೋ… ಔರ್ ಬೆಹನೋ…’ ಎಂದರು. ‘ದೋ ಹಜಾರ್…’ ಎಂದು ಭಾಷಣ ಮುಂದುವರಿಸಿದಾಗ ನೋಟು ಬ್ಯಾನ್ ಆಗುತ್ತೆ ಎಂದು ಜನ ನಡುಗಿಹೋದರು. ಆದರೆ ದೋ ಹಜಾರ್ ರೂಪಾಯಿ ರೈತರ ಖಾತೆಗೆ ಜಮಾ ಮಾಡಿದ್ದೀವಿ, ಇದು ಮೊದಲ ಕಂತು, ಒಟ್ಟು ಆರು ಸಾವಿರ ಕೊಡ್ತೀವಿ ಎಂದಾಗ ನಿಟ್ಟುಸಿರು ಬಿಟ್ಟರು.     ಅಜ್ಜಿಯೊಬ್ಬಳು ಫುಟ್‍ಪಾತ್ ಮೇಲೆ ಹುರುಳಿಕಾಯನ್ನು ಗೋಣೀಚೀಲದ ಮೇಲೆ ಹಾಕಿಕೊಂಡು ಮಾರುತ್ತಿದ್ದಳು. ‘ಬರ್ರೀ ಬರ್ರೀ ಎಳೇ ಹುರುಳಿಕಾಯಿ, ಮುಟ್ಟಿದ್ರೆ ಮುರಿಯುತ್ತೆ, ಬೇಯಿಸಿದರೆ ಕರಗುತ್ತೆ’ ಎಂದು […]

ಕವನಗಳು

ಕವನಗಳು

ಬುದ್ಧ ಬರುವ ತನಕ ಗೆದ್ದವನ ವಿಜಯೋತ್ಸಾಹದಲ್ಲೂ ಸೋತವನ ಅಳು, ನಿಟ್ಟುಸಿರುಗಳ ಪಿಸುಮಾತು ಬಹುದೂರದವರೆಗೂ ಕೇಳಿಸುತಿದೆ ರಮಜಾನು ದಸರಾ ದೀಪಾವಳಿ ಈದ್ ಗಣೇಶ ಕ್ರಿಸ್‍ಮಸ್ ಹಬ್ಬಗಳ ಮುಂಜಾವಿಗೆ ಮಿಲಿಟರಿ ಯೇ ಬೇಕೆಂದು ಆರಕ್ಷಕರು ಮುಂಗಡ ಬೇಡಿಕೆ ಸಲ್ಲಿಸಿದ್ದಾರೆಸೋರುತಿದೆ ಗೆಳೆಯಾ …ಪೆಟ್ರೋಲು ಮನೆಮನೆಯ ಮೂರ್ಖಪೆಟ್ಟಿಗೆಗಳಿಂದ ಹತ್ತುವುದಷ್ಟೇ ಬಾಕಿ ಸಾಲಿಯಿಂದ ಬಂದ ಮಕ್ಕಳ ಸಂಖ್ಯೆಯನು ತಾಯಿಯೊಬ್ಬಳು ದಿನಾ ಎಣಿಸುತ್ತಾಳೆ ರಿಜರ್ವ್ ವ್ಯಾನು, ಆಂಬುಲೆನ್ಸುಗಳಿಗೆ ಹೊಸ ಚಕ್ರಗಳನು ಜೋಡಿಸಿಡಲಾಗಿದೆಒಪ್ಪಂದಗಳೆ ಇವೆ ಗಡಿಗಳಾಚೆಯ ಯುದ್ಧ ವಿರಮಿಸಲುಒಪ್ಪಂದಗಳಾಗಿವೆ ಇಲ್ಲಿಯೂ… ಆರಂಭಿಸಲುಗಡಿಯಂಚಿಗೆ ಹೋದ ಬುದ್ಧನಿನ್ನೂ ಬಂದಿಲ್ಲ ಇನ್ನೇನಿದ್ದರೂ […]

1 25 26 27 28 29 32